Shuru
Apke Nagar Ki App…
ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯರ ನಡುವೆ ತೀವ್ರ ಮನಸ್ತಾಪ ಉಂಟಾಗಿದ್ದ ಸಂದರ್ಭದಲ್ಲಿ 75 ವರ್ಷದ ವೃದ್ಧರೊಬ್ಬರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆಯಲ್ಲಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರನ್ನು ಗ್ರಾಮದ ಗುರುಬಸಪ್ಪ ಬಸಾಪುರ (75) ಎಂದು ಗುರುತಿಸಲಾಗಿದ್ದು, ಅವರು ಜೂನ್ 15 ರಂದು ತಮ್ಮ ತೋಟದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ನಂತರ ಕುಟುಂಬ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕುರಿತು ಸವಣೂರು ತಹಶೀಲ್ದಾರ ರವಿ ಕೊರವರ ಅವರು ಸ್ಪಷ್ಟನೆ ನೀಡಿ, ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಬಸವರಾಜ ವೀ ಎಚ್
ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯರ ನಡುವೆ ತೀವ್ರ ಮನಸ್ತಾಪ ಉಂಟಾಗಿದ್ದ ಸಂದರ್ಭದಲ್ಲಿ 75 ವರ್ಷದ ವೃದ್ಧರೊಬ್ಬರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆಯಲ್ಲಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರನ್ನು ಗ್ರಾಮದ ಗುರುಬಸಪ್ಪ ಬಸಾಪುರ (75) ಎಂದು ಗುರುತಿಸಲಾಗಿದ್ದು, ಅವರು ಜೂನ್ 15 ರಂದು ತಮ್ಮ ತೋಟದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ನಂತರ ಕುಟುಂಬ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕುರಿತು ಸವಣೂರು ತಹಶೀಲ್ದಾರ ರವಿ ಕೊರವರ ಅವರು ಸ್ಪಷ್ಟನೆ ನೀಡಿ, ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
More news from ಕರ್ನಾಟಕ and nearby areas
- ಉತ್ತರ ಕರ್ನಾಟಕದ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಬಾರದೆ ಇರುವುದರಿಂದ ರೈತ ಸಮೂಹ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಮಳೆ ರಾಯನ ಆಗಮನಕ್ಕಾಗಿ ಕಾತುರತೆಯಿಂದ ಕಾಯುತ್ತಿರುವ ರೈತರು, ವಿಶೇಷ ರೀತಿಯ ಗುರ್ಜಿ ಸೇವೆಗಳನ್ನು ಮಾಡಿ ಮಳೆಯ ಬರುವಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.1
- ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಪದೇ ಪದೇ ಬಾಂಬ್ ಬೆದರಿಕೆಗಳು ಬರುತ್ತಿದ್ದು, ಇದು ಆತಂಕ ಸೃಷ್ಟಿಸಿದೆ. ಈ ಬೆದರಿಕೆಗಳ ಹಿನ್ನೆಲೆಯಲ್ಲಿ, ನ್ಯಾಯಾಲಯದ ಎಲ್ಲ ಕಲಾಪಗಳನ್ನು ಬಂದ್ ಮಾಡಲಾಗಿದ್ದು, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳು ಆತಂಕ ಸೃಷ್ಟಿಸಲು ಈ ಬಾಂಬ್ ಬೆದರಿಕೆಗಳ ದುಷ್ಕೃತ್ಯವನ್ನು ನಡೆಸುತ್ತಿದ್ದಾರೆ. ಇ-ಮೇಲ್ ಸಂದೇಶದಲ್ಲಿ 'ನಾನು ಜೆ ನ್ ಜೀ ಡಿ ಎಂ ಕೆ' ಎಂದು ಬರೆಯಲಾಗಿದೆ. ತಪಾಸಣೆಯ ವೇಳೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಇದು ಹುಸಿ ಸಂದೇಶಗಳೆಂದು ದೃಢಪಟ್ಟಿದೆ. ಈ ಹುಸಿ ಸಂದೇಶಗಳನ್ನು ಕಳುಹಿಸುತ್ತಿರುವವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ವಾರದಲ್ಲಿ ಇದು ಎರಡನೇ ಬಾರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಳೆದ ಶುಕ್ರವಾರವಷ್ಟೇ ಇದೇ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಒಟ್ಟು ನಾಲ್ಕು ಬಾರಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಸದ್ಯಕ್ಕೆ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.1
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಾಮ್ರಗುಂಡಿ ಮತ್ತು ಬಸಾಪುರ ಕೆರೆಗಳನ್ನು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘವು ಸಿಂಗಟಾಲೂರ್ ಏತ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದೆ. ಮಳೆಯ ಕೊರತೆಯಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು, ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಕಾಲುವೆಯ ಮೂಲಕ ನೀರು ಹರಿಸುವಂತೆ ರೈತರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪಟ್ಟು ಹಿಡಿದರು. ಆದರೆ, ರಾಜ್ಯಾದ್ಯಂತ ಮಳೆಯಾಗದ ಹಿನ್ನೆಲೆಯಲ್ಲಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟರು.1
- ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅನರ್ಹ ಪಿಂಚಣಿದಾರರು ಪತ್ತೆಯಾಗಿದ್ದು, ಬರೋಬ್ಬರಿ 1.53 ಲಕ್ಷ ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಸೂಚನೆಯಂತೆ ಒಟ್ಟು 1.82 ಲಕ್ಷ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಪೈಕಿ 1.53 ಲಕ್ಷ ಜನರ ಪಿಂಚಣಿ ರದ್ದಾಗಿದೆ ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ವಾರ್ಷಿಕ ₹35,000 ಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಹಾಗೂ ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡವರ ಪಿಂಚಣಿಯನ್ನು ಈ ನಿರ್ಧಾರದ ಭಾಗವಾಗಿ ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣಗಳಲ್ಲಿ ಅಧಿಕಾರಿಗಳ ಪಾತ್ರವಿದೆಯೇ ಅಥವಾ ಫಲಾನುಭವಿಗಳು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಯಲಿದೆ. ಇದಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ ಅತಿರೇಕದ ಸಾಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.1
- ಚಿಕ್ಕೋಡಿ ನಗರದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ, ಭಾವೈಕ್ಯತೆಯಿಂದ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರಬಲ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಗ್ಗೂಡಿ ಈ ಹಬ್ಬದಲ್ಲಿ ಭಾಗವಹಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು.1
- ಅಂಗನವಾಡಿಯಲ್ಲಿ ಮಗುವಿಗೆ ಒದ್ದ ಮಹಿಳೆ: ಆಘಾತಕಾರಿ ವಿಡಿಯೋ ವೈರಲ್ ಅಂಗನವಾಡಿಯಲ್ಲಿ ಮಗುವಿಗೆ ಒದ್ದ ಮಹಿಳೆ: ಆಘಾತಕಾರಿ ವಿಡಿಯೋ ವೈರಲ್ ಮುಂಬೈ : ಮಹಾರಾಷ್ಟ್ರದ ಪನ್ವೇಲ್‌ನಿಂದ ಅತ್ಯಂತ ಆಘಾತಕಾರಿ ಮತ್ತು ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ವರದಿಯಾಗಿದೆ. ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅಂಗನವಾಡಿ ಕೇಂದ್ರದಲ್ಲೇ ಪುಟ್ಟ ಮಗುವಿನ ಮೇಲೆ ಅಮಾನುಷ ಹಲ್ಲೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪನ್ವೇಲ್‌ನ ನಾಂದ್‌ಗಾಂವ್ ಗ್ರಾಮದ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಗುಲಾಬಿ ಬಣ್ಣದ ಸೀರೆ ಧರಿಸಿರುವ ಮಹಿಳೆಯೊಬ್ಬರು ಕೆಂಪು ಬಣ್ಣದ ಉಡುಪು ಧರಿಸಿರುವ ಪುಟ್ಟ ಮಗುವಿಗೆ ಕಾಲಿನಿಂದ ಅತ್ಯಂತ ಕ್ರೂರವಾಗಿ ಒದೆಯುತ್ತಿರುವುದು ದಾಖಲಾಗಿದೆ. ಮಹಿಳೆಯ ಒದೆತದ ರಭಸಕ್ಕೆ ಮಗು ಕಾಂಕ್ರೀಟ್ ಮೆಟ್ಟಿಲುಗಳಿಂದ ಕೆಳಗೆ ಬಿದ್ದು, ನೆಲದ ಮೇಲೆ ಅಸಹಾಯಕವಾಗಿ ಬಿದ್ದಿರುವುದನ್ನು ಕಾಣಬಹುದು. ಮತ್ತೊಂದು ಪುಟ್ಟ ಮಗು ಇಡೀ ಘಟನೆಯನ್ನು ಭಯದಿಂದ ನೋಡುತ್ತಾ ನಿಂತಿರುವುದೂ ವಿಡಿಯೋದಲ್ಲಿದೆ. ಮಕ್ಕಳ ರಕ್ಷಣೆ ಮತ್ತು ಪೌಷ್ಟಿಕಾಂಶದ ಉಸ್ತುವಾರಿ ನೋಡಿಕೊಳ್ಳಬೇಕಾದ ಕೇಂದ್ರದಲ್ಲೇ ಇಂತಹ ದೌರ್ಜನ್ಯ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ತಪ್ಪಿತಸ್ಥ ಮಹಿಳೆಯ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಸದ್ಯಕ್ಕೆ ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಈ ಘಟನೆ ನಮ್ಮ ಸಮಾಜದ ಅತ್ಯಂತ ಕಿರಿಯ ನಾಗರಿಕರ ರಕ್ಷಣೆಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.1
- ಧಾರವಾಡದಲ್ಲಿ ಹಿಂದೂ-ಮುಸ್ಲಿಂ ಧರ್ಮಗಳ ಭಾವೈಕ್ಯತೆ ಮತ್ತು ಸೌಹಾರ್ದತೆಯ ಪ್ರತೀಕವಾದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಹರಕೆ ಹೊತ್ತ ಭಕ್ತರು ತಮ್ಮ ದೇಹದ ಮೇಲೆ ಹುಲಿ ಚಿತ್ರಗಳನ್ನು ಬರೆಸಿಕೊಂಡ ದೃಶ್ಯಗಳು ಕಂಡುಬಂದವು. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲ ವಯಸ್ಸಿನ ಭಕ್ತರು ಈ ಆಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಅವರು ತಮ್ಮ ದೇಹದ ಮೇಲೆ ಹಳದಿ, ಕೆಂಪು, ಕಪ್ಪು ಬಣ್ಣಗಳನ್ನು ಬಳಸಿ ಹುಲಿಯ ಪಟ್ಟೆಗಳನ್ನು ಬರೆಸಿಕೊಂಡಿದ್ದು, ಜೊತೆಗೆ ದೃಷ್ಟಿ ತಾಗದಿರಲು ನವಿಲುಗರಿಗಳನ್ನು ಕಟ್ಟಿಕೊಂಡಿದ್ದರು. ಕೆಲವರು ಹಸ್ತ, ಮೀನು ಅಥವಾ ದೇವರ ಛತ್ರಿಯ ಚಿತ್ರಗಳನ್ನೂ ದೇಹದ ಮೇಲೆ ಬಿಡಿಸಿದ್ದು, ಇದು ಭಕ್ತಿಯ ಪರಾಕಾಷ್ಠೆ ಮತ್ತು ಆಕರ್ಷಣೆಗೆ ಕಾರಣವಾಯಿತು. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಈ ಆಚರಣೆಯು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸುವ ಒಂದು ಅಪರೂಪದ ಸಂಪ್ರದಾಯವಾಗಿದ್ದು, ಇದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಹರಕೆ ತೀರಿದ ನಂತರ, ದೇಹಕ್ಕೆ ಹುಲಿ ಬಣ್ಣ ಬಳಿದುಕೊಂಡ ಭಕ್ತರು ದೇವರಿಗೆ ಸಕ್ಕರೆ ಮತ್ತು ಹಾಲನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಬ್ರಿಟಿಷ್ ಕಾಲದಿಂದಲೂ ಪ್ರತಿವರ್ಷ ಹಿಂದೂ-ಮುಸ್ಲಿಂ ಭೇದಭಾವವಿಲ್ಲದೆ ಭಕ್ತರು ದೇವರ ಹರಕೆ ತೀರಿಸಲು ಹುಲಿ ಚಿತ್ರ ಬರೆಯಿಸಿಕೊಳ್ಳುತ್ತಿದ್ದು, ಮೊಹರಂ ಹಬ್ಬದ ಈ ಹುಲಿ ವೇಷ ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಾಗಿದೆ.1
- ದೇಶದ ಮೂಲೆಮೂಲೆಗಳಲ್ಲಿ ಜಾತಿ-ಧರ್ಮದ ಗೋಡೆಗಳು ಸದ್ದು ಮಾಡುತ್ತಿದ್ದರೂ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದಲ್ಲಿ ಈ ಎಲ್ಲ ಭೇದಗಳು ಧೂಳೀಪಟವಾಗಿವೆ. ಇಲ್ಲಿ ಮೊಹರಂ ಹಬ್ಬ ಬಂದಾಗ ಧರ್ಮದ ಬೇಲಿಗಳು ಕರಗಿ, ಕೇವಲ ಭಕ್ತಿ ಮತ್ತು ಸಹಬಾಳ್ವೆಯ ಸಾಮರಸ್ಯ ಮಾತ್ರ ಎದ್ದು ಕಾಣುತ್ತದೆ. ಮುಂಡರಗಿ ಪಟ್ಟಣದ ರಸ್ತೆಗಳಲ್ಲಿ ಕಂಡುಬಂದ ಅಪರೂಪದ ದೃಶ್ಯವು ಈ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಮುನಿಸುಗಳನ್ನು ಮರೆತು ಹೇಗೆ ಬದುಕಬೇಕು ಎಂಬುದನ್ನು ಸಾರುವ ಮೌನ ಕ್ರಾಂತಿಯಾಗಿ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಮೊಹರಂ ಹಬ್ಬದ ಪವಿತ್ರ ಹಾಗೂ ರಹಸ್ಯಮಯ 'ಕತ್ತಲರಾತ್ರಿ'ಯಂದು ಮಕ್ತುಂಪುರ ಗ್ರಾಮದಲ್ಲಿ ಅಪೂರ್ವ ಸಂಚಲನ ಮನೆ ಮಾಡುತ್ತದೆ. ಗ್ರಾಮದ ವಾಲ್ಮೀಕಿ ಸಮಾಜದವರು, ಉಪ್ಪಾರ ಸಮಾಜದ ಕಲ್ಲಪ್ಪನವರ ಮತ್ತು ಅಯ್ಯಪ್ಪನವರ ಮನೆತನದವರು ಹಾಗೂ ಮಕಾಂದಾರ ಕುಟುಂಬಸ್ಥರು ಸೇರಿ ಇಡೀ ಊರಿನ ವಿವಿಧ ಧರ್ಮ ಮತ್ತು ಜಾತಿಯ ಜನರೆಲ್ಲರೂ ಒಟ್ಟಾಗಿ ಸೇರುತ್ತಾರೆ. ಯಾವುದೇ ಭೇದವಿಲ್ಲದೆ ಕೇವಲ ಭಕ್ತಿಯಿಂದ, ಕಲ್ಲು-ಮುಳ್ಳಿನ ಹಾದಿಯನ್ನೂ ಲೆಕ್ಕಿಸದೆ, ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಮಕ್ತುಂಪುರದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಲ್ಲಿ ಪಾದಯಾತ್ರೆ ಕೈಗೊಳ್ಳುತ್ತಾರೆ. ಮುಂಡರಗಿ ಪಟ್ಟಣದ ಮಾರುಕಟ್ಟೆಗೆ ಬರಿಗಾಲಿನಲ್ಲಿ ನಡೆದು ಬಂದ ಈ ಸೌಹಾರ್ದತೆಯ ದಂಡು, ಮೊದಲು ಒಂದು ಹೊಸ ಮಣ್ಣಿನ ಮಡಿಕೆಯನ್ನು ಖರೀದಿಸುತ್ತದೆ. ಈ ಮಡಿಕೆಯು ಕೇವಲ ಮಣ್ಣಿನದ್ದಲ್ಲ, ಅದು ಗ್ರಾಮದ ಒಗ್ಗಟ್ಟಿನ ಪ್ರತೀಕವಾಗಿದೆ. ಆ ಹೊಸ ಮಡಿಕೆಯನ್ನು ಅತ್ಯಂತ ಭಕ್ತಿ-ಗೌರವಗಳಿಂದ ಹಿಡಿದುಕೊಂಡು, ಮತ್ತೆ ಪಾದಯಾತ್ರೆಯ ಮೂಲಕವೇ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿ ಹಾಗೂ ತಂಪಾದ ಶರಬತ್ತನ್ನು ಸಿದ್ಧಪಡಿಸಲಾಗುತ್ತದೆ. ರಾತ್ರಿಯಾಗುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ 'ಅಲೈದೇವರಿಗೆ' ಭಕ್ತಿಯಿಂದ ದೀಡ ನಮಾಸ್ಕಾರ ಹಾಕುತ್ತಾರೆ. ಮಕನಾ ಹೂವು, ಸಕ್ಕರೆ, ಹಾಲು ಮುಂತಾದ ನೈವೇದ್ಯಗಳನ್ನು ದೇವರಿಗೆ ಅರ್ಪಿಸಿ, ಜಗತ್ತಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದು ತಲೆಮಾರುಗಳಿಂದ ನಡೆದುಬಂದ ನಂಬಿಕೆಯಾಗಿದೆ. ಈ ಇಡೀ ಆಚರಣೆಯ ಹಿಂದೆ ಪ್ರಕೃತಿಯ ನಿಯಮವನ್ನೇ ಮೀರಿಸುವ ಒಂದು ರೋಚಕ ಪವಾಡವಿದೆ. ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ಬೇಯಿಸಲು ಒಮ್ಮೆ ಒಲೆ ಹಚ್ಚಿದರೆ, ಆ ಕಿಚಡಿ ಸಂಪೂರ್ಣವಾಗಿ ತಯಾರಾಗುವವರೆಗೂ ಹಚ್ಚಿದ ಒಲೆ ಆರುವುದೇ ಇಲ್ಲವಂತೆ! ಅಷ್ಟೇ ಅಲ್ಲ, ಆ ಕಿಚಡಿ ಬೇಯುವವರೆಗೂ ಯಾರೂ ಒಲೆಯನ್ನು ಊದುವುದೂ ಇಲ್ಲ. ಒಲೆ ಊದದೆಯೇ ಅನ್ನ ಬೇಯುವ ಈ ಅಪರೂಪದ ಆಚರಣೆ ಇಂದಿಗೂ ಮಕ್ತುಂಪುರ ಗ್ರಾಮದಲ್ಲಿ ಜೀವಂತವಾಗಿರುವುದು ವಿಶೇಷ.1