Shuru
Apke Nagar Ki App…
ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್ ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್ ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್ ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್ ಆಲಿಕಲ್ಲುಗಳಿಂದ ಕಲಘಟಗಿ-ಮುಂಡಗೋಡ ಹೆದ್ದಾರಿ ಆವೃತ್
More news from ಕರ್ನಾಟಕ and nearby areas
- ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದಲ್ಲಿ ಕೆಲ ಬೇಕರಿಗಳು ಮತ್ತು ಸ್ವೀಟ್ ಮಾರ್ಟ್ ಅಂಗಡಿಗಳು ಸಾರ್ವಜನಿಕರ ಆರೋಗ್ಯದ ಜೊತೆ ನೇರವಾಗಿ ಚೆಲ್ಲಾಟವಾಡುತ್ತಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಹಣ ಮಾಡುವ ಆಸೆಯಲ್ಲಿ ಕೆಲ ವ್ಯಾಪಾರಿಗಳು ಸ್ವಚ್ಚತೆ, ಶುಚಿತ್ವ ಎಲ್ಲವನ್ನೂ ಕಡೆಗಣಿಸಿ ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಕೆಮಿಕಲ್ ಕಲರ್ ಬಳಸಿ ತಯಾರಿಸಿದ ಕೇಕ್ ಮತ್ತು ಸ್ವೀಟ್ಸ್ ಜನರ ಆರೋಗ್ಯಕ್ಕೆ ದೊಡ್ಡ ಅಪಾಯವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾದಾಮಿ ನಗರದ ಟಾಂಗ್ ಸ್ಟ್ಯಾಂಡ್ ಹತ್ತಿರ ಇರುವ ಬೆಂಗಳೂರು ಬೇಕರಿಯ ದಿಲ್ ಖುಷ್ ಅಂಗಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆಹಾರ ಸುರಕ್ಷತಾ ಅಧಿಕಾರಿ ಪಾರುಕಿ, ಆರೋಗ್ಯ ಅಧಿಕಾರಿ ಎಂ.ಬಿ. ಪಾಟೀಲ್ ಹಾಗೂ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ್ ಕಂಬಳಿ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಯಿತು. ಪರಿಶೀಲನೆ ವೇಳೆ ಕೇಕ್ ಮತ್ತು ಸ್ವೀಟ್ಸ್ ತಯಾರಿಕೆಗೆ ಬಳಸುವ ಕೆಮಿಕಲ್ ಡಬ್ಬಿಗಳು, ಅಪಾಯಕಾರಿ ಕಲರ್ ಬಾಟಲಿಗಳು ಹಾಗೂ ಹಣ್ಣಿನ ಜ್ಯೂಸ್ ತಯಾರಿಸಲು ಇಡಲಾಗಿದ್ದ ಕೊಳೆತ ಹಣ್ಣುಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅನು ಸ್ವೀಟ್ಸ್ ಅಂಗಡಿಯಲ್ಲಿ ಮೈಸೂರು ಪಾಕ್ ಮೇಲೆ ಕಾಲಿಟ್ಟು ಕುಳಿತಿರುವ ದೃಶ್ಯ ಕಂಡುಬಂದಿದ್ದು, ಈ ದೃಶ್ಯ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ಅಂಗಡಿಯೂ ಕೂಡ ಬೆಂಗಳೂರು ಬೇಕರಿಯವರದ್ದೇ ಎಂಬ ಮಾಹಿತಿ ಹೊರಬಿದ್ದಿದೆ. ರಾಮದೇವ್ ಸ್ವೀಟ್ ಮಾರ್ಟ್ ಸೇರಿದಂತೆ ಹಲವಾರು ಅಂಗಡಿಗಳಲ್ಲಿ ಕೋಲ್ಡ್ ಡ್ರಿಂಕ್ಸ್ ಮೇಲೆ ಮುದ್ರಿತ ಬೆಲೆಯಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರವಾಸಿಗರು ಹಾಗೂ ಸ್ಥಳೀಯ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದಾರೆ. ಅಧಿಕಾರಿಗಳ ಜೊತೆ ಆಹಾರ ತಯಾರಿಕಾ ಕೊಠಡಿಗೆ ಪ್ರವೇಶಿಸಿದಾಗ ಕಂಡ ದೃಶ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಅಲ್ಲಿ ಕೊಳೆತ ಕೇಕ್‌ಗಳು ಮೂಲೆ ಸೇರಿರುವ ಡಬ್ಬಿಗಳು ಕಸಪೊರಕೆ ತುಂಬಿದ ಸ್ಥಳ ಹೊಲಸು ತುಂಬಿದ ಕೇಕ್ ರಟ್ಟುಗಳು ಅನೈರ್ಮಲ್ಯದಿಂದ ಕೂಡಿದ ಅಡುಗೆ ಎಣ್ಣೆ ಹೀಗೆ ಸ್ವಚ್ಚತೆ ಕಾಣದ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಆಹಾರ ತಯಾರಿಸುವ ಸಿಬ್ಬಂದಿ ಟೋಪಿ, ಹ್ಯಾಂಡ್ ಗ್ಲೋವ್ಸ್, ಜಾಕೆಟ್ ಧರಿಸದೇ ಆಹಾರ ತಯಾರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ರೀತಿಯ ತಯಾರಿಕೆ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಒಮ್ಮೆ ಈ ತಯಾರಿಕಾ ಕೊಠಡಿಯನ್ನು ನೋಡಿದರೆ ಜೀವನದಲ್ಲಿ ಬೇಕರಿ ತಿನಿಸು ತಿನ್ನಬಾರದು ಎಂಬ ಭಾವನೆ ಹುಟ್ಟುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾದಾಮಿ ನಗರದಲ್ಲಿ ಇಷ್ಟೊಂದು ಬೇಕರಿ ಹಾಗೂ ಸ್ವೀಟ್ ಮಾರ್ಟ್ ಅಂಗಡಿಗಳು ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೂ ಆಹಾರ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಇಂತಹ ಅಂಗಡಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಪರವಾನಿಗೆ ರದ್ದುಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಳಪೆ ಮಟ್ಟದ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಆಹಾರ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ವರದಿ : ರುದ್ರೇಶ್ ಪಿ ಹುಣಸಿಗಿಡದ1
- “ಮಕ್ಕಳ ಸುರಕ್ಷತೆ ಅಪಾಯದಲ್ಲಿ..! ಕ್ಯಾತನಹಳ್ಳಿ ಗ್ರಾಮದ ವಾಸ್ತವ ಸ್ಥಿತಿ” #neravaaninews #kannada neravaani news1
- ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 9 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ಮಾರ್ಚ್ 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 23 ಕೊನೆಯ ದಿನವಾಗಿದೆ. ಮಾರ್ಚ್ 24ರಂದು ಪರಿಶೀಲನೆ ನಡೆಯಲಿದ್ದು, ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಮಾರ್ಚ್ 15ರಿಂದ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಮತಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳಿದ್ದು, 2,59,260 ಮತದಾರರು ಇದ್ದಾರೆ. ಚುನಾವಣಾ ನಿಯಮ ಪಾಲನೆಗಾಗಿ ಫ್ಲೈಯಿಂಗ್ ಸ್ಕ್ವಾಡ್, ಸರ್ವೆಲೆನ್ಸ್ ತಂಡಗಳು ಹಾಗೂ 24 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.1
- ಗುಳೇದಗುಡ್ಡ: ಹನ್ನೆರಡನೇ ಶತಮಾನದ ಶಿವಶರಣರಾದ ಜೇಡರ ದಾಸಿಮಯ್ಯ, ಮಾದರ ಚೆನ್ನಯ್ಯನವರ,ಬಸವಣ್ಣನವರ ಸಮಕಾಲಿನ ಶರಣರ ಶರಣೆಯರು ತಮ್ಮ ವಚನ ಸಾಹಿತ್ಯದಲ್ಲಿ ಕಾಯಕದ ಮಹತ್ವ ತಿಳಿಸಿದವರು. ಎಂದು ಮುದ್ದೇಬಿಹಾಳದ ಎಂ ಜಿ ವ್ಹಿ ಸಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿಗಳಾದ ಡಾ. ಪ್ರಕಾಶ ನರಗುಂದ ಹೇಳಿದರು. ಅವರಿ ಸೋಮವಾರ ಪಟ್ಟಣದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಲಕ್ಷಿತ ಶರಣರ ವಚನಗಳಲ್ಲಿ ಆತ್ಮ ವಿಮರ್ಶ, ಕಾಯಕವೇ ಕೈಲಾಸ,ದಾಸೋಹ ತತ್ವ ಜಾತಿ,ಲಿಂಗ ಭೇದ,ನಿರಾಕರಣೆ, ಮುಂತಾದ ವಿಷಯಗಳ ಕುರಿತು ಅನೇಕ ಶರಣರು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಗದ್ಯ ಪದ್ಯ ಮಿಶ್ರಿತ ವಚನ ಸಾಹಿತ್ಯ ಸರಳ ನೇರ ಮತ್ತು ಭಾವಪೂರ್ಣ ಭಾಷೆಯಲ್ಲಿ ಸತ್ಯಶೋಧನೆ ಸಾಮಾಜಿಕ ಸಮಾನತೆ ದೈವಿಕ ಅನುಭವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಅಗಾಧ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ನಿರ್ಲಕ್ಷಿತ ವಚನಕಾರರು ಬೇರೆ ಬೇರೆ ರಾಜ್ಯಗಳಿಂದ ಬಂದು ಬೇರೆ ಬೇರೆ ಕಾಯಕಗಳಲ್ಲಿ ಕೈಲಾಸ ಕಂಡವರು. ಇಂಥವರ ಕುರಿತು ಇನ್ನು ಶ್ರೇಷ್ಠ ಮಟ್ಟದ ಸಂಶೋಧನೆಗಳು ಆಗಬೇಕಾಗಿದೆ. ಎಂದರು ಹೇಳಿದರು. ವೇದಿಕೆ ಮೇಲೆ ಕಾಲೇಜಿನ ಪ್ರಚಾರ್ಯ ಪ್ರೊ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ, ಅರುಣಕುಮಾರ ಗಾಳಿ,ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಸಂಗಮೇಶ ಕಲ್ಯಾಣಿ,ಕಾಲೇಜಿನ ಪ್ರಾಚಾರ್ಯರ ಪ್ರೊ. ರೇವಣಸಿದ್ದಪ್ಪ, ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ, ಪ್ರೊ. ಫಕೀರಪ್ಪ ಚನ್ನಪ್ಪಗೌಡ್ರು ಉಪಸ್ಥಿತರಿದ್ದರು.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದ ಶಿವಾಜಿ ಜಯಂತಿಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಶರಣಮ್ಮ ಶೇಖರಪ್ಪ ತಳವಾರ ಬಿಜೆಪಿ ಸೇರ್ಪಡೆಯಾದರು. ಈ ಹಿಂದೆ ಬಿಎಸ್ಆರ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು ಬಿಜೆಪಿ ಮತ್ತು ದೊಡ್ಡನಗೌಡ ಪಾಟೀಲ್ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾದರು. ಈ ಸಮಯದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು, ಗ್ರಾಮೀಣ ಮಂಡಳದ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ ಸೇರಿದಂತೆ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.2
- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸಿಲಿಂಡರ್ ಗ್ಯಾಸ್ ಸಮಸ್ಯೆ ಉಂಟಾಗಿದ್ದು ತಕ್ಷಣವೆ ಸಮಸ್ಯೆ ಬಗೆಹರಿಸುವಂತೆ ಆಗ್ರಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.1
- ವಿಜಯಪುರ: ಅದ್ದೂರಿಯಾಗಿ ಜರುಗಿದ ಶಾಸಕ ಯತ್ನಾಳ್ ಸುಪುತ್ರ ಮದುವೆ...1
- ಬಾಗಲಕೋಟೆಯಲ್ಲಿ ಬಿಜೆಪಿ ಪಕ್ಷದ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಜೋರಾಗಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ದಿಲೀಪ್ ರಾಠೋಡ ಅವರಿಗೆ ಪದಗ್ರಹಣ ಮಾಡಿಸಲಾಯಿತು. ಇದೇ ವೇಳೆ 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಪದಗ್ರಹಣ ಹಿನ್ನೆಲೆಯಲ್ಲಿ ನವನಗರ ಕೋರ್ಟ್ ಸರ್ಕಲ್‌ನಿಂದ ಆರಂಭವಾದ ಬೃಹತ್ ಬೈಕ್ ರ್ಯಾಲಿ ವಿದ್ಯಾಗಿರಿ, ಬಸವೇಶ್ವರ ವೃತ್ತ, ರೈಲ್ವೆ ನಿಲ್ದಾಣ ರಸ್ತೆ ಮೂಲಕ ಎಪಿಎಂಸಿ ಮೂಲಕ ಬಿಜೆಪಿ ಜಿಲ್ಲಾ ಕಾರ್ಯಾಲಯದವರೆಗೆ ಸಾಗಿತು.1
- ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮಾಚ೯ 18 ರಿಂದ ಏಪ್ರಿಲ್ 02 ರ ವರೆಗೆ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ 7 ಸರ್ಕಾರಿ , 08 ಅನುದಾನಿತ ಹಾಗೂ ಒಂದು ಅನುದಾನ ರಹಿತ ಶಾಲೆ ಸೇರಿದಂತೆ ಒಟ್ಟು 16 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲೇದಾರ ತಿಳಿಸಿದ್ದಾರೆ.1