Shuru
Apke Nagar Ki App…
ಚಾಮರಾಜನಗರ ಬಡಗಾಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ (65) ಬಲಿಯಾದ ಘಟನೆ ಹಿನ್ನೆಲೆಯಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು ಚಾಮರಾಜನಗರ ನ್ಯೂಸ್ . ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೊನ್ನೂರು ಪ್ರಕಾಶ್ ಅವರು, ರೈತರ ಹಾಗೂ ಗ್ರಾಮಸ್ಥರ ಜೀವಕ್ಕೆ ಸೂಕ್ತ ರಕ್ಷಣೆ ನೀಡದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಎಷ್ಟು ದಿನ? ಎಂದು ಪ್ರಶ್ನಿಸಿದರು. ಹುಲಿ ದಾಳಿಯಿಂದ ರೈತ ಮೃತಪಟ್ಟಿರುವುದು ಅತ್ಯಂತ ನೋವಿನ ಘಟನೆ. ಕಾಡು ಪ್ರಾಣಿಗಳ ದಾಳಿ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು, ಅಪಾಯಕಾರಿ ವನ್ಯಜೀವಿಗಳ ಚಲನವಲನದ ಬಗ್ಗೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು ಹಾಗೂ ಮೃತ ರೈತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
S.Puttaswamyhonnur
ಚಾಮರಾಜನಗರ ಬಡಗಾಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ (65) ಬಲಿಯಾದ ಘಟನೆ ಹಿನ್ನೆಲೆಯಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು ಚಾಮರಾಜನಗರ ನ್ಯೂಸ್ . ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೊನ್ನೂರು ಪ್ರಕಾಶ್ ಅವರು, ರೈತರ ಹಾಗೂ ಗ್ರಾಮಸ್ಥರ ಜೀವಕ್ಕೆ ಸೂಕ್ತ ರಕ್ಷಣೆ ನೀಡದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಎಷ್ಟು ದಿನ? ಎಂದು ಪ್ರಶ್ನಿಸಿದರು. ಹುಲಿ ದಾಳಿಯಿಂದ ರೈತ ಮೃತಪಟ್ಟಿರುವುದು ಅತ್ಯಂತ ನೋವಿನ ಘಟನೆ. ಕಾಡು ಪ್ರಾಣಿಗಳ ದಾಳಿ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು, ಅಪಾಯಕಾರಿ ವನ್ಯಜೀವಿಗಳ ಚಲನವಲನದ ಬಗ್ಗೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು ಹಾಗೂ ಮೃತ ರೈತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
More news from ಕರ್ನಾಟಕ and nearby areas
- ಹುಲಿದಾಳಿಯಿಂದ ಮೃತಪಟ್ಟ ಬಡಗಲಪುರ ರೈತ ಬಸವಣ್ಣ ನಿವಾಸಕ್ಕೆ ಎಂಎಲ್ಸಿ ಡಾ.ತಿಮ್ಮಯ್ಯ ಭೇಟಿ, ವರದಿ: ಹೊಮ್ಮನಂಜುಂಡನಾಯಕ ಹುಲಿದಾಳಿಯಿಂದ ಮೃತಪಟ್ಟ ಬಡಗಲಪುರ ರೈತ ಬಸವಣ್ಣ ನಿವಾಸಕ್ಕೆ ಎಂಎಲ್ಸಿ ಡಾ.ತಿಮ್ಮಯ್ಯ ಭೇಟಿ, ಚಾಮರಾಜನಗರ: ಹುಲಿದಾಳಿಯಿಂದ ಮೃತಪಟ್ಟ ರೈತ ತಾಲೂಕಿನ ಬಡಗಲಪುರದ ಬಸವಣ್ಣ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಭೇಟಿ ನೀಡಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ ಧನಸಹಾಯ ಮಾಡಿದರು. ನಂತರ ಮಾತನಾಡಿ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ರೈತ ಬಸವಣ್ಣ ಅವರ ಮೇಲೆ ಹುಲಿ ದಾಳಿ ನಡೆಸಿ ತಿಂದು ಹಾಕಿರುವುದು ಒಂದು ದುರಂತವೇ ಸರಿ. ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರೊಡನೆ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ತಿಳಿಸಿದರು. ಹುಲಿದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವುದು ಕಷ್ಟ ವಾಗಿದೆ. ಅರಣ್ಯ ಅಧಿಕಾರಿಗಳು ಹುಲಿ ಸೆರೆಹಿಡಿಯಬೇಕು. ಇಂತಹ ಘಟನೆ .ಮರುಕಲಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಶಿವಮೂರ್ತಿ, ಹರವೆ ನಾಗೇಶ್, ಪ್ರಕಾಶ್ ಇತರರು ಹಾಜರಿದ್ದರು. ವರದಿ: ಹೊಮ್ಮನಂಜುಂಡನಾಯಕ ಪ್ರಜಾಪವರ್ ಟಿವಿ ಚಾಮರಾಜನಗರ.4
- 33 ಎಕರೆಯ 896 ನಿವೇಶನವನ್ನು ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮ ಮಳವಳ್ಳಿ: 44 ವರ್ಷಗಳಿಂದ ನೆನೆಗುಂದಿ ಬಿದ್ದಿದ್ದ 33 ಎಕರೆಯ 896 ನಿವೇಶನವನ್ನು ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮ ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಕೃಷಿ ಸಚಿವ ನರೇಂದ್ರಸ್ವಾಮಿ ಉದ್ಘಾಟಿಸಿದರು. ಈ ವೇಳೆ 23 ವಾರ್ಡುನ 896 ನಿವೇಶನ ಫಲಾನುಭವಿಗಳಿಗೆ ತಮ್ಮ ತಮ್ಮ ನಿವೇಶನದ ಆಯ್ಕೆ ಮಾಡಲು ಫಲಾನುಭವಿಗಳು ಲಾಟರಿ ಮೂಲಕ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.1
- ಹಲಗೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಬ್ರಹ್ಮನ್ ಮಠದಲ್ಲಿ ಸ್ವರ್ಣ ಗೌರಿಗೆ ವಿಶೇಷ ಪೂಜೆ ಹಲಗೂರು ಬೃಹನ್ಮಠದಲ್ಲಿ ಸ್ವರ್ಣಗೌರಿಗೆ ವಿಶೇಷ ಪೂಜೆ. ಹಲಗೂರು: ಇಲ್ಲಿನ ಮಠದ ಬೀದಿಯಲ್ಲಿರುವ ಬೃಹನ್ಮಠದಲ್ಲಿ ಸ್ವರ್ಣ ಗೌರಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವಂತೆ ಸ್ವರ್ಣಗೌರಿಯಲ್ಲಿ ಪ್ರಾರ್ಥಿಸಿದರು. ಸೋಮವಾರ ಸಮೀಪದ ಶಿಂಷಾ ನದಿಯ ದಡದಲ್ಲಿ ಬೆಳಗಿನ ಪ್ರಾಂತ್ಯಕಾಲದ ಬ್ರಹ್ಮ ಮುಹೂರ್ತದಲ್ಲಿ ಅರಸಿನದಿಂದ ತಯಾರಿಸಿದ ಸ್ವರ್ಣ ಗೌರಿಯನ್ನು ತಂದು ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಹಲಗೂರಿನ ಬೃಹನ್ಮಠಕ್ಕೆ ತಂದಾಗ ಮುತ್ತೈದೆಯರು ಆರತಿ ಎತ್ತಿ ವಿಶೇಷವಾಗಿ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬರಮಾಡಿಕೊಂಡರು. ಶ್ರೀ ವಿದ್ಯಾ ಗಣಪತಿ ದೇವಸ್ಥಾನದ ಪ್ರಸಾದ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಶಿಂಷಾ ನದಿಯಿಂದ ಅರಸಿನ ಮತ್ತು ಮರಳಿನಿಂದ ಸ್ವರ್ಣ ಗೌರಿಯನ್ನು ಮಾಡಿಕೊಂಡು ಮಠಕ್ಕೆ ತರಲಾಯಿತು. ನಂತರ ಗೃಹಿಣಿಯರು ವಿಶೇಷವಾಗಿ ಪೂಜೆ ಸಲ್ಲಿಸುತಿದ್ದರೆ ಎಂದರು. ಸ್ವರ್ಣ ಗೌರಿ ಭಕ್ತ ಮಂಡಳಿಯ ತೋಂಟದಾರ್ಯ ನಾಗೇಂದ್ರ ಮಾತನಾಡಿ 2026 ನೇ ಸಾಲಿನ ಸ್ವರ್ಣ ಗೌರಿ ಮಹೋತ್ಸವವನ್ನು ನಮ್ಮ ಸ್ವರ್ಣಗೌರಿ ಭಕ್ತ ಮಂಡಳಿ ವತಯಿಂದ ಆಚರಿಸಿಕೊಂಡು ಬಂದು 14ನೇ ಸೋಮವಾರ ದಿನದಿಂದ ಪ್ರತಿದಿನ ಸಂಜೆ 9 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಿ ಮಹಾಮಂಗಳಾರತಿ ನಂತರ ಪ್ರಸಾದ ವಿನಯೋಗಿಸಲಾಗುತ್ತದೆ. ಮತ್ತು ಸೆಪ್ಟೆಂಬರ್ 22ನೇ ಮಂಗಳವಾರ ಸ್ವರ್ಣ ಗೌರಿಯನ್ನು ಮುತ್ತಿನ ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮುಖಾಂತರ ವಿಸರ್ಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸ್ವರ್ಣ ಗೌರಿಯ ಕೃಪೆಗೆ ಪಾತರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ವರ್ಣ ಗೌರಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.1
- All About,When any #Waqfland is made to desserted thereafter who will encroach *ಭಾರತ ನಲ್ಲಿ ವೈರಲ್*1
- 100 Crores of bank balance in the accounts of mysuru dist waqf committees says MDWAC Chairman Azeezulla Ajju 100 Crores of bank balance in the accounts of mysuru dist waqf committees says MDWAC Chairman Azeezulla Ajju1
- ಕುಡಿದ ಮತ್ತಿನಲ್ಲಿ ಜಗಳ, ದಿಕ್ಕು ತಪ್ಪಿಸಲು ಹೋದ ದಂಪತಿಗೆ ಬುದ್ಧಿಹೇಳಿದ ಪೊಲೀಸರು! ಮೈಸೂರು: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದು, ದಿಕ್ಕು ತಪ್ಪಿಸಲು ಹೋದ ಮಹಿಳೆಗೆ ಪೊಲೀಸರು ಬುದ್ಧಿ ಹೇಳಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬಂಕಹಳ್ಳಿ ಗ್ರಾಮದ ಗೋಪಮ್ಮ ಅಲಿಯಾಸ್ ಗೌರಮ್ಮ(52) ಹಾಗೂ ಪತಿ ಚೆಲುವ ಕುಡಿದ ಮತ್ತಿನಲ್ಲಿ ಸೋಮವಾರ ರಾತ್ರಿ ಜಗಳ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಗೌರಮ್ಮರಿಗೆ ಮುಖಕ್ಕೆ ಜೋರಾಗಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ನಂತರ ರಾತ್ರಿ ಹೆಡಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಹಿಳೆ ಗುಣಮುಖರಾಗುತ್ತಿದ್ದಾರೆ. ಕಥೆಕಟ್ಟಿದ ಮಹಿಳೆ: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದಿದೆ.ಆದರೆ,ಜಮೀನಿಗೆ ಕೆಲಸಕ್ಕೆ ಬಂದಿಲ್ಲವೆಂದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ಮುಂದೆ ಗೌರಮ್ಮ ಹೇಳಿದ್ದಾರೆ. ಪೊಲೀಸರು ವಿಚಾರಣೆ ಮಾಡಿದಾಗ, ಕುಡಿದ ಮತ್ತಿ ಇಬ್ಬರ ಜಗಳ ನಡೆದು, ಪತಿ ಹಲ್ಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಪತ್ನಿ-ಪತಿ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ರೀತಿ, ಸುಳ್ಳು ಹೇಳಬಾರದು ಎಂದು ತಿಳಿ ಹೇಳಿದ್ದಾರೆ.3
- ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿ: ಸ್ಥಳಕ್ಕೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವರು, ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಉಳಿದ 15 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಸಿ.ಪುಟ್ಟರಂಗಶೆಟ್ಟಿ, 20 ಲಕ್ಷ ಪರಿಹಾರವೂ ಸಾಕಾಗುವುದಿಲ್ಲ. ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಹುಲಿಯನ್ನು ಸೆರೆಹಿಡಿಯಲು ಇಂದಿನಿಂದಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಸಾಕಾನೆಗಳ ಸಹಾಯದೊಂದಿಗೆ ಅರವಳಿಕೆ ತಜ್ಞರನ್ನು ಕರೆಸಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.1
- ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ಬಡಗಲಪುರ ರೈತನ ಸಾವು ಆಗುತ್ತಿರಲಿಲ್ಲ: ಸಿ.ಎಸ್.ನಿರಂಜನ್‌ಕುಮಾರ್ ಸಿಮ್ಸ್ ಶವಾಗಾರಕ್ಕೆ ಜಿಲ್ಲಾ ಬಿಜೆಪಿ ಮುಖಂಡರು ಭೇಟಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ, ಧನಸಹಾಯ ಮಾಡಿದರು. ಈ ಘಟನೆಗೆ ರಾಜ್ಯ ಸರ್ಕಾರವೇ ನೇರಹೊಣೆ'- ಸಚಿವರು ನುಡಿದಂತೆ ಮೃತನ ಪುತ್ರನಿಗೆ ಸರ್ಕಾರಿ ನೌಕರಿ ನೀಡಲು ಬಿಜೆಪಿ ಆಗ್ರಹ ಚಾಮರಾಜನಗರ : ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ರೈತ ಬಸವಣ್ಣ ಸಾವು ಆಗುತ್ತಿರಲಿಲ್ಲ. ಈ ಘಟನೆಗೆ ರಾಜ್ಯ ಸರ್ಕಾರ ನೇರಹೊಣಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು. ನಗರದ ಸಿಮ್ಸ್ ನ ಶವಾಗಾರಕ್ಕೆ ಭೇಟಿ ನೀಡಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಧನಸಹಾಯ ಮಾಡಿ, ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಬಡಗಲಪುರ ರೈತನನ್ನು ಅವರ ಜಮೀನನಲ್ಲಿ ಹುಲಿ ದಾಳಿ ನಡೆಸಿ, ತಿಂದು ಹಾಕಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸುಮಾರು 2 ವರ್ಷಗಳ ಹಿಂದೆ ಆ ಭಾಗದಲ್ಲಿ ಹುಲಿ ಕಾಣಿಸಿಕೊಂಡು ಅನೇಕ ಬಾರಿ ಕಾಣಿಸಿಕೊಂಡಿದ್ದು, ಮೃತ ರೈತನ ಹಸುವಿನ ಮೇಲೂ ದಾಳಿ ನಡೆಸಿದೆ ಅದನ್ನು ಅರಣ್ಯ ಅಧಿಕಾರಿಗಳಿಗೆ ತಿಳಿಸಿ ಹುಲಿ ಸೆರೆ ಹಿಡಿಯುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ರೈತನ ಸಾವು ಆಗಿದೆ ಎಂದರು. ಜಿಲ್ಲೆಯಲ್ಲಿ ಪ್ರಾಣಿ, ಮಾನವ ಸಂಘರ್ಷ ಆಗಾಗ ನಡೆಯುತ್ತಿದೆ. ನೆನ್ನೆ ಬೆಳಿಗ್ಗೆ ಗುಂಡ್ಲುಪೇಟೆ ತಾಲೂಕಿನ ಕೊಟಗೆರೆಯಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು ಸಂಜೆ ವೇಳೆಗೆ ಬಡಗಲಪುರದಲ್ಲಿ ಹುಲಿ ದಾಳಿಗೆ ರೈತನ ಸಾವು ಆಗಿದೆ. ಅನೇಕ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬೋನ್ ಇಟ್ಟು ಹುಲಿ ಸೆರೆ ಹಿಡಿಯಲು ಕ್ರಮವಹಿಸಿದ್ದರೆ. ಇಂತಹ ಸನ್ನಿವೇಶ.. ಆಗುತಿರಲಿಲ್ಲ. ಒಬ್ಬರ ಪ್ರಾಣ ಹೋಗುತ್ತಿರಲಿಲ್ಲ. ಸರ್ಕಾರ ನಾವು ಏನೆಲ್ಲ ಕ್ರಮಕೈಗೊಂಡಿದ್ದೇವೆ' ಎಂದು ಹೇಳುತ್ತಾರೆ. ಸುರಕ್ಷತಾಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಆರಣ್ಯ. ಇಲಾಖೆಯವರಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ. ನಿರ್ಲಕ್ಷ್ಯ ವಹಿಸಿರುವುದು ನೋಡಿದರೆ ಇದಕ್ಕೆ ನೇರ ಸರ್ಕಾರವೇ ಹೊಣೆಯಾಗಿದೆ ಎಂದು ದೂರಿದರು. ಅರಣ್ಯಧಿಕಾರಿಗಳು ಯಾವುದೇ ಜವಾಬ್ದಾರಿ ಇಲ್ಲದಂಗೆ ವರ್ತನೆ ಮಾಡುತಿದ್ದಾರೆ ಅರಣ್ಯ ಅಧಿಕಾರಿಗಳಿಗೆ ಹುಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರೂ ಕೂಡ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುತ್ತಾರೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿ ದಾಳಿಯಿಂದ ಸಾವು ಆದರೆ 20 ಲಕ್ಷ ಪರಿಹಾರ ನೀಡುತ್ತೇವೆ' ಅನ್ನುವ ತರದಲ್ಲಿ ಹೇಳುತ್ತಾರೆ. ಆದರೆ ರೈತನ ಜಮೀನಿಗೆ ಹುಲಿ ಬಂದು ರೈತನ ಮೇಲೆ ದಾಳಿನಡೆಸಿ ಕೊಂದು ಹಾಕಿದೆ ಮೃತರ ಕುಟುಂಬದ ಕಥೆ ಏನಾಗಬೇಕು. ? ಮನೆಯಲ್ಲಿ ದುಡಿಮೆ ಮಾಡುವವರು ಯಾರು ? ಅವರ ಇಡೀ ಕುಟುಂಬ ಬೀದಿಗೆ ಬಂದಾಗಿದೆ. ಆಗಾಗಿ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ಸಾಲದು, ಗ್ರಾಮಸ್ಥರ ಬೇಡಿಕೆ ಇದೆ ಸುಮಾರು ಮೃತ ರೈತನ ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು. ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಿಸುವದಾಗಿ ಭರವಸೆ ನೀಡಿದರಂತೆ ಅವರು ಕೊಟ್ಟ ಮಾತಿನಂತೆ ಮೃತರ ಪುತ್ರನಿಗೆ ನೌಕರಿಗೆ ಕೊಡಿ. . ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಮೂಡಹಳ್ಳಿ ಮೂರ್ತಿ, ವಕೀಲ ಬೂದಿತಿಟ್ಟು, ರಾಜೇಂದ್ರ, ರಾಮನಮುದ್ರ ಶಿವಣ್ಣ, ವೇಣುಗೋಪಾಲ್ ಇತರರು ಹಾಜರಿದ್ದರು.4
- ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಳವಳ್ಳಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹೆಬ್ಬಣಿ ಗ್ರಾಮದಲ್ಲಿ ಕ್ರೀಡಾಕೂಟ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಳವಳ್ಳಿ:ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮಸ್ಥರ ವತಿಯಿಂದ ಸೋಮವಾರ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಣ್ಣಿನ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಂತರ ವೃತ್ತ ನಿರೀಕ್ಷಕ ಬಸವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು . ಹಬ್ಬಗಳಲ್ಲಿ ಕೇವಲ ಪೂಜೆಗೆ ಸೀಮಿತವಾಗಬಾರದು. ಇಂತಹ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ, ಒಗ್ಗಟ್ಟು ಬೆಳೆಯುತ್ತದೆ. ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು" ಎಂದು ಅವರು ಕಿವಿಮಾತು ಹೇಳಿದರು. *ಕಾರ್ಯಕ್ರಮದಲ್ಲಿ* ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು, ಮಹಿಳೆಯರು ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.1