Shuru
Apke Nagar Ki App…
Welding Nizam Welding Nizam
More news from ಕರ್ನಾಟಕ and nearby areas
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- ಗುಳೇದಗುಡ್ಡ: ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ಸಂಭ್ರಮದಿಂದ ನಡೆಯಿತು. ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಶ್ರೀ.ಜ.ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿದ್ದರು. ರಥೋತ್ಸವದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ಗುಳೇದಗುಡ್ಡ, ಮುಗಳೊಳ್ಳಿ, ಹಡಗಲಿ, ತಿಮ್ಮಸಾಗರ, ಕಮತಗಿ, ಮುಳ್ಳೂರು, ಕಟಗೇರಿ, ಚಿಕ್ಕನರಗುಂದ, ಗಂಗೂರು, ಕೆಲವಡಿ, ಇಂಗಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವಕ್ಕೂ ಮೊದಲು ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ದ್ವಾದಶ ಪಟ್ಟಾಧೀಕಾರ ನಿಮಿತ್ತ ಬೆಳಗಿನಜಾವ ಮಂಗಲ ಸ್ನಾನ, ಪೀಠಾರೋಹಣ, ಅಯ್ಯಚಾರ, ಶಿವದೀಕ್ಷೆ, ರುದ್ರಾಅಭೀಷೇಕ ನಡೆಯಿತು. ಬಳಿಕ ಪಲ್ಲಕ್ಕಿ ಉತ್ಸವ ಕರಡಿಮಜಲು ಹಾಗೂ ಸುಮಂಗಲೆಯರ ಕಳಸಾದಾರತಿಯೊಂದಿಗ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು.1
- 📍 ಯಾದಗಿರಿ ಜಿಲ್ಲೆ ತೋಟಗಾರಿಕೆ ಇಲಾಖೆಯಿಂದ ಅಧಿಕೃತ ಪ್ರಕಟಣೆ, ಅರ್ಹತೆ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು1
- ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮಹಿಳೆಯರಿಬ್ಬರು ಸಾವನ್ನಪ್ಪಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಕ್ರಷರ್ ನಿಂದ ಹೊರಟ ಟಿಪ್ಪರ್ವೊಂದು ಕೇರಳ ಕಡೆಗೆ ತೆರಳುವಾಗ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರದ ಬಳಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರುವ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮತ್ತು ಮಗುವೊಂದು ತೀವ್ರತರವಾಗಿ ಗಾಯಗೊಂಡಿದ್ದರು, ಇವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಕೇರಳ ಮೂಲದ ಆಯೇಷಾ ನೂರಿ (41) ಮತ್ತು ನುಹಾ (18) ಸ್ಥಳದಲ್ಲೇ ಮತಪಟ್ಟರು. ನಹಿಯಾನ್ ಎಂಬ 9 ವರ್ಷದ ಬಾಲಕ ಮತ್ತು ಚಾಲಕ ಮಹಮ್ಮದ್ ಅಜೀರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಮಹಮ್ಮದ್ ಅಜೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಹಿಯಾನ್ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರಸ್ತೆ ಅಪಘಾತ ನಡೆಸಿದ ಟಿಪ್ಪರ್ ಚಾಲಕರ ತಲೆ ಮರೆಸಿಕೊಂಡಿದ್ದು, ಟಿಪ್ಪರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರೆಲ್ಲರೂ ಮೂಲತಃ ಕೇರಳದವರಾಗಿದ್ದು, ಇವರೆಲ್ಲರೂ ವ್ಯವಹಾರಿಕವಾಗಿ ಬೆಂಗಳೂರಿನಲ್ಲಿ ವಾಸ್ಯವ್ಯ ಹೂಡಿದ್ದರು ಎಂದು ತಿಳಿದಿ ಬಂದಿದೆ. ರಸ್ತೆ ಅಪಘಾತ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಟಿಪ್ಪರ್ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.3
- Post by Onlinetv24x71
- |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|1
- ಕರ್ನಾಟಕದ ಸಾರ್ವನಿಕರಿಗೆ ಒಂದು ಪ್ರಕಟಣಿ ಯಾರೆ ಬಂದು ಕೇಳಿದರೆ ಏನೆ ಹೇಳಿದರು ದೂರ ನಿಂತ್ತು ಮಾತನಾಡಿಸಿ ಕರ್ನಾಟಕದಲ್ಲಿ ಹೊಸ ಅಡ್ವಡಿಜ್ ಮೆಂಟ ತರುತಾಇರತಾರೆ ಹುಶಾರ ಆಗಿ ಇರಿ.1
- BIG NEWS: ಯಾದಗಿರಿ ಜಿಲ್ಲೆಯಲ್ಲಿ 'ಹೀಟ್ ವೇವ್' ಅಟ್ಯಾಕ್: ಏಪ್ರಿಲ್ 19ರವರೆಗೆ 'ಯಲ್ಲೋ ಅಲರ್ಟ್' ಘೋಷಣೆ! ALERTS: ಸುಡುತ್ತಿದೆ ಬಿಸಿಲು, ಎಚ್ಚರ.. ಎಚ್ಚರ..! ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಬರದಂತೆ ಡಿಸಿ ಖಡಕ್ ಸೂಚನೆ.1
- ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು. ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು, ಶಿವಾನಂದ ದೇವರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್ ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.1