ಅನಧಿಕೃತ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಘಟಕಗಳ ಮೇಲೆ ಧಾಳಿ : ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ : ಬೆಂಗಳೂರು : ಯಲಹಂಕ ಕ್ಷೇತ್ರದ ಮಾರಸಂದ್ರ ಗ್ರಾಮದಲ್ಲಿ ಅನಧಿಕೃತವಾಗಿ ತಯಾರಿಸುತ್ತಿದ್ದ ಪಿಓಪಿ ಗಣೇಶ ವಿಗ್ರಹ ತಯಾರಿಕಾ ಘಟಕಗಳ ಮೇಲೆ ಗುರುವಾರ ಬೆಂಗಳೂರು ಉತ್ತರ ಉಪ ವಿಭಾಗಧಿಕಾರಿ ಮಾರುತಿ ನೇತೃತ್ವದ ಅಧಿಕಾರಿಗಳ ತಂಡ ಧಾಳಿ ನಡೆಸಿದ್ದು, ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ ನೀಡಿದ್ದಾರೆ. ಅಧಿಕಾರಿಗಳು ಗಣೇಶ ತಯಾರಿಕಾ ಘಟಕಗಳ ಮೇಲೆ ಧಾಳಿ ನಡೆಸುತ್ತಿದ್ದಂತೆ ಘಟಕಗಳ ಮಾಲೀಕರು ಸ್ಥಳದಿಂದ ಪರಾರಿಯಾದ ಘಟನೆ ನಡೆಯಿತು. ಈ ವೇಳೆ ಬೆಂಗಳೂರು ಉಪ ವಿಭಾಗಾಧಿಕಾರಿ ಮಾರುತಿ ಅವರು ಮಾತನಾಡಿ 'ಸುಮಾರು 23 ಅನಧಿಕೃತ ಗಣೇಶ ವಿಗ್ರಹ ತಯಾರಿಕಾ ಘಟಕಗಳ ಮೇಲೆ ಇಂದು ಧಾಳಿ ನಡೆಸಿದ್ದು, ಮಾರಾಟಕ್ಕೆ ಸಿದ್ಧವಾಗಿದ್ದ ಸುಮಾರು 3 ಸಾವಿರ ಬೃಹತ್ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ ಹೊರಡಿಸಲಾಗಿದೆ. ಒಂದೊಂದು ಗಣೇಶ ವಿಗ್ರಹವೂ ಒಂದೋಂದು ಲಾರಿಯಲ್ಲಿ ಕೊಂಡೊಯ್ಯುವಷ್ಟು ಬೃಹತ್ ಗಾತ್ರದಲ್ಲಿದ್ದು, ಅನಧಿಕೃತವಾಗಿ ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಧಾಳಿ ನಡೆಸಲಾಗಿದೆ. ಎಲ್ಲಾ 3 ಸಾವಿರ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸಲು ಗಡುವು ನೀಡಲಾಗಿದೆ, ಒಂದು ವೇಳೆ ನೀಡಿರುವ ಗಡುವಿನೊಳಗೆ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಮಾಡದಿದ್ದರೆ, ಪ್ರಕರಣ ದಾಖಲಿಸಿಕೊಂಡು ಕಾರ್ಖಾನೆ ಮಾಲೀಕರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗು ವುದು. ಸ್ಥಳೀಯ ತಹಶಿಲ್ದಾರರು ಮತ್ತು ಪಿಡಿಓ ಗಣೇಶ ವಿಗ್ರಹ ಗಳನ್ನು ಸ್ವಯಂ ನಾಶ ಮಾಡುವ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡು, ತಯಾರಿಕಾ ಘಟಕಗಳನ್ನು ಮುಚ್ಚಿಸುವ ಕಾರ್ಯವನ್ನು ಮಾಡಬೇಕೆಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಯಲಹಂಕ ತಹಶಿಲ್ದಾರ್ ಸೈಯದ್ ಖಲೀಂ ಉಲ್ಲಾ , ಸ್ಥಳೀಯ ರೆವಿನ್ಯೂ ಅಧಿಕಾರಿಗಳು, ಪಿಡಿಓ, ರೈತ ಮುಖಂಡರಿದ್ದರು.
ಅನಧಿಕೃತ ಪಿಓಪಿ ಗಣೇಶ ವಿಗ್ರಹ ತಯಾರಿಕೆ ಘಟಕಗಳ ಮೇಲೆ ಧಾಳಿ : ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ : ಬೆಂಗಳೂರು : ಯಲಹಂಕ ಕ್ಷೇತ್ರದ ಮಾರಸಂದ್ರ ಗ್ರಾಮದಲ್ಲಿ ಅನಧಿಕೃತವಾಗಿ ತಯಾರಿಸುತ್ತಿದ್ದ ಪಿಓಪಿ ಗಣೇಶ ವಿಗ್ರಹ ತಯಾರಿಕಾ ಘಟಕಗಳ ಮೇಲೆ ಗುರುವಾರ ಬೆಂಗಳೂರು ಉತ್ತರ ಉಪ ವಿಭಾಗಧಿಕಾರಿ ಮಾರುತಿ ನೇತೃತ್ವದ ಅಧಿಕಾರಿಗಳ ತಂಡ ಧಾಳಿ ನಡೆಸಿದ್ದು, ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ ನೀಡಿದ್ದಾರೆ. ಅಧಿಕಾರಿಗಳು ಗಣೇಶ ತಯಾರಿಕಾ ಘಟಕಗಳ ಮೇಲೆ ಧಾಳಿ ನಡೆಸುತ್ತಿದ್ದಂತೆ ಘಟಕಗಳ ಮಾಲೀಕರು ಸ್ಥಳದಿಂದ ಪರಾರಿಯಾದ ಘಟನೆ ನಡೆಯಿತು. ಈ ವೇಳೆ ಬೆಂಗಳೂರು ಉಪ ವಿಭಾಗಾಧಿಕಾರಿ ಮಾರುತಿ ಅವರು ಮಾತನಾಡಿ 'ಸುಮಾರು 23 ಅನಧಿಕೃತ ಗಣೇಶ ವಿಗ್ರಹ ತಯಾರಿಕಾ ಘಟಕಗಳ ಮೇಲೆ ಇಂದು ಧಾಳಿ ನಡೆಸಿದ್ದು, ಮಾರಾಟಕ್ಕೆ ಸಿದ್ಧವಾಗಿದ್ದ ಸುಮಾರು 3 ಸಾವಿರ ಬೃಹತ್ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸುವಂತೆ ಆದೇಶ ಹೊರಡಿಸಲಾಗಿದೆ. ಒಂದೊಂದು ಗಣೇಶ ವಿಗ್ರಹವೂ ಒಂದೋಂದು ಲಾರಿಯಲ್ಲಿ ಕೊಂಡೊಯ್ಯುವಷ್ಟು ಬೃಹತ್ ಗಾತ್ರದಲ್ಲಿದ್ದು, ಅನಧಿಕೃತವಾಗಿ ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಧಾಳಿ ನಡೆಸಲಾಗಿದೆ. ಎಲ್ಲಾ 3 ಸಾವಿರ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಪಡಿಸಲು ಗಡುವು ನೀಡಲಾಗಿದೆ, ಒಂದು ವೇಳೆ ನೀಡಿರುವ ಗಡುವಿನೊಳಗೆ ಗಣೇಶ ವಿಗ್ರಹಗಳನ್ನು ಸ್ವಯಂ ನಾಶ ಮಾಡದಿದ್ದರೆ, ಪ್ರಕರಣ ದಾಖಲಿಸಿಕೊಂಡು ಕಾರ್ಖಾನೆ ಮಾಲೀಕರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗು ವುದು. ಸ್ಥಳೀಯ ತಹಶಿಲ್ದಾರರು ಮತ್ತು ಪಿಡಿಓ ಗಣೇಶ ವಿಗ್ರಹ ಗಳನ್ನು ಸ್ವಯಂ ನಾಶ ಮಾಡುವ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡು, ತಯಾರಿಕಾ ಘಟಕಗಳನ್ನು ಮುಚ್ಚಿಸುವ ಕಾರ್ಯವನ್ನು ಮಾಡಬೇಕೆಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಯಲಹಂಕ ತಹಶಿಲ್ದಾರ್ ಸೈಯದ್ ಖಲೀಂ ಉಲ್ಲಾ , ಸ್ಥಳೀಯ ರೆವಿನ್ಯೂ ಅಧಿಕಾರಿಗಳು, ಪಿಡಿಓ, ರೈತ ಮುಖಂಡರಿದ್ದರು.
- ದುಬೈನಿಂದ ಇಂಡಿಗೋ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಳ್ಳಸಾಗಣೆಗೆಗೆ ಯತ್ನಿಸಿದ ಆರೋಪಿ ಏರ್ಪೋರ್ಟ್ ನಲ್ಲಿ ಕಸ್ಟಮ್ ಅಧಿಕಾರಿಗಳ ಕಾರ್ಯಾಚರಣೆ #ದೇವನಹಳ್ಳಿ ಬೆಂಗಳೂರು:ದುಬೈನಿಂದ ಇಂಡಿಗೋ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಳ್ಳಸಾಗಣೆಗೆಗೆ ಯತ್ನಿಸಿದ ಆರೋಪಿಯನ್ನ ಕಾರ್ಯಾಚರಣೆ ನಡೆಸಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಮೊಹಮ್ಮದ್ ಸಿರಾಜ್ ಕಳ್ಳಸಾಗಣೆಗೆ ಯತ್ನ ಮಾಡಿದ ಆರೋಪಿಯಾಗಿದ್ದು,ಬಾಯಿಯಲ್ಲಿ ಚಿನ್ನದ 82 ಗ್ರಾಂ ತೂಕದ ಎರಡು ಕ್ಯಾಪ್ಸುಲ್ ಸಾಗಾಟ ಮಾಡಲು ಯತ್ನಿಸಿದ್ದು,ಬೆಂಗಳೂರಿನಿಂದ ಗಾಜಿಯಾಬಾದ್ ಗೆ ಪ್ರಯಾಣ ಬೆಳೆಸಲು ಟಿಕೆಟ್ ಬುಕ್ ಮಾಡಿದ .ಈ ವೇಳೆ ಸ್ಕ್ರೀನಿಂಗ್ ಮಾಡುವಾಗ ಆರೋಪಿ ಸಿಕ್ಕಿಬಿದ್ದಿದ್ದು,ಆರೋಪಿಯನ್ನ ವಶಕ್ಕೆ ಪಡೆದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸರ ವಶಕ್ಕೆ ಕಸ್ಟಮ್ ಅಧಿಕಾರಿಗಳು ನೀಡಿದ್ದಾರೆ.1
- ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. 7 ಗಂಟೆಯ ವಿಮಾನದಲ್ಲಿ ಪ್ರಯಾಣ. AI2654 ವಿಮಾನದ ಮೂಲಕ ಪ್ರಯಾಣ. ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ. ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ1
- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ1
- ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು. ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ. ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬೆಂಗಳೂರು:ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರವಹಿಸಲಾಗಿದೆ.ಲಖನೌದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ 6E-231 ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಮಾಹಿತಿ ಹಿನ್ನೆಲೆಯಲ್ಲಿ ಟರ್ಮಿನಲ್-1ರ ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ BTAC ಸಭೆ ನಡೆದಿದೆ.ಬೆದರಿಕೆ ಆಧರಿಸಿ ಅಗತ್ಯ ಭದ್ರತಾ ಕ್ರಮ ಜಾರಿ ಮಾಡಲಾಗಿದ್ದು,ವಿಮಾನ ಹಾಗೂ ಟರ್ಮಿನಲ್ ಪ್ರದೇಶದಲ್ಲಿ ತೀವ್ರ ಭದ್ರತಾ ಪರಿಶೀಲನೆ ನಡೆಸಲಾಗಿದೆ.ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರವಹಿಸಲಾಗಿದೆ.1
- ಹಲಗೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ. ಮಳವಳ್ಳಿ:- ತಮಿಳುನಾಡಿಗೆ ಮತ್ತೆ ಒಂಬತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದನ್ನು ವಿರೋಧಿಸಿ ತಮಿಳುನಾಡಿಗೆ ತಕ್ಷಣವೇ ನೀರುಬಿಡುತ್ತಿರುವುದನ್ನು ನಿಲ್ಲಿಸಿ, ರೈತರಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಹಲಗೂರು ವೃತ್ತದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಜುಲೈ 29ರಿಂದ ಆಗಸ್ಟ್ 24ರವರೆಗೆ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆಆದೇಶ ನೀಡಿದ ಹಿನ್ನೆಲೆ ನೀರು ಬಿಟ್ಟಿದ್ದರೂ ಸಹ, ನೆನ್ನೆಯಿಂದ ಮತ್ತೆ ಪ್ರತಿದಿನ9,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೊಸ ಆದೇಶ ನೀಡಿದೆ. ಇದು ನಮ್ಮ ರಾಜ್ಯದ ಜನರಿಗೆ, ಜಿಲ್ಲೆಯ ಜನತೆಗೆ, ನಮ್ಮ ನಾಡಿನ ರೈತರಿಗೆ, ಮರಣ ಶಾಸನ ವಿದ್ದಂತೆ. ಏಕೆಂದರೆ ಈಗಾಗಲೇ ಮುಂಗಾರು ಮಳೆ ಬಂದಿಲ್ಲ, ನಮ್ಮ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ನಮ್ಮ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ರಾಜ್ಯದ ರೈತರಿಗೆ ಬರ ಪರಿಹಾರ ನೀಡಿಲ್ಲ. ಆದುದರಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಈ ರಾಜ್ಯದ ಜನರಿಗೆ ರೈತರ ವ್ಯವಸಾಯಕ್ಕಾಗಿ ನೀರು ಬಿಡಬೇಕಾಗಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದ 30 ಸಂಸದರು ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಿ ಎಂದರು. ಸ್ಥಳದಲ್ಲಿದ್ದ ನಾಡಕಚೇರಿ ಉಪ ತಹಸೀಲ್ದಾರ್ ಕೆ. ನಟರಾಜ್ ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅವರು ಮಾತನಾಡಿ, ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ,ಕೇಂದ್ರಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂತೋಷ್, ಚಂದ್ರು, ಬಸಂತ್ ಕುಮಾರ್, ಪೂರ್ಣಚಂದ್ರ ,ಮುನಿ ಮಹಾದೇವಸ್ವಾಮಿ, ವಾಸೀಮ್ಅಕ್ರಂ , ಅಬ್ದುಲ್ ರಹಮಾನ್, ರಿಯಾಜ್, ಸೇರಿದಂತೆ ಇತರರು ಇದ್ದರು1
- ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು! ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು!1