Shuru
Apke Nagar Ki App…
ಕಲ್ಬುರ್ಗಿ ಜಿಲ್ಲೆಯ ಶಾಹಬಾದ್ ತಾಲೂಕಿನ ವಾಡಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿರುವ ಘಟನೆ ವಾಡಿ ಪಟ್ಟಣದ ಬಲರಾಮ್ ಚೌಕ ಹತ್ತಿರ ಭೀಕರ ಕೊಲೆ ನಡೆದಿರುವ ಘಟನೆ ನಡೆದಿದೆ 13 ವರ್ಷದ ಹಳೆಯ ದ್ವೇಷ ಎಂದು ಪರಿಗಣಿಸಲಾಗಿದೆ ವಾಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ
Khasim kurkunda
ಕಲ್ಬುರ್ಗಿ ಜಿಲ್ಲೆಯ ಶಾಹಬಾದ್ ತಾಲೂಕಿನ ವಾಡಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿರುವ ಘಟನೆ ವಾಡಿ ಪಟ್ಟಣದ ಬಲರಾಮ್ ಚೌಕ ಹತ್ತಿರ ಭೀಕರ ಕೊಲೆ ನಡೆದಿರುವ ಘಟನೆ ನಡೆದಿದೆ 13 ವರ್ಷದ ಹಳೆಯ ದ್ವೇಷ ಎಂದು ಪರಿಗಣಿಸಲಾಗಿದೆ ವಾಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ
More news from ಕರ್ನಾಟಕ and nearby areas
- ವಾಡಿ ಪಟ್ಟಣದ ಬಲರಾಮ್ ಚೌಕ ಹತ್ತಿರ ಭೀಕರ ಕೊಲೆ ನಡೆದಿರುವ ಘಟನೆ ನಡೆದಿದೆ 13 ವರ್ಷದ ಹಳೆಯ ದ್ವೇಷ ಎಂದು ಪರಿಗಣಿಸಲಾಗಿದೆ ವಾಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ1
- BIG BREAKING NEWS || ಹರಹರ ಮಹಾದೇವ ಘೋಷಣೆಯ ನಡುವೆ ಹರಿದ ರಕ್ತದ ಕಲೆ: ಬಸವಣ್ಣನ ರಥೋತ್ಸವದಲ್ಲಿ ರಕ್ಕಸ ಸಂಭ್ರಮ! ಬೀದರ್: ಭಕ್ತಿ ಪರಾಕಾಷ್ಠೆಯ ನಡುವೆ ವಿಧಿಯಾಟ ಬೇರೆಯೇ ಇತ್ತು. ಬಸವಕಲ್ಯಾಣದ ಥೇರು ಮೈದಾನದಲ್ಲಿ ಲಕ್ಷಾಂತರ ಭಕ್ತರು 'ಬಸವೇಶ್ವರ'ನ ರಥ ಎಳೆಯಲು ಮುಗಿಬಿದ್ದಾಗ ಸಂಭವಿಸಿದ ನೂಕಾಟವೊಂದು ಭೀಕರ ರಕ್ತಪಾತಕ್ಕೆ ನಾಂದಿ ಹಾಡಿದೆ. ಭಕ್ತಿಯ ಭರದಲ್ಲಿ ರಥದ ವೇಗಕ್ಕೆ ಸಿಲುಕಿದ ಧನರಾಜ್ ಎಂಬುವವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ರಥವನ್ನು ಎಳೆಯುವ ಭರದಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಅವಘಡ ಸಂಭವಿಸಿದ್ದು, ಗಾಯಾಳುಗಳ ಕಿರುಚಾಟ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಕಲಬುರಗಿಗೆ ಕಳುಹಿಸಿಕೊಡಲಾಗಿದೆ. ಸಂಭ್ರಮದ ಜಾತ್ರೆಯಲ್ಲಿ ಈ ಘಟನೆ ಸೂತಕದ ಛಾಯೆ ಮೂಡಿಸಿದೆ.1
- Post by Sharanappa Annadata1
- ಬಂಗಾರದ ಪದಕಕ್ಕೆ ಮುತ್ತಿಟ್ಟ ಘತ್ತರಗಿ ಗ್ರಾಮದ ಕುವರಿ. ಅಕ್ಕಮಹಾದೇವಿ ಮಹಿಳಾ ವಿಶ್ವಾವಿದ್ಯಾಲಯದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ1
- ಲೋಕಾಯುಕ್ತ ಬಲೆಗೆ ಕೆರೂರ ಪಿ.ಎಸ್.ಐ. ಭೀಮಪ್ಪ ಕೆರೂರ - ಸುಳ್ಳು ಕೇಸ್ ದಾಖಲಿಸುತ್ತೇನೆಂದು ವ್ಯಕ್ತಿಯೊಬ್ಬನಿಂದ ಲಂಚ ಪಡೆಯುವಾಗ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪಿ.ಎಸ್.ಐ.ಭೀಮಪ್ಪ ರಬಕವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಫಿರ್ಯಾದಿದಾರ ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಇವರು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಎ.17 ರಂದು ಫಿರ್ಯಾದಿಯ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಸಾ:ಕೆರೂರ ಇವನಿಗೆ ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಅವನಿಗೆ ಇಸ್ಪೀಟ್ ಆಡಿಸಿದ್ದಿಯಾ. ಬಡ್ಡಿ ಆಡಿದ್ದೀಯಾ ಅಂತಾ ಸುಳ್ಳು ಆಪಾದನೆ ಮಾಡಿ ನಿನ್ನ ಮೇಲೆ ಕೇಸ್ ಮಾಡುತ್ತೇವೆ ಅಂತಾ ಹೆದರಿಸಿ ರೂ.1 ಲಕ್ಷ 70 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಎ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಇವನಿಗೆ ಕೆರೂರ ಪೊಲೀಸ್ ಠಾಣೆಯಿಂದ ಬಿಟ್ಟು ಕಳುಹಿಸಿ ಲಂಚದ ಹಣ ಕೊಟ್ಟು, ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ನೇದ್ದನ್ನು ಬಿಡಿಸಿಕೊಂಡು ಹೋಗಲು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಫಿರ್ಯಾದಿದಾರರು ದೂರು ನೀಡಿದ್ದರಿಂದ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಬುಧವಾರ ಪ್ರಕರಣದಲ್ಲಿಯ ಆಪಾದಿತರಾದ ಪಿ.ಎಸ್.ಐ. ಭೀಮಪ್ಪ ರಬಕವಿ, ಪೊಲೀಸ್ ಪೇದೆ ಸಂತೋಷ ಬಿರಾದಾರ ಇಬ್ಬರೂ ಕೆರೂರ ಪೊಲೀಸ್ ಠಾಣೆ, ಇವರುಗಳು ಫಿರ್ಯಾದಿಯಿಂದ ಲಂಚದ ಹಣ ರೂ.1 ಲಕ್ಷ 70 ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಸುರೇಶರೆಡ್ಡಿ, ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ, ಮತ್ತು ಎನ್. ಆರ್. ಖಿಲಾರೆ, ಪಿಐ-3 ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.1
- Post by Dr.Anita Bablad1
- ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಏಪ್ರಿಲ್ 25 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಅಭಯಾಂತರಂಗ’ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಬಿ. ಬಸವರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಚರಂತೇಶ್ವರ ಮಠದ ಪೂಜ್ಯ ಶ್ರೀ ಶರಣಬಸವ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವರಾದ ಎನ್.ಎಸ್. ಬೋಸರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.1
- BIG NEWS || ನಕಲಿ ವೈದ್ಯರೇ ಎಚ್ಚರ! ಸೀಲ್ ಒಡೆದರೆ ಜೈಲು ಗ್ಯಾರಂಟಿ: ಡಿಎಚ್‌ಓ ಸುರೇಂದ್ರ ಬಾಬು ಖಡಕ್ ವಾರ್ನಿಂಗ್ ಲಿಂಗಸುಗೂರು: ತಾಲೂಕಿನಲ್ಲಿ ನಕಲಿ ವೈದ್ಯರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈಗ 'ಸರ್ಜರಿ'ಗೆ ಸಿದ್ಧವಾಗಿದೆ. "ಕ್ಲಿನಿಕ್ ಸೀಲ್ ಮಾಡಿದ ಮೇಲೂ ಮತ್ತೆ ಬಾಗಿಲು ತೆರೆದರೆ ಮುಲಾಜಿಲ್ಲದೆ ಜೈಲಿಗೆ ಅಟ್ಟುತ್ತೇವೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ಸುರೇಂದ್ರ ಬಾಬು ನಕಲಿ ವೈದ್ಯರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಪರವಾನಿಗೆ ಇಲ್ಲದಿದ್ದರೆ ಅದು ಅಪರಾಧ! ಲಿಂಗಸುಗೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕೆಪಿಎಂಇ (KPME) ಪರವಾನಿಗೆ ಇಲ್ಲದೆ ರಾಜಾರೋಷವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕಠಿಣ ನಿಲುವು ತಳೆದಿದ್ದಾರೆ. "ಪರವಾನಿಗೆ ಇಲ್ಲದೆ ಪ್ರಾಕ್ಟಿಸ್ ಮಾಡುವುದು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದಂತೆ. ಇದು ಅಕ್ಷಮ್ಯ ಅಪರಾಧ" ಎಂದು ಅವರು ಗುಡುಗಿದ್ದಾರೆ. ಸೀಲ್ ಒಡೆದರೆ ಸುಮ್ಮನಿರಲ್ಲ! ಇಲಾಖೆಯಿಂದ ದಾಳಿ ನಡೆಸಿ ಕ್ಲಿನಿಕ್‌ಗಳನ್ನು ಸೀಲ್ ಮಾಡಿದರೂ, ಕೆಲವರು ಕಾನೂನು ಬಾಹಿರವಾಗಿ ಮತ್ತೆ ಕ್ಲಿನಿಕ್ ಓಪನ್ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಚ್‌ಓ, "ಸೀಲ್ ತೆಗೆಯುವುದು ಗಂಭೀರ ಅಪರಾಧ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಹಾಯಕ ಆಯುಕ್ತರ ಸಹಯೋಗದೊಂದಿಗೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು" ಎಂದರು. ಹಳ್ಳಿಹಳ್ಳಿಗಳಲ್ಲೂ ನಿರಂತರ ದಾಳಿ ಕೇವಲ ಪಟ್ಟಣ ಮಾತ್ರವಲ್ಲದೆ ತಾಲೂಕಿನ ಹಟ್ಟಿ, ಗುರುಗುಂಟ, ಆನೆಹೊಸೂರು, ಮುದಗಲ್, ಮಸ್ಕಿ, ನಾಗಲಾಪುರ, ನಾಗರಾಳ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ನಕಲಿ ವೈದ್ಯರ ಜಾಲ ಹರಡಿದೆ. ಈ ಜಾಲವನ್ನು ಬೇರುಸಹಿತ ಕಿತ್ತೆಸೆಯುವವರೆಗೂ ನಮ್ಮ ಇಲಾಖೆಯ ದಾಳಿ ನಿರಂತರವಾಗಿರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಔಷಧಿ ಸಂಗ್ರಹದ ಮೇಲೂ ಕಣ್ಣು ನಕಲಿ ವೈದ್ಯರು ನಿಯಮ ಮೀರಿ ಔಷಧಿಗಳನ್ನು ಸಂಗ್ರಹಿಸುತ್ತಿರುವುದು ಪತ್ತೆಯಾಗಿದೆ. "ಈ ಔಷಧಿಗಳು ಎಲ್ಲಿಂದ ಪೂರೈಕೆಯಾಗುತ್ತಿವೆ? ಯಾರು ನೀಡುತ್ತಿದ್ದಾರೆ? ಎಂಬ ಬಗ್ಗೆ ಔಷಧಿ ನಿಯಂತ್ರಕರ (Drug Controller) ಗಮನಕ್ಕೆ ತರಲಾಗಿದೆ. ಮೂಲವನ್ನೇ ಕತ್ತರಿಸಲು ನಾವು ಪ್ಲ್ಯಾನ್ ಮಾಡಿದ್ದೇವೆ" ಎಂದು ತಿಳಿಸಿದರು. ಏಪ್ರಿಲ್ 29ಕ್ಕೆ ನಿರ್ಣಾಯಕ ಸಭೆ: "ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ 29ರಂದು ಮಹತ್ವದ ಸಭೆ ನಡೆಯಲಿದ್ದು, ತಾಲೂಕಿನ ಪ್ರಸಕ್ತ ವಿದ್ಯಮಾನಗಳ ವರದಿಯನ್ನು ಮಂಡಿಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆಯಂತೆ ನಕಲಿ ವೈದ್ಯರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ತಂಡ ಸನ್ನದ್ಧವಾಗಿದೆ" ಎಂದು ಡಾ. ಸುರೇಂದ್ರ ಬಾಬು ಹೇಳಿದರು. "ವರದಿ: ಅಮರೇಶ ಗೋಸ್ಲೆ" ಮುಖ್ಯಾಂಶಗಳು: ಲೈಸೆನ್ಸ್ ಇಲ್ಲದಿದ್ದರೆ ಬೀಳಲಿದೆ ಬೀಗ! ಜಿಲ್ಲಾಧಿಕಾರಿಗಳ ಸಭೆಯ ಬಳಿಕ ಫುಲ್ ಆ್ಯಕ್ಷನ್. ಔಷಧಿ ಸಂಗ್ರಹಿಸುವವರ ವಿರುದ್ಧವೂ ಕೇಸ್ ದಾಖಲು.1