ಶಿವಮೊಗ್ಗ-ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ: ಇಂದಿನ ಒಳಹರಿವಿನಲ್ಲಿ ಹೆಚ್ಚಳ ಶಿವಮೊಗ್ಗ : ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಸ್ಥಿರ ಏರಿಕೆ ಕಂಡುಬರುತ್ತಿದ್ದು, ಆ: 25 ರ ವರದಿಯಂತೆ ಜಲಾಶಯದ ಸಂಗ್ರಹ 175 ಅಡಿ ದಾಟಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 186.00 ಅಡಿಗಳಾಗಿದ್ದು (ಸಮುದ್ರ ಮಟ್ಟದಿಂದ 2158.00 ಅಡಿ), ಒಟ್ಟು 71.535 ಟಿ.ಎಮ್.ಸಿ (TMC) ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇಂದಿನ ವರದಿಯಂತೆ, ಡ್ಯಾಂನ ಪ್ರಸ್ತುತ ನೀರಿನ ಮಟ್ಟ 175 ಅಡಿ 11 ಇಂಚು (2147.91 ಅಡಿ MSL) ತಲುಪಿದ್ದು, ಜಲಾಶಯದಲ್ಲಿ 59.420 ಟಿ.ಎಮ್.ಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಪ್ರಸ್ತುತ 5,680 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಪ್ರಸ್ತುತ ಒಟ್ಟು ಹೊರಹರಿವು 206 ಕ್ಯೂಸೆಕ್ ಮಾತ್ರವಿದ್ದು (ರಿವರ್ ಸ್ಲೂಯಿಸ್ ಮೂಲಕ 100 ಕ್ಯೂಸೆಕ್ ಹಾಗೂ ಆವೀಕರಣದ ಮೂಲಕ 106 ಕ್ಯೂಸೆಕ್ ನಷ್ಟ), ಬಲದಂಡೆ (RBC) ಹಾಗೂ ಎಡದಂಡೆ (LBC) ಕಾಲುವೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಕಳೆದ ವರ್ಷ ಇದೇ ದಿನದಂದು (ಆಗಸ್ಟ್ 25) ಜಲಾಶಯದ ನೀರಿನ ಮಟ್ಟ 184 ಅಡಿ 3 ಇಂಚು ಇತ್ತು ಹಾಗೂ 69.346 ಟಿ.ಎಮ್.ಸಿ ನೀರು ಸಂಗ್ರಹ ವಾಗಿತ್ತು. ಆ ಸಮಯದಲ್ಲಿ 6,511 ಕ್ಯೂಸೆಕ್ ಒಳಹರಿವು ಹಾಗೂ 4,115 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.
ಶಿವಮೊಗ್ಗ-ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ: ಇಂದಿನ ಒಳಹರಿವಿನಲ್ಲಿ ಹೆಚ್ಚಳ ಶಿವಮೊಗ್ಗ : ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಸ್ಥಿರ ಏರಿಕೆ ಕಂಡುಬರುತ್ತಿದ್ದು, ಆ: 25 ರ ವರದಿಯಂತೆ ಜಲಾಶಯದ ಸಂಗ್ರಹ 175 ಅಡಿ ದಾಟಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 186.00 ಅಡಿಗಳಾಗಿದ್ದು (ಸಮುದ್ರ ಮಟ್ಟದಿಂದ 2158.00 ಅಡಿ), ಒಟ್ಟು 71.535 ಟಿ.ಎಮ್.ಸಿ (TMC) ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇಂದಿನ ವರದಿಯಂತೆ, ಡ್ಯಾಂನ ಪ್ರಸ್ತುತ ನೀರಿನ ಮಟ್ಟ 175 ಅಡಿ 11 ಇಂಚು (2147.91 ಅಡಿ MSL) ತಲುಪಿದ್ದು, ಜಲಾಶಯದಲ್ಲಿ 59.420 ಟಿ.ಎಮ್.ಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಪ್ರಸ್ತುತ 5,680 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಪ್ರಸ್ತುತ ಒಟ್ಟು ಹೊರಹರಿವು 206 ಕ್ಯೂಸೆಕ್ ಮಾತ್ರವಿದ್ದು (ರಿವರ್ ಸ್ಲೂಯಿಸ್ ಮೂಲಕ 100 ಕ್ಯೂಸೆಕ್ ಹಾಗೂ ಆವೀಕರಣದ ಮೂಲಕ 106 ಕ್ಯೂಸೆಕ್ ನಷ್ಟ), ಬಲದಂಡೆ (RBC) ಹಾಗೂ ಎಡದಂಡೆ (LBC) ಕಾಲುವೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಕಳೆದ ವರ್ಷ ಇದೇ ದಿನದಂದು (ಆಗಸ್ಟ್ 25) ಜಲಾಶಯದ ನೀರಿನ ಮಟ್ಟ 184 ಅಡಿ 3 ಇಂಚು ಇತ್ತು ಹಾಗೂ 69.346 ಟಿ.ಎಮ್.ಸಿ ನೀರು ಸಂಗ್ರಹ ವಾಗಿತ್ತು. ಆ ಸಮಯದಲ್ಲಿ 6,511 ಕ್ಯೂಸೆಕ್ ಒಳಹರಿವು ಹಾಗೂ 4,115 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.
- ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರ ಮೊಬೈಲ್ ಕದ್ದ ಕಳ್ಳ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಮೊಬೈಲ್ ಕದ್ದ ಕಳ್ಳ.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಸುಮಾರು 12ಗಂಟೆ ಸಮಯದಲ್ಲಿ ಕಳ್ಳನೊಬ್ಬ ರೋಗಿಯ ಸಂಬಂಧಿ ಕದುರಪ್ಪ ಎನ್ನುವವರ ಜೇಬುನಲ್ಲಿದ್ದ ಮೊಬೈಲ್ ಕಳ್ಳತನ ಮ ಮಾಡಿದ್ದಾನೆ ಮೊಬೈಲ್ ಕಳ್ಳತನ ದೃಶ್ಯ ಆಸ್ಪತ್ರೆಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಬೈಲ್ ಕಳೆದುಕೊಂಡವರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದು ಸಿ ಸಿ ಕ್ಯಾಮೆರಾವನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.1
- ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ, ಎಂ ಎನ್ ನಾಯಕ್ ನೇತೃತ್ವದಲ್ಲಿ ಲೋಕಾಯುಕ್ತರಿಗೆ ಮನವಿ. ಹಾವೇರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಮತ್ತು ವಿವಿಧ ಹಳ್ಳಿಗಳಲ್ಲಿ ಇರುವ ಗೋಮಾಳ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದನ್ನು ಖಂಡಿಸಿ ಮತ್ತು ವೈದ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ವೈದ್ಯಕೀಯ ನಿರ್ಲಕ್ಷತೆ ವಿರುದ್ಧ, ಹಿರೇಕೆರೂರು ತಾಲೂಕ್ ಎಳವಾಳ ಗ್ರಾಮದ ಗೋಮಾಳ ಆಸ್ತಿಯನ್ನು ಒಬ್ಬರು ತಮ್ಮ ವೈಯಕ್ತಿಕ ಹೆಸರಿನಲ್ಲಿ ಮಾಡಿಕೊಂಡಿರುವ ವಿರುದ್ಧ ಮತ್ತು ಬ್ಯಾಡಗಿ ತಾಲೂಕ್ ಸುಭಾಷ್ ತುಪ್ಪದ್ ಇವರ ಮಗಳಾದ ವಂದನಾ ಅವರ ಚಿರಾಯು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷತೆಯಿಂದ ಆಗಿರುವ ಸಾವನ್ನು ಖಂಡಿಸಿ ಮತ್ತು ರಟ್ಟಿಹಳ್ಳಿ ತಾಲೂಕ ಚಾಂದ್ ಪೀರ್ ಆರು ವರ್ಷದ ಮಗು ಜಿಲ್ಲಾ ಕೋಮಾದಲ್ಲಿ ಹೋಗಿರುವುದನ್ನು ಖಂಡಿಸಿ ಮಾನ್ಯ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ತನಿಖೆಯನ್ನು ನಡೆಸಲು ಆಗ್ರಹಿಸಲಾಯಿತು.1
- ಈದ್ ಮಿಲಾದ್: ಶಾಂತಿ ಸುವ್ಯವಸ್ಥೆ ಕಾಪಾಡಲು ಚಳ್ಳಕೆರೆಯಲ್ಲಿ ಪೊಲೀಸರಿಂದ ಬೃಹತ್ ಪಥಸಂಚಲನ ಚಳ್ಳಕೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಥಸಂಚಲನ ನಡೆಸಲಾಯಿತು. ನಗರದ ಪೊಲೀಸ್ ಠಾಣೆಯ ಮುಂಭಾಗದಿಂದ ಆರಂಭವಾದ ಈ ಶಿಸ್ತುಬದ್ಧ ಪಥಸಂಚಲನವು ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ಎಸ್.ಆರ್. ರಸ್ತೆ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಹಳೆನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೂಲಕ ಸಾಗಿ ಬಳ್ಳಾರಿ ರಸ್ತೆಯವರೆಗೆ ಜರುಗಿತು. ನಗರದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿದ ಪೊಲೀಸ್ ಪಡೆ, ಸಾರ್ವಜನಿಕರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಚಳ್ಳಕೆರೆ ವಿಭಾಗದ ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಕುಮಾರ್, ಪಿಎಸ್‌ಐ ಶಿವರಾಜ್ ಸೇರಿದಂತೆ ಕೆಎಸ್‌ಆರ್‌ಪಿ , ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಅನ್ಯೋನ್ಯತೆಯಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು,ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.1
- ಚಿತ್ರದುರ್ಗ: ಅಲೆಮಾರಿಗಳು ರಾಜಕಾರಿಗಳಿಗೆ ಮತ ಹಾಕಲು ಬೇಕು ಸೌಲಭ್ಯಗಳಿಗೆ ಬೇಡವಾಗಿದ್ದಾರೆ ಅಲೆಮಾರಿಗಳಿಗೆ ಹೆಸರಿಗಷ್ಟೆ ಶೇಕಡ 1ರಷ್ಟ ಮೀಸಲಾತಿ ನೀಡಿದ್ದು, ಅದು ಯಾರಿಗೂ ಸಿಗದಂತಾಗಿದೆ. ರಾಜಕಾರಣಿಗಳಿಗೆ ಮತ ಹಾಕಲು ಮಾತ್ರ ನಾವು ಬೇಕು, ಸೌಲಭ್ಯಕ್ಕೆ ಬೇಡ ಎನ್ನುವಂತಾಗಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಚಿನ್ ಬೇಸರ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಸಂವಿಧಾನದಲ್ಲಿ ಕೂಡ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪಲ್ಲವಿ ಅವರು, ಕೇವಲ ಜಿಲ್ಲಾ ಕೇಂದ್ರದಲ್ಲಿ ಪ್ರಗತಿ ಪರಿಶೀಲನೆ ನಡೆಸುವ ಬದಲು ಅಲೆಮಾರಿಗಳ ನೋವು ಸಂಕಷ್ಟಗಳನ್ನು ಅರಿಯಲು ಸ್ಥಳಗಳಿಗೆ ಬರಬೇಕು. ಸರ್ಕಾರಗಳು ಕೂಡ ಅಲೆ ಮಾರಿಗಳ ಸಮಸ್ಯೆಗಳನ್ನು ಆಲಿಸಬೇಕು. ಅಭಿವೃದ್ದಿ ನಿಗಮದಿಂದ ಸಾಲಪಡೆದು ಸಾಲಗಾರರಾಗುತ್ತಿದ್ದೇವೆಯೇ ಹೊರೆತು, ಶೈಕ್ಷಣಿಕವಾಗಿ ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲವೆಂದರು.1
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.1
- ವಾಹನ ಕಳವು ಪ್ರಕರಣ ಪೊಲೀಸ್ ಇಲಾಖೆಯಿಂದ ಎಚ್ಚರಿಕೆಯ ಸಂದೇಶ....! ಮಂಗಳೂರು; ನಗರದ ಹೊರವಲಯ ಮುಡಿಪು ಭಾಗದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹೆಚ್ಚಾಗಿದೆ. ಇದೇ ತಂಡವು ಮುಡಿಪು ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಉಪ್ಪಿನಂಗಡಿ ಹಾಗೂ ಸುರತ್ಕಲ್ ಭಾಗಗಳಲ್ಲಿಯೂ ಇದೇ ತಂಡ ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸಂದೇಶ ನೀಡಿದೆ. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ...1
- ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದ್ದು ಜಿಲ್ಲೆಯ ನಾನಾ ಬಾಗದಿಂದ ಬಂದಂತ ಸುಮಾರು ಮುನ್ನೂರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 15000 ಹಾಗೂ ಸಹಾಯಕಿಯರಿಗೆ ರೂ. 10000 ಗೌರವ ಧನ ಹೆಚ್ಚಿಸಿ ಜಾರಿಗೊಳಿಸಿ ಅಂಗನವಾಡಿಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ 2011 ರಿಂದ ನಿವೃತ್ತರಾಗಿರುವ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿಗೊಳಿಸಿ. ಹಾಗೂ ಈಗಾಗಲೇ ಸ್ವಯಂನಿವೃತ್ತಿಯಾಗಿರುವವರಿಗೂಗ್ರಾಚ್ಯುಟಿ ನೀಡಬೇಕು. SIR ಸಮೀಕ್ಷೆ ಮಾಡುವವರಿಗೆ ಗೌರವಧನ ಹೆಚ್ಚಳ ಮಾಡಬೇಕು. ಸಮೀಕ್ಷೆ ಪೂರ್ಣವಾಗುವುದರೊಳಗೆ ಖಾತೆಗೆ ಹಣ ಸಂದಾಯ ಮಾಡಬೇಕು. ಸಮೀಕ್ಷೆ ಸಮಯದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದವರಿಗೆ ವೈದ್ಯಕೀಯ ವೆಚ್ಚ ನೀಡಿ ಮೃತರ ಕುಟುಂಬಕ್ಕೆ 30ಲಕ್ಷ ಪರಿಹಾರ ಕೊಡಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಬಿಸಿಊಟ ತಯಾರಕರನ್ನು ಅಡುಗೆ ಕೆಲಸದಿಂದ ಬಿಡುಗಡೆಗೊಳಿಸಿದಲ್ಲಿ ಅಂತಹ ಬಿಸಿಊಟ ತಯಾರಕರಿಗೂ ಇಡುಗಂಟು ಹಣ ಕೊಡಬೇಕು. ಬಿಸಿಊಟ ತಯಾರಕರಿಗೆ ಕನಿಷಂಔ ವೇತನ ಜಾರಿಗೆ ತರಬೇಕು ಹಾಗೂ ಇನ್ನೂ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.1
- ಸಮಾಜದಲ್ಲಿ ಸತ್ಯ ಹೇಳುವ ವಿಜ್ನಾನದ ಜಾಗೃತಿ ಅಗತ್ಯ ಇದೆ ಎಂದು ಬಿಇಒ ಕೆ.ಎಸ್. ಸುರೇಶ್ ಚಳ್ಳಕೆರೆ:ಮೌಢ್ಯತೆಯನ್ನು ಬದುಕಾಗಿಸಿಕೊಳ್ಳುತ್ತಿರುವ ಸಮಾಜದಲ್ಲಿ ಸತ್ಯ ಹೇಳುವ ವಿಜ್ನಾನದ ಜಾಗೃತಿ ಅಗತ್ಯ ಇದೆ ಎಂದು ಬಿಇಒ ಕೆ.ಎಸ್. ಸುರೇಶ್ ಹೇಳಿದರು. ಚಳ್ಳಕೆರೆ ನಗರದ ಹೊಂಗಿರಣ ಶಾಲಾ ಆವರಣದಲ್ಲಿ ಭಾನುವಾರ ಹೊಂಗಿರಣ ಎಜುಕೇಶಷನಲ್ ಟ್ರಸ್ಟ್, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು. ಪ್ರಕೃತಿಯಲ್ಲಿನ ಬದಲಾವಣೆ ಬಗ್ಗೆ ತಪ್ಪಾಗಿ ತಿಳಿಯುವ ಕೆಲಸ ಮುಂದುವರಿಯುತ್ತಿದೆ. ಜನತೆಗೆ ಸತ್ಯ ತಿಳಿಸಲು ವಿಜ್ಞಾನದ ಆಧಾರ ಬೇಕು. ವಿಜ್ಞಾನ ಅಧ್ಯಯನ ಮಾಡಿದ ವಿಜ್ನಾನಿಗಳು ಜನರನ್ನು ಉದ್ದೇಶಿಸಿ ಮಾತನಾಡುವ ಪರಿಪಾಟು ಬೆಳೆಯಬೇಕು. ಸತ್ಯ ಗೊತ್ತಿದ್ದವರು ಮೌನವಾಗುವ ಸ್ಥಿತಿ ರೂಢಿಸಿಕೊಳ್ಳುತ್ತಾರೆ. ಇದರಿಂದ ಸಮಾಜಕ್ಕೆ ದ್ರೋಹವಾಗುತ್ತದೆ. ತಲೆಮಾರಿನಿಂದ ಹೊಸ ತಲೆಮಾರಿಗೂ ಮೌಢ್ಯತೆಯೇ ಸತ್ಯವಾಗಿ ಸಂದೇಶ ಬಲವರ್ಧನೆ ಆಗುತ್ತಿದೆ. ಈಗಲೂ ದೇವರು, ದೆವ್ವ,ಮಾಟಮಂತ್ರ ಎನ್ನುವ ಆಚರಣೆ ನಿಲ್ಲುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪರೀಕ್ಷೆಗಳಿಗೆ ಸೀಮಿತ ಆಗಬಾರದು. ಜಾಗತಿಕ ಅಭಿವೃದ್ಧಿಗೆ ಚಿಂತನೆ ರೂಢಿಸಿಕೊಳ್ಳಬೇಕು. ದಿನನಿತ್ಯದ ಬದುಕಿನ ಭಾವನೆಗೆ ಬೇಕಾಗುವ ತಂತ್ರಜ್ಞಾನ ತಿಳಿಯಬೇಕು. ಪ್ರಸ್ತುತ ಮನುಷ್ಯನ ಬದುಕು ಸರಳವಾಗಿದೆ. ಇದಕ್ಕೆ ವಿಜ್ಞಾನಗಳ ಆವಿಷ್ಕಾರ ಮತ್ತು ವಿಜ್ಞಾನಿಗಳ ಪರಿಶ್ರಮ ಕಾರಣವಾಗಿದೆ. ವಿಜ್ಞಾನ ಕುರಿತ ಅಧ್ಯಯನ ಅಂಶಗಳನ್ನು ಭೌತಿಕವಾಗಿ ಬಳಕೆ ಮಾಡುವ ಕೌಶಲದಿಂದ ಜಗತ್ತು ವೈವಿಧ್ಯಮಯವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಇಸ್ರೋ ವಿಜ್ಞಾನಿ ಡಾ.ಎಚ್.ಡಿ. ಆನಂದ್, ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಶಿಕ್ಷಣ ಸಮನ್ವಯಾಧಿಕಾರಿ ಎಚ್.ಪಿ. ಮಂಜುಬಾಬು ಮಾತನಾಡಿದರು. ಹೊಂಗಿರಣ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಸ್. ರಾಜೇಶ್ ಗುಪ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ. ದಯಾನಂದ ಪ್ರಹ್ಲಾದ್, ನಿವೃತ್ತ ಪ್ರಾಚಾರ್ಯ ಡಾ.ಸಿ. ಶಿವಲಿಂಗಪ್ಪ, ಮಧುಸೂದನ್, ಎಚ್. ಮಂಜುನಾಥ್,ಈ. ರುದ್ರಮುನಿ, ಡಿ. ನಾಗಪ್ಪ, ಕೆ.ವಿ. ನಾಗಲಿಂಗಾರೆಡ್ಡಿ ಇದ್ದರು. ಪೋಟೋ: ಸಿಎಲ್ ಕೆ: ಆ.23( ಸೈನ್ಸ್) ಚಳ್ಳಕೆರೆ ನಗರದ ಹೊಂಗಿರಣ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮವನ್ನು ಬಿಇಒ ಕೆ.ಎಸ್. ಸುರೇಶ್ ಉದ್ಟಾಟಿಸಿದರು. ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಎಚ್.ಎಸ್. ರಾಜೇಶ್ ಗುಪ್ತ, ಪಿ. ದಯಾನಂದ ಪ್ರಹ್ಲಾದ್, ಡಾ. ಎಚ್.ಡಿ. ಆನಂದ್, ಡಾ.ಸಿ. ಶಿವಲಿಂಗಪ್ಪ ಇದ್ದರು.1
- ಹಾವೇರಿ ಜಿಲ್ಲೆಯ ಹಲವು ಕಡೆ ಲೋಕಾಯುಕ್ತ ಬಿ.ಎಸ್. ಪಾಟೀಲ ದಿಢೀರ್ ದಾಳಿ; ಹಾವೇರಿ ಜಿಲ್ಲೆಯ ಹಾಸ್ಟೆಲ್, ಜಿಲ್ಲಾಸ್ಪತ್ರೆ, ಗೋದಾಮು, ನಗರಸಭೆ ಸೇರಿ ಹಲವು ಕಡೆ ದಿಢೀರ್ ದಾಳಿ; ಲೋಕಾಯುಕ್ತ ಬಿ.ಎಸ್. ಪಾಟೀಲ ಏನಂದ್ರು ನೋಡಿ...1