ಕನಿಷ್ಠ ನಾಲ್ಕರಿಂದ ಐದು ಹಲ್ಲುಗಳು ಇಲ್ಲದಿದ್ದಲ್ಲಿ ದಂತ ಭಾಗ್ಯ: ರಾಜ್ಯಾ ಸರ್ಕಾರ..! ರಾಜ್ಯ ಸರಕಾರದ ದಂತ ಭಾಗ್ಯ ಯೋಜನೆ ವೃದ್ಧರ ಮೊಗದಲ್ಲಿಮಂದಹಾಸಮೂಡಿಸಿದೆ ಹಲ್ಲುಗಳನ್ನು ಕಳೆದುಕೊಂಡು ತಮಗಿಷ್ಟವಾದ ಆಹಾರ ಸವಿಯಲು ಪರಿತಪಿಸುತ್ತಿದ್ದವರಿಗೆ ಉಚಿತವಾಗಿ ಕೃತಕ ಹಲ್ಲುಗಳನ್ನು ಜೋಡಿಸುವ ಮೂಲಕ ಅವರ ಬಾಯಿ ರುಚಿಯನ್ನು ಹೆಚ್ಚಿಸುವಂತೆ ಮಾಡಿದೆ. ಅಲ್ಲದೆ ಸ್ಪಷ್ಟ ಉಚ್ಚಾರಣೆಯೊಂದಿಗೆ ಮೊಗದ ಸೌಂದರ್ಯವನ್ನು ಹೆಚ್ಚಿಸಲು ನೆರವಾಗಿದೆ. ಹಲ್ಲುಗಳ ಪೂರ್ತಿಯಾದ ದಂತ ಪಂಕ್ತಿ ಜೋಡಣೆಗಾಗಿ ರೋಗಿಯನ್ನು ಜೆ ಎಸ್ ಎಸ್ ಆಸ್ಪತ್ರೆ ಮೈಸೂರು ಗೆ ಕಳುಹಿಸಿ, ಅಲ್ಲಿ ಜೋಡಣೆ ಯಶಸ್ವಿಯಾಗಿ ಮಾಡಲಾಯಿತು.ಈ ಕುರಿತು ಮಾತನಾಡಿದ ದ್ರಾಕ್ಷಾಯಿಣಿ ಅವರು, ನನಗೆ ಹಲ್ಲು ಸಮಸ್ಯೆಯಿಂದ ಸಂಕಷ್ಟವಾಗುತ್ತಿತ್ತು. ದಂತ ಭಾಗ್ಯ ಯೋಜನೆಯಿಂದ ಸಂಪೂರ್ಣ ಚಿಕಿತ್ಸೆ ಮತ್ತು ಜೋಡಣೆ ಸಿಗುವುದು ನನಗೆ ಬಹಳ ಉಪಕಾರಿಯಾಯಿತು. ನನ್ನ ನಗುವು ಹಿಂಪಡೆಯಲಾಯಿತು ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು. ಡಾ. ರುಚಿತಾ ಮಾತನಾಡಿ ದಂತ್ಯಭಾಗ್ಯ ಯೋಜನೆಯ ಮೂಲಕ ಹಲ್ಲು ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ತಕ್ಷಣ ಮತ್ತು ಸಮಗ್ರ ಚಿಕಿತ್ಸೆಯನ್ನು ನೀಡುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ಕನಿಷ್ಠ ನಾಲ್ಕರಿಂದ ಐದು ಹಲ್ಲುಗಳು ಇಲ್ಲದಿದ್ದಲ್ಲಿ ದಂತ ಭಾಗ್ಯ ಯೋಜನೆಗೆಶಿಫಾರಸುಮಾಡಲಾಗುತ್ತದೆ, ದಂತ ಭಾಗ್ಯ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಪೋಷಿಸುವ ಮಹತ್ವದ ಹಂತ ಎಂದು ತಿಳಿಸಿದರು. ದಂತ ಭಾಗ್ಯ ಯೋಜನೆಗೆ ಯಾರೆಲ್ಲಾ ಅರ್ಹರು: ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ವಯಸ್ಸಿನ ಮಿತಿ ಇಳಿಕೆ: ಯೋಜನೆಯಡಿ ದಂತಪಂಕ್ತಿ ಪಡೆಯಲು ಈ ಹಿಂದೆ ನಿಗದಿಪಡಿಸಿದ್ದ ವಯಸ್ಸಿನ ಮಿತಿ 60 ವರ್ಷವಾಗಿತ್ತು. ಈಗ ಈ ಮಿತಿಯನ್ನು 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಕೂಡ ಉಚಿತ ದಂತಪಂಕ್ತಿಗಳನ್ನು ಪಡೆಯಬಹುದು.
ಕನಿಷ್ಠ ನಾಲ್ಕರಿಂದ ಐದು ಹಲ್ಲುಗಳು ಇಲ್ಲದಿದ್ದಲ್ಲಿ ದಂತ ಭಾಗ್ಯ: ರಾಜ್ಯಾ ಸರ್ಕಾರ..! ರಾಜ್ಯ ಸರಕಾರದ ದಂತ ಭಾಗ್ಯ ಯೋಜನೆ ವೃದ್ಧರ ಮೊಗದಲ್ಲಿಮಂದಹಾಸಮೂಡಿಸಿದೆ ಹಲ್ಲುಗಳನ್ನು ಕಳೆದುಕೊಂಡು ತಮಗಿಷ್ಟವಾದ ಆಹಾರ ಸವಿಯಲು ಪರಿತಪಿಸುತ್ತಿದ್ದವರಿಗೆ ಉಚಿತವಾಗಿ ಕೃತಕ ಹಲ್ಲುಗಳನ್ನು ಜೋಡಿಸುವ ಮೂಲಕ ಅವರ ಬಾಯಿ ರುಚಿಯನ್ನು ಹೆಚ್ಚಿಸುವಂತೆ ಮಾಡಿದೆ. ಅಲ್ಲದೆ ಸ್ಪಷ್ಟ ಉಚ್ಚಾರಣೆಯೊಂದಿಗೆ ಮೊಗದ ಸೌಂದರ್ಯವನ್ನು ಹೆಚ್ಚಿಸಲು ನೆರವಾಗಿದೆ. ಹಲ್ಲುಗಳ ಪೂರ್ತಿಯಾದ ದಂತ ಪಂಕ್ತಿ ಜೋಡಣೆಗಾಗಿ ರೋಗಿಯನ್ನು ಜೆ ಎಸ್ ಎಸ್ ಆಸ್ಪತ್ರೆ ಮೈಸೂರು ಗೆ ಕಳುಹಿಸಿ, ಅಲ್ಲಿ ಜೋಡಣೆ ಯಶಸ್ವಿಯಾಗಿ ಮಾಡಲಾಯಿತು.ಈ ಕುರಿತು ಮಾತನಾಡಿದ ದ್ರಾಕ್ಷಾಯಿಣಿ ಅವರು, ನನಗೆ ಹಲ್ಲು ಸಮಸ್ಯೆಯಿಂದ ಸಂಕಷ್ಟವಾಗುತ್ತಿತ್ತು. ದಂತ ಭಾಗ್ಯ ಯೋಜನೆಯಿಂದ ಸಂಪೂರ್ಣ ಚಿಕಿತ್ಸೆ ಮತ್ತು ಜೋಡಣೆ ಸಿಗುವುದು ನನಗೆ ಬಹಳ ಉಪಕಾರಿಯಾಯಿತು. ನನ್ನ ನಗುವು ಹಿಂಪಡೆಯಲಾಯಿತು ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು. ಡಾ. ರುಚಿತಾ ಮಾತನಾಡಿ ದಂತ್ಯಭಾಗ್ಯ ಯೋಜನೆಯ ಮೂಲಕ ಹಲ್ಲು ಸಮಸ್ಯೆಯಿಂದ
ಬಳಲುತ್ತಿರುವ ಗ್ರಾಮಸ್ಥರಿಗೆ ತಕ್ಷಣ ಮತ್ತು ಸಮಗ್ರ ಚಿಕಿತ್ಸೆಯನ್ನು ನೀಡುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ಕನಿಷ್ಠ ನಾಲ್ಕರಿಂದ ಐದು ಹಲ್ಲುಗಳು ಇಲ್ಲದಿದ್ದಲ್ಲಿ ದಂತ ಭಾಗ್ಯ ಯೋಜನೆಗೆಶಿಫಾರಸುಮಾಡಲಾಗುತ್ತದೆ, ದಂತ ಭಾಗ್ಯ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಪೋಷಿಸುವ ಮಹತ್ವದ ಹಂತ ಎಂದು ತಿಳಿಸಿದರು. ದಂತ ಭಾಗ್ಯ ಯೋಜನೆಗೆ ಯಾರೆಲ್ಲಾ ಅರ್ಹರು: ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ವಯಸ್ಸಿನ ಮಿತಿ ಇಳಿಕೆ: ಯೋಜನೆಯಡಿ ದಂತಪಂಕ್ತಿ ಪಡೆಯಲು ಈ ಹಿಂದೆ ನಿಗದಿಪಡಿಸಿದ್ದ ವಯಸ್ಸಿನ ಮಿತಿ 60 ವರ್ಷವಾಗಿತ್ತು. ಈಗ ಈ ಮಿತಿಯನ್ನು 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಕೂಡ ಉಚಿತ ದಂತಪಂಕ್ತಿಗಳನ್ನು ಪಡೆಯಬಹುದು.
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.1
- ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,1
- ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..1
- ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3
- ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ1
- Post by Ramesh Belur1
- ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ 'ಗುರುರಾಜ್’ ಎಂಬ ಆಳಸಮುದ್ರ ಮೀನುಗಾರಿಕಾ ಬೋಟ್‍ನಲ್ಲಿ ಗೋಬಿಂದ ದಾಸ್(42) ಎಂಬವರು ಮಾರ್ಚ್ 6 ರಂದು ರಾತ್ರಿ ಒಟ್ಟು 9 ಜನ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ ಗೋಬಿಂದ ದಾಸ್ ಬೋಟ್‍ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್‍ನಿಂದ ಜಾರಿ ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು, ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದರು. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1
- Post by Suresh Belagere1