Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಚಿತ್ರದುರ್ಗ: ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕಳೆದ ಹದಿನೈದು ದಿನಗಳಿಂದಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಕುಕ್ಕುಟೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ! ಕುಕ್ಕುಟೋದ್ಯಮಕ್ಕೆ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ.ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ನಿಗದಿ ಮಾಡಿರುವ ದರದ ಅನುಸಾರ ತಿಂಗಳ ಹಿಂದೆ ಪ್ರತಿ ಸಗಟು ಕೋಳಿ ಮೊಟ್ಟೆ ದರ ₹5.50ರಿಂದ ₹5.60 ಇತ್ತು. ಆದರೆ ಈಗ ₹3.80ರಿಂದ ₹3.90ಕ್ಕೆ ಕುಸಿದಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇಲ್ಲಿನ ಮೊಟ್ಟೆಗಳನ್ನು ಬೆಂಗಳೂರು, ಹೊಸಪೇಟೆ, ಹೈದ್ರಾಬಾದ್, ನಾಮಕಲ್, ಮೈಸೂರು, ಚೆನ್ನೈಗಳಲ್ಲಿ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಗಳಿದ್ದು, ಈ ಸಮನ್ವಯ ಸಮಿತಿಗಳು ನಿಗದಿ ಮಾಡುವ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಮೊದಲಿನಿಂದಲೂ ಮಾಲೀಕರದ್ದಾಗಿದೆ. ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೋಳಿ ಫಾರಂಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟಾರೆ 40 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಇದರಲ್ಲಿ 32 ಲಕ್ಷ ಕೋಳಿಗಳ ಸಾಕಣೆ ಈ ಎರಡು ತಾಲ್ಲೂಕುಗಳಲ್ಲೇ ನಡೆಯುತ್ತಿದೆ. ಜಿಲ್ಲೆಯಿಂದ ರಾಜ್ಯ, ಹೊರರಾಜ್ಯಗಳಿಗೆ ಮಾತ್ರವಲ್ಲದೇ ಹೊರ ದೇಶಗಳಿಗೂ ಮೊಟ್ಟೆ ರಫ್ತಾಗುತ್ತದೆ. ಆಂಧ್ರ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಬಂದ ಅಂದಾಜು 1 ಕೋಟಿಯಷ್ಟು ಮೊಟ್ಟೆಯನ್ನು ಪ್ರತಿದಿನ ಕಳುಹಿಸಲಾಗುತ್ತದೆ. ಕೋಳಿ ಸಾಕಣೆ, ವಿದೇಶಿ ರಫ್ಟಿಗೆ ಹೆಸರು-ವಾಸಿಯಾಗಿರುವ ತಮಿಳುನಾಡಿನ ನಾಮಕ್ಕಲ್ ಮೂಲಕ ಮೊಟ್ಟೆ ರಫ್ತು ಮಾಡಲಾಗುತ್ತದೆ. ಯುದ್ಧ ನಡೆಯುತ್ತಿರುವ ಕಾರಣ ನಾಮಕ್ಕಲ್ ನಿಂದ ರಫ್ತು ಸಂಪೂರ್ಣವಾಗಿ ಮೊಟ್ಟೆಗಳು ಸ್ಥಗಿತಗೊಂಡಿದ್ದು ಮಾರಾಟವಾಗದೇ ಹಾಳಾಗುತ್ತಿವೆ. *ಮೊಟ್ಟೆ ರಫ್ತಿಗೆ ಬ್ರೇಕ್* ಯುದ್ಧದ ಪರಿಣಾಮ ಕರ್ನಾಟಕ ರಾಜ್ಯ ಹಾಗೂ ತಮಿಳುನಾಡಿನ ನಾಮಕಲ್ ಸೇರಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಹಡಗು ಹಾಗೂ ವಿಮಾನಗಳ ಮೂಲಕ ರಫ್ತಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ. ಇದರಿಂದ ಮೊಟ್ಟೆ ಬೆಲೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಾಣಲು ಪ್ರಮುಖ ಕಾರಣವಾಗಿದೆ. ಸಮ್ಮರ್ ಸೀಜನ್ ಕುಕ್ಕುಟೋದ್ಯಮಕ್ಕೆ ಪ್ರತಿ ವರ್ಷವೂ ಅನ್‌ಸೀಜನ್. ಆದರೆ ಈಗ ಇದರ ಜೊತೆ ಯುದ್ಧವು ಸೇರಿ ಕೊಂಡಿರುವುದು ಪೌಲ್ಟ್ರಿ ಫಾರಂ ಮಾಲೀಕರ ಆತಂಕ ದ್ವಿಗುಣವಾಗಿದೆ. ಇನ್ನೇನು ಶೀಘ್ರವೇ ಶಾಲೆಗಳಿಗೆ ಬೇಸಿಗೆ ರಜೆ ಆಗಮಿಸಲಿದ್ದು, ಶಾಲೆಗೆ ವಿತರಣೆಯಾಗುತ್ತಿದ್ದ ಮೊಟ್ಟೆಗೂ ಬ್ರೇಕ್ ಬೀಳಲಿದೆ. ಇದು ಇನ್ನೊಂದು ಶಾಕಿಂಗ್ ವಿಷಯವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ. *ಪೌಲ್ಟಿ ಮಾಲೀಕರ ಆತಂಕ* 'ಸೋಯಾ, ಸೂರ್ಯಕಾಂತಿ ಹಿಂಡಿ, ಮೆಕ್ಕೆಜೋಳ, ಡಿಒಆರ್‌ಬಿ ಹಾಗೂ ವಿಟಮಿನ್ ಬೆಲೆಗಳು ಗಗನಕ್ಕೇರು ತ್ತಿವೆ. ಮೊಟ್ಟೆ ಬೆಲೆ ಮಾತ್ರ ಕುಸಿಯು ತ್ತಿದೆ. ಬಂಡವಾಳ ಹಾಕಿ, ಫುಡ್, ಕೂಲಿ, ನಿರ್ವಹಣೆ ಮಾಡುವ ಮಾಲೀಕರ ಕೈ ಸುಡುತ್ತಿದೆ. ಒಂದು ವಾರಕ್ಕೂ ಅಧಿಕ ಕಾಲ ಮೊಟ್ಟೆಯನ್ನು ದಾಸ್ತಾನು ಮಾಡಲು ಸಾಧ್ಯವಿಲ್ಲವಾ ದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಅನೇಕರು ಮೊಟ್ಟೆಯ ಬೆಲೆಯನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ' ಎನ್ನುತ್ತಾರೆ ಪೌಲ್ಟಿಫಾರಂ ಮಾಲೀಕರು.1
- ಬನ್ನೂರಿಂದ 5.KM.ರಂಗಸಮುದ್ರ ಬಂಡಿ ಹಬ್ಬ ಮತ್ತು ಕೊಂಡ ಉತ್ಸವ ಇದೆ. 15.3.20261
- ಮಳವಳ್ಳಿ:ಕುಂದೂರುಸರ್ಪಭೂಷಣ ಮಠದ ಶ್ರೀಚನ್ನಬಸವಸ್ವಾಮಿಗಳು ಲಿಂಗ್ಯಕ್ಯ-ಅಪಾರ ಭಕ್ತರ ಕಂಭನಿ • ಮಾ.೧೬ ರಂದು ಸುತ್ತೂರು -ಸಿದ್ದಗಂಗಾ-ಕನಕಪುರ ದೇಗುಲ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಂತ್ಯಸ0ಸ್ಕಾರಕ್ಕೆ ಸಿದ್ದತೆ ಮಳವಳ್ಳಿ:ತಾಲೂಕಿನ ಕುಂದೂರು ಗ್ರಾಮದ ಧಾರ್ಮಿಕ ಪುಣ್ಯಕ್ಷೇತ್ರವಾದ ಸರ್ಪಭೂಷಣ ಮಠದ ಶ್ರೀ ಚನ್ನಬಸವಸ್ವಾಮಿಗಳು (೫೫) ಭಾನುವಾರ ಲಿಂಗ್ಯಕ್ಯರಾಗಿದ್ದಾರೆ. ಹೊಸಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಮಾದಪ್ಪನವರ ೫ ಮಕ್ಕಳಲ್ಲಿ ೪ನೇ ಪುತ್ರನಾಗಿ ಜನಿಸಿದ ಇವರು ತಮ್ಮ ೨೫ನೇ ವರ್ಷದಲ್ಲೆ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ಇವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ ಸುದೀರ್ಘ ೩೦ ವರ್ಷ ಶ್ರೀಮಠದ ಹಲವಾರು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರೊಂದಿಗೆ ಸುತ್ತಮುತ್ತಲ್ಲ ಗ್ರಾಮಗಳ ಬಡ ಜನರ ನೆಚ್ಚಿನ ಗುರುಗಳಾಗಿ ಹೆಸರು ಗಳಿಸಿದ್ದರು.ಭಕ್ತರ ಬಗ್ಗೆ ಅಪಾರ ಕಾಳಜಿಯಿದ್ದ ಇವರು ಸರ್ಪಭೂಷಣ ಮಠದ ಪುನರುಜ್ಜೀವನ ಗೊಳಿಸಿ ಭಕ್ತರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಸಂಕಲ್ಪದೊAದಿಗೆ ಕಾಯಕ ಮಾಡುತ್ತಿದ್ದರು. ಮಾ.೧೫ ರಂದು ಬಾನುವಾರ ಬೆಳಿಗ್ಗೆ ಮಠದಲ್ಲಿ ತಮ್ಮ ದಿನನಿತ್ಯದ ಕಾಯಕ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿ ಭಕ್ತರೊಬ್ಬರ ಪೂಜೆಗೆ ಬರುವಾಗ ಮಾರ್ಗಮದ್ಯದಲ್ಲಿ ಅಯಾಸಗೊಂಡ ಇವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಯಿತು.ಆದರೆ ಚಿಕಿತ್ಸೆ ಪಲಕಾರಿಯಾಗದೆ ಅಸ್ಪತ್ರೆಯಲ್ಲಿ ಶ್ರೀಗಳು ಲಿಂಗ್ಯಕ್ಯರಾಗಿದ್ದಾರೆ. ತಮ್ಮ ನೆಚ್ಚಿನ ಶ್ರೀಗಳ ಲಿಂಗ್ಯಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಗಳ ಗ್ರಾಮಗಳ ಭಕ್ತರು ,ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಅಗಮಿಸಿ ದರ್ಶನ ಪಡೆದು ಮುಂದಿನ ಅಂತ್ಯಸAಸ್ಖಾರದ ವಿಧಿ ವಿದಾನಗಳ ವ್ಯವಸ್ಥೆಗಳಿಗೆ ಕಾರ್ಯೋನ್ಮುಖರಾಗಿದ್ದಾರೆ.ಸ್ಥಳದಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಎಲ್ಲ ಪದಾಧಿಕಾರಿಗಳು ನಿಂತುಕೊ0ಡು ಪೂಜ್ಯರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ. ಲಿಂಗ್ಯಕ್ಯರಾದ ಪೂಜ್ಯ ಶ್ರೀಗಳ ಪಾರ್ಥಿವ ಶರೀರವನ್ನು ಬಾನುವಾರ ಮದ್ಯಾಹ್ನ ಕುಂದೂರು ಗ್ರಾಮದ ಸರ್ಪಭೂಷಣ ಮಠಕ್ಕೆ ತರಲಾಗಿದ್ದು,ಅಗಮಿಸುವ ಭಕ್ತರಿಗೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಸೋಮವಾರ ಮದ್ಯಾಹ್ನ ೧ ಗಂಟೆಗೆ ಸುತ್ತೂರು,ಸಿದ್ದಗಂಗಾ,ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಸಂಪ್ರದಾಯಬದ್ದ ಪೂಜಾ ವಿಧಿ ವಿದಾನಗಳೊಂದಿಗೆ ಅಂತ್ಯಸ0ಸ್ಕಾರ ನಡೆಯಲಿದೆ ಎಂದು ಕುಂದೂರು ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜು0ಡಸ್ವಾಮಿಗಳು ತಿಳಿಸಿದ್ದಾರೆ.1
- ಕೊಡಗು :- ಮುಸ್ಕಾನ್ ಎನ್ನುವ ಹೆಣ್ಣು ಅಂಗವಿಕಲ ಅವರಿಗೆ ಮುಂದಿನ ಜೀವನವನ್ನು ಬಾಳಲು ಅವರಿಗೆ ಒಂದು ಮನೆ ನಿರ್ಮಿಸಲು ಸಾರ್ವಜನಿಕರಲ್ಲಿ ಸಹಾಯದ ಮನುವಿ.1
- ಹನೂರು :ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿಯ ಕಾಮಗಾರಿಗೆ ಸುಮಾರು 1ಕೋಟಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆಯನ್ನು ನೆರವೇರಿಸಿ ಮಾಧ್ಯಮಗಳನ್ನು ಉದ್ದೇಶೀಸಿ ಮಾತನಾಡಿದ ಅವರು ಗುಂಡಾಲ್ ಜಲಾಶಯದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ. ಪೈಪ್ ಲೈನ್ ಹಾಗೂ ಲೈನಿಂಗ್ ಕಾಮಗಾರಿ ಆಗಿರಲಿಲ್ಲ. ಇದೀಗ ಈ ಕಾಮಗಾರಿಗಾಗಿ ಒಂದುವರೆ ಕೋಟಿ ಬಿಡುಗಡೆಯಾಗಿದೆ ಈ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಸುಮಾರು 200 ರಿಂದ 300 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡುವಂತಹ ಕೆಲಸ ಈ ಏತ ನೀರಾವರಿಯಿಂದ ಆಗಲಿದೆ ಎಂದರು. ಈ ಯಂತ್ರ ಗಾರದಲ್ಲಿ 40 ಅಶ್ವಶಕ್ತಿ (ಹೆಚ್ ಪಿ) ಯ ಎರಡು ಪಂಪುಗಳಿವೆ. ಆದರೆ ನಾಲೆಯ ಎರಡು ಬದಿಯ ಲೈನಿಂಗ್ ಹಾಳಾಗಿವೆ. ಹಾಗಾಗಿ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯಲಿಕ್ಕೆ ಆಗುತ್ತಿರಲಿಲ್ಲ. ಅದನ್ನು ಅನುಕೂಲ ಮಾಡಲಿಕ್ಕೆ ಈ ಕಾಮಗಾರಿ ನಡೆಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುತ್ತದೆ ಹಾಗೆಯೇ ಮಳೆಗಾಲದಲ್ಲಿ ಪ್ರಾಕೃತಿಕವಾಗಿ ಬೆಟ್ಟ ಗುಡ್ಡಗಳ ನೀರು ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ ಹೊರತು ರೈತರ ಜಮೀನುಗಳಿಗೆ ಹತ್ತಿರಕ್ಕೆ ನೀರು ತೆಗೆದುಕೊಂಡು ಆಗುತ್ತಿರಲ್ಲ. ಹಾಗಾಗಿ ಬಲದಂಡೆ ನಾಲೆಯ ಈ ಭಾಗಗಳಿಗೆ ಜಲಾಶಯ ಹತ್ತಿರದಲ್ಲಿದ್ದರೂ ನೀರು ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಈಗ ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ನಾನು ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ. ಈ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಎಲ್ಲರೂ ನನ್ನದಲ್ಲ ಎಂದು ಕೈಬಿಟ್ಟರೆ ಅದು ಹಾಳಾಗುತ್ತದೆ. ನನ್ನದು ಎಂದು ಉಪಯೋಗಿಸುವಾಗ ಮಾತ್ರ ಚೆನ್ನಾಗಿರುತ್ತದೆ. ಆದ್ದರಿಂದ ಇಲಾಖೆ ಹಾಗೂ ಗುತ್ತಿಗೆದಾರರ ಜೊತೆಗೆ ರೈತರು ಕಾಮಗಾರಿಯನ್ನು ಅಚ್ಚುಗಟ್ಟಾಗಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು. ಇದೇ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆ ಇ ಪ್ರತಾಪ್,ಮುಖಂಡರುಗಳಾದ ಕೊಂಗ್ರಹಳ್ಳಿ ಮಹೇಶ್,ಡ್ಯಾಮ್ ಶಂಕರ್,ಗುರುಸ್ವಾಮಿ, ಶಿವಮಲ್ಲು, ಸದಾಶಿವ,ತೊಮಣ್ಣ,ಶಿವರುದ್ರ,ಚಿನ್ನಸ್ವಾಮಿ,ಗೋವಿಂದ, ತಿರುಪತಿ,ವಿಜಯ್ ಕುಮಾರ್, ಎಸ್ ಆರ್ ಮಹದೇವ್, ವೆಂಕಟೇಶ್, ಗುತ್ತಿಗೆದಾರ ಫಾರಕ್ ಪಾಷ ಹಾಗೂ ಇನ್ನಿತರರು ಇದ್ದರು.2
- ಹನೂರು, ನೀರಾವರಿ ಯೋಜನೆಗಳು ಹೆಚ್ಚಾದಾಗ ಜನರಿಗೆ ಅನುಕೂಲ ಆಗಲಿದೆ. ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು. ತಾಲ್ಲೂಕಿನ ಮಣಗಳ್ಳಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರ ಆರ್ಥಿಕ ಅಭಿವೃದ್ದಿಗೆ ನೀರಾವರಿ ಯೋಜನೆಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ವಿಧ್ಯುತ್ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಹೊತ್ತು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಕೆರೆಕಟ್ಟೆಗಳು ಜಾಕ್ ಡ್ಯಾಂ ಅಭಿವೃದ್ದಿಯಿಂದ ಬಿವಿ ಬೋರ್ ವೆಲ್ ಗಳಲ್ಲಿ ಆಂತರ್ಜಲ ಹೆಚ್ಚಳ ಆಗಲಿದೆ. ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಿದ್ದ ಪರಿಣಾಮ ಚಿಂಚಳ್ಳಿ ಹಳ್ಳದ ಮೂಲಕ ಮಣಗಳ್ಳಿ ಹಳ್ಳ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಹಾಗೆಯೇ ಮುಂದೆ ಸಾಗಿ ಇನ್ನಿತರ ಗ್ರಾಮಗಳಗೂ ಅನುಕೂಲ ಆಗಲಿದೆ. ಈಗ ಬಜೆಟ್ ನಲ್ಲಿ ಘೋಷಣೆ ಆಗಿರುವ 490 ಕೋಟಿ ಹಣದಿಂದ ರಾಮಾಪುರ ಹೋಬಳಿ ವ್ಯಾಪ್ತಿಗೆ ಉಡೊತೊರೆ ಜಲಾಶಯದ ಮೂಲಕ ನೀರು ಹರಿಸುವ ಸಧ್ಯದಲ್ಲೆ ಪ್ರಾರಂಭ ಆಗಲಿದೆ. ಅದಲ್ಲದೆ ಕಬಿನಿ ನಾಲೆಯಿಂದ 980 ಕೋಟಿ ರೂ ವೆಚ್ಚದಲ್ಲಿ ಮೇಘ ಪ್ರೋಜೆಕ್ಟ್ ತರುವ ಉದ್ದೇಶ ಹೊಂದಿದ್ದು ಸರ್ಕಾರ ಮಟ್ಟದಲ್ಲಿ ಚೆರ್ಚೆ ಮಾಡಲಾಗಿದೆ. ಎಂದರು ಕ್ಷೇತ್ರದ ಎಲ್ಲೆಡೆ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಸಹ ನಡೆಯಲಿದೆ. ಚುನಾವಣೆ ವೇಳೆ ನನಗೊಂದು ಅವಕಾಶ ನೀಡಿ ಎಂದು ಕೇಳಿದ್ದೆ ಅದರಂತೆ ಕೆಲಸ ಮಾಡುತ್ತಿದ್ದೇನೆ. ಇನ್ನೂ ಹೆಚ್ಚು ಕೆಲಸ ಮಾಡಲು ಎಲ್ಲರು ನನಗೆ ಸಹಕಾರ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು. ತಾಲಲೂಕು ಘೋಷಣೆ ಆದ್ಮೇಲೆ ಕಛೇರಿಗಳು ಇರಲಿಲ್ಲ. ಅದಕ್ಕಾಗಿ ಪ್ರಯತ್ನಗಳು ನಡೆದಿದೆ. ರಸ್ತೆಗಳು ಆರೋಗ್ಯ ವಿಧ್ಯುತ್ ಕ್ಷೇತ್ರಗಳಲ್ಲಿ ಸುಧಾಹರಣೆ ಕಂಡಿದೆ. ಎಂದರು ಗ್ರಾಮ ಸದಸ್ಯ ಮಲ್ಲಣ್ಣ ಮಾತನಾಡಿ ಶಾಸಕ ಮಂಜುನಾಥ್ ರವರ ಅಭಿವೃದ್ದಿ ಕೆಲಸ ಕಾರ್ಯಗಳನ್ನು ನೋಡಿ ಮೆಚ್ಚಿದ ಜನರು ಸ್ವ ಇಚ್ಚೆಯಿಂದ ಅವರನ್ನು ಬೆಂಬಲಿಸಲು ಪ್ರತಿ ಗ್ರಾಮದಲ್ಲೂ ಮುಂದೆ ಬರುತ್ತಿದ್ದಾರೆ. ಶಾಸಕರ ಮಂದಾಲೋಚನೆ ಫಲವಾಗಿ ಕೆರೆಕಟ್ಟೆಗಳು ಜಾಕ್ ಡ್ಯಾಂ ಗಳು ಭರ್ತಿ ಆಗಿ ಹಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಪ್ರತಿ ಗ್ರಾಮದಲ್ಲೂ ಅಂತರ್ಜಲ ಹೆಚ್ಚಾಗಲಿದೆ. ಇದರಿಂದ ರೖತರು ಕೂಲಿ ಕಾರ್ಮಿಕರು ನಗರ ಪಟ್ಟಣಗಳಿಗೆ ವಲಸೆ ಹೋಗುವುದು ನಿಲ್ಲುತ್ತದೆ. ಜೊತೆಗೆ ಇಲ್ಲಿಯೇ ಉಧ್ಯೋಗ್ಯ ದೊರೆಯುವುದರಿಂದ ಜನರ ಬದುಕು ಹಸನಾಗಲಿದೆ. ಎಂದರು ಇದೇ ವೇಳೆ ಮಣಗಳ್ಳಿ ವಾದ್ಯ ಕೆಂಪಯ್ಯ ಅವರ ಕುಟುಂಬ ಸೇರಿದಂತೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿನ್ನ ವೆಂಕಟಯ್ಯ ಮಲ್ಲಣ್ಣ ಕೃಷ್ಣಸ್ವಾಮಿ ರಾಮಚಂದ್ರ ಶ್ರೀನಿವಾಸ ಗ್ರಾಮದ ಯಜಮಾನ್ರು ಆದ ಕೆಂಪರಾಜು ಮಹದೇವಯ್ಯ ಚೆನ್ನಯ್ಯ ಕಾಲ ಕೆಂಪಯ್ಯ ಹಾಗೂ ಐವತ್ತು ಹೆಚ್ಚು ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಎಂ.ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಜೆಡಿಎಸ್ ಕ್ಕೆ ಸೇರ್ಪಡೆಗೊಂಡರು. ವೇಳೆ ಲಿಂಗರಾಜು ಶಿವಮಲ್ಲು ಯುವ ಮುಖಂಡರಾದ ಲೋಕೇಶ್ ಕೃಷ್ಣರಾಜು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ಮುಖಂಡರುಗಳಾದ ವಿಜಯ್ ಕುಮಾರ್, ತಿರುಪತಿ,ತಮಯ್ಯ ನಾಗಯ್ಯ,ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- *ಭಾರತ ನಲ್ಲಿ ವೈರಲ್*1