ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ಭಾರತೀಯ ಸಂಸ್ಕೃತಿ, ಇತಿಹಾಸದ ಅರಿವು ಮೂಡಿಸಲು ರಸಪ್ರಶ್ನೆ ಸಹಕಾರಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಜತೆಗೆ ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ದೇಶದ ಬಗ್ಗೆ ಜ್ಞಾನ ಹೆಚ್ಚಿಸಲು ಭಾರತ ವಿಕಾಸ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಲಿವೆ ಎಂದು ಪರಿಷತ್ ಕಾರ್ಯದರ್ಶಿ ಎಸ್.ಬಿ. ನಾಗರಾಜು ತಿಳಿಸಿದರು. ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತ ವಿಕಾಸ ಪರಿಷತ್ ಬೌದ್ಧಯಾನ ಶಾಖೆ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಹೋಬಳಿ ಮಟ್ಟದ ರಾಷ್ಟ್ರೀಯ ಸಮೂಹ ಗೀತಗಾಯನ ಮತ್ತು ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಯಜಮಾನ್ ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ. ಮಾಯಪ್ಪ ಮಾತನಾಡಿದರು. ಬಹುಮಾನ ವಿಜೇತರು: ರಾಷ್ಟ್ರೀಯ ಸಮೂಹ ಗೀತಗಾಯನ ಸ್ಪರ್ಧೆಯಲ್ಲಿ ಜ್ಞಾನಮುದ್ರ ಶಾಲೆ ಪ್ರಥಮ, ಅನಿಕೇತ ಶಾಲೆ ದ್ವಿತೀಯ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು. ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಪ್ರಥಮ, ಜ್ಞಾನಮುದ್ರ ಶಾಲೆ ದ್ವಿತೀಯ ಹಾಗೂ ಚಂದೂಪುರ ಡಿ.ಕೆ. ಗೌಡ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. 16 ಶಾಲೆಗಳ 128 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ಭಾರತೀಯ ಸಂಸ್ಕೃತಿ, ಇತಿಹಾಸದ ಅರಿವು ಮೂಡಿಸಲು ರಸಪ್ರಶ್ನೆ ಸಹಕಾರಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಜತೆಗೆ ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ದೇಶದ ಬಗ್ಗೆ ಜ್ಞಾನ ಹೆಚ್ಚಿಸಲು ಭಾರತ ವಿಕಾಸ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಲಿವೆ ಎಂದು ಪರಿಷತ್ ಕಾರ್ಯದರ್ಶಿ ಎಸ್.ಬಿ. ನಾಗರಾಜು ತಿಳಿಸಿದರು. ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ
ಭವನದಲ್ಲಿ ಭಾರತ ವಿಕಾಸ ಪರಿಷತ್ ಬೌದ್ಧಯಾನ ಶಾಖೆ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಹೋಬಳಿ ಮಟ್ಟದ ರಾಷ್ಟ್ರೀಯ ಸಮೂಹ ಗೀತಗಾಯನ ಮತ್ತು ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಯಜಮಾನ್ ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ. ಮಾಯಪ್ಪ ಮಾತನಾಡಿದರು. ಬಹುಮಾನ ವಿಜೇತರು: ರಾಷ್ಟ್ರೀಯ ಸಮೂಹ ಗೀತಗಾಯನ ಸ್ಪರ್ಧೆಯಲ್ಲಿ ಜ್ಞಾನಮುದ್ರ ಶಾಲೆ ಪ್ರಥಮ, ಅನಿಕೇತ ಶಾಲೆ ದ್ವಿತೀಯ
ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು. ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಪ್ರಥಮ, ಜ್ಞಾನಮುದ್ರ ಶಾಲೆ ದ್ವಿತೀಯ ಹಾಗೂ ಚಂದೂಪುರ ಡಿ.ಕೆ. ಗೌಡ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. 16 ಶಾಲೆಗಳ 128 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
- ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ಭಾರತೀಯ ಸಂಸ್ಕೃತಿ, ಇತಿಹಾಸದ ಅರಿವು ಮೂಡಿಸಲು ರಸಪ್ರಶ್ನೆ ಸಹಕಾರಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಜತೆಗೆ ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ದೇಶದ ಬಗ್ಗೆ ಜ್ಞಾನ ಹೆಚ್ಚಿಸಲು ಭಾರತ ವಿಕಾಸ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಲಿವೆ ಎಂದು ಪರಿಷತ್ ಕಾರ್ಯದರ್ಶಿ ಎಸ್.ಬಿ. ನಾಗರಾಜು ತಿಳಿಸಿದರು. ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತ ವಿಕಾಸ ಪರಿಷತ್ ಬೌದ್ಧಯಾನ ಶಾಖೆ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಹೋಬಳಿ ಮಟ್ಟದ ರಾಷ್ಟ್ರೀಯ ಸಮೂಹ ಗೀತಗಾಯನ ಮತ್ತು ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಯಜಮಾನ್ ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ. ಮಾಯಪ್ಪ ಮಾತನಾಡಿದರು. ಬಹುಮಾನ ವಿಜೇತರು: ರಾಷ್ಟ್ರೀಯ ಸಮೂಹ ಗೀತಗಾಯನ ಸ್ಪರ್ಧೆಯಲ್ಲಿ ಜ್ಞಾನಮುದ್ರ ಶಾಲೆ ಪ್ರಥಮ, ಅನಿಕೇತ ಶಾಲೆ ದ್ವಿತೀಯ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು. ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಪ್ರಥಮ, ಜ್ಞಾನಮುದ್ರ ಶಾಲೆ ದ್ವಿತೀಯ ಹಾಗೂ ಚಂದೂಪುರ ಡಿ.ಕೆ. ಗೌಡ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. 16 ಶಾಲೆಗಳ 128 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.3
- : ಆಶಾ ಕಾರ್ಯರ್ತೆಯರು ತಮ್ಮ ಮೊಂಡಾಟ ಬಿಡಬೇಕು - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ : ರಾಮನಗರ: ಆಶಾ ಕಾರ್ಯಕರ್ತೆಯರ ಹೋರಾಟ ವಾಕ್ ಸಮರಕ್ಕೆ ವೇದಿಕೆಯಾಗಿದ್ದು, ರಾಜ್ಯದ ಸಚಿವರು ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದರೆ, ಕೇಂದ್ರ ಸಚಿವರು ಮೊದಲು ರಾಜ್ಯ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ಮಾತುಕತೆ ನಡೆಸಿ ನಂತರ ಕೇಂದ್ರ ಬಳಿ ಕೇಳಲಿ ಎನ್ನುತ್ತಿದ್ದಾರೆ. ಇಂದು ಕೂಡ ಆಶಾ ಕಾರ್ಯಕರ್ತೆ ಹೋರಾಟ ಸಂಬಂದ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಶೇ 60 ರಷ್ಟು ಟ್ಯಾಕ್ಸ್ ಹಣ ಪಡೆಯುತ್ತಿದ್ದಾರೆ. ಕೇಂದ್ರದವರೂ ಕೊಡಬೇಕು ಅಲ್ವಾ.?. ಈಗಾಗಲೇ ಗುಜರಾತ್ ನಲ್ಲಿ 2400ರೂ ಕೊಡ್ತಿದ್ದಾರೆ, ರಾಜ್ಯಕ್ಕೂ ಅದನ್ನ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಚಿವರು ಒತ್ತಾಯಿಸಿಷರು. ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ಕೊಡಲು ಆಗಲ್ಲ. ಆಮೇಲೆ ಎಲ್ಲರೂ ಅದೇರೀತಿ ಹೋರಾಟ ಶುರುಮಾಡ್ತಾರೆ. ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಆಗುತ್ತಾ.?. ಆದರೆ ನಮ್ಮ ಸಿಎಂ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದಿದ್ದಾರೆ. ಅವರು ಮೊಂಡತನದ ಹೋರಾಟ ಬಿಡಬೇಕು. ಇನ್ನೂ ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಇಲಾಖೆ ಕೆಲಸಗಳು ಆಗುತ್ತೆ ಎಂಬ ಯು.ಟಿ.ಖಾದರ್ ಹೇಳಿಕೆಗೆ ರಿಯಾಕ್ಟ್ ಮಾಡೋಕೆ ಹೋಗಲ್ಲ. ಎಲ್ಲರ ಅವಶ್ಯಕತೆಯೂ ಇದೆ. ಆದರೆ . ಅವರ ಬೇಡಿಕೆ ಸರಿಯಾಗಿಯೇ ಇದೆ. ಆದರೆ ಅದಕ್ಕೆ ಸಮಯ ಬೇಕು, ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ತಿಳಿಸಿದರು. ಕೆ.ಎನ್.ರಾಜಣ್ಣ ಜೆಡಿಎಸ್ ನಾಯಕನ ಮನೆಗೆ ಬೇಟಿ ನೀಡಿರುವ ವಿಚಾರ ನನಗೆ ಗೊತ್ತಿಲ್ಲ, ನೀವು ಅವರನ್ನ ಕೇಳಬೇಕು. ಪಾಪ ಅವರು ಎಲ್ಲಾ ಕಡೆ ಹೋಗ್ತಾರೆ, ಅವರು ಸರ್ವ ಸ್ವತಂತ್ರರು. ನಮ್ಮ ಪಕ್ಷದಲ್ಲಿ ಅವರ ಮೇಲೆ ಯಾವುದೇ ಕ್ರಮ ಆಗಲ್ಲ. ಅವರು ನಮ್ಮ ಪಾರ್ಟಿ ಸೀನಿಯರ್ ಲೀಡರ್, ಏನು ಬೇಕಾದರೂ ಮಾಡಬಹುದು, " ದೊರೆ ತಪ್ಪು ಮಾಡಿದರೆ ದೂರು ಇಲ್ವಂತೆ" ಎಂದು ಪರೋಕ್ಷವಾಗಿ ಪಕ್ಷದ ವರಿಷ್ಠರ ಮೇಲೆ ಸಚಿವ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.1
- ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು. ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು. ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಕನಕದಾಸರ ನಾಡಲ್ಲಿ ಮೌಡ್ಯತೆ ತಾಂಡವಾಡುತ್ತಿರುವುದು ದುರಾದೃಷ್ಟಕರ, ಪಟ್ಟಣದಲ್ಲಿ ಸಚಿವ ನರೇಂದ್ರಸ್ವಾಮಿ ವಿಷಾಧ ಮಳವಳ್ಳಿ : ಕನಕದಾಸರಂತ ಮಹನೀಯರು ಹುಟ್ಟಿ ಸಮಾಜದಲ್ಲಿನ ಮೌಡ್ಯತೆ ವಿರುದ್ದ ಕ್ರಾಂತಿಯನ್ನೇ ಮೊಳಗಿ ಸಿದ ಈ ಸಮಾಜದಲ್ಲಿ ಈಗಲೂ ಮೂಢ ನಂಬಿಕೆ, ಕಂದಾಚಾರ, ತುಂಬಿ ತುಳುಕುತ್ತಿ ರುವುದು ದುರಾದೃಷ್ಟಕರ ಎಂದು ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ವಿಷಾಧಿಸಿ ದ್ದಾರೆ. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಮಹಾನ್ ಕ್ರಾಂತಿಕಾರಿ ಪುರುಷ ಶ್ರೀ ಭಕ್ತ ಕನಕದಾಸರ 539ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಇದರ ಜೊತೆಗೆ ಇಂತಹ ಪುಣ್ಯ ಪುರುಷರ ಜಯಂತಿಯನ್ನು ಆಯಾ ವರ್ಗದ ಜನರು ಆಚರಿಸಲಿ ಎಂಬ ಮನಸ್ಥಿತಿ ಕನಕದಾಸರ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದರು. ಬಸವಣ್ಣ ಕನಕದಾಸ ಅಂಬೇಡ್ಕರ್ ರಂತಹ ಮಹನೀ ಯರ ವಿಚಾರಧಾರೆಗಳನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡಿ ಕೊಂಡು ಜೊತೆಗೆ ಅಂತಹ ಮಹನೀಯರನ್ನು ಒಂದೊಂದು ಜಾತಿಗೆ ಸಮೀತ ಮಾಡಿಕೊಳ್ಳು ತ್ತಿರುವುದು ಅವರ ವಿಚಾರೆಧಾರೆ ಗಳಿಗೆ ಮಾಡುತ್ತಿರುವ ಅಪಮಾ ನವಾಗಿದೆ ಎಂದರು. ಮಾರಿ ಹಬ್ಬ ಜಾತ್ರೆ ಉತ್ಸವಗಳಿಗೆ ಕಿಕ್ಕಿರಿದು ನೆರೆಯುವ ಜನ ಇಂತಹ ಮಹನೀಯರ ಜಯಂತಿಗಳಿಗೆ ನಿರಾಶಕ್ತಿ ತೋರುತ್ತಿರುವುದು ಶೋಚ ನೀಯ ಎಂದ ಅವರು ಕನಕದಾಸರಂತಹ ಪುಣ್ಯ ಪುರುಷರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊ ಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಉಪನ್ಯಾಶಕರಾದ ಪವಿತ್ರ ಕನಕದಾಸರ ವಿಚಾರಧಾರೆ ಗಳನ್ನು ವಿವರಿಸಿದರು. ಇದೇ ವೇಳೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಲೋಕೇಶ್, ತಾ ಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಒ ಉಮಾ, ಮುಖ್ಯಾಧಿಕಾರಿ ನಾಗರತ್ನ, ಹಾಪ್ ಕಾಮ್ಸ್ ಅಧ್ಯಕ್ಷರೂ ಮನ್ ಮುಲ್ ನಿರ್ಧೇಶಕರು ಆದ ಡಿ ಕೃಷ್ಣೇ ಗೌಡ, ಆರ್ ಎನ್ ವಿಶ್ವಾಸ್, ಕೆಡಿಪಿ ಸದಸ್ಯ ಶಶಿರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಖಜಾಂಚಿ ಬಿ ಮಹದೇವು,ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ಧೇಶಕ ಕೆ ಜೆ ದೇವರಾಜು, ಕಾಡಾ ನಿರ್ಧೇಶಕ ಕೆ ಎಸ್ ಪ್ರಕಾಶ್, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ನಿರ್ಧೇಶಕ ಶಿವರಾಜ್ ನಾಯಕ್ ಟಿಎಪಿಸಿ ಎಂಎಸ್ ಅಧ್ಯಕ್ಷ ಲಿಂಗರಾಜು ನಿರ್ಧೇಶಕ ಪುಟ್ಟಬಸವಯ್ಯ, ವಿಶ್ವ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಾದೇಶ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗರಾಜು, ಸಿದ್ದು ಸೇನಾ ಸಮಿತಿ ಅಧ್ಯಕ್ಷ ಕಲ್ಲಾರೆ ಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಸಿದ್ದರಾಜು, ಮತ್ತಿತರರ ಸಮಾರಂಭದಲ್ಲಿ ಹಾಜರಿದ್ದರು.1
- All About,Vested interests who wants to become famous overnight by spreading selfish propaganda *ಭಾರತ ನಲ್ಲಿ ವೈರಲ್*1
- ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವ: ಚಿಕ್ಕ ಜಾತ್ರಾ ಮಹೋತ್ಸವಕ್ಕೆ ತೆರೆ ನಂಜನಗೂಡು: ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವದ ವೈಭವ... ಪಟಾಕಿಗಳ ಬೆಳಕಿನಲ್ಲಿ ಕಂಗೊಳಿಸಿದ ನದಿ ತೀರ... ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು... ಹೌದು... ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಜ್ರಾಭರಣ ಹಾಗೂ ವಿವಿಧ ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಕಪಿಲಾ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ನದಿ ದಂಡೆಯಲ್ಲಿ ಸಂಕಲ್ಪ, ವಿಶೇಷ ಪೂಜೆ, ವೇದಮಂತ್ರ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ತೇಲುವ ದೇವಾಲಯದ ಮಾದರಿಯ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪಾರ್ವತಿ ಸಮೇತ ನಂಜುಂಡೇಶ್ವರ ಸ್ವಾಮಿಯವರ ತೆಪ್ಪವು ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ತೆಪ್ಪ ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು. ಇತ್ತ ಪಟಾಕಿಗಳ ಸಿಡಿಮದ್ದು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದರೆ, ಅತ್ತ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪ ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಈ ಅಪರೂಪದ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಂಡರು. ಭಕ್ತರ ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಮೂರು ರಥಗಳ ಮಹಾರಥೋತ್ಸವ ಸೇರಿದಂತೆ ಆರು ದಿನಗಳ ಕಾಲ ನಡೆದ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕಪಿಲಾ ನದಿಯ ತೆಪ್ಪೋತ್ಸವದೊಂದಿಗೆ ಭಕ್ತಿಪೂರ್ವಕ ತೆರೆ ಬಿದ್ದಿತು.4
- 🆓 GENERAL HEALTH CHECK UP CAMP ON 28 NOVEMBER SATURDAY 🆓 GENERAL HEALTH CHECK UP CAMP ON 28 NOVEMBER SATURDAY in Masjid e aqsa Fountain Circle ⭕ Mysuru1
- ಜಾತಿ, ಮೇಲು-ಕೀಳು ತಾರತಮ್ಯದ ವಿರುದ್ದ ಕನಕದಾಸರಿಂದ ಜಾಗೃತಿ: ಸಚಿವ ಬಾಲಕೃಷ್ಣ : ರಾಮನಗರ- ದಾಸ ಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ರಚನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಬಾಲಕೃಷ್ಣ ಅವರು ಹೇಳಿದರು. ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮ ಧಾನ್ಯ ಚರಿತ್ರೆಯಂತಹ ಕೃತಿಗಳ ಮೂಲಕ ಜಾತಿ ಪದ್ಧತಿ ಹಾಗೂ ಮೇಲೂ ಕೀಳು ಎಂಬ ಭಾವನೆಗಳನ್ನು ಸಮಾಜದಿಂದ ತೊಡೆದುಹಾಕುವ ಸಂದೇಶ ಸಾರಿದರು. 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರೆ, 16ನೇ ಶತಮಾನದಲ್ಲಿ ದಾಸರು ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕನಕದಾಸರ ಸಮಾನತೆಯ ಚಿಂತನೆಗಳು ಸಮಾಜದ ಮೇಲೆ ಪ್ರಭಾವ ಬೀರಿವೆ. ಅದು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ರಚನೆಯ ಆಶಯಕ್ಕೂ ಬಲ ತುಂಬಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ಇಂತಹ ಮಹನೀಯರನ್ನು ಸ್ಮರಿಸಬೇಕು ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ಶ್ಲಾಘಿಸಿದರು.1