logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುದ್ದೇಬಿಹಾಳ: ಏಪ್ರಿಲ್ 18ರಂದು ಅಂಬೇಡ್ಕ‌ರ್ ಜಯಂತಿ ಆಚರಣೆ ಏಪ್ರಿಲ್ 18ರಂದು ವಿಜಯಪುರ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ದಲಿತ ಮುಖಂಡ ಗೋಪಿ ಚಲವಾದಿ ಶುಕ್ರವಾರದಂದು ತಿಳಿಸಿದರು. ನಗರದ ಎಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಪೂ‌ರ್ ಉದ್ಘಾಟಿಸಲಿದ್ದಾರೆ. ಮುದ್ದೇಬಿಹಾಳ: ಏಪ್ರಿಲ್ 18ರಂದು ಅಂಬೇಡ್ಕ‌ರ್ ಜಯಂತಿ ಆಚರಣೆ ಏಪ್ರಿಲ್ 18ರಂದು ವಿಜಯಪುರ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ದಲಿತ ಮುಖಂಡ ಗೋಪಿ ಚಲವಾದಿ ಶುಕ್ರವಾರದಂದು ತಿಳಿಸಿದರು. ನಗರದ ಎಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಪೂ‌ರ್ ಉದ್ಘಾಟಿಸಲಿದ್ದಾರೆ.

3 hrs ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•
3 hrs ago

ಮುದ್ದೇಬಿಹಾಳ: ಏಪ್ರಿಲ್ 18ರಂದು ಅಂಬೇಡ್ಕ‌ರ್ ಜಯಂತಿ ಆಚರಣೆ ಏಪ್ರಿಲ್ 18ರಂದು ವಿಜಯಪುರ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ದಲಿತ ಮುಖಂಡ ಗೋಪಿ ಚಲವಾದಿ ಶುಕ್ರವಾರದಂದು ತಿಳಿಸಿದರು. ನಗರದ ಎಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಪೂ‌ರ್ ಉದ್ಘಾಟಿಸಲಿದ್ದಾರೆ. ಮುದ್ದೇಬಿಹಾಳ: ಏಪ್ರಿಲ್ 18ರಂದು ಅಂಬೇಡ್ಕ‌ರ್ ಜಯಂತಿ ಆಚರಣೆ ಏಪ್ರಿಲ್ 18ರಂದು ವಿಜಯಪುರ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ದಲಿತ ಮುಖಂಡ ಗೋಪಿ ಚಲವಾದಿ ಶುಕ್ರವಾರದಂದು ತಿಳಿಸಿದರು. ನಗರದ ಎಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಪೂ‌ರ್ ಉದ್ಘಾಟಿಸಲಿದ್ದಾರೆ.

More news from ಕರ್ನಾಟಕ and nearby areas
  • ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್* ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 98 ಇಂಗ್ಲಿಷ್ 93 ರಸಾಯನಶಾಸ್ತ್ರ 95 ಭೌತಶಾಸ್ತ್ರ 99 ಗಣಿತಶಾಸ್ತ್ರ 99 ಜೀವಶಾಸ್ತ್ರ 99 ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    1
    ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್*  ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 
ಕನ್ನಡ 98 
ಇಂಗ್ಲಿಷ್ 93 
ರಸಾಯನಶಾಸ್ತ್ರ 95 
ಭೌತಶಾಸ್ತ್ರ 99 
ಗಣಿತಶಾಸ್ತ್ರ 99 
ಜೀವಶಾಸ್ತ್ರ 99 
ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ  ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    10 hrs ago
  • ಗುಳೇದಗುಡ್ಡ: ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ಸಂಭ್ರಮದಿಂದ ನಡೆಯಿತು. ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಶ್ರೀ.ಜ.ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿದ್ದರು. ರಥೋತ್ಸವದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ಗುಳೇದಗುಡ್ಡ, ಮುಗಳೊಳ್ಳಿ, ಹಡಗಲಿ, ತಿಮ್ಮಸಾಗರ, ಕಮತಗಿ, ಮುಳ್ಳೂರು, ಕಟಗೇರಿ, ಚಿಕ್ಕನರಗುಂದ, ಗಂಗೂರು, ಕೆಲವಡಿ, ಇಂಗಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವಕ್ಕೂ ಮೊದಲು ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ದ್ವಾದಶ ಪಟ್ಟಾಧೀಕಾರ ನಿಮಿತ್ತ ಬೆಳಗಿನಜಾವ ಮಂಗಲ ಸ್ನಾನ, ಪೀಠಾರೋಹಣ, ಅಯ್ಯಚಾರ, ಶಿವದೀಕ್ಷೆ, ರುದ್ರಾಅಭೀಷೇಕ ನಡೆಯಿತು. ಬಳಿಕ ಪಲ್ಲಕ್ಕಿ ಉತ್ಸವ ಕರಡಿಮಜಲು ಹಾಗೂ ಸುಮಂಗಲೆಯರ ಕಳಸಾದಾರತಿಯೊಂದಿಗ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು.
    1
    ಗುಳೇದಗುಡ್ಡ: ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ಸಂಭ್ರಮದಿಂದ ನಡೆಯಿತು. ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಶ್ರೀ.ಜ.ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿದ್ದರು.
ರಥೋತ್ಸವದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ಗುಳೇದಗುಡ್ಡ, ಮುಗಳೊಳ್ಳಿ, ಹಡಗಲಿ, ತಿಮ್ಮಸಾಗರ, ಕಮತಗಿ, ಮುಳ್ಳೂರು, ಕಟಗೇರಿ, ಚಿಕ್ಕನರಗುಂದ, ಗಂಗೂರು, ಕೆಲವಡಿ, ಇಂಗಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವಕ್ಕೂ ಮೊದಲು ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ದ್ವಾದಶ ಪಟ್ಟಾಧೀಕಾರ ನಿಮಿತ್ತ ಬೆಳಗಿನಜಾವ ಮಂಗಲ ಸ್ನಾನ, ಪೀಠಾರೋಹಣ, ಅಯ್ಯಚಾರ, ಶಿವದೀಕ್ಷೆ, ರುದ್ರಾಅಭೀಷೇಕ ನಡೆಯಿತು. ಬಳಿಕ ಪಲ್ಲಕ್ಕಿ ಉತ್ಸವ ಕರಡಿಮಜಲು ಹಾಗೂ ಸುಮಂಗಲೆಯರ ಕಳಸಾದಾರತಿಯೊಂದಿಗ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    22 hrs ago
  • ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತವು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಅಪಘಾತ ಅದೆಷ್ಟು ಭಯಾನಕವಾಗಿತ್ತು ಎಂದರೆ ಘಟನಾ ಸ್ಥಳದಲ್ಲಿ ಹೊತ್ತಿ ಉರಿದ ತಲೆಬುರುಡೆಗಳು ಕಾಣಿಸಿತು. ಬೆಳಗ್ಗೆ ನಡೆದ ಭೀಕರ ಅಪಘಾತ ಇಂದು ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಒಂದೇ ಕುಟುಂಬದ 6 ಮಂದಿ ಸಜೀವ ದಹನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಸೇರಿದ್ದಾರೆ. ಇಬ್ಬರಿಗೆ ಗಂಭೀರ ಗಾಯ ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ದುರಂತ ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ/ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್‌ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಭೀಕರ ದೃಶ್ಯ - ಕಾರು ಭಸ್ಮ ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿದ್ದು ಆ ದೃಶ್ಯಗಳು ಮನಕಲುಕುವಂತಿತ್ತು. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಯ್ತು. ತನಿಖೆ ಆರಂಭ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಅತಿವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಈ ದುರಂತದಿಂದ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ಸರಣಿ ಅಪಘಾತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ​
    1
    ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತವು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಅಪಘಾತ ಅದೆಷ್ಟು ಭಯಾನಕವಾಗಿತ್ತು ಎಂದರೆ ಘಟನಾ ಸ್ಥಳದಲ್ಲಿ ಹೊತ್ತಿ ಉರಿದ ತಲೆಬುರುಡೆಗಳು ಕಾಣಿಸಿತು.
ಬೆಳಗ್ಗೆ ನಡೆದ ಭೀಕರ ಅಪಘಾತ
ಇಂದು ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
ಒಂದೇ ಕುಟುಂಬದ 6 ಮಂದಿ ಸಜೀವ ದಹನ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಸೇರಿದ್ದಾರೆ.
ಇಬ್ಬರಿಗೆ ಗಂಭೀರ ಗಾಯ
ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ
ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ದುರಂತ
ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ/ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್‌ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭೀಕರ ದೃಶ್ಯ - ಕಾರು ಭಸ್ಮ
ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿದ್ದು ಆ ದೃಶ್ಯಗಳು ಮನಕಲುಕುವಂತಿತ್ತು. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಯ್ತು.
ತನಿಖೆ ಆರಂಭ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಅತಿವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಈ ದುರಂತದಿಂದ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ಸರಣಿ ಅಪಘಾತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
​
    user_ಮಲ್ಲಿಕಾರ್ಜುನ ಚಲವಾದಿ ರಾಜನಕುಳೂರು
    ಮಲ್ಲಿಕಾರ್ಜುನ ಚಲವಾದಿ ರಾಜನಕುಳೂರು
    ಹುಣಸಗಿ, ಯಾದಗಿರಿ, ಕರ್ನಾಟಕ•
    3 hrs ago
  • ಸುರಪುರ ತಾಲೂಕಿನ ಶಾಂತ್ ಪುರ್ ಕ್ರಾಸ್ ಅತ್ತಿರ ಬಸ್ಸು ಬೆಂಕಿ ಹತ್ತಿರುತ್ತದೆ ಬಸ್ಸು ಮತ್ತು ಕಾರು ಮುಖಾಮುಖಿ ಏಳು ಜನರ ಸಜೀವ ದಾಹನ ಸ್ಥಳಕ್ಕೆ ಸುರಪುರ ಪೊಲೀಸ್ ಠಾಣೆ ಸಿಬ್ಬಂದಿಗಳು ತಕ್ಷಣ ಬಂದು ಗಾಯಾಳುಗಳನ್ನು ಹಾಸ್ಪಿಟಲ್ಗೆ ಕಳಿಸಲಾಯಿತು ಡಿಎಸ್ಪಿ .ಎಸ್ ಪಿ. ಸ್ಥಳೀಯ ಶಾಸಕರಾದ ವೇಣುಗೋಪಾಲ್ ನಾಯಕ್ ಅವರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
    1
    ಸುರಪುರ ತಾಲೂಕಿನ ಶಾಂತ್ ಪುರ್ ಕ್ರಾಸ್ ಅತ್ತಿರ ಬಸ್ಸು ಬೆಂಕಿ ಹತ್ತಿರುತ್ತದೆ ಬಸ್ಸು ಮತ್ತು ಕಾರು ಮುಖಾಮುಖಿ ಏಳು ಜನರ ಸಜೀವ ದಾಹನ ಸ್ಥಳಕ್ಕೆ ಸುರಪುರ ಪೊಲೀಸ್ ಠಾಣೆ ಸಿಬ್ಬಂದಿಗಳು ತಕ್ಷಣ ಬಂದು ಗಾಯಾಳುಗಳನ್ನು ಹಾಸ್ಪಿಟಲ್ಗೆ ಕಳಿಸಲಾಯಿತು ಡಿಎಸ್ಪಿ .ಎಸ್ ಪಿ. ಸ್ಥಳೀಯ ಶಾಸಕರಾದ ವೇಣುಗೋಪಾಲ್ ನಾಯಕ್ ಅವರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    3 hrs ago
  • ತೀವ್ರ ಬಿಸಿಲಿನ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕಷ್ಟವನ್ನು ಮನಗಂಡ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌.ಡಿ. ಅವರು ಮಾನವೀಯ ಕ್ರಮ ಕೈಗೊಂಡಿದ್ದಾರೆ 👏 ಗುಲ್ಬರ್ಗ ನಗರದಲ್ಲಿ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್‌ಗಳನ್ನು ವಿತರಿಸಲಾಗಿದ್ದು, ಬಿಸಿಲಿನ ತಾಪದಿಂದ ರಕ್ಷಣೆ ಸಿಗುವಂತೆ ಮಾಡಲಾಗಿದೆ ☀️ ಈ ಕ್ರಮದಿಂದ ಸಿಬ್ಬಂದಿಯ ಆರೋಗ್ಯ ಕಾಪಾಡುವುದರ ಜೊತೆಗೆ, ಅವರ ಕಾರ್ಯಕ್ಷಮತೆ ಹೆಚ್ಚಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
    1
    ತೀವ್ರ ಬಿಸಿಲಿನ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕಷ್ಟವನ್ನು ಮನಗಂಡ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌.ಡಿ. ಅವರು ಮಾನವೀಯ ಕ್ರಮ ಕೈಗೊಂಡಿದ್ದಾರೆ 👏
ಗುಲ್ಬರ್ಗ ನಗರದಲ್ಲಿ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್‌ಗಳನ್ನು ವಿತರಿಸಲಾಗಿದ್ದು, ಬಿಸಿಲಿನ ತಾಪದಿಂದ ರಕ್ಷಣೆ ಸಿಗುವಂತೆ ಮಾಡಲಾಗಿದೆ ☀️
ಈ ಕ್ರಮದಿಂದ ಸಿಬ್ಬಂದಿಯ ಆರೋಗ್ಯ ಕಾಪಾಡುವುದರ ಜೊತೆಗೆ, ಅವರ ಕಾರ್ಯಕ್ಷಮತೆ ಹೆಚ್ಚಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
    user_ASN News24Kannada
    ASN News24Kannada
    Newsagent Kalaburagi, Karnataka•
    5 hrs ago
  • ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ವಿಆರ್‌ಎಲ್ ಬಸ್ ಹಾಗೂ ಕಾರು ಮಧ್ಯೆ ಭೀಕರ ಅಪಘಾತ.6 ಜನ ಸುಟ್ಟು ಕರಕಲು.ಬಸ್ ಕಾರು ಎರಡೂ ಬೆಂಕಿಗಾಹುತಿ.
    1
    ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ವಿಆರ್‌ಎಲ್ ಬಸ್ ಹಾಗೂ ಕಾರು ಮಧ್ಯೆ ಭೀಕರ ಅಪಘಾತ.6 ಜನ ಸುಟ್ಟು ಕರಕಲು.ಬಸ್ ಕಾರು ಎರಡೂ ಬೆಂಕಿಗಾಹುತಿ.
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    7 hrs ago
  • ಅಫಜಲಪುರ ತಾಲೂಕಿನ ರಾಜಕೀಯ ಬೆಳವಣಿಗೆ ಕುರಿತು ನಾನು "ನಾಟಕ " ಬರಿಯುತ್ತೆನೆ: ಚಂದು ಬನ್ನಟ್ಟಿ.
    1
    ಅಫಜಲಪುರ ತಾಲೂಕಿನ ರಾಜಕೀಯ ಬೆಳವಣಿಗೆ ಕುರಿತು ನಾನು "ನಾಟಕ " ಬರಿಯುತ್ತೆನೆ: ಚಂದು ಬನ್ನಟ್ಟಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    21 hrs ago
  • ಕೆಂಭಾವಿ: ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಹಲವಾರು ದಿನಗಳಿಂದ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿದ್ದರು ಹೋಬಳಿಯ ರೈತರು ಎಫ್‌ ಐಡಿ ಮಾಡಿಸಿಕೊಳ್ಳುಲು ಹಿಂಜರಿಯುತ್ತಿದ್ದಾರೆ ಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಶ್ರೀಧರ ಎಸ್. ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಫ್‌ಐಡಿ ಮಾಡಿಸದೆ ಇದ್ದಲ್ಲಿ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಈ ಬಾರಿ ರಸಗೊಬ್ಬರ ಸಿಗುವುದಿಲ್ಲ. ಎಫ್‌ಐಡಿ ಮಾಡಿಸುವುದರಿಂದ ರೈತರಿಗೆ ಎಲ್ಲ ರೀತಿಯಿಂದ ಸಹಾಯವಾಗಲಿದೆ. ರಾಜ್ಯ ಸರಕಾರ 2014-15ರಲ್ಲಿ ಎಫ್‌ಐಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಕೆಂಭಾವಿ ಹೋಬಳಿಯಲ್ಲಿ ಒಟ್ಟು 27,185 ರೈತರ ಹೊಲಗಳಿದ್ದು, ಅದರಲ್ಲಿ 18,870 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 8,315 ಜನ ರೈತರು ಇನ್ನು ಎಫ್‌ಐಡಿ ಮಾಡಿಸಿಕೊಳ್ಳದೆ ಬಾಕಿ ಉಳಿದಿದ್ದಾರೆ. ಎಫ್‌ಐಡಿ ಮಾಡಿಸಿಕೊಳ್ಳದಿದ್ದರೆ ರೈತರಿಗೆ ಬೆಳೆ ಪರಿಹಾರ ಬರುವುದಿಲ್ಲ, ಬೆಳೆ ವಿಮೆ, ಎಲ್ಲ ಬ್ಯಾಂಕ್ ಸೌಲಭ್ಯಗಳಿಗೆ ಎಫ್‌ಐಡಿ ಕಡ್ಡಾಯವಾಗಿದೆ. ಈ ಮುಂಗಾರು ಹಂಗಾಮಿನ ದಿನಗಳಲ್ಲಿ ಗೊಬ್ಬರ ವಿತರಣೆಗೆ ಸಮಸ್ಯೆ ಆಗಬಾರದೆಂದರೆ ಕಡ್ಡಾಯವಾಗಿ ಒಂದು ವಾರದ ಒಳಗಾಗಿ ಬಾಕಿ ಉಳಿದಿರುವ ಎಲ್ಲರೂ ಎಫ್‌ಐಡಿ ಮಾಡಿಸಿಕೊಳ್ಳಬೇಕು ಹಾಗೂ ಇರುವ ಎಫ್ ಐಡಿಗಳಿಗೆ ಇಕೆವೈಸಿ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಈ
    1
    ಕೆಂಭಾವಿ: ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಹಲವಾರು ದಿನಗಳಿಂದ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿದ್ದರು ಹೋಬಳಿಯ ರೈತರು ಎಫ್‌ ಐಡಿ ಮಾಡಿಸಿಕೊಳ್ಳುಲು ಹಿಂಜರಿಯುತ್ತಿದ್ದಾರೆ ಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಶ್ರೀಧರ ಎಸ್. ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಫ್‌ಐಡಿ ಮಾಡಿಸದೆ ಇದ್ದಲ್ಲಿ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಈ ಬಾರಿ ರಸಗೊಬ್ಬರ ಸಿಗುವುದಿಲ್ಲ. ಎಫ್‌ಐಡಿ ಮಾಡಿಸುವುದರಿಂದ ರೈತರಿಗೆ ಎಲ್ಲ ರೀತಿಯಿಂದ ಸಹಾಯವಾಗಲಿದೆ. ರಾಜ್ಯ ಸರಕಾರ 2014-15ರಲ್ಲಿ ಎಫ್‌ಐಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಕೆಂಭಾವಿ ಹೋಬಳಿಯಲ್ಲಿ ಒಟ್ಟು 27,185 ರೈತರ ಹೊಲಗಳಿದ್ದು, ಅದರಲ್ಲಿ 18,870 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 8,315 ಜನ ರೈತರು ಇನ್ನು ಎಫ್‌ಐಡಿ ಮಾಡಿಸಿಕೊಳ್ಳದೆ ಬಾಕಿ ಉಳಿದಿದ್ದಾರೆ. ಎಫ್‌ಐಡಿ ಮಾಡಿಸಿಕೊಳ್ಳದಿದ್ದರೆ ರೈತರಿಗೆ ಬೆಳೆ ಪರಿಹಾರ ಬರುವುದಿಲ್ಲ, ಬೆಳೆ ವಿಮೆ, ಎಲ್ಲ ಬ್ಯಾಂಕ್ ಸೌಲಭ್ಯಗಳಿಗೆ ಎಫ್‌ಐಡಿ ಕಡ್ಡಾಯವಾಗಿದೆ. ಈ ಮುಂಗಾರು ಹಂಗಾಮಿನ ದಿನಗಳಲ್ಲಿ ಗೊಬ್ಬರ ವಿತರಣೆಗೆ ಸಮಸ್ಯೆ ಆಗಬಾರದೆಂದರೆ ಕಡ್ಡಾಯವಾಗಿ ಒಂದು ವಾರದ ಒಳಗಾಗಿ ಬಾಕಿ ಉಳಿದಿರುವ ಎಲ್ಲರೂ ಎಫ್‌ಐಡಿ ಮಾಡಿಸಿಕೊಳ್ಳಬೇಕು ಹಾಗೂ ಇರುವ ಎಫ್ ಐಡಿಗಳಿಗೆ ಇಕೆವೈಸಿ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಈ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    4 hrs ago
  • ಖಾಸಗಿ ಬಸ್-ಕಾರು ನಡುವೆ ಭೀಕರ ಡಿಕ್ಕಿ; ಆರು ಮಂದಿ ಜೀವಂತ ದಹನ! ಒಂದೇ ಕುಟುಂಬದ ಆರು ಮಂದಿ ಸಜೀವ ದಹನ - ದೇವಸ್ಥಾನಕ್ಕೆ ಹೋದವರು ಮಸಣ ಸೇರಿದರು ಸುರಪುರ : ತಾಲೂಕಿನ ದೇವಾಪುರ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ವಿಧಿ ಅಟ್ಟಹಾಸ ಮೆರೆದಿದ್ದು, ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ವಾಹನಗಳು ಬೆಂಕಿಗಾಹುತಿಯಾಗಿ ಈ ದುರಂತ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಶಾಂತಪುರ-ತಿಂಥಣಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ತೆರಳುತ್ತಿದ್ದ ವಿ.ಆರ್.ಎಲ್ (ವಿ.ಆರ್.ಎಲ್) ಸಂಸ್ಥೆಯ ಖಾಸಗಿ ಬಸ್ ಹಾಗೂ ಸಿರವಾರ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಎರಡೂ ವಾಹನಗಳಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ವಾಹನದೊಳಗೇ ಬೆಂಕಿಗೆ ಆಹುತಿಯಾಗಿದ್ದಾರೆ.
    2
    ಖಾಸಗಿ ಬಸ್-ಕಾರು ನಡುವೆ ಭೀಕರ ಡಿಕ್ಕಿ; ಆರು ಮಂದಿ ಜೀವಂತ ದಹನ!
ಒಂದೇ ಕುಟುಂಬದ ಆರು ಮಂದಿ ಸಜೀವ ದಹನ - ದೇವಸ್ಥಾನಕ್ಕೆ ಹೋದವರು ಮಸಣ ಸೇರಿದರು
ಸುರಪುರ : ತಾಲೂಕಿನ ದೇವಾಪುರ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ವಿಧಿ ಅಟ್ಟಹಾಸ ಮೆರೆದಿದ್ದು, ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ವಾಹನಗಳು ಬೆಂಕಿಗಾಹುತಿಯಾಗಿ ಈ ದುರಂತ ಸಂಭವಿಸಿದೆ.
ಶುಕ್ರವಾರ ಮಧ್ಯಾಹ್ನ ಶಾಂತಪುರ-ತಿಂಥಣಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ತೆರಳುತ್ತಿದ್ದ ವಿ.ಆರ್.ಎಲ್ (ವಿ.ಆರ್.ಎಲ್) ಸಂಸ್ಥೆಯ ಖಾಸಗಿ ಬಸ್ ಹಾಗೂ ಸಿರವಾರ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಎರಡೂ ವಾಹನಗಳಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ವಾಹನದೊಳಗೇ ಬೆಂಕಿಗೆ ಆಹುತಿಯಾಗಿದ್ದಾರೆ.
    user_ಹಣಮಂತ್ರಾಯ ನಾಯಕ ಪತ್ತೇಪುರ
    ಹಣಮಂತ್ರಾಯ ನಾಯಕ ಪತ್ತೇಪುರ
    Social Media Manager ಯಾದಗಿರಿ, ಯಾದಗಿರಿ, ಕರ್ನಾಟಕ•
    38 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.