ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ.
ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ
ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
- ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಕತ್ತೆಯ ಹಾಜರಾತಿ!1
- ਕਲਕੱਤਾ ਦੇ ਕਾਲੀ ਮਾਂ ਦੇ ਦਰਸ਼ਨ ਤੇ ਗੰਗਾ ਸਾਗਰਦ ਸਨਾਨ ਨਾਲ ਭਗਤ ਹੋਏ ਨਿਹਾਲ | Punjab 24 News #KolkataKaliTemple #KaliMaaDarshan #GangaSagarSnan #SpiritualJourney #KaliMaaBlessings #GangaSagarYatra #HolyPilgrimage #DevotionalTour #MaaKaliKripa #KolkataDarshan #PavitaarSnan #SacredSangam #DivineExperience #SpiritualVibes #KaliTempleKolkata #GangaSagarTirth #BhaktiAndShraddha #DevoteesJourney #PilgrimageDiaries #PUNJAB24NEWS1
- Every morning classes will starts with Greetings 👆in RT School Kindergarten1
- ಮುಖ್ಯಮಂತ್ರಿಗಳ ಆಶ್ವಾಸನೆಗೆ ಹೋರಾಟ ವಿರಾಮ: ಬಜೆಟ್ ಅಧಿವೇಶನ ನಿರ್ಣಾಯಕ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿದ್ದ ಮಹಾ ಪ್ರತಿಭಟನೆಯನ್ನು ಮಾಳಿ ಮತ್ತು ಮಾಲಗಾರ.ಸಮಾಜ ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಬಾವಿ ಮತಕ್ಷೇತ್ರದ ಶಾಸಕರು ಬಾಲಚಂದ್ರ ಜಾರಕಿಹೊಳಿ. ಮಹೇಂದ್ರ ತಮ್ಮನವರ. ಹಾಗೂ ರಾಜು ಕಾಗೆ ಹಲವಾರು ಶಾಸಕರು ನೀಡಿದ ಭರವಸೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಹಿರಿಯ ಮುಖಂಡ ಡಾ. ಸಿ. ಬಿ. ಕುಲಿಗೋಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 9 ರಂದು ನಡೆಯಬೇಕಿದ್ದ ಹೋರಾಟವನ್ನು ಮುಂದಿನ ಬಜೆಟ್ ಅಧಿವೇಶನದವರೆಗೆ ಮುಂದೂಡಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳು ಫೆಬ್ರವರಿ–ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಮಾಳಿ ಮತ್ತು ಮಾಲಗಾರ.ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮಾತು ನೀಡಿರುವುದಾಗಿ ತಿಳಿಸಿದರು. ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ, ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದ ಸತ್ಯಾಗ್ರಹವನ್ನೂ ಸದ್ಯಕ್ಕೆ ಕೈಬಿಡಲಾಗಿದೆ. ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಮುಂದಿನ ಬಜೆಟ್ ಅಧಿವೇಶನದಲ್ಲಿನ ನಿರ್ಧಾರವೇ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದರು. ಯುವ ಘಟಕದ ಮುಖಂಡ ಮಹಾಂತೇಶ್ ಮಾಳಿ.ಮಾತನಾಡಿ, ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿಗಮವನ್ನು ಘೋಷಿಸಿದ್ದರೂ ಅದು ಕಾಗದದಲ್ಲೇ ಉಳಿದಿತ್ತು ಎಂದು ಹೇಳಿದರು. ಇದೇ ಪರಿಸ್ಥಿತಿ ಪುನರಾವರ್ತಿತವಾದರೆ, 11 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ 30–35 ಲಕ್ಷ ಜನಸಂಖ್ಯೆಯ ಮಾಳಿ ಸಮಾಜ ಸರ್ಕಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದರು. ನಿಗಮ ಸ್ಥಾಪನೆಯ ಜೊತೆಗೆ, ನಿಲ್ಲೂರ ನಿಂಬೆಕ್ಕ ದೇವಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆಯನ್ನೂ ಸಮಾಜ ಮುಂದಿರಿಸಿದೆ. ಡಾ. ಕುಲಿಗೋಡ್ ಅವರು ಮಾತನಾಡಿ, ಮಾಳಿ ಮತ್ತು ಮಾಲಗಾರ ಸಮಾಜವು ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿ ಹೊಂದಿದೆ ಎಂದು ತಿಳಿಸಿದರು. “ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ, ಹೋರಾಟದ ದಾರಿ ಬದಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಲವು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1