logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸಿಂಧನೂರು,ನ, 26- ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸ್ವೀಕರಿಸಿದರು. ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ, ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.

18 hrs ago
user_ಶಿವರಾಜ.ಕೆ
ಶಿವರಾಜ.ಕೆ
ಸಿಂಧನೂರು, ರಾಯಚೂರು, ಕರ್ನಾಟಕ•
18 hrs ago
608a1e31-faf2-45ae-8e2f-03c12d8fa002

ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸಿಂಧನೂರು,ನ, 26- ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸ್ವೀಕರಿಸಿದರು. ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ

ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ

ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ, ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.

More news from ಕರ್ನಾಟಕ and nearby areas
  • ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ರಾಯಚೂರು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನಗರದ ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಇತರೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿಶೇಷ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸಯ್ಯ ಹಾಗೂ ಜವಳಗೇರಾ ಪ್ರಾ.ಆ.ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ಅವರು ಹಾಜರಿದ್ದು, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. *ಒಂದು ಸಣ್ಣ ಸೊಳ್ಳೆ ಕಚ್ಚಿದರೆ ಏನಾಗುತ್ತದೆ ಎಂಬ ನಿರ್ಲಕ್ಷ್ಯವೇ ಇಂದು ದೊಡ್ಡ ಮಟ್ಟದ ಆರೋಗ್ಯ ಅನಾಹುತಗಳಿಗೆ ಕಾರಣವಾಗುತ್ತಿದೆ.* ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಈ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿದ್ದು, ರೋಗ ಉಲ್ಬಣಗೊಂಡು ತೀವ್ರ ಹಂತಕ್ಕೆ ತಲುಪಿದ ನಂತರವಷ್ಟೇ ವೈದ್ಯರ ಬಳಿಗೆ ಬರುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಿರುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಸಮುದಾಯದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೆ ಹಾಗೂ ಸಾರ್ವಜನಿಕರಿಗೆ ಸೊಳ್ಳೆ ನಿಯಂತ್ರಣದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ ಎರಡು-ಮೂರು ದಿನಗಳ ಕಾಲ ನಿರಂತರ ಜ್ವರ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು. ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ಗಂಭೀರ ರೋಗಗಳು ಹರಡುವುದರಿಂದ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಹಾಗೂ ನೀರಿನ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡುವುದು ಅತ್ಯಗತ್ಯವಾಗಿದೆ. ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಕೈಯಲ್ಲಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಮುದಾಯವು ಕೈಜೋಡಿಸಿದಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಫ್.ಎ.ಹಣಗಿ ಮಾತನಾಡಿ ಸೊಳ್ಳೆಯ ಜೀವನ ಚಕ್ರ,ಜೀವಿಸುವ ಅವಧಿ,ಬೆಳೆಯುವ ಹಂತಗಳು ಮತ್ತು ಜೀವಿತಾ ಅವಧಿಯಲ್ಲಿ ಸೊಳ್ಳೆಗಳಿಂದ ಆಗುವ ಅನಾಹುತಗಳು ಮತ್ತು ಪರಿಹಾರ ಕ್ರಮದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು, ಹಿ.ಆ.ನಿ ಅಧಿಕಾರಿ ಸಂಗನಗೌಡ ಆರೋಗ್ಯ ಸಿಬ್ಬಂದಿಗಳು ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ& ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಮುಂಜಾಗೃತಾ ಕ್ರಮಗಳಾದ ಸೊಳ್ಳೆ ಪರದೆ ಬಳಕೆ,ಸೊಳ್ಳೆ ಕೌಲ್ ಗಳು,ಸ್ಪ್ರೆ ಬಳಕೆ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತುಂಬು ತೊಳಿನ ಬಟ್ಟೆ ಧರಿಸಲು ಸಲಹೆ ನೀಡುವುದು,ಸೊಳ್ಳೆ ಸಾಂದ್ರತೆ ಹೆಚ್ಚಾದಲ್ಲಿ ಒಣ ಬೇವಿನ ಎಲೆ ಸುಡುವುದು,ಸೊಳ್ಖೆ ನಿಯಂತ್ರಣ ಸಸ್ಯ ಬೆಳೆಸುವ ಬಗ್ಗೆ ಜಾಗೃತಿ ನೀಡಿದರು, ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    2
    ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ
ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಮಾಜದ ಸಹಕಾರ ಮುಖ್ಯ: ಬಸ್ಸಯ್ಯ
ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ರಾಯಚೂರು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನಗರದ  ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಇತರೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿಶೇಷ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸಯ್ಯ ಹಾಗೂ ಜವಳಗೇರಾ ಪ್ರಾ.ಆ.ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ  ಅವರು ಹಾಜರಿದ್ದು, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. 
*ಒಂದು ಸಣ್ಣ ಸೊಳ್ಳೆ ಕಚ್ಚಿದರೆ ಏನಾಗುತ್ತದೆ ಎಂಬ ನಿರ್ಲಕ್ಷ್ಯವೇ ಇಂದು ದೊಡ್ಡ ಮಟ್ಟದ ಆರೋಗ್ಯ ಅನಾಹುತಗಳಿಗೆ ಕಾರಣವಾಗುತ್ತಿದೆ.* ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಈ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿದ್ದು, ರೋಗ ಉಲ್ಬಣಗೊಂಡು ತೀವ್ರ ಹಂತಕ್ಕೆ ತಲುಪಿದ ನಂತರವಷ್ಟೇ ವೈದ್ಯರ ಬಳಿಗೆ ಬರುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಿರುವ  ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಸಮುದಾಯದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೆ ಹಾಗೂ ಸಾರ್ವಜನಿಕರಿಗೆ ಸೊಳ್ಳೆ ನಿಯಂತ್ರಣದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. 
ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಿಗಾದರೂ ಎರಡು-ಮೂರು ದಿನಗಳ ಕಾಲ ನಿರಂತರ ಜ್ವರ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು.
ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ಗಂಭೀರ ರೋಗಗಳು ಹರಡುವುದರಿಂದ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಹಾಗೂ ನೀರಿನ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡುವುದು ಅತ್ಯಗತ್ಯವಾಗಿದೆ. ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಕೈಯಲ್ಲಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಮುದಾಯವು ಕೈಜೋಡಿಸಿದಾಗ ಮಾತ್ರ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಫ್.ಎ.ಹಣಗಿ ಮಾತನಾಡಿ ಸೊಳ್ಳೆಯ ಜೀವನ ಚಕ್ರ,ಜೀವಿಸುವ ಅವಧಿ,ಬೆಳೆಯುವ ಹಂತಗಳು ಮತ್ತು ಜೀವಿತಾ ಅವಧಿಯಲ್ಲಿ ಸೊಳ್ಳೆಗಳಿಂದ ಆಗುವ ಅನಾಹುತಗಳು ಮತ್ತು ಪರಿಹಾರ ಕ್ರಮದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು,
ಹಿ.ಆ.ನಿ ಅಧಿಕಾರಿ ಸಂಗನಗೌಡ ಆರೋಗ್ಯ ಸಿಬ್ಬಂದಿಗಳು ಮಾತನಾಡಿ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ& ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ  ಪಾತ್ರ ಮುಂಜಾಗೃತಾ ಕ್ರಮಗಳಾದ ಸೊಳ್ಳೆ ಪರದೆ ಬಳಕೆ,ಸೊಳ್ಳೆ ಕೌಲ್ ಗಳು,ಸ್ಪ್ರೆ ಬಳಕೆ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತುಂಬು ತೊಳಿನ ಬಟ್ಟೆ ಧರಿಸಲು ಸಲಹೆ ನೀಡುವುದು,ಸೊಳ್ಳೆ ಸಾಂದ್ರತೆ ಹೆಚ್ಚಾದಲ್ಲಿ ಒಣ ಬೇವಿನ ಎಲೆ ಸುಡುವುದು,ಸೊಳ್ಖೆ ನಿಯಂತ್ರಣ ಸಸ್ಯ ಬೆಳೆಸುವ ಬಗ್ಗೆ ಜಾಗೃತಿ ನೀಡಿದರು, ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    user_Kirangouda halemani
    Kirangouda halemani
    Farmer ಸಿಂಧನೂರು, ರಾಯಚೂರು, ಕರ್ನಾಟಕ•
    17 hrs ago
  • ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸಿಂಧನೂರು,ನ, 26- ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ ಸನ್ಮಾನ ಸ್ವೀಕರಿಸಿದರು. ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ, ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.
    3
    ಆಂಧ್ರ ಸಮಾಜದ ಕಾರ್ಯಕರ್ತರಿಂದ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ  ಸನ್ಮಾನ 
ಸಿಂಧನೂರು,ನ, 26-
ಆಂಧ್ರ ಸಮಾಜದ ಕಾರ್ಯಕರ್ತರಿಂದ
ಸಚಿವ ವೆಂಕಟರಾವ್ ನಾಡಗೌಡ ಅವರಿಗೆ  ಸನ್ಮಾನ ಸ್ವೀಕರಿಸಿದರು.
ಸಿಂಧನೂರು ನಗರದ ತಮ್ಮ ನಿವಾಸದಲ್ಲಿ ಆಗಮಿಸಿದ ಆಂಧ್ರ ಸಮಾಜದ ಕಾರ್ಯಕರ್ತರು ಜೆಡಿಎಸ್ ಪಕ್ಷದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಜೆಡಿಎಸ್ ಪಕ್ಷದಲ್ಲಿ ಆಂಧ್ರ ಸಮುದಾಯದ ಮುಖಂಡರಿಗೆ ಸ್ಥಾನಮಾನ ನೀಡಿರುವುದು ಸಂತೋಷದಾಯಕವಾಗಿದೆ ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ನೀವು ನನಗೆ ಸನ್ಮಾನ ಮಾಡಿರುವುದು ನಿಮಗೆ ಖುಷಿಯಾಗಿದೆ ಆದರೆ ಇಲ್ಲಿ ನನಗೆ ತುಂಬಾ ಭಾರವಾಗಿದೆ ಮುಂದಿನ ದಿನಗಳಲ್ಲಿ ಇಂದಿನ ಚುನಾವಣೆಯಲ್ಲಿ ಆಂಧ್ರ ಸಮಾಜದ ಮುಖಂಡರುಗಳೇ ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಿದ್ದಲ್ಲದೆ ಸಚಿವ ಸ್ಥಾನ ದೊರೆಯುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿತ್ತು.ನೀವುಗಳು ನಮ್ಮ ಜೊತೆ ಕೈಜೋಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎನ್.ಸತ್ಯನಾರಾಯಣ, ಅಭಿಷೇಕ ನಾಡಗೌಡ, ರವಿಗೌಡ ನನ್ನೂರು, ಅಜಯ್ ದಾಸರಿ,ನಾಗೇಶ್ ಹಂಚಿನಾಳಕ್ಯಾಂಪ್, ಕೃಷ್ಣಮೂರ್ತಿ, ಸಂಗಮೇಶಗೌಡ, ವೆಂಕಟರಮಣ ರೆಡ್ಡಿ,  ಹರಿಬಾಬು ರೈತನಗರ ಕ್ಯಾಂಪ್, ಮೋಹನರೆಡ್ಡಿ , ರಫಿ, ಗೀತಾ, ನಾಗಜ್ಯೋತಿ ಮುಳ್ಳುಪುಡಿ, , ವೀರಬಾಲು, ಆಸೀಫ್ ಸೇರಿದಂತೆ ಅನೇಕರಿದ್ದರು.
    user_ಶಿವರಾಜ.ಕೆ
    ಶಿವರಾಜ.ಕೆ
    ಸಿಂಧನೂರು, ರಾಯಚೂರು, ಕರ್ನಾಟಕ•
    18 hrs ago
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ ಕಾರಟಗಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಬಡವರ ಬಂಧುವಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗಂಗಾವತಿಯ ಗಾಂಧಿ ಸರ್ಕಲ್ ನಿವಾಸಿ ಶಂಕ್ರಪ್ಪ ನರಸಪ್ಪ ಹೂಗಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 23ರಂದು ನಡೆದ ಸಮಾರಂಭದಲ್ಲಿ ಟ್ರಸ್ಟ್‌ನ ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾಜದ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಂಕ್ರಪ್ಪ ಹೂಗಾರ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೂಗಾರ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಸಂಜೆ ಕಾರಟಗಿಯ ಶರಣಪ್ಪ ಹೂಗಾರ ಅವರ ಕಾರ್ಯಾಲಯದಲ್ಲಿ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳ ಹೂಗಾರ ಸಮಾಜದ ವತಿಯಿಂದ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಸಮಾಜ ಸೇವೆ ಎಂಬುದು ಕೇವಲ ಪ್ರಶಸ್ತಿಗಳಿಗಾಗಿ ಮಾಡುವ ಕೆಲಸವಲ್ಲ. ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಮಹತ್ತರ ಕಾರ್ಯವಾಗಿದೆ. ಶಂಕ್ರಪ್ಪ ಹೂಗಾರ ಅವರು ಸಮಾಜದ ಬಡವರಿಗಾಗಿ ಸಲ್ಲಿಸಿರುವ ಸೇವೆ ಇತರರಿಗೂ ಪ್ರೇರಣೆಯಾಗಿದ್ದು, ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಇಡೀ ಹೂಗಾರ ಸಮಾಜಕ್ಕೆ ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಬಾಲಪ್ಪ ಹೂಗಾರ, ಕಾರಟಗಿ ತಾಲೂಕು ಹೂಗಾರ ಸಮಾಜದ ಗೌರವಾಧ್ಯಕ್ಷ ಸೋಮಶೇಖರ್ ಹೂಗಾರ ಗುಂಡೂರು, ಕಾರಟಗಿ ತಾಲೂಕು ಅಧ್ಯಕ್ಷ ಶರಣಪ್ಪ ಈರಣ್ಣ ಹೂಗಾರ, ಉಪಾಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಮಂಜುನಾಥ್ ಹೂಗಾರ, ವೀರೇಶ್ ಹೂಗಾರ, ಹನುಮಂತಪ್ಪ ಹೂಗಾರ ಬೇವಿನಾಳ, ಜಂಬಣ್ಣ ಹೂಗಾರ ಯಮನೂರು, ಸೋಮನಾಳ, ಸಂತೋಷ್ ಕೊನ್ನಾಪುರ, ಧನರಾಜ್ ಪನ್ನಾಪುರ ಸೇರಿದಂತೆ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ಭಾಗದ ಹೂಗಾರ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸಮಾಜದ ಯುವಜನತೆಗೆ ಉತ್ತಮ ಪ್ರೇರಣೆಯಾಗಿದೆ ಎಂದು ಈ ಸಂದರ್ಭದಲ್ಲಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
    4
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರರಿಗೆ ಹೂಗಾರ ಸಮಾಜದಿಂದ ಸನ್ಮಾನ
ಕಾರಟಗಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಬಡವರ ಬಂಧುವಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗಂಗಾವತಿಯ ಗಾಂಧಿ ಸರ್ಕಲ್ ನಿವಾಸಿ ಶಂಕ್ರಪ್ಪ ನರಸಪ್ಪ ಹೂಗಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 23ರಂದು ನಡೆದ ಸಮಾರಂಭದಲ್ಲಿ ಟ್ರಸ್ಟ್‌ನ ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾಜದ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಂಕ್ರಪ್ಪ ಹೂಗಾರ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೂಗಾರ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಸಂಜೆ ಕಾರಟಗಿಯ ಶರಣಪ್ಪ ಹೂಗಾರ ಅವರ ಕಾರ್ಯಾಲಯದಲ್ಲಿ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ತಾಲೂಕುಗಳ ಹೂಗಾರ ಸಮಾಜದ ವತಿಯಿಂದ ಪ್ರಶಸ್ತಿ ಪುರಸ್ಕೃತ ಶಂಕ್ರಪ್ಪ ಹೂಗಾರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಸಮಾಜ ಸೇವೆ ಎಂಬುದು ಕೇವಲ ಪ್ರಶಸ್ತಿಗಳಿಗಾಗಿ ಮಾಡುವ ಕೆಲಸವಲ್ಲ. ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವ ಮಹತ್ತರ ಕಾರ್ಯವಾಗಿದೆ. ಶಂಕ್ರಪ್ಪ ಹೂಗಾರ ಅವರು ಸಮಾಜದ ಬಡವರಿಗಾಗಿ ಸಲ್ಲಿಸಿರುವ ಸೇವೆ ಇತರರಿಗೂ ಪ್ರೇರಣೆಯಾಗಿದ್ದು, ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಇಡೀ ಹೂಗಾರ ಸಮಾಜಕ್ಕೆ ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಬಾಲಪ್ಪ ಹೂಗಾರ, ಕಾರಟಗಿ ತಾಲೂಕು ಹೂಗಾರ ಸಮಾಜದ ಗೌರವಾಧ್ಯಕ್ಷ ಸೋಮಶೇಖರ್ ಹೂಗಾರ ಗುಂಡೂರು, ಕಾರಟಗಿ ತಾಲೂಕು ಅಧ್ಯಕ್ಷ ಶರಣಪ್ಪ ಈರಣ್ಣ ಹೂಗಾರ, ಉಪಾಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಮಂಜುನಾಥ್ ಹೂಗಾರ, ವೀರೇಶ್ ಹೂಗಾರ, ಹನುಮಂತಪ್ಪ ಹೂಗಾರ ಬೇವಿನಾಳ, ಜಂಬಣ್ಣ ಹೂಗಾರ ಯಮನೂರು, ಸೋಮನಾಳ, ಸಂತೋಷ್ ಕೊನ್ನಾಪುರ, ಧನರಾಜ್ ಪನ್ನಾಪುರ ಸೇರಿದಂತೆ ಕಾರಟಗಿ, ಗಂಗಾವತಿ ಹಾಗೂ ಕನಕಗಿರಿ ಭಾಗದ ಹೂಗಾರ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.
ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸಮಾಜದ ಯುವಜನತೆಗೆ ಉತ್ತಮ ಪ್ರೇರಣೆಯಾಗಿದೆ ಎಂದು ಈ ಸಂದರ್ಭದಲ್ಲಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    12 hrs ago
  • ತಾಂತ್ರಿಕ ಸರ್ವರ್ ಸಮಸ್ಯೆ, ನ್ಯಾಯಬೆಲೆ ಅಂಗಡಿ ವಿತರಕರ ಸಂಘ ಮನವಿ ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಯಲ್ಲಿ ವಿಳಂಭವಾಗುತ್ತಿದ್ದು, ಸರಕಾರ ಕೂಡಲೆ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ತಹಸೀಲ್ದಾ‌ರ್ ಮೂಲಕ ಮನವಿ ಸಲ್ಲಿಸಿದರು. ಪಡಿತರ ವಿತರಕರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಚಂದ್ರಶೇಖರ ಕುರ್ಡಿ ಮಾತ ನಾಡಿ, ಮಾನ್ವಿ ಮತ್ತು ಸಿರವಾರ ತಾಲೂಕಿನ ವ್ಯಾಪ್ತಿಯ ಎಲ್ಲಾ ನ್ಯಾಯಾಬೆಲೆ ಅಂಗಡಿಗಳಲ್ಲಿ ಪ್ರಸ್ತುತ ತಿಂಗಳಿನಲ್ಲಿ ಕೆಲ ದಿನಗಳು ಮಾತ್ರ ಪಡಿತರದಾರ ರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ. ಆದರೆ ಕಳೆದ ಕೆಲವು ದಿನಗ ಳಿಂದ ಗಣಕೀಕೃತ ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾ ಡುವುದಕ್ಕೆ ವಿಳಂಭವಾಗುತ್ತಿದೆ. ಹೀಗಾಗಿ ಸರಕಾರ ಸಮಸ್ಯೆ ಯನ್ನು ಅರಿತು ಆದಷ್ಟು ಬೇಗನೆ ಸರಿಪಡಿಸಿ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ಪದಾಧಿ ಕಾರಿಗಳಾದ ರವಿ ಪುಟ್ಟು, ಪವನ್ ರಾವ್, ದೇಶರಾಜ್ ಕೊಡ್ಲಿ, ಮಂಜುನಾಥ ಮಾಡ ಗಿರಿ, ಬಾಲಯ್ಯ ಮದ್ಲಾಪುರ, ಮಹಾಬಳೇಶ್ ಗೌಡ, ಅಮರೇಗೌಡ, ನರಸಿಂಹ ನರಿ,ಸುಬ್ರಹ್ಮಣ್ಯಂ ಶೆಟ್ಟಿ,ನಿಜಾಂ ಪಾಶ, ಅಕ್ಟರ್ ಸಾಬ್,ವಾಜೀದ್ ಸೇರಿದಂತೆ ಇನ್ನಿತರರಿದ್ದರು
    2
    ತಾಂತ್ರಿಕ ಸರ್ವರ್ ಸಮಸ್ಯೆ, ನ್ಯಾಯಬೆಲೆ ಅಂಗಡಿ ವಿತರಕರ ಸಂಘ ಮನವಿ
ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಯಲ್ಲಿ ವಿಳಂಭವಾಗುತ್ತಿದ್ದು, ಸರಕಾರ ಕೂಡಲೆ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ತಹಸೀಲ್ದಾ‌ರ್ ಮೂಲಕ ಮನವಿ ಸಲ್ಲಿಸಿದರು.
ಪಡಿತರ ವಿತರಕರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಚಂದ್ರಶೇಖರ ಕುರ್ಡಿ ಮಾತ ನಾಡಿ, ಮಾನ್ವಿ ಮತ್ತು ಸಿರವಾರ
ತಾಲೂಕಿನ ವ್ಯಾಪ್ತಿಯ ಎಲ್ಲಾ ನ್ಯಾಯಾಬೆಲೆ ಅಂಗಡಿಗಳಲ್ಲಿ ಪ್ರಸ್ತುತ ತಿಂಗಳಿನಲ್ಲಿ ಕೆಲ ದಿನಗಳು ಮಾತ್ರ ಪಡಿತರದಾರ ರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ.
ಆದರೆ ಕಳೆದ ಕೆಲವು ದಿನಗ ಳಿಂದ ಗಣಕೀಕೃತ ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾ ಡುವುದಕ್ಕೆ ವಿಳಂಭವಾಗುತ್ತಿದೆ.
ಹೀಗಾಗಿ ಸರಕಾರ ಸಮಸ್ಯೆ ಯನ್ನು ಅರಿತು ಆದಷ್ಟು ಬೇಗನೆ ಸರಿಪಡಿಸಿ ಪಡಿತರದಾರರಿಗೆ
ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ಪದಾಧಿ ಕಾರಿಗಳಾದ ರವಿ ಪುಟ್ಟು, ಪವನ್ ರಾವ್, ದೇಶರಾಜ್ ಕೊಡ್ಲಿ, ಮಂಜುನಾಥ ಮಾಡ ಗಿರಿ, ಬಾಲಯ್ಯ ಮದ್ಲಾಪುರ, ಮಹಾಬಳೇಶ್ ಗೌಡ, ಅಮರೇಗೌಡ, ನರಸಿಂಹ ನರಿ,ಸುಬ್ರಹ್ಮಣ್ಯಂ ಶೆಟ್ಟಿ,ನಿಜಾಂ ಪಾಶ, ಅಕ್ಟರ್ ಸಾಬ್,ವಾಜೀದ್ ಸೇರಿದಂತೆ ಇನ್ನಿತರರಿದ್ದರು
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    21 hrs ago
  • ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. ಸರ್ಕಾರಕ್ಕೆ ಒತ್ತಾಯ ಮಾಡಿದ ಮಾತೋಶ್ರೀ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. ಬೆಂಗಳೂರಿನ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ದುರ್ಗಾ ಯಲ್ಲಮ್ಮ ಮಾತೆ ಆಗಮನ. ಮಹಿಳೆಯರಿಗೆ ನೈತಿಕ ಬೆಂ‌ಬಲ ಸೂಚಿಸಿ ಹೋರಾಟಕ್ಕೆ ಬೆಂಬಲ ಕೂಡಲೇ ತಮ್ಮ ಹೆಣ್ಣುಮಕ್ಕಳ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು
    1
    ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ. 
ಸರ್ಕಾರಕ್ಕೆ ಒತ್ತಾಯ ಮಾಡಿದ ಮಾತೋಶ್ರೀ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಆಗಮಿಸಿದ ಮಾತೆ.
ಬೆಂಗಳೂರಿನ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ದುರ್ಗಾ ಯಲ್ಲಮ್ಮ ಮಾತೆ ಆಗಮನ.
ಮಹಿಳೆಯರಿಗೆ ನೈತಿಕ ಬೆಂ‌ಬಲ ಸೂಚಿಸಿ ಹೋರಾಟಕ್ಕೆ ಬೆಂಬಲ ಕೂಡಲೇ ತಮ್ಮ ಹೆಣ್ಣುಮಕ್ಕಳ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು
    user_Akshay News
    Akshay News
    News Anchor ಲಿಂಗಸುಗೂರು, ರಾಯಚೂರು, ಕರ್ನಾಟಕ•
    1 hr ago
  • ಲಿಂಗಸುಗೂರು . ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ *ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ – ಜನಸಾಮಾನ್ಯರ ಬದುಕು ದುಸ್ತರ, ದರ ಇಳಿಕೆಗೆ ಆಗ್ರಹ* ಲಿಂಗಸುಗೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ. ಹಾಲಿನ ದರ, ಮೊಸರಿನ ದರ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದಿಂದ ಸಾಮಾನ್ಯ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು. ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಡಿಯಾರ ಚೌಕ, ಜೂನಿಯರ್ ಕಾಲೇಜು ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಜನರಿಗೆ ಸುಳ್ಳು ಭರವಸೆ ನೀಡುತ್ತಿರುವ ಸರ್ಕಾರ, ಬರಗಾಲ ಘೋಷಣೆ ಮಾಡಿದರೂ ರೈತರ ಖಾತೆಗಳಿಗೆ ಸಮರ್ಪಕವಾಗಿ ಪರಿಹಾರದ ಹಣ ಜಮೆ ಮಾಡಿಲ್ಲ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡದೆ ವಂಚಿಸುತ್ತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟದಲ್ಲಿದ್ದು, ಸಾಲ-ಸೂಲ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ಶಾಲೆಗಳಲ್ಲಿ ಶಿಕ್ಷಕರ ಅಭಾವ ಕಾಡುತ್ತಿದೆ. ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಹಲವು ದಿನಗಳಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹10,000 ಗೌರವಧನ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಮನೆಗೆ ಹೋಗಲಿ ಎಂದು ಶಾಸಕ ಮಾನಪ್ಪ ವಜ್ಜಲ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಲಿಂಗಸಗೂರು ಮಂಡಲ ಅಧ್ಯಕ್ಷ ಕೆ. ನಾಗಭೂಷಣ, ಮುದಗಲ್ ಮಂಡಲ ಅಧ್ಯಕ್ಷ ಡಾ. ಮಂಜುನಾಥ ಗುಡಿಹಾಳ, ಗಿರಿಮಲ್ಲನಗೌಡ ಕರಡಕಲ್, ಯಂಕನಗೌಡ ಗುಡದಾಳ, ಜಗನ್ನಾಥ ಕುಲಕರ್ಣಿ, ಮಂಜುನಾಥ ಐದನಾಳ, ಜೂವಲೇಪ್ಪ ನಾಯಕ, ನಿಂಗಣ್ಣ ದೇವಿಕೇರಿ, ನಾರಾಯಣಪ್ಪ ನಾಯಕ, ರಾಜು ಚವ್ಹಾಣ, ಶಂಕರಗೌಡ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
    1
    ಲಿಂಗಸುಗೂರು . ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
*ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ – ಜನಸಾಮಾನ್ಯರ ಬದುಕು ದುಸ್ತರ, ದರ ಇಳಿಕೆಗೆ ಆಗ್ರಹ*
ಲಿಂಗಸುಗೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ. ಹಾಲಿನ ದರ, ಮೊಸರಿನ ದರ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದಿಂದ ಸಾಮಾನ್ಯ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು.
ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಡಿಯಾರ ಚೌಕ, ಜೂನಿಯರ್ ಕಾಲೇಜು ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಜನರಿಗೆ ಸುಳ್ಳು ಭರವಸೆ ನೀಡುತ್ತಿರುವ ಸರ್ಕಾರ, ಬರಗಾಲ ಘೋಷಣೆ ಮಾಡಿದರೂ ರೈತರ ಖಾತೆಗಳಿಗೆ ಸಮರ್ಪಕವಾಗಿ ಪರಿಹಾರದ ಹಣ ಜಮೆ ಮಾಡಿಲ್ಲ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡದೆ ವಂಚಿಸುತ್ತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟದಲ್ಲಿದ್ದು, ಸಾಲ-ಸೂಲ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ಶಾಲೆಗಳಲ್ಲಿ ಶಿಕ್ಷಕರ ಅಭಾವ ಕಾಡುತ್ತಿದೆ. ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಹಲವು ದಿನಗಳಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹10,000 ಗೌರವಧನ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಮನೆಗೆ ಹೋಗಲಿ ಎಂದು ಶಾಸಕ ಮಾನಪ್ಪ ವಜ್ಜಲ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಲಿಂಗಸಗೂರು ಮಂಡಲ ಅಧ್ಯಕ್ಷ ಕೆ. ನಾಗಭೂಷಣ, ಮುದಗಲ್ ಮಂಡಲ ಅಧ್ಯಕ್ಷ ಡಾ. ಮಂಜುನಾಥ ಗುಡಿಹಾಳ, ಗಿರಿಮಲ್ಲನಗೌಡ ಕರಡಕಲ್, ಯಂಕನಗೌಡ ಗುಡದಾಳ, ಜಗನ್ನಾಥ ಕುಲಕರ್ಣಿ, ಮಂಜುನಾಥ ಐದನಾಳ, ಜೂವಲೇಪ್ಪ ನಾಯಕ, ನಿಂಗಣ್ಣ ದೇವಿಕೇರಿ, ನಾರಾಯಣಪ್ಪ ನಾಯಕ, ರಾಜು ಚವ್ಹಾಣ, ಶಂಕರಗೌಡ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
    user_Ragu Lgs
    Ragu Lgs
    ಲಿಂಗಸುಗೂರು, ರಾಯಚೂರು, ಕರ್ನಾಟಕ•
    19 hrs ago
  • ಲಿಂಗಸೂಗೂರು :ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ ಲಿಂಗಸೂಗೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೇರಿ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಿನನಿತ್ಯದ ದಿನಸಿ ಸಾಮಗ್ರಿಗಳ ಬೆಲೆಯನ್ನು ಗಗನಕ್ಕೇರಿಸಿ, ಗ್ಯಾರಂಟಿ ಭರವಸೆಗಳ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದೆ. ಪ್ರತಿ ತಿಂಗಳು ಹಣ ನೀಡುವುದಾಗಿ ಹೇಳಿ, ಮಹಿಳೆಯರಿಗೆ ಮತ್ತು ರೈತರಿಗೆ ಕೇವಲ ಎರಡು ತಿಂಗಳ ಹಣವನ್ನು ಮಾತ್ರ ಜಮಾ ಮಾಡಲಾಗಿದೆ. ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಮುಂದುವರಿದು ಮಾತನಾಡಿದ ಶಾಸಕರು, ಸರ್ಕಾರವು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಅವರಿಂದ ದುಡಿಸಿಕೊಳ್ಳುವ ಸರ್ಕಾರ, ಅವರಿಗೆ ನೀಡುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು. ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರವು ಜನರಿಗಾಗಿಯೇ ಕೆಲಸ ಮಾಡಬೇಕು. ಅಧಿಕಾರ ಎಂಬುದು ಜನರ ಮೇಲೆ ದರ್ಪ ತೋರಿಸಲು ಅಲ್ಲ, ಬದಲಾಗಿ ಜನರ ಸೇವೆ ಮಾಡಲು ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ನಂತರ ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ತಾಲೂಕು ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಗಿರೀಮಲ್ಲನಗೌಡ, ಶಂಕರಗೌಡ,ಜೂವೇಲಪ್ಪ, ನಾರಾಯಣಪ್ಪ,ಸಂಗಪ್ಪ ಗುಂತಾಗೋಳ,ಮುದುಕಪ್ಪ ನಾಯಕ,ವೆಂಕನಗೌಡ ಗುಡದನಾಳ, ಅಮರೇಶ ಹೆಸರೂರು, ಜಗನಾಥ ಕುಲಕರ್ಣಿ,ಜ್ಯೋತಿ, ಸ್ಮಿತಾ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
    4
    ಲಿಂಗಸೂಗೂರು :ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ

ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ
ಲಿಂಗಸೂಗೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೇರಿ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು.
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು 
ರಾಜ್ಯ ಸರ್ಕಾರವು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಿನನಿತ್ಯದ ದಿನಸಿ ಸಾಮಗ್ರಿಗಳ ಬೆಲೆಯನ್ನು ಗಗನಕ್ಕೇರಿಸಿ, ಗ್ಯಾರಂಟಿ ಭರವಸೆಗಳ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದೆ. ಪ್ರತಿ ತಿಂಗಳು ಹಣ ನೀಡುವುದಾಗಿ ಹೇಳಿ, ಮಹಿಳೆಯರಿಗೆ ಮತ್ತು ರೈತರಿಗೆ ಕೇವಲ ಎರಡು ತಿಂಗಳ ಹಣವನ್ನು ಮಾತ್ರ ಜಮಾ ಮಾಡಲಾಗಿದೆ. ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಶಾಸಕರು, ಸರ್ಕಾರವು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಅವರಿಂದ ದುಡಿಸಿಕೊಳ್ಳುವ ಸರ್ಕಾರ, ಅವರಿಗೆ ನೀಡುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು. ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರವು ಜನರಿಗಾಗಿಯೇ ಕೆಲಸ ಮಾಡಬೇಕು. ಅಧಿಕಾರ ಎಂಬುದು ಜನರ ಮೇಲೆ ದರ್ಪ ತೋರಿಸಲು ಅಲ್ಲ, ಬದಲಾಗಿ ಜನರ ಸೇವೆ ಮಾಡಲು ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ತಾಲೂಕು ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಗಿರೀಮಲ್ಲನಗೌಡ, ಶಂಕರಗೌಡ,ಜೂವೇಲಪ್ಪ, ನಾರಾಯಣಪ್ಪ,ಸಂಗಪ್ಪ ಗುಂತಾಗೋಳ,ಮುದುಕಪ್ಪ ನಾಯಕ,ವೆಂಕನಗೌಡ ಗುಡದನಾಳ, ಅಮರೇಶ ಹೆಸರೂರು, ಜಗನಾಥ ಕುಲಕರ್ಣಿ,ಜ್ಯೋತಿ, ಸ್ಮಿತಾ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
    user_Shrikanth RG Lingasuguru
    Shrikanth RG Lingasuguru
    Local News Reporter ಲಿಂಗಸುಗೂರು, ರಾಯಚೂರು, ಕರ್ನಾಟಕ•
    20 hrs ago
  • ರಾಜ್ಯದ್ಯಂತ ಕಡ್ಡಾಯ ಶಿಕ್ಷಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಸರ್ಕಾರಿ ಶಾಲೆಗಳನ್ನ ಖಾಸಗೀಕರಣ ಮಾಡಿ ವಿಲೀನಗೊಳಿಸಬಾರದು ರಾಜ್ಯದ್ಯಂತ ಕಡ್ಡಾಯ ಶಿಕ್ಷಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಬೆಂಗಳೂರು : ಸರ್ಕಾರಿ ಶಾಲೆಗಳನ್ನ ಖಾಸಗೀಕರಣ ಮಾಡಿ ವಿಲೀನಗೊಳಿಸಬಾರದು. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ನವೀಕರಣ ಹರಸರಿನಲ್ಲಿ ಮುಚ್ಚುವ ಹುನ್ನಾರ ಕೈಬಿಡುವಂತೆ ಒತ್ತಾಯಿಸಿದರು, ಇಲ್ಲವಾದಲಿ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    1
    ರಾಜ್ಯದ್ಯಂತ ಕಡ್ಡಾಯ ಶಿಕ್ಷಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ

ಸರ್ಕಾರಿ ಶಾಲೆಗಳನ್ನ ಖಾಸಗೀಕರಣ ಮಾಡಿ ವಿಲೀನಗೊಳಿಸಬಾರದು
ರಾಜ್ಯದ್ಯಂತ ಕಡ್ಡಾಯ ಶಿಕ್ಷಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ
ಬೆಂಗಳೂರು :  ಸರ್ಕಾರಿ ಶಾಲೆಗಳನ್ನ ಖಾಸಗೀಕರಣ ಮಾಡಿ ವಿಲೀನಗೊಳಿಸಬಾರದು.
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ನವೀಕರಣ ಹರಸರಿನಲ್ಲಿ ಮುಚ್ಚುವ ಹುನ್ನಾರ ಕೈಬಿಡುವಂತೆ ಒತ್ತಾಯಿಸಿದರು, ಇಲ್ಲವಾದಲಿ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    user_Akshay News
    Akshay News
    News Anchor ಲಿಂಗಸುಗೂರು, ರಾಯಚೂರು, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.