Shuru
Apke Nagar Ki App…
ಜಮಖಂಡಿಯಲ್ಲಿ ಜೂನ್ 18ರಿಂದ ‘ಮುತ್ತಿನಂತ ಅತ್ತಿಗೆ’ ನಾಟಕ ಪ್ರದರ್ಶನ ಸ್ಥಳ: ಬಸವೇಶ್ವರ ವೃತ್ತ, ಪೆಟ್ರೋಲ್ ಬಂಕ್ ಪಕ್ಕ,
@april14news
ಜಮಖಂಡಿಯಲ್ಲಿ ಜೂನ್ 18ರಿಂದ ‘ಮುತ್ತಿನಂತ ಅತ್ತಿಗೆ’ ನಾಟಕ ಪ್ರದರ್ಶನ ಸ್ಥಳ: ಬಸವೇಶ್ವರ ವೃತ್ತ, ಪೆಟ್ರೋಲ್ ಬಂಕ್ ಪಕ್ಕ,
More news from ಕರ್ನಾಟಕ and nearby areas
- ಜಮಖಂಡಿಯಲ್ಲಿ ಜೂನ್ 18ರಿಂದ ‘ಮುತ್ತಿನಂತ ಅತ್ತಿಗೆ’ ನಾಟಕ ಪ್ರದರ್ಶನ ಸ್ಥಳ: ಬಸವೇಶ್ವರ ವೃತ್ತ, ಪೆಟ್ರೋಲ್ ಬಂಕ್ ಪಕ್ಕ,1
- ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ, ದಲಿತ ಮನುಷ್ಯನಿಗೆ ಆರ್‌ಎಸ್‌ಎಸ್ ವಿಷಯ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.1
- ದಿನಾಂಕ 15-06-2026 ರಂದು ಭೀಮ ಆರ್ಮಿ ಜಿಲ್ಲಾಧ್ಯಕ್ಷ ಬಸವರಾಜ ನೀಲನಾಯಕ ಅವರ ನೇತೃತ್ವದಲ್ಲಿ ಬಾಗಲಕೋಟೆ ನಗರಸಭೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ವಿವಿಧ ಸಮಸ್ಯೆಗಳ ಕುರಿತು ನಗರಸಭೆಗೆ ಮನವಿ ಸಲ್ಲಿಸಲಾಯಿತು. ಈ ಮನವಿಯಲ್ಲಿ, ಪೌರ ಕಾರ್ಮಿಕರಿಗೆ ಮುಂಬಡ್ತಿ ನೀಡುವ ವಿಚಾರವಾಗಿ ಎಷ್ಟು ಕಾರ್ಮಿಕರು ಅರ್ಹರಾಗಿದ್ದಾರೆ ಮತ್ತು ಇದುವರೆಗೆ ಎಷ್ಟು ಮಂದಿಗೆ ಮುಂಬಡ್ತಿ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವಂತೆ ಭೀಮ ಆರ್ಮಿ ಆಗ್ರಹಿಸಿದೆ. ಇದರ ಜೊತೆಗೆ, ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳ ವಿತರಣೆ ಮತ್ತು ಸಂಕಷ್ಟ ಭತ್ಯೆ ನೀಡಿರುವ ಕುರಿತು ಸಹ ಸಮಗ್ರ ಮಾಹಿತಿ ಒದಗಿಸುವಂತೆ ಒತ್ತಾಯಿಸಲಾಯಿತು. ಅಲ್ಲದೆ, ನಗರದ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಕಂಡುಬರುತ್ತಿರುವ ಕೊರತೆಗಳನ್ನು ಸರಿಪಡಿಸಿ, ನಗರದಲ್ಲಿ ಉತ್ತಮ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಭೀಮ ಆರ್ಮಿ ಜಿಲ್ಲಾಧ್ಯಕ್ಷ ಬಸವರಾಜ ನೀಲನಾಯಕ, ತಾಲೂಕು ಅಧ್ಯಕ್ಷ ರಾಜು ಸಿರಾಮ, ನಗರ ಘಟಕ ಅಧ್ಯಕ್ಷ ಸಂತೋಷ ನೀಲನಾಯಕ, ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಜಮೀರ್ ಗಲಗಲಿ, ಅಲ್ಪಸಂಖ್ಯಾತರ ನಗರ ಅಧ್ಯಕ್ಷ ಜಮೀದ್ ಕಲಬುರ್ಗಿ, ರಾಜ ಅಹ್ಮದ್, ಶಿವಕುಮಾರ್ ಪೂಜಾರಿ, ಚಂದ್ರು ಚಲವಾದಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.1
- ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ (ತೃಣಮೂಲ ಕಾಂಗ್ರೆಸ್) ಶಾಸಕರೊಬ್ಬರು ಪೊಲೀಸರ ಮುಂದೆ ಮಂಡಿಯೂರಿ ನಿಂತಿರುವ ಸನ್ನಿವೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಶಾಸಕರ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಬಂಗಾಳದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಹಲವರ ಗಮನ ಸೆಳೆದಿದೆ.1
- ಬೇಸಿಗೆಯ ತೀವ್ರ ಬಿಸಿಲಿನಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ, ಇಂದು ಹಂದ್ಯಾನವಾಡಿ ಗ್ರಾಮದಲ್ಲಿ ಹೊಸ ಬೋರ್‌ವೆಲ್ ಕೊರೆಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರ ಪ್ರಯತ್ನದ ಫಲವಾಗಿ ಆರಂಭಗೊಂಡಿರುವ ಈ ಕಾಮಗಾರಿಯು, ಗ್ರಾಮಸ್ಥರಿಗೆ ನಿರಂತರ ಹಾಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕೈಗೊಂಡಿದ್ದು, ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸುವ ಮಹತ್ವದ ಕಾರ್ಯವಾಗಿದೆ.1
- ಗುಳೇದಗುಡ್ಡದ ಸರಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಕಲಿತ ಕರಿಯಪ್ಪ ಮಾದರ ಎಂಬ ವಿದ್ಯಾರ್ಥಿ ಐಐಟಿ ಮದ್ರಾಸ್ ಇನ್‌ಸ್ಟಿಟ್ಯೂಟ್‌ಗೆ ಆಯ್ಕೆಯಾಗಿ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಡತನ ಮನುಷ್ಯನ ಜೀವನದಲ್ಲಿ ಸಾಧಿಸುವ ಛಲವನ್ನು ಬೆಳೆಸುತ್ತದೆ ಎಂಬುದಕ್ಕೆ ಕರಿಯಪ್ಪ ಅವರ ಸತತ ಅಧ್ಯಯನ ಮತ್ತು ಪರಿಶ್ರಮವೇ ಸಾಕ್ಷಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಶ್ಲಾಘಿಸಿದರು. ಕರಿಯಪ್ಪನ ಈ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ ಎಂದು ಅವರು ಹೇಳಿದರು. ಪಟ್ಟಣದ ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ 2024-25ನೇ ಸಾಲಿನಲ್ಲಿ ಐಐಟಿ ಮದ್ರಾಸ್‌ಗೆ ಕರಿಯಪ್ಪ ಆಯ್ಕೆಯಾದ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕರು ಮಾತನಾಡಿದರು. ಕರಿಯಪ್ಪ ತಮ್ಮ ಮತಕ್ಷೇತ್ರದ ಹಾನಾಪೂರ ಎಸ್.ಪಿ. ಗ್ರಾಮದವರು ಎಂದು ಹೇಳಲು ತಮಗೆ ಹೆಮ್ಮೆಪಡುತ್ತೇನೆ ಎಂದ ಚಿಮ್ಮನಕಟ್ಟಿ, ಐಐಟಿ ಎಂದರೇನು ಎಂದು ಗೊತ್ತಿಲ್ಲದ ತಾಯಿಯ ಮಗ ಐಐಟಿ ಸೇರಿರುವುದು ಹೆಮ್ಮೆಯ ಸಂಗತಿ; ಮಗನ ಪರಿಶ್ರಮಕ್ಕೆ ತಾಯಿ ಬೆನ್ನೆಲುಬಾಗಿ ನಿಂತಿದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದರು. ಬಾಗಲಕೋಟೆ ಜಿಲ್ಲಾ ಪಪೂ (ಶಾಲಾ ಶಿಕ್ಷಣ) ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಕರಿಯಪ್ಪ ಮತ್ತು ಅವರ ತಾಯಿಯನ್ನು ಸನ್ಮಾನಿಸಿದರು. ಇಲಾಖೆಯ ವತಿಯಿಂದ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಕೂಡ ಸನ್ಮಾನ ಸಲ್ಲಿಸಿದರು. ಈ ಸಂದರ್ಭದಲ್ಲಿ, ಗುತ್ತಿಗೆದಾರ ವೈ.ಬಿ. ಹಿರೇಗೌಡರ ಅವರು ಕರಿಯಪ್ಪನ ಶೈಕ್ಷಣಿಕ ಅನುಕೂಲಕ್ಕಾಗಿ ₹50,000 ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಫಕೀರಪ್ಪ ತಳವಾರ, ರಮೇಶ ಹಿರೇಗೌಡರ, ರಾಜು ಸಂಗಮ, ಮೂಕಪ್ಪ ಹುನ್ನೂರ, ಬಿ.ವೈ.ಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು ಜಮಖಂಡಿಯಲ್ಲಿ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಗಾಂಜಾ ಮತ್ತು ಡ್ರಗ್ಸ್ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಮಣ ನಿಂಬರಗಿ ಮತ್ತು ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.1
- ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರ (KCDA)ಕ್ಕೆ ರಾಜ್ಯ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೈಲಹೊಂಗಲದಲ್ಲಿ ಬಂದ್ ಆಚರಿಸಲಾಯಿತು. ಈ ಬಂದ್ ಸಂದರ್ಭದಲ್ಲಿ, ಅಂಗಡಿಗಳನ್ನು ಮುಚ್ಚಿಸುವ ವಿಚಾರವಾಗಿ ಶಿವಾನಂದ ಕೋಲಕಾರ ಮತ್ತು ಡಿಎಸ್‌ಪಿ ಹಿರೇಮಠ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ-ಒತ್ತಾಟದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.1