logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಹಿಳಾ ಸಬಲೀಕರಣಕ್ಕೆ ಎಸ್ ಕೆ ಡಿ ಆರ್ ಡಿಪಿ ಯೋಜನೆ ಸಹಕಾರಿ : ಹರ್ಷವರ್ಧನ ಮಾನ್ವಿ, :  ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಬದಲಾವಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ ಕೆ ಡಿ ಆರ್ ಡಿಪಿ ) ಕಲ್ಯಾಣ ಕರ್ನಾಟಕದಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮುಖ್ಯಗುರುಗಳಾದ ಹರ್ಷವರ್ಧನ ಹೇಳಿದರು. ತಾಲೂಕಿನ ಅಮರೇಶ್ವರ ಕ್ಯಾಂಪಿನಲ್ಲಿ ಎಸ್ ಕೆ ಡಿ ಆರ್ ಡಿಪಿ ಅಡಿಯಲ್ಲಿ ಸ್ಥಾಪಿತವಾದ ಸಾಯಿಬಾಬಾ ಮಹಿಳಾ ಗ್ರಾಮೀಣಾಭಿವೃದ್ಧಿ ಘಟಕದ 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಶಿಕ್ಷಣದ ಪ್ರಾಮುಖ್ಯತೆ ತಿಳಿಸಿ ಅನಕ್ಷರತೆಯನ್ನು ಹೋಗಲಾಡಿಸುವುದೇ ಬಡತನ ನಿರ್ಮೂಲನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಅಮರೇಶ್ವರ ಕ್ಯಾಂಪ್ ಹುಲಿಗಮ್ಮ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ದೇವಿ ಆರಾಧಕರಾದ ಹನುಮಂತಿ ಅಮ್ಮನವರು, ಶರಣಮ್ಮ ಮುಖ್ಯಗುರುಗಳು, ಸಂಘದ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಇನ್ನಿತರರಿದ್ದರು. ಈ ಕಾರ್ಯಕ್ರಮದಲ್ಲಿ ಐದು ಗುಂಪುಗಳ ಪ್ರತಿನಿಧಿಗಳು ಆಟೋಟ, ರಂಗೋಲಿ ಸ್ಪರ್ಧೆ, ಭಜನಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಗ್ರಾಮೀಣಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಿ ಮತ್ತು ಶ್ರೀದೇವಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

3 hrs ago
user_ದೇವು ಬ್ಯಾಗವಾಟ್
ದೇವು ಬ್ಯಾಗವಾಟ್
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
3 hrs ago
9122c3d4-55d2-4892-8e17-26b7088949a4

ಮಹಿಳಾ ಸಬಲೀಕರಣಕ್ಕೆ ಎಸ್ ಕೆ ಡಿ ಆರ್ ಡಿಪಿ ಯೋಜನೆ ಸಹಕಾರಿ : ಹರ್ಷವರ್ಧನ ಮಾನ್ವಿ, :  ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಬದಲಾವಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ ಕೆ ಡಿ ಆರ್ ಡಿಪಿ ) ಕಲ್ಯಾಣ ಕರ್ನಾಟಕದಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮುಖ್ಯಗುರುಗಳಾದ ಹರ್ಷವರ್ಧನ ಹೇಳಿದರು. ತಾಲೂಕಿನ ಅಮರೇಶ್ವರ ಕ್ಯಾಂಪಿನಲ್ಲಿ ಎಸ್ ಕೆ ಡಿ ಆರ್ ಡಿಪಿ ಅಡಿಯಲ್ಲಿ ಸ್ಥಾಪಿತವಾದ ಸಾಯಿಬಾಬಾ ಮಹಿಳಾ ಗ್ರಾಮೀಣಾಭಿವೃದ್ಧಿ ಘಟಕದ 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಶಿಕ್ಷಣದ ಪ್ರಾಮುಖ್ಯತೆ ತಿಳಿಸಿ ಅನಕ್ಷರತೆಯನ್ನು ಹೋಗಲಾಡಿಸುವುದೇ ಬಡತನ ನಿರ್ಮೂಲನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಅಮರೇಶ್ವರ ಕ್ಯಾಂಪ್ ಹುಲಿಗಮ್ಮ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ದೇವಿ ಆರಾಧಕರಾದ ಹನುಮಂತಿ ಅಮ್ಮನವರು, ಶರಣಮ್ಮ ಮುಖ್ಯಗುರುಗಳು, ಸಂಘದ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಇನ್ನಿತರರಿದ್ದರು. ಈ ಕಾರ್ಯಕ್ರಮದಲ್ಲಿ ಐದು ಗುಂಪುಗಳ ಪ್ರತಿನಿಧಿಗಳು ಆಟೋಟ, ರಂಗೋಲಿ ಸ್ಪರ್ಧೆ, ಭಜನಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಗ್ರಾಮೀಣಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಿ ಮತ್ತು ಶ್ರೀದೇವಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

More news from ಕರ್ನಾಟಕ and nearby areas
  • ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ. ಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮೃತಪಟ್ಟಿದ್ದ ಸಿರವಾರ ಪಟ್ಟಣದ ಯುವಕ ಪ್ರೇಮ್ ಸುಂದರ್ ಅವರ ಸ್ಮರಣಾರ್ಥದ ಪ್ರಯುಕ್ತ ಸಿರವಾರ ಪಟ್ಟಣದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು. ಪ್ರೇಮ್ ಸುಂದರ ಅವರ ಸರಳತೆ, ನಡೆ, ನುಡಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು. ಪ್ರೇಮ್ ಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಪಟ್ಟಣದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
    1
    ಮೇಣದ ಬತ್ತಿ ಹಚ್ಚಿ ಮೆರವಣಿಗೆ  ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ.
ಮೇಣದ ಬತ್ತಿ ಹಚ್ಚಿ ಮೆರವಣಿಗೆ  ಮೂಲಕ ಪ್ರೇಮ್ ಸುಂದರ್ ಗೆ ನಮನ ಸಲ್ಲಿಕೆ.
ಸಿರವಾರ: ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ಅವಘಡ ಸಂಭವಿಸಿ  ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮೃತಪಟ್ಟಿದ್ದ ಸಿರವಾರ ಪಟ್ಟಣದ ಯುವಕ ಪ್ರೇಮ್ ಸುಂದರ್ ಅವರ ಸ್ಮರಣಾರ್ಥದ ಪ್ರಯುಕ್ತ ಸಿರವಾರ ಪಟ್ಟಣದಲ್ಲಿ ಮಂಗಳವಾರ ಸಂಜೆ ಮೇಣದ ಬತ್ತಿ ಹಚ್ಚಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ನಮನ ಸಲ್ಲಿಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದ ವರೆಗೆ ನಡೆಯಿತು. 
ಪ್ರೇಮ್ ಸುಂದರ ಅವರ ಸರಳತೆ, ನಡೆ, ನುಡಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು.
ಪ್ರೇಮ್ ಸುಂದರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಪಟ್ಟಣದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
    user_Mallikarjun Athnoor
    Mallikarjun Athnoor
    ಸಿರ್ವಾರ, ರಾಯಚೂರು, ಕರ್ನಾಟಕ•
    22 hrs ago
  • ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    1
    ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    8 hrs ago
  • ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು. ಲಿಂಗಸುಗೂರು : ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.
    1
    ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ವಿಗ್ರಹಕ್ಕೆ ಆರತಿ ಮಾಡಿದರು.
ಲಿಂಗಸುಗೂರು :
ಕಾಗಿನೆಲೆ ಶ್ರೀ ಕನಕ ಗಿರುಪೀಠ ಹೊಸಕೋಟೆಯ ಪರಮ ಪೂಜ್ಯ ಶ್ರೀ ಈಶ್ವರನಂದಪುರಿ ಸ್ವಾಮಿಜಿಗಳು ಗಣೇಶ ಚತುರ್ಥಿ ದಿನದ ಹಂಗವಾಗಿ ವಿಘ್ನವಿನಾಶಕ ಶ್ರೀ ವಿನಾಯಕನ ವಿಗ್ರಹಕ್ಕೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು.
    user_ಎಸ್.ಬಿ. ಒಡೆಯರ್ ಮುದಗಲ್
    ಎಸ್.ಬಿ. ಒಡೆಯರ್ ಮುದಗಲ್
    ಲಿಂಗಸುಗೂರು, ರಾಯಚೂರು, ಕರ್ನಾಟಕ•
    13 hrs ago
  • ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಗಣ್ಯರು ಚಾಲನೆ ನೀಡಿದರು. ವಾರ್ಡಿನ ಮುಖಂಡರಾದ ಅಯ್ಯಪ್ಪ ವಕೀಲರು ಎಕ್ಸ್ಪರ್ಟ್ ಸ್ಕೂಲಿನ ಮುಖ್ಯಸ್ಥರಾದ ನಾಗರೆಡ್ಡಿ ಅವರು ಮಾತನಾಡಿ ವಾರ್ಡಿನ ಯುವಕರು ಗಣೇಶ್ ಮಂಡಳಿಗೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತ ಬಂದಿದ್ದಾರೆ ಇಂತಹ ಯುವಕ ಮಂಡಳಿ ಸದಸ್ಯರಿಗೆ ವಾರ್ಡಿನ ಪ್ರತಿಯೊಬ್ಬರು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಗಣೇಶೋತ್ಸವವನ್ನು ಆಚರಣೆ ಮಾಡಲು ಸರ್ಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿದರು. ಗಣೇಶ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮಹಿಳೆಯರಿಗೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ವೇದಿಕೆ ಮೇಲೆ ಸಂಗನಗೌಡ ಆರ್ ಎಸ್ ಗೌಡ ಪ್ರಭುಸ್ವಾಮಿ ಕುಪ್ಪಣ್ಣ ಸೇರಿದಂತೆ ಗಣೇಶ್ ಮಂಡಳಿಯ ಸದಸ್ಯರು ವಾರ್ಡಿನ ಗುರುಹಿರಿಯರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಸವರಾಜ್ ಹಿರೇಮಠ ನಡೆಸಿಕೊಟ್ಟರು.
    4
    ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ 
ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಗಣ್ಯರು ಚಾಲನೆ ನೀಡಿದರು.
ವಾರ್ಡಿನ ಮುಖಂಡರಾದ ಅಯ್ಯಪ್ಪ ವಕೀಲರು ಎಕ್ಸ್ಪರ್ಟ್  ಸ್ಕೂಲಿನ ಮುಖ್ಯಸ್ಥರಾದ  ನಾಗರೆಡ್ಡಿ ಅವರು ಮಾತನಾಡಿ ವಾರ್ಡಿನ ಯುವಕರು ಗಣೇಶ್ ಮಂಡಳಿಗೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತ ಬಂದಿದ್ದಾರೆ ಇಂತಹ ಯುವಕ ಮಂಡಳಿ ಸದಸ್ಯರಿಗೆ ವಾರ್ಡಿನ ಪ್ರತಿಯೊಬ್ಬರು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಗಣೇಶೋತ್ಸವವನ್ನು ಆಚರಣೆ ಮಾಡಲು ಸರ್ಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿದರು. ಗಣೇಶ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಮಹಿಳೆಯರಿಗೆ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು 
ವೇದಿಕೆ ಮೇಲೆ ಸಂಗನಗೌಡ ಆರ್ ಎಸ್ ಗೌಡ ಪ್ರಭುಸ್ವಾಮಿ ಕುಪ್ಪಣ್ಣ ಸೇರಿದಂತೆ ಗಣೇಶ್ ಮಂಡಳಿಯ ಸದಸ್ಯರು ವಾರ್ಡಿನ ಗುರುಹಿರಿಯರು  ಮಹಿಳೆಯರು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಸವರಾಜ್ ಹಿರೇಮಠ ನಡೆಸಿಕೊಟ್ಟರು.
    user_ಸಿದ್ದನಗೌಡ ಪಾಟೀಲ್
    ಸಿದ್ದನಗೌಡ ಪಾಟೀಲ್
    Lingsugur, Raichur•
    22 hrs ago
  • ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    1
    ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ
ಯಾದಗಿರಿ-ರಾಯಚೂರು ಹೆದ್ದಾರಿಯ ಆರ್.
ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    1 hr ago
  • ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    2
    ಗಣೇಶ ಚತುರ್ಥಿ ಅಂಗವಾಗಿ ಕಾರಟಗಿಯಲ್ಲಿ ಸ್ಥಳೀಯ ಕಲಾವಿದರಿಂದ ತತ್ವಪದಗಳು
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    15 hrs ago
  • ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ! ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು. “ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    1
    ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!

ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.

ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.

ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಯಾದಗೀರ್ ರಾಜಕಾರಣದಲ್ಲಿ ಹೊಸ ಹೆಜ್ಜೆ: ಕೆಆರ್‌ಎಸ್‌ಗೆ ಯಾದ್ಗೀರ್ ನ್ಯೂಸ್ ಸಂಪಾದಕ ರಫಿಕ್ ಪಟೇಲ್ ಸೇರ್ಪಡೆ!
ಯಾದಗಿರಿ: ಯಾದ್ಗೀರ್ ನ್ಯೂಸ್ ಸಂಪಾದಕರಾದ ಮೊಮ್ಮದ್ ರಫಿಕ್ ಪಟೇಲ್ ಅವರು ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.
ಕೆಆರ್‌ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ರಫಿಕ್ ಪಟೇಲ್ ಅವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.
“ಜನರ ಸಮಸ್ಯೆಗಳನ್ನು ಪ್ರಶ್ನಿಸುವ ಧ್ವನಿ ಇನ್ನು ಮುಂದೆ ರಾಜಕೀಯ ವೇದಿಕೆಯಲ್ಲೂ ಮೊಳಗಲಿದೆ” ಎಂಬ ಸಂದೇಶದೊಂದಿಗೆ ಅವರ ರಾಜಕೀಯ ಪ್ರವೇಶ ಕುತೂಹಲ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಪಕ್ಷ ಸೇರಿರುವುದಾಗಿ ರಫಿಕ್ ಪಟೇಲ್ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ ಗುರುತಿಸಿಕೊಂಡಿರುವ ರಫಿಕ್ ಪಟೇಲ್ ಅವರ ರಾಜಕೀಯ ಪ್ರವೇಶವು ಯಾದಗಿರಿ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆಯೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    12 min ago
  • ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು. ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    1
    ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.