Shuru
Apke Nagar Ki App…
ಶ್ರೀ ರಾಘವೇಂದ್ರ catering ಸರ್ವಿಸ್ ಆಲೂರು ನಿಮ್ಮ ಕೈ ಗೆ ಎಟುಕುವ ದರದಲ್ಲಿ ವಿಶೇಷ ಆಫರ್ ಗಳೊಂದಿಗೆ ಕನಿಷ್ಠ ೫೦ ರಿಂದ ಗರಿಷ್ಠ ೬೦೦ ರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ..... ಶುದ್ಧ ಸಸ್ಯಾಹಾರಿ ಹಾಗೂ ಮಾಂಸ ಹಾರಿಯ ಸತ್ವ ಭೋಜನ ಸಿದ್ಧ ಪಡಿಸಲಾಗುವುದು .... ಕಾಂಟ್ಯಾಕ್ಟ್ ೬೩೬೪೩೪೫೪೯೬
Prashanth Prashuuu k
ಶ್ರೀ ರಾಘವೇಂದ್ರ catering ಸರ್ವಿಸ್ ಆಲೂರು ನಿಮ್ಮ ಕೈ ಗೆ ಎಟುಕುವ ದರದಲ್ಲಿ ವಿಶೇಷ ಆಫರ್ ಗಳೊಂದಿಗೆ ಕನಿಷ್ಠ ೫೦ ರಿಂದ ಗರಿಷ್ಠ ೬೦೦ ರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ..... ಶುದ್ಧ ಸಸ್ಯಾಹಾರಿ ಹಾಗೂ ಮಾಂಸ ಹಾರಿಯ ಸತ್ವ ಭೋಜನ ಸಿದ್ಧ ಪಡಿಸಲಾಗುವುದು .... ಕಾಂಟ್ಯಾಕ್ಟ್ ೬೩೬೪೩೪೫೪೯೬
More news from ಕರ್ನಾಟಕ and nearby areas
- Post by Rahul shetty Rahul shetty Rahu1
- Post by Manjuanatha k2
- Post by Masood khan1
- ನಂಜನಗೂಡು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಮೂವರಿಗೆ ಗಂಭೀರ ಗಾಯಗೊಂಡು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ. ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನ (16) ಮೃತ ದುರ್ದೈವಿ. ಮಹದೇವಸ್ವಾಮಿ ತನ್ನ ಪತ್ನಿ, ಮಗಳು ಮತ್ತು ಮಗನ ಜೊತೆ ಬೈಕ್ ನಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಾಪಸ್ ಮಡುವಿನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಹೆಡಿಯಾಲ ಮತ್ತು ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಾಲ್ವರು ಬಿದ್ದಿದ್ದಾರೆ. ಈ ವೇಳೆ ನಾಲ್ವರಿಗೂ ಗಂಭೀರ ಗಾಯಗಳಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಸಿಂಚನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಂಚನ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಪಘಾತ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಪ್ರಕರಣದ ಪಿರ್ಯಾದುದಾರರಾದ ಉಡುಪಿ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ಎಂಬವರ ದೂರಿನಂತೆ, ಪಿರ್ಯಾದಿದಾರರು ದಿನಾಂಕ 18-04-2026 ರಂದು ರಾತ್ರಿ ಪುತ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸ್ನೇಹಿತರೊಂದಿಗೆ ಬಂದಿದ್ದು, ಜಾತ್ರೆಯ ಗದ್ದೆಯಲ್ಲಿ ಏರ್ಪಡಿಸಿದ್ದ ಸುಡುಮದ್ದು ಪ್ರದರ್ಶನವನ್ನು ದೂರದಲ್ಲಿ ನಿಂತು ಸ್ನೇಹಿತರೊಂದಿಗೆ ನಿಂತು ವೀಕ್ಷಿಸುತ್ತಿರುವಾಗ, ಸುಡುಮದ್ದಿನ ಬೆಂಕಿ ಪಿರ್ಯಾದಿದಾರರಿಗೂ ಹಾಗೂ ಭರತ್,ಕೌಶಿಕ್,ಸೌಮ್ಯ,ದೀಪಕ್ ,ಯಶವಂತ್ ,ಮೋಹನ್ ಎಂಬವರುಗಳ ಮೇಲೆ ಬಿದ್ದಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ಸ್ನೇಹಿತರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಸುಡುಮದ್ದು ನಿರ್ವಹಣೆ ಮಾಡುವವರು ಹಾಗೂ ದೇವಸ್ಥಾನ ವ್ಯವಸ್ಥಾನ ಸಮಿತಿಯವರು ಮತ್ತು ಇತರರು ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳದೇ ನಿರ್ಲಕ್ಷತ ತೋರಿರುವುದಾಗಿ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:45/2026 ಕಲಂ: 288,125(a), 3(5), BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.1
- ಕರಬೂಜ ಹಣ್ಣಿನ ಜ್ಯೂಸ್ (Muskmelon Juice)*ಹಬ್ಬಗಳಲ್ಲಿ ಮಾಡುವಂತಹ ನಿಮಿಷದಲ್ಲಿ ಈ ಕರ್ಬೂಜ ಹಣ್ಣಿನ ಜೂಸ್ ಮಾಡಿ ಕುಡಿಯಿರಿ | #ಕರ್ಬೂಜ #Milk #ಖರಬೂಜ #ಹಣ್ಣಿನಜ್ಯೂಸು | #KharbujaJuice recipe | #MuskMelonJuic ಬೇಸಿಗೆಯ ಅತ್ಯಂತ ತಂಪಾದ ಮತ್ತು ಆರೋಗ್ಯಕರ ಪಾನೀಯವಾಗಿದೆ. ಇದನ್ನು ಸುಲಭವಾಗಿ ಮಾಡಲು ಕರಬೂಜದ ತಿರುಳು, ಹಾಲು ಅಥವಾ ನೀರು, ಸಕ್ಕರೆ/ಜೇನುತುಪ್ಪ ಮತ್ತು ಐಸ್ ಕ್ಯೂಬ್‌ಗಳನ್ನು ಬ್ಲೆಂಡರ್‌ನಲ್ಲಿ ನುಣ್ಣಗೆ ರುಬ್ಬಿ, ತಕ್ಷಣವೇ ಸೇವಿಸಿ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಬಿಪಿ ಕಂಟ್ರೋಲ್ ಮಾಡಲು ಸಹಕಾರಿಯಾಗಿದೆ.1
- ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರಶಿವಯೋಗಿಗಳರವರ ಕರ್ತೃ ಗದ್ದುಗೆ ಆಮಾವಾಸ್ಯೆ ವಿಶೇಷ ಪೂಜೆ -ದರ್ಶನಕ್ಕ ಹರಿದು ಬಂದ ಜನಸಾಗರ • ಜಗದ್ಗುರು ಶ್ರೀವೀರಸಿಂಹಾಸನ ಮಹಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ಅರ್ಶೀವಾದ ಪಡೆದು ಪುನಿತರಾದ ಭಕ್ತರು ನಂಜನಗೂಡು :ಆಮಾವಾಸ್ಯೆ ಶುಕ್ರವಾರದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆ ದರ್ಶನಕ್ಕ ಅಪಾರ ಜನರು ಅಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆಗೆ ಅಪಾರ ಭಕ್ತ ಸಮೂಹವೇ ಅಗಮಿಸಿ ದರ್ಶನ ಪಡೆದು ನಂತರ ಪರಮ ಪೂಜ್ಯರ ಅರ್ಶೀವಾದ ಪಡೆದರು. ಶುಕ್ರವಾರ ನಡೆದ ವಿಶೇಷ ಪೂಜೆಯಲ್ಲಿ ಲಿಂಗೈಕ್ಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಹಾಗೂ ಆದಿ ಜಗದ್ಗುರುಗಳ ಉತ್ಸವಮೂರ್ತಿಗೆ ಶ್ರೀ ನಂಜುAಡೇಶ್ವರ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು,ಹೂವಿನ ಅಲಂಕಾರದ ವಿಶೇಷ ದರ್ಶನ ಎಲ್ಲರ ಭಕ್ತರ ಮನಸೂರಗೊಂಡಿತು. ಮಹಾ ಮಂಗಳಾರತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಕತೃ ಗದ್ದುಗಳಿಗೆ ಉತ್ಸವ ಮೂರ್ತಿಗಳಿಗೆ ಶ್ರೀ ನಂಜುAಡೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದರು ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಭಕ್ತರಿಗೂ ಆಶೀರ್ವದಿಸಿದರು . ಅದರಲ್ಲೂ ಈ ಬಾರಿ ಬಸವ ಜಯಂತಿ ನಡೆಯುತ್ತಿರುವುದರಿಂದ ರಾಜ್ಯದ ಹಲವೆಡೆಯಿಂದ ಪೂಜ್ಯರನ್ನು ಆಹ್ವಾನಿಸಲು ತಂಡೋಪ ತಂಡವಾಗಿ ಸಾವಿರಾರು ಜನರು ಆಗಮಿಸಿ, ಪೂಜ್ಯರ ದರ್ಶನ ಪಡೆಯಲು ಅವರ ಆಹ್ವಾನಿಸಲು ಜನ ಸಾಗರವೇ ನೆರೆದಿತ್ತು.ಈ ನಡುವೆ ನಾವುಗಳು ಕರ್ತೃ ಗದ್ದುಗೆ ದರ್ಶನ ಪಡೆದು ಪೂಜ್ಯರನ್ನು ದಿ ಯುನೈಟಡ್ ಅಕಾಡೆಮಿ ನೂತನ ಶಾಲೆಯ ಉದ್ಘಾಟನೆಗೆ ಅಹ್ವಾನಿಸಿದೆವು,ಪರಮಪೂಜ್ಯರು ನಮ್ಮ ಅಹ್ವಾನವನ್ನು ಸ್ವೀಕರಿಸಿ ಅಗಮಿಸುವ ಅರ್ಶೀವಾದ ನೀಡಿದರು.ಇದು ನಮ್ಮ ಪುಣ್ಯವಾಗಿದೆ,1
- ಪ್ರಕರಣದ ಪಿರ್ಯಾದುದಾರರಾದ ಮಂಗಳೂರು ಕದ್ರಿಹಿಲ್ಸ್ ನಿವಾಸಿ ಡಾ| ಅರವಿಂದ ರಾವ್ ಕೇದಿಗೆ ಎಂಬವರ ದೂರಿನಂತೆ, ಮಾನ್ಯ ಸಿಜೆ ಮತ್ತು ಜೆಎಂಎಫ್ ಸಿ ಬಂಟ್ವಾಳ ನ್ಯಾಯಾಲಯದ ಅದೇಶದ ಮೇರೆಗೆ ಪಿರ್ಯಾದುದಾರರ ಸುಪರ್ಧಿಯಲ್ಲಿದ್ದ ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೇಯ ಕಟ್ಟಡ ಮತ್ತು ಜಮೀನಿಗೆ, ಪುತ್ತೂರಿನಲ್ಲಿರುವ ದೇವಸ್ಥಾನದ ಪದಾಧಿಕಾರಿಗಳಾದ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಇತರರು ದಿನಾಂಕ: 14-04-2026 ರಂದು ರಾತ್ರಿ ಅಕ್ರಮವಾಗಿ ಪ್ರವೇಶಿಸಿ, ಸದ್ರಿ ಜಮೀನಿನಲ್ಲಿದ್ದ ಹಳೇಯ ಕಟ್ಟಡವನ್ನು ಕೆಡವಿರುತ್ತಾರೆ ಎಂಬುದಾಗಿ ದಿನಾಂಕ : 17.04.2026 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44/2026, ಕಲಂ: 329(3), 324(2) ಜೊತೆಗೆ 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.1