Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನನ ಮೇಲೆ ಹಲ್ಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನೆಡೆದಿದೆ. ಮುದ್ದು ಮಾದೇಗೌಡ (40) ಹಲ್ಲೆಗೊಳಗಾದ ವಿಶೇಷಚೇತನನಾಗಿದ್ದು ಸದ್ಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಮಾರ್ಚ್ 31ರಂದು ಮುದ್ದು ಮಾದೇಗೌಡ ಮೂರು ಚಕ್ರದ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು ಈ ವೇಳೆ ಗ್ರಾಮದ ಬಸವಣ್ಣ ಎಂಬ ವ್ಯಕ್ತಿ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿದ್ದ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ವಿಶೇಷ ಚೇತನ ಎಂಬುದನ್ನ ನೋಡದೆ ವಾಹನ ಅಡ್ಡ ಹಾಕಿ ಬಸವಣ್ಣ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- *ಭಾರತ ನಲ್ಲಿ ವೈರಲ್*1
- SHINE ARENA F⚽⚽TBALL AND CRICKET 🏏 TRUF INNAGURATED IN RAJIV NAGAR MYSURU #kvnews1
- STATEMENT GIVEN BY SYED ASIM GENERAL SECRETARY MYSORE CITY KPCC1
- ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಹಿರಿಕಾಟಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯವಾದ ರಸ್ತೆ ನಿರ್ಮಾಣ ಇನ್ನೂ ಸಾಕಾರವಾಗದೇ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಾಗಿ ಉಳಿದಿದ್ದು, ವಾಹನ ಸಂಚಾರ ಹೆಚ್ಚಾದಾಗ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತದೆ. ಈ ಧೂಳು ನೇರವಾಗಿ ಮನೆಗಳೊಳಗೆ ಪ್ರವೇಶಿಸುತ್ತಿದ್ದು, ದಿನನಿತ್ಯದ ಜೀವನವೇ ಸಂಕಷ್ಟಕರವಾಗಿದೆ. ಮಕ್ಕಳಿಗೆ ಉಸಿರಾಟದ ತೊಂದರೆ, ವೃದ್ಧರಿಗೆ ಕೆಮ್ಮು, ಅಲರ್ಜಿ ಹಾಗೂ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಗಳು ಹೆಚ್ಚಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಯಾಗುತ್ತದೆ. ಮಣ್ಣಿನ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟು ಜನರು ಸಂಚಾರ ಮಾಡಲು ಪರದಾಡಬೇಕಾಗುತ್ತದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಾಹನಗಳು ಗ್ರಾಮಕ್ಕೆ ಸುಲಭವಾಗಿ ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ರಸ್ತೆ ನಿರ್ಮಾಣದ ಭರವಸೆ ನೀಡಲಾಗುತ್ತದೆ. ಆದರೆ ನಂತರ ಸಮಸ್ಯೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಶತಮಾನ ಕಳೆದರೂ ಗ್ರಾಮಕ್ಕೆ ಪಕ್ಕಾ ರಸ್ತೆ ಸಿಗದಿರುವುದು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮೂಡಿಸಿದೆ. ತಕ್ಷಣವೇ ಹಿರಿಕಾಟಿ ಗ್ರಾಮಕ್ಕೆ ಶಾಶ್ವತ ಡಾಂಬರು ರಸ್ತೆ ನಿರ್ಮಿಸಿ ಧೂಳು ಸಮಸ್ಯೆಗೆ ಅಂತ್ಯ ಕಲ್ಪಿಸಬೇಕು. ಜೊತೆಗೆ ಗ್ರಾಮಸ್ಥರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆ ಎಚ್ಚೆತ್ತು ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸುತ್ತಾರೆಯೇ ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.3
- ಮಳವಳ್ಳಿ: ಡಿ.ಹಲಸಹಳ್ಳಿ ಗವಿ ಬಸವೇಶ್ವರ ಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ-ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ ಮಳವಳ್ಳಿ:ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ದ ಗವಿಬಸವೇಶ್ವರ ಮಠ (ಗವಿಮಠ)ದ ಮುಂಭಾಗ ನೂತನವಾಗಿ ನಿರ್ಮಿಸಿರುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಗವಿಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು. ಈ ಸಂಭ0ದ ಹಲಗೂರಿನಲ್ಲಿ ಗವಿಮಠದಲ್ಲಿ ನಡೆಯುವ ಏಪ್ರಿಲ್ 28ರಿಂದ ಮೇ 1 ರವರೆಗೆ ನಡೆಯಲಿರುವ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹಲಗೂರಿನಲ್ಲಿ ಭಕ್ತರು ದಾಸೋಹಕ್ಕೆ ನೀಡುವ ಅಕ್ಕಿ, ದವಸ ಧಾನ್ಯಗಳನ್ನು ಸಂಗ್ರಹಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮ ಪೂಜ್ಯ ಸುತ್ತೂರಿನ ಜಗದ್ಗುರುಗಳು,ಸಿದ್ಧಗಂಗಾ, ಆದಿಚುಂಚನಗಿರಿ, ಕೊಪ್ಪಳದ ಗವಿಸಿದ್ದೇಶ್ವರ, ಕನಕಪುರ ಶ್ರೀಗಳು ಸೇರಿದಂತೆ ಇನ್ನೂ ಇತರ ಹರ ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ರಾಜಗೋಪುರ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ವಿವರ: ಏ.28 ರಿಂದ ಅರಂಭವಾಗಲಿರುವ ಕಾರ್ಯಕ್ರಮವು 29,30 ಮತ್ತು ಮೇ 1 ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರ ಗವಿಮಠ, ಶ್ರೀ ಗವಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ದಾಸೋಹ ಮಠ ಮತ್ತು ಮಹಾ ಕವಿ ಶ್ರೀ ಷಡಕ್ಷರ ದೇವರ ಮಂಗಳಮAಟಪದ ನೂತನ ಕಟ್ಟಡ ಉದ್ಘಾಟನೆ ಮತ್ತು ರಾಜಗೋಪುರ ಹಾಗೂ ಬಸವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು. ಗವಿಮಠದಲ್ಲಿ ನಾಲ್ಕು ದಿನಗಳ ಕಾಲಪ್ರತಿ ದಿನ ದಾಸೋಹ ಸೇವೆ ಮಾಡಲಾಗಿದ್ದು,ಇದರ ಅಂಗವಾಗಿ ಹಲಗೂರಿನಲ್ಲಿ ಭಕ್ತಾದಿಗಳು ದಾಸೋಹಕ್ಕೆ ಸಹಕಾರ ನೀಡಿದ್ದಾರೆ.ಇದಲ್ಲದೆ ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸಹ ಹೆಚ್ಚಿನ ಸಹಕಾರ ಕೋರಲಾಗಿದೆ ಎಂದ ಅವರು ದಾಸೋಹಕ್ಕೆ ಸಹಾಯ ಮಾಡುವುದರೊಂದಿಗೆ ನಾಲ್ಕು ದಿನಗಳ ಕಾಲ ಭಕ್ತಾದಿಗಳು ಭಾಗವಹಿಸಿ, ಷಡಕ್ಷರ ದೇವರ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾದ ಮಹದೇವಸ್ವಾಮಿ, ವಿದ್ಯುತ್ ಇಲಾಖೆಯ ನಿವೃತ್ತ ಅಧಿಕಾರಿ ನಂಜುAಡಸ್ವಾಮಿ, ಎಚ್.ಎಮ್.ಚಂದ್ರು, ಮಹದೇವಸ್ವಾಮಿ, ಕಿರಣ, ಸ್ವಾಮಿ, ಶಿವಪ್ರಸಾದ, ಮಹೇಶ ,ಪ್ರಮೋದ ,ರವಿ, ಚೇತ, ಗಿರೀಶ ,ಪ್ರಭು ,ಶಿವಣ್ಣ, ಇತರರು ಉಪಸ್ಥಿತರಿದ್ದರು.1
- ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಶಾಸಕರು ಸಮಾಜದ ಜನರ ಒಪ್ಪಿಗೆಯಂತೆ ಸರ್ಕಾರದ ಮಾರ್ಗ ಸೂಚಿಯಂತೆ ಜಯಂತಿ ಆಚರಿಸಲು ತಿಳಿಸಿದ್ದು ಅದರಂತೆ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಎಂದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಕೇಶವಮೂರ್ತಿ, ಶಿಕ್ಷಣಾಧಿಕಾರಿ ಮಹೇಶ್, ಕಾವೇರಿ ನಿಗಮದ ಎಇಇ ಕರುಣಾಮಯಿ, ಪರಿಶಿಷ್ಟ ವರ್ಗ ಇಲಾಖೆ ರಾಜೇಶ್, ಪ.ಪಂ. ಮುಖ್ಯಾಧಿಕಾರಿ ರೇಖಾ,ಜಿ.ಪಂ ಎಇಇ ಕುಮಾರ್, ಸಿಡಿಪಿಒ ಅಂಬಿಕಾ, ಅಗ್ನಿಶಾಮಕ ಮಹೇಶ್,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಾಳ್ಯ ರಾಚಪ್ಪ,ಸಮುದಾಯದ ಮುಖಂಡರಾದ ನಾಗರಾಜು,ಬಸವರಾಜು,ಸಿದ್ದರಾಜು, ಯಜಮಾನರಾದ ಮಹೇಶ್ ಕಿರಣ್, ದಲಿತ್ ಸಿದ್ದರಾಜು,ಲಿಂಗರಾಜು, ದೇವರಾಜು ಹಾಗೂ ಯುವಕರು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.4
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವೆಡೆ ಮಳೆ ಉಂಟಾಗಿದ್ದು ಬಿರು ಬಿಸಿಲಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕುವೆಂಪು ನಗರ, ವಿದ್ಯಾರಣ್ಯಪುರಂ, ಅಗ್ರಹಾರ, ಚಾಮುಂಡಿಪುರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು ಪಾದಚಾರಿಗಳು ಪರದಾಟ ಅನುಭವಿಸಿದ್ದಾರೆ.1