ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಮಾಜ ಸೇವಕ ಹಾಗೂ ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷರಾದ ಡಾ. ಬಿ. ಅಬ್ದುಲ್ ರಹಮಾನ್ ನಾಗರಿಕರಿಗೆ ಸರ್ಕಾರಿ ಶಾಲೆಗಳತ್ತ ಒಲವು ತೋರಬೇಕೆಂದು ಕರೆ ನೀಡಿದರು. ಜೂನ್ 16ರಂದು ಪಟ್ಟಣದ ಶ್ರೀ ಬಂಡ್ರಿಲಕ್ಷ್ಮಿ ಚಿನ್ನಪ್ಪಶೆಟ್ಟಿ 7ನೇ ವಾರ್ಡ್ ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮತ್ತು ನಾಡಿನ ಗಣ್ಯರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ ಎಂದು ತಿಳಿಸಿದರು. ದೊಡ್ಡ ದೊಡ್ಡ ಸರ್ಕಾರಿ ಹುದ್ದೆಗಳಲ್ಲಿರುವ ಹೆಚ್ಚಿನ ಗಣ್ಯರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದರು ಎಂದು ಅವರು ಹೇಳಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ಉನ್ನತ ಪದವಿಗಳಲ್ಲಿ ಮಹತ್ತರ ಸಾಧನೆ ಮಾಡಿದವರು ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆಗೆ ನೇಮಕವಾಗಿರುತ್ತಾರೆ. ಆದರೆ ಖಾಸಗಿ ಶಾಲೆಗಳ ಕಟ್ಟಡಗಳು ಬೃಹದಾಕಾರವಾಗಿದ್ದರೂ, ಅಲ್ಲಿನ ಶಿಕ್ಷಕರು ಸರ್ಕಾರಿ ಶಿಕ್ಷಕರಂತೆ ವ್ಯಾಸಂಗದಲ್ಲಿ ಸಾಧನೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ಡಾ. ಅಬ್ದುಲ್ ರಹಮಾನ್ ಅಭಿಪ್ರಾಯಪಟ್ಟರು. ನಾಗರಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ ಅವರು, ಮೌಲಾನ ಅಬೂ ಕಲಾಂ ಆಜಾದ್ ಅವರ “ಸರ್ಕಾರಿ ಶಾಲೆ ಕೊಟ್ಟಂತಹ ಗುಣಮಟ್ಟದ ಶಿಕ್ಷಣ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ” ಎಂಬ ಸಂದೇಶವನ್ನು ವಿವರಿಸಿದರು. ಅಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಜೀವನಗಾಥೆ ಕುರಿತು ಸಂಕ್ಷಿಪ್ತ ಪರಿಚಯ ನೀಡಿದ ಅವರು, “ವಿದ್ಯೆ ಎಂಬ ಹುಲಿಯ ಹಾಲನ್ನು ಕುಡಿದವರು, ಅನ್ಯಾಯದ ವಿರುದ್ಧ ಒಂದು ದಿನ ಹುಲಿಯಂತೆ ಘರ್ಜಿಸಲೇಬೇಕು” ಎಂಬ ನುಡಿಯ ಸಾರಾಂಶವನ್ನು ವಿವರಿಸಿದರು. ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಏಳ್ಗೆಗೆ ಶ್ರಮಿಸಬೇಕೆಂದು ನಾಗರಿಕರಲ್ಲಿ ಕೋರಿದರು. ಮುಖ್ಯ ಶಿಕ್ಷಕರಾದ ಬಿ. ಮಾರೇಶ ಅವರು ಮಾತನಾಡಿ, ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಅಥವಾ ಪ್ರಮಾಣಪತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಸಮಾಜ ಸೇವೆ, ನಾಡು-ನುಡಿ ಸೇವೆಗಳಿಗೂ ಜೀವನದ ಅಮೂಲ್ಯ ವೇಳೆಯನ್ನು ವಿನಿಯೋಗಿಸಬೇಕು ಎಂದರು. ಇದಕ್ಕೆ ಸ್ನೇಹಿತರ ಬಳಗದ ಅಬ್ದುಲ್ ರಹಮಾನ್ ಅವರೇ ಸಾಕ್ಷಿಯಾಗಿದ್ದಾರೆ, ಅವರು ಉದ್ಯೋಗದಲ್ಲಿ ವ್ಯಾಪಾರೋದ್ಯಮಿಯಾಗಿದ್ದು, ತಮ್ಮ ಜೀವನದ ಉಳಿದರ್ಧ ಸಮಯವನ್ನು ಸಮಾಜ ಸೇವೆಗೆ ಮೀಸಲಿರಿಸಿದ್ದಾರೆ ಮತ್ತು ಸಮಾಜ ಸೇವಕರೆಂದು ಪ್ರಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಅವರು ಸ್ನೇಹಿತರ ಬಳಗ ಸಂಘಟನೆಯಡಿಯಲ್ಲಿ ಕಳೆದ 9 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು, ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವುದು, SSLC, PUC ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಉಚಿತ ತರಬೇತಿ ಶಿಬಿರಗಳ ಆಯೋಜನೆ, ಮತ್ತು ಮೋಟಿವೇಷನಲ್ ಸ್ಪೀಚ್‌ಗಳನ್ನು ನೀಡುತ್ತಿದ್ದಾರೆ ಎಂದು ವಿವರಿಸಿದರು. ಇದರ ಜೊತೆಗೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು ಮತ್ತು ಉಚಿತ ಸೀಳು ತುಟಿ, ಸೀಳು ಅಂಗುಳ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನಾಡು, ನುಡಿ, ದೇಶ ಸೇವೆಗಳ ಹೋರಾಟಗಳಲ್ಲಿ ಭಾಗವಹಿಸಿ, ಸತತ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆಂದು ವಿದ್ಯಾರ್ಥಿಗಳಿಗೆ ಮಾರೇಶ ತಿಳಿಸಿದರು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಸಿರಬಿ ರಾಘವೇಂದ್ರ, ಶಾಲಾ ಶಿಕ್ಷಕರಾದ ಶ್ರೀಮತಿ ಲಕ್ಷ್ಮೀದೇವಿ, ಮಲ್ಲಮ್ಮ, ಅರುಣ, ನೇತ್ರಾವತಿ, ಹನುಮಂತಪ್ಪ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಮಾಜ ಸೇವಕ ಹಾಗೂ ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷರಾದ ಡಾ. ಬಿ. ಅಬ್ದುಲ್ ರಹಮಾನ್ ನಾಗರಿಕರಿಗೆ ಸರ್ಕಾರಿ ಶಾಲೆಗಳತ್ತ ಒಲವು ತೋರಬೇಕೆಂದು ಕರೆ ನೀಡಿದರು. ಜೂನ್ 16ರಂದು ಪಟ್ಟಣದ ಶ್ರೀ ಬಂಡ್ರಿಲಕ್ಷ್ಮಿ ಚಿನ್ನಪ್ಪಶೆಟ್ಟಿ 7ನೇ ವಾರ್ಡ್ ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮತ್ತು ನಾಡಿನ ಗಣ್ಯರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ ಎಂದು ತಿಳಿಸಿದರು. ದೊಡ್ಡ ದೊಡ್ಡ ಸರ್ಕಾರಿ ಹುದ್ದೆಗಳಲ್ಲಿರುವ ಹೆಚ್ಚಿನ ಗಣ್ಯರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದರು ಎಂದು ಅವರು ಹೇಳಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ಉನ್ನತ ಪದವಿಗಳಲ್ಲಿ ಮಹತ್ತರ ಸಾಧನೆ
ಮಾಡಿದವರು ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆಗೆ ನೇಮಕವಾಗಿರುತ್ತಾರೆ. ಆದರೆ ಖಾಸಗಿ ಶಾಲೆಗಳ ಕಟ್ಟಡಗಳು ಬೃಹದಾಕಾರವಾಗಿದ್ದರೂ, ಅಲ್ಲಿನ ಶಿಕ್ಷಕರು ಸರ್ಕಾರಿ ಶಿಕ್ಷಕರಂತೆ ವ್ಯಾಸಂಗದಲ್ಲಿ ಸಾಧನೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ಡಾ. ಅಬ್ದುಲ್ ರಹಮಾನ್ ಅಭಿಪ್ರಾಯಪಟ್ಟರು. ನಾಗರಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ ಅವರು, ಮೌಲಾನ ಅಬೂ ಕಲಾಂ ಆಜಾದ್ ಅವರ “ಸರ್ಕಾರಿ ಶಾಲೆ ಕೊಟ್ಟಂತಹ ಗುಣಮಟ್ಟದ ಶಿಕ್ಷಣ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ” ಎಂಬ ಸಂದೇಶವನ್ನು ವಿವರಿಸಿದರು. ಅಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಜೀವನಗಾಥೆ ಕುರಿತು ಸಂಕ್ಷಿಪ್ತ ಪರಿಚಯ ನೀಡಿದ ಅವರು, “ವಿದ್ಯೆ ಎಂಬ ಹುಲಿಯ ಹಾಲನ್ನು ಕುಡಿದವರು, ಅನ್ಯಾಯದ ವಿರುದ್ಧ ಒಂದು ದಿನ
ಹುಲಿಯಂತೆ ಘರ್ಜಿಸಲೇಬೇಕು” ಎಂಬ ನುಡಿಯ ಸಾರಾಂಶವನ್ನು ವಿವರಿಸಿದರು. ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಏಳ್ಗೆಗೆ ಶ್ರಮಿಸಬೇಕೆಂದು ನಾಗರಿಕರಲ್ಲಿ ಕೋರಿದರು. ಮುಖ್ಯ ಶಿಕ್ಷಕರಾದ ಬಿ. ಮಾರೇಶ ಅವರು ಮಾತನಾಡಿ, ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಅಥವಾ ಪ್ರಮಾಣಪತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಸಮಾಜ ಸೇವೆ, ನಾಡು-ನುಡಿ ಸೇವೆಗಳಿಗೂ ಜೀವನದ ಅಮೂಲ್ಯ ವೇಳೆಯನ್ನು ವಿನಿಯೋಗಿಸಬೇಕು ಎಂದರು. ಇದಕ್ಕೆ ಸ್ನೇಹಿತರ ಬಳಗದ ಅಬ್ದುಲ್ ರಹಮಾನ್ ಅವರೇ ಸಾಕ್ಷಿಯಾಗಿದ್ದಾರೆ, ಅವರು ಉದ್ಯೋಗದಲ್ಲಿ ವ್ಯಾಪಾರೋದ್ಯಮಿಯಾಗಿದ್ದು, ತಮ್ಮ ಜೀವನದ ಉಳಿದರ್ಧ ಸಮಯವನ್ನು ಸಮಾಜ ಸೇವೆಗೆ ಮೀಸಲಿರಿಸಿದ್ದಾರೆ ಮತ್ತು ಸಮಾಜ ಸೇವಕರೆಂದು ಪ್ರಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಅವರು ಸ್ನೇಹಿತರ ಬಳಗ ಸಂಘಟನೆಯಡಿಯಲ್ಲಿ ಕಳೆದ 9 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು,
ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವುದು, SSLC, PUC ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಉಚಿತ ತರಬೇತಿ ಶಿಬಿರಗಳ ಆಯೋಜನೆ, ಮತ್ತು ಮೋಟಿವೇಷನಲ್ ಸ್ಪೀಚ್‌ಗಳನ್ನು ನೀಡುತ್ತಿದ್ದಾರೆ ಎಂದು ವಿವರಿಸಿದರು. ಇದರ ಜೊತೆಗೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು ಮತ್ತು ಉಚಿತ ಸೀಳು ತುಟಿ, ಸೀಳು ಅಂಗುಳ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನಾಡು, ನುಡಿ, ದೇಶ ಸೇವೆಗಳ ಹೋರಾಟಗಳಲ್ಲಿ ಭಾಗವಹಿಸಿ, ಸತತ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆಂದು ವಿದ್ಯಾರ್ಥಿಗಳಿಗೆ ಮಾರೇಶ ತಿಳಿಸಿದರು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಸಿರಬಿ ರಾಘವೇಂದ್ರ, ಶಾಲಾ ಶಿಕ್ಷಕರಾದ ಶ್ರೀಮತಿ ಲಕ್ಷ್ಮೀದೇವಿ, ಮಲ್ಲಮ್ಮ, ಅರುಣ, ನೇತ್ರಾವತಿ, ಹನುಮಂತಪ್ಪ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಮಾಜ ಸೇವಕ ಹಾಗೂ ಕೂಡ್ಲಿಗಿ ಸ್ನೇಹಿತರ ಬಳಗದ ಅಧ್ಯಕ್ಷರಾದ ಡಾ. ಬಿ. ಅಬ್ದುಲ್ ರಹಮಾನ್ ನಾಗರಿಕರಿಗೆ ಸರ್ಕಾರಿ ಶಾಲೆಗಳತ್ತ ಒಲವು ತೋರಬೇಕೆಂದು ಕರೆ ನೀಡಿದರು. ಜೂನ್ 16ರಂದು ಪಟ್ಟಣದ ಶ್ರೀ ಬಂಡ್ರಿಲಕ್ಷ್ಮಿ ಚಿನ್ನಪ್ಪಶೆಟ್ಟಿ 7ನೇ ವಾರ್ಡ್ ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮತ್ತು ನಾಡಿನ ಗಣ್ಯರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ ಎಂದು ತಿಳಿಸಿದರು. ದೊಡ್ಡ ದೊಡ್ಡ ಸರ್ಕಾರಿ ಹುದ್ದೆಗಳಲ್ಲಿರುವ ಹೆಚ್ಚಿನ ಗಣ್ಯರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದರು ಎಂದು ಅವರು ಹೇಳಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಅದು ಸರ್ಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ಉನ್ನತ ಪದವಿಗಳಲ್ಲಿ ಮಹತ್ತರ ಸಾಧನೆ ಮಾಡಿದವರು ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆಗೆ ನೇಮಕವಾಗಿರುತ್ತಾರೆ. ಆದರೆ ಖಾಸಗಿ ಶಾಲೆಗಳ ಕಟ್ಟಡಗಳು ಬೃಹದಾಕಾರವಾಗಿದ್ದರೂ, ಅಲ್ಲಿನ ಶಿಕ್ಷಕರು ಸರ್ಕಾರಿ ಶಿಕ್ಷಕರಂತೆ ವ್ಯಾಸಂಗದಲ್ಲಿ ಸಾಧನೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ಡಾ. ಅಬ್ದುಲ್ ರಹಮಾನ್ ಅಭಿಪ್ರಾಯಪಟ್ಟರು. ನಾಗರಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ ಅವರು, ಮೌಲಾನ ಅಬೂ ಕಲಾಂ ಆಜಾದ್ ಅವರ “ಸರ್ಕಾರಿ ಶಾಲೆ ಕೊಟ್ಟಂತಹ ಗುಣಮಟ್ಟದ ಶಿಕ್ಷಣ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ” ಎಂಬ ಸಂದೇಶವನ್ನು ವಿವರಿಸಿದರು. ಅಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಜೀವನಗಾಥೆ ಕುರಿತು ಸಂಕ್ಷಿಪ್ತ ಪರಿಚಯ ನೀಡಿದ ಅವರು, “ವಿದ್ಯೆ ಎಂಬ ಹುಲಿಯ ಹಾಲನ್ನು ಕುಡಿದವರು, ಅನ್ಯಾಯದ ವಿರುದ್ಧ ಒಂದು ದಿನ ಹುಲಿಯಂತೆ ಘರ್ಜಿಸಲೇಬೇಕು” ಎಂಬ ನುಡಿಯ ಸಾರಾಂಶವನ್ನು ವಿವರಿಸಿದರು. ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಏಳ್ಗೆಗೆ ಶ್ರಮಿಸಬೇಕೆಂದು ನಾಗರಿಕರಲ್ಲಿ ಕೋರಿದರು. ಮುಖ್ಯ ಶಿಕ್ಷಕರಾದ ಬಿ. ಮಾರೇಶ ಅವರು ಮಾತನಾಡಿ, ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಅಥವಾ ಪ್ರಮಾಣಪತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಸಮಾಜ ಸೇವೆ, ನಾಡು-ನುಡಿ ಸೇವೆಗಳಿಗೂ ಜೀವನದ ಅಮೂಲ್ಯ ವೇಳೆಯನ್ನು ವಿನಿಯೋಗಿಸಬೇಕು ಎಂದರು. ಇದಕ್ಕೆ ಸ್ನೇಹಿತರ ಬಳಗದ ಅಬ್ದುಲ್ ರಹಮಾನ್ ಅವರೇ ಸಾಕ್ಷಿಯಾಗಿದ್ದಾರೆ, ಅವರು ಉದ್ಯೋಗದಲ್ಲಿ ವ್ಯಾಪಾರೋದ್ಯಮಿಯಾಗಿದ್ದು, ತಮ್ಮ ಜೀವನದ ಉಳಿದರ್ಧ ಸಮಯವನ್ನು ಸಮಾಜ ಸೇವೆಗೆ ಮೀಸಲಿರಿಸಿದ್ದಾರೆ ಮತ್ತು ಸಮಾಜ ಸೇವಕರೆಂದು ಪ್ರಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಅವರು ಸ್ನೇಹಿತರ ಬಳಗ ಸಂಘಟನೆಯಡಿಯಲ್ಲಿ ಕಳೆದ 9 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು, ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವುದು, SSLC, PUC ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಉಚಿತ ತರಬೇತಿ ಶಿಬಿರಗಳ ಆಯೋಜನೆ, ಮತ್ತು ಮೋಟಿವೇಷನಲ್ ಸ್ಪೀಚ್‌ಗಳನ್ನು ನೀಡುತ್ತಿದ್ದಾರೆ ಎಂದು ವಿವರಿಸಿದರು. ಇದರ ಜೊತೆಗೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು ಮತ್ತು ಉಚಿತ ಸೀಳು ತುಟಿ, ಸೀಳು ಅಂಗುಳ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನಾಡು, ನುಡಿ, ದೇಶ ಸೇವೆಗಳ ಹೋರಾಟಗಳಲ್ಲಿ ಭಾಗವಹಿಸಿ, ಸತತ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆಂದು ವಿದ್ಯಾರ್ಥಿಗಳಿಗೆ ಮಾರೇಶ ತಿಳಿಸಿದರು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಸಿರಬಿ ರಾಘವೇಂದ್ರ, ಶಾಲಾ ಶಿಕ್ಷಕರಾದ ಶ್ರೀಮತಿ ಲಕ್ಷ್ಮೀದೇವಿ, ಮಲ್ಲಮ್ಮ, ಅರುಣ, ನೇತ್ರಾವತಿ, ಹನುಮಂತಪ್ಪ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.4
- ಕೊಪ್ಪಳದಲ್ಲಿ BALDOTA ಮತ್ತು MSMP ಸಂಸ್ಥೆಗಳ ಸಹಯೋಗದಲ್ಲಿ ನೂರಾರು ಫಲಾನುಭವಿಗಳಿಗಾಗಿ 13ನೇ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರವು 16, 17 ಮತ್ತು 18 ರಂದು ಮೂರು ದಿನಗಳ ಕಾಲ ನಡೆಯಿತು, ಅಗತ್ಯವಿರುವವರಿಗೆ ನೆರವು ನೀಡಿತು.1
- ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ವಯಸ್ಸಿನ ಭೇದವಿಲ್ಲದೆ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಇದಕ್ಕೆ ಮತ್ತೊಂದು ಆಘಾತಕಾರಿ ಉದಾಹರಣೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ 4 ವರ್ಷದ ಪುಟ್ಟ ಬಾಲಕನೊಬ್ಬ ತೀವ್ರ ಎದೆನೋವಿನಿಂದ ಮೃತಪಟ್ಟಿರುವ ದುರದೃಷ್ಟಕರ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ (4) ಮೃತಪಟ್ಟ ಬಾಲಕ. ಮಗು ಇದ್ದಕ್ಕಿದ್ದಂತೆ ತೀವ್ರವಾದ ಎದೆ ಉರಿಯಿಂದ ಬಳಲಲಾರಂಭಿಸಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ. ಮಗುವಿನ ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಹೃದಯಾಘಾತದಿಂದಾಗಿರಬಹುದು ಎಂದು ಶಂಕಿಸಲಾಗಿದೆ.1
- ರಾಜ್ಯಾಧ್ಯಕ್ಷರಾದ ಹೆಚ್ ಎಂ ರೇವಣ್ಣ ಅವರು ಚಿತ್ರದುರ್ಗದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದೀಕಾರದ ಕಚೇರಿಗೆ ಭೇಟಿ ನೀಡಿದ್ದಾರೆ. ಬುಧವಾರ ಮಧ್ಯಾಹ್ನ 12.15 ಕ್ಕೆ ಕಚೇರಿಗೆ ಭೇಟಿ ನೀಡಿದ ಹೆಚ್ ಎಂ ರೇವಣ್ಣ ಅವರು ಪರಿಶೀಲನೆ ನಡೆಸಿದರು. ಇದೇ ವೇಳೆ, ಕಾಂಗ್ರೆಸ್ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದೀಕಾರದ ವತಿಯಿಂದ ಹೆಚ್ ಎಂ ರೇವಣ್ಣ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.1
- ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ರಾಜ್ಯ ರಾಜಕಾರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿದ್ದರಾಮಯ್ಯನವರ ಬುದ್ಧಿವಂತಿಕೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿರಾಣಿ ಅವರ ಪ್ರಕಾರ, ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು, ಆದರೆ ಅವರು ಯಾವಾಗ ಯಾವ ಗೊಂಬೆ ಆಟ ಆಡಿಸುತ್ತಾರೆ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲ.1
- ಗದಗ ಜಿಲ್ಲೆಯ ರೋಣ ತಾಲೂಕಿನ ಮಾಜಿ ಸೈನಿಕರು ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರೋಣ ಮತಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈ ಮನವಿಯನ್ನು ರೋಣ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಲಾಯಿತು. ಮಾಜಿ ಸೈನಿಕರ ಪ್ರಕಾರ, ಜಿ.ಎಸ್. ಪಾಟೀಲರು ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಅಪಾರ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ತಮ್ಮ ಮತಕ್ಷೇತ್ರದ ಬಡವರು ಮತ್ತು ದೀನದಲಿತರಿಗೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ, ಅವರ ಸಮಾಜ ಸೇವೆ ಮತ್ತು ಸಹಕಾರ ಮನೋಭಾವ ಎಂದಿಗೂ ಕಡಿಮೆಯಾಗಿಲ್ಲ. ಇಂತಹ ನಿಷ್ಠಾವಂತ, ಪ್ರಾಮಾಣಿಕ ಹಾಗೂ ಅನುಭವಿ ರಾಜಕಾರಣಿಗೆ ಈ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಿ ಗೌರವಿಸಬೇಕು ಎಂದು ಮಾಜಿ ಸೈನಿಕರು ಒತ್ತಾಯಿಸಿದ್ದಾರೆ.3
- ಅನಂತ್ ಅಂಬಾನಿ ಅವರು ಉಡುಪಿಯಲ್ಲಿರುವ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳ ಮಲ್ಲಾಪುರ ಗ್ರಾಮದಲ್ಲಿ ಯಾವುದೇ ಕಂಪನಿಯ ನೆಟ್‌ವರ್ಕ್ ಸೌಲಭ್ಯ ಲಭ್ಯವಿಲ್ಲದೆ ಇರುವುದರಿಂದ ಸಮಸ್ತ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯಿಂದ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರವಾಗಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದರೊಂದಿಗೆ, ಶಾಸಕರು ಈ ವಿಷಯದ ಬಗ್ಗೆ ಕೂಡಲೇ ಸ್ಪಂದಿಸಬೇಕೆಂದೂ ಅವರು ಕೋರಿದ್ದಾರೆ. ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ವೀರೇಂದ್ರ ಪಾಟೀಲ್ ಮತ್ತು ಡಿ. ನಾಗರಾಜ್, ಮಾಜಿ ಉಪಾಧ್ಯಕ್ಷ ಎಮ್. ಗಾಳೆಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ಹೆಚ್. ಜಿತೇಂದ್ರ, ಹಾಗೂ ಮಾಳಿಗೆ ಸಿದ್ದಪ್ಪ, ಟೈಲರ್ ವೀರೇಶ, ಬಳಿಗೇರ ಬಸವರಾಜ, ತಳವಾರ್ ಮಹೇಶ, ಕೆಂಚಜ್ಜರ ವೀರೇಶ, ಹೆಚ್. ಯುವರಾಜ್, ಹೆಚ್. ಪ್ರವೀಣ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.4