ಅಳ್ನಾವರ ತಾಲ್ಲೂಕ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್ ಹಾಗೂ ಅವರ ಧರ್ಮಪತ್ನಿ ಸರಸ್ವತಿ ಅವರನ್ನು ಸಾರೋಟದಲ್ಲಿ ಮೆರವಣಿಗೆ ಹೊರಟು ವೇದಿಕೆಗೆ ಕರೆ ತರಲಾಯಿತು. ಅಳ್ನಾವರ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಮ್ಮೆಳನಾಧ್ಯಕ್ಷ ಡಾ. ಮೂಡಬಾಗಿಲ್ ದಂಪತಿಗಳ ಭವ್ಯ ಮೆರವಣಿಗೆ ಅಳ್ಳಾವರ(ಧಾರವಾಡ): ತಾಲ್ಲೂಕಿನ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಬಸವರಾಜ ಮೂಡಬಾಗಿಲ್ ಹಾಗೂ ಅವರ ಧರ್ಮಪತ್ನಿ ಸರಸ್ವತಿ ಅವರನ್ನು ಸಾರೋಟನಲ್ಲಿ ಕೂಡ್ರಿಸಿ ಭವ್ಯ ಮೆರವಣಿಗೆ ಹೊರಟು ವೇದಿಕೆಗೆ ಕರೆ ತರಲಾಯಿತು. ಬೆಳಿಗ್ಗೆ ಕೆರೆಶಾಲಾ ಮೈದಾನದಿಂದ ಆರಂಭಗೊAಡ ಮೆರವಣಿಗೆಯನ್ನು ಕನ್ನಡಾಂಭೆಗೆ ಪೂಜೆ ಸಲ್ಲಿಸುವ ಮೂಲಕ ಹಿರಿಯರಾದ ಎಸ್.ಬಿ.ಪಾಟೀಲ ಚಾಲನೆ ನೀಡಿದರು. ಭವ್ಯವಾದ ಸಾರೋಟ ಮುಖ್ಯ ಬೀದಿಯಲ್ಲಿ ಸಂಚರಿಸಿ ಸಮ್ಮೇಳನ ನಡೆಯವ ಉಮಾ ಭವನದಲ್ಲಿ ಮುಕ್ತಾಯವಾಯಿತು. ಕನ್ನಡದ ಧ್ವಜಗಳು ರಾರಾಜಿಸಿದವು. ಹೊನ್ನಾಪೂರ ಗ್ರಾಮದ ಸಿದ್ದಾರೂಢ ಮಹಿಳಾ ಡೊಳ್ಳು ಕಲಾತಂಡ ಬಾರಿಸಿದ ಡೊಳ್ಳಿನ ನಿನಾಧ ಪಟ್ಟಣದೆಲ್ಲಡೆ ಮಾರ್ಧನಿಸಿತು. ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಬೈಕ್ ರ‍್ಯಾಲಿ ಮುಖೇನ ಮೆರವಣಿಗೆಯಲ್ಲಿ ಭಾಗಿಯಾದರು. ಮಹಿಳೆಯರು ಪೂರ್ಣ ಕುಂಬ ಹೊತ್ತು ಮೆರೆಗು ಮೂಡಿಸಿದ್ದರು. ಬೆಳಿಗ್ಗೆ ರಾಷ್ಟç ಧ್ವಾಜಾರೋಹಣ ನೇರವೇರಿಸಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಜ್ಜಪ್ಪ ಕುರುಬರ ಮಾತನಾಡಿ, ಈ ಬಾಗದಲ್ಲಿ ನಡೆಯುವ ಕನ್ನಡ ಕಟ್ಟುವ ಕೆಲಸದಲ್ಲಿ ತಮ್ಮ ಸಂಘ ಸದಾ ಟೊಂಕ ಕಟ್ಟಿ ನಿಂತು ಸಹಕರಿಸುತ್ತದೆ ಎಂದರು. ನಾಡಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ನೆರವೇರಿಸಿ, ಗಡಿ ಭಾಗದಲ್ಲಿ ಕನ್ನಡ ಕಂಪು ಮೆಲಕು ಹಾಕಲು ಸಮ್ಮೇಳನ ಹೊಸ ಇತಿಹಾಸ ಮೂಡಿಸಲಿ ಎಂದರು. ಪರಿಷತ್ ಧ್ವಜವನ್ನು ಕಸಾಪ ತಾಲ್ಲೂಕ ಘಟಕದ ಅಧ್ಯಕ್ಷ ಗುರುರಾಜ ಸಬನೀಸ್ ನೇರವೇರಿಸಿದರು. ಎಸ್.ಜಿ.ಗೌರಿ, ಶಂಕರಯ್ಯ ದೇಗಾವಿಮಠ, ದಸಗೀರಸಾಬ ಹುಣಶಿಕಟ್ಟಿ, ವೈ.ವಿ. ಶಿಂಪಿ, ರಶ್ಮಿ ತೇಗೂರ, ಶಶಿಕುಮಾರ ಪತಂಗೆ, ಮಂಜುಳಾ ಅಂಬಡಗಟ್ಟಿ, ಸುರೇಂದ್ರ ಕಡಕೋಳ, ಸೋಮಶೇಖರ ಅಂಬಡಗಟ್ಟಿ, ಎಸ್.ಜಿ. ಖೋಡಕಿ, ಡಾ.ಅಶೋಕ ಕುಂಟನ್ನವರ ಇದ್ದರು.

- Post by @april14news1
- ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.1
- ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಿರುವ ಹಿನ್ನೆಲೆ, ದಾವಣಗೆರೆಯಲ್ಲಿ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು ಸ್ಪಷ್ಟನೆ ನೀಡಿದರು. ಸ್ವಾಮೀಜಿಗಳು ಸಮಾಜದ ಹಿರಿಯರಿಗೆ ಗೌರವ ನೀಡುತ್ತಿರಲಿಲ್ಲ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಸಮಾಜ ಸಂಘಟನೆ ಕಾರ್ಯಗಳನ್ನೂ ಅವರು ಸಮರ್ಪಕವಾಗಿ ನಡೆಸುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೂ ಮೊದಲು ಸ್ವಾಮೀಜಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಬದಲಾವಣೆ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿಯನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಇದಲ್ಲದೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಈಗ ಲೆಕ್ಕ ಕೇಳುವ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ ಆರೋಪಿಸಿದರು.1
- ಕರ್ನಾಟಕದಲ್ಲಿ ಯಾವುದೆ ಜಿಲ್ಲೆ ತಾಲೂಕ ಮತ್ತು ಗ್ರಾಮಗಳಲ್ಲಿ ಯಾವುದೆ ಕುಂದು ಕೊರೆತೆ ಇರಲ್ಲಿ ಕಾಲಮಾಡಿ ತಿಳಿದುಕೊಳ್ಳಿ1
- ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಶ್ರೀ ಕಲ್ಮೀಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಿವೃತ್ತ ಯೋಧ ಶ್ರೀ ಖಂಡೋಬಾ ಮುರಳೀಧರ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುವ ವೀರರು ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.1
- ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ ಕೂಡ್ಲಿಗಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ. ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು. ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.1
- ಧಾರವಾಡ : ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಬೆಂಬಲಿಗರು ಧಾರವಾಡ ಜುಬಿಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡ ಜುಬಿಲಿ ವೃತ್ತದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ಶಾಸಕ ವಿನಯ ಕುಲಕರ್ಣಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ. ದುಷ್ಟಶಕ್ತಿಗಳು ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧ ಕೆಲಸ ಮಾಡಿದೆ ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.1
- Post by @april14news1
- Post by Sharanugouda Patil1