Shuru
Apke Nagar Ki App…
ಗುಳೇದಗುಡ್ಡದಲ್ಲಿ ಗಣೇಶೋತ್ಸವ: ಸುದರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಗುಳೇದಗುಡ್ಡ: ಗಣೇಶೋತ್ಸವದ ಅಂಗವಾಗಿ ಗುಳೇದಗುಡ್ಡದ ಅರಳಿಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ ಸುಂದರ ಗಣೇಶ
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಗುಳೇದಗುಡ್ಡದಲ್ಲಿ ಗಣೇಶೋತ್ಸವ: ಸುದರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಗುಳೇದಗುಡ್ಡ: ಗಣೇಶೋತ್ಸವದ ಅಂಗವಾಗಿ ಗುಳೇದಗುಡ್ಡದ ಅರಳಿಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ ಸುಂದರ ಗಣೇಶ
More news from ಕರ್ನಾಟಕ and nearby areas
- ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು.. ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..1
- ಕಲ್ಯಾಣ ಕರ್ನಾಟಕದ ಇತಿಹಾಸ ಕರ್ನಾಟಕದ ಇತಿಹಾಸವಾಗಿ ಬದಲಾವಣೆ: ಸಿಎಂ ಡಿ ಕೆ ಶಿವಕುಮಾರ್ ಬಣ್ಣನೆ* ಕಲಬುರ್ಗಿ, ಸೆ. 16* "ಕಲ್ಯಾಣ ಕರ್ನಾಟಕದ ಇತಿಹಾಸ ಇಡೀ ಕರ್ನಾಟಕದ ಇತಿಹಾಸವಾಗಿ ಬದಲಾಗಿದೆ. ಕಲ್ಯಾಣ ಕರ್ನಾಟಕ ಭಾಗ ಯಾವುದಕ್ಕೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರಿಗಿಂತ ಕಲಬುರ್ಗಿ ಕಡಿಮೆಯೇನಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು. ಕಲಬುರ್ಗಿ ನಗರದ ಪಬ್ಲಿಕ್ ಗಾರ್ಡನ್ ನಲ್ಲಿ ಆಯೋಜಿಸಿರುವ ಬೀದಿ ಉತ್ಸವ, ಅಪ್ಪನ ಕೆರೆಯ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.1
- ನರೇಂದ್ರ ಮೋದಿಯವರ ಜನ್ಮದಿನ ; ಅನಾಥಾಶ್ರಮ&ಆಸ್ಪತ್ರೆಯಲ್ಲಿ ಹಣ್ಣು ಹಂಪಲ ವಿತರಿಸಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್.. ನರೇಂದ್ರ ಮೋದಿಯವರ ಜನ್ಮದಿನ ; ಅನಾಥಾಶ್ರಮ&ಆಸ್ಪತ್ರೆಯಲ್ಲಿ ಹಣ್ಣು ಹಂಪಲ ವಿತರಿಸಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಇಳಕಲ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಹಾಗೂ ಅವರ ಹುಟ್ಟು ಹಬ್ಬದ ಅಂಗವಾಗಿ ಇಳಕಲ್ ನಗರದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳ ಜೊತೆಗೆ ಅನಾಥಾಶ್ರಮದಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಹಣ್ಣು ಹಂಪಲ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.1
- ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.1
- ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.2
- ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನ. ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಗದಗ : ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರತೆ ಪಡೆದ ತಿಂಗಳು ಈ ಶ್ರಾವಣ ಮಾಸ,ಮಾಸ ಪರ್ಯಂತ ಭಗವಂತನ ನಾಮಸ್ಮರಣೆಯಿಂದ ಅನುಗ್ರಹ ಪಡೆಯಲು ಸುಲಭವಾದ ಮಾರ್ಗ ಭಜನೆ ಎಂದು ಶ್ರೀ ಡಾ ಶಿವಕುಮಾರ ಮಾಹಾಸ್ವಾಮಿಗಳು ನುಡಿದರು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯ ಆಯೋಜಿಸಲಾದ ಭಜನಾ ಮಹಾ ಮಂಗಲ ಕಾರ್ಯಕ್ರಮದ ಸಮಾರೋಪ ಸಮಾರಂಭದ saದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನೆರದಿದ್ದ ಭಕ್ತರಿಗೆ ಆಶೀರ್ವಚನದಲ್ಲಿ ಮಾತನಾಡಿದ ಅವರು. ಭಜನೆ ಎಂದರೆ ಭಜ್ ಎಂಬುವ ಧಾತುವಿನಿಂದ ಬಂದಿರುವ ಪದ ಅಂದರೆ ಭಜನೆ ಅಂದರೆ ಭಗವಂತನ ನಾಮಸ್ಮರಣೆ, ಆ ಭಗವಂತನ ಕೃಪೆಗೆ ಪಾತ್ರರಾಗಲು ಭಜನೆ ಅತೀ ಶ್ರೇಷ್ಠ ಮಾರ್ಗ ಎಂದರು. ಯಾರಿಗೂ ನಮ್ಮಿಂದ ನೋವಾಗದ ರೀತಿಯ ಬದುಕುವದು ಅಸಾಧ್ಯ ಆದರೂ ಉದ್ದೇಶ ಪೂರ್ವಕವಾಗಿ ಯಾರಿಗೂ ನೋವುಂಟು ಮಾಡಬಾರದು ಏಕೆಂದರೆ ಈ ಪ್ರಪಂಚದಲ್ಲಿ ನಕಾರಾತ್ಮಕ ಹಾಗೂ ಸಕರಾತ್ಮಕ ಚಿಂತನೆಗಳು ಒಂದಕ್ಕೊಂದು ಅಂಟಿಕೊಂಡೆ ಬಂದಿರುತ್ತವೆ, ಹೇಗೆ ರಾತ್ರಿಯ ಜೊತೆಗೆ ಹಗಲು,ಸುಖದ ಜೊತೆಗೆ ದುಃಖ,ಜನನದ ಜೊತೆಗೆ ಮರಣ ಇದೆಯೋ ಹಾಗೇ ಅದಕ್ಕಾಗಿ ಯಾವುದೇ ವ್ಯಕ್ತಿಗೂ ಬರೀ ಸುಖವೇ ಸಿಗುವದಿಲ್ಲ ಆದರೆ ಜೊತೆಗೆ ದುಃಖ ಬೆನ್ನ ಹತ್ತಿರುತ್ತದೆ ಕಾರಣ ಇಷ್ಟೇ ಪ್ರತಿ ಜೀವಿಗೂ ಹುಟ್ಟು ಅನಿಶ್ಚಿತ ಸಾವು ಖಚಿತ ಅಂತೆಯೇ ತಾವೆಲ್ಲರೂ ಪವಿತ್ರ ಶ್ರಾವಣ ಮಾಸದಲ್ಲಿ ನೀವಷ್ಟೇ ಭಜನೆ ಮಾಡದೇ ಇಡೀ ಗ್ರಾಮದ ಜನರ ಮನ ತಲುಪುವಂತೆ ಭಜನೆಯೊಂದಿಗೆ ಭಕ್ತಿಯ ಗೀತೆಗಳನ್ನು ಹಾಡುತ್ತಾ ವಠಾರಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಷ್ಠೆ ಮೆರೆದು ಕೊನೆಯ ಹಂತ ಭಜನಾ ಮುಕ್ತಾಯ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಭ್ರಮ ವಿಚಾರ ಎಂದರು. ರಾತ್ರಿಯಿಡೀ ಸಪ್ತಾಹ ಮಾಡಿ ಬೆಳಿಗ್ಗೆ ಗ್ರಾಮದ ತುಂಬೆಲ್ಲಾ ಭಜನೆಯೊಂದಿಗೆ ಮಾರುತೇಶ್ವರನ ಎಂಟು ಅಡಿ ಹಾಗೂ ಬಸವೇಶ್ವರನ ಭಾವಚಿತ್ರ ಮೆರವಣಿಗೆ ನೆರವೇರಿಸಿ ನಮ್ಮ ಪ್ರವಚನಕ್ಕಾಗಿ ಶಾಂತಿ ಸಹನೆಯಿಂದ ಕುಳಿತಿದ್ದು ನೋಡಿದರೆ ಆ ಮಾರುತೇಶ್ವರನ ಕೃಪೆಗೆ ತಾವೆಲ್ಲರೂ ಪಾತ್ರರಾಗಿದ್ದಿರಿ ಎನ್ನಬಹುದು. ನಮ್ಮ ರಾಜ್ಯದಲ್ಲಿ ನಿರಂತರ ಸಪ್ತಾಹ ಮಾಡುವ ಏಕೈಕ ಮಠ ಹುಬ್ಬಳ್ಳಿ ಸಿದ್ದಾರೂಢರ ಮಠ ಸುಮಾರು 94 ವರ್ಷಗಳ ಕಾಲ ಪ್ರತಿ ನಿತ್ಯ ಸಪ್ತಾಹ ಮಾಡುತ್ತಿರುವುದು ಇಂದಿಗೂ ಕಾಣಬಹುದು ಎಂದರು. ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ನಿರಂಜನ ಮಹಾಸ್ವಾಮಿಗಳು ಭಜನಾ ಸಮಾರೋಪ ಕುರಿತು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ವೇದ ಮೂರ್ತಿ ಮಹಾದೇವಯ್ಯನವರು ಸಾನಿಧ್ಯ ವಹಿಸಿಕೊಂಡು ಅವರೂ ಕೂಡ ಆಶೀರ್ವಚನ ನೀಡಿದರು. ಕಾರ್ಯಕ್ರಮದ ನಿರೂಪಣೆ ವೀರಭದ್ರಯ್ಯ ಸಾಲಿಮಠ ನೆಡೆಸಿದರೆ ಎಸ್ ಎಸ್ ಅಂಗಡಿ ಶಿಕ್ಷಕರು ಸ್ವಾಗತಿಸಿದರು. ಶಿವಕುಮಾರಗೌಡ ಚಿಕ್ಕನಗೌಡರ ವಂದಿಸಿದರು. ಡಾ ಅಂಬೇಡ್ಕರ್ ಭಜನಾ ಸಂಘದ ಸದಸ್ಯರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಹೊನ್ನಾಪುರ ಗ್ರಾಮದ ಶ್ರೀ ಮಲ್ಲಜ್ಜೇಶ್ವರ ಭಜನಾ ಮಂಡಳಿಯವರು,ಗ್ರಾಮದ ಹಿರಿಯರಾದ ವಿ ಎನ್ ಗೊಜನೂರು,ಅಶೋಕ ಗೊಜನೂರು, ಮಹೇಶಗೌಡ ಚಿಕ್ಕನಗೌಡರ ಶೇಕಪ್ಪ ಹುಲಗೂರು, (ಕೆಮ್ಮಣ್ಣವರ )ಭಜನಾ ಮಂಡಳಿ ಅಧ್ಯಕ್ಷ ಸಿದ್ದು ದುಂಡಪ್ಪನವರ, ವಿನೋದ ಗೊಜನೂರು ಪರಪ್ಪ ಬರಡ್ವಾದ ಕುರಗೋಡೆಪ್ಪ ಮುಕ್ಕಣ್ಣವರ ಸಿ ಬಿ ಮುಕ್ಕಣ್ಣವರ, ಬಸವರಾಜ ಹಡಪದ, ವೀರಪ್ಪ ದೇಸಾಯಿ ಸೇರಿದಂತೆ ಇನ್ನುಳಿದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.2
- ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ತಾಳಿಕೋಟಿ ವರದಿ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಗ್ಯದಲ್ಲಿ ಏರುಪೇರು. 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ. ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ಬಿಸಿಲಿನ ತಾಪದಿಂದ ತಲೆ ಸುತ್ತಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ರೈತ ಮುಖಂಡರು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯ ಬಳಿಕ ಅರವಿಂದ ಕುಲಕರ್ಣಿ ಅವರು ಚೇತರಿಸಿಕೊಂಡಿದ್ದು, ಧರಣಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಎಂದು ರೈತ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ್ ಕುಲಕರ್ಣಿ, ಉಮೇಶ್ ವಾಲಿಕಾರ್, ಬಾಲಪ್ಪ ಗೌಡ ಲಿಂಗದಳ್ಳಿ ವಿಟ್ಟಲ್ ಬಿರಾದರ್, ಮಲ್ಲನಗೌಡ ಹಗರಟಿಗಿ, ಗುರುನಾಥ್ ರೆಡ್ಡಿ, ಪವಿತ್ರ ಬಡಿಗೇರ್, ಸಾವಿತ್ರಿ ಪಂದಗನೂರ್, ಬಸ್ಸು ಮಾಲಿ ಪಾಟೀಲ್, ಗುರುಲಿಂಗಪ್ಪ ಪಡಸಲಗಿ, ಮುತ್ತು ಗೌಡ ಪರ್ಸನಳ್ಳಿ, ರಾಜು ಗೌಡ ಆನಂದ್ ರೆಡ್ಡಿ, ಶಿವಶರಣಪ್ಪ ಸಾಹುಕಾರ್ ಇನ್ನು ಅನೇಕ ರೈತ ಮುಖಂಡರು ಭಾಗಿಯಾಗಿದ್ದರು1
- ಹಿರೇಓತಗೇರಿ ಗ್ರಾಮದಲ್ಲಿ ಭಕ್ತಿಭಾವದಿಂದ ವಿಘ್ನನಿವಾರಕನ ವಿಸಜ೯ನೆ ಇಳಕಲ್ ; ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡುದ್ದ ಗಣೇಶನನ್ನ ಇಂದು ಭಕ್ತಿ ಭಾವದಿಂದ ಪೂಜಿಸಿ ವಿಸಜ೯ನೆ ಮಾಡಿದರು.3