logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ  ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

1 hr ago
user_Pavadeppa c choudiki
Pavadeppa c choudiki
ಕುಷ್ಟಗಿ, ಕೊಪ್ಪಳ, ಕರ್ನಾಟಕ•
1 hr ago

ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ  ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

More news from ಕರ್ನಾಟಕ and nearby areas
  • ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ  ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
    1
    ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ*

*ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ*

*ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ  ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು.
*ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು.
*ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು.
*ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು.
*ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು.
*ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    1 hr ago
  • ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.
    2
    ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ.
ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ.
ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    13 hrs ago
  • ಹಿರೇಓತಗೇರಿ ಗ್ರಾಮದಲ್ಲಿ ಭಕ್ತಿಭಾವದಿಂದ ವಿಘ್ನನಿವಾರಕನ ವಿಸಜ೯ನೆ ಇಳಕಲ್ ; ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡುದ್ದ ಗಣೇಶನನ್ನ ಇಂದು ಭಕ್ತಿ ಭಾವದಿಂದ ಪೂಜಿಸಿ ವಿಸಜ೯ನೆ ಮಾಡಿದರು.
    3
    ಹಿರೇಓತಗೇರಿ ಗ್ರಾಮದಲ್ಲಿ ಭಕ್ತಿಭಾವದಿಂದ  ವಿಘ್ನನಿವಾರಕನ ವಿಸಜ೯ನೆ

ಇಳಕಲ್ ; ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡುದ್ದ  ಗಣೇಶನನ್ನ
ಇಂದು ಭಕ್ತಿ ಭಾವದಿಂದ ಪೂಜಿಸಿ ವಿಸಜ೯ನೆ ಮಾಡಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    14 hrs ago
  • ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
    2
    ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ  
ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್
ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಕಛೇರಿಯಲ್ಲಿ 
ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ
ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು.
"ವೈಜನಾಥ ಪಾಟೀಲ್
ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು.
ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. 
ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು.
ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. 
ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ  ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್,  ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ
ಮಂಜುನಾಥ ಮಾಲಿಪಾಟೀಲ,  
ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು  ಕಾರ್ಯಕರ್ತರು ಉಪಸ್ಥಿತರಿದ್ದರು.
    user_STAR OF KOPPAL
    STAR OF KOPPAL
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    2 hrs ago
  • ಮರ್ಲಾನಹಳ್ಳಿಯಲ್ಲಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛತಾ ಪ್ರತಿಜ್ಞಾವಿಧಿ
    1
    ಮರ್ಲಾನಹಳ್ಳಿಯಲ್ಲಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛತಾ ಪ್ರತಿಜ್ಞಾವಿಧಿ
    user_ಟಿ.ಉಮೇಶ ಮರ್ಲಾನಹಳ್ಳಿ
    ಟಿ.ಉಮೇಶ ಮರ್ಲಾನಹಳ್ಳಿ
    Local News Reporter ಕಾರಟಗಿ, ಕೊಪ್ಪಳ, ಕರ್ನಾಟಕ•
    3 hrs ago
  • ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.
    4
    ಲಿಂಗಸುಗೂರು ಪಟ್ಟಣದ ವಾರ್ಡ್ ನಂಬರ್ 7ರ ಏಕದಂತ ಗಜಾನನ ಮಂಡಳಿ ವತಿಯಿಂದ  8ನೇ ವರ್ಷದ ಮಹೋತ್ಸವ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ
ಲಿಂಗಸುಗೂರು: ಪಟ್ಟಣದ ವಾಡಿ–7ರ ಏಕದಂತ ಗಣೇಶನ ಮಂಟಪದಲ್ಲಿ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. 

ಲಿಂಗಸುಗೂರು ಪಟ್ಟಣದ ವಾಡಿ–7ರ ಏಕದಂತ ಗಜಾನನ ಮಂಡಳಿ ವತಿಯಿಂದ 8ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ಹಾಗೂ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು  ನಡೆಸಲಾಯಿತು. ನಂತರ ವಿಜೇತರಾದ ಕ್ರೀಡಾಪಟುಗಳಿಗೆ ಏಕದಂತ ಗಜಾನನ ಮಂಡಳಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಹಾಗೂ ಮೂರನೆ ದಿನ ಸಂಜೆ ಬಾಜಾ ಬಜಂತ್ರಿ ಯೊಂದಿಗೆ ನೃತ್ಯದೊಂದಿಗೆ ಅದ್ದೂರಿಯಾಗಿ ವಿಸರ್ಜನೆ ಕೈಗೊಳ್ಳಲಾಯಿತು.
    user_ಸಿದ್ದನಗೌಡ ಪಾಟೀಲ್
    ಸಿದ್ದನಗೌಡ ಪಾಟೀಲ್
    Lingsugur, Raichur•
    14 hrs ago
  • ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು.. ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
    1
    ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಆಗುವುದಿಲ್ಲ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಮಾಡಿದ ಇಡಿ ದಾಳಿ ಕುರಿತು ಸಚಿವ ಕಾಶಪ್ಪನವರ ತಿರುಗೇಟು..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • *ಕುಷ್ಟಗಿಯಲ್ಲಿ ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರ ಬೃಹತ್ ಪ್ರತಿಭಟನೆ: ಬರ ಘೋಷಣೆಗೆ ಆಗ್ರಹ* *ಇನ್ನೂ ಎರಡು ದಿನದಲ್ಲಿ ಘೋಷಿಸದಿದ್ದರೆ ಉಗ್ರ ಹೋರಾಟ: ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ* *ಕುಷ್ಟಗಿ, ಸೆ.16:* ರಾಜ್ಯ ಸರ್ಕಾರ ಕುಷ್ಟಗಿ ತಾಲೂಕನ್ನು ಮೊದಲನೇ ಮತ್ತು ಎರಡನೇ ಬರ ಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಷ್ಟಗಿಯಲ್ಲಿ ಸಾವಿರಾರು ರೈತರು ನೂರಾರು ಎತ್ತಿನ ಬಂಡಿಗಳ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು. ಭಾರತೀಯ ಜನತಾ ಪಾರ್ಟಿ, ಕುಷ್ಟಗಿ ಮಂಡಲ ಹಾಗೂ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ಮಲ್ಲಯ್ಯ ವೃತ್ತದಿಂದ ಹಿಡಿದು ಬಸ್ ನಿಲ್ದಾಣ, ಮಾರುತಿ ವೃತ್ತ, ಭಕ್ತ ಶ್ರೇಷ್ಠ ಕನಕದಾಸ ಸರ್ಕಲ್, ಪುರಸಭೆ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಬಸವೇಶ್ವರ ಸರ್ಕಲ್ ವರೆಗೆ ಎತ್ತಿನ ಬಂಡಿಗಳ ಬೃಹತ್ ಮೆರವಣಿಗೆ ಹಾಗೂ ಮಾನವ ಸರಪಳಿ ನಿರ್ಮಿಸಿ, ಬಹಿರಂಗ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. *2-3 ತಾಸು ಪಟ್ಟಣ ಸ್ತಬ್ಧ:* ಈ ಬೃಹತ್ ಎತ್ತಿನ ಬಂಡಿ ಪ್ರತಿಭಟನೆಯಿಂದ ಸುಮಾರು ಎರಡು ಮೂರು ತಾಸುಗಳ ಕಾಲ ಕುಷ್ಟಗಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಇದರಿಂದ ವಾಹನ ಸವಾರರು ಮತ್ತು ನಾಗರಿಕರು ತೀವ್ರ ಪರದಾಡಿದರು. ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, "ನಮ್ಮ ತಾಲೂಕಿಗೆ ಶೇ.1 ರಷ್ಟು ಕೂಡ ನೀರಾವರಿ ಇಲ್ಲ. ನಾವು ಕೇವಲ ಒಣ ಬೇಸಾಯ, ಮಳೆ ಆಧಾರಿತ ಬೆಳೆಯನ್ನೇ ನಂಬಿಕೊಂಡಿದ್ದೇವೆ. ರೈತರು ಸಾಲ-ಸೂಲ ಮಾಡಿ ಭೂಮಿಗೆ ಬೀಜ, ಗೊಬ್ಬರ ಹಾಕಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಎರಡೆರಡು ಬಾರಿ ಬಿತ್ತನೆ ಮಾಡಿದ ಎಲ್ಲಾ ಬೆಳೆ ಸಂಪೂರ್ಣ ಹಾಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಜಿಲ್ಲಾಧಿಕಾರಿಗಳು ಎಲ್ಲರೂ ಬಂದು ನೋಡಿ ಹೋದರೂ ಕುಷ್ಟಗಿಯನ್ನು ಪಟ್ಟಿಗೆ ಸೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡದೆ ಕೂಡಲೇ ಕುಷ್ಟಗಿಯನ್ನು ಬರ ಪೀಡಿತ ಎಂದು ಘೋಷಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ:* ಇನ್ನು ಎರಡು ದಿನದಲ್ಲಿ ಕುಷ್ಟಗಿ ಸೇರಿದಂತೆ ಉಳಿದ ತಾಲೂಕುಗಳನ್ನು ಬರ ಎಂದು ಘೋಷಿಸದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಸುರಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ ನೀಡಿದರು. "ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರಾಜ್ಯದಲ್ಲಿ ಕೇವಲ 101 ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿ, ಕಲ್ಯಾಣ ಕರ್ನಾಟಕದ ತಾಲೂಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಬಿಜೆಪಿ ಕ್ಷೇತ್ರ ಮಾತ್ರವಲ್ಲ ಕಾಂಗ್ರೆಸ್ ಕ್ಷೇತ್ರದ ತಾಲೂಕುಗಳನ್ನೂ ಬರ ಪಟ್ಟಿಯಿಂದ ಕೈಬಿಟ್ಟಿದೆ. ಮುಂಬರುವ ಎರಡು ದಿನದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಳಿದ ತಾಲೂಕುಗಳನ್ನು ಬರ ಎಂದು ಘೋಷಿಸಬೇಕು" ಎಂದು ಆಗ್ರಹಿಸಿದರು. ಕೊನೆಯಲ್ಲಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. *ಪ್ರತಿಭಟನೆಯಲ್ಲಿ ಇದ್ದವರು:* ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಿರೇಗೌಡ ಗೌಡ್ರ, ಬಿಜೆಪಿ ಮುಖಂಡರಾದ ಬಸವರಾಜ ಕ್ಯಾವಟರ್, ಬಸವರಾಜ ಹಳ್ಳೂರು, ದೇವೇಂದ್ರಪ್ಪ ಬಳೂಟಗಿ, ಪಕೀರಪ್ಪ ಚಳಗೇರಿ ವಕೀಲರು, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮಾಹಾಂತೇಶ ಬದಾಮಿ, ರವಿಕುಮಾರ ಹಿರೇಮಠ, ಮಲ್ಲಣ್ಣ ಪಲ್ಲೇದ್, ಮಾಜಿ ಪುರಸಭೆ ಅಧ್ಯಕ್ಷ ಕಲ್ಲೇಶ ತಾಳದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಮಹೇಶ ಕ್ಯಾವಟರ್, ವಿನಯಕುಮಾರ ಮೇಲಿನಮನಿ, ಭರಮಗೌಡ ಬ್ಯಾಲಿಹಾಳ, ಈರಣ್ಣ ಗಜೇಂದ್ರಗಡ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ರೈತರು ತಮ್ಮ ಎತ್ತಿನ ಬಂಡಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    1
    *ಕುಷ್ಟಗಿಯಲ್ಲಿ ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರ ಬೃಹತ್ ಪ್ರತಿಭಟನೆ: ಬರ ಘೋಷಣೆಗೆ ಆಗ್ರಹ*
*ಇನ್ನೂ ಎರಡು ದಿನದಲ್ಲಿ ಘೋಷಿಸದಿದ್ದರೆ ಉಗ್ರ ಹೋರಾಟ: ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ*
*ಕುಷ್ಟಗಿ, ಸೆ.16:* ರಾಜ್ಯ ಸರ್ಕಾರ ಕುಷ್ಟಗಿ ತಾಲೂಕನ್ನು ಮೊದಲನೇ ಮತ್ತು ಎರಡನೇ ಬರ ಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಷ್ಟಗಿಯಲ್ಲಿ ಸಾವಿರಾರು ರೈತರು ನೂರಾರು ಎತ್ತಿನ ಬಂಡಿಗಳ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯ ಜನತಾ ಪಾರ್ಟಿ, ಕುಷ್ಟಗಿ ಮಂಡಲ ಹಾಗೂ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರ ನೇತೃತ್ವದಲ್ಲಿ ಮಲ್ಲಯ್ಯ ವೃತ್ತದಿಂದ ಹಿಡಿದು ಬಸ್ ನಿಲ್ದಾಣ, ಮಾರುತಿ ವೃತ್ತ, ಭಕ್ತ ಶ್ರೇಷ್ಠ ಕನಕದಾಸ ಸರ್ಕಲ್, ಪುರಸಭೆ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಬಸವೇಶ್ವರ ಸರ್ಕಲ್ ವರೆಗೆ ಎತ್ತಿನ ಬಂಡಿಗಳ ಬೃಹತ್ ಮೆರವಣಿಗೆ ಹಾಗೂ ಮಾನವ ಸರಪಳಿ ನಿರ್ಮಿಸಿ, ಬಹಿರಂಗ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
*2-3 ತಾಸು ಪಟ್ಟಣ ಸ್ತಬ್ಧ:* ಈ ಬೃಹತ್ ಎತ್ತಿನ ಬಂಡಿ ಪ್ರತಿಭಟನೆಯಿಂದ ಸುಮಾರು ಎರಡು ಮೂರು ತಾಸುಗಳ ಕಾಲ ಕುಷ್ಟಗಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಇದರಿಂದ ವಾಹನ ಸವಾರರು ಮತ್ತು ನಾಗರಿಕರು ತೀವ್ರ ಪರದಾಡಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರು, "ನಮ್ಮ ತಾಲೂಕಿಗೆ ಶೇ.1 ರಷ್ಟು ಕೂಡ ನೀರಾವರಿ ಇಲ್ಲ. ನಾವು ಕೇವಲ ಒಣ ಬೇಸಾಯ, ಮಳೆ ಆಧಾರಿತ ಬೆಳೆಯನ್ನೇ ನಂಬಿಕೊಂಡಿದ್ದೇವೆ. ರೈತರು ಸಾಲ-ಸೂಲ ಮಾಡಿ ಭೂಮಿಗೆ ಬೀಜ, ಗೊಬ್ಬರ ಹಾಕಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಎರಡೆರಡು ಬಾರಿ ಬಿತ್ತನೆ ಮಾಡಿದ ಎಲ್ಲಾ ಬೆಳೆ ಸಂಪೂರ್ಣ ಹಾಳಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಜಿಲ್ಲಾಧಿಕಾರಿಗಳು ಎಲ್ಲರೂ ಬಂದು ನೋಡಿ ಹೋದರೂ ಕುಷ್ಟಗಿಯನ್ನು ಪಟ್ಟಿಗೆ ಸೇರಿಸಿಲ್ಲ. ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡದೆ ಕೂಡಲೇ ಕುಷ್ಟಗಿಯನ್ನು ಬರ ಪೀಡಿತ ಎಂದು ಘೋಷಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ:* ಇನ್ನು ಎರಡು ದಿನದಲ್ಲಿ ಕುಷ್ಟಗಿ ಸೇರಿದಂತೆ ಉಳಿದ ತಾಲೂಕುಗಳನ್ನು ಬರ ಎಂದು ಘೋಷಿಸದಿದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಸುರಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾಜುಗೌಡ ನಾಯಕ ಎಚ್ಚರಿಕೆ ನೀಡಿದರು.
"ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರಾಜ್ಯದಲ್ಲಿ ಕೇವಲ 101 ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿ, ಕಲ್ಯಾಣ ಕರ್ನಾಟಕದ ತಾಲೂಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಬಿಜೆಪಿ ಕ್ಷೇತ್ರ ಮಾತ್ರವಲ್ಲ ಕಾಂಗ್ರೆಸ್ ಕ್ಷೇತ್ರದ ತಾಲೂಕುಗಳನ್ನೂ ಬರ ಪಟ್ಟಿಯಿಂದ ಕೈಬಿಟ್ಟಿದೆ. ಮುಂಬರುವ ಎರಡು ದಿನದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಳಿದ ತಾಲೂಕುಗಳನ್ನು ಬರ ಎಂದು ಘೋಷಿಸಬೇಕು" ಎಂದು ಆಗ್ರಹಿಸಿದರು.
ಕೊನೆಯಲ್ಲಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
*ಪ್ರತಿಭಟನೆಯಲ್ಲಿ ಇದ್ದವರು:* ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಿರೇಗೌಡ ಗೌಡ್ರ, ಬಿಜೆಪಿ ಮುಖಂಡರಾದ ಬಸವರಾಜ ಕ್ಯಾವಟರ್, ಬಸವರಾಜ ಹಳ್ಳೂರು, ದೇವೇಂದ್ರಪ್ಪ ಬಳೂಟಗಿ, ಪಕೀರಪ್ಪ ಚಳಗೇರಿ ವಕೀಲರು, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮಾಹಾಂತೇಶ ಬದಾಮಿ, ರವಿಕುಮಾರ ಹಿರೇಮಠ, ಮಲ್ಲಣ್ಣ ಪಲ್ಲೇದ್, ಮಾಜಿ ಪುರಸಭೆ ಅಧ್ಯಕ್ಷ ಕಲ್ಲೇಶ ತಾಳದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಮಹೇಶ ಕ್ಯಾವಟರ್, ವಿನಯಕುಮಾರ ಮೇಲಿನಮನಿ, ಭರಮಗೌಡ ಬ್ಯಾಲಿಹಾಳ, ಈರಣ್ಣ ಗಜೇಂದ್ರಗಡ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ರೈತರು ತಮ್ಮ ಎತ್ತಿನ ಬಂಡಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.