ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು
ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
- ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.2
- ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.1
- ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.2
- ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*- *ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ 10ನೇ ವಾರ್ಡ್ ನಲ್ಲಿ , ಶ್ರೀಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿತಗೊಳಿಸಿರುವ. ಶ್ರೀಗಣೇಶ ದೇವರ ವೇದಿಕೆ ಮುಂಭಾಗದಲ್ಲಿ , ಮಕ್ಕಳಿಗೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೋಟೆಯ ಹಾಗೂ 10ನೇ ವಾರ್ಡಿನ ಮಕ್ಕಳು , ಬಹು ಉತ್ಸುಕತೆಯಿಂದ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಿಮವಾಗಿ ಸ್ಪರ್ಧೆಯಲ್ಲಿ ವಿಚೇತರಾದವರಿಗೆ , ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.1
- ಮರ್ಲಾನಹಳ್ಳಿಯಲ್ಲಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛತಾ ಪ್ರತಿಜ್ಞಾವಿಧಿ1
- ಹಿರೇಓತಗೇರಿ ಗ್ರಾಮದಲ್ಲಿ ಭಕ್ತಿಭಾವದಿಂದ ವಿಘ್ನನಿವಾರಕನ ವಿಸಜ೯ನೆ ಇಳಕಲ್ ; ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಬಳಗದ ವತಿಯಿಂದ ಪ್ರತಿಷ್ಠಾಪನೆ ಮಾಡುದ್ದ ಗಣೇಶನನ್ನ ಇಂದು ಭಕ್ತಿ ಭಾವದಿಂದ ಪೂಜಿಸಿ ವಿಸಜ೯ನೆ ಮಾಡಿದರು.3
- ಕೊಪ್ಪಳ : ಸಂಭ್ರಮದಿಂದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆಚರಣೆ ಕೊಪ್ಪಳ: ಕೊಪ್ಪಳದಲ್ಲಿ ಸಂಭ್ರಮದಿಂದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೇರವೇರಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಸಿದರು.1