*ಹುಣಸೂರಿನ ಎಂಟು ಕೆರೆಗಳಿಗೆ ನೀರು ಪೂರೈಕೆಗೆ ಸೂಚನೆ* - ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸರ್ಕಾರದ ಸ್ಪಂದನೆ ಬೆಂಗಳೂರು, ಆ.27, 2026 ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಅವರ ಮನವಿಗೆ ಸರ್ಕಾರ ಸ್ಪಂದಿಸಿ, ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ನರೇಂದ್ರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಆಯೋಜಿಸಿದ್ದ 2026-27ನೇ ಸಾಲಿನ ಹಾರಂಗಿ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಹುಣಸೂರು ತಾಲೂಕಿನ ಗಾವಡಗೆರೆ, ಜಾಬಗೆರೆ, ಚಿಕ್ಕಕಾಡನಹಳ್ಳಿ, ಹುಲ್ಯಾಳು, ಮಾಚಾಬಾಯನಹಳ್ಳಿ, ಮುಳ್ಳೂರು, ಅಗ್ರಹಾರ ಕೆರೆ ಸೇರಿದಂತೆ ಇನ್ನೂ ಹಲವು ಕೆರೆಗಳಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ನರೇಂದ್ರ ಸ್ವಾಮಿ, ಕಳೆದ 20 ವರ್ಷಗಳಿಂದ ಹಾರಂಗಿ ಜಲಾಶಯಕ್ಕೆ ಬಂದಿರುವ ಒಳಹರಿವಿನ ಪ್ರಮಾಣವನ್ನು ಪರಿಗಣಿಸಿ, ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗುವಂತೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಹರಿಸಿ, ನೀರು ನಿರ್ವಹಣೆ ಮಾಡುವಂತೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಲು ಹಾಗೂ ಸೂಕ್ತ ಪ್ರಕಟಣೆ ಹೊರಡಿಸುವಂತೆ ಹಾಗೂ ಪ್ರಸ್ತುತ ಜಲ ವರ್ಷದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಅಭಾವವಿದ್ದಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆ ಹಾಗೂ ಕಟ್ಟೆಗಳನ್ನು ತುಂಬಿಸಲು ನಾಲೆಗಳ ಮೂಲಕ ನೀರನ್ನು ಹರಿಸಲು ತಿಳಿಸಿದರು. ಇದಕ್ಕೂ ಮುನ್ನ ಸಭೆಯ ಆರಂಭದಲ್ಲಿ ಮಾತನಾಡಿದ ಹಾರಂಗಿ ಯೋಜನಾ ವೃತ್ತ ಅಧೀಕ್ಷಕ ಇಂಜಿನಿಯರ್, ಹಾರಂಗಿ ಜಲಾಶಯ ಭರ್ತಿಯಾಗಿದೆ. ಪ್ರಸ್ತುತ ನೀರಿನ ಮಟ್ಟ 2856.79 ಅಡಿಗಳಿದ್ದು, 7 ಟಿಎಂಸಿ ಉಪಯುಕ್ತ ನೀರಿನ ಸಂಗ್ರಹವಿದೆ. ಈವರೆಗಿನ ಕನಿಷ್ಠ ಒಳಹರಿವು ಪರಿಗಣಿಸಿದರೆ ಜಲಾಶಯಕ್ಕೆ ಕನಿಷ್ಠ 9.51 ಟಿಎಂಸಿ ನೀರು ಬರುವ ಬಗ್ಗೆ ಅಂದಾಜಿಸಲಾಗಿದೆ. ಈ ಆಧಾರದ ಮೇಲೆ ಕಟ್ಟು ನೀರಾವರಿ ಪದ್ಧತಿಯಂತೆ ನೀರು ಹರಿಸಬಹುದು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಕೆ.ವೆಂಕಟೇಶ್, ಮಂತರ್‌ಗೌಡ, ಎ. ಮಂಜು, ಭೋಸ್‌ರಾಜ್, ಡಿ. ರವಿಶಂಕರ್, ಹಾರಂಗಿ ಮಹಾಮಂಡಲದ ನೀರು ಬಳೆಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಸೇರಿದಂತೆ ಇತರರಿದ್ದರು.
*ಹುಣಸೂರಿನ ಎಂಟು ಕೆರೆಗಳಿಗೆ ನೀರು ಪೂರೈಕೆಗೆ ಸೂಚನೆ* - ಶಾಸಕ ಜಿ.ಡಿ. ಹರೀಶ್ ಗೌಡರ ಮನವಿಗೆ ಸರ್ಕಾರದ ಸ್ಪಂದನೆ ಬೆಂಗಳೂರು, ಆ.27, 2026 ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಜಿ.ಡಿ. ಹರೀಶ್ ಗೌಡ ಅವರ ಮನವಿಗೆ ಸರ್ಕಾರ ಸ್ಪಂದಿಸಿ, ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ನರೇಂದ್ರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಆಯೋಜಿಸಿದ್ದ 2026-27ನೇ ಸಾಲಿನ ಹಾರಂಗಿ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಹುಣಸೂರು ತಾಲೂಕಿನ ಗಾವಡಗೆರೆ, ಜಾಬಗೆರೆ, ಚಿಕ್ಕಕಾಡನಹಳ್ಳಿ, ಹುಲ್ಯಾಳು, ಮಾಚಾಬಾಯನಹಳ್ಳಿ, ಮುಳ್ಳೂರು, ಅಗ್ರಹಾರ ಕೆರೆ ಸೇರಿದಂತೆ ಇನ್ನೂ ಹಲವು ಕೆರೆಗಳಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ನರೇಂದ್ರ ಸ್ವಾಮಿ, ಕಳೆದ 20 ವರ್ಷಗಳಿಂದ ಹಾರಂಗಿ ಜಲಾಶಯಕ್ಕೆ ಬಂದಿರುವ ಒಳಹರಿವಿನ ಪ್ರಮಾಣವನ್ನು ಪರಿಗಣಿಸಿ, ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗುವಂತೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಹರಿಸಿ, ನೀರು ನಿರ್ವಹಣೆ ಮಾಡುವಂತೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ರೈತರಿಗೆ ಸೂಕ್ತ ತಿಳುವಳಿಕೆ ನೀಡಲು ಹಾಗೂ ಸೂಕ್ತ ಪ್ರಕಟಣೆ ಹೊರಡಿಸುವಂತೆ ಹಾಗೂ ಪ್ರಸ್ತುತ ಜಲ ವರ್ಷದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಅಭಾವವಿದ್ದಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆ ಹಾಗೂ ಕಟ್ಟೆಗಳನ್ನು ತುಂಬಿಸಲು ನಾಲೆಗಳ ಮೂಲಕ ನೀರನ್ನು ಹರಿಸಲು ತಿಳಿಸಿದರು. ಇದಕ್ಕೂ ಮುನ್ನ ಸಭೆಯ ಆರಂಭದಲ್ಲಿ ಮಾತನಾಡಿದ ಹಾರಂಗಿ ಯೋಜನಾ ವೃತ್ತ ಅಧೀಕ್ಷಕ ಇಂಜಿನಿಯರ್, ಹಾರಂಗಿ ಜಲಾಶಯ ಭರ್ತಿಯಾಗಿದೆ. ಪ್ರಸ್ತುತ ನೀರಿನ ಮಟ್ಟ 2856.79 ಅಡಿಗಳಿದ್ದು, 7 ಟಿಎಂಸಿ ಉಪಯುಕ್ತ ನೀರಿನ ಸಂಗ್ರಹವಿದೆ. ಈವರೆಗಿನ ಕನಿಷ್ಠ ಒಳಹರಿವು ಪರಿಗಣಿಸಿದರೆ ಜಲಾಶಯಕ್ಕೆ ಕನಿಷ್ಠ 9.51 ಟಿಎಂಸಿ ನೀರು ಬರುವ ಬಗ್ಗೆ ಅಂದಾಜಿಸಲಾಗಿದೆ. ಈ ಆಧಾರದ ಮೇಲೆ ಕಟ್ಟು ನೀರಾವರಿ ಪದ್ಧತಿಯಂತೆ ನೀರು ಹರಿಸಬಹುದು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಕೆ.ವೆಂಕಟೇಶ್, ಮಂತರ್‌ಗೌಡ, ಎ. ಮಂಜು, ಭೋಸ್‌ರಾಜ್, ಡಿ. ರವಿಶಂಕರ್, ಹಾರಂಗಿ ಮಹಾಮಂಡಲದ ನೀರು ಬಳೆಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಸೇರಿದಂತೆ ಇತರರಿದ್ದರು.
- All About,Who shud be held responsible/Accountable for all Kinds of Irregularities in #KSBA #Bengaluru *ಭಾರತ ನಲ್ಲಿ ವೈರಲ್*1
- ಗುಂಡ್ಲುಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್: ಸೌಹಾರ್ದತೆಯ ಸಂದೇಶ. ಗುಂಡ್ಲುಪೇಟೆ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳು ನಡೆದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕಾರ ಮಾಡಲಾಗಿದ್ದು, ಮುಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಅನ್ನದಾನ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.1
- ಹಲಗೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ. ಮಳವಳ್ಳಿ:- ತಮಿಳುನಾಡಿಗೆ ಮತ್ತೆ ಒಂಬತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದನ್ನು ವಿರೋಧಿಸಿ ತಮಿಳುನಾಡಿಗೆ ತಕ್ಷಣವೇ ನೀರುಬಿಡುತ್ತಿರುವುದನ್ನು ನಿಲ್ಲಿಸಿ, ರೈತರಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಹಲಗೂರು ವೃತ್ತದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಜುಲೈ 29ರಿಂದ ಆಗಸ್ಟ್ 24ರವರೆಗೆ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆಆದೇಶ ನೀಡಿದ ಹಿನ್ನೆಲೆ ನೀರು ಬಿಟ್ಟಿದ್ದರೂ ಸಹ, ನೆನ್ನೆಯಿಂದ ಮತ್ತೆ ಪ್ರತಿದಿನ9,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೊಸ ಆದೇಶ ನೀಡಿದೆ. ಇದು ನಮ್ಮ ರಾಜ್ಯದ ಜನರಿಗೆ, ಜಿಲ್ಲೆಯ ಜನತೆಗೆ, ನಮ್ಮ ನಾಡಿನ ರೈತರಿಗೆ, ಮರಣ ಶಾಸನ ವಿದ್ದಂತೆ. ಏಕೆಂದರೆ ಈಗಾಗಲೇ ಮುಂಗಾರು ಮಳೆ ಬಂದಿಲ್ಲ, ನಮ್ಮ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ನಮ್ಮ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ರಾಜ್ಯದ ರೈತರಿಗೆ ಬರ ಪರಿಹಾರ ನೀಡಿಲ್ಲ. ಆದುದರಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಈ ರಾಜ್ಯದ ಜನರಿಗೆ ರೈತರ ವ್ಯವಸಾಯಕ್ಕಾಗಿ ನೀರು ಬಿಡಬೇಕಾಗಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದ 30 ಸಂಸದರು ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಿ ಎಂದರು. ಸ್ಥಳದಲ್ಲಿದ್ದ ನಾಡಕಚೇರಿ ಉಪ ತಹಸೀಲ್ದಾರ್ ಕೆ. ನಟರಾಜ್ ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅವರು ಮಾತನಾಡಿ, ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ,ಕೇಂದ್ರಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂತೋಷ್, ಚಂದ್ರು, ಬಸಂತ್ ಕುಮಾರ್, ಪೂರ್ಣಚಂದ್ರ ,ಮುನಿ ಮಹಾದೇವಸ್ವಾಮಿ, ವಾಸೀಮ್ಅಕ್ರಂ , ಅಬ್ದುಲ್ ರಹಮಾನ್, ರಿಯಾಜ್, ಸೇರಿದಂತೆ ಇತರರು ಇದ್ದರು1
- ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಗತಿ ಹಾಗೂ ಲೆಕ್ಕ ನಿರ್ವಹಣೆ ಕುರಿತು ಲೆಕ್ಕ ಪರಿಶೋಧಕ ರಾಜೇಶ್ ಮೆಚ್ಚುಗೆ ಮಳವಳ್ಳಿಯ ಪ್ರತಿಷ್ಠಿತ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಗತಿ ಹಾಗೂ ಲೆಕ್ಕ ನಿರ್ವಹಣೆಯ ಬಗ್ಗೆ ಲೆಕ್ಕ ನಿರ್ವಹಣೆ ಸಾಧನೆ ಕುರಿತು ಲೆಕ್ಕ ಪರಿಶೋಧಕ ರಾಜೇಶ್ ಪಿ ಮೆಚ್ಚುಗೆ1
- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು. ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.1
- All About,Misappropriation of funds by highly influential person in #Hyderabad *ಭಾರತ ನಲ್ಲಿ ವೈರಲ್*1
- ಮದ್ದೂರು ಕಾಲೋನಿಯಲ್ಲಿ ಹುಲಿ ಸೆರೆ: ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು. ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಕಾಲೋನಿ ಗ್ರಾಮದ ರೈತರ ಜಮೀನಿನಲ್ಲಿ ಮಂಗಳವಾರ ಹುಲಿಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ರೈತರ ಕಣ್ಣಿಗೆ ಹುಲಿ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಗ್ರಾಮಸ್ಥರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಡ್ರೋನ್ ಮೂಲಕ ಹುಲಿಯ ಚಲನವಲನವನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದರು. ಸುಮಾರು ರಾತ್ರಿ 10 ಗಂಟೆಯ ವೇಳೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಇದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದರು. ಹುಲಿಯನ್ನು ಕೂಡಲೇ ಸೆರೆಹಿಡಿದು ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಡಾ. ವಸೀಮ್ ಮಿರ್ಜಾ ಹಾಗೂ ಡ್ರೋನ್ ಪೈಲಟ್‌ಗಳಾದ ಕೌಶಿಕ್ ಮತ್ತು ಕಾರ್ತಿಕ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.1
- ಬಾಳೆಹೊನ್ನಿಗ ಗ್ರಾಮದಲ್ಲಿ ಬಾಳೆ ತೋಟಕ್ಕೆ ಕಾಡಾನೆಗಳ ಲಗ್ಗೆ ಮೂರು ಲಕ್ಷ ರೂ ನಷ್ಟ. ಮಳವಳ್ಳಿ: ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳು ಬಾಳೆಹೊನ್ನಿಗ ಗ್ರಾಮದ ಬಿ.ಕೆ.ಇಂದ್ರ ಮತ್ತು ಬಿ.ವಿ.ಕೃಷ್ಣಪ್ಪ ಎಂಬುವರಿಗೆ ಸೇರಿದ ಬಾಳೆ ತೋಟಕ್ಕೆ ಲಗ್ಗೆ ಇಟ್ಟು ಸುಮಾರು 400 ಪಸಲು ಭರಿತವಾದ ಬಾಳೆ ಗಿಡಗಳನ್ನು ಮುರಿದು ಅದರ ತಿರುಳನ್ನು ತಿಂದು ಸುಮಾರು ಮೂರು ಲಕ್ಷ ರೂ ನಷ್ಟ ಸಂಭವಿಸಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ಬಳಿ ನಡೆದಿದೆ ಮೂಲತಃ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಮಾತನಾಡಿ, ನಮ್ಮಮಾವನವರಾದ ಬಿ.ವಿ.ಕೃಷ್ಣಪ್ಪ ಮತ್ತು ನನ್ನ ಪತ್ನಿಯಾದ ಬಿ.ಕೆ.ಇಂದ್ರರಾಜ್ ರವರು ಮೂರು ಎಕರೆ ಜಮೀನಿನಲ್ಲಿ ಸುಮಾರು 2,784 ಯಾಲಕ್ಕಿಬಾಳೆ ಗಿಡಗಳನ್ನು ಹಾಕಿ ರಾತ್ರಿ ಹಗಲು ಎನ್ನದೆ ವಿದ್ಯುತ್ ಕಣ್ಣಮುಚ್ಚಾಲೆ ಆಟದಲ್ಲಿ ಜಮೀನಿಗೆ ನೀರು ಹಾಯಿಸಿ ಪಸಲು ಬೆಳೆದಿದ್ದು, ಇನ್ನು ಎರಡು ತಿಂಗಳೊಳಗೆ ಬಾಳೆ ಗೊನೆಗಳನ್ನು ಕಟಾವ್ ಮಾಡಿ ಮಾರಾಟ ಮಾಡಬೇಕಾಗಿತ್ತು. ಆದರೆ ಸೋಮವಾರ ತಡರಾತ್ರಿ ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಗುಂಪು ನಮ್ಮ ಬಾಳೆ ತೋಟಕ್ಕೆ ನುಗ್ಗಿ ಫಲ ಬಿಟ್ಟಿದ್ದ ಸುಮಾರು 400 ಬಾಳೆ ಗಿಡಗಳನ್ನು ಮುರಿದು ಅದರ ತಿರುಳನ್ನು ತಿಂದು ಬೆಳೆಯನ್ನು ನಾಶಪಡಿಸಿರುತ್ತವೆ. ಸಮಯಕ್ಕೆ ಸರಿಯಾಗಿ ರಾಮನಗರ ವ್ಯಾಪ್ತಿಯ 30ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಮತ್ತೆ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಯಶಸ್ವಿಯಾದರು. ಇವರು ರಾತ್ರಿ ಬರದಿದ್ದರೆ ನಮ್ಮ ಬಾಳೆ ತೋಟ ಪೂರ್ತಿ ಕಾಡಾನೆ ಗಳುತುಳಿದು ನಾಶವಾಗುತ್ತಿತ್ತು. ಹಲಗೂರು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಮಯಕ್ಕೆ ಸ್ಥಳಕ್ಕೆ ಬರದಿರುವುದಕ್ಕೆರಾಜು ಬೇಸರ ವ್ಯಕ್ತಪಡಿಸಿದರು. ನಾವು ಬೆಳೆದ ಪಸಲುಗಳು ಕೈ ಸೇರುವ ಮುನ್ನವೇ ಕಾಡಾನೆಗಳ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ರೈತರ ಬೆಳೆ ಉಳಿಸುವಂತೆ ಆಗ್ರಹಿಸಿ, ಸರ್ಕಾರದಿಂದ ನಮಗೆ ಕೊಡುವಪರಿಹಾರದ ಹಣ ಸಾಲುವುದಿಲ್ಲ ಸೂಕ್ತವಾಗಿ ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಸಿಬ್ಬಂದಿಯವರೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.1
- ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು4