ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು
ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ
ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು ಹನೂರು:
ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ
ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು
- ಕೊಳ್ಳೇಗಾಲ. ಪಾಳ್ಯ ಕೆರೆಗಳಿಗೆ ನೀರು ಹರಿಸುವಂತೆ ಗ್ರಾಮದ ಕೆರೆ ಅಚ್ಚುಕಟ್ಟುದಾರರು ಮತ್ತು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ನೀರಾವರಿ ಕಚೇರಿ ಮುಂದೆ ಪಾಳ್ಯ ಗ್ರಾಮದ ರೈತರು ಕುಳಿತು ಘೋಷಣೆಯ ಮೂಲಕ ಪ್ರತಿಭಟಿಸಿ, ನಂತರ ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ಪುಣ್ಯಶ್ರೀ ರವರಿಗೆ ಮನವಿಪತ್ರ ಸಲ್ಲಿಸಿದರು. ನಂತರ ಯುವ ರೈತ ಹರೀಶ್ ಮಾತನಾಡಿ, ನಮ್ಮ ಪಾಳ್ಯ ಗ್ರಾಮದ ಕೆರೆಗಳಿಗೆ ನೀರು ಬೀಡದೇ ಕಬಿನಿ ಜಲಾಶಯದ ನೀರು ಕಳೆದ 15 ದಿನಗಳಿಂದ ಚಾನಲ್ ಮೂಲಕ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದ್ದರಿಂದ ಪಾಳ್ಯ ಗ್ರಾಮದ ಸಾವಿರಾರು ಎಕರೆ ಜಮೀನುಗಳು ಸರಿಯಾದ ಸಮಯಕ್ಕೆ ಮಳೆಯಾಗದೇ ಹಾಗೂ ಜಲಾಶಯದಿಂದ ನೀರು ಬೀಡದೇ ಒಣಗುತ್ತಿದೆ ಎಂದು ಆರೋಪಿಸಿದರು. ರೈತರು ಐದಾರು ಬಾರಿ ಬಂದು ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಪಾಳ್ಯ ಗ್ರಾಮದ ಚಿಕ್ಕ ಕೆರೆ ಹಾಗೂ ದೊಡ್ಡ ಕೆರೆಗೆ ನೀರು ತುಂಬಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯ ಮಾಡಿದರು. ಪ್ರತಿಭಟನೆಯಲ್ಲಿ ಪಾಳ್ಯ ಗ್ರಾಮದ ಸಿದ್ದಪ್ಪನಾಯಕ, ಸೀಗನಾಯಕ, ದೊಡ್ಡರಾಜನಾಯಕ, ತಂಬಡಿ ಬಸವರಾಜಪ್ಪ, ನಂಜುಂಡಸ್ವಾಮಿ, ಪಕಾಲಿನಾಯಕ, ದೊಡ್ಡಸೀಗನಾಯಕ, ರಾಜಪ್ಪ, ಪಾರ್ಥ, ರೈತ ಮುಖಂಡರು ಇದ್ದರು.4
- ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು. ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ. ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.1
- ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್ ನಾಯಕ, ಟೌನ್ ಅಧ್ಯಕ್ಷ ಅಫ್ನನ್, ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.4
- ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ ಅಲಗಾಡುತ್ತಿದೆ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ. ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ1
- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು. ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.1
- ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಗೆ 1,000 ಹಣ ಕೇಳಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಗ್ರಾಮದ ಬಡ ಕುಟುಂಬದ ರೈತಾಪಿ ಜನರ ಮೇಲೆ ಚಿಕಿತ್ಸೆ ನೀಡಿ ಸರಿಪಡಿಸಬೇಕಾದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಬರೆದು ಉಚಿತ ಆಂಬುಲೆನ್ಸ್ ಸೇವೆ ಇದ್ದರೂ ಕೂಡ ವಯಸ್ಸಾದ ರೋಗಿಗಳ ಬಳಿ ಸಾವಿರ ರೂಪಾಯಿಗಳ ಸುಲಿಗೆ ಮಾಡಲು ಮುಂದಾಗಿದ್ದಾರೆ.1
- ಹಲಗೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ. ಮಳವಳ್ಳಿ:- ತಮಿಳುನಾಡಿಗೆ ಮತ್ತೆ ಒಂಬತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದನ್ನು ವಿರೋಧಿಸಿ ತಮಿಳುನಾಡಿಗೆ ತಕ್ಷಣವೇ ನೀರುಬಿಡುತ್ತಿರುವುದನ್ನು ನಿಲ್ಲಿಸಿ, ರೈತರಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಹಲಗೂರು ವೃತ್ತದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಜುಲೈ 29ರಿಂದ ಆಗಸ್ಟ್ 24ರವರೆಗೆ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆಆದೇಶ ನೀಡಿದ ಹಿನ್ನೆಲೆ ನೀರು ಬಿಟ್ಟಿದ್ದರೂ ಸಹ, ನೆನ್ನೆಯಿಂದ ಮತ್ತೆ ಪ್ರತಿದಿನ9,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೊಸ ಆದೇಶ ನೀಡಿದೆ. ಇದು ನಮ್ಮ ರಾಜ್ಯದ ಜನರಿಗೆ, ಜಿಲ್ಲೆಯ ಜನತೆಗೆ, ನಮ್ಮ ನಾಡಿನ ರೈತರಿಗೆ, ಮರಣ ಶಾಸನ ವಿದ್ದಂತೆ. ಏಕೆಂದರೆ ಈಗಾಗಲೇ ಮುಂಗಾರು ಮಳೆ ಬಂದಿಲ್ಲ, ನಮ್ಮ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ನಮ್ಮ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ರಾಜ್ಯದ ರೈತರಿಗೆ ಬರ ಪರಿಹಾರ ನೀಡಿಲ್ಲ. ಆದುದರಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಈ ರಾಜ್ಯದ ಜನರಿಗೆ ರೈತರ ವ್ಯವಸಾಯಕ್ಕಾಗಿ ನೀರು ಬಿಡಬೇಕಾಗಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದ 30 ಸಂಸದರು ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಿ ಎಂದರು. ಸ್ಥಳದಲ್ಲಿದ್ದ ನಾಡಕಚೇರಿ ಉಪ ತಹಸೀಲ್ದಾರ್ ಕೆ. ನಟರಾಜ್ ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅವರು ಮಾತನಾಡಿ, ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ,ಕೇಂದ್ರಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂತೋಷ್, ಚಂದ್ರು, ಬಸಂತ್ ಕುಮಾರ್, ಪೂರ್ಣಚಂದ್ರ ,ಮುನಿ ಮಹಾದೇವಸ್ವಾಮಿ, ವಾಸೀಮ್ಅಕ್ರಂ , ಅಬ್ದುಲ್ ರಹಮಾನ್, ರಿಯಾಜ್, ಸೇರಿದಂತೆ ಇತರರು ಇದ್ದರು1
- ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ–ಕರಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಆ.15ರಂದು ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಿದವು. ಕೆಂಪೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಧರಣಿ ನಡೆಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ, ಆರೋಪಿತ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಭಾಗವಹಿಸಿದ್ದರು4