Shuru
Apke Nagar Ki App…
ಗುಳೇದಗುಡ್ಡದ: ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಸಂಭ್ರಮದ ಭಾವಚಿತ್ರದ ಮೆರವಣಿಗೆ ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಗುಳೇದಗುಡ್ಡದ: ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಸಂಭ್ರಮದ ಭಾವಚಿತ್ರದ ಮೆರವಣಿಗೆ ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.
More news from ಕರ್ನಾಟಕ and nearby areas
- ಗುಳೇದಗುಡ್ಡ: ರಾಜಋಷಿ ಶ್ರೀಭಗೀರಥ ಮಹರ್ಷಿಗಳ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಡೊಳ್ಳು ಮೇಳ, ಕುಂಭ ಮೇಳದ ಮೂಲಕ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಸಮೀಪದ ಪರ್ವತಿ ಗ್ರಾಮದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡು ನಗರದ ಹಾದಿಬಸವೇಶ್ವರ ದೇವಸ್ಥಾನ, ಬನ್ನಿಕಟ್ಟಿ, ಸರಾಪ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪರಸಭೆ, ಭಾರತ ಮಾರ್ಕೆಟ್ ಮೂಲಕ ಹಾಯ್ದು ಗ್ರಾಮಕ್ಕೆ ತಲುಪಿತು. ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಗ್ರಾಮಸ್ಥರು ಇದ್ದರು.1
- ಬಾಗಲಕೋಟೆ:625ಕ್ಕೆ 621 ಅಂಕಗಳಿಸಿದ ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ಅದ್ಭುತ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಶಾಲೆಯ ಶಿಕ್ಷಕರು ವಿದ್ಯಾರ್ಥಿಯ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಶಿಸ್ತುಬದ್ಧ ಜೀವನ ಶೈಲಿಯೇ ಈ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರು, ತಮ್ಮ ಯಶಸ್ಸಿಗೆ ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಮೂಡಿಸಿದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ.1
- Post by Iranna Tarnal1
- ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕು ಕೆರೂರು. ಪೊಲೀಸ್ ಸ್ಟೇಷನ್ ನಲ್ಲಿ ಲಂಚ 1,70,000 ರೂ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗೆಳಿಗೆ ಸಿಕ್ಕಿಬಿದ್ದ ಪಿ ಎಸ್ ಐ ಮತ್ತು ಒಬ್ಬರು ಪಿಸಿ ಸಸ್ಪೆಂಡ್ ಆಗಿದ್ದಾರೆ1
- ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಚನ್ನವೀರ ಚಲವಾದಿ ಹೇಳಿದರು ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ ಮಂಗಳವಾರ ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.2
- Post by @april14news1
- ವಿಜಯಪುರ: ಕಾಂಗ್ರೆಸ್ ನಿಂದ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಆಗಿಲ್ಲ ದಾವಣಗೆರೆ ಉಪಚುನಾವಣೆಯಲ್ಲಿ ಶಾಮನೂರು ಶಿವಶರಣಪ್ಪನವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮಾಜಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಂ ಸಮಾಜಕ್ಕೂ ಟಿಕೆಟ್ ನೀಡಲಾಗುವುದು ಎಂದರು. ಟಿಕೆಟಿಗಾಗಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ವಿಜಯಪುರದಲ್ಲಿ ಗುರುವಾರದಂದು ಕಾಂಗ್ರೆಸ್ ವಕ್ತಾರೆ ಗಣಿಯಾರ ಹೇಳಿದರು.1
- ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.1