ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ: ವೀರಗಾಸೆ ಕಲಾ ತಂಡಕ್ಕೆ ‘ಕರುನಾಡ ಪದ್ಮಶ್ರೀ’ ಪ್ರಶಸ್ತಿ ಗೌರವ. ಹೊರ ರಾಜ್ಯದಲ್ಲಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಗೋವಾದ ಬಿಚೋಲಿಂನಲ್ಲಿ ‘16ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ’ವನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿತ್ತು. ಕರ್ಮಭೂಮಿ ಕನ್ನಡ ಸಂಘ (ಬಿಚೋಲಿಂ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಡ್ಲಘಟ್ಟದ ಕಲಾ ಜ್ಯೋತಿ ಜಾನಪದ ಕಲಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು. ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಕರುನಾಡಿನ ವೀರಗಾಸೆ ಕಲಾ ವೈಭವ ಪ್ರದರ್ಶನಗೊಂಡಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರಿನ ‘ಕಲಾ ಜ್ಯೋತಿ ಜಾನಪದ ಕಲಾ ಸಂಸ್ಥೆ’ಯ ಕಲಾವಿದರು ಅಬ್ಬರದ ಚಮತ್ಕಾರಿಕ ಪ್ರದರ್ಶನದ ಮೂಲಕ ಗೋವಾದ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿದರು. ತಂಡದ ಅದ್ಭುತ ಪ್ರದರ್ಶನವನ್ನು ಮೆಚ್ಚಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ತಂಡದ ಎಲ್ಲಾ ಸದಸ್ಯರಿಗೆ ‘ಕರುನಾಡ ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಮಾತನಾಡಿ, ಗೋವಾದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರ ದೊಡ್ಡದಿದೆ ಹಾಗೂ ಇಂತಹ ಸಾಂಸ್ಕೃತಿಕ ವಿನಿಮಯಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ ಅವರು ಗಡಿ ಭಾಗದ ಕನ್ನಡಿಗರ ಸಮಸ್ಯೆ ಹಾಗೂ ಸಾಂಸ್ಕೃತಿಕ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಬೆಳಗಾವಿ ಉಕ್ಕೇರಿ ಹಿರೇಮಠದ ಚಟಸ್ಥಲ ಬ್ರಹ್ಮ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಕಾರ್ಯಕ್ರಮದಲ್ಲಿ ಕೊತ್ತನೂರು ವೀರಗಾಸೆ ತಂಡದ ಮುಖ್ಯಸ್ಥರಾದ ಗಂಗಾಧರ್ ಅವರಿಗೆ ಸತತ ಮೂರನೇ ಬಾರಿ ‘ಕರುನಾಡ ಪದ್ಮಶ್ರೀ’ ಪ್ರಶಸ್ತಿ ಒಲಿದು ಬಂದಿರುವುದು ವಿಶೇಷವಾಗಿತ್ತು. ಅವರ ಕಲಾ ಸೇವೆ ಮತ್ತು ವೀರಗಾಸೆಯನ್ನು ಅಂತರರಾಜ್ಯ ಮಟ್ಟದಲ್ಲಿ ಪಸರಿಸುತ್ತಿರುವ ಶ್ರಮವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು. ಹಿರಿಯ ಕಲಾವಿದರು ಹಾಗೂ ಕಲಾ ಅಭಿಮಾನಿಗಳು ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ವರದಿ ನಂದಿ ರಾಜೇಶ್

- Post by Venu Gopal2
- ದೇವನಹಳ್ಳಿ ದೇವನಹಳ್ಳಿ ಹೊಟೇಲ್ ಮಾಲೀಕರಿಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಿಸಿ. ಕೆಂಪೇಗೌಡ ಏರ್ ಪೋರ್ಟ್ ಸುತ್ತಲಿರುವ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ. ಗ್ಯಾಸ್ ಸಿಲಿಂಡರ್ ಸಮರ್ಪಕ ಪೂರೈಕಿಯಿಂದ ಕಂಗಾಲಾದ ಹೊಟೇಲ್ ಮಾಲೀಕರು. ದೇವನಹಳ್ಳಿ ಪಟ್ಟಣದ 100ಕ್ಕೂ ಹೆಚ್ಚು ಹೊಟೇಲ್ ಗಳಿಗ ಪೂರೈಕೆ ಹಾಗದ ಸಿಲಿಂಡರ್. ಹತ್ತು ಸಿಲಿಂಡರ್ ಪೂರೈಕೆ ಆಗ್ತಿದ್ದ ಹೊಟೇಲ್ ಗಳಿಗೆ ಈಗ ಒಂದೆರಡು ಸಿಲಿಂಡರ್ ಪೂರೈಕೆ. ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ಕೊಡಲು ಆಗ್ತಿಲ್ಲ ಎಂದು ಹೆಡ್ ಕುಕ್ ಅಳಲು ಇದರ ನಡುವೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚು ಒಂದು ಸಿಲಿಂಡರ್ ಮೇಲೆ ಹೆಚ್ಚುವರಿ ಬೆಲೆ ಕೊಟ್ಟು ಖರೀದಿಸುತ್ತಿರುವ ಮಾಲೀಕರು. ಕೂಡಲೇ ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಭಾಗದ ಹೊಟೇಲ್ ಮಾಲೀಕರಿಗೆ ಸಂಕಷ್ಟ. ................1
- KOLAR KI.AWAAZ KOUSAR NEWS1
- *ತಾಯಿಯ ಪ್ರೀತಿಗೆ ಕೊನೆ ಇಲ್ಲ ತಾಯಿಗಿಂತ ಮತ್ತೊಂದು ದೈವ ವಿಲ್ಲ*1
- ಹಳೆ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಳ ನೇಮಕಾತಿ ಮಾಡಿ ಬಾಗೇಪಲ್ಲಿ:- ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಲಂಬಾಣಿ (ಗೋರ್ ಬಂಜಾರ್)ಅಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಲಂಬಾಣಿ ಜಿಲ್ಲಾದ್ಯಕ್ಷ ಶ್ರೀರಾಮ ನಾಯಕ್ ಒತ್ತಾಯಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು. ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಶಂಕರ್ ನಾಯಕ್ ಮಾತನಾಡಿ ಶಿಕ್ಷಣ, ಹಾಸ್ಟೆಲ್ ಹಾಗೂ ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯಬೇಕು, ರಾಜ್ಯ ಸರ್ಕಾರ ಹೊಸದಾಗಿ ನೀಡುತ್ತಿರುವ ಜಾತಿ ಪ್ರಮಾಣಪತ್ರವನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣಪತ್ರವನ್ನು ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಆಗಿರುವ ನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್(ಬಾಂಬೆ), ಉಪಾಧ್ಯಕ್ಷ ಶಿವಶಂಕರ್, ಖಜಾಂಚಿ ಸುರೇಶ್ ನಾಯಕ್,ಮಂಜುನಾಥ್ ನಾಯಕ್,ಬಾಲು ನಾಯಕ್,ನಾಗೇ ನಾಯಕ್,ಶ್ರೀನಿವಾಸ್ ನಾಯಕ್,ರಮೇಶ್ ನಾಯಕ್, ಆರ್.ನಾರಾಯಣ್ ನಾಯಕ್, ರಾಮಾಂಜಿ ನಾಯಕ್, ನರಸಿಂಹ ನಾಯಕ್, ಬಾಬು ನಾಯಕ್ ಹಾಗೂ ಲಂಬಾಣಿ ಸಮುದಾಯದವರು ಹಾಜರಿದ್ದರು.1
- ಭಾಲ್ಕಿ :-ನಾಗಮೋಹನದಾಸ ವರದಿ ಧಿಕ್ಕರಿಸಿ, ಭಾಲ್ಕಿ ಪಟ್ಟಣದಲ್ಲಿ ಬೃಹತ ಪ್ರತಿಭಟನೆ ರ‍್ಯಾಲಿ.1
- नेपाली गीत1
- KOLAR KI.AWAAZ KOUSAR NEWS1