Shuru
Apke Nagar Ki App…
ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
Suresh Belagere
ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
More news from ಕರ್ನಾಟಕ and nearby areas
- ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಇದೀಗ ಆತಂಕಕಾರಿ ಸ್ವರೂಪ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೆರೆಯೊಳಗೆ ಆಳವಾದ ಸುರಂಗಗಳನ್ನು ಕೊರೆದು, ಅಪಾಯಕಾರಿ ಪರಿಸ್ಥಿತಿಯಲ್ಲಿ ಎತ್ತಿನ ಬಂಡಿಗಳಿಗೆ ಮರಳು ತುಂಬುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ 10 ರಿಂದ 15 ಎತ್ತಿನಗಾಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಮೇಲಿನ ಕಪ್ಪು ಮಣ್ಣನ್ನು ತೆಗೆದು 5 ರಿಂದ 8 ಅಡಿ ಆಳದವರೆಗೆ ಸುರಂಗ ಕೊರೆದು ಮರಳು ತೆಗೆಯಲಾಗುತ್ತಿದೆ. ಈ ಅಕ್ರಮ ಮರಳು ಹಾಗೂ ಮಣ್ಣು ದಂಧೆಯಿಂದ ಕೆರೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದು, ಎಲ್ಲೆಂದರಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸುರಂಗಗಳಲ್ಲಿ ಮರಳು ತುಂಬಲಾಗುತ್ತಿದ್ದು, ಈ ಹಿಂದೆ ಇಂತಹ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಜಿಲ್ಲಾಡಳಿತ ಅಕ್ರಮ ಪ್ರವೇಶ ತಡೆಯಲು ಕೆರೆಯ ಸುತ್ತ ಕಾಲುವೆ ನಿರ್ಮಿಸಿದ್ದರೂ, ಅದನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಕೆರೆಯಂಗಳದಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿಗಳ ಜಲಮಟ್ಟಕ್ಕೂ ಇದರಿಂದ ಭಾರಿ ಹಾನಿಯಾಗಿದ್ದು, ಅಕ್ರಮ ಮರಳು ದಂಧೆಯಿಂದ ಜಲಮೂಲಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ? ಬೊಮ್ಮಸಂದ್ರ ಕೆರೆಯಲ್ಲಿನ ಈ ಸುರಂಗ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.1
- ಹೊಳಲ್ಕೆರೆ ಮತಕ್ಷೇತ್ರದ ಚಿತ್ರಹಳ್ಳಿ ಗ್ರಾಮದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿ ಮತ್ತು ನೂತನ ಅಂಗನವಾಡಿ ಕೇಂದ್ರ ನಿರ್ಮಾಣದ ಕಾಮಗಾರಿಗಳಿಗೆ ಶಾಸಕ ಎಂ. ಚಂದ್ರಪ್ಪ ಅವರು ಇಂದು ಚಾಲನೆ ನೀಡಿದ್ದಾರೆ. ಒಟ್ಟು ₹65 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಈ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಶಾಸಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.1
- ಚಿತ್ರದುರ್ಗದಲ್ಲಿ ಪ್ರೀತಿಸಿ ಅಂತರಜಾತಿ ವಿವಾಹವಾಗಿರುವ ಒಂದು ಯುವ ಜೋಡಿಗೆ ಇದೀಗ ಜೀವಭಯ ಎದುರಾಗಿದೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿರುವ ಈ ದಂಪತಿಗಳು, ತಮ್ಮ ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ್ದಾರೆ. ತಮ್ಮ ಪ್ರೇಮ ವಿವಾಹದ ಕಾರಣದಿಂದ ಎದುರಾಗಿರುವ ಸವಾಲುಗಳ ನಡುವೆ, ಅವರು ಸುರಕ್ಷಿತವಾಗಿ ಬದುಕಲು ಪೊಲೀಸ್ ರಕ್ಷಣೆಯನ್ನು ಯಾಚಿಸಿದ್ದಾರೆ.1
- ಭದ್ರಾವತಿ ನಗರದಲ್ಲಿ ದೀರ್ಘಕಾಲದ ನಂತರ ಮಳೆ ಸುರಿದಿದ್ದು, ಇದರಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ಬಿಸಿಲಿನ ಬೆವರಿನಿಂದ ತೀವ್ರವಾಗಿ ಹೈರಾಣಾಗಿದ್ದ ಜನರಿಗೆ ಈ ಮಳೆಯು ತಂಪೆರೆದಿದೆ, ‘ಫೈರ್ ಸಿಟಿ’ ಎಂದು ಕರೆಯಲಾಗುತ್ತಿದ್ದ ಭದ್ರಾವತಿ ಈಗ ‘ಕೂಲ್ ಕೂಲ್’ ಎನಿಸಿದೆ. ಮಳೆ ಹನಿಗಳು ಧರೆಗೆ ಇಳಿಯುತ್ತಿದ್ದಂತೆ ಮರ ಗಿಡಗಳು ಕಂಗೊಳಿಸುತ್ತಿದ್ದು, ಇಳೆಯು ತಂಪಾಗಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.1
- ಮೊಳಕಾಲ್ಮುರು ಸಿವಿಲ್ ನ್ಯಾಯಾಧೀಶರಾದ ಪುನೀತ್ ರವರು ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಿಗೊಳಿಸಿ ಅವರ ಭವಿಷ್ಯ ರೂಪಿಸಲು ಕರೆ ನೀಡಿದ್ದಾರೆ. ಇಂದಿನ ಪ್ರತಿಯೊಬ್ಬ ಮಗು ಉತ್ತಮ ನಾಯಕ ಅಥವಾ ಅಧಿಕಾರಿಯಾಗಬಹುದು ಎಂದು ತಿಳಿಸಿದ ಅವರು, ಪ್ರತಿ ಮಗುವನ್ನು ಶಾಲೆಗೆ ಸೇರಿಸಿ ಅವರ ಭವಿಷ್ಯಕ್ಕೆ ಸಹಕರಿಸುವಂತೆ ಒತ್ತಾಯಿಸಿದರು. ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಒಬ್ಬ ಮಗು ಕನಿಷ್ಠ 25ನೇ ವರ್ಷದ ತನಕ ವಿದ್ಯಾಭ್ಯಾಸ ಮಾಡಿದರೆ ಅವರ ಭವಿಷ್ಯವನ್ನು ಅವರೇ ಕಟ್ಟಿಕೊಳ್ಳುತ್ತಾರೆ ಎಂದ ಪುನೀತ್, ಚಿಕ್ಕ ಮಗುವಿದ್ದಾಗ ಕೆಲಸಕ್ಕೆ ಕಳಿಸಿದರೆ ಅವರ ಭವಿಷ್ಯವನ್ನು ನಾವೇ ಚಿವುಟಿದಂತಾಗುತ್ತದೆ ಎಂದು ಎಚ್ಚರಿಸಿದರು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ ಅವರು, ಬಾಲಕಾರ್ಮಿಕ ಮಗು ಮಾಲೀಕರ ಹತ್ತಿರ ಕೆಲಸ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮಾಲೀಕರಿಗೆ ಹಾಗೂ ಪೋಷಕರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು ಎಂದು ಸೂಚಿಸಿದರು. ಈ ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾಸಮಿತಿ, ಸಿವಿಲ್ ನ್ಯಾಯಾಲಯ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಹನುಮಂತಪ್ಪ, ತಾಲ್ಲೂಕು ಕಾನೂನು ವಕೀಲರ ಸಂಘದ ಅಧ್ಯಕ್ಷ ವಸಂತ ಕುಮಾರ, ಮೊಳಕಾಲ್ಮುರು ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕ ನಾಗರಾಜ್, ಉಪ ನಿರೀಕ್ಷಕ ಮಹೇಶ್ ಹೊಸಪೇಟೆ, ಕಾರ್ಮಿಕ ಇಲಾಖೆಯ ಕುಸುಮ ಹಾಗೂ ವಕೀಲರಾದ ವಿಜಯಲಕ್ಷ್ಮಿ, ಆನಂದ, ಬಸವರಾಜ್, ಪಾಪಯ್ಯ ಬಸವರಾಜ್ ಸೇರಿದಂತೆ ವಕೀಲರ ಸಂಘದ ಸದಸ್ಯರು, ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.3
- ಹುಳಿಯಾರಿನಲ್ಲಿ ನಡೆದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಹುಳಿಯಾರು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷರಾದ ಗೌಡಿ ಅವರು ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಆಯೋಜಿಸುತ್ತಿರುವ ಮದ್ಯವರ್ಜನ ಶಿಬಿರಗಳನ್ನು ಶ್ಲಾಘಿಸಿದರು. ಈ ಶಿಬಿರಗಳು ಲಕ್ಷಾಂತರ ಜನರನ್ನು ವ್ಯಸನಮುಕ್ತಗೊಳಿಸಿ, ಅವರ ಕುಟುಂಬಗಳು ಬೀದಿಗೆ ಬೀಳದಂತೆ ರಕ್ಷಿಸಿವೆ ಎಂದು ಅವರು ಹೇಳಿದರು. ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಯೋಜನೆಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ತಮ್ಮ ವೈಯಕ್ತಿಕ ಪರಿಚಯದಲ್ಲಿ ಉತ್ತಮವಾಗಿ ಸಂಪಾದನೆ ಮಾಡುತ್ತಿದ್ದ ಹಲವು ಸ್ನೇಹಿತರು ಕುಡಿತದ ದಾಸರಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿರುವುದನ್ನು ತಾನು ನೋಡಿದ್ದೇನೆ ಎಂದು ಗೌಡಿ ತಿಳಿಸಿದರು. ಇಂತಹವರನ್ನು ನೋಡಿ ಮನಸ್ಸಿಗೆ ಭಾರಿ ಬೇಸರವಾಗುತ್ತದೆ ಎಂದ ಅವರು, ಇಂತಹ ಜನರನ್ನು ಸುಧಾರಿಸಲು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿರುವ ಕೆಲಸ ಅತ್ಯಂತ ಪವಿತ್ರವಾದದ್ದು ಎಂದು ಬಣ್ಣಿಸಿದರು. ಇದರ ಜೊತೆಗೆ, ಕ್ಷೇತ್ರದ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಕ್ರಮಗಳಿಂದಾಗಿ ಈ ಹಿಂದೆ ತೀರಾ ಬಡತನದಲ್ಲಿದ್ದ ಸಾಕಷ್ಟು ಕುಟುಂಬಗಳು ಇಂದು ಆರ್ಥಿಕವಾಗಿ ಸಬಲರಾಗಿದ್ದು, ಶಿಸ್ತಿನಿಂದ ಸಾಲ ಪಡೆದು, ಕಷ್ಟಪಟ್ಟು ದುಡಿದು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿವೆ ಎಂದು ಸಂಸ್ಥೆಯ ಯೋಜನೆಗಳ ಯಶಸ್ಸನ್ನು ಕೊಂಡಾಡಿದರು. ಧರ್ಮಸ್ಥಳ ಸಂಸ್ಥೆಯು ಕೇವಲ ಕೆಳಮಟ್ಟದ ಜನರಿಗಷ್ಟೇ ಅಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಗೌಡಿ ನುಡಿದರು. ಸತ್ಯಕ್ಕೆ ಯಾವಾಗಲೂ ಜಯವಿರುತ್ತದೆ ಎಂಬುದಕ್ಕೆ, ಈ ಹಿಂದೆ ಕ್ಷೇತ್ರದ ಮೇಲೆ ಕಳಂಕ ತರಲು ಕೆಲವರು ಹರಸಾಹಸ ಪಟ್ಟರಾದರೂ, ಅಂತಿಮವಾಗಿ ಸತ್ಯವೇ ಗೆದ್ದು ಕ್ಷೇತ್ರವು ನಿರ್ದೋಷಿ ಎಂಬುದು ಇಡೀ ಜಗತ್ತಿಗೆ ಸಾಬೀತಾಗಿದೆ ಎಂದು ಅವರು ಹೇಳಿದರು. ಧರ್ಮಸ್ಥಳದ ಈ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಗೌಡಿ ತಮ್ಮ ಮಾತುಗಳನ್ನು ಮುಗಿಸಿದರು.1
- ಮೈಸೂರಿನ ಬಾರ್‌ವೊಂದರಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ, ಉಡುಪಿ ಅಬಕಾರಿ ಇಲಾಖೆಯು ಜಿಲ್ಲೆಯ ಸನ್ನದುದಾರರು ಹಾಗೂ ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತೆ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತು. ಅಬಕಾರಿ ಇಲಾಖೆ ಆವರಣದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿ, ಬೆಂಕಿ ಅವಘಡಗಳನ್ನು ತಡೆಗಟ್ಟುವ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ, ಪ್ರತಿಯೊಂದು ಬಾರ್‌ನಲ್ಲಿ ಅಗ್ನಿ ಅವಘಡ ತಡೆಗಟ್ಟುವ ಪರಿಕರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳಗಳಲ್ಲಿ ಅಗ್ನಿ ನಿರೋಧಕ ಸಾಧನಗಳನ್ನು ಇರಿಸಬೇಕು ಎಂದು ಸೂಚಿಸಲಾಯಿತು. ನಿಯಮಗಳ ಪಾಲನೆ ಕುರಿತು ಇಲಾಖೆ ಪರಿಶೀಲನೆ ನಡೆಸಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ. ಅಬಕಾರಿ ಡಿಸಿ ಟಿ.ಎಂ. ಶ್ರೀನಿವಾಸ್ ಅವರು ಮಾಹಿತಿ ನೀಡಿ, ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಪ್ರತಿಯೊಬ್ಬ ಸನ್ನದುದಾರನ ಜವಾಬ್ದಾರಿ ಎಂದು ತಿಳಿಸಿದರು. ಜಿಲ್ಲೆಯ ಕೆಲವು ಬಾರ್‌ಗಳು ನಿಗದಿತ ಅವಧಿಗೂ ಮುನ್ನ ಹಾಗೂ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಕಳೆದ ಒಂದು ವರ್ಷದಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ನಿಗದಿತ ಸಮಯದ ಹೊರತಾಗಿ ಬಾರ್‌ಗಳನ್ನು ನಡೆಸದಂತೆ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು. ಇದೇ ರೀತಿ, ಹಲವು ಬಾರ್‌ಗಳಲ್ಲಿ ಮದ್ಯದ ದರದಲ್ಲಿ ವ್ಯತ್ಯಾಸ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿರುವ ಬಗ್ಗೆಯೂ ಮಾಹಿತಿ ನೀಡಲಾಯಿತು. ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ದರದಂತೆ ಮಾತ್ರ ಗ್ರಾಹಕರಿಂದ ಹಣ ಪಡೆಯಬೇಕು; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಯಿತು. ಜುಲೈ ತಿಂಗಳಿಂದ ಮದ್ಯ ಮಾರಾಟ ಪರವಾನಗಿ ನವೀಕರಣ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಾರಿ ಸಮಗ್ರ ಪರಿಶೀಲನೆ ನಡೆಸಿದ ಬಳಿಕವೇ ನವೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ಡಿಸಿ ಶ್ರೀನಿವಾಸ್ ತಿಳಿಸಿದರು. ಬಾರ್ ಮಾಲೀಕರು ಅಗ್ನಿ ಸುರಕ್ಷತೆಯನ್ನು ಕಡ್ಡಾಯವಾಗಿ ಅಳವಡಿಸಲು ಮತ್ತು ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಬಕಾರಿ ಇಲಾಖೆಯು ಎಚ್ಚರಿಕೆ ನೀಡಿದೆ.1
- ಹಿರಿಯೂರು ನಗರದಲ್ಲಿ ಒಂದು ಬಡ ಕುಟುಂಬಕ್ಕೆ ಸ್ವಂತ ಸೂರು ಇಲ್ಲದೆ ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಮೂಲಭೂತ ಹಕ್ಕಾಗಿದ್ದರೂ, ನಿವೇಶನ ಅಥವಾ ಮನೆ ಇಲ್ಲದೆ ಈ ಕುಟುಂಬ ಬೀದಿಗೆ ಬಿದ್ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿರಿಯೂರಿನ ಬಡ ಕುಟುಂಬವೊಂದರ ಕಣ್ಣೀರಿನ ಕಥೆಯನ್ನು ತೆರೆದಿಟ್ಟಿದೆ. ಸರ್ಕಾರಗಳು ಗುಡಿಸಲು ಮುಕ್ತ ಯೋಜನೆ, ನಿವೇಶನ ವಿತರಣೆ, ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಇನ್ನೂ ಅನೇಕ ಅರ್ಹ ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಾಗಿದೆ.1