logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಇದೀಗ ಆತಂಕಕಾರಿ ಸ್ವರೂಪ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೆರೆಯೊಳಗೆ ಆಳವಾದ ಸುರಂಗಗಳನ್ನು ಕೊರೆದು, ಅಪಾಯಕಾರಿ ಪರಿಸ್ಥಿತಿಯಲ್ಲಿ ಎತ್ತಿನ ಬಂಡಿಗಳಿಗೆ ಮರಳು ತುಂಬುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ 10 ರಿಂದ 15 ಎತ್ತಿನಗಾಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಮೇಲಿನ ಕಪ್ಪು ಮಣ್ಣನ್ನು ತೆಗೆದು 5 ರಿಂದ 8 ಅಡಿ ಆಳದವರೆಗೆ ಸುರಂಗ ಕೊರೆದು ಮರಳು ತೆಗೆಯಲಾಗುತ್ತಿದೆ. ಈ ಅಕ್ರಮ ಮರಳು ಹಾಗೂ ಮಣ್ಣು ದಂಧೆಯಿಂದ ಕೆರೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದು, ಎಲ್ಲೆಂದರಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸುರಂಗಗಳಲ್ಲಿ ಮರಳು ತುಂಬಲಾಗುತ್ತಿದ್ದು, ಈ ಹಿಂದೆ ಇಂತಹ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಜಿಲ್ಲಾಡಳಿತ ಅಕ್ರಮ ಪ್ರವೇಶ ತಡೆಯಲು ಕೆರೆಯ ಸುತ್ತ ಕಾಲುವೆ ನಿರ್ಮಿಸಿದ್ದರೂ, ಅದನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಕೆರೆಯಂಗಳದಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿಗಳ ಜಲಮಟ್ಟಕ್ಕೂ ಇದರಿಂದ ಭಾರಿ ಹಾನಿಯಾಗಿದ್ದು, ಅಕ್ರಮ ಮರಳು ದಂಧೆಯಿಂದ ಜಲಮೂಲಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ? ಬೊಮ್ಮಸಂದ್ರ ಕೆರೆಯಲ್ಲಿನ ಈ ಸುರಂಗ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

2 hrs ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
2 hrs ago

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಇದೀಗ ಆತಂಕಕಾರಿ ಸ್ವರೂಪ ಪಡೆದುಕೊಂಡಿದೆ. ಜೀವದ ಹಂಗು ತೊರೆದು ಕೆರೆಯೊಳಗೆ ಆಳವಾದ ಸುರಂಗಗಳನ್ನು ಕೊರೆದು, ಅಪಾಯಕಾರಿ ಪರಿಸ್ಥಿತಿಯಲ್ಲಿ ಎತ್ತಿನ ಬಂಡಿಗಳಿಗೆ ಮರಳು ತುಂಬುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ 10 ರಿಂದ 15 ಎತ್ತಿನಗಾಡಿಗಳ ಮೂಲಕ ಮರಳು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಮೇಲಿನ ಕಪ್ಪು ಮಣ್ಣನ್ನು ತೆಗೆದು 5 ರಿಂದ 8 ಅಡಿ ಆಳದವರೆಗೆ ಸುರಂಗ ಕೊರೆದು ಮರಳು ತೆಗೆಯಲಾಗುತ್ತಿದೆ. ಈ ಅಕ್ರಮ ಮರಳು ಹಾಗೂ ಮಣ್ಣು ದಂಧೆಯಿಂದ ಕೆರೆಯ ಸ್ವರೂಪವೇ ಸಂಪೂರ್ಣ ಬದಲಾಗಿದ್ದು, ಎಲ್ಲೆಂದರಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸುರಂಗಗಳಲ್ಲಿ ಮರಳು ತುಂಬಲಾಗುತ್ತಿದ್ದು, ಈ ಹಿಂದೆ ಇಂತಹ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಜಿಲ್ಲಾಡಳಿತ ಅಕ್ರಮ ಪ್ರವೇಶ ತಡೆಯಲು ಕೆರೆಯ ಸುತ್ತ ಕಾಲುವೆ ನಿರ್ಮಿಸಿದ್ದರೂ, ಅದನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದೇ ಕೆರೆಯಂಗಳದಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿಗಳ ಜಲಮಟ್ಟಕ್ಕೂ ಇದರಿಂದ ಭಾರಿ ಹಾನಿಯಾಗಿದ್ದು, ಅಕ್ರಮ ಮರಳು ದಂಧೆಯಿಂದ ಜಲಮೂಲಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ? ಬೊಮ್ಮಸಂದ್ರ ಕೆರೆಯಲ್ಲಿನ ಈ ಸುರಂಗ ಮರಳು ದಂಧೆಗೆ ಬ್ರೇಕ್ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

More news from ಕರ್ನಾಟಕ and nearby areas
  • ಹಿರಿಯೂರು ನಗರದಲ್ಲಿ ಒಂದು ಬಡ ಕುಟುಂಬಕ್ಕೆ ಸ್ವಂತ ಸೂರು ಇಲ್ಲದೆ ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಮೂಲಭೂತ ಹಕ್ಕಾಗಿದ್ದರೂ, ನಿವೇಶನ ಅಥವಾ ಮನೆ ಇಲ್ಲದೆ ಈ ಕುಟುಂಬ ಬೀದಿಗೆ ಬಿದ್ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿರಿಯೂರಿನ ಬಡ ಕುಟುಂಬವೊಂದರ ಕಣ್ಣೀರಿನ ಕಥೆಯನ್ನು ತೆರೆದಿಟ್ಟಿದೆ. ಸರ್ಕಾರಗಳು ಗುಡಿಸಲು ಮುಕ್ತ ಯೋಜನೆ, ನಿವೇಶನ ವಿತರಣೆ, ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಇನ್ನೂ ಅನೇಕ ಅರ್ಹ ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಾಗಿದೆ.
    1
    ಹಿರಿಯೂರು ನಗರದಲ್ಲಿ ಒಂದು ಬಡ ಕುಟುಂಬಕ್ಕೆ ಸ್ವಂತ ಸೂರು ಇಲ್ಲದೆ ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಮೂಲಭೂತ ಹಕ್ಕಾಗಿದ್ದರೂ, ನಿವೇಶನ ಅಥವಾ ಮನೆ ಇಲ್ಲದೆ ಈ ಕುಟುಂಬ ಬೀದಿಗೆ ಬಿದ್ದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿರಿಯೂರಿನ ಬಡ ಕುಟುಂಬವೊಂದರ ಕಣ್ಣೀರಿನ ಕಥೆಯನ್ನು ತೆರೆದಿಟ್ಟಿದೆ. 

ಸರ್ಕಾರಗಳು ಗುಡಿಸಲು ಮುಕ್ತ ಯೋಜನೆ, ನಿವೇಶನ ವಿತರಣೆ, ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಇನ್ನೂ ಅನೇಕ ಅರ್ಹ ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • ಹುಳಿಯಾರಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ, ಹುಳಿಯಾರು ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಅಧ್ಯಕ್ಷರಾದ ಎಸ್. ಆರ್. ಎಸ್. ದಯಾನಂದ್ ಅವರು ಪ್ರಮುಖ ಕರೆ ನೀಡಿದರು. ಕೇವಲ ಶಿಬಿರಕ್ಕೆ ಹಾಜರಾಗುವುದು ಮಾತ್ರವಲ್ಲದೆ, 24 ಗಂಟೆಯೂ ಕುಡಿತಕ್ಕೆ ದಾಸರಾಗಿರುವವರನ್ನು ಗುರುತಿಸಿ, ಅವರನ್ನು ಶಿಬಿರಕ್ಕೆ ಕರೆತಂದು ವ್ಯಸನಮುಕ್ತಗೊಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಮತ್ತು ಪ್ರಾಮಾಣಿಕ ಕೆಲಸ ಎಂದು ಅವರು ಒತ್ತಿ ಹೇಳಿದರು. ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹುಳಿಯಾರಿನಲ್ಲಿ ಇಂತಹ ಉತ್ತಮ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ದಯಾನಂದ್ ತಿಳಿಸಿದರು. ಶಿಬಿರದ ಯಶಸ್ಸಿಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಧನಸಹಾಯ ಮಾಡಬೇಕು ಹಾಗೂ ಊರಿನ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಒಟ್ಟಾಗಿ ಸಹಕರಿಸಿ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂದು ಅವರು ಮನವಿ ಮಾಡಿದರು. ಈ ಸಭೆಯನ್ನು ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
    1
    ಹುಳಿಯಾರಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ, ಹುಳಿಯಾರು ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಅಧ್ಯಕ್ಷರಾದ ಎಸ್. ಆರ್. ಎಸ್. ದಯಾನಂದ್ ಅವರು ಪ್ರಮುಖ ಕರೆ ನೀಡಿದರು. ಕೇವಲ ಶಿಬಿರಕ್ಕೆ ಹಾಜರಾಗುವುದು ಮಾತ್ರವಲ್ಲದೆ, 24 ಗಂಟೆಯೂ ಕುಡಿತಕ್ಕೆ ದಾಸರಾಗಿರುವವರನ್ನು ಗುರುತಿಸಿ, ಅವರನ್ನು ಶಿಬಿರಕ್ಕೆ ಕರೆತಂದು ವ್ಯಸನಮುಕ್ತಗೊಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಮತ್ತು ಪ್ರಾಮಾಣಿಕ ಕೆಲಸ ಎಂದು ಅವರು ಒತ್ತಿ ಹೇಳಿದರು.

ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹುಳಿಯಾರಿನಲ್ಲಿ ಇಂತಹ ಉತ್ತಮ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ದಯಾನಂದ್ ತಿಳಿಸಿದರು. ಶಿಬಿರದ ಯಶಸ್ಸಿಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಧನಸಹಾಯ ಮಾಡಬೇಕು ಹಾಗೂ ಊರಿನ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಒಟ್ಟಾಗಿ ಸಹಕರಿಸಿ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂದು ಅವರು ಮನವಿ ಮಾಡಿದರು. ಈ ಸಭೆಯನ್ನು ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
  • ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸ್ ಈರೇಶ್ ಬಾಬು ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈರೇಶ್ ಬಾಬು ವಿರುದ್ಧ ಯುವತಿ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ, ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ. ನ್ಯಾಯಾಲಯವು ಬೇಲ್ ನೀಡಿದ ಕಾರಣ, ಆತ ಮತ್ತೆ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿರುವುದು ದುರಂತದ ಸಂಗತಿ ಎಂದು ಮಂಜುನಾಥ್ ಹೇಳಿದ್ದಾರೆ. ಯುವತಿ ಮದುವೆಗೆ ಒತ್ತಾಯಿಸಿದಾಗ, ಆತ ನಿರಾಕರಿಸಿ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಈರೇಶ್ ಬಾಬು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಯುವತಿಗೆ ರಕ್ಷಣೆ ನೀಡಬೇಕು, ಆತನನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಮತ್ತು ಮೊಬೈಲ್ ಅನ್ನು ಜಪ್ತಿಮಾಡಬೇಕು ಎಂದು ವಾಟಾಳ್ ಮಂಜುನಾಥ್ ಆಗ್ರಹಿಸಿದ್ದಾರೆ. ಈತ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಅನರ್ಹ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಅಮಾನತು ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಸುದ್ದಿಗೋಷ್ಠಿಯಲ್ಲಿ ರವಿ ಸಾಧುಶೆಟ್ಟಿ, ನಿತೀನ್ ರೆಡ್ಡಿ, ಸತೀಶ್ ಗೌಡ, ಲಿಂಗರಾಜು, ಪರಮೇಶ್, ಸಂತೋಷ್ ಮತ್ತು ಲೋಕೇಶ್ ಉಪಸ್ಥಿತರಿದ್ದರು.
    2
    ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸ್ ಈರೇಶ್ ಬಾಬು ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈರೇಶ್ ಬಾಬು ವಿರುದ್ಧ ಯುವತಿ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ, ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ. ನ್ಯಾಯಾಲಯವು ಬೇಲ್ ನೀಡಿದ ಕಾರಣ, ಆತ ಮತ್ತೆ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿರುವುದು ದುರಂತದ ಸಂಗತಿ ಎಂದು ಮಂಜುನಾಥ್ ಹೇಳಿದ್ದಾರೆ. ಯುವತಿ ಮದುವೆಗೆ ಒತ್ತಾಯಿಸಿದಾಗ, ಆತ ನಿರಾಕರಿಸಿ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿಗಳು ಈರೇಶ್ ಬಾಬು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಯುವತಿಗೆ ರಕ್ಷಣೆ ನೀಡಬೇಕು, ಆತನನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಮತ್ತು ಮೊಬೈಲ್ ಅನ್ನು ಜಪ್ತಿಮಾಡಬೇಕು ಎಂದು ವಾಟಾಳ್ ಮಂಜುನಾಥ್ ಆಗ್ರಹಿಸಿದ್ದಾರೆ. ಈತ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಅನರ್ಹ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಅಮಾನತು ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಸುದ್ದಿಗೋಷ್ಠಿಯಲ್ಲಿ ರವಿ ಸಾಧುಶೆಟ್ಟಿ, ನಿತೀನ್ ರೆಡ್ಡಿ, ಸತೀಶ್ ಗೌಡ, ಲಿಂಗರಾಜು, ಪರಮೇಶ್, ಸಂತೋಷ್ ಮತ್ತು ಲೋಕೇಶ್ ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    3 hrs ago
  • ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಬಾಲಕೃಷ್ಣ, ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದು, ಹಾಸನದಲ್ಲಿ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದರೂ, ಕುಮಾರಸ್ವಾಮಿ ಮತ್ತು ನಿಖಿಲ್ ಅವರು ಬೇರೆಲ್ಲೂ ಹೋರಾಟ ಮಾಡದೆ ಕೇವಲ ಬಿಡದಿಯಲ್ಲೇ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿಯವರು ಚರ್ಚೆಗೆ ಸಮಯ ನಿಗದಿಪಡಿಸಿದ ನಂತರವೂ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಬರಲು ಹೇಳುವುದು ಅವರ ಬಾಲಿಶ ವರ್ತನೆಯನ್ನು ತೋರಿಸುತ್ತದೆ ಎಂದು ಬಾಲಕೃಷ್ಣ ಕಿಡಿಕಾರಿದ್ದಾರೆ. ಪ್ರಬುದ್ಧ ನಾಯಕನಿಗೆ ಇರಬೇಕಾದ ಕನಿಷ್ಠ ಜ್ಞಾನ ಕುಮಾರಸ್ವಾಮಿ ಅವರಿಗಿಲ್ಲ. ಬೈರಮಂಗಲದಲ್ಲಿ ಪ್ರತಿಭಟನೆಗೆ ಕರೆದು ಜನರನ್ನು ಒಟ್ಟುಗೂಡಿಸಿ, ಎರಡು ಕಡೆಯ ರೈತರ ಮಧ್ಯೆ ಮಾರಾಮಾರಿ ನಡೆದು ಕಾನೂನು ಸುವ್ಯವಸ್ಥೆ ಕೆಟ್ಟರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಬಿಡದಿಯಲ್ಲಿ ಕುಮಾರಸ್ವಾಮಿ ಅವರಿಗೆ 35 ಎಕರೆ ಜಾಗವಿದ್ದು, ಅದನ್ನು ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆಯೇ ಅಥವಾ ಶಿವಕುಮಾರ್ ಮುಖ್ಯಮಂತ್ರಿ ಆದ ಕಾರಣ ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ಶಾಸಕ ಬಾಲಕೃಷ್ಣ ಆಪಾದಿಸಿದ್ದಾರೆ. ಮೈಸೂರು, ಮಂಡ್ಯ, ಹಾರೋಹಳ್ಳಿಯಿಂದ ಜನರಿಗೆ ದುಡ್ಡುಕೊಟ್ಟು ಕರೆಸಿ ಪ್ರತಿಭಟನೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದ ಬಾಲಕೃಷ್ಣ, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ರಾಜ್ಯದ ಜ್ವಲಂತ ಸಮಸ್ಯೆಗಳಾದ ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಬಸ್ ಮಾಡಿಕೊಂಡು ಜನರನ್ನು ಕರೆಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಹೋರಾಟದಿಂದ ರೈತರಿಗೆ ತೊಂದರೆಯಾಗುತ್ತಿದೆಯೇ ವಿನಃ ಪ್ರಯೋಜನವಾಗುತ್ತಿಲ್ಲ ಎಂದರು. ಸರ್ಕಾರವು ರೈತರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ಯೋಜನೆಯನ್ನು ಮುಂದುವರಿಸುತ್ತಿದೆ. ಕಂಪಯ್ಯನಪಾಳ್ಯದಲ್ಲಿ 570 ರೈತರ ಪೈಕಿ ಸುಮಾರು 500 ರೈತರು ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಅವರು 2018ರಲ್ಲಿ ಇದೇ ಯೋಜನೆಯನ್ನು ತಮ್ಮ ಕನಸಿನ ಕೂಸು ಎಂದು ಕರೆದು, ರೈತರಿಗೆ 40% ಅಭಿವೃದ್ಧಿಪಡಿಸಿದ ಭೂಮಿ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ ಈಗ ಸರ್ಕಾರ 50% ಭೂಮಿ ಅಥವಾ ಎಕರೆಗೆ 2.50 ಕೋಟಿ ರೂ. ಪರಿಹಾರ ನೀಡಲು ಸಿದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೈರಮಂಗಲ ಕೆರೆಯು ಕಲುಷಿತಗೊಂಡಿದ್ದು, ಅಲ್ಲಿನ ರೈತರು ಗಲೀಜು ನೀರಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಅದರ ಶುದ್ಧೀಕರಣಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಜಿಬಿಐಟಿ ಸಂಸ್ಥೆಯು ಕೆರೆಯ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ಸಣ್ಣ ರೈತರ ರಕ್ಷಣೆಗಾಗಿ ದುಬಾರಿ ಪರಿಹಾರ ನೀಡಲಾಗುತ್ತಿದ್ದು, 1 ಲಕ್ಷ ರೂ. ಸಾಲವನ್ನು 10 ಲಕ್ಷ ರೂ. ವರೆಗೆ ಏರಿಕೆ ಆಗಿದ್ದ ರೈತರಿಗೆ ಬ್ಯಾಂಕುಗಳೊಂದಿಗೆ ಒಟಿಎಸ್ ಮೂಲಕ ಅಸಲು ಕಟ್ಟಿಸಿ ಬಡ್ಡಿ ಮನ್ನಾ ಮಾಡಲು ಚರ್ಚೆ ನಡೆಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು. ಅಲ್ಲದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮದ ಬಗ್ಗೆ ಸಿಎಜಿ ವರದಿ ಬಂದಿರುವುದರಿಂದ, ಅರ್ಹ ಫಲಾನುಭವಿಗಳಿಗೆ ಮಾತ್ರ ಲಾಭ ಸಿಗುವಂತೆ ಎರಡು ತಿಂಗಳಲ್ಲಿ ಫಲಾನುಭವಿಗಳ ಪರಿಷ್ಕರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಬಿಡದಿ ಯೋಜನೆಗೆ ಬೆಂಬಲ ನೀಡುವ ಶಾಸಕರಿಗೆ ನಿವೇಶನ ನೀಡಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪವನ್ನು ಬಾಲಕೃಷ್ಣ ಅವರು ತೀವ್ರವಾಗಿ ಖಂಡಿಸಿದರು. ಕೇಂದ್ರದ ಸಚಿವರಾಗಿ ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಮನವಿ ಮಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ, ಇಲ್ಲವಾದರೆ ಕುಮಾರಸ್ವಾಮಿ ಅವರೇ ನಿವೃತ್ತಿ ಪಡೆಯಬೇಕೆಂದು ಕೇಳಿದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಕುಮಾರಸ್ವಾಮಿ ಅವರಿಗೆ ನಿದ್ದೆ ಬರುತ್ತಿಲ್ಲ, ಅವರು ರಾತ್ರಿಯಿಡೀ ಶಿವಕುಮಾರ್ ಅವರ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಬಾಲಕೃಷ್ಣ ಲೇವಡಿ ಮಾಡಿದರು. ತಮ್ಮ ಆಸ್ತಿ ತನಿಖೆಗೆ ಸಿದ್ಧರಿದ್ದು, ಕುಮಾರಸ್ವಾಮಿ ಅವರು ತಮ್ಮ ಸಂಪಾದನೆ ಹೇಗೆ ಎಂದು ಚರ್ಚೆಗೆ ಬರುತ್ತಾರೆಯೇ ಎಂದು ಅವರು ಸವಾಲೆಸೆದರು.
    1
    ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಬಾಲಕೃಷ್ಣ, ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದ್ದು, ಹಾಸನದಲ್ಲಿ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದರೂ, ಕುಮಾರಸ್ವಾಮಿ ಮತ್ತು ನಿಖಿಲ್ ಅವರು ಬೇರೆಲ್ಲೂ ಹೋರಾಟ ಮಾಡದೆ ಕೇವಲ ಬಿಡದಿಯಲ್ಲೇ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿಯವರು ಚರ್ಚೆಗೆ ಸಮಯ ನಿಗದಿಪಡಿಸಿದ ನಂತರವೂ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಬರಲು ಹೇಳುವುದು ಅವರ ಬಾಲಿಶ ವರ್ತನೆಯನ್ನು ತೋರಿಸುತ್ತದೆ ಎಂದು ಬಾಲಕೃಷ್ಣ ಕಿಡಿಕಾರಿದ್ದಾರೆ. ಪ್ರಬುದ್ಧ ನಾಯಕನಿಗೆ ಇರಬೇಕಾದ ಕನಿಷ್ಠ ಜ್ಞಾನ ಕುಮಾರಸ್ವಾಮಿ ಅವರಿಗಿಲ್ಲ. ಬೈರಮಂಗಲದಲ್ಲಿ ಪ್ರತಿಭಟನೆಗೆ ಕರೆದು ಜನರನ್ನು ಒಟ್ಟುಗೂಡಿಸಿ, ಎರಡು ಕಡೆಯ ರೈತರ ಮಧ್ಯೆ ಮಾರಾಮಾರಿ ನಡೆದು ಕಾನೂನು ಸುವ್ಯವಸ್ಥೆ ಕೆಟ್ಟರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಬಿಡದಿಯಲ್ಲಿ ಕುಮಾರಸ್ವಾಮಿ ಅವರಿಗೆ 35 ಎಕರೆ ಜಾಗವಿದ್ದು, ಅದನ್ನು ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆಯೇ ಅಥವಾ ಶಿವಕುಮಾರ್ ಮುಖ್ಯಮಂತ್ರಿ ಆದ ಕಾರಣ ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ಶಾಸಕ ಬಾಲಕೃಷ್ಣ ಆಪಾದಿಸಿದ್ದಾರೆ. ಮೈಸೂರು, ಮಂಡ್ಯ, ಹಾರೋಹಳ್ಳಿಯಿಂದ ಜನರಿಗೆ ದುಡ್ಡುಕೊಟ್ಟು ಕರೆಸಿ ಪ್ರತಿಭಟನೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದ ಬಾಲಕೃಷ್ಣ, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ರಾಜ್ಯದ ಜ್ವಲಂತ ಸಮಸ್ಯೆಗಳಾದ ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಬಸ್ ಮಾಡಿಕೊಂಡು ಜನರನ್ನು ಕರೆಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಹೋರಾಟದಿಂದ ರೈತರಿಗೆ ತೊಂದರೆಯಾಗುತ್ತಿದೆಯೇ ವಿನಃ ಪ್ರಯೋಜನವಾಗುತ್ತಿಲ್ಲ ಎಂದರು.

ಸರ್ಕಾರವು ರೈತರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ಯೋಜನೆಯನ್ನು ಮುಂದುವರಿಸುತ್ತಿದೆ. ಕಂಪಯ್ಯನಪಾಳ್ಯದಲ್ಲಿ 570 ರೈತರ ಪೈಕಿ ಸುಮಾರು 500 ರೈತರು ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಅವರು 2018ರಲ್ಲಿ ಇದೇ ಯೋಜನೆಯನ್ನು ತಮ್ಮ ಕನಸಿನ ಕೂಸು ಎಂದು ಕರೆದು, ರೈತರಿಗೆ 40% ಅಭಿವೃದ್ಧಿಪಡಿಸಿದ ಭೂಮಿ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ ಈಗ ಸರ್ಕಾರ 50% ಭೂಮಿ ಅಥವಾ ಎಕರೆಗೆ 2.50 ಕೋಟಿ ರೂ. ಪರಿಹಾರ ನೀಡಲು ಸಿದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೈರಮಂಗಲ ಕೆರೆಯು ಕಲುಷಿತಗೊಂಡಿದ್ದು, ಅಲ್ಲಿನ ರೈತರು ಗಲೀಜು ನೀರಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಅದರ ಶುದ್ಧೀಕರಣಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಜಿಬಿಐಟಿ ಸಂಸ್ಥೆಯು ಕೆರೆಯ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ಸಣ್ಣ ರೈತರ ರಕ್ಷಣೆಗಾಗಿ ದುಬಾರಿ ಪರಿಹಾರ ನೀಡಲಾಗುತ್ತಿದ್ದು, 1 ಲಕ್ಷ ರೂ. ಸಾಲವನ್ನು 10 ಲಕ್ಷ ರೂ. ವರೆಗೆ ಏರಿಕೆ ಆಗಿದ್ದ ರೈತರಿಗೆ ಬ್ಯಾಂಕುಗಳೊಂದಿಗೆ ಒಟಿಎಸ್ ಮೂಲಕ ಅಸಲು ಕಟ್ಟಿಸಿ ಬಡ್ಡಿ ಮನ್ನಾ ಮಾಡಲು ಚರ್ಚೆ ನಡೆಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು. ಅಲ್ಲದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮದ ಬಗ್ಗೆ ಸಿಎಜಿ ವರದಿ ಬಂದಿರುವುದರಿಂದ, ಅರ್ಹ ಫಲಾನುಭವಿಗಳಿಗೆ ಮಾತ್ರ ಲಾಭ ಸಿಗುವಂತೆ ಎರಡು ತಿಂಗಳಲ್ಲಿ ಫಲಾನುಭವಿಗಳ ಪರಿಷ್ಕರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಬಿಡದಿ ಯೋಜನೆಗೆ ಬೆಂಬಲ ನೀಡುವ ಶಾಸಕರಿಗೆ ನಿವೇಶನ ನೀಡಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪವನ್ನು ಬಾಲಕೃಷ್ಣ ಅವರು ತೀವ್ರವಾಗಿ ಖಂಡಿಸಿದರು. ಕೇಂದ್ರದ ಸಚಿವರಾಗಿ ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಮನವಿ ಮಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ, ಇಲ್ಲವಾದರೆ ಕುಮಾರಸ್ವಾಮಿ ಅವರೇ ನಿವೃತ್ತಿ ಪಡೆಯಬೇಕೆಂದು ಕೇಳಿದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಕುಮಾರಸ್ವಾಮಿ ಅವರಿಗೆ ನಿದ್ದೆ ಬರುತ್ತಿಲ್ಲ, ಅವರು ರಾತ್ರಿಯಿಡೀ ಶಿವಕುಮಾರ್ ಅವರ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಬಾಲಕೃಷ್ಣ ಲೇವಡಿ ಮಾಡಿದರು. ತಮ್ಮ ಆಸ್ತಿ ತನಿಖೆಗೆ ಸಿದ್ಧರಿದ್ದು, ಕುಮಾರಸ್ವಾಮಿ ಅವರು ತಮ್ಮ ಸಂಪಾದನೆ ಹೇಗೆ ಎಂದು ಚರ್ಚೆಗೆ ಬರುತ್ತಾರೆಯೇ ಎಂದು ಅವರು ಸವಾಲೆಸೆದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಚಿಲುಗೋಡು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ. ಗ್ರಾಮದ ಚರಂಡಿಗಳನ್ನು ಸುಮಾರು ಒಂದು ವರ್ಷದಿಂದ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದೇ ರೀತಿ, ಚಿಲುಗೋಡಿನಲ್ಲಿರುವ ಬೀದಿ ಕಂಬಗಳಿಗೆ ಇದುವರೆಗೂ ದೀಪಗಳನ್ನು ಅಳವಡಿಸಿಲ್ಲ. ಈ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    4
    ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಚಿಲುಗೋಡು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ. ಗ್ರಾಮದ ಚರಂಡಿಗಳನ್ನು ಸುಮಾರು ಒಂದು ವರ್ಷದಿಂದ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದೇ ರೀತಿ, ಚಿಲುಗೋಡಿನಲ್ಲಿರುವ ಬೀದಿ ಕಂಬಗಳಿಗೆ ಇದುವರೆಗೂ ದೀಪಗಳನ್ನು ಅಳವಡಿಸಿಲ್ಲ. ಈ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_K Santosha Ks
    K Santosha Ks
    ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    7 hrs ago
  • ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ) ವತಿಯಿಂದ ಜೂನ್ 19ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮೂಲಕ ಸಂಘಟನೆಯು ಬಿಪಿಎಲ್ ಫಲಾನುಭವಿಗಳ ಸಮಸ್ಯೆಯ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದೆ. ಸಲ್ಲಿಸಿದ ಮನವಿಯಲ್ಲಿ, ರಾಜ್ಯದ ವಿವಿಧ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜಾತಿ ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಪಡಿತರ ಅಂಗಡಿಗಳಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಪಡಿತರ ನೀಡುವುದಿಲ್ಲ ಎಂದು ತಿಳಿಸಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಸಂಘಟನೆ ಹೇಳಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ, ಇತರೆ ಸಮುದಾಯದ ಜನರಿಂದಲೂ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಕೇಳುತ್ತಿರುವುದು ಸಮಂಜಸವಲ್ಲ ಎಂದು ಸಂಘಟನೆ ಪ್ರಶ್ನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ ಎಂದೂ ಸಂಘಟನೆ ತಿಳಿಸಿದ್ದು, ಆಹಾರ ಇಲಾಖೆಯ ಮೌಖಿಕ ಸೂಚನೆಯಿಂದ ಸಾರ್ವಜನಿಕರು, ವಿಶೇಷವಾಗಿ ಬಡವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಿದೆ. ಜಾತಿ ಪ್ರಮಾಣ ಪತ್ರ ಕಡ್ಡಾಯದ ಕುರಿತು ಸ್ಪಷ್ಟ ಆದೇಶ ಹೊರಡಿಸಿ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಜೊತೆಗೆ ಪಡಿತರ ಅಂಗಡಿಗಳು ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಡಳಿತವನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
    1
    ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ) ವತಿಯಿಂದ ಜೂನ್ 19ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮೂಲಕ ಸಂಘಟನೆಯು ಬಿಪಿಎಲ್ ಫಲಾನುಭವಿಗಳ ಸಮಸ್ಯೆಯ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದೆ.

ಸಲ್ಲಿಸಿದ ಮನವಿಯಲ್ಲಿ, ರಾಜ್ಯದ ವಿವಿಧ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜಾತಿ ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಪಡಿತರ ಅಂಗಡಿಗಳಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಪಡಿತರ ನೀಡುವುದಿಲ್ಲ ಎಂದು ತಿಳಿಸಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಸಂಘಟನೆ ಹೇಳಿದೆ.

ಎಸ್ಸಿ ಮತ್ತು ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ, ಇತರೆ ಸಮುದಾಯದ ಜನರಿಂದಲೂ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಕೇಳುತ್ತಿರುವುದು ಸಮಂಜಸವಲ್ಲ ಎಂದು ಸಂಘಟನೆ ಪ್ರಶ್ನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ ಎಂದೂ ಸಂಘಟನೆ ತಿಳಿಸಿದ್ದು, ಆಹಾರ ಇಲಾಖೆಯ ಮೌಖಿಕ ಸೂಚನೆಯಿಂದ ಸಾರ್ವಜನಿಕರು, ವಿಶೇಷವಾಗಿ ಬಡವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ಷೇಪಿಸಿದೆ.

ಜಾತಿ ಪ್ರಮಾಣ ಪತ್ರ ಕಡ್ಡಾಯದ ಕುರಿತು ಸ್ಪಷ್ಟ ಆದೇಶ ಹೊರಡಿಸಿ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ಜೊತೆಗೆ ಪಡಿತರ ಅಂಗಡಿಗಳು ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಡಳಿತವನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    22 hrs ago
  • ಮಂಡ್ಯದ ಎರಡು ವರ್ಷದ ಬಾಲಕ ಸಾಯಿ ಚಿರಾಗ್‌ ಅಪರೂಪದ ಸ್ಪೈನಲ್‌ ಮಸ್ಕ್ಯುಲರ್‌ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು ಎರಡು ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣ ಸಂಗ್ರಹಿಸಲು ಕುಟುಂಬದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕೋಟೆನಾಡಿನ (ಚಿತ್ರದುರ್ಗದ) ಜನರು ಬಾಲಕನ ಸಹಾಯಕ್ಕೆ ಮುಂದಾಗಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಹಣ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಟೆನಾಡಿನ ಜನತೆಯ ಈ ನೆರವಿನ ಹಸ್ತ ಚಾಚಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
    1
    ಮಂಡ್ಯದ ಎರಡು ವರ್ಷದ ಬಾಲಕ ಸಾಯಿ ಚಿರಾಗ್‌ ಅಪರೂಪದ ಸ್ಪೈನಲ್‌ ಮಸ್ಕ್ಯುಲರ್‌ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು ಎರಡು ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣ ಸಂಗ್ರಹಿಸಲು ಕುಟುಂಬದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ, ಕೋಟೆನಾಡಿನ (ಚಿತ್ರದುರ್ಗದ) ಜನರು ಬಾಲಕನ ಸಹಾಯಕ್ಕೆ ಮುಂದಾಗಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಹಣ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಟೆನಾಡಿನ ಜನತೆಯ ಈ ನೆರವಿನ ಹಸ್ತ ಚಾಚಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
    1
    ಚಳ್ಳಕೆರೆ ನಗರದಲ್ಲಿ 60 ವರ್ಷದ ವೃದ್ಧೆ ಯಶೋದಮ್ಮ ಕಾಣೆಯಾಗಿದ್ದು, ಇವರನ್ನು ಪತ್ತೆ ಹಚ್ಚುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಗರದ ಸೋಮುಗುದ್ದ ರಸ್ತೆಯ ಅಪ್ಪರ್ ಭದ್ರಾ ಮೇಲ್ದಂಡೆ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನಂದೀಶ ಅವರ ತಾಯಿ ಯಶೋದಮ್ಮ ಅವರು ಸೋಮವಾರ ರಾತ್ರಿ 6:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾದಾಗ ಯಶೋದಮ್ಮ ಕ್ರೀಮ್ ಕಲರ್ ನೈಟಿ ಹಾಗೂ ಬಿಳಿ ದುಪ್ಪಟ್ಟ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಯಶೋದಮ್ಮನವರನ್ನು ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಚಳ್ಳಕೆರೆ ಪೊಲೀಸ್ ಠಾಣೆಗೆ ಅಥವಾ ಅವರ ಪುತ್ರ ನಂದೀಶರ ಮೊಬೈಲ್ ಸಂಖ್ಯೆ 7349020442 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರ ಸೊಸೆ ಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜುಲೈ 13ರಿಂದ ಮದ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿದ್ದು, ಇದರ ಯಶಸ್ವಿ ನಿರ್ವಹಣೆಗಾಗಿ ಹುಳಿಯಾರಿನಲ್ಲಿ ಪೂರ್ವಭಾವಿ ಸಮಿತಿ ರಚನಾ ಸಭೆಯನ್ನು ನಡೆಸಲಾಯಿತು. ಚಿಕ್ಕನಾಯಕನಹಳ್ಳಿ ವಲಯದಲ್ಲಿ ಆಯೋಜಿಸಲಾಗಿರುವ ಇದು, ಸಂಸ್ಥೆಯ 2080ನೇ ಶಿಬಿರವಾಗಿದೆ. ಸಭೆಯಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು, ತಮ್ಮ ಯೋಜನೆಯು ಕಳೆದ 15 ವರ್ಷಗಳಿಂದ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು. ಪೂಜ್ಯ ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ 1996ರಲ್ಲಿ ಸಮುದಾಯ ಮದ್ಯವರ್ಜನ ಶಿಬಿರಗಳು ಆರಂಭಗೊಂಡಿದ್ದು, ಕೇವಲ ಬಂದ್, ಬ್ಯಾನ್ ಅಥವಾ ಮದ್ಯದ ಅಂಗಡಿಗಳನ್ನು ಮುಚ್ಚಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಅರಿತು, ಕುಡಿತಕ್ಕೆ ದಾಸರಾದವರಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡುವ ಉದ್ದೇಶದಿಂದ ಈ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮದ್ಯ ವ್ಯಸನಿಗಳ ಚಿಕಿತ್ಸೆಯಲ್ಲಿ ಶೇ. 10ರಷ್ಟು ಯಶಸ್ಸನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆಯಾದರೂ, ಧರ್ಮಸ್ಥಳ ಯೋಜನೆಯ ಶಿಬಿರಗಳ ಮೂಲಕ ಶೇ. 80ರಷ್ಟು ಶಿಬಿರಾರ್ಥಿಗಳು ಮದ್ಯ ಮುಕ್ತರಾಗಿ ಗೌರವಾನ್ವಿತ ಜೀವನ ನಡೆಸುತ್ತಿದ್ದಾರೆ. ಇದುವರೆಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಪ್ರವೀಣ್ ಕುಮಾರ್ ಮಾಹಿತಿ ನೀಡಿದರು. ಜುಲೈ 13ರಿಂದ ಪ್ರಾರಂಭವಾಗುವ ಶಿಬಿರದಲ್ಲಿ ವ್ಯಸನಿಗಳಿಗೆ ದೈಹಿಕ, ಮಾನಸಿಕ ಚಿಕಿತ್ಸೆಯೊಂದಿಗೆ ಸತ್ಸಂಗಗಳನ್ನು ಸಹ ಹಮ್ಮಿಕೊಳ್ಳಲಾಗುವುದು. ಶಿಬಿರ ಮುಗಿದ ಬಳಿಕವೂ ಅವರು ಮತ್ತೆ ಕುಡಿತಕ್ಕೆ ದಾಸರಾಗದಂತೆ 'ನವಜೀವನ ಸಮಿತಿ'ಯ ಮೂಲಕ ನಿರಂತರ ನಿಗಾ ಇಡಲಾಗುವುದು ಎಂದು ಪ್ರವೀಣ್ ತಿಳಿಸಿದರು. ಶಿಬಿರದ ಯಶಸ್ಸಿಗಾಗಿ ಉಚಿತವಾಗಿ ಸಭಾಂಗಣ ನೀಡಿದ ಕಿರಣ್ ಕುಮಾರ್ ಹಾಗೂ ಯೋಜನೆಯ ಜನಜಾಗೃತಿ ವೇದಿಕೆಯ ಸದಸ್ಯರ ಸಹಕಾರವನ್ನು ಸಭೆಯಲ್ಲಿ ಶ್ಲಾಘಿಸಲಾಯಿತು. ವೇದಿಕೆಯ ಸದಸ್ಯರು ವಾರ್ಷಿಕವಾಗಿ ಶಾಲಾ ಮಕ್ಕಳಲ್ಲಿ ಜಾಗೃತಿ, ಮಾದಕ ವಸ್ತು ಹಾಗೂ ತಂಬಾಕು ವಿರೋಧಿ ದಿನಾಚರಣೆ ಮತ್ತು ಗಾಂಧಿ ಜಯಂತಿಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಲಾಯಿತು. ಸಭೆಯಲ್ಲಿ ಯೋಜನೆಯ ಅಧಿಕಾರಿಗಳು, ಜನಜಾಗೃತಿ ವೇದಿಕೆಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    1
    ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜುಲೈ 13ರಿಂದ ಮದ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿದ್ದು, ಇದರ ಯಶಸ್ವಿ ನಿರ್ವಹಣೆಗಾಗಿ ಹುಳಿಯಾರಿನಲ್ಲಿ ಪೂರ್ವಭಾವಿ ಸಮಿತಿ ರಚನಾ ಸಭೆಯನ್ನು ನಡೆಸಲಾಯಿತು. ಚಿಕ್ಕನಾಯಕನಹಳ್ಳಿ ವಲಯದಲ್ಲಿ ಆಯೋಜಿಸಲಾಗಿರುವ ಇದು, ಸಂಸ್ಥೆಯ 2080ನೇ ಶಿಬಿರವಾಗಿದೆ.

ಸಭೆಯಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು, ತಮ್ಮ ಯೋಜನೆಯು ಕಳೆದ 15 ವರ್ಷಗಳಿಂದ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು. ಪೂಜ್ಯ ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ 1996ರಲ್ಲಿ ಸಮುದಾಯ ಮದ್ಯವರ್ಜನ ಶಿಬಿರಗಳು ಆರಂಭಗೊಂಡಿದ್ದು, ಕೇವಲ ಬಂದ್, ಬ್ಯಾನ್ ಅಥವಾ ಮದ್ಯದ ಅಂಗಡಿಗಳನ್ನು ಮುಚ್ಚಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಅರಿತು, ಕುಡಿತಕ್ಕೆ ದಾಸರಾದವರಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡುವ ಉದ್ದೇಶದಿಂದ ಈ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮದ್ಯ ವ್ಯಸನಿಗಳ ಚಿಕಿತ್ಸೆಯಲ್ಲಿ ಶೇ. 10ರಷ್ಟು ಯಶಸ್ಸನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆಯಾದರೂ, ಧರ್ಮಸ್ಥಳ ಯೋಜನೆಯ ಶಿಬಿರಗಳ ಮೂಲಕ ಶೇ. 80ರಷ್ಟು ಶಿಬಿರಾರ್ಥಿಗಳು ಮದ್ಯ ಮುಕ್ತರಾಗಿ ಗೌರವಾನ್ವಿತ ಜೀವನ ನಡೆಸುತ್ತಿದ್ದಾರೆ. ಇದುವರೆಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಪ್ರವೀಣ್ ಕುಮಾರ್ ಮಾಹಿತಿ ನೀಡಿದರು.

ಜುಲೈ 13ರಿಂದ ಪ್ರಾರಂಭವಾಗುವ ಶಿಬಿರದಲ್ಲಿ ವ್ಯಸನಿಗಳಿಗೆ ದೈಹಿಕ, ಮಾನಸಿಕ ಚಿಕಿತ್ಸೆಯೊಂದಿಗೆ ಸತ್ಸಂಗಗಳನ್ನು ಸಹ ಹಮ್ಮಿಕೊಳ್ಳಲಾಗುವುದು. ಶಿಬಿರ ಮುಗಿದ ಬಳಿಕವೂ ಅವರು ಮತ್ತೆ ಕುಡಿತಕ್ಕೆ ದಾಸರಾಗದಂತೆ 'ನವಜೀವನ ಸಮಿತಿ'ಯ ಮೂಲಕ ನಿರಂತರ ನಿಗಾ ಇಡಲಾಗುವುದು ಎಂದು ಪ್ರವೀಣ್ ತಿಳಿಸಿದರು. ಶಿಬಿರದ ಯಶಸ್ಸಿಗಾಗಿ ಉಚಿತವಾಗಿ ಸಭಾಂಗಣ ನೀಡಿದ ಕಿರಣ್ ಕುಮಾರ್ ಹಾಗೂ ಯೋಜನೆಯ ಜನಜಾಗೃತಿ ವೇದಿಕೆಯ ಸದಸ್ಯರ ಸಹಕಾರವನ್ನು ಸಭೆಯಲ್ಲಿ ಶ್ಲಾಘಿಸಲಾಯಿತು. ವೇದಿಕೆಯ ಸದಸ್ಯರು ವಾರ್ಷಿಕವಾಗಿ ಶಾಲಾ ಮಕ್ಕಳಲ್ಲಿ ಜಾಗೃತಿ, ಮಾದಕ ವಸ್ತು ಹಾಗೂ ತಂಬಾಕು ವಿರೋಧಿ ದಿನಾಚರಣೆ ಮತ್ತು ಗಾಂಧಿ ಜಯಂತಿಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಲಾಯಿತು. ಸಭೆಯಲ್ಲಿ ಯೋಜನೆಯ ಅಧಿಕಾರಿಗಳು, ಜನಜಾಗೃತಿ ವೇದಿಕೆಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.