logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗಮನಿಸಿ ವಿವಿ ಮೊಹಲ್ಲಾ ಉಪ ವಿಭಾಗ ವ್ಯಾಪ್ತಿಯ 66/11 ಕೆ.ವಿ ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಮಯೂರ ವಿದ್ಯುತ್ ಮಾರ್ಗದಲ್ಲಿ ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಮಾ.10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಹೆಬ್ಬಾಳ್ 2ನೇಹಂತ, 25/1ಯಿಂದ 25/10 ಕ್ರಾಸ್, ಕೆಐಎಡಿಬಿ ಲೇಔಟ್ ಏರಿಯಾ, ಲಕ್ಷ್ಮೀಕಾಂತ ನಗರ, ನಿಸರ್ಗ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4 hrs ago
user_Ashwini
Ashwini
ಮೈಸೂರು, ಮೈಸೂರು, ಕರ್ನಾಟಕ•
4 hrs ago
5844c43f-60ed-49ab-b5d1-f316230d809a

ಇಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗಮನಿಸಿ ವಿವಿ ಮೊಹಲ್ಲಾ ಉಪ ವಿಭಾಗ ವ್ಯಾಪ್ತಿಯ 66/11 ಕೆ.ವಿ ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಮಯೂರ ವಿದ್ಯುತ್ ಮಾರ್ಗದಲ್ಲಿ ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಮಾ.10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ಹೆಬ್ಬಾಳ್ 2ನೇಹಂತ, 25/1ಯಿಂದ 25/10 ಕ್ರಾಸ್, ಕೆಐಎಡಿಬಿ ಲೇಔಟ್ ಏರಿಯಾ, ಲಕ್ಷ್ಮೀಕಾಂತ ನಗರ, ನಿಸರ್ಗ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    55 min ago
  • ‘ಅಕ್ಕ ಪಡೆ’ ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸ್ ಇಲಾಖೆಗೆ ನೀಡಿರುವ ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನವನ್ನು ಬಳಸಲಾಗುತ್ತದೆ ಎಂದರು. ಈ ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ತಮ್ಮ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.
    1
    ‘ಅಕ್ಕ ಪಡೆ’ ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸ್ ಇಲಾಖೆಗೆ ನೀಡಿರುವ ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನವನ್ನು ಬಳಸಲಾಗುತ್ತದೆ ಎಂದರು. ಈ ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ತಮ್ಮ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    4 hrs ago
  • Post by BABU BANNUR Social Media
    4
    Post by BABU BANNUR Social Media
    user_BABU BANNUR Social Media
    BABU BANNUR Social Media
    Tirumakudal - Narsipur, Mysuru•
    22 hrs ago
  • ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*
    1
    ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    18 hrs ago
  • ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..
    1
    ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....
    2
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ  ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್‌ ನಿದ್ದೋಡಿ ಅವರನ್ನು  ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು...
ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್‌ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.
✍️ವರದಿ: ಸುರೇಂದ್ರ ಶಿವಮೊಗ್ಗ.....
    user_Surendra Shimoga
    Surendra Shimoga
    Shuru News Publisher ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಬೆಂಗಳೂರಿನ ಹೆಣ್ಣೂರು ಗಾರ್ಡನ್ಸ್‌ನ ಪ್ರಕೃತಿ ಲೇಔಟ್‌ನಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದರೆ, ಮತ್ತೊಂದು ಗುಂಪು ಕಿತ್ತಾಟದಲ್ಲಿ ತೊಡಗಿದೆ. ಅಷ್ಟರಲ್ಲಿ ಬುಲೆಟ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿದ್ದಾನೆ. ಒಂದೇ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸವಾಲು ಹಾಕುವಂತಿರುವ ಈ ರೌಡಿಸಂ ಮತ್ತು ಅಶಿಸ್ತಿನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
    1
    ಬೆಂಗಳೂರಿನ ಹೆಣ್ಣೂರು ಗಾರ್ಡನ್ಸ್‌ನ ಪ್ರಕೃತಿ ಲೇಔಟ್‌ನಲ್ಲಿ ನಡೆದ ಆತಂಕಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದರೆ, ಮತ್ತೊಂದು ಗುಂಪು ಕಿತ್ತಾಟದಲ್ಲಿ ತೊಡಗಿದೆ. ಅಷ್ಟರಲ್ಲಿ ಬುಲೆಟ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿದ್ದಾನೆ. ಒಂದೇ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸವಾಲು ಹಾಕುವಂತಿರುವ ಈ ರೌಡಿಸಂ ಮತ್ತು ಅಶಿಸ್ತಿನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    16 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.