ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಜೂನ್ 25 ಮತ್ತು 26 ರಂದು ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ವಿಶೇಷವಾಗಿ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದೆ. ಉತ್ತರ ಕರ್ನಾಟಕದ ಪ್ರಮುಖ ಮೊಹರಂ ಆಚರಣೆಗಳಲ್ಲಿ ಒಂದಾದ ಜಾಲಹಳ್ಳಿಯ ಈ ಹಬ್ಬವು, ಮುದಗಲ್ ನಂತರ ಎರಡನೇ ಅತಿ ದೊಡ್ಡ ಆಚರಣೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಹಬ್ಬದ ಅಂಗವಾಗಿ ಜೂನ್ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 9 ನೇ ತಾರೀಖಿನಂದು ನಡೆದ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಕೂಡಿತ್ತು. ಊರಿನ ರಾಜವಂಶಸ್ಥರು ಹಾಗೂ ವತಂದಾರರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜಾತಿ-ಧರ್ಮ ಭೇದವಿಲ್ಲದೆ ಎಲ್ಲಾ ಸಮುದಾಯಗಳ ಸಾರ್ವಜನಿಕರು ಭಾಗವಹಿಸಿ ಕೋಮು ಸೌಹಾರ್ದತೆಗೆ ಮಾದರಿಯಾದರು. 9 ನೇ ತಾರೀಖಿನ ಮುಂಜಾನೆ ಸುಮಾರು 4 ಗಂಟೆಗೆ ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಅವರ ಮೆರವಣಿಗೆಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಹೈದರ್ ಸಾಬ್ ಕೊಪ್ಪರ್ ಮುಲ್ಲಾ ಅವರ ಪ್ರಕಾರ, ಆಶೀರ್ ಖಾನ್ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಮುಖ್ಯ ಬೀದಿಗಳ ಮೂಲಕ ಗರಿಗಲಿ ದರ್ಗಾಕ್ಕೆ ತಲುಪಿ ದರ್ಶನ ಪಡೆದ ಬಳಿಕ ಬೆಳಿಗ್ಗೆ 8 ಗಂಟೆಗೆ ಸಮಾಪ್ತಿಯಾಯಿತು. ಶಬ್ಬೀರ್ ಜಾಲಹಳ್ಳಿ ಅವರು 'ಕತ್ತಲ್ ರಾತ್ರಿ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆದಿರುವುದನ್ನು ದೃಢಪಡಿಸಿದ್ದು, ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಮೆರವಣಿಗೆಗಳು ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಸಾಗಿದವು ಎಂದು ತಿಳಿಸಿದರು. ಜೂನ್ 26 ರಂದು ಮೊಹರಂ ಹಬ್ಬದ ಕೊನೆಯ ದಿನದ ಅಂಗವಾಗಿ ಆಶೀರ್ ಖಾನ್‌ನಿಂದ ಆರಂಭವಾಗುವ ಮೆರವಣಿಗೆಯು ಜಾಲಹಳ್ಳಿಯ ದೇಸಾಯಿ ಕುಟುಂಬದವರ ತೋಟದ ಮೈದಾನದಲ್ಲಿ ಸಮಾರೋಪಗೊಂಡು ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ತಿಮ್ಮಣ್ಣ ನಾಯಕ್ ದಿದಗಿ ಅವರು ಜಾಲಹಳ್ಳಿ ಮೊಹರಂ ಹಬ್ಬವು ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸುವ ಕೋಮು ಸೌಹಾರ್ದದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಧಾರವಾಡದ ಮಹಿಬೂಬ್ ದಾದೆಬಾಯಿ ಅವರು, ಉತ್ತರ ಕರ್ನಾಟಕದಲ್ಲಿ ಮುದಗಲ್ ನಂತರ ಜಾಲಹಳ್ಳಿ ಮೊಹರಂ ಹಬ್ಬಕ್ಕೆ ಎರಡನೇ ಸ್ಥಾನವಿದ್ದು, ವಿವಿಧ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಆಚರಿಸುವುದು ಹಾಗೂ ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವುದು ಇದರ ವಿಶೇಷತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ ತಿಮ್ಮಪ್ಪ ನಾಯಕ್, ತಿಮ್ಮಣ್ಣ ನಾಯಕ್ ದಿದಗಿ, ರಂಗಪ್ಪ ಬಂಡಿ, ಮೌನೇಶ್ ಪೂಜಾರಿ, ಶಿವಪ್ಪ ಬೋರಬಾಯಿ, ಯಾಸಿನ್ ಮುಲ್ಲಾ, ಗೌಸ್ ಮುಲ್ಲಾ, ಹುಸೇನ್ ಬಾಷಾ ಸರ್ನೋಬತ್, ಇಬ್ರಾಹಿಂ, ಆರತಿ ಪೂಜಾರಿ, ಬಾಬು ಕಕ್ಕೇರ, ಹೈದರಾಲಿ ಮುಲ್ಲಾ, ಮಹಿಬೂಬ್ ದಾದೆಬಾಯಿ, ಬಬ್ಬು ಬಳಿಗಾರ, ಮಹಮ್ಮದ್ ರಫಿ ಸರ್ನೋಬತ್, ಜಾಕಿರ್ ಹುಸೇನ್ ಆರತಿ, ರಾಜ್ ಮಹಮ್ಮದ್ ಸರ್ನೋಬತ್, ಭಾಷಾ ಸರ್ನೋಬತ್, ಬಾಶುಮಿಯ ಕಾರ್ಪೆಂಟರ್ ಸೇರಿದಂತೆ ಎಲ್ಲಾ ವತಂದಾರರು, ಗಣ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿದವು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಜೂನ್ 25 ಮತ್ತು 26 ರಂದು ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ವಿಶೇಷವಾಗಿ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದೆ. ಉತ್ತರ ಕರ್ನಾಟಕದ ಪ್ರಮುಖ ಮೊಹರಂ ಆಚರಣೆಗಳಲ್ಲಿ ಒಂದಾದ ಜಾಲಹಳ್ಳಿಯ ಈ ಹಬ್ಬವು, ಮುದಗಲ್ ನಂತರ ಎರಡನೇ ಅತಿ ದೊಡ್ಡ ಆಚರಣೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಹಬ್ಬದ ಅಂಗವಾಗಿ ಜೂನ್ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 9 ನೇ ತಾರೀಖಿನಂದು ನಡೆದ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಕೂಡಿತ್ತು. ಊರಿನ ರಾಜವಂಶಸ್ಥರು ಹಾಗೂ ವತಂದಾರರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜಾತಿ-ಧರ್ಮ
ಭೇದವಿಲ್ಲದೆ ಎಲ್ಲಾ ಸಮುದಾಯಗಳ ಸಾರ್ವಜನಿಕರು ಭಾಗವಹಿಸಿ ಕೋಮು ಸೌಹಾರ್ದತೆಗೆ ಮಾದರಿಯಾದರು. 9 ನೇ ತಾರೀಖಿನ ಮುಂಜಾನೆ ಸುಮಾರು 4 ಗಂಟೆಗೆ ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಅವರ ಮೆರವಣಿಗೆಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಹೈದರ್ ಸಾಬ್ ಕೊಪ್ಪರ್ ಮುಲ್ಲಾ ಅವರ ಪ್ರಕಾರ, ಆಶೀರ್ ಖಾನ್ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಮುಖ್ಯ ಬೀದಿಗಳ ಮೂಲಕ ಗರಿಗಲಿ ದರ್ಗಾಕ್ಕೆ ತಲುಪಿ ದರ್ಶನ ಪಡೆದ ಬಳಿಕ ಬೆಳಿಗ್ಗೆ 8 ಗಂಟೆಗೆ ಸಮಾಪ್ತಿಯಾಯಿತು. ಶಬ್ಬೀರ್ ಜಾಲಹಳ್ಳಿ ಅವರು 'ಕತ್ತಲ್ ರಾತ್ರಿ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆದಿರುವುದನ್ನು ದೃಢಪಡಿಸಿದ್ದು, ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಮೆರವಣಿಗೆಗಳು ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಸಾಗಿದವು ಎಂದು ತಿಳಿಸಿದರು.
ಜೂನ್ 26 ರಂದು ಮೊಹರಂ ಹಬ್ಬದ ಕೊನೆಯ ದಿನದ ಅಂಗವಾಗಿ ಆಶೀರ್ ಖಾನ್‌ನಿಂದ ಆರಂಭವಾಗುವ ಮೆರವಣಿಗೆಯು ಜಾಲಹಳ್ಳಿಯ ದೇಸಾಯಿ ಕುಟುಂಬದವರ ತೋಟದ ಮೈದಾನದಲ್ಲಿ ಸಮಾರೋಪಗೊಂಡು ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ತಿಮ್ಮಣ್ಣ ನಾಯಕ್ ದಿದಗಿ ಅವರು ಜಾಲಹಳ್ಳಿ ಮೊಹರಂ ಹಬ್ಬವು ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸುವ ಕೋಮು ಸೌಹಾರ್ದದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಧಾರವಾಡದ ಮಹಿಬೂಬ್ ದಾದೆಬಾಯಿ ಅವರು, ಉತ್ತರ ಕರ್ನಾಟಕದಲ್ಲಿ ಮುದಗಲ್ ನಂತರ ಜಾಲಹಳ್ಳಿ ಮೊಹರಂ ಹಬ್ಬಕ್ಕೆ ಎರಡನೇ ಸ್ಥಾನವಿದ್ದು, ವಿವಿಧ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಆಚರಿಸುವುದು ಹಾಗೂ ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವುದು ಇದರ ವಿಶೇಷತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ
ತಿಮ್ಮಪ್ಪ ನಾಯಕ್, ತಿಮ್ಮಣ್ಣ ನಾಯಕ್ ದಿದಗಿ, ರಂಗಪ್ಪ ಬಂಡಿ, ಮೌನೇಶ್ ಪೂಜಾರಿ, ಶಿವಪ್ಪ ಬೋರಬಾಯಿ, ಯಾಸಿನ್ ಮುಲ್ಲಾ, ಗೌಸ್ ಮುಲ್ಲಾ, ಹುಸೇನ್ ಬಾಷಾ ಸರ್ನೋಬತ್, ಇಬ್ರಾಹಿಂ, ಆರತಿ ಪೂಜಾರಿ, ಬಾಬು ಕಕ್ಕೇರ, ಹೈದರಾಲಿ ಮುಲ್ಲಾ, ಮಹಿಬೂಬ್ ದಾದೆಬಾಯಿ, ಬಬ್ಬು ಬಳಿಗಾರ, ಮಹಮ್ಮದ್ ರಫಿ ಸರ್ನೋಬತ್, ಜಾಕಿರ್ ಹುಸೇನ್ ಆರತಿ, ರಾಜ್ ಮಹಮ್ಮದ್ ಸರ್ನೋಬತ್, ಭಾಷಾ ಸರ್ನೋಬತ್, ಬಾಶುಮಿಯ ಕಾರ್ಪೆಂಟರ್ ಸೇರಿದಂತೆ ಎಲ್ಲಾ ವತಂದಾರರು, ಗಣ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿದವು.
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಜೂನ್ 25 ಮತ್ತು 26 ರಂದು ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ವಿಶೇಷವಾಗಿ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದೆ. ಉತ್ತರ ಕರ್ನಾಟಕದ ಪ್ರಮುಖ ಮೊಹರಂ ಆಚರಣೆಗಳಲ್ಲಿ ಒಂದಾದ ಜಾಲಹಳ್ಳಿಯ ಈ ಹಬ್ಬವು, ಮುದಗಲ್ ನಂತರ ಎರಡನೇ ಅತಿ ದೊಡ್ಡ ಆಚರಣೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಹಬ್ಬದ ಅಂಗವಾಗಿ ಜೂನ್ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 9 ನೇ ತಾರೀಖಿನಂದು ನಡೆದ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಕೂಡಿತ್ತು. ಊರಿನ ರಾಜವಂಶಸ್ಥರು ಹಾಗೂ ವತಂದಾರರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜಾತಿ-ಧರ್ಮ ಭೇದವಿಲ್ಲದೆ ಎಲ್ಲಾ ಸಮುದಾಯಗಳ ಸಾರ್ವಜನಿಕರು ಭಾಗವಹಿಸಿ ಕೋಮು ಸೌಹಾರ್ದತೆಗೆ ಮಾದರಿಯಾದರು. 9 ನೇ ತಾರೀಖಿನ ಮುಂಜಾನೆ ಸುಮಾರು 4 ಗಂಟೆಗೆ ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಅವರ ಮೆರವಣಿಗೆಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಹೈದರ್ ಸಾಬ್ ಕೊಪ್ಪರ್ ಮುಲ್ಲಾ ಅವರ ಪ್ರಕಾರ, ಆಶೀರ್ ಖಾನ್ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಮುಖ್ಯ ಬೀದಿಗಳ ಮೂಲಕ ಗರಿಗಲಿ ದರ್ಗಾಕ್ಕೆ ತಲುಪಿ ದರ್ಶನ ಪಡೆದ ಬಳಿಕ ಬೆಳಿಗ್ಗೆ 8 ಗಂಟೆಗೆ ಸಮಾಪ್ತಿಯಾಯಿತು. ಶಬ್ಬೀರ್ ಜಾಲಹಳ್ಳಿ ಅವರು 'ಕತ್ತಲ್ ರಾತ್ರಿ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆದಿರುವುದನ್ನು ದೃಢಪಡಿಸಿದ್ದು, ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಮೆರವಣಿಗೆಗಳು ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಸಾಗಿದವು ಎಂದು ತಿಳಿಸಿದರು. ಜೂನ್ 26 ರಂದು ಮೊಹರಂ ಹಬ್ಬದ ಕೊನೆಯ ದಿನದ ಅಂಗವಾಗಿ ಆಶೀರ್ ಖಾನ್‌ನಿಂದ ಆರಂಭವಾಗುವ ಮೆರವಣಿಗೆಯು ಜಾಲಹಳ್ಳಿಯ ದೇಸಾಯಿ ಕುಟುಂಬದವರ ತೋಟದ ಮೈದಾನದಲ್ಲಿ ಸಮಾರೋಪಗೊಂಡು ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ತಿಮ್ಮಣ್ಣ ನಾಯಕ್ ದಿದಗಿ ಅವರು ಜಾಲಹಳ್ಳಿ ಮೊಹರಂ ಹಬ್ಬವು ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸುವ ಕೋಮು ಸೌಹಾರ್ದದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಧಾರವಾಡದ ಮಹಿಬೂಬ್ ದಾದೆಬಾಯಿ ಅವರು, ಉತ್ತರ ಕರ್ನಾಟಕದಲ್ಲಿ ಮುದಗಲ್ ನಂತರ ಜಾಲಹಳ್ಳಿ ಮೊಹರಂ ಹಬ್ಬಕ್ಕೆ ಎರಡನೇ ಸ್ಥಾನವಿದ್ದು, ವಿವಿಧ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಆಚರಿಸುವುದು ಹಾಗೂ ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವುದು ಇದರ ವಿಶೇಷತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ ತಿಮ್ಮಪ್ಪ ನಾಯಕ್, ತಿಮ್ಮಣ್ಣ ನಾಯಕ್ ದಿದಗಿ, ರಂಗಪ್ಪ ಬಂಡಿ, ಮೌನೇಶ್ ಪೂಜಾರಿ, ಶಿವಪ್ಪ ಬೋರಬಾಯಿ, ಯಾಸಿನ್ ಮುಲ್ಲಾ, ಗೌಸ್ ಮುಲ್ಲಾ, ಹುಸೇನ್ ಬಾಷಾ ಸರ್ನೋಬತ್, ಇಬ್ರಾಹಿಂ, ಆರತಿ ಪೂಜಾರಿ, ಬಾಬು ಕಕ್ಕೇರ, ಹೈದರಾಲಿ ಮುಲ್ಲಾ, ಮಹಿಬೂಬ್ ದಾದೆಬಾಯಿ, ಬಬ್ಬು ಬಳಿಗಾರ, ಮಹಮ್ಮದ್ ರಫಿ ಸರ್ನೋಬತ್, ಜಾಕಿರ್ ಹುಸೇನ್ ಆರತಿ, ರಾಜ್ ಮಹಮ್ಮದ್ ಸರ್ನೋಬತ್, ಭಾಷಾ ಸರ್ನೋಬತ್, ಬಾಶುಮಿಯ ಕಾರ್ಪೆಂಟರ್ ಸೇರಿದಂತೆ ಎಲ್ಲಾ ವತಂದಾರರು, ಗಣ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿದವು.4
- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣ ಸಮೀಪದ ಏವೂರು ಗ್ರಾಮದಲ್ಲಿ ಇಂದು ಮೊಹರಂ ಸಾತ್ ತಾರಿಕ್ ಶ್ರೀ ಇಮಾಮ ಸೈಯದ್ ಕಾಸಿಂ ಸವಾರಿ ಆಯೋಜಿಸಲಾಗಿತ್ತು. ಈ ಸವಾರಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಗ್ರಾಮಸ್ಥರು ಹಾಗೂ ಊರಿನ ಎಲ್ಲಾ ಗಣ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.1
- ವಡಗೇರಾ ತಾಲ್ಲೂಕು ಕೇಂದ್ರದಲ್ಲಿರುವ ಬಸ್ ನಿಲ್ದಾಣವು ಸಮಸ್ಯೆಗಳ ಕೂಪ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಭಿಕ ಆರ್. ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸ್ ನಿಲ್ದಾಣ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಸೊರಗಿದೆ, ಇದು ಹೆಸರಿಗಷ್ಟೇ ಬಸ್ ನಿಲ್ದಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಸರಿಯಾಗಿ ಬಸ್ಸುಗಳು ನಿಲ್ಲುವುದಿಲ್ಲ, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಇರುವುದಿಲ್ಲ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಇದ್ದು ಇಲ್ಲದಂತಾಗಿ ಹಾಳು ಬಿದ್ದಿದ್ದು, ನಿಲ್ದಾಣದೊಳಗಿನ ಬೋರ್‌ವೆಲ್ ಕೆಟ್ಟು ಹೋಗಿದೆ. ನೆಲಮಾಳಿಗೆಯ ನೀರಿನ ಟ್ಯಾಂಕ್ ಅನ್ನು ತೆರೆದಿಟ್ಟಿದ್ದು, ಅದರಲ್ಲಿ ಚಿಕ್ಕ ಮಕ್ಕಳು, ವೃದ್ಧರು ಕಾಲು ಜಾರಿ ಬಿದ್ದು ಅನಾಹುತಗಳಾದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ. ಬಸ್ ನಿಲ್ದಾಣದ ಆವರಣದಲ್ಲಿ ಜಾಲಿ ಗಿಡಗಳು, ಮುಳ್ಳುಕಂಟಿಗಳು ಬೆಳೆದು ನಿಂತಿವೆ, ಎಲ್ಲೆಂದರಲ್ಲಿ ಕಸದ ರಾಶಿಗಳು ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ. ಫ್ಯಾನ್, ಲೈಟ್‌ಗಳಿಲ್ಲ, ಶೌಚಾಲಯದ ಮೇಲ್ಛಾವಣಿ ಹಾರಿ ಹೋಗಿದೆ, ಒಳಗಡೆ ಕಸಕಡ್ಡಿ, ಜಾಲಿ ಮುಳ್ಳುಗಳು ಬೆಳೆದಿವೆ. ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಾದ ರಾಚಪ್ಪ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಪಟ್ಟಣದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿನನಿತ್ಯ ಬಸ್ ನಿಲ್ದಾಣದ ಮುಂದುಗಡೆ ತಿರುಗಾಡುತ್ತಾರೆ, ಆದರೆ ಬಸ್ ನಿಲ್ದಾಣದ ಒಳಗಡೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಈಗಲಾದರೂ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರು ಮತ್ತು ಸ್ವಚ್ಛತೆ ಒದಗಿಸಬೇಕು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತೋದಯ ಹಸಿರು ಸೇನೆ ಆಗ್ರಹಿಸಿದೆ. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಬಸ್ ನಿಲ್ದಾಣಕ್ಕೆ ಬೀಗ ಜಡಿದು ಹೋರಾಟ ಮಾಡುವುದಾಗಿ ರುದ್ರಾಂಭಿಕ.ಆರ್. ಪಾಟೀಲ್ ಚಟ್ನಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.2
- ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ, ಸಮರ್ಪಕವಾಗಿ ಮಳೆ ಬಾರದ ಪರಿಣಾಮ ರೈತನೊಬ್ಬ ತಾನು ಬೆಳೆದಿದ್ದ ಹತ್ತಿ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಮರಿಲಿಂಗಪ್ಪ ಎಂಬ ರೈತ ಸಾಲ ಮಾಡಿ ಬಿತ್ತಿದ್ದ ಈ ಬೆಳೆಗಳು ನೀರಿಲ್ಲದೆ ಸಂಪೂರ್ಣ ಒಣಗಿಹೋಗಿದ್ದು, ಕಪ್ಪು ಭೂಮಿ ಬಿರುಕು ಬಿಟ್ಟಿರುವುದು ರೈತನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಳೆ ಉಳಿಯುವ ಎಲ್ಲಾ ಭರವಸೆ ಕಳೆದುಕೊಂಡ ಆ ರೈತ, ತಾನೇ ತನ್ನ ಬೆಳೆದ ಬೆಳೆಯನ್ನು ನಾಶಪಡಿಸಿ ನೋವು ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ, ರೈತರು ತಕ್ಷಣವೇ ರಾಜ್ಯ ಸರ್ಕಾರ ಬರಗಾಲ ಘೋಷಿಸಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.1
- ಯಾದಗಿರಿ ನಗರವು ತನ್ನ ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕಟ್ಟಡಗಳು ಮತ್ತು ಭೀಮಾ ನದಿಯ ಮೇಲಿನ ಶತಮಾನದ ಸೇತುವೆಯು ನಗರದ ಹಿರಿಮೆಯನ್ನು ಹೆಚ್ಚಿಸಿವೆ. ಈ ಬ್ರಿಟಿಷ್ ಕಾಲದ ಸೇತುವೆಯು ಸುಮಾರು 100 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇತ್ತೀಚೆಗೆ ಶಿಥಿಲಾವಸ್ಥೆಗೆ ತಲುಪಿತ್ತು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಸೇತುವೆಯ ರಕ್ಷಣೆಗಾಗಿ ಮತ್ತು ಅದರ ಮೇಲೆ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲು ಹಲವು ಬಾರಿ ಹೋರಾಟ ನಡೆಸಿದ್ದರೂ, ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಮೇಲ್ಭಾಗದ ಗಿಡಗಳನ್ನು ಕತ್ತರಿಸಿ ಸಾರ್ವಜನಿಕರನ್ನು ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಉಮೇಶ ಕೆ. ಮುದ್ನಾಳ್ ಅವರು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ತಕ್ಷಣ ಸ್ಪಂದಿಸಿದ್ದಾರೆ. ಸರ್ಕಾರದ ಮೂಲಕ ಸೇತುವೆ ನವೀಕರಣಕ್ಕೆ 3 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದಾರೆ. ಈ ಕಾಮಗಾರಿಯು ಈಗ ಭರದಿಂದ ಸಾಗಿದ್ದು, ಮಧ್ಯಪ್ರದೇಶದ ಸುಮಾರು 25 ಕಾರ್ಮಿಕರು ನಿರಂತರವಾಗಿ ನವೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನವೀಕರಣದ ಜೊತೆಗೆ, ಸೇತುವೆಯ ಎರಡು ಬದಿಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಬೇರು ಸಮೇತ ರಾಸಾಯನಿಕ ಬಳಸಿ ತೆಗೆದುಹಾಕಲಾಗುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಗಿಡಗಂಟಿಗಳು ಬೆಳೆಯದಂತೆ ನೋಡಿಕೊಳ್ಳಲಾಗುವುದು ಎಂದು ಮುದ್ನಾಳ್ ತಿಳಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ಶಾಸಕರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಈ ನವೀಕರಣ ಕಾಮಗಾರಿಯಿಂದಾಗಿ ಜಿಲ್ಲೆಯ ಜನತೆ ಮತ್ತು ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ, ಮುದ್ನಾಳ್ ಅವರು ಭೀಮಾ ಸೇತುವೆಯ ಎರಡು ಬದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದಾರೆ. ಇದು ಯಾದಗಿರಿ ನಗರಕ್ಕೆ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.2
- ದಿನಾಂಕ 25.6.26 ರಂದು, ಹುಣಸಗಿಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಆರ್ ಪಿಡಿ ಟಾಸ್ಕ್ ಪೋರ್ಸ್ ಮತ್ತು ವಿಕಲಚೇತನರ ಸಂಘ ಸವಸ್ಥೆಗಳ ವಕ್ಕೂಟ ತಾಲೂಕು ಸಮಿತಿ ಹುಣಸಗಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಳೆದ ಎರಡು ಮೂರು ತಿಂಗಳಿಂದ ವಿಕಲಚೇತನರ ವೇತನವನ್ನು ಸ್ಥಗಿತಗೊಳಿಸಿರುವ ವಿಷಯ ಕುರಿತು ತಾಲೂಕು ದಂಡಾಧಿಕಾರಿಗಳ ಮೂಲಕ ಈ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಂ. ಬಸವರಾಜ್ ಅವರು, ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು, ಇದನ್ನು ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.4
- ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿರುವ ಗುರುಮಿಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಜೂನ್ 26ರಂದು ವಿಶಿಷ್ಟ ರೀತಿಯಲ್ಲಿ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಕಳೆದ ಸುಮಾರು 20 ದಿನಗಳಿಂದ ಸಮರ್ಪಕ ಮಳೆ ಸುರಿಯದ ಕಾರಣ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿರುವ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಮದ ರೈತರು ಹಾಗೂ ಭಕ್ತರು ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ಭಜನೆ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು. ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಸರು, ತೊಗರಿ, ಹತ್ತಿ, ಸಜ್ಜೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳನ್ನು ಉತ್ಸಾಹದಿಂದ ಬಿತ್ತನೆ ಮಾಡಿದ್ದರು. ಆರಂಭಿಕ ಮಳೆಯಿಂದ ಬೆಳೆಗಳು ಉತ್ತಮವಾಗಿ ಮೊಳಕೆಯೊಡೆದು ಬೆಳವಣಿಗೆಯ ಹಂತದಲ್ಲಿದ್ದವು. ಆದರೆ ನಂತರ ಮೂರು ವಾರಗಳಿಂದ ಮಳೆಯಿಲ್ಲದೆ ನಿರಂತರ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದು, ಹೊಲಗಳಲ್ಲಿನ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಇದರಿಂದ ರೈತರಲ್ಲಿ ಚಿಂತೆ ಮನೆಮಾಡಿದ್ದು, ಪ್ರಕೃತಿಯ ಅನುಗ್ರಹಕ್ಕಾಗಿ ದೇವರ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ರಾಚಪ್ಪಯ್ಯ, ಕಡ್ಲಪ್ಪಯ್ಯ, ಆಂಜನೇಯ ಸ್ವಾಮಿ, ರುದ್ರಸ್ವಾಮಿ, ಗ್ರಾಮದೇವತೆ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿದ ರೈತರು ಬೆಳಗ್ಗೆಯೇ ಮಡಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಜನೆ, ನಾಮಸಂಕೀರ್ತನೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಮತ್ತು ರೈತರ ಬದುಕು ಹಸನಾಗಲಿ ಎಂದು ಭಕ್ತಿಭಾವದಿಂದ ಪ್ರಾರ್ಥಿಸಿದರು. ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯರು, ಯುವಕರು ಹಾಗೂ ಹಿರಿಯರು ಸೇರಿದಂತೆ ನೂರಾರು ಭಕ್ತರು ದೇವಾಲಯಗಳಿಗೆ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಕೋಲಿ ಸಮಾಜದ ಅಧ್ಯಕ್ಷ ಬುಗ್ಗಪ್ಪ ಘಂಟೆ, ಭೀಮಣ್ಣ ಪಿರಂಗಿ, ಸಾಬಣ್ಣ, ಶರಣು ಕಲಾಲ, ಬಸ್ಸಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಹಿರಿಯರು, ರೈತ ಮುಖಂಡರು ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದು, ಮಳೆಗಾಗಿ ಸಾಮೂಹಿಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ಉತ್ತಮ ಮಳೆಯಾದರೆ ಮಾತ್ರ ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲಿದ್ದು, ಗ್ರಾಮೀಣ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬ ಆಶಯವನ್ನು ರೈತರು ವ್ಯಕ್ತಪಡಿಸಿದರು. ಸಮರ್ಪಕ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರದಲ್ಲೇ ಉತ್ತಮ ಮಳೆಯಾಗಿ ರೈತರ ಬೆಳೆಗಳು ಉಳಿಯಲಿ ಎಂಬ ಆಶಯವನ್ನು ಎಲ್ಲರೂ ವ್ಯಕ್ತಪಡಿಸಿದರು.1
- ಯಾದಗಿರಿ ನಗರದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿರುವ ಹೂವಿನ ಅಂಗಡಿಯೊಂದರಲ್ಲಿ ಗುರುವಾರ ತಡರಾತ್ರಿ ಸುಮಾರು 11 ಗಂಟೆ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಅಂಗಡಿಯಿಂದ ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡ ಕೂಡಲೇ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ಷಿಪ್ರವಾಗಿ ಕಾರ್ಯಾಚರಣೆ ಆರಂಭಿಸಿದರು. ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು, ಇದರಿಂದ ಬೆಂಕಿ ಹೆಚ್ಚಿನ ಅಂಗಡಿಗಳಿಗೆ ಹರಡದಂತೆ ತಡೆದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲಾಯಿತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ವ್ಯಾಪಾರಿಗಳು ಸ್ಥಳಕ್ಕೆ ಆಗಮಿಸಿ ಆತಂಕ ವ್ಯಕ್ತಪಡಿಸಿದರು. ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಕೆಲಕಾಲ ಜನಸಂದಣಿ ಉಂಟಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ಪರಿಸ್ಥಿತಿಯನ್ನು ನಿಯಂತ್ರಿಸಿ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಗೆ ಸಹಕಾರ ನೀಡಿದರು. ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಹೂವುಗಳು, ಅಲಂಕಾರಿಕ ಸಾಮಗ್ರಿಗಳು ಹಾಗೂ ಅಂಗಡಿಯಲ್ಲಿದ್ದ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದ್ದು, ನಷ್ಟದ ಪ್ರಮಾಣದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಸ್ಪಂದನೆ ಮತ್ತು ಸಮರ್ಪಕ ಕಾರ್ಯಾಚರಣೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸದೆ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.1