Shuru
Apke Nagar Ki App…
ಬಂಕಾಪೂರ ಪಟ್ಟಣದ ನೂತನ ಶ್ರೀಆಂಜನೇಯ (ರಾಮದೇವರ) ದೇವಸ್ಥಾನಕ್ಕೆ ಮಾಜಿ ಸಿಎಂ ಬೊಮ್ಮಾಯಿ ಬೇಟಿ, ಆಶೀರ್ವಾದ. ಶಿಗ್ಗಾವಿ : ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಆಂಜನೇಯ (ರಾಮದೇವರ) ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್ ಅರುಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಬಸವರಾಜ ವೀ ಎಚ್
ಬಂಕಾಪೂರ ಪಟ್ಟಣದ ನೂತನ ಶ್ರೀಆಂಜನೇಯ (ರಾಮದೇವರ) ದೇವಸ್ಥಾನಕ್ಕೆ ಮಾಜಿ ಸಿಎಂ ಬೊಮ್ಮಾಯಿ ಬೇಟಿ, ಆಶೀರ್ವಾದ. ಶಿಗ್ಗಾವಿ : ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಆಂಜನೇಯ (ರಾಮದೇವರ) ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್ ಅರುಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..3
- ಹಾನಗಲ್ಲ.. ಸಚಿವ ಸತೀಶ ಜಾರ್ಕಿಹುಳಿ ಹಾನಗಲ್ಲಿನ ಕರಗುದರಿ ಗ್ರಾಮದ ಮದುವೆ ಸಮಾರಂಭವೊಂದರಲ್ಲಿ ಭಾಗಿ ಲೋಕೋಪಯೋಗಿ ಸಚಿವ ಸತೀಶ ಜಾರ್ಕಿಹುಳಿ ಪತಾಲೂಕಿನ ಕರಗುದರಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂಧರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಮಾಜಿ ಶಾಸಕರು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು1
- ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್‌ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.1
- ಕುಂದಗೋಳದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಪರಬಾರೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾಶಿ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳು ಶಿತಿಕಂಠೇಶ್ವರ ಸ್ವಾಮೀಜಿಗೆ ಕಠಿಣ ಸೂಚನೆ ನೀಡಿದ್ದಾರೆ. ಮಠದ ಆಸ್ತಿಯನ್ನು ಪರಬಾರೆ ಮಾಡದಂತೆ ಎಚ್ಚರಿಕೆ ನೀಡಿ, ನಿಯಮ ಉಲ್ಲಂಘಿಸಿದರೆ ಪದಚ್ಯುತಿಗೊಳಿಸುವುದಾಗಿ ಎಚ್ಚರಿಸಲಾಗಿದೆ. ಅಲ್ಲದೆ, ಶ್ರೀಗಳಿಗೆ 48 ದಿನಗಳ ಪ್ರಾಯಶ್ಚಿತ್ತ ಮತ್ತು ಮಠದ ಆಡಳಿತಕ್ಕೆ ಭಕ್ತರ ಸೇವಾ ಸಮಿತಿ ರಚಿಸಲು ಆದೇಶಿಸಲಾಗಿದೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಎಲಿವಾಳ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿದರು. ಈ ಭೇಟಿ ರೈತರ ಸಮಸ್ಯೆಗಳನ್ನು ಆಲಿಸಲು ಹಾಗೂ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಹತ್ವದ್ದಾಗಿದೆ.1
- ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ ಕೋಟಿ ಮಟ್ಟದ ಹಣಕಾಸು ಅವ್ಯವಹಾರ ಶಂಕೆ! ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೊಂದರಲ್ಲಿ ನಡೆದ ಆಂತರಿಕ ಆಡಿಟ್ ವೇಳೆ ಸುಮಾರು ₹4 ಕೋಟಿ ರೂಪಾಯಿ ಮಟ್ಟದ ಹಣಕಾಸು ವ್ಯತ್ಯಾಸ ಪತ್ತೆಯಾದ ಹಿನ್ನೆಲೆಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ. ಅಕೌಂಟ್ಸ್ ವಿಭಾಗದ ಒಬ್ಬ ಮಹಿಳೆ ಸೇರಿ ನಾಲ್ವರು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ಲೆಕ್ಕಪತ್ರ ತಿದ್ದುಪಡಿ ಹಾಗೂ ಡಿಜಿಟಲ್ ಡೇಟಾ ಅಳಿಸುವ ಮೂಲಕ ಅವ್ಯವಹಾರ ಮುಚ್ಚಿಹಾಕಲು ಯತ್ನಿಸಿದ್ದರೆಂಬ ಶಂಕೆ ಮೂಡಿದೆ. ಈ ಬೆಳವಣಿಗೆಯಿಂದ ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ತುರ್ತು ಚಟುವಟಿಕೆಗಳು ಆರಂಭವಾಗಿದ್ದು, ಸೈಬರ್ ತಜ್ಞರ ಸಹಾಯದಿಂದ ಡಿಲೀಟ್ ಮಾಡಲಾದ ದಾಖಲೆಗಳನ್ನು ಮರುಪಡೆಯುವ ಕಾರ್ಯವೂ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಪೊಲೀಸ್ ದೂರು ದಾಖಲಾಗುವ ಸಾಧ್ಯತೆ ಇದ್ದು, ಅಧಿಕೃತ ತನಿಖೆಯ ನಂತರ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.ಈ ಘಟನೆ ಆರೋಗ್ಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, “ಪ್ರತಿಷ್ಠಿತ ಆಸ್ಪತ್ರೆಯೊಳಗೆ ಇಷ್ಟೊಂದು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.1
- ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕಳೆದ 20-25 ದಿನಗಳಿಂದ ನೀರು ಪೂರೈಕೆಯಾಗದ ಕಾರಣ 6ನೇ ವಾರ್ಡ್‌ನ ಮಹಿಳೆಯರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು. ಬೇಸಿಗೆಯಲ್ಲಿ ಕುಡಿಯುವ ಹಾಗೂ ಗೃಹ ಬಳಕೆಯ ನೀರಿಲ್ಲದೆ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಮಹಿಳೆಯರು ಕೊನೆಗೆ ಸ್ವತಃ ಬೀದಿಗಿಳಿದು ಆಕ್ರೋಶ ಹೊರಹಾಕಿದರು.3