Shuru
Apke Nagar Ki App…
ಗ್ರಾಮಸ್ಥರಿಂದ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಣೆ ಕಲಘಟಗಿ: ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಟ್ಯಾಕ್ಟರ್ ವಾಹನದಲ್ಲಿ ಮಲ್ಲಮ್ಮನ ಭಾವಚಿತ್ರಇರಿಸಿ ಡಿಜೆ ಸೌಂಡ್ ನೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸುತ್ತಲೂ ತಳಿರು ತೋರಣಗಳು ನೋಡುಗರ ಗಮನ ಸೆಳೆದವು.ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
Kallappa m mirji
ಗ್ರಾಮಸ್ಥರಿಂದ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಣೆ ಕಲಘಟಗಿ: ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಟ್ಯಾಕ್ಟರ್ ವಾಹನದಲ್ಲಿ ಮಲ್ಲಮ್ಮನ ಭಾವಚಿತ್ರಇರಿಸಿ ಡಿಜೆ ಸೌಂಡ್ ನೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸುತ್ತಲೂ ತಳಿರು ತೋರಣಗಳು ನೋಡುಗರ ಗಮನ ಸೆಳೆದವು.ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
More news from ಕರ್ನಾಟಕ and nearby areas
- ಗ್ರಾಮಸ್ಥರಿಂದ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಣೆ ಕಲಘಟಗಿ: ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಟ್ಯಾಕ್ಟರ್ ವಾಹನದಲ್ಲಿ ಮಲ್ಲಮ್ಮನ ಭಾವಚಿತ್ರಇರಿಸಿ ಡಿಜೆ ಸೌಂಡ್ ನೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸುತ್ತಲೂ ತಳಿರು ತೋರಣಗಳು ನೋಡುಗರ ಗಮನ ಸೆಳೆದವು.ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.1
- ಮಠದ ಆಸ್ತಿ ಪರಬಾರೆ ಮಾಡುವಂತಿಲ್ಲ: ಶಿತಿಕಂಠೇಶ್ವರ ಶ್ರೀಗಳಿಗೆ ಕಾಶಿ ಹಾಗೂ ರಂಭಾಪುರಿ ಶ್ರೀಗಳ ಖಡಕ್ ಸೂಚನೆ ಕುಂದಗೋಳ: ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಯಾವುದೇ ಕಾರಣಕ್ಕೂ ಪರಬಾರೆ ಮಾಡಬಾರದು ಮತ್ತು ಸನಾತನ ಮಠದ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಸ್ವಾಮೀಜಿ ಅವರು ಮಠದ ಶಿತಿಕಂಠೇಶ್ವರ ಸ್ವಾಮೀಜಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶುಕ್ರವಾರ ಪಂಚಗ್ರಹ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು-ಶಿಷ್ಯರ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಉಭಯ ಶ್ರೀಗಳು ಮಾತನಾಡಿದರು. ಕಾಶಿ ಪೀಠದ ಜಗದ್ಗುರುಗಳು ಮಾತನಾಡಿ, ಪಂಚಗ್ರಹ ಹಿರೇಮಠವು ಕಾಶಿ ಪೀಠದ ಶಾಖಾಮಠವಾಗಿದ್ದು, ಇಲ್ಲಿನ ಶ್ರೀಗಳ ವಿರುದ್ಧ ಆಸ್ತಿ ಮಾರಾಟ ಹಾಗೂ ಪರಬಾರೆ ಮಾಡುತ್ತಿರುವ ಕುರಿತು ಭಕ್ತರಿಂದ ಲಿಖಿತ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶ್ರೀಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಮನ್ನಿಸುವಂತೆ ಕೋರಿದ್ದಾರೆ. ಇನ್ನು ಮುಂದೆ ಮಠದ ಆಸ್ತಿಗೆ ಚ್ಯುತಿ ತರದಂತೆ ಮತ್ತು ಧರ್ಮದ ನಿಯಮಗಳನ್ನು ಮೀರದಂತೆ ಶ್ರೀಗಳಿಂದ ಬಾಂಡ್ ಪೇಪರ್ ಮೇಲೆ ಶರತ್ತುಬದ್ಧ ಪತ್ರವನ್ನು ಬರೆಸಿಕೊಳ್ಳಲಾಗಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಪೀಠದಿಂದ ಪದಚುತಿಗೊಳಿಸಲಾಗುವುದು ಎಂದು ಎಚ್ಚರಿಸಿದ ಅವರು, ಭಕ್ತರು ಆತಂಕಪಡದೆ ಮಠದೊಂದಿಗೆ ಮೊದಲಿನ ಬಾಂಧವ್ಯ ಮುಂದುವರಿಸಬೇಕು ಎಂದು ಕರೆ ನೀಡಿದರು. ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮಾತನಾಡಿ, ಆದಿಲ್ ಶಾ ಕಾಲದಲ್ಲಿಯೇ 96 ಎಕರೆ ಜಮೀನು ಇನಾಂ ಪಡೆದ ಈ ಮಠಕ್ಕೆ ಸುದೀರ್ಘ ಪರಂಪರೆಯಿದೆ. ಪ್ರಸ್ತುತ ಶ್ರೀಗಳು ಪೀಠಾಧಿಪತಿಗಳಾಗಿ 29 ವರ್ಷಗಳಾಗಿದ್ದು, ಅವರ ರಜತ ಮಹೋತ್ಸವ ಆಚರಿಸುವ ಬದಲಾಗಿ ಇಂತಹ ದೂರುಗಳ ವಿಚಾರಣೆ ನಡೆಸುತ್ತಿರುವುದು ವಿಷಾದನೀಯ. ಶ್ರೀಗಳಿಗೆ ಪ್ರಾಯಶ್ಚಿತ್ತವಾಗಿ 48 ದಿನಗಳ ಕಾಲ ತೀರ್ಥ ಕ್ಷೇತ್ರದಲ್ಲಿ ಮಂಡಲ ಪೂಜೆ ನೆರವೇರಿಸಲು ಸೂಚಿಸಲಾಗಿದೆ. ಮಠದ ಅಭಿವೃದ್ಧಿಗಾಗಿ 15 ಸದಸ್ಯರ ಭಕ್ತರ ಸೇವಾ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು. ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಿತಿಕಂಠೇಶ್ವರ ಸ್ವಾಮೀಜಿ, ಉಭಯ ಜಗದ್ಗುರುಗಳ ಆದೇಶದಂತೆ ಮಠದ ಆಸ್ತಿಯನ್ನು ಪರಬಾರೆ ಮಾಡದೆ ಪರಂಪರೆಯಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮಠದ ಅಭಿವೃದ್ಧಿಗೆ ಈಗಾಗಲೇ 10 ಲಕ್ಷ ರೂ. ಮಂಜೂರಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೂಡ 10 ಲಕ್ಷ ರೂ. ಅನುದಾನ ನೀಡಲಿದ್ದಾರೆ ಎಂದರು. ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ ಹಾಗೂ ಎಂ.ಎಸ್. ಅಕ್ಕಿ ಮಾತನಾಡಿ, ಭಕ್ತರ ಹೋರಾಟ ಕೇವಲ ಆಸ್ತಿ ರಕ್ಷಣೆಗಾಗಿಯೇ ಹೊರತು ವೈಯಕ್ತಿಕವಲ್ಲ, ಶ್ರೀಗಳು ಸರಿಯಾದ ಹಾದಿಯಲ್ಲಿ ನಡೆದರೆ ಭಕ್ತ ಸಮೂಹ ಸದಾ ಬೆಂಬಲಕ್ಕೆ ಇರುತ್ತದೆ ಎಂದು ಆಶ್ವಾಸನೆ ನೀಡಿದರು. ಸಭೆಯಲ್ಲಿ ಮುಕ್ತಿಮಂದಿರದ ವಿಮಲ ರೇಣುಕ ಸ್ವಾಮೀಜಿ, ಪ್ರಮುಖರಾದ ಸೋಮರಾವ್ ದೇಸಾಯಿ, ಶಿವಾನಂದ ಬೆಂತೂರ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- *ಬಂಕಾಪುರ ಪಟ್ಟಣದಲ್ಲಿ ಜೈ ಭೀಮ್ (ಪರಿಶಿಷ್ಟ ಜಾತಿ) ಸಮಗ್ರ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಕುಡಿಯುವ ನೀರು ಸರಬರಾಜು* ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಜೈ ಭೀಮ್ ಪರಿಶಿಷ್ಟ ಜಾತಿ ಸಮಗ್ರ ಅಭಿವೃದ್ಧಿ ಸಂಸ್ಥೆ ಬಂಕಾಪುರ ವತಿಯಿಂದ ಸಮಾಜ ಸೇವಕ ಪ್ರಮೋದ್ ಚಲವಾದಿ ನೇತೃತ್ವದಲ್ಲಿ ಉಚಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರಮೋದ ಚಲವಾದಿ ಬಿಸಿಲಿನ ತಾಪಮಾನ ಹೆಚ್ಚಾಗಿರುವದರಿಂದ ಮನಗಂಡು ನಾನೇ ಸ್ವತಹ ನಮ್ಮ ಸಂಸ್ಥೆಯ ಅವತಿಯಿಂದ ಮನೆ ಮನೆಗೆ ಉಚಿತ ಕುಡಿಯುವ ನೀರು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ಬಂಕಾಪುರ ಪಟ್ಟಣದ ಜನತೆಯು ಸಹಿತ ಇವಂದು ಚಾಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೈದ್ಯ ಡಾಕ್ಟರ್ ಆರ್ ಎಸ್ ಅರಳಲೇಮಠ, ಎ ಕೆ ಅದವಾನಿಮಠ, ಮುಖಂಡರಾದ ಬಸವರಾಜ ನಾರಾಯಣಪುರ ಮಂಜುನಾಥ ಕೂಲಿ ಸೇರಿದಂತೆ ಬಂಕಾಪುರ ಪಟ್ಟಣದ ಹಿರಿಯರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.3
- ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.1
- ರಾಜಕೀಯ ಶಕ್ತಿಯು ಸಕಲ ಸಿದ್ಧಿಯ ಕೀಲಿ ಕೈ ಇದ್ದಂತೆ, ಅದರ ಮೂಲಕ ಪ್ರತಿಯೊಂದು ಬಾಗಿಲನ್ನೂ ತೆರೆಯಲು ಸಾಧ್ಯ. Political power is the master key using which you can open all the doors of progress and self respect. #BabasahebAmbedkar #Jaibheem #Equality #Justice #Rationality ರಾಜಕೀಯ ಶಕ್ತಿಯು ಸಕಲ ಸಿದ್ಧಿಯ ಕೀಲಿ ಕೈ ಇದ್ದಂತೆ, ಅದರ ಮೂಲಕ ಪ್ರತಿಯೊಂದು ಬಾಗಿಲನ್ನೂ ತೆರೆಯಲು ಸಾಧ್ಯ. Political power is the master key using which you can open all the doors of progress and self respect. #BabasahebAmbedkar #Jaibheem #Equality #Justice #Rationality1
- Post by H M ಹರಕುಣಿ1