ಗುಂಡ್ಲುಪೇಟೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2.5 ಕೋಟಿ ರೂ.ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಚಾಲನೆ ಗುಂಡ್ಲುಪೇಟೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2.5 ಕೋಟಿ ರೂ.ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಚಾಲನೆ ಚಾಮರಾಜನಗರ : ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್ ಸೇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್ ಸೇರುವ 9.10 ಕಿ.ಮೀ.ನಲ್ಲಿ ರಸ್ತೆ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ 5054–80–190–0-01-132–ವಿ ಯಡಿಯಲ್ಲಿ 2.5 ಕೋಟಿ ರೂ.ಮಂಜೂರಾಗಿದ್ದು, ರಸ್ತೆ ಮತ್ತು ಸೇತುವೆ ನಿರ್ಮಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ಪಿಡಬ್ಲ್ಯೂಡಿ ಇಲಾಖೆಯ ಎಇಇ ಶಾಂತಮ್ಮ, ಗುತ್ತಿಗೆದಾರ ಮಂಜುನಾಥ್, ಹರೀಶ್, ಕೆರೆಹಳ್ಳಿರೇವಣ್ಣ, ಗುರುಸ್ವಾಮಿ ಹಿರೇಬೇಗೂರು, ನಾಗೇಶ್ ಚಿಕ್ಕಬೇಗೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಮಧು ಕುಲಗಾಣ, ಡಿ.ಕೆ.ಮಧು, ಸಿದ್ದಶೆಟ್ಟಿ, ಚೆಲುವರಾಜು, ಮಾದಪ್ಪಗೌಡಿಕೆ, ಕೆ.ಸಿ.ನಟರಾಜು ಕುಲಗಾಣ, ಆರ್.ಕೆಂಪರಾಜು ಇತರರು ಹಾಜರಿದ್ದರು.
ಗುಂಡ್ಲುಪೇಟೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2.5 ಕೋಟಿ ರೂ.ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಚಾಲನೆ ಗುಂಡ್ಲುಪೇಟೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 2.5 ಕೋಟಿ ರೂ.ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಚಾಲನೆ ಚಾಮರಾಜನಗರ : ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್ ಸೇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಅವರು
ಮಾತನಾಡಿದರು. ಬದನವಾಳುವಿನಿಂದ ಚಾಮರಾಜನಗರ ತಾಲೂಕಿನ ವೀರನಪುರ ಕ್ರಾಸ್ ಸೇರುವ 9.10 ಕಿ.ಮೀ.ನಲ್ಲಿ ರಸ್ತೆ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ 5054–80–190–0-01-132–ವಿ ಯಡಿಯಲ್ಲಿ 2.5 ಕೋಟಿ ರೂ.ಮಂಜೂರಾಗಿದ್ದು, ರಸ್ತೆ ಮತ್ತು ಸೇತುವೆ ನಿರ್ಮಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ಪಿಡಬ್ಲ್ಯೂಡಿ ಇಲಾಖೆಯ ಎಇಇ ಶಾಂತಮ್ಮ, ಗುತ್ತಿಗೆದಾರ ಮಂಜುನಾಥ್, ಹರೀಶ್, ಕೆರೆಹಳ್ಳಿರೇವಣ್ಣ, ಗುರುಸ್ವಾಮಿ ಹಿರೇಬೇಗೂರು, ನಾಗೇಶ್ ಚಿಕ್ಕಬೇಗೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಮಧು ಕುಲಗಾಣ, ಡಿ.ಕೆ.ಮಧು, ಸಿದ್ದಶೆಟ್ಟಿ, ಚೆಲುವರಾಜು, ಮಾದಪ್ಪಗೌಡಿಕೆ, ಕೆ.ಸಿ.ನಟರಾಜು ಕುಲಗಾಣ, ಆರ್.ಕೆಂಪರಾಜು ಇತರರು ಹಾಜರಿದ್ದರು.
- ಚಾಮರಾಜನಗರದಲ್ಲಿ ಇಂದು ಯುವ ಕರ್ನಾಟಕ ವೇದಿಕೆಯ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು4
- ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ಚಾಮರಾಜನಗರ, ಆ.1: ಕಾವೇರಿ ನೀರು ಬಿಡುಗಡೆ ಆದೇಶವನ್ನು ಖಂಡಿಸಿ ಯುವ ಕರ್ನಾಟಕ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಳಿಕ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದವರೆಗೆ ತೆರಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಖಾಲಿ ಬಿಂದಿಗೆಗಳನ್ನು ರಸ್ತೆಯ ಮಧ್ಯೆ ಇಟ್ಟು ನೀರಿನ ಅಭಾವದ ಸಂಕಷ್ಟವನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದರು. ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿದರು.1
- ಕಬಿನಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ನದಿ ದಂಡೆಯ ಜನರಿಗೆ ಎಚ್ಚರಿಕೆ ಮೈಸೂರು, ಆ.1: ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕಬಿನಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ದಂಡೆಯ ನಿವಾಸಿಗಳು ಎಚ್ಚರಿಕೆಯಿಂದ ಇರಲು ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ತಗ್ಗು ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ನದಿಗೆ ಇಳಿಯುವುದು, ಮೀನುಗಾರಿಕೆ ಹಾಗೂ ಅನಗತ್ಯವಾಗಿ ನದಿ ದಾಟುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದು, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.1
- All About,Anyone when if question them for Transparency they will Anytime Speak Contridectary Statements and blaming the Residents *ಭಾರತ ನಲ್ಲಿ ವೈರಲ್*1
- ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ1
- ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ ಕಲೆಗಳ ತವರೂರು : ಶ್ರೀನಿಧಿ ಕುದರ್ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗೀತಾಗಾಯನ ಕಾರ್ಯಕ್ರಮ ಚಾಮರಾಜನಗರ : ಅತಿ ಹೆಚ್ಚು ಕಲಾವಿದರನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯು ಶ್ರೇಷ್ಠ ಜಾನಪದ ಕಲೆಗಳ ತವರೂರಾಗಿದೆ' ಎಂದು ಉದ್ಯಮಿ, ಯೂತ್ ಐಕಾನ್ ಶ್ರೀನಿಧಿ ಕುದರ್ ಹೇಳಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎನ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಫ್ರೆಂಡ್ಸ್ ಮ್ಯೂಸಿಕ್ ಮೆಲೋಡಿನ್ ತಂಡದಿಂದ ಆಷಾಢಮಾಸದ ಶುಕ್ರವಾರದ ಪ್ರಯುಕ್ತ ನಡೆದ ಭಕ್ತಿಗೀತೆ ಹಾಗೂ ಕನ್ನಡ ಚಲನಚಿತ್ರ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಮರಾಜನಗರದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ರಥೋತ್ಸವ ರಾಜ್ಯದಲ್ಲೇ. ನಡೆಯುವ ಏಕೈಕ ರಥೋತ್ಸವ ಎಂಬ ವಿಶೇಷಕೆ ಪಡೆದಿದೆ.ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200 ವರ್ಷಗಳಾಗಿದೆ. ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ನೆಪಿಗಾಗಿ ನಿರ್ಮಿಸಿದರು. ಜನರಿಗಾಗಿ ಇದ್ದಂತ ರಾಜಮನೆತನ ಎಂದರೆ ಅದು ಮೈಸೂರು ರಾಜಮನೆತನವಾಗಿದೆ. ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ಮಾಡಿದ ಕೀರ್ತಿ ಮೈಸೂರು ರಾಜಮನೆತನಕ್ಕೆ ಸಲ್ಲುತ್ತದೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್ ಮಾತನಾಡಿ, ಅಷಾಢ ಮಾಸದ ಶುಕ್ರವಾರದ ಪ್ರಯುಕ್ತ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯುತ್ತಿರುವುದು ಸಂತಸಕರ ಸಂಗತಿ. ಇಂತಹ ಕಾರ್ಯಕ್ರಮಗಳು ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ಸರ್ಕಾರವು ಅವಕಾಶ ಕಲ್ಪಿಸಿಕೊಡಬೇಕು ಎಂದರು. ಸನ್ಮಾನ: ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಿ.ಅಂಕಶೆಟ್ಟಿ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಆರ್ಚಕರು, ರಥ ಕಟ್ಟುವರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಮುಖಂಡ ಕೃಷ್ಣನಾಯಕ, ಕೂಸಣ್ಣ, ಪಣ್ಯದಹುಂಡಿ ರಾಜು, ಸಂಘದ ಅಧ್ಯಕ್ಷ ಮಂಗಲ ಹೊಸೂರು ಶಿವಣ್ಣ, ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷ ಬಂಗಾರು, ರಾಗ ಲಹರಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ದೊರೆಸ್ವಾಮಿ ಆಲೂರು, ಕಾರ್ಯದರ್ಶಿ ನಾಗಮಹದೇವ, ಗೌರವ ಅಧ್ಯಕ್ಷನಾಗೇಂದ್ರ ಯಳಂದೂರು, ಮಹೇಶ್, ಮನು ಇತರರು ಹಾಜರಿದ್ದರು.4
- ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ಚಾಮರಾಜನಗರ: ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಯುವ ಕರ್ನಾಟಕ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸುವ ಮೂಲಕ ದ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ,ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕ್ರಮ ಖಂಡನೀಯ ಎಂದರು. ರಾಜ್ಯ ಸರ್ಕಾರವು ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ರಾಜ್ಯದ ನೀರಿನ ಸಂಪನ್ಮೂಲಗಳ ಬಳಕೆಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು. ಕಾವೇರಿ ನೀರು ಬಿಡುಗಡೆ ಆದೇಶವನ್ನು ಮರುಪರಿಶೀಲಿಸಿ ರಾಜ್ಯದ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಯಾಜ್ ಕನ್ನಡಿಗ ಚಾಮರಾಜನಗರ ತಾಲೂಕು ಅಧ್ಯಕ್ಷ ಆರ್. ರಾಘವೇಂದ್ರ, ಯಳಂದೂರು ತಾಲೂಕು ಅಧ್ಯಕ್ಷ, ಕುಮಾರ ಬೂದಂಬಳ್ಳಿಮೋಳೆ , ಮಹಿಳಾ ಘಟಕ ಅಧ್ಯಕ್ಷೆ ಶೋಭ, ಸಂತೆಮರಹಳ್ಳಿ ಹೋಬಳಿ ಅಧ್ಯಕ್ಷ ಇರ್ಫಾನ್, ಜಿಲ್ಲಾ ಗೌರವಾಧ್ಯಕ್ಷ ಇದ್ರಿಸ್ಪಾಷ, ಜಿಲ್ಲಾ ಉಪಾಧ್ಯಕ್ಷ ತೌಸಿಫ್, ಮುಬಾರಕ್ ತಾಲೂಕು ಗೌರವಾಧ್ಯಕ್ಷ ಸುಂದರ ರಾಮಸಮುದ್ರ, ಕೊಳ್ಳೇಗಾಲ ಮುಖಂಡರು ಸುಂದರ ಶಾಸ್ತ್ರಿ ತಾಲೂಕು ಉಪಾಧ್ಯಕ್ಷ ಯೋಗೇಶ್ , ಅಪ್ರೋಜ್ ಪಾಷ ಸಂತೆಮರಳ್ಳಿ ಹೋಬಳಿ ಉಪಾಧ್ಯಕ್ಷ ಮನೋಜ್ ತಾಲೂಕು ಕಾರ್ಯದರ್ಶಿ ಮಹೇಶ್. ಪ್ರಮೋದ್ ಉಮೇಶ್ ಎಚ್ .ಎಮ್. ಹೊಸಪುರ ಮಲ್ಲೇಶ್ ಗಟ್ಟವಾಡಿ ಗುರು, ಕೆಬ್ಬೆಪುರ ಆಕಾಶ್, ಲೋಕೇಶ್ ಬುದಂಬಳ್ಳಿ ಮೋಳೆ ನಟರಾಜ್ , ಸ್ವಾಮಿ ಸ್ವೀಟ್, ಮಧು ಮಂಗಲ, ಯಸ್ವಂತ್, ಪ್ರಸಾದ್, ಬಸವಣ್ಣ ಇತರರು ಭಾಗವಹಿಸಿದ್ದರು.4