ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ: ಡಾ ರಾಜೇಶ್ ಎಲ್ ಎನ್ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಿರ್ದೇಶಕರಾದ ಡಾ. ರಾಜೇಶ್ ಎನ್.ಎಲ್, ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿ ಐ ಎಸ್ ಆಧಾರಿತ ಮಾಹಿತಿಯನ್ನು ತಲುಪಿಸುವ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರ ವು ಸ್ಥಾಪನೆಗೊಂಡ ಬಗ್ಗೆ ಹಾಗೂ ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ವಿವರಿಸಿದರು. ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016 ರಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಕೆಎಸ್‌ಆರ್‌ಎಸ್‌ಎಸಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಇದರಲ್ಲಿ41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆಗಳು ಲಭ್ಯವಿದ್ದು, ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ದಿಶಾಂಕ್ ಆ್ಯಪ್ ನಲ್ಲಿ ಯಾವ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಎರಡು ಮೂರು ದಿನಗಳ ಮುಂಚೆ ಹವಾಮಾನದ ವರದಿಯನ್ನು ನಿರ್ದಿಷ್ಟ ಆಪ್ ಮೂಲಕ ಪಡೆಯಬಹುದಾಗಿದೆ. ಮೈಸೂರು ಮೂಡಾ ಗೆ 2009 ರಲ್ಲಿ ಮೂಡಾ ವ್ಯಾಪ್ತಿಯ ಆಸ್ತಿಗಳ ಬಗ್ಗೆ ಜಿಯೋ ಮ್ಯಾಪ್ ಮಾಡಿಕೊಡಲಾಗಿತ್ತು. 2016 ರಲ್ಲಿ ಕೆ ಜಿ ಐ ಎಸ್ 1.0 ಜಾರಿಗೆ ತರಲಾಗಿತ್ತು. 2024 ರಲ್ಲಿ ಕೆ ಜಿ ಐ ಎಸ್ 2.0 ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಗೋಲ್ಡ್ ಅವಾರ್ಡ್ ದೊರೆತಿದೆ ಎಂದು ಮಾಹಿತಿ ನೀಡಿದರು. ಕೆ-ಜಿಐಎಸ್ ಯೋಜನೆಗೆ 2024 ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿಯು ಕೇಂದ್ರಕ್ಕೆ ಲಭಿಸಿರುವುದನ್ನು ಉಲ್ಲೇಖಿಸಿದರು.. ಮುಂದುವರೆದು ಕೆ-ಜಿಐಎಸ್ 2.0 ಜಿಲ್ಲಾ ಮಟ್ಟದ ಕಾರ್ಯಾಗಾರದ ಮುಖ್ಯ ಉದ್ದೇಶಗಳ ಕುರಿತು ಮಾತನಾಡುತ್ತಾ, ಪ್ರತಿ ಜಿಲ್ಲೆ,ತಾಲ್ಲೂಕು, ಗ್ರಾಮ ಪಂಚಾಯಿತಿ ತನ್ನದೇ ಆದ ವೈಶಿಷ್ಟ್ಯಗಳ ಜೊತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಸಿ ಸಿ ಎಫ್ ರವಿಶಂಕರ್, ಪೊಲೀಸ್ ಉಪ ಅಧೀಕ್ಷಕರಾದ ಮಲ್ಲಿಕ್, ಉಪ ಪೊಲೀಸ್ ಆಯುಕ್ತರಾದ ಕೆ ಎಸ್ ಸುಂದರ್ ರಾಜ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ: ಡಾ ರಾಜೇಶ್ ಎಲ್ ಎನ್ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರ ಸಹಕಾರಿ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಿರ್ದೇಶಕರಾದ ಡಾ. ರಾಜೇಶ್ ಎನ್.ಎಲ್, ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಆಡಳಿತಕ್ಕಾಗಿ ಜಿ ಐ ಎಸ್ ಆಧಾರಿತ ಮಾಹಿತಿಯನ್ನು ತಲುಪಿಸುವ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರ ವು ಸ್ಥಾಪನೆಗೊಂಡ ಬಗ್ಗೆ ಹಾಗೂ ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ವಿವರಿಸಿದರು. ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016 ರಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಕೆಎಸ್‌ಆರ್‌ಎಸ್‌ಎಸಿ ಕೇಂದ್ರವು ಅಭಿವೃದ್ಧಿಪಡಿಸಿದೆ. ಇದರಲ್ಲಿ41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆಗಳು ಲಭ್ಯವಿದ್ದು, ನಾಗರಿಕರು ಮತ್ತು ಇಲಾಖೆಗಳು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ದಿಶಾಂಕ್ ಆ್ಯಪ್ ನಲ್ಲಿ ಯಾವ
ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಎರಡು ಮೂರು ದಿನಗಳ ಮುಂಚೆ ಹವಾಮಾನದ ವರದಿಯನ್ನು ನಿರ್ದಿಷ್ಟ ಆಪ್ ಮೂಲಕ ಪಡೆಯಬಹುದಾಗಿದೆ. ಮೈಸೂರು ಮೂಡಾ ಗೆ 2009 ರಲ್ಲಿ ಮೂಡಾ ವ್ಯಾಪ್ತಿಯ ಆಸ್ತಿಗಳ ಬಗ್ಗೆ ಜಿಯೋ ಮ್ಯಾಪ್ ಮಾಡಿಕೊಡಲಾಗಿತ್ತು. 2016 ರಲ್ಲಿ ಕೆ ಜಿ ಐ ಎಸ್ 1.0 ಜಾರಿಗೆ ತರಲಾಗಿತ್ತು. 2024 ರಲ್ಲಿ ಕೆ ಜಿ ಐ ಎಸ್ 2.0 ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಗೋಲ್ಡ್ ಅವಾರ್ಡ್ ದೊರೆತಿದೆ ಎಂದು ಮಾಹಿತಿ ನೀಡಿದರು. ಕೆ-ಜಿಐಎಸ್ ಯೋಜನೆಗೆ 2024 ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿಯು ಕೇಂದ್ರಕ್ಕೆ ಲಭಿಸಿರುವುದನ್ನು ಉಲ್ಲೇಖಿಸಿದರು.. ಮುಂದುವರೆದು ಕೆ-ಜಿಐಎಸ್ 2.0 ಜಿಲ್ಲಾ ಮಟ್ಟದ ಕಾರ್ಯಾಗಾರದ ಮುಖ್ಯ ಉದ್ದೇಶಗಳ ಕುರಿತು ಮಾತನಾಡುತ್ತಾ, ಪ್ರತಿ ಜಿಲ್ಲೆ,ತಾಲ್ಲೂಕು, ಗ್ರಾಮ ಪಂಚಾಯಿತಿ ತನ್ನದೇ ಆದ ವೈಶಿಷ್ಟ್ಯಗಳ ಜೊತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು, ಈ ಜಿಲ್ಲಾ ಮಟ್ಟದ ಕೆ-ಜಿಐಎಸ್ 2.0 ಕಾರ್ಯಾಗಾರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಸಿ ಸಿ ಎಫ್ ರವಿಶಂಕರ್, ಪೊಲೀಸ್ ಉಪ ಅಧೀಕ್ಷಕರಾದ ಮಲ್ಲಿಕ್, ಉಪ ಪೊಲೀಸ್ ಆಯುಕ್ತರಾದ ಕೆ ಎಸ್ ಸುಂದರ್ ರಾಜ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- ರಾಜ್ಯದಲ್ಲಿ ತಾಪಮಾನ ಏರಿಕೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಸನ್ ಸ್ಟ್ರೋಕ್ ವಾರ್ಡ್ ನಿರ್ಮಾಣ ಮಾಡಲಾಗಿದೆ. ಕೆ ಆರ್ ಆಸ್ಪತ್ರೆಯ ಕಲ್ಲುವಾರ್ಡ್ ನಲ್ಲಿ 30 ಬೆಡ್ ಗಳ ವಿಸೇಷ ವಾರ್ಡ್ ಮೀಸಲಿಟ್ಟಿದ್ದು ಸನ್ ಸ್ಟ್ರೋಕ್ ನಿಂದ ಬಂದವರಿಗೆ ತುರ್ತು ಚಿಕಿತ್ಸೆ ನೀಡಲು ವೈದ್ಯರೊಂದಿಗೆ ಇಬ್ಬರು ಸಿಬ್ಬಂದಿಗಳನ್ನು ನಿಯೊಜಿಸಲಾಗಿದೆ ಎಂದು ಕೆ ಆರ್ ಆಸ್ಪತ್ರೆಯ ಅಧೀಕ್ಷಕಿ ಶೋಭಾ ತಿಳಿಸಿದರು ಅಲ್ಲದೆ ಸಾಮಾನ್ಯವಾಗಿ ಬೇಸಿಗೆಯ ತಾಪಮಾನದಲ್ಲಿ ಸುಮಾರು 6-7 ಲೀಟರ್ ನೀರು ಕುಡಿಯಬೇಕು ಸುಸ್ತು ಆಗುವಾಗ ಹೆಚ್ಚು ನೀರು ಕುಡಿಯಬೇಕು ಮತ್ತು ಆಹಾರದಲ್ಲಿ ಹಣ್ಣುಗಳು, ಬೇಯಿಸಿದ ತರಕಾರಿ, ನೀರಿನಾಂಶವಿರುವ ಪದಾರ್ಥಗಳನ್ನು ಸೇವಿಸಿಬೇಕು ಆಹಾರ ಪದಾರ್ಥಗಳಲ್ಲಿ ಉಪ್ಪು, ಖಾರ ಹಾಗೂ ಸಕ್ಕರೆ ಅಂಶಗಳು ಕಡಿಮೆ ಇದ್ದರೆ ಸೂಕ್ತ ಎಂದ ಕೆ ಆರ್ ಆಸ್ಪತ್ರೆ ಅಧೀಕ್ಷಕಿ ಶೋಭಾ ಸಲಹೆ ನೀಡಿದ್ದಾರೆ.1
- ಹನೂರು :ಬಿರು ಬಿಸಿಲ ನಡೆವೆ ವಾಹನ ಸವಾರನೊಬ್ಬ ಚಾಮರಾಜನಗರದಲ್ಲಿ ಹೆಲ್ಮೆಟ್ ಬದಲು ತಲೆಗೆ ಸೊಪ್ಪಿನ ಮೊರೆ ಹೋದ ಬೈಕ್ ಸವಾರ. ವಿಡಿಯೋ ವೈರಲ್ ಬೇಸಿಗೆಯಲ್ಲಿ ತಾಪಮಾನವು ಗಣನೀಯವಾಗಿ ಏರುತ್ತದೆ. ಕೆರೆ, ಕುಂಟೆ ಮತ್ತು ನದಿಗಳು ಬತ್ತಿ ಹೋಗುತ್ತವೆ. ಕುಡಿಯುವ ನೀರಿಗೆ ಅಭಾವ ಉಂಟಾಗುತ್ತದೆ. ಪ್ರಾಣಿ-ಪಕ್ಷಿಗಳು ಬಾಯಾರಿಕೆಯಿಂದ ನೀರಿಗಾಗಿ ಅಲೆಯುತ್ತವೆ. ಮಾನವರು ಬೆವರಿನಿಂದ ದಣಿದು ಹೋಗುತ್ತಾರೆ. ಬಿಸಿಲ ಗಾಳಿಯು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಮತ್ತು ಜೀವನಶೈಲಿ: ಈ ಕಾಲದಲ್ಲಿ ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ಹೆಚ್ಚು ನೀರು ಕುಡಿಯುವುದು ಅವಶ್ಯಕ.1
- ಹನೂರು: ಭಗೀರಥ ಮಹರ್ಷಿಗಳ ಅಪ್ರತಿಮ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಧರೆಗೆ ಗಂಗೆಯನ್ನು ಹರಿಸಿದ ಪುಣ್ಯ ಕಾರ್ಯ ಸ್ಮರಣೀಯ. ಇಂತಹ ಮಹಾನ್ ಮಹರ್ಷಿಗಳ ಜಯಂತಿ ಆಚರಣೆಯು ಶ್ಲಾಘನೀಯ ಎಂದು ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 'ಭಗೀರಥ ಮಹರ್ಷಿ ಜಯಂತಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಅದ್ಧೂರಿ ಆಚರಣೆ: ತಾಲೂಕು ಆಡಳಿತದ ವತಿಯಿಂದ ಪ್ರಸ್ತುತ ಸರಳವಾಗಿ ನಡೆಯುತ್ತಿರುವ ಈ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಬರಿದಾಗಿವೆ. ಸಕಲ ಜೀವರಾಶಿಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂದಿನ 4-5 ತಿಂಗಳಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಾವರಿ ಯೋಜನೆಗಳಿಗೆ ಒತ್ತು: ರಾಮನಗುಡ್ಡ ಕೆರೆಗೆ ನೀರು ಹರಿಸಿದ್ದರಿಂದ ಆ ಭಾಗದ ಸಮಸ್ಯೆ ದೂರವಾಗಿದೆ. ಇದೇ ಮಾದರಿಯಲ್ಲಿ ಕ್ಷೇತ್ರದ ಇತರೆ ಭಾಗಗಳಿಗೂ ಹಂತ-ಹಂತವಾಗಿ ನೀರಾವರಿ ಯೋಜನೆ ತರಲು ಕ್ರಮ ವಹಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ, ಇಂಜಿನಿಯರ್ ನಾಗರಾಜ್, ಆರಕ್ಷಕ ನಿರೀಕ್ಷಕ ಸಾಹೇಬ್ ಗೌಡ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಪಾಲ್ಗೊಂಡಿದ್ದರು. ಸಮುದಾಯದ ಮುಖಂಡರಾದ ಡಿ.ಪಿ. ಗೋವಿಂದ, ನಿಂಗಶೆಟ್ಟಿ, ನಾಗೇಶ್, ರಂಗಸ್ವಾಮಿ, ಅಜ್ಜೀಪುರ ಮಹಾದೇವ, ಮಂಜು, ಮರೀಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ :ಉಸ್ಮಾನ್ ಖಾನ್1
- ಹನೂರು :ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ. ಕಾಡೋಲ ಗ್ರಾಮದ ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.1
- ಟೊಮೊಟೊ ಬೇಯಿಸಿದ ಸಾಂಬಾರ್/ಗೊಜ್ಜು * #Tomatogojju #Tomatocurry #Karnatakastyle #Tomatogravy #Premarecipes Description (YOGi writes) : - ಶೀಘ್ರವಾಗಿ ಮಾಡುವ ಸಾಂಬಾರ್ ಗಳಲ್ಲಿ ಇದು ಒಂದು ,ನಾಲಿಗೆಗೆ ರುಚಿ ಕೊಡುವ ಟೊಮೆಟೊ ಗೊಜ್ಜು, ಮೊದಲಿಗೆ ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಬೇಯಿಸಿ , ನಂತರ ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ , ಜೀರಿಗೆ, ಉಪ್ಪು ಹಾಕಿ, ಸಾಂಬಾರ್ ತಯಾರಿಸಬಹುದು | TOMATO GOJJU RECIPE | TOMATO CURRY | RECIPES #Tomatosambar #Tomatosaaru #Tomatokurma #Tomatokorma #Assistant #KSGE #DIPR #YOGi #ವಾರ್ತೆ #Government #Employee #fda #sda #clark ► Subscribe to I, Yogi , will give you tips that will put your min1
- ಕನಸಿನ ಕೆಟಿಎಂ ಬೈಕ್ ಕಳ್ಳರ ಪಾಲು ಸಿಸಿಟಿವಿಯಲ್ಲಿ ಸೆರೆಯಾದ ಕ್ಷಣಾರ್ಧ ಕಳ್ಳತನ1
- *ಭಾರತ ನಲ್ಲಿ ವೈರಲ್*1
- ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಕ್ರೂರವಾಗಿ ಕೊಲೆಗೈದ ಆರೋಪದ ಮೇಲೆ ಪ್ರೇಯಸಿ ಪ್ರೇಮಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮನಕಲಕುವಂತಿದೆ. ಪ್ರೇಮಾಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕುಟುಂಬಸ್ಥರು ಮತ್ತು ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ನಿಜಾಸತ್ಯ ಹೊರಬರಬೇಕಿದೆ.1
- ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.3