ತುಮಕೂರು: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಅಭಿವೃದ್ಧಿ ಗೆ ಶ್ರಮಿಸಿದ ಸಿದ್ದರಬೆಟ್ಟದ ಶ್ರೀ ಗಳು ಹಾಗೂ ಸಿದ್ದರಬೆಟ್ಟದ ನಿವಾಸಿಗಳು ಪುರಾಣ ಮತ್ತು ಇತಿಹಾಸಗಳಲ್ಲಿ ಪ್ರಸಿದ್ಧವಾದ ಸಾವಿರಾರು ವರ್ಷಗಳಿಂದಲೂ ಪವಿತ್ರ ಪುಣ್ಯಕ್ಷೇತ್ರವಾಗಿ ಬರುವ ಭಕ್ತರನ್ನ ಆಶೀರ್ವದಿಸಿ ಕಾಯುತ್ತಿರುವಂತ ಪುಣ್ಯ ಕ್ಷೇತ್ರವೇ * ಶ್ರೀ ಕ್ಷೇತ್ರ ಸಿದ್ದರಬೆಟ್ಟ ಸಾಧಕರಿಗೆ ತಪಸ್ಸಿಗಳಿಗೆ ಸಿದ್ದಿ ಸಾಧನೆಗೈಯುವಂತ ಸತ್ಪುರುಷರಿಗೆ ಕಾರಣವಾಗಿರುವಂತ ಈ ಕ್ಷೇತ್ರ ಅತ್ಯಂತ ಪವಿತ್ರ ಮತ್ತು ಜಾಗೃತ ಕ್ಷೇತ್ರವಾಗಿದೆ "ಸಿದ್ದರಬೆಟ್ಟ ಎಂಬ ಪವಿತ್ರ ನಾಮದಿಂದ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ವು, ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳವರ ಕೃಪಾಕಟಾಕ್ಷದಿಂದ ಪಾವನಗೊಂಡಿರುವ ಕ್ಷೇತ್ರವಾಗಿದೆ. ಅನಾದಿಕಾಲದಿಂದಲೂ ಭಕ್ತರ ಭಕ್ತಿಭಾವ, ನಂಬಿಕೆ ಹಾಗೂ ಆಧ್ಯಾತ್ಮಿಕ ಸಾಧನೆಗಳಿಗೆ ಆಶ್ರಯಸ್ಥಾನವಾಗಿರುವ ಈ ಕ್ಷೇತ್ರವು, ಅಸಂಖ್ಯಾತ ಭಕ್ತರ ಬದುಕಿಗೆ ದೈವಿಕ ಬೆಳಕನ್ನು ನೀಡುತ್ತ ಬಂದಿದೆ. ಶ್ರೀ ಕ್ಷೇತ್ರದ ಸದ್ಭಕ್ತರ ಅಪೇಕ್ಷೆ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದೂರದೃಷ್ಟಿ ಮತ್ತು ದಿವ್ಯ ಸಂಕಲ್ಪದ ಫಲವಾಗಿ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ರಂಭಾಪುರಿ ಪೀಠದಿಂದ ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ ಬಾಳೆಹೊನ್ನೂರುಖಾಸಾ ಶಾಖಾ ಮಠವನ್ನು ಸ್ಥಾಪಿಸಲಾಯಿತು. ಶ್ರೀಮಠದ ಪ್ರಥಮ ಮಠಾಧಿಪತಿಗಳಾಗಿ ಪೂಜ್ಯ **ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು** ನಿಯುಕ್ತಿಗೊಳಿಸಿ, ಶ್ರೀ ಕ್ಷೇತ್ರದ ಅಭಿವೃದ್ಧಿ ಮತ್ತು ಲೋಕಕಲ್ಯಾಣದ ಮಹತ್ಕಾರ್ಯಕ್ಕೆ ಭದ್ರ ಅಡಿಪಾಯ ಹಾಕಲಾಯಿತು. ಅಂದಿನಿಂದ ಪೂಜ್ಯ ಶ್ರೀಗಳವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದ ನೆರಳಿನಲ್ಲಿ, ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಮಸ್ತಸದ್ಭಕ್ತರುಗಳಿಗೆ ನಿತ್ಯ ದಾಸೋಹದ ಪವಿತ್ರ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಮಠದ ಶ್ರೀಗಳ ಯಾವುದೇ ಬಡವ ಶ್ರೀಮಂತ ಬರಲಿ ಯಾವುದೇ ಜಾತಿ ಧರ್ಮದವರೇ ಬರಲಿ ಎಲ್ಲರನ್ನೂ ಸಮಾನವಾಗಿ ಮಾತನಾಡಿಸಿ ಪ್ರಸಾದ ಮಾಡಿಸಿ ಬಿಳ್ಕೊಡುವ ಗುರುಗಳ ಗುಣ ಆದರ್ಶವಾದದ್ದು ನಮ್ಮೆಲ್ಲರಿಗೂ ಪ್ರೇರಣದಾಯಕವಾಗಿದ್ದು. ಶ್ರೀಮಠದಲ್ಲಿ ಎಲ್ಲ ಜಾತಿ ಧರ್ಮದ ಬಡ ವಿದ್ಯಾರ್ಥಿಗಳು ನಮ್ಮ ರಾಜ್ಯದ ಮಕ್ಕಳಲ್ಲದೆ ಆಂಧ್ರ.ತೆಲಂಗಾಣ ಮತ್ತು ಮೇಘಾಲಯದ ರಾಜ್ಯದ ಮಕ್ಕಳು ಶ್ರೀಮಠದಲ್ಲಿ ಓದುತ್ತಿರುವುದು ಶ್ರೀಮಠದ ಕಾರ್ಯಕ್ಕೆ ಕೈಗನ್ನಡಿಯಾಗಿದೆ. ಆರಂಭಿಕ ದಿನಗಳಲ್ಲಿ ದಾಸೋಹದಲ್ಲಿ ಭಾಗವಹಿಸಿದ ಭಕ್ತರಿಗೆ **ಅನ್ನ, ಸಾಂಬಾರು ಹಾಗೂ ಮಜ್ಜಿಗೆ ಪ್ರಸಾದವನ್ನು** ವಿತರಿಸಲಾಗುತ್ತಿತ್ತು. ಕಾಲಕ್ರಮೇಣ ಭಕ್ತರ ಸಂಖ್ಯೆ ಹಾಗೂ ಶ್ರೀಮಠದ ಸೇವಾ ವ್ಯಾಪ್ತಿ ವಿಸ್ತಾರಗೊಂಡಂತೆ, ಶ್ರೀಮಠದ ದಶಮಾನೋತ್ಸವದ ಸಂದರ್ಭದಲ್ಲಿ ಪೂಜ್ಯ ಶ್ರೀಗಳವರ ದಿವ್ಯ ಸಂಕಲ್ಪದಂತೆ ನಿತ್ಯ ದಾಸೋಹ ವ್ಯವಸ್ಥೆಗೆ ಮತ್ತಷ್ಟು ವೈಭವವನ್ನು ನೀಡಲಾಯಿತು. ಅದರಂತೆ ಬೆಳಗಿನ ಸಮಯದಲ್ಲಿ ಭಕ್ತರಿಗೆ *ಬೆಳಗ್ಗೆ 10 ಗಂಟೆವರೆಗೆ*ಲಘು ಉಪಹಾರದ ವ್ಯವಸ್ಥೆ**, 10 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ * ಸವಿಯಾದ ಪಾಯಸದ ಅನ್ನ, ಸಾಂಬಾರು ಮಜ್ಜಿಗೆಯೊಂದಿಗೆ ಪ್ರಸಾದವನ್ನು** ನೀಡುವ ಪರಂಪರೆಯನ್ನು ಆರಂಭಿಸಲಾಯಿತು. ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ, ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳವರಿಗೆ **ಹೋಳಿಗೆ–ತುಪ್ಪ ಆರಾಧನೆ** ಸಲ್ಲಿಸುವ ವಿಶಿಷ್ಟ ಸಂಪ್ರದಾಯವು ಭಕ್ತಿಭಾವದೊಂದಿಗೆ ನಡೆದುಕೊಂಡು ಬಂದಿದೆ. ಇದು ಕೇವಲ ನೈವೇದ್ಯದ ಆಚರಣೆಯಲ್ಲ; ಭಕ್ತರ ಅಚಲ ನಂಬಿಕೆ, ಹರಕೆ ಮತ್ತು ಗುರುಭಕ್ತಿಯ ಸಜೀವ ಪ್ರತೀಕವಾಗಿದೆ. ಹಿಂದಿನ ಕಾಲದಲ್ಲಿ ದೂರದೂರಿನಿಂದ ಆಗಮಿಸುತ್ತಿದ್ದ ಭಕ್ತಾದಿಗಳು ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಬಂದು, ಇಲ್ಲಿಯೇ ಹೋಳಿಗೆಯನ್ನು ಸಿದ್ಧಪಡಿಸಿ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ ನೈವೇದ್ಯ ಅರ್ಪಿಸುತ್ತಿದ್ದರು. ತದನಂತರ ಆ ಪವಿತ್ರ ಪ್ರಸಾದವನ್ನು ಆಗಮಿಸಿದ ಭಕ್ತರಿಗೆ ದಾಸೋಹವಾಗಿ ವಿತರಿಸಿ, ತಮ್ಮ ಹರಕೆಗಳನ್ನು ಸಮರ್ಪಿಸಿಕೊಂಡು ಶ್ರೀ ಗುರು ಸಿದ್ದೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಿದ್ದರು. ಹೀಗೆ ಹೋಳಿಗೆ–ತುಪ್ಪ ಆರಾಧನೆಯು ಭಕ್ತಿ, ಸಮರ್ಪಣೆ ಮತ್ತು ದಾಸೋಹದ ಸುಂದರ ಸಂಗಮವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದೆ. ಆದರೆ ಇಂದು ಸಮಯದ ಅಭಾವದಿಂದ ಬಹಳಷ್ಟು ಭಕ್ತರು ಹೋಳಿಗೆ ತುಪ್ಪದ ಆರಾಧನೆಯನ್ನು ಮಾಡಿಸುವಂತದ್ದು ಕಡಿಮೆಯಾಗುತ್ತಿದೆ ಈ ಪುರಾತನ ಪರಂಪರೆಯ ಮಹತ್ವವನ್ನು ಮನಗಂಡು, ಪೂಜ್ಯ **ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರ** ಒತ್ತಾಸೆ ಹಾಗೂ ದಿವ್ಯ ಸಂಕಲ್ಪದ ಮೇರೆಗೆ, ಶ್ರೀಮಠದಲ್ಲಿ ನಿತ್ಯವೂ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ **ಹೋಳಿಗೆ–ತುಪ್ಪ ಆರಾಧನೆಯನ್ನು ನಿರಂತರವಾಗಿ ನಡೆಸುವ ಮಹೋನ್ನತ ಸೇವಾಕಾರ್ಯಕ್ಕೆ** ಚಾಲನೆ ನೀಡಲಾಗಿದೆ. ಭಕ್ತರ ಹರಕೆಗಳು ಸಾರ್ಥಕವಾಗಲಿ, ಸದ್ಭಕ್ತರ ಮನೋರಥಗಳು ಈಡೇರಲಿ ಹಾಗೂ ಲೋಕಕಲ್ಯಾಣ ವೃದ್ಧಿಯಾಗಲಿ ಎಂಬ ಉದಾತ್ತ ಆಶಯವು ಈ ಸಂಕಲ್ಪದ ಹಿಂದಿನ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಶ್ರೀಮಠಕ್ಕೆ ನಿತ್ಯ ಆಗಮಿಸುವ ಭಕ್ತಾದಿಗಳ ಸೇವಾರ್ಥವಾಗಿ, ದಾಸೋಹ ವ್ಯವಸ್ಥೆಯಲ್ಲಿ ಬೆಳಗಿನ ವೇಳೆಯಲ್ಲಿ **ಲಘು ಉಪಹಾರದ ವ್ಯವಸ್ಥೆ** ಹಾಗೂ ಮಧ್ಯಾಹ್ನ ಮತ್ತು ರಾತ್ರಿ **ಹೋಳಿಗೆ–ತುಪ್ಪ ಪ್ರಸಾದ, ಅನ್ನ, ಸಾರು ಮತ್ತು ಮಜ್ಜಿಗೆಯನ್ನು** ಭಕ್ತಿಪೂರ್ವಕವಾಗಿ ವಿತರಿಸುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ. *ಶ್ರೀ ವೀರಭದ್ರೇಶ್ವರ ಸ್ವಾಮಿ ನಿತ್ಯ ದಾಸೋಹ ಸಮಿತಿ ಈ ಮಹತ್ಕಾರ್ಯದ ಶಾಶ್ವತ ನಿರ್ವಹಣೆಗಾಗಿ ಅಗತ್ಯವಿರುವ ದೇಣಿಗೆ ಸಂಗ್ರಹ ಕಾರ್ಯವು ಇದೀಗ ಪ್ರಾರಂಭಗೊಂಡಿದ್ದು, ಸದ್ಭಕ್ತದಾನಿಗಳು ತಮ್ಮ ಶಕ್ತ್ಯಾನುಸಾರ ಕೈಜೋಡಿಸಿ ಈ ಪುಣ್ಯಯಜ್ಞದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠವು ಆತ್ಮೀಯ ಆಹ್ವಾನ ನೀಡುತ್ತಿದೆ. ಈ ಯೋಜನೆಗೆ ಉದಾರ ಮನಸ್ಸಿನಿಂದ 11 ಲಕ್ಷ ದೇಣಿಗೆಯನ್ನು ಸಮರ್ಪಿಸುವ ಮಹನೀಯರನ್ನು "ಮಹಾಪೋಷಕ ದಾನಿಗಳು" ಎಂದು ಗೌರವಪೂರ್ವಕವಾಗಿ ಪರಿಗಣಿಸಲಾಗುವುದು. ಇಂತಹ ಮಹಾಪೋಷಕರನ್ನು ಶ್ರೀಮಠದ ದಾಸೋಹ ಸಮಿತಿಯ ಶಾಶ್ವತ ಮಹಾ ಪೋಷಕರಾಗಿ ಗೌರವಿಸಲಾಗುವುದು. ಈ ಯೋಜನೆಯ ಮಹಾಪೋಷಕ ಸದಸ್ಯತ್ವಕ್ಕೆ ದೇಣಿಗೆಯ ಮೊತ್ತವನ್ನು ₹11,00,000/- (ಹನ್ನೊಂದು ಲಕ್ಷ ರೂಪಾಯಿಗಳು), ಪೋಷಕ ಸದಸ್ಯತ್ವಕ್ಕೆ 5,00,000/- (ಐದು ಲಕ್ಷ ರೂಪಾಯಿಗಳನ್ನು) ಮತ್ತು ಸಾಮಾನ್ಯ ಸದಸ್ಯತ್ವಕ್ಕೆ 1,00,000/- ಒಂದು ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಸಮರ್ಪಿಸಿದ ಸದ್ಭಕ್ತರು ತಾವು ತಿಳಿಸಿದ ದಿನದಂದು ಪೂಜೆ ಮಾಡಿ ಆ ದಿವಸದ ದಾಸೋಹ ಸೇವೆಯನ್ನು ತಮ್ಮ ಹೆಸರಿನಲ್ಲಿ ಚಿರಂತನವಾಗಿ ಈ ಕಾರ್ಯವನ್ನು ನಡೆಸಲಾಗುತ್ತದೆ ತಮ್ಮ ತಂದೆ ತಾಯಿಯ ಸ್ಮರಣಾರ್ಥವಾಗಿ ಅಥವಾ ತಮ್ಮ ಜನ್ಮದ ನಿಮಿತ್ಯವಾಗಿ ಅಥವಾ ವಿವಾಹ ವಾರ್ಷಿಕೋತ್ಸವದ ದಿನದಂದು ತಾವು ಸಮರ್ಪಿಸಿ ಆ ದಿವಸ ಶ್ರೀಮಠದ ವಿದ್ಯಾರ್ಥಿಗಳಿಗೆ ಮತ್ತು ಆಗಮಿಸುವಂತಹ ಸಮಸ್ತ ಎಲ್ಲ ಭಕ್ತರಿಗೆ ದಾಸೋಹವನ್ನು ನಡೆಸುತ್ತಿವೆ ಹಾಗೂ ಒಂದು ಲಕ್ಷ ಹಣವನ್ನು ನೀಡಿದ ಸದ್ಭಕ್ತರನ್ನ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುತ್ತಿದೆ ಶ್ರೀಮಠದ ಸದ್ಭಕ್ತರಾದ ತಾವುಗಳೆಲ್ಲರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ಮತ್ತು ಬೆಂಬಲದಿಂದ, ಪೂಜ್ಯ ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ ಹಾಗೂ ಘನ ಅಧ್ಯಕ್ಷತೆಯಲ್ಲಿ ಈ ಮಹತ್ವದ ಯೋಜನೆಯು ರೂಪುಗೊಂಡಿದ್ದು, ಪೂಜ್ಯರ ಸತ್ಸಂಕಲ್ಪವನ್ನು ಸಾಕಾರಗೊಳಿಸುವ ಉದ್ದೇಶದಿಂದ ಅನುಷ್ಠಾನದ ಹಂತಕ್ಕೆ ತರಲಾಗುತ್ತಿದೆ. ಈ ಪುಣ್ಯ ಕಾರ್ಯದಲ್ಲಿ ತಾವುಗಳು ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇವೆ. *ವಂದನೆಗಳೊಂದಿಗೆ,* (*ವ್ಯವಸ್ಥಾಪಕರು*) *ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ* *ಶ್ರೀ ಕ್ಷೇತ್ರ ಸಿದ್ದರಬೆಟ್ಟ* *ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.* *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ* ಜಗದೀಶರಾಧ್ಯ. 9731801048 ಶಿವಶಂಕರ್. 9353779377
ತುಮಕೂರು: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಅಭಿವೃದ್ಧಿ ಗೆ ಶ್ರಮಿಸಿದ ಸಿದ್ದರಬೆಟ್ಟದ ಶ್ರೀ ಗಳು ಹಾಗೂ ಸಿದ್ದರಬೆಟ್ಟದ ನಿವಾಸಿಗಳು ಪುರಾಣ ಮತ್ತು ಇತಿಹಾಸಗಳಲ್ಲಿ ಪ್ರಸಿದ್ಧವಾದ ಸಾವಿರಾರು ವರ್ಷಗಳಿಂದಲೂ ಪವಿತ್ರ ಪುಣ್ಯಕ್ಷೇತ್ರವಾಗಿ ಬರುವ ಭಕ್ತರನ್ನ ಆಶೀರ್ವದಿಸಿ ಕಾಯುತ್ತಿರುವಂತ ಪುಣ್ಯ ಕ್ಷೇತ್ರವೇ * ಶ್ರೀ ಕ್ಷೇತ್ರ ಸಿದ್ದರಬೆಟ್ಟ ಸಾಧಕರಿಗೆ ತಪಸ್ಸಿಗಳಿಗೆ ಸಿದ್ದಿ ಸಾಧನೆಗೈಯುವಂತ ಸತ್ಪುರುಷರಿಗೆ ಕಾರಣವಾಗಿರುವಂತ ಈ ಕ್ಷೇತ್ರ ಅತ್ಯಂತ ಪವಿತ್ರ ಮತ್ತು ಜಾಗೃತ ಕ್ಷೇತ್ರವಾಗಿದೆ "ಸಿದ್ದರಬೆಟ್ಟ ಎಂಬ ಪವಿತ್ರ ನಾಮದಿಂದ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ವು, ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳವರ ಕೃಪಾಕಟಾಕ್ಷದಿಂದ ಪಾವನಗೊಂಡಿರುವ ಕ್ಷೇತ್ರವಾಗಿದೆ. ಅನಾದಿಕಾಲದಿಂದಲೂ ಭಕ್ತರ ಭಕ್ತಿಭಾವ, ನಂಬಿಕೆ ಹಾಗೂ ಆಧ್ಯಾತ್ಮಿಕ ಸಾಧನೆಗಳಿಗೆ ಆಶ್ರಯಸ್ಥಾನವಾಗಿರುವ ಈ ಕ್ಷೇತ್ರವು, ಅಸಂಖ್ಯಾತ ಭಕ್ತರ ಬದುಕಿಗೆ ದೈವಿಕ ಬೆಳಕನ್ನು ನೀಡುತ್ತ ಬಂದಿದೆ. ಶ್ರೀ ಕ್ಷೇತ್ರದ ಸದ್ಭಕ್ತರ ಅಪೇಕ್ಷೆ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದೂರದೃಷ್ಟಿ ಮತ್ತು ದಿವ್ಯ ಸಂಕಲ್ಪದ ಫಲವಾಗಿ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ರಂಭಾಪುರಿ ಪೀಠದಿಂದ ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ ಬಾಳೆಹೊನ್ನೂರುಖಾಸಾ ಶಾಖಾ ಮಠವನ್ನು ಸ್ಥಾಪಿಸಲಾಯಿತು. ಶ್ರೀಮಠದ ಪ್ರಥಮ ಮಠಾಧಿಪತಿಗಳಾಗಿ ಪೂಜ್ಯ **ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು** ನಿಯುಕ್ತಿಗೊಳಿಸಿ, ಶ್ರೀ ಕ್ಷೇತ್ರದ ಅಭಿವೃದ್ಧಿ ಮತ್ತು ಲೋಕಕಲ್ಯಾಣದ ಮಹತ್ಕಾರ್ಯಕ್ಕೆ ಭದ್ರ ಅಡಿಪಾಯ ಹಾಕಲಾಯಿತು. ಅಂದಿನಿಂದ ಪೂಜ್ಯ ಶ್ರೀಗಳವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದ ನೆರಳಿನಲ್ಲಿ, ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಮಸ್ತಸದ್ಭಕ್ತರುಗಳಿಗೆ ನಿತ್ಯ ದಾಸೋಹದ ಪವಿತ್ರ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಮಠದ ಶ್ರೀಗಳ ಯಾವುದೇ ಬಡವ
ಶ್ರೀಮಂತ ಬರಲಿ ಯಾವುದೇ ಜಾತಿ ಧರ್ಮದವರೇ ಬರಲಿ ಎಲ್ಲರನ್ನೂ ಸಮಾನವಾಗಿ ಮಾತನಾಡಿಸಿ ಪ್ರಸಾದ ಮಾಡಿಸಿ ಬಿಳ್ಕೊಡುವ ಗುರುಗಳ ಗುಣ ಆದರ್ಶವಾದದ್ದು ನಮ್ಮೆಲ್ಲರಿಗೂ ಪ್ರೇರಣದಾಯಕವಾಗಿದ್ದು. ಶ್ರೀಮಠದಲ್ಲಿ ಎಲ್ಲ ಜಾತಿ ಧರ್ಮದ ಬಡ ವಿದ್ಯಾರ್ಥಿಗಳು ನಮ್ಮ ರಾಜ್ಯದ ಮಕ್ಕಳಲ್ಲದೆ ಆಂಧ್ರ.ತೆಲಂಗಾಣ ಮತ್ತು ಮೇಘಾಲಯದ ರಾಜ್ಯದ ಮಕ್ಕಳು ಶ್ರೀಮಠದಲ್ಲಿ ಓದುತ್ತಿರುವುದು ಶ್ರೀಮಠದ ಕಾರ್ಯಕ್ಕೆ ಕೈಗನ್ನಡಿಯಾಗಿದೆ. ಆರಂಭಿಕ ದಿನಗಳಲ್ಲಿ ದಾಸೋಹದಲ್ಲಿ ಭಾಗವಹಿಸಿದ ಭಕ್ತರಿಗೆ **ಅನ್ನ, ಸಾಂಬಾರು ಹಾಗೂ ಮಜ್ಜಿಗೆ ಪ್ರಸಾದವನ್ನು** ವಿತರಿಸಲಾಗುತ್ತಿತ್ತು. ಕಾಲಕ್ರಮೇಣ ಭಕ್ತರ ಸಂಖ್ಯೆ ಹಾಗೂ ಶ್ರೀಮಠದ ಸೇವಾ ವ್ಯಾಪ್ತಿ ವಿಸ್ತಾರಗೊಂಡಂತೆ, ಶ್ರೀಮಠದ ದಶಮಾನೋತ್ಸವದ ಸಂದರ್ಭದಲ್ಲಿ ಪೂಜ್ಯ ಶ್ರೀಗಳವರ ದಿವ್ಯ ಸಂಕಲ್ಪದಂತೆ ನಿತ್ಯ ದಾಸೋಹ ವ್ಯವಸ್ಥೆಗೆ ಮತ್ತಷ್ಟು ವೈಭವವನ್ನು ನೀಡಲಾಯಿತು. ಅದರಂತೆ ಬೆಳಗಿನ ಸಮಯದಲ್ಲಿ ಭಕ್ತರಿಗೆ *ಬೆಳಗ್ಗೆ 10 ಗಂಟೆವರೆಗೆ*ಲಘು ಉಪಹಾರದ ವ್ಯವಸ್ಥೆ**, 10 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ * ಸವಿಯಾದ ಪಾಯಸದ ಅನ್ನ, ಸಾಂಬಾರು ಮಜ್ಜಿಗೆಯೊಂದಿಗೆ ಪ್ರಸಾದವನ್ನು** ನೀಡುವ ಪರಂಪರೆಯನ್ನು ಆರಂಭಿಸಲಾಯಿತು. ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ, ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳವರಿಗೆ **ಹೋಳಿಗೆ–ತುಪ್ಪ ಆರಾಧನೆ** ಸಲ್ಲಿಸುವ ವಿಶಿಷ್ಟ ಸಂಪ್ರದಾಯವು ಭಕ್ತಿಭಾವದೊಂದಿಗೆ ನಡೆದುಕೊಂಡು ಬಂದಿದೆ. ಇದು ಕೇವಲ ನೈವೇದ್ಯದ ಆಚರಣೆಯಲ್ಲ; ಭಕ್ತರ ಅಚಲ ನಂಬಿಕೆ, ಹರಕೆ ಮತ್ತು ಗುರುಭಕ್ತಿಯ ಸಜೀವ ಪ್ರತೀಕವಾಗಿದೆ. ಹಿಂದಿನ ಕಾಲದಲ್ಲಿ ದೂರದೂರಿನಿಂದ ಆಗಮಿಸುತ್ತಿದ್ದ ಭಕ್ತಾದಿಗಳು ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಬಂದು, ಇಲ್ಲಿಯೇ ಹೋಳಿಗೆಯನ್ನು ಸಿದ್ಧಪಡಿಸಿ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ ನೈವೇದ್ಯ ಅರ್ಪಿಸುತ್ತಿದ್ದರು. ತದನಂತರ ಆ ಪವಿತ್ರ ಪ್ರಸಾದವನ್ನು ಆಗಮಿಸಿದ ಭಕ್ತರಿಗೆ ದಾಸೋಹವಾಗಿ
ವಿತರಿಸಿ, ತಮ್ಮ ಹರಕೆಗಳನ್ನು ಸಮರ್ಪಿಸಿಕೊಂಡು ಶ್ರೀ ಗುರು ಸಿದ್ದೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಿದ್ದರು. ಹೀಗೆ ಹೋಳಿಗೆ–ತುಪ್ಪ ಆರಾಧನೆಯು ಭಕ್ತಿ, ಸಮರ್ಪಣೆ ಮತ್ತು ದಾಸೋಹದ ಸುಂದರ ಸಂಗಮವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದೆ. ಆದರೆ ಇಂದು ಸಮಯದ ಅಭಾವದಿಂದ ಬಹಳಷ್ಟು ಭಕ್ತರು ಹೋಳಿಗೆ ತುಪ್ಪದ ಆರಾಧನೆಯನ್ನು ಮಾಡಿಸುವಂತದ್ದು ಕಡಿಮೆಯಾಗುತ್ತಿದೆ ಈ ಪುರಾತನ ಪರಂಪರೆಯ ಮಹತ್ವವನ್ನು ಮನಗಂಡು, ಪೂಜ್ಯ **ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರ** ಒತ್ತಾಸೆ ಹಾಗೂ ದಿವ್ಯ ಸಂಕಲ್ಪದ ಮೇರೆಗೆ, ಶ್ರೀಮಠದಲ್ಲಿ ನಿತ್ಯವೂ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳಿಗೆ **ಹೋಳಿಗೆ–ತುಪ್ಪ ಆರಾಧನೆಯನ್ನು ನಿರಂತರವಾಗಿ ನಡೆಸುವ ಮಹೋನ್ನತ ಸೇವಾಕಾರ್ಯಕ್ಕೆ** ಚಾಲನೆ ನೀಡಲಾಗಿದೆ. ಭಕ್ತರ ಹರಕೆಗಳು ಸಾರ್ಥಕವಾಗಲಿ, ಸದ್ಭಕ್ತರ ಮನೋರಥಗಳು ಈಡೇರಲಿ ಹಾಗೂ ಲೋಕಕಲ್ಯಾಣ ವೃದ್ಧಿಯಾಗಲಿ ಎಂಬ ಉದಾತ್ತ ಆಶಯವು ಈ ಸಂಕಲ್ಪದ ಹಿಂದಿನ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಶ್ರೀಮಠಕ್ಕೆ ನಿತ್ಯ ಆಗಮಿಸುವ ಭಕ್ತಾದಿಗಳ ಸೇವಾರ್ಥವಾಗಿ, ದಾಸೋಹ ವ್ಯವಸ್ಥೆಯಲ್ಲಿ ಬೆಳಗಿನ ವೇಳೆಯಲ್ಲಿ **ಲಘು ಉಪಹಾರದ ವ್ಯವಸ್ಥೆ** ಹಾಗೂ ಮಧ್ಯಾಹ್ನ ಮತ್ತು ರಾತ್ರಿ **ಹೋಳಿಗೆ–ತುಪ್ಪ ಪ್ರಸಾದ, ಅನ್ನ, ಸಾರು ಮತ್ತು ಮಜ್ಜಿಗೆಯನ್ನು** ಭಕ್ತಿಪೂರ್ವಕವಾಗಿ ವಿತರಿಸುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ. *ಶ್ರೀ ವೀರಭದ್ರೇಶ್ವರ ಸ್ವಾಮಿ ನಿತ್ಯ ದಾಸೋಹ ಸಮಿತಿ ಈ ಮಹತ್ಕಾರ್ಯದ ಶಾಶ್ವತ ನಿರ್ವಹಣೆಗಾಗಿ ಅಗತ್ಯವಿರುವ ದೇಣಿಗೆ ಸಂಗ್ರಹ ಕಾರ್ಯವು ಇದೀಗ ಪ್ರಾರಂಭಗೊಂಡಿದ್ದು, ಸದ್ಭಕ್ತದಾನಿಗಳು ತಮ್ಮ ಶಕ್ತ್ಯಾನುಸಾರ ಕೈಜೋಡಿಸಿ ಈ ಪುಣ್ಯಯಜ್ಞದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠವು ಆತ್ಮೀಯ ಆಹ್ವಾನ ನೀಡುತ್ತಿದೆ. ಈ ಯೋಜನೆಗೆ ಉದಾರ ಮನಸ್ಸಿನಿಂದ 11 ಲಕ್ಷ ದೇಣಿಗೆಯನ್ನು ಸಮರ್ಪಿಸುವ ಮಹನೀಯರನ್ನು "ಮಹಾಪೋಷಕ ದಾನಿಗಳು" ಎಂದು ಗೌರವಪೂರ್ವಕವಾಗಿ ಪರಿಗಣಿಸಲಾಗುವುದು.
ಇಂತಹ ಮಹಾಪೋಷಕರನ್ನು ಶ್ರೀಮಠದ ದಾಸೋಹ ಸಮಿತಿಯ ಶಾಶ್ವತ ಮಹಾ ಪೋಷಕರಾಗಿ ಗೌರವಿಸಲಾಗುವುದು. ಈ ಯೋಜನೆಯ ಮಹಾಪೋಷಕ ಸದಸ್ಯತ್ವಕ್ಕೆ ದೇಣಿಗೆಯ ಮೊತ್ತವನ್ನು ₹11,00,000/- (ಹನ್ನೊಂದು ಲಕ್ಷ ರೂಪಾಯಿಗಳು), ಪೋಷಕ ಸದಸ್ಯತ್ವಕ್ಕೆ 5,00,000/- (ಐದು ಲಕ್ಷ ರೂಪಾಯಿಗಳನ್ನು) ಮತ್ತು ಸಾಮಾನ್ಯ ಸದಸ್ಯತ್ವಕ್ಕೆ 1,00,000/- ಒಂದು ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಸಮರ್ಪಿಸಿದ ಸದ್ಭಕ್ತರು ತಾವು ತಿಳಿಸಿದ ದಿನದಂದು ಪೂಜೆ ಮಾಡಿ ಆ ದಿವಸದ ದಾಸೋಹ ಸೇವೆಯನ್ನು ತಮ್ಮ ಹೆಸರಿನಲ್ಲಿ ಚಿರಂತನವಾಗಿ ಈ ಕಾರ್ಯವನ್ನು ನಡೆಸಲಾಗುತ್ತದೆ ತಮ್ಮ ತಂದೆ ತಾಯಿಯ ಸ್ಮರಣಾರ್ಥವಾಗಿ ಅಥವಾ ತಮ್ಮ ಜನ್ಮದ ನಿಮಿತ್ಯವಾಗಿ ಅಥವಾ ವಿವಾಹ ವಾರ್ಷಿಕೋತ್ಸವದ ದಿನದಂದು ತಾವು ಸಮರ್ಪಿಸಿ ಆ ದಿವಸ ಶ್ರೀಮಠದ ವಿದ್ಯಾರ್ಥಿಗಳಿಗೆ ಮತ್ತು ಆಗಮಿಸುವಂತಹ ಸಮಸ್ತ ಎಲ್ಲ ಭಕ್ತರಿಗೆ ದಾಸೋಹವನ್ನು ನಡೆಸುತ್ತಿವೆ ಹಾಗೂ ಒಂದು ಲಕ್ಷ ಹಣವನ್ನು ನೀಡಿದ ಸದ್ಭಕ್ತರನ್ನ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುತ್ತಿದೆ ಶ್ರೀಮಠದ ಸದ್ಭಕ್ತರಾದ ತಾವುಗಳೆಲ್ಲರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ಮತ್ತು ಬೆಂಬಲದಿಂದ, ಪೂಜ್ಯ ಶ್ರೀ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ ಹಾಗೂ ಘನ ಅಧ್ಯಕ್ಷತೆಯಲ್ಲಿ ಈ ಮಹತ್ವದ ಯೋಜನೆಯು ರೂಪುಗೊಂಡಿದ್ದು, ಪೂಜ್ಯರ ಸತ್ಸಂಕಲ್ಪವನ್ನು ಸಾಕಾರಗೊಳಿಸುವ ಉದ್ದೇಶದಿಂದ ಅನುಷ್ಠಾನದ ಹಂತಕ್ಕೆ ತರಲಾಗುತ್ತಿದೆ. ಈ ಪುಣ್ಯ ಕಾರ್ಯದಲ್ಲಿ ತಾವುಗಳು ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇವೆ. *ವಂದನೆಗಳೊಂದಿಗೆ,* (*ವ್ಯವಸ್ಥಾಪಕರು*) *ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ* *ಶ್ರೀ ಕ್ಷೇತ್ರ ಸಿದ್ದರಬೆಟ್ಟ* *ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.* *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ* ಜಗದೀಶರಾಧ್ಯ. 9731801048 ಶಿವಶಂಕರ್. 9353779377
- ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ತುಮಕೂರು:ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು,ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿಲ್ಲ.ಇದರಿAದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ70 ರಷ್ಟು ಭೂಮಿಯಲ್ಲಿ ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ30ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು,ದಿನದಿಂದ ದಿನಕ್ಕೆ ಅಂತರಜಲ ಕುಸಿಯುತ್ತಿದ್ದು,ಮುಂದಿನ 15-20 ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು.ಎಕರೆಗೆ ತಲಾ 50 ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿ ಅಡಿಯಲ್ಲಿ ಕೆಲಸ ನೀಡಿ ಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ಈ ಬಾರಿ ಹೇಮಾವತಿ ಜಲಾಶಯದಲ್ಲಿ ಶೇ75ರಷ್ಟು ನೀರಿನ ಸಂಗ್ರಹವಿತ್ತು. ಆಗ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಎಚ್ಚೆತ್ತುಕೊಂಡು ನಮ್ಮ ಕೆರೆ, ಕೆಟ್ಟೆಗಳಿಗೆ ನೀರು ಹರಿಸಿಕೊಂಡಿದ್ದರೆ ಅಂತರ ಜಲ ಕುಸಿತ ತಡೆಯಬಹುದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ಲಕ್ಷದ ಫಲವಾಗಿ ನಮ್ಮ ಜಿಲ್ಲೆಗೆ ಬರಬೇಕಾದ ನೀರು ತೆಮಿಳು ನಾಡಿಗೆ ಹರಿಸಿ,ಸರಕಾರ ತನ್ನ ಖರ್ಚಿ ಉಳಿಸಿಕೊಂಡಿದೆ.ನಮ್ಮ ತೋಟ, ತುಡಿಕೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ.ಈಗಲಾದರೂ ಜಿಲ್ಲಾಡಳಿತ ಎಲ್ಲಾ ಕೆರೆ, ಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದು ಎ.ಗೋವಿಂದರಾಜು ನುಡಿದರು. ಈಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ದಿನದಲ್ಲಿ ಒಂದು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ.ನಿರ್ಮಾಣವಾಗಿರುವ 220 ಕೆ.ವಿ.ಉಪಸ್ಥಾವರಗಳು ಕಾರ್ಯಾರಂಭಗೊAಡಿಲ್ಲ.ಬೇಸ್ಕಾA ಅಧಿಕಾರಿಗಳು ಅಸಹಾಯಕರಾಗಿದ್ದಾರೆ.ಹಾಗಾಗಿ ಬೆಸ್ಕಾಂ ಸೂಪರಿಂಡೆAಟ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಸೆಪ್ಟಂಬರ್ 21ರೊಳಗೆ ರೈತರು,ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ 23 ರಿಂದ ಹಂತ ಹಂತವಾಗಿ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಮತ್ತು ತಹಶೀಲ್ದಾರರ ಕಚೇರಿಯ ಮುಂದೆ ಪಿಕೇಟಿಗ್ ನಡೆಸಲಾಗುವುದು. ಮಧುಗಿರಿ ಉಪವಿಭಾಗಕ್ಕೆ ಸಂಬAಧಿಸಿ ದಂತೆ ಸೆಪ್ಟಂಬರ್ 23 ರಂದು ಮಧುಗಿರಿ ಎ.ಸಿ.ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಈಲ್ಲೆಯಲ್ಲಿ ಸರಕಾರದ ಯೋಜನೆಗಳಾದ ಹೇಮಾವತಿ ನಾಲೆ, ಎತ್ತಿನಹೊಳೆ ಯೋಜನೆ, ರೈಲ್ವೆಗೆ ಸೇರಿ ರೈತರ ಸಾಕಷ್ಟು ಫಲವತ್ತಾ ಭೂಮಿಯನ್ನು ವಶಪಡಿಸಿಕೊಂಡು 20-30 ವರ್ಷಗಳು ಕಳೆದರು ವೈಜ್ಞಾನಿಕ ಪರಿಹಾರ ನೀಡಿಲ್ಲ. ನ್ಯಾಯಾಲಯಕ್ಕೆ ಹೋದ ರೈತರಿಗೆ ಕೋರ್ಟ್ ಆದೇಶದಂತೆ ಸುಮಾರು 500 ಕೋಟಿ ರೂಗಳಿಗೆ ಹೆಚ್ಚಿನ ಬಾಕಿ ನೀಡಬೇಕಿದೆ.ಆದರೆ ಇದುವರೆಗೂ ಒಂದು ನೈಯಾಫೈಸೆ ನೀಡಿಲ್ಲ. ಹಲವು ಮೂಲ ಜಮೀನುದಾರರು ಸಾವನ್ನಪ್ಪಿದ್ದಾರೆ.ಸರಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ಕಳೆದ ಸಾಲಿನಲ್ಲಿ ನ್ಯಾಫೇಡ್ ಮೂಲಕ ಖರೀದಿಸಿದ್ದ ರಾಗಿಯ ಬಾಬ್ತು ಸುಮಾರು 400 ಕೋಟಿ ರೂ ಬಾಕಿ ಬರಬೇಕಾಗಿದೆ. ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದೆ.ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದ ಕಾರಣ, ಉತ್ಪಾಧನಾ ವೆಚ್ಚ ಹೆಚ್ಚಾಗಿ,ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಂಸದರು ಒಂದು ಬಾರಿಗೆ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.ಹಾಗೆಯೇ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು ಬಲವಂತದ ವಸೂಲಿ ಮಾಡದಂತೆ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ,ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು,ಸರಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು.ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ50ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ 40 ರೂ ನೀಡಬೇಕೆಂದು ಒತ್ತಾಯಿಸಿದರು. ನಂದಿಹಳ್ಳಿ-ಮಲ್ಲಸAದ್ರ-ವಸAತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗುತ್ತಲೇ ಇದ್ದಾರೆ.ಜನರಿಗೆ ಹೆಚ್ಚು ಉಪಯೋಗವಿಲ್ಲದ ಔಟರ್‌ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು.ಹಾಗೆಯೇ ಜಿಲ್ಲೆಯ 7-8 ತಾಲೂಕುಗಳಿಗೆ ಮರಣ ಶಾಸನವಾಗಿರುವ ಏಕ್ಸ್ಪ್ರೆಸ್ ಕೇನಾಲ್ ಯೋಜನೆಯನ್ನು ಸರಕಾರ ರದ್ದು ಮಾಡಬೇಕು. ಕುಣಿಗಲ್ ನೆಪದಲ್ಲಿ ಬಿಡದಿಯೇ ಎಐ ಡೇಟಾ ಸೆಂಟರ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿ.ಸಿ.ಶಂಕರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಬೇಸಿಗೆ ಬಂದರೆ ನಮ್ಮಲ್ಲಿ ಜಾನುವಾರುಗಳಿಗೆ ಹುಲ್ಲು ಸಿಗುವುದೇಲ ಕಷ್ಟ ಹೊರ ರಾಷ್ಟ್ರದಲ್ಲಿ ಇಂತಹ ಆಹಾರ ನೀಡುತ್ತಿದ್ದಾರೆ.1
- ಕೆಆರ್ ಪುರ : ಐಟಿಐ ಭೂಮಿ ಹರಾಜು ವಿರೋಧಿಸಿ ಸ್ಥಳೀಯರಿಂದ ಕಾಲ್ನಡಿಗೆ ಜಾಥಾ ಐಟಿಐ ಸಂಸ್ಥೆಗೆ ಸೇರಿದ 44 ಎಕರೆ ಭೂಮಿ ಹರಾಜಿಗೆ ಕೇಂದ್ರ ಸರ್ಕಾರದ ಪ್ರಕಟಣೆ . ಹರಾಜು ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ . 44 ಎಕರೆ ಭೂಮಿಯನ್ನು ಹರಾಜು ಮಾಡದೆ ಸಾರ್ವಜನಿಕ ಬಳಕೆಗೆ ಉಳಿಸುವಂತೆ ಆಗ್ರಹ ಖಾಸಗೀಕರಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕ .ಐಟಿಐ ಕೈಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪುನಶ್ಚೇತನಗೊಳಿಸುವಂತೆ ಒತ್ತಾಯ.ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಅಗತ್ಯ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಉತ್ಪಾದಿಸಲು ಆಗ್ರಹ .ಐಟಿಐ ಪುನಶ್ಚೇತನದಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಅವಕಾಶ ಎಂದು ಸ್ಥಳೀಯರ ಅಭಿಪ್ರಾಯ .ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ 44 ಎಕರೆ ಭೂಮಿ ಹರಾಜು ಪ್ರಕ್ರಿಯೆ ಕೂಡಲೇ ಕೈಬಿಡುವಂತೆ ಒತ್ತಾಯ .ಜಾಥಾ ಬಳಿಕ ಐಟಿಐ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ನಿರ್ಧಾರ1
- ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ| Veega News Kannada ಚಪ್ಪಲಿ ಧರಿಸಿಯೇ ಗಣೇಶ ಮೂರ್ತಿ ಹಿಡಿದು ಬಿಜೆಪಿ ಪ್ರತಿಭಟನೆ1
- ಹೆದ್ದಾರಿಯಲ್ಲಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ದೇವನಹಳ್ಳಿ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ. ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ. ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವು ಮೂವರಿಗೆ ಗಂಭೀರ ಗಾಯ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ಘಟನೆ. ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಘಟನೆ. ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ. ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯ. ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮ.2
- ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ:ಒರ್ವ ಸಾವು ,ಮೂವರಿಗೆ ಗಾಯ ಬೆಂಗಳೂರು:ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.ಹೊಂಡಾಸಿಟಿ ಕಾರು ಡಿವೈಡರ್ ದಾಟಿ ಆಲ್ಟೋ 800 ಕಾರಿಗೆ ಡಿಕ್ಕಿ ಹೊಡೆದಿದೆ.ಬರ್ತಿದ್ದ ರಸ್ತೆಯಿಂದ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಬರ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ನಡೆದಿದೆ.ಶಿಡ್ಲಘಟ್ಟ ಮೂಲಕ ವೆಂಕಟೇಶಪ್ಪ ( 75 ) ಮೃತ ವ್ಯಕ್ತಿ.ಮುನಿಅಕ್ಕಯಮ್ಮ, ಮಾಲಾ ಮತ್ತು ಪವನ್ ಕುಮಾರ್ ಗೆ ಗಂಭೀರ ಗಾಯವಾಗಿದೆ.ಗಾಯಾಳುಗಳಿಗೆ ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .1
- ಬೇವೂರಿನ ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಗೆ ಲ್ಯಾಪ್ ಟಾಪ್ ಕೊಡುಗೆ ಚನ್ನಪಟ್ಟಣ--ತಂತ್ರಜ್ಞಾನದ ಯುಗದಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಅವರಿಗೆ ಜಾಗತಿಕ ಮಟ್ಟದ ಶಿಕ್ಷಣ ತಲುಪಬೇಕು ಎಂಬ ಉದ್ದೇಶದಿಂದ, ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ಮಕ್ಕಳಿಗಾಗಿ ಉಚಿತ ಕಂಪ್ಯೂಟರ್ ಶಿಕ್ಷಣ" ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಶೇಷ ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ 'ಮಾ ಕಾಮಾಖ್ಯ ಇನೋವೇಟಿವ್ ಫೌಂಡೇಶನ್' ಸಂಸ್ಥಾಪಕ ಅಧ್ಯಕ್ಷರಾದ ದಿಲೀಪ್‌ಕುಮಾರ್ ಭಾರತಿ ಹಾಗೂ ಶ್ರೀಮತಿ ಅರ್ಚನ ದಿಲೀಪ್‌ಕುಮಾರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಅಗತ್ಯವಾದ ಲ್ಯಾಪ್ಟಾಪ್ ಅನ್ನು ಸಂಸ್ಥೆಯ ಕಾರ್ಯ ದರ್ಶಿಗಳಾದ ಬೇವೂರು ಯೋಗೀಶ್ ಗೌಡ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿ, ಉಚಿತ ಕಂಪ್ಯೂಟರ್ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.1
- ಗಣೇಶನ ವಿಗ್ರಹದ ಕಣ್ಣಿಂದ ಕಣ್ಣೀರು; ತಾಜಾಪುರದಲ್ಲಿ ಸಂಚಲನ ದೇವರ ಕೋಪ ಶಮನಕ್ಕೆ ಗ್ರಾಮಸ್ಥರಿಂದ ವಿಶೇಷ ಪೂಜೆ ಗಣೇಶನ ವಿಗ್ರಹದ ಕಣ್ಣಿಂದ ಕಣ್ಣೀರು; ತಾಜಾಪುರದಲ್ಲಿ ಸಂಚಲನ ದೇವರ ಕೋಪ ಶಮನಕ್ಕೆ ಗ್ರಾಮಸ್ಥರಿಂದ ವಿಶೇಷ ಪೂಜೆ1