Shuru
Apke Nagar Ki App…
ಕುವೈತ್ - ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಜಝೀರಾ ಏರ್‌ವೇಸ್‌ನ ವಿಶೇಷ ವಿಮಾನ ಹಾರಾಟ ಸೌಲಭ್ಯ ಕುವೈತ್ - ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಜಝೀರಾ ಏರ್‌ವೇಸ್‌ನ ವಿಶೇಷ ವಿಮಾನ ಹಾರಾಟ ಸೌಲಭ್ಯ ಎ.8ರಿಂದ ಆರಂಭವಾಗಲಿದೆ. ದಮಾಮ್ ಮೂಲಕ ಈ ವಿಮಾನ ಸಾಗಲಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ವಿಶೇಷ ವಿಮಾನಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಿದೆ. ಈ ವಿಮಾನಗಳು ಬುಧವಾರ ಮತ್ತು ರವಿವಾರ ಹಾರಾಟ ನಡೆಸಲಿವೆ. ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಸುಮಾರು 6 ಗಂಟೆಗಳ ಪ್ರಯಾಣವಾಗಿದ್ದು, ವಿಮಾನ ಜೆ 9 3417 ಸ್ಥಳೀಯ ಸಮಯ ಬೆಳಗ್ಗೆ 8:40 ಕ್ಕೆ ಕುವೈತ್‌ನಿಂದ ಹೊರಟು ದಮಾಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರನ್ನು ತಲುಪುತ್ತದೆ. ವಿಮಾನ ಜೆ 9 3418 ಮಂಗಳೂರಿನಿಂದ ಭಾರತೀಯ ಕಾಲಮಾನ 4: 55 ಕ್ಕೆ ಹೊರಟು ಸ್ಥಳೀಯ ಸಮಯ ಸಂಜೆ 7:40 ಕ್ಕೆ ಕುವೈತ್ ತಲುಪಲಿದೆ.
Shamsheer Budoli
ಕುವೈತ್ - ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಜಝೀರಾ ಏರ್‌ವೇಸ್‌ನ ವಿಶೇಷ ವಿಮಾನ ಹಾರಾಟ ಸೌಲಭ್ಯ ಕುವೈತ್ - ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಜಝೀರಾ ಏರ್‌ವೇಸ್‌ನ ವಿಶೇಷ ವಿಮಾನ ಹಾರಾಟ ಸೌಲಭ್ಯ ಎ.8ರಿಂದ ಆರಂಭವಾಗಲಿದೆ. ದಮಾಮ್ ಮೂಲಕ ಈ ವಿಮಾನ ಸಾಗಲಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ವಿಶೇಷ ವಿಮಾನಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಿದೆ. ಈ ವಿಮಾನಗಳು ಬುಧವಾರ ಮತ್ತು ರವಿವಾರ ಹಾರಾಟ ನಡೆಸಲಿವೆ. ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಸುಮಾರು 6 ಗಂಟೆಗಳ ಪ್ರಯಾಣವಾಗಿದ್ದು, ವಿಮಾನ ಜೆ 9 3417 ಸ್ಥಳೀಯ ಸಮಯ ಬೆಳಗ್ಗೆ 8:40 ಕ್ಕೆ ಕುವೈತ್‌ನಿಂದ ಹೊರಟು ದಮಾಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರನ್ನು ತಲುಪುತ್ತದೆ. ವಿಮಾನ ಜೆ 9 3418 ಮಂಗಳೂರಿನಿಂದ ಭಾರತೀಯ ಕಾಲಮಾನ 4: 55 ಕ್ಕೆ ಹೊರಟು ಸ್ಥಳೀಯ ಸಮಯ ಸಂಜೆ 7:40 ಕ್ಕೆ ಕುವೈತ್ ತಲುಪಲಿದೆ.
More news from ಕರ್ನಾಟಕ and nearby areas
- ದಿನಾಂಕ 04.04.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಕುಡುಪು ಫೀಡರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಕುಡುಪು, ರಥಬೀದಿ, ಮುಂಡ್ರೆಲ್ಲಾ, ಪಿಲಿಕುಮೇರು, ಕುಡುಪು ನಡುಮನೆ, ಕುಡುಪು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- *ಭಾರತ ನಲ್ಲಿ ವೈರಲ್*1
- Post by Mayur TV Hangal YouTube c1
- ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಶ್ರೀರಾಮುಲು, ಹದಡಿ ಹಾಗೂ ಹೂಸನಾಯಕನಹಳ್ಳಿ ,ಕೈದಾಳ ಗ್ರಾಮದಲ್ಲಿ ಅದ್ದೂರಿ ಪ್ರಚಾರ ಆರಂಭಿಸಿದರು. ಈ ವೇಳೆ ಸ್ಥಳಿಯರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ನವರನ್ನು ಹಾಗೂ ಆರ್ ಅಶೋಕ್ ಶ್ರೀರಾಮುಲು ರವರಿಗೆ ಬೃಹತ್ ಗಾತ್ರದ ಆಪಲ್ ಆರ್ ಹಾಕುವ ಮೂಲಕ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಶುಭವಾಗಲಿ ಎಂದು ಹಾರೈಸಿದರು... ಈ ಸಂದರ್ಭದಲ್ಲಿ ಹರಿಹರದ ಶಾಸಕ ಬಿಪಿ ಹರೀಶ್ ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಸಿಮೆಂಟ್ ರವಿಕುಮಾರ್, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಯಶವಂತ ರಾವ್ ಜಾಧವ್ , ಬಿ, ರಾಜನಹಳ್ಳಿ ಶಿವಕುಮಾರ್, ಬಿಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕೊಳೆನಹಳ್ಳಿ ಸತೀಶ್ ಜಿ.ಬಿ ವಿನಯ್ ಕುಮಾರ್, ಎಸ್, , ಶಿವನಹಳ್ಳಿ ರಮೇಶ್ ,ಸೇರಿದಂತೆ. ಜೆಡಿಎಸ್ ಜಿಲ್ಲಾ ಬಿಜೆಪಿ ನಾಯಕರು ವಾರ್ಡ್ ಸದಸ್ಯರ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರು. ಬಿಜೆಪಿ ಮುಖಂಡರು ಸದಸ್ಯರು ಸ್ಥಳಿಯರು ಇದ್ದರೂ1
- ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಉದ್ಯಾನವನದಲ್ಲಿ ಆಯೋಜಿಸಲಾದ ಉಚಿತ ಬಾಡಿಫೈ ಥೆರಪಿ ಶಿಬಿರಕ್ಕೆ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶ್ರೀಮತಿ ಅಕ್ಕಮ್ಮಣ್ಣಿ ಉದ್ಯಾನವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಬಾಡಿಫೈ ಥೆರಪಿ ಸಂಸ್ಥೆಯ ಸಹಯೋಗದಲ್ಲಿ 10 ದಿನಗಳ ಉಚಿತ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 27 ರಂದು ಆರಂಭವಾದ ಈ ಶಿಬಿರವು ಏಪ್ರಿಲ್ 5 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ. ಔಷಧಿ ರಹಿತ ವಿಧಾನದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮಾಂಸಖಂಡಗಳ ಸೆಳೆತ ನಿವಾರಣೆ, ರಕ್ತ ಪರಿಚಲನೆಯನ್ನು ಸುಧಾರಿಸುವುದು ಹಾಗೂ ನರಗಳಿಗೆ ಸಂಬಂಧಿಸಿದ ಸರಳ ಮತ್ತು ದೀರ್ಘಕಾಲಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ, ಪಾದ ಉರಿ, ಅಧಿಕ ರಕ್ತದೊತ್ತಡ, ಸಂಧಿವಾತ, ಕುತ್ತಿಗೆ ನೋವು, ಮಂಡಿನೋವು, ಸೊಂಟನೋವು, ಭುಜದ ನೋವು, ಸ್ನಾಯು ಸೆಳೆತ, ಸ್ಪಾಂಡಿಲೈಟಿಸ್, ಸಯಾಟಿಕ್, ಪಾರ್ಶ್ವವಾಯು, ಪಾರ್ಕಿನ್ಸನ್, ನಿದ್ರಾಹೀನತೆ, ನರಗಳ ಸಮಸ್ಯೆ ಹಾಗೂ ಥೈರಾಯ್ಡ್ ಸಂಬಂಧಿತ ತೊಂದರೆಗಳಿಗೆ ಈ ಥೆರಪಿ ಪರಿಣಾಮಕಾರಿ ಎಂದು ಆಯೋಜಕರು ತಿಳಿಸಿದ್ದಾರೆ. ಕೆವಲ 25 ನಿಮಿಷಗಳ ಥೆರಪಿಯಿಂದ ಸುಮಾರು 5 ಕಿಲೋಮೀಟರ್ ನಡೆದುಕೊಂಡಷ್ಟು ರಕ್ತಸಂಚಾರ ಹೆಚ್ಚಾಗುತ್ತದೆ ಎಂಬುದು ವಿಶೇಷವಾಗಿದೆ. ಶಿಬಿರ ಆರಂಭವಾದ ಕೆಲವೇ ದಿನಗಳಲ್ಲಿ ನೂರಾರು ನಾಗರಿಕರು ಭಾಗವಹಿಸಿ ಆರೋಗ್ಯ ಪ್ರಯೋಜನ ಪಡೆದುಕೊಂಡಿದ್ದಾರೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಶಿಬಿರದಲ್ಲಿ ಭಾಗವಹಿಸದವರು ಏಪ್ರಿಲ್ 5 ರೊಳಗೆ ಅಕ್ಕಮ್ಮಣ್ಣಿ ಉದ್ಯಾನವನಕ್ಕೆ ಭೇಟಿ ನೀಡಿ ಉಚಿತ ಥೆರಪಿ ಸೇವೆಯನ್ನು ಪಡೆಯಬಹುದು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.1
- Post by Suresh Belagere1
- ಶಿಗ್ಗಾವಿ: ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾಜಪ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಭರತ ಬೊಮ್ಮಾಯಿ ಕ್ರಿಕೆಟ್ ಟ್ರೋಫಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು ದುಶ್ಚಟಗಳಿಗೆ ಬಲಿಯಾಗದೇ ಯುವಕರನ್ನು ಕ್ರೀಡೆಗಳತ್ತ ಸೆಳೆದು ಸದೃಢ ಆರೋಗ್ಯ ಹೊಂದಲು ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಲು ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭರತ ಬೊಮ್ಮಾಯಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಸ್ತಿಕ ಕ್ರಿಕೇಟ್ ಕ್ಲಬ್ ಶಿಗ್ಗಾವಿ ತಂಡಕ್ಕೆ ೭೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ವನಹಳ್ಳಿ ಅಪ್ಪು ಬಾಯ್ಸ್ ಕ್ರಿಕೆಟ್ ಕ್ಲಬ್ ತಂಡಕ್ಕೆ ೪೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಅಲ್ಲದೇ ವೈಯಕ್ತಿಕ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ. ಸಂಕನೂರ, ವಿಶ್ವನಾಥ ಹರವಿ, ಅನಿಲ ಸಾತಣ್ಣವರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಸಚಿನ ಮಡಿವಾಳರ, ಚೇತನ ಕಲಾಲ, ಸಂತೋಷ ಸುಭೇದಾರ ಸೇರಿದಂತೆ ಕ್ರೀಡಾಭಿಮಾನಿಗಳು, ಭರತ ಬೊಮ್ಮಾಯಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.1
- ಚಿನ್ನಾಭರಣ ಖರೀದಿಸುವ ಸೋಗಿನಲ್ಲಿ ಜ್ಯುವೆಲ್ಲರಿ ಮಳಿಗೆಯೊಂದಕ್ಕೆ ಬಂದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಆಭರಣ ವೀಕ್ಷಿಸಿ ಚಿನ್ನದ ಬಳೆಯೊಂದನ್ನು ಕಳವು ಮಾಡಿದ ಘಟನೆ ವರದಿಯಾಗಿದೆ. ಇಲ್ಲಿನ ಹೆಗ್ಡೆ ಆರ್ಕೆಡ್‌ನಲ್ಲಿರುವ ಜ್ಯುವೆಲ್ಲರ್ಸ್ ವೊಂದರಲ್ಲಿ ಘಟನೆ ನಡೆದಿದೆ. ಮಾಲಕ ಕೃಷ್ಣತ್ ನಾಮದೇವ್ ಸುರ್ವೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ1