ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಭರತ್ ಬೊಮ್ಮಾಯಿ ಶಿಗ್ಗಾವಿ: ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾಜಪ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಭರತ ಬೊಮ್ಮಾಯಿ ಕ್ರಿಕೆಟ್ ಟ್ರೋಫಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು ದುಶ್ಚಟಗಳಿಗೆ ಬಲಿಯಾಗದೇ ಯುವಕರನ್ನು ಕ್ರೀಡೆಗಳತ್ತ ಸೆಳೆದು ಸದೃಢ ಆರೋಗ್ಯ ಹೊಂದಲು ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಲು ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭರತ ಬೊಮ್ಮಾಯಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಸ್ತಿಕ ಕ್ರಿಕೇಟ್ ಕ್ಲಬ್ ಶಿಗ್ಗಾವಿ ತಂಡಕ್ಕೆ ೭೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ವನಹಳ್ಳಿ ಅಪ್ಪು ಬಾಯ್ಸ್ ಕ್ರಿಕೆಟ್ ಕ್ಲಬ್ ತಂಡಕ್ಕೆ ೪೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಅಲ್ಲದೇ ವೈಯಕ್ತಿಕ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ. ಸಂಕನೂರ, ವಿಶ್ವನಾಥ ಹರವಿ, ಅನಿಲ ಸಾತಣ್ಣವರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಸಚಿನ ಮಡಿವಾಳರ, ಚೇತನ ಕಲಾಲ, ಸಂತೋಷ ಸುಭೇದಾರ ಸೇರಿದಂತೆ ಕ್ರೀಡಾಭಿಮಾನಿಗಳು, ಭರತ ಬೊಮ್ಮಾಯಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಭರತ್ ಬೊಮ್ಮಾಯಿ ಶಿಗ್ಗಾವಿ: ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕಾದರೆ ಕ್ರೀಡೆಯಲ್ಲಿ ಸೋಲು, ಗೆಲುವುಗಳು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾಜಪ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಭರತ ಬೊಮ್ಮಾಯಿ ಕ್ರಿಕೆಟ್ ಟ್ರೋಫಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು ದುಶ್ಚಟಗಳಿಗೆ ಬಲಿಯಾಗದೇ ಯುವಕರನ್ನು ಕ್ರೀಡೆಗಳತ್ತ ಸೆಳೆದು ಸದೃಢ ಆರೋಗ್ಯ ಹೊಂದಲು ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಲು ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭರತ ಬೊಮ್ಮಾಯಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ವಸ್ತಿಕ ಕ್ರಿಕೇಟ್ ಕ್ಲಬ್ ಶಿಗ್ಗಾವಿ ತಂಡಕ್ಕೆ ೭೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ವನಹಳ್ಳಿ ಅಪ್ಪು ಬಾಯ್ಸ್ ಕ್ರಿಕೆಟ್ ಕ್ಲಬ್ ತಂಡಕ್ಕೆ ೪೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಅಲ್ಲದೇ ವೈಯಕ್ತಿಕ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ. ಸಂಕನೂರ, ವಿಶ್ವನಾಥ ಹರವಿ, ಅನಿಲ ಸಾತಣ್ಣವರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಸಚಿನ ಮಡಿವಾಳರ, ಚೇತನ ಕಲಾಲ, ಸಂತೋಷ ಸುಭೇದಾರ ಸೇರಿದಂತೆ ಕ್ರೀಡಾಭಿಮಾನಿಗಳು, ಭರತ ಬೊಮ್ಮಾಯಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
- ಅಥಣಿಯಲ್ಲಿ ನರಕಸದೃಶ ಸ್ಥಿತಿ: ಶೌಚಾಲಯ ಅರ್ಧಕ್ಕೆ ಸ್ಥಗಿತ, ಸಾರ್ವಜನಿಕರ ಆಕ್ರೋಶ! #85newsboxkannada #kannadanewslive1
- ಸೊರಬ: ಸುರಭಿ ಜ್ಯುವೆಲ್ಲರಿ ಫೆಡರೇಷನ್ ಸೊರಬ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ದೊಡ್ಡಮನೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊರಬ ಪಟ್ಟಣದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಚಿನ್ನ-ಬೆಳ್ಳಿ ವ್ಯಾಪಾರಸ್ಥರು, ಮಾರಾಟಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸುರಭಿ ಜ್ಯುವೆಲ್ಲರಿ ಫೆಡರೇಷನ್ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಧುರಾಯ್ ಜಿ ಶೇಟ್, ಮಂಜುನಾಥ್ ಶೇಟ್, ರಾಮಕೃಷ್ಣ ಶೇಟ್, ಉಪಾಧ್ಯಕ್ಷರಾಗಿ ಪವನ್, ಸಚಿನ್, ಮೌನೇಶ್, ಗಿರೀಶ್ ಶೇಟ್, ಪ್ರಧಾನ ಕಾರ್ಯದರ್ಶಿಯಾಗಿ ಮರಿ ಶೇಟ್, ರಾಜು ಗೌರಿ ಜುವೆಲರಿ ವರ್ಕ್ಸ್, ಕಾರ್ಯದರ್ಶಿಗಳಾಗಿ ಭೂಷಣ್, ಪ್ರಶಾಂತ್ ಕುಮಾರ್ ದೊಡ್ಮನೆ. ವಿಜಯ್ ಯಶೋಧರ್ ಜುವೆಲ್ಲರಿ, ಖಜಾಂಚಿಯಾಗಿ ಗೋಪಾಲ್ ಶೇಟ್, ಸಹ ಖಜಾಂಚಿಗಳಾಗಿ ಗಜೇಂದ್ರ, ಸಂಜಯ್ ಕಾಳಿಕಾಂಬ ಜುವೆಲ್ಲರ್ಸ್, ಮಾಧ್ಯಮ ಸಲಹೆಗಾರರಾಗಿ ಎಸ್.ಜಿ ರಾಮಚಂದ್ರ ಸುರಭಿವಾಣಿ, ಕಾನೂನು ಸಲಹೆಗಾರಾಗಿ ವಕೀಲರಾದ ಬಂಗಾರಪ್ಪ, ಮಾಲತೇಶ್, ಪ್ರವೀಣ್ ಕುಮಾರ್ ದೊಡ್ಮನೆ ಹಾಗೂ ನಿರ್ದೇಶಕರಾಗಿ ವಸಂತ, ಸುರೇಂದ್ರ ಆನಂದ ಮಹಾಲಸ ಜ್ಯುವೆಲರಿ, ಲಕ್ಷ್ಮಿನಾರಾಯಣ, ಶ್ರೀನಿವಾಸ, ವಿಶ್ವ, ರಾಜಣ್ಣ, ರಾಮನಾಥ, ಸದಸ್ಯರಾಗಿ ಚಂದ್ರು, ಶ್ರೀಧರ್ ಮಂಜುನಾಥ್, ಕರಡಿಗೆರೆ ಶೆಟ್ರು ವಸಂತ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ದೊಡ್ಡಮನೆ ಮಾತನಾಡಿ ಪ್ರತಿದಿನ ಚಿನ್ನದ ದರದ ಏರಿಳಿತದಿಂದ ನಿರಂತರವಾಗಿ ಬಂಗಾರದ ಅಂಗಡಿಯ ಮೇಲೆ ದೌರ್ಜನ್ಯವಾಗುವ ನಿಟ್ಟಿನಲ್ಲಿ ಹಾಗೂ ಬಂಗಾರದ ಅಂಗಡಿಗಳ ಹಿತವನ್ನು ಕಾಯುವ ನಿಟ್ಟಿನಲ್ಲಿ, ಬಂಗಾರದ ಕೆಲಸ ಮಾಡುವ ಕೆಲಸಗಾರರ ಹಿತವನ್ನು ಕಾಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲಾಗುವದು. ಹಾಗೂ ಸೊರಬದಲ್ಲಿ ಒಂದೇ ಬಂಗಾರದ ದರ ನಿಗದಿ ಮಾಡುವ ನಿಟ್ಟಿನಲ್ಲಿ ಈ ಸಂಘ ಬದ್ಧವಾಗಿರುತ್ತದೆ. ಎಲ್ಲಾ ಬಂಗಾರದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು. ಗುರುತು ಪರಿಚಯ ಇರುವ ಹಾಗೂ ಕಡ್ಡಾಯವಾಗಿ ಬಿಲ್ಲನ್ನು ಇರುವ ಗ್ರಾಹಕರಿಗೆ ಮಾತ್ರ ಗಿರವಿಯನ್ನು ಕೊಡಬೇಕೆಂದು ತಿಳಿಸಿದರು3
- ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.1
- ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಉಪಚುನಾವಣೆ ಇದೀಗ ತೀವ್ರ ಹಂತ ತಲುಪಿದೆ. ಶಾಸಕ ಎಚ್. ವೈ. ಮೇಟಿ ಅವರ ಅಕಾಲಿಕ ನಿಧನದ ನಂತರ ನಡೆಯುತ್ತಿರುವ ಈ ಬೈಎಲೆಕ್ಷನ್‌ನಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಖಾಡಕ್ಕಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಭ್ಯರ್ಥಿಯಾಗಿ ಬಲಿಷ್ಠ ಸವಾಲು ಒಡ್ಡಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಪ್ರಶ್ನೆ: ಅನುಕಂಪ ಗೆಲ್ಲುತ್ತಾ ಅಥವಾ ಅಭಿವೃದ್ಧಿ ಗೆಲ್ಲುತ್ತಾ. ಕೆಲವರು ಅಭಿವೃದ್ಧಿ ವಿಚಾರದಲ್ಲಿ ಚರಂತಿಮಠ ಪರ ಮಾತು ಮತ್ತೊಂದೆಡೆ ಮಹಿಳೆಯರು ‘ಗೃಹ ಲಕ್ಷ್ಮಿ’ ಯೋಜನೆಯ ಆಧಾರದ ಮೇಲೆ ಕಾಂಗ್ರೆಸ್ ಪರ ಒಲವು ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆದಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ವಿಡಿಯೋ ಇಷ್ಟವಾದರೆ Like ಮಾಡಿ ಇನ್ನಷ್ಟು ನಿಖರ ಸುದ್ದಿಗಳಿಗೆ Subscribe ಮಾಡಿ – ಭೀಮ ಹೆಜ್ಜೆ ನ್ಯೂಸ್, ಬಾಗಲಕೋಟೆ..1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲದ ಜೋಶಿಗಲ್ಲಿಯನ ಹನುಮಂತ ದೇವಸ್ಥಾನಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದರ್ಶನವನ್ನು ಪಡೆದುಕೊಂಡರು. ಶಾಸಕರನ್ನು ದೇವಸ್ಥಾನ ಜಿರ್ಣೋದ್ಧಾರ ಸಮಿತಿ ವತಿಯಿಂದ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಸುಶೀಲ ಕಾಖಂಡಕಿ, ನಗರಸಭೆ ಮಾಜಿ ಸದಸ್ಯ ಮೌಲೇಶಬಂಡಿವಡ್ಡರ, ಹಾಗೂ ವಾರ್ಡಿನ ಗುರು ಹಿರಿಯರು ಯುವಕರು ಇದ್ದರು.2
- ಸರ್ಕಾರಿ ಆಸ್ಪತ್ರೆಗೆ ಮಹಿಳಾ ಆಯೋಗ ಅಧ್ಯಕ್ಷ್ಯ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ: ರೋಗಿಗಳು ಗರ್ಭಿಣಿ ಬಾಣಂತಿಯರೊಂದಿಗೆ ಸಂವಾದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರೊಂದಿಗೆ ಸಂವಾದ ನಡೆಸಿ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಅಥಣಿ ಸರ್ಕಾರಿ ಆಸ್ಪತ್ರೆಯು ಅತ್ಯಂತ ಸ್ವಚ್ಛವಾಗಿದ್ದು, ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಇಲ್ಲಿ ತಿಂಗಳಿಗೆ 300 ರಿಂದ 400 ಹೆರಿಗೆಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ ರೋಗಿಗಳು ಹಾಗೂ ಸಾರ್ವಜನಿಕರು ಇಲ್ಲಿನ ವೈದ್ಯರ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಕುಡಿಯುವ ನೀರು ಹಾಗೂ ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ನೂತನವಾಗಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿಯನ್ನು ಶ್ಲಾಘಿಸಿದರು. *ಸರ್ಕಾರಿ ಯೋಜನೆಗಳ ಮಾಹಿತಿಯ ಕೊರತೆ: ಅಸಮಾಧಾನ* ಆಸ್ಪತ್ರೆಯ ಉತ್ತಮ ಸೇವೆಯ ನಡುವೆಯೂ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. "ಜನರಿಗೆ ಯೋಜನೆಗಳ ಮಾಹಿತಿ ಸಿಗದಿರುವುದು ವಿಷಾದನೀಯ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚಿಸುತ್ತೇನೆ, ಎಂದ ಅವರು, ಸ್ಥಳದಲ್ಲಿದ್ದ ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಅವರಿಗೆ ಆಸ್ಪತ್ರೆಯ ಆವರಣದಲ್ಲಿ ಮಾಹಿತಿ ಫಲಕಗಳನ್ನು (ಡಿಸ್‌ಪ್ಲೇ) ಅಳವಡಿಸಲು ಸೂಚನೆ ನೀಡಿದರು. *ದುಡ್ಡು ಪಡೆಯುವ ಆರೋಪಕ್ಕೆ ಪ್ರತಿಕ್ರಿಯೆ* ಹೆರಿಗೆಗೆ ಹಣ ಪಡೆಯುತ್ತಾರೆ ಎಂಬ ಆರೋಪಗಳ ಕುರಿತು ಉತ್ತರಿಸಿದ ಅವರು, "ನಾನು ಅನೇಕ ಬಾಣಂತಿಯರಿಗೆ ವಿಚಾರಿಸಿದ್ದೇನೆ, ಯಾರೂ ಕೂಡ ಹಣ ನೀಡಿದ್ದಾಗಿ ದೂರು ನೀಡಿಲ್ಲ. ವೈದ್ಯರ ಮೇಲೆ ಆರೋಪ ಮಾಡುವಾಗ ಸೂಕ್ತ ಸಾಕ್ಷ್ಯಗಳಿರಬೇಕು. ಇಲ್ಲದಿದ್ದರೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನೈತಿಕ ಸ್ಥೈರ್ಯ ಕುಗ್ಗುತ್ತದೆ. ಒಂದು ವೇಳೆ ಸಾಕ್ಷ್ಯಧಾರಿತ ದೂರುಗಳಿದ್ದರೆ ಖಂಡಿತವಾಗಿಯೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲು ತಿಳಿಸುವುದಾಗಿ ," ಸ್ಪಷ್ಟಪಡಿಸಿದರು. ಶೌಚಾಲಯ ದುರಸ್ತಿ: ಆಸ್ಪತ್ರೆಯ ಶೌಚಾಲಯಗಳಲ್ಲಿನ ಸಿಂಕ್‌ಗಳು ಬಂದ್ ಆಗಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದರು. ಔಷಧಿಗಳ ಲಭ್ಯತೆ: ಕೆಲವರು ಹೊರಗಿನ ಔಷಧಿ ಬರೆಯುತ್ತಿದ್ದಾರೆ ಎಂದು ದೂರಿದ್ದಾರೆ. ಅನುದಾನದ ಕೊರತೆಯಿಂದ ಕೆಲವು ಔಷಧಿಗಳ ಕೊರತೆ ಇರಬಹುದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.1
- ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ದ ಶಿವಶರಣರ ಮಠದ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ರಥೋತ್ಸವ ಗುರುವಾರ ನಡೆಯಿತು. ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗೊಂಬೆ ಕುಣಿತ, ಡೊಳ್ಳು, ಕರಡಿಮಜಲಿನ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ನಂತರ ಸಂಜೆ 6.30ಗಂಟೆಗೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನಡೆಯಿತು. ಜಾತ್ರಾಮಹೋತ್ಸವದಲ್ಲಿ ಆಳಂದದ ಶಿವಶರಣಮಠದ ಚನ್ನಬಸವ ಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ದ ಶಿವಶರಣರು, ನೀರಲಕೇರಿಯ ಘನಲಿಂಗ ಮಹಾಸ್ವಾಮಿಗಳು, ಸೋಮಯ್ಯ ಶಾಸ್ತ್ರೀಗಳು, ಗುರಪ್ಪಗೌಡ ಪಾಟೀಲ, ಲಕ್ಷ್ಮಣ ದಡ್ಡಿ, ಬಿ.ಬಿ.ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ರಾಮಸ್ವಾಮಿ, ಮಲ್ಲಿಕಾರ್ಜುನ ಸೂಡಿ, ನಾಗೇಶ ಸಿದ್ದಣ್ಣವರ, ಪುರುಷೋತ್ತಮ ಗಂಡಿ,ನಾರಾಯಣಪ್ಪ ಚಿತ್ರಗಾರ, ಬಸವಂತಪ್ಪ, ಶರಣಪ್ಪ ದಿಂಡಿ, ಬಸಪ್ಪ ದಿಂಡಿ, ಸಂಗಪ್ಪ ರಕ್ಕಸಗಿ,ಮೇಟಿ ಸೇರಿದಂತೆ ಗುಳೇದಗುಡ್ಡ ಕೋಟೆಕಲ್, ಪರ್ವತಿ, ಚೌಡಾಪುರ, ಶಿರೂರು, ಹಳ್ಳೂರು, ಆಚನೂರ, ಸೀತಿಮನಿ, ಹುಲಸಗೇರಿ, ಜಮ್ಮನಕಟ್ಟಿ ಲಕ್ಕಸಕೊಪ್ಪ, ಸುರಳಿಕಲ್ಲ, ಸಂಗಾಪೂರ, ಮಂಗಳಗುಡ್ಡ, ಯಂಕಂಚಿ ಮಣಿನಾಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.1
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1