ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ: ಸಿಎಂ ಬದಲಾವಣೆ ಕುರಿತು ಲಕ್ಷ್ಮೇಶ್ವರದಲ್ಲಿ ಡಿ.ಕೆ. ಶಿವಕುಮಾರ್ ಮಾರ್ಮಿಕ ನುಡಿ ಲಕ್ಷ್ಮೇಶ್ವರ (ಗದಗ): "ನಾನು ಕುಳಿತಿರುವ ಈ ಜಾಗದಲ್ಲಿ ವಿಶೇಷ ಶಕ್ತಿಯಿದೆ. ಸಮಯ ಬರಲಿ, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ" ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸುಕ್ಷೇತ್ರ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಅವರು, ಲಿಂಗೈಕ್ಯ ರಂಭಾಪುರಿ ವೀರಗಂಗಾಧರ ಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮುಕ್ತಿಮಂದಿರದಲ್ಲಿ ಕೆಲ ಹೊತ್ತು ಧ್ಯಾನ ಮತ್ತು ಜಪದಲ್ಲಿ ತೊಡಗಿಸಿಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಗಂಗಾಧರ ಸ್ವಾಮಿಗಳ ತಪೋಭೂಮಿಯಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿರುವುದು ಮನಸ್ಸಿಗೆ ಶಾಂತಿ ನೀಡಿದೆ ಎಂದರು. ಮುಂದಿನ ಸಿಎಂ ಘೋಷಣೆ ಮತ್ತು ಅಭಿಮಾನದ ಉತ್ತುಂಗ: ಡಿ.ಕೆ. ಶಿವಕುಮಾರ್ ಅವರು ಪಟ್ಟಣದ ಮಹಾಕವಿ ಪಂಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ "ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೈ" ಎಂಬ ಘೋಷಣೆಗಳು ಮೊಳಗಿದವು. ಅಭಿಮಾನಿಗಳು ಬೃಹತ್ ಗುಲಾಬಿ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಹಾಕುವ ಮೂಲಕ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರ ಕಟ್ಟಾ ಅಭಿಮಾನಿ ನೀಲಪ್ಪ ಶೆರಸೂರಿ ಅವರು ಕಂಬಳಿ ಹೊದಿಸಿ, ಟಗರು ಮರಿಯನ್ನು ಕಾಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ ಕೇಂದ್ರಕ್ಕೆ ಟೀಕೆ: ಇದೇ ವೇಳೆ ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕದ ಕುರಿತು ಮಾತನಾಡಿದ ಡಿಕೆಶಿ, ಈ ವಿಧೇಯಕಕ್ಕೆ ಎದುರಾದ ಹಿನ್ನಡೆಯು 'ಇಂಡಿಯಾ' ಮೈತ್ರಿಕೂಟದ ಗೆಲುವಾಗಿದೆ ಎಂದು ಬಣ್ಣಿಸಿದರು. ಮಹಿಳಾ ಮೀಸಲಾತಿ ನೆಪದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳನ್ನು ಕುಗ್ಗಿಸಿ ಉತ್ತರ ಭಾರತದ ಸ್ಥಾನಗಳನ್ನು ಹೆಚ್ಚಿಸುವ ಬಿಜೆಪಿ ಸಂಚಿಗೆ ಮುಖಭಂಗವಾಗಿದೆ. ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಂಗ್ರೆಸ್ ಪಕ್ಷದ ಕನಸಿನ ಕೂಸಾಗಿದ್ದು, ನಾವು ಅದರ ಪರವಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ತಂದಿರುವ ಈ ವಿಧೇಯಕದ ಸಮಯ ಸರಿಯಿಲ್ಲ ಎಂದು ಅವರು ಕಿಡಿಕಾರಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

- ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.1
- ಕುಂದಗೋಳ: ತಾಲ್ಲೂಕಿನ ಗ್ರಾಮೀಣ ಹಾಗೂ ಬಡ ಬಾಣಂತಿಯರಿಗೆ ಹೆರಿಗೆಯ ನಂತರ ಸುಲಭವಾಗಿ ಮನೆಗೆ ತಲುಪಲು ಅನುಕೂಲವಾಗುವಂತೆ ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸತೀಶ ಕೊಬ್ಬಯ್ಯನವರ ತಾಯಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು ರಿಬ್ಬನ್ ಕತ್ತರಿಸುವ ಮೂಲಕ ಈ ನೂತನ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ ಪಂ ಉಪಾಧ್ಯಕ್ಷರಾದ ಪ್ರೇಮಾ ಕೊಬ್ಬಯ್ಯನವರು, ತಮ್ಮ ಮಗನ ಹುಟ್ಟುಹಬ್ಬದ ಸವಿನೆನಪಿಗಾಗಿ ಆಡಂಬರದ ಆಚರಣೆಗಳಿಗೆ ಮೊರೆ ಹೋಗದೆ, ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ವಾಹನವನ್ನು ಉಡುಗೊರೆಯಾಗಿ ನೀಡಲಾಗಿದೆ. ಹೆರಿಗೆಯ ನಂತರ ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆ ಸೇರಲು ಈ ಸೌಲಭ್ಯ ಆಸರೆಯಾಗಲಿದ್ದು, ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತೋಶ್ರೀ ಫೌಂಡೇಶನ್ ಸಂಸ್ಥಾಪಕರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರು ಮಾತನಾಡಿ, ತಾಲ್ಲೂಕಿನಲ್ಲಿ ಸಾರಿಗೆ ಬಸ್ಸುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಹೆರಿಗೆಯಾದ ಮಹಿಳೆಯರಿಗೆ ಪ್ರಯಾಣಿಸಲು ತೀವ್ರ ತೊಂದರೆಯಾಗುತ್ತಿತ್ತು. ಬಾಣಂತಿಯರ ಈ ಕಷ್ಟವನ್ನು ಅರಿತು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಈ ವಾಹನವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಹನ ಬುಕ್ಕಿಂಗ್‌ಗಾಗಿ 7022430691 ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ವೈದ್ಯರಾದ ವಿಜಯ ಮಾತನಾಡಿ. ತಾಲ್ಲೂಕು ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಮಹಿಳೆಯರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ಇಂತಹ ಸೇವೆ ನೀಡಿದ ಮಾತೃಶ್ರೀ ಪೌಂಡೇಶನ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕಾರ್ಯಕ್ರಮದಲ್ಲಿ ಪೌಂಡೇಶನ ಅಧ್ಯಕ್ಷರಾದ ರಾಘವೇಂದ್ರ ಕಡೆಮನಿ, ಗಾಂಧಿ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಸ್ವಾಮಿ ಬಾಳಿಹಳ್ಳಿಮಠ, ವೀರುಪಾಕ್ಷೀ ಹಂಚನಾಳ, ವೀರಯ್ಯ ಶಿರೂರ, ಚನ್ನಬಸಪ್ಪ ಕಾಳೆ, ಮಂಜುನಾಥ ಕಟಗಿ, ಗುರು ಚಲವಾದಿ, ಮುತ್ತಪ್ಪ ಕಟಗಿ, ದೇವಪ್ಪ ಕಾಳಿ, ಮಂಜು ಪೂಜಾರ, ನಾಗರಾಜ ತಾಬ್ರಗುಂಡಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- Post by Nitin 9071795156 press reporte1
- ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,1
- ಭಾಲ್ಕಿಯಲ್ಲಿ ಬೃಹತ್ ಆರೋಗ್ಯ ಶಿಬಿರ: 180 ಜನರಿಗೆ ತಪಾಸಣೆ, 101 ಯುವಕರಿಂದ ರಕ್ತದಾನ ಆರೋಗ್ಯವೇ ಭಾಗ್ಯ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಾನವೀಯತೆಯ ಮೆರಗು; 101 ಯುನಿಟ್ ರಕ್ತ ಸಂಗ್ರಹ #JB_News_Kannada1
- *ರಾಯಬಾಗದಲ್ಲಿ ಬಸವ ಜಯಂತಿಯ ಹಳ್ಳಿ ಸೊಬಗು: ಶಿಕ್ಷಣ ಪ್ರೇಮಿ ಪಾಟೀಲ ಪರಿವಾರದ ಜನಸೇವೆಗೆ ಸಾಕ್ಷಿಯಾದ ಶೋಭಾಯಾತ್ರೆ* ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ನಿಮಿತ್ತ ಇಂದು ರಾಯಬಾಗ ಪಟ್ಟಣ ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲಿತು. ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಹಳ್ಳಿಯ ಸೊಬಗನ್ನು ಮರುಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯಿತು. ಹಿಂದೂ ಧರ್ಮದಲ್ಲಿ ಬಸವಣ್ಣ ಅಥವಾ ನಂದಿ ಎಂದು ಪೂಜಿಸಲ್ಪಡುವ ಸುಮಾರು 170ಕ್ಕೂ ಹೆಚ್ಚು ಎತ್ತುಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಸಾಲು ಸಾಲಾಗಿ ಸಾಗುತ್ತಿದ್ದ ಈ ಎತ್ತುಗಳ ಗಾಂಭೀರ್ಯವು ಗ್ರಾಮೀಣ ಸೊಬಗನ್ನು ಎತ್ತಿ ತೋರಿಸುವಂತಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಕಂಗೊಳಿಸುತ್ತಿದ್ದ ಬಸವಣ್ಣನವರ ಬೃಹತ್ ಪುತ್ಥಳಿಯು ಭಕ್ತರ ಪಾಲಿಗೆ ದರ್ಶನ ಭಾಗ್ಯವನ್ನೇ ನೀಡಿತು. ರಾಯಬಾಗದ ಇತಿಹಾಸದಲ್ಲಿ ವಸಂತರಾವ್ ಪಾಟೀಲ್ ಅವರ ಕುಟುಂಬದ ಹೆಸರು ಅಚ್ಚಳಿಯದಂತದ್ದು. ಅಜ್ಜನ ಕಾಲದಿಂದಲೂ ಬಡವರಿಗೆ ಅಕ್ಷರ ದಾಸೋಹ ಮಾಡುತ್ತಾ ಬಂದಿರುವ ಈ ಕುಟುಂಬ, ಸಾವಿರಾರು ಜನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ. ಇಂದಿಗೂ ಶಿಕ್ಷಣ ಪ್ರೇಮಿಯಾಗಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿರುವ ವಸಂತರಾವ್ ಪಾಟೀಲ್ ಅವರ ಸರಳತೆ ಎಲ್ಲರಿಗೂ ಮಾದರಿ. ಈ ಮೆರವಣಿಗೆಯ ವಿಶೇಷ ಆಕರ್ಷಣೆಯೆಂದರೆ, ಹಿರಿಯರು ಮತ್ತು ಯುವಕರ ಹೃದಯದಲ್ಲಿ ಸ್ಥಾನ ಪಡೆದಿರುವ ಯುವ ನಾಯಕ ಪ್ರಣಯ್ ಅಣ್ಣ ಪಾಟೀಲ್ ಅವರ ಮೇಲಿನ ಅಭಿಮಾನ. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಭಾವಚಿತ್ರವನ್ನು ಎತ್ತುಗಳ ಮೇಲೆ ಕಲಾತ್ಮಕವಾಗಿ ಬಿಡಿಸಿದ್ದು, ಜನರ ವಿಶೇಷ ಗಮನ ಸೆಳೆಯಿತು. "ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ಹಿರಿಯರು ಒಂದೆಡೆಯಾದರೆ, ಸಮಾಜ ಸೇವೆಯ ಮೂಲಕ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಪ್ರಣಯ್ ಅಣ್ಣ ಪಾಟೀಲ್ ಅವರ ನಾಯಕತ್ವ ರಾಯಬಾಗಕ್ಕೆ ಹೆಮ್ಮೆ."1
- ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ. ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು. 2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.1