ಕಾಮಗಾರಿಗಳ ಬಿಲ್ಲ್ ಪಾವತಿಗಾಗಿ ಆಗ್ರಹಿಸಿ ಗುತ್ತಿಗೆದಾರರಿಂದ ಪ್ರತಿಭಟನೆ ಅಥಣಿ ಹೆಸ್ಕಾಂ ಕಚೇರಿಯಲ್ಲಿ ಕರ್ತವ್ಯಕ್ಕೆ ಬಾರದ ಅಧಿಕಾರಿ ಮತ್ತು ಸಿಬ್ಬಂದಿ..! ಸಾರ್ವಜನಿಕರಿಗೆ, ರೈತರಿಗೆ, ಗುತ್ತಿಗೆದಾರರಿಗೆ ತಪ್ಪದ ನಿತ್ಯ ಪರದಾಟ..! ಅಥಣಿ: ಇಲ್ಲಿನ ಹೆಸ್ಕಾಂ ವಿಭಾಗಿಯ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದೆ ವಿವಿಧ ವಿದ್ಯುತ್ ಕಾಮಗಾರಿಗಳನ್ನು ಕೈಗೊಂಡ ಗುತ್ತಿಗೆದಾರರಿಗೆ ಬಿಲ್ ಗಳಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗುತ್ತಿಲ್ಲ, ಕೂಡಲೇ ಖಾಯಂ ಅಧಿಕಾರಿಗಳನ್ನು, ಲೆಕ್ಕಾಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮಂಗಳವಾರ ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯುತ್ ಗುತ್ತಿಗೆದಾರರ ಸಂಘದ ಹಿರಿಯ ಸದಸ್ಯ ಭೀಮನಗೌಡ ಪಾಟೀಲ ಮಾತನಾಡಿ ಈ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ರೀತಿಯ ವಿದ್ಯುತ್ ಸೇವೆಗಳು ದೊರಕಲಿ ಎಂಬ ಉದ್ದೇಶದಿಂದ ಇಲ್ಲಿ ಹೆಸ್ಕಾಂ ಕಚೇರಿಯ ವಿಭಾಗೀಯ ಕಚೇರಿಯನ್ನು ಆರಂಭಿಸಲಾಗಿದ್ದು, ಆದರೆ ಇಲ್ಲಿ ಅನೇಕ ವರ್ಷಗಳಿಂದ ಖಾಯಂ ಅಧಿಕಾರಿಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆಗಳು ದೊರಕುತ್ತಿಲ್ಲ. ಹೆಚ್ಚುವರಿಯಾಗಿ ನೇಮಿಸಿರುವ ಅಧಿಕಾರಿಗಳು, ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಬರದೇ ಇರುವುದರಿಂದ ಸಾರ್ವಜನಿಕರಿಗೆ ಮತ್ತು ರೈತ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಇದರ ಜೊತೆಗೆ ವಿವಿಧ ವಿದ್ಯುತ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ ಪಾವತಿಗಾಗಿ ಕಳೆದ 5 ವರ್ಷಗಳಿಂದ ಪರದಾಡುತ್ತಿರುವ ಗುತ್ತಿಗೆದಾರರ ಕಡತಗಳು ಇನ್ನೂ ವಿಲೇವಾರಿ ಆಗುತ್ತಿಲ್ಲ. ಇಲ್ಲಿನ ಕಚೇರಿಯ ಲೆಕ್ಕಾಧಿಕಾರಿಗಳು ಕರ್ತವ್ಯಕ್ಕೆ ಬರುತ್ತಿಲ್ಲ, ಅವರನ್ನ ಕೂಡಲೇ ಬೇರಡಗೆ ವರ್ಗಾಯಿಸಿ ಇಲ್ಲಿ ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅನಿಲ ಒಡೆಯರ ಮಾತನಾಡಿ ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ದಕ್ಷ ಮತ್ತು ಖಾಯಂ ಅಧಿಕಾರಿಗಳು ಇಲ್ಲದೇ ಇರುವುದರಿಂದ ಇಲ್ಲಿನ ಸಿಬ್ಬಂದಿಗಳು ಕೂಡ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೊರಗಡೆ ಹೋಗುತ್ತಿದ್ದಾರೆ. ಇವರಿಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಸೇವೆಗಳು ಸಕಾಲಕ್ಕೆ ದೊರಕದೇ ದಿನನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿ ರಾಶಿ ರಾಶಿ ಕಡತಗಳು ವಿಲೇವಾರಿಯಾಗಲಿ ಬಾಕಿ ಉಳಿದುಕೊಂಡಿವೆ. ಈ ಬಗ್ಗೆ ಲಿಖಿತ ದೂರ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ನಮ್ಮ ಸಂಘದ ಗುತ್ತಿಗೆದಾರರ ಅನೇಕ ಕಡತಗಳು ಕಳೆದ ಐದು ವರ್ಷಗಳಿಂದ ವಿಳಂಬವಾಗಿವೆ. ಅವರು ವಿವಿಧಡೆ ಸಾಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಬಿಲ್ ಪಾವತಿಯಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಆದ್ದರಿಂದ ಈ ಹೋರಾಟ ಮಾಡುವುದು ನಮಗೆ ಅನಿವಾರ್ಯ ವಾಗಿದೆ. ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ವ್ಯವಸ್ಥಾಪಕರು ಕೂಡಲೇ ಇಲ್ಲಿ ಅಧಿಕಾರಿಗಳನ್ನು ನೇಮಿಸಬೇಕು, ನಮ್ಮ ಕಡತಗಳನ್ನು ಬೇಗನೆ ವಿಲೇವಾರಿ ಮಾಡಬೇಕು ಎಂದು ಅಗ್ರಹಿಸಿದರು. ಅಧಿಕಾರಿಗಳ ಭರವಸೆ : ಪ್ರತಿಭಟನೆ ತಾತ್ಕಾಲಿಕ ಅಂತ್ಯ ಅಥಣಿ ಹೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಗುತ್ತಿಗೆದಾರರು ನಡೆಸುತ್ತಿದ್ದ ಹೋರಾಟ ಸ್ಥಳಕ್ಕೆ ಕಚೇರಿಗೆ ಸಹಾಯಕ ಅಭಿಯಂತರ ಎ.ಎಸ್. ಮಾಕಾಣಿ ಆಗಮಿಸಿ ಪ್ರತಿಭಟನಾಕಾರರು ಸಮಸ್ಯೆಗಳನ್ನು ಆಲಿಸಿ ಕಚೇರಿಯಲ್ಲಿ ವಿವಿಧ ಕಾಮಗಾರಿಗಳ ಬಿಲ್ ಗಳಿಗೆ ಸಂಬಂಧಿಸಿದ ಕಡತಗಳ ವಿಲೆವಾರಿಗೆ ಈಗಾಗಲೇ ನಿಯೋಜನೆಗೊಂಡಿರುವ ಲೆಕ್ಕಾಧಿಕಾರಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸಕಾಲಕ್ಕೆ ಆಗಮಿಸದೆ ಇರುವುದರಿಂದ ಬಹಳ ತೊಂದರೆಯಾಗುತ್ತಿದೆ. ಈ ವಿಷಯವನ್ನು ಮೇಲಾಧಿಕಾರಗಳ ಗಮನಕ್ಕೆ ತಂದು ಒಂದೆರಡು ದಿನಗಳಲ್ಲಿ ಖಾಯಂ ಲೆಕ್ಕಾಧಿಕಾರಿಯನ್ನ ನೇಮಿಸಲಾಗುವುದು, ಕಚೇರಿಯ ಎಲ್ಲ ಸಿಬ್ಬಂದಿಗಳ ಸಭೆ ನಡೆಸಿ ಕಚೇರಿ ವೇಳೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತ ಎ. ಎಸ್. ಮಾಕಾಣಿ ಅವರ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದ ವಿದ್ಯುತ್ ಗುತ್ತಿಗೆದಾರರು ಒಂದೆರಡು ದಿನಗಳಲ್ಲಿ ಬೇರೆ ಲೆಕ್ಕಾಧಿಕಾರಿಗಳನ್ನು ನೇಮಿಸಿ ಕಡತಗಳನ್ನ ವಿಲೇವಾರಿ ಮಾಡಬೇಕು, ಮತ್ತೆ ವಿಳಂಬ ನೀತಿ ಅನುಸರಿಸಿದರೆ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆದರು. ಅಥಣಿ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಮತ್ತು ವಿದ್ಯುತ್ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ. ವಿದ್ಯುತ್ ಕಾಮಗಾರಿಗೆ ಸಂಬಂಧಿಸಿದ ಅನೇಕ ಕಡತಗಳು ವಿಲೇವಾರಿಯಾಗದೆ ವಿಳಂಬಗೊಂಡಿವೆ. ಕೂಡಲಿ ಇಲ್ಲಿನ ಕಚೇರಿಗೆ ಲೆಕ್ಕಾಧಿಕಾರಿಗಳನ್ನು ನೇಮಿಸಬೇಕು ಎಂದು ಜಗದೀಶ್ ಅವಟಿ, ಅಧ್ಯಕ್ಷರು, ವಿದ್ಯುತ್ ಗುತ್ತಿಗೆದಾರರ ಸಂಘ ಅಥಣಿಯವರು ಹೇಳಿದರು. ವಿದ್ಯುತ್ ಗುತ್ತಿಗೆದಾರರ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ನಿಯೋಜನೆಗೊಂಡಿರುವ ಲೆಕ್ಕಾಧಿಕಾರಿ ಕರ್ತವ್ಯಕ್ಕೆ ಗೈರಾಗುತ್ತಿರುವ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೂಡಲೇ ಖಾಯಂ ಲೆಕ್ಕಾಧಿಕಾರಿಯನ್ನು ಶೀಘ್ರದಲ್ಲಿಯೇ ನೇಮಿಸಿ ವಿಳಂಬವಾಗಿರುವ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಕೆಲವು ಅಧಿಕಾರಿಗಳು ವಿಚಾರಣೆ ನಿಮಿತ್ಯ ಹೊರಗಡೆ ಹೋಗಿರುತ್ತಾರೆ, ಇರುವ ಸಿಬ್ಬಂದಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದ್ದೇವೆ ಎಂದು ಜಿ. ವಿ ಸಂಪನ್ನವರ, ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ಹೆಸ್ಕಾಂ ಅಥಣಿ ಹೇಳಿದರು. ಈ ಸಂದರ್ಭದಲ್ಲಿ ಗಿರೀಶ್ ವಿಜಾಪುರೆ, ಪಾರಿಶ್ ನಂದಪ್ಪನವರ, ಶೌಕತ್ ಅಲಿ ಮುಕ್ಕೇರಿ, ದ್ವಾರಕಿಶ ಜಾಲಿಹಾಳ, ಸಂಗಮೇಶ ನಾರಗೊಂಡ, ಅಶೋಕ ಪೋಳ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- ಜನವರಿ 19 ರಿಂದ 21 ರವರೆಗೆ ಬಾದಾಮಿಯಲ್ಲಿ ಚಾಲುಕ್ಯ ಉತ್ಸವ.AC ಶ್ವೇತಾ ಬೀಡಿಕರ1
- FLN ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮಗಮ ಶಾಲೆಯ ಗುಣಮಟ್ಟ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.1
- ಇತಿಹಾಸ ಸೃಷ್ಟಿಸಿದ ಶೌರ್ಯಗಾಥೆಯ ಸ್ಮರಣಾರ್ಥವಾಗಿ… ಭೀಮ ಕೋರೆಗಾವ್ ವಿಜಯೋತ್ಸವವನ್ನು ಇಂದು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.1
- ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ನಯನಾ ಮನವಿ ಮಾಡಿದ್ದಾರೆ1
- ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಇನಾಮದಾರ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇದೇ ಜನವರಿ 07, 2026 ರಂದು ಬಾಯರ್ ಸ್ಪೋಟವಾಗಿ ಭೀಕರ ಅಪಘಾತ ಸಂಭವಿಸಿದ್ದು. ಈ ಘಟನೆಯಲ್ಲಿ 08 ಜನ ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಂಡಿರುತ್ತಾರೆ. ಈ ಘಟನೆ ಸಂಪೂರ್ಣ ಜಿಲ್ಲೆಯ ಜನರನ್ನು ದಃಖ ಹಾಗೂ ಆಘಾತಕ್ಕೆ ಒಳಪಡಿಸಿದೆ. ಮೃತರು ತಮ್ಮ ಕುಟುಂಬಗಳ ಏಕೈಕ ಆಧಾರಸ್ತಂಭರಾಗಿದ್ದು, ಅವರ ಅಕಾಲಿಕ ಮರಣದಿಂದ ಕುಟುಂಬಗಳು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಆಘಾತವು ಕಾರ್ಖಾನೆಯ ನಿರ್ಲಕ್ಷ್ಯ, ಸುರಕ್ಷತಾ ಕ್ರಮಗಳ ಕೊರತೆ ಹಾಗೂ ತಾಂತ್ರಿಕ ಲೋಪದಿಂದ ಸಂಭವಿಸಿರುವ ಸಾಧ್ಯತೆ ಇದ್ದು, ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಆದುದರಿಂದ, ಮಾನ್ಯರು ದಯವಿಟ್ಟು ಈ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ: ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ 10 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ಪರಿಹಾರ ಘೋಷಿಸಿ ವಿತರಿಸಬೇಕು. ಇನಾಮದಾರ ಶುಗರ್ ಕಾರ್ಖಾನೆಯ ವಿರುದ್ಧ ಕಾನೂನಬದ್ದ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಕಾರ್ಖಾನೆಯ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಮೃತ ಕುಟುಂಬಗಳ ಒಬ್ಬ ಸದಸ್ಯರಿಗೆ ಉದ್ಯೋಗ ಅಥವಾ ದೀರ್ಘಕಾಲೀನ ನೆರವು ಒದಗಿಸುವ ಕುರಿತು ಸರ್ಕಾರದಿಂದ ಕ್ರಮ ಕೈಗೊಳ್ಳಬೇಕು. ಮಾನ್ಯರು ಈ ಗಂಭೀರ ವಿಷಯವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ನ್ಯಾಯ ಒದಗಿಸಬೇಕೆಂದು ನಾವು ಹೃತ್ತೂರ್ವಕವಾಗಿ ವಿನಂತಿಸುತ್ತೇವೆ.3
- ಆಲಮೇಲ ಪಟ್ಟಣದ ಬಸ ನಿಲ್ದಾಣ ಸ್ವಚ್ಚತೆಗೆ ಆಗ್ರಹ- AIMIM ದಿಂದ ಹೋರಾಟ.1
- ನೆನ್ನೆ ಮೈಸೂರಿನಲ್ಲಿ "ಬಾಯಲ್ಲಿ ಸೀಟಿ, ಕೈಯಲ್ಲಿ ಲಾಠಿ" ಹಿಡಿದು ಘರ್ಜಿಸಿದ "ಹುಲಿಯ ಹೃದಯದ ಕೆಆರ್‌ಎಸ್ ಸೈನಿಕರು..." #KRS #ಯುವಮಾವೇಶ 13-01-2026.1
- ಖಾಸಗಿ ಬಸ್ ಹಾಗೂ ಎರಡು ಬೈಕಗಳ ಮದ್ಯ ಅಪಘಾತ ಕೆಲ ಕಾಲ ಗೊಂದಲದ ವಾತಾವರಣ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು1