logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿ ಕಮಲನಗರ: ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿಯಾದ ಘಟನೆ ತಾಲೂಕಿನ ಸಾವಳಿ ಸಂಗಮ ಗ್ರಾಮದ ಸಮೀಪ ಜರುಗಿದೆ

2 hrs ago
user_Udayakumar Mule
Udayakumar Mule
ವರದಿಗಾರ ಬಸವಕಲ್ಯಾಣ, ಬೀದರ್, ಕರ್ನಾಟಕ•
2 hrs ago

ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿ ಕಮಲನಗರ: ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿಯಾದ ಘಟನೆ ತಾಲೂಕಿನ ಸಾವಳಿ ಸಂಗಮ ಗ್ರಾಮದ ಸಮೀಪ ಜರುಗಿದೆ

More news from ಕರ್ನಾಟಕ and nearby areas
  • ಕಮಲನಗರ: ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿಯಾದ ಘಟನೆ ತಾಲೂಕಿನ ಸಾವಳಿ ಸಂಗಮ ಗ್ರಾಮದ ಸಮೀಪ ಜರುಗಿದೆ
    1
    ಕಮಲನಗರ: ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿಯಾದ ಘಟನೆ ತಾಲೂಕಿನ ಸಾವಳಿ ಸಂಗಮ ಗ್ರಾಮದ ಸಮೀಪ ಜರುಗಿದೆ
    user_Udayakumar Mule
    Udayakumar Mule
    ವರದಿಗಾರ ಬಸವಕಲ್ಯಾಣ, ಬೀದರ್, ಕರ್ನಾಟಕ•
    2 hrs ago
  • सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    1
    सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    user_Vande Mataram news
    Vande Mataram news
    ಭಾಲ್ಕಿ, ಬೀದರ್, ಕರ್ನಾಟಕ•
    11 hrs ago
  • ಹುಲಸೂರಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಾಲಯ ಉದ್ಘಾಟನೆ ನೌಕರರ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಅಗತ್ಯ — ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅಭಿಮತ ಪ್ರಜಾವಾಣಿ ವಾರ್ತೆ ಹುಲಸೂರ: ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯ ನೂತನ ಕಾರ್ಯಾಲಯವನ್ನು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಉದ್ಘಾಟಿಸಿದರು. ನೌಕರರ ಹರ್ಷೋದ್ಗಾರಗಳ ನಡುವೆ ನಡೆದ ಕಾರ್ಯಕ್ರಮದಲ್ಲಿ ಬೈಕ್ ರ‍್ಯಾಲಿ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ವಿಶೇಷ ಮೆರುಗು ನೀಡಿತು. ಬಳಿಕ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ನೌಕರರು ಎದುರಿಸುತ್ತಿರುವ ಸೇವಾ ಭದ್ರತೆ, ಪದೋನ್ನತಿ, ವೇತನ ಮತ್ತು ಕಲ್ಯಾಣ ಯೋಜನೆಗಳ ಕುರಿತು ವಿವರಿಸಿದರು. ಸಂಘಟಿತ ಶಕ್ತಿಯಿಂದಲೇ ನೌಕರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು ಎಂದ ಅವರು, ನೌಕರರು ತಮ್ಮ ಜವಾಬ್ದಾರಿ, ನಡೆನುಡಿ, ಕಾರ್ಯಪದ್ಧತಿ ಮತ್ತು ಅನುಭವವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಶಿಕ್ಷಕರು ಹಾಗೂ ಇತರ ನೌಕರರು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿರುವುದನ್ನು ಉಲ್ಲೇಖಿಸಿ, ಸಮಯಪಾಲನೆ ಹಾಗೂ ಕರ್ತವ್ಯನಿಷ್ಠೆ ಅಗತ್ಯ ಎಂದರು. ರಾಜ್ಯದ ಸರ್ಕಾರಿ ನೌಕರರು ಎದುರಿಸುತ್ತಿರುವ ಕುಂದುಕೊರತೆಗಳು, ಸೇವಾ ಭದ್ರತೆ, ಪದೋನ್ನತಿ, ವೇತನ ಸಂಬಂಧಿತ ವಿಚಾರಗಳು ಹಾಗೂ ಕಲ್ಯಾಣ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಂಘಟಿತ ಶಕ್ತಿಯ ಮೂಲಕವೇ ನೌಕರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು ಎಂದು ಅವರು ಹೇಳಿದರು. ಸಾರ್ವಜನಿಕ ಸೇವೆಯಲ್ಲಿ ನೌಕರರು ಶಿಸ್ತು, ನಿಷ್ಠೆ ಮತ್ತು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಿದಾಗ ಆಡಳಿತದ ಮೇಲೆ ಜನರ ವಿಶ್ವಾಸ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಘವು ನೌಕರರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿವಿಧ ಸೇವಾ ಚಟುವಟಿಕೆಗಳನ್ನು ಕೂಡ ಅವರು ಉಲ್ಲೇಖಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಸಂಘದ ಬೆಳವಣಿಗೆ, ಸ್ಥಳೀಯ ನೌಕರರ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ನೂತನ ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ವಿವಿಧ ಇಲಾಖೆಯ ಕಚೇರಿಗಳು ಕೂಡಲಿ ಆರಂಭಿಸಬೇಕು ಹಾಗೂ ಸಂಘದ ತಾಲ್ಲೂಕ ಘಟಕದ ಕಾರ್ಯಾಲಯ ಸ್ಥಾಪನೆಯಿಂದ ನೌಕರರಿಗೆ ಸಂಘಟನಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ನೌಕರರು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು. ಶಿಕ್ಷಕರನ್ನು ಪಾಠ ಕಾರ್ಯಕ್ಕೆ ಸೀಮಿತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ ತಹಸೀಲ್ದಾರ್ ಶಿವಾನಂದ ಮೇತ್ರೆ, ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ ಅದೇಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ರಾಜ್ಯಾಧ್ಯಕ್ಷರ ಹಸ್ತದಿಂದ ಸನ್ಮಾನ ನೆರವೇರಿತು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.ಈ ವೇಳೆ ಸರಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ಎಸ್. ಬಸವರಾಜ, ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಸಹಾಯಕ ಆಯುಕ್ತ ಪ್ರಕಾಶ ಕುದುರೆ, ತಾಲ್ಲೂಕ ಪಂಚಾಯತ ಇಓ ಮಹಾದೇವ ಜಮ್ಮು, ಸಂಘಟನೆ ಕಾರ್ಯದರ್ಶಿ ಶಿವರಾಜ ಮಾಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ ಅದೇಪ್ಪ, ರಾಜಕುಮಾರ ಶೆಟ್ಟೆಪ್ಪ, ಧರ್ಮೇಂದ್ರ ಭೋಸ್ಲೆ, ಜಗನ್ನಾಥ ಡಗೆ, ಸಂದೀಪ ಬಿರಾದಾರ, ಬಾಲಾಜಿ ಪಾಟೀಲ್, ಸುಭಾಷ್ ಕಾಮಶೆಟ್ಟಿ, ನಾಗರಾಜ ಬಿರಾದರ, ಪ್ರಶಾಂತ ಚಾರ್ಲಾ ಸೇರಿ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಸರ್ಕಾರಿ ನೌಕರರು, ನಿವೃತ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. @@@@@@@@@@@@@@@@@@@@@ ಬ್ಯಾನರ್ ವಿವಾದ: ನೌಕರರಿಗೆ ರಕ್ಷಣೆ ನೀಡುವುದು ಕರ್ತವ್ಯ — ಶಾಸಕ ಶರಣು ಸಲಗರ ಪ್ರಜಾವಾಣಿ ವಾರ್ತೆ ಹುಲಸೂರು: ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಶರಣು ಸಲಗರ ಅವರು ಇತ್ತೀಚೆಗೆ ಉಂಟಾದ ಬ್ಯಾನರ್ ವಿವಾದದ ಕುರಿತು ಸ್ಪಷ್ಟನೆ ನೀಡಿದರು. ತಾಲ್ಲೂಕಿನಲ್ಲಿ ಜಾಹೀರಾತು ಕೊಟ್ಟು ಶಾಸಕರಾಗಲು ಬಂದಿಲ್ಲ. ಕಾರ್ಯಕ್ರಮಕ್ಕೂ ಮುನ್ನ ದಿನ ಸಂಘದ ಕೆಲ ಸದಸ್ಯರನ್ನು ಹೆದರಿಸಿ ಬೆದರಿಸಿ ಬ್ಯಾನರ್ ತಿರುಗಿಸಿರುವ ಘಟನೆ ನಡೆದಿದೆ. ಇದರಿಂದ ನನ್ನ ಪ್ರಚಾರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದರು. ನಾನು ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಸರ್ಕಾರಿ ನೌಕರರಿಗೆ ರಕ್ಷಣೆ ನೀಡುವುದು ಶಾಸಕರ ಕರ್ತವ್ಯ ಎಂದು ಅವರು ತಿಳಿಸಿದರು. ಸರ್ಕಾರಿ ನೌಕರರು ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ. ಒಳ್ಳೆಯ ಭಾವನೆಯೊಂದಿಗೆ ಯಾರಾದರೂ ಸಂಪರ್ಕಿಸಿದರೆ ಸಹಕರಿಸಬೇಕು; ಇಲ್ಲವಾದಲ್ಲಿ ಅವರ ವಿರುದ್ಧ ದೂರು ಸಲ್ಲಿಸಬೇಕು ಎಂದು ಸಲಹೆ ನೀಡಿದರು. ಶಾಸಕರಾಗಿ ಇಂದಿನವರೆಗೆ ಯಾವುದೇ ಸರ್ಕಾರಿ ನೌಕರರನ್ನು ಹೆದರಿಸುವ ಕೆಲಸ ಮಾಡಿಲ್ಲ. ಯಾವಾಗಲೂ ನೌಕರರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸಂಘಟನೆಗಳ ನಡುವೆ ಸಮನ್ವಯ ಹಾಗೂ ಪರಸ್ಪರ ಗೌರವ ಅಗತ್ಯವಾಗಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಹೇಳಿದರು. @@@@@@@@@@@@@@@@@@@@@@@ ಹುಲಸೂರಿನಲ್ಲಿ ನೂತನ ಡೈಲಾಸಿಸ್ ಕೇಂದ್ರ ಶಾಸಕರಿಂದ ಉದ್ಘಾಟನೆ ಪ್ರಜಾವಾಣಿ ವಾರ್ತೆ ಹುಲಸೂರು: ಸಾರ್ವಜನಿಕರಿಗೆ ಆರೋಗ್ಯ ಸೇವೆ ಇನ್ನಷ್ಟು ಸುಲಭವಾಗಿ ದೊರಕುವ ಉದ್ದೇಶದಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಡೈಲಾಸಿಸ್ ಕೇಂದ್ರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಮೂತ್ರಪಿಂಡ ಸಂಬಂಧಿತ ರೋಗಿಗಳಿಗೆ ಈ ಕೇಂದ್ರ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು. ಇಂತಹ ಆರೋಗ್ಯ ಸೌಲಭ್ಯಗಳು ಸ್ಥಳೀಯ ಮಟ್ಟದಲ್ಲೇ ಲಭ್ಯವಾಗುವುದರಿಂದ ರೋಗಿಗಳು ದೂರದ ನಗರಗಳಿಗೆ ತೆರಳುವ ತೊಂದರೆ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ಉಪಸ್ಥಿತರಿದ್ದು, ಆರೋಗ್ಯ ಸೇವೆಗಳ ವಿಸ್ತರಣೆ ಸಮಾಜಕ್ಕೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಹೇಳಿದರು. ಕೇಂದ್ರದಲ್ಲಿ ಎರಡು ಡೈಲಾಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ ಮೂವರು ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸ್ಥಳೀಯ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ದೊರಕುವ ನಿರೀಕ್ಷೆಯಿದೆ ಎಂದು ಆಡಳಿತಾಧಿಕಾರಿ ಶಶಿಕಾಂತ್ ಕನ್ನಡೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಲ್ಲಪ್ಪಾ ಧಬಾಲೆ, ಸುಧೀರ್ ಕಡಾದಿ, ಗೋವಿಂದರಾವ್ ಸೋಮೋಶಿ, ಸಂತೋಷ ಗಾಯಕವಾಡ, ರಣಜಿತ್ ಗಾಯಕವಾಡ, ತಾಲ್ಲೂಕ ಆರೋಗ್ಯಾಧಿಕಾರಿ ಅಶೋಕ ಮೈಲಾರಿ ಸೇರಿದಂತೆ ವೈದ್ಯಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು. ===================§================ ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಡೈಲಾಸಿಸ್ ಕೇಂದ್ರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭದ ವೇದಿಕೆ ಕಾರ್ಯಕ್ರಮ ಗಣ್ಯರು ಉದ್ಘಾಟಿಸಿದರು. ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ತಾಲೂಕು ಘಟಕದ ವತಿಯಿಂದ ಸ್ವಾಗತ ಕೋರಿಲಾಯಿತು.
    4
    ಹುಲಸೂರಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಾಲಯ ಉದ್ಘಾಟನೆ
ನೌಕರರ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಅಗತ್ಯ — ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅಭಿಮತ
ಪ್ರಜಾವಾಣಿ ವಾರ್ತೆ
ಹುಲಸೂರ: ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯ ನೂತನ ಕಾರ್ಯಾಲಯವನ್ನು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಉದ್ಘಾಟಿಸಿದರು. ನೌಕರರ ಹರ್ಷೋದ್ಗಾರಗಳ ನಡುವೆ ನಡೆದ ಕಾರ್ಯಕ್ರಮದಲ್ಲಿ ಬೈಕ್ ರ‍್ಯಾಲಿ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ವಿಶೇಷ ಮೆರುಗು ನೀಡಿತು.
ಬಳಿಕ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ನೌಕರರು ಎದುರಿಸುತ್ತಿರುವ ಸೇವಾ ಭದ್ರತೆ, ಪದೋನ್ನತಿ, ವೇತನ ಮತ್ತು ಕಲ್ಯಾಣ ಯೋಜನೆಗಳ ಕುರಿತು ವಿವರಿಸಿದರು. ಸಂಘಟಿತ ಶಕ್ತಿಯಿಂದಲೇ ನೌಕರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು ಎಂದ ಅವರು, ನೌಕರರು ತಮ್ಮ ಜವಾಬ್ದಾರಿ, ನಡೆನುಡಿ, ಕಾರ್ಯಪದ್ಧತಿ ಮತ್ತು ಅನುಭವವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಶಿಕ್ಷಕರು ಹಾಗೂ ಇತರ ನೌಕರರು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿರುವುದನ್ನು ಉಲ್ಲೇಖಿಸಿ, ಸಮಯಪಾಲನೆ ಹಾಗೂ ಕರ್ತವ್ಯನಿಷ್ಠೆ ಅಗತ್ಯ ಎಂದರು. 
ರಾಜ್ಯದ ಸರ್ಕಾರಿ ನೌಕರರು ಎದುರಿಸುತ್ತಿರುವ ಕುಂದುಕೊರತೆಗಳು, ಸೇವಾ ಭದ್ರತೆ, ಪದೋನ್ನತಿ, ವೇತನ ಸಂಬಂಧಿತ ವಿಚಾರಗಳು ಹಾಗೂ ಕಲ್ಯಾಣ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಂಘಟಿತ ಶಕ್ತಿಯ ಮೂಲಕವೇ ನೌಕರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು ಎಂದು ಅವರು ಹೇಳಿದರು. ಸಾರ್ವಜನಿಕ ಸೇವೆಯಲ್ಲಿ ನೌಕರರು ಶಿಸ್ತು, ನಿಷ್ಠೆ ಮತ್ತು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಿದಾಗ ಆಡಳಿತದ ಮೇಲೆ ಜನರ ವಿಶ್ವಾಸ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಘವು ನೌಕರರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿವಿಧ ಸೇವಾ ಚಟುವಟಿಕೆಗಳನ್ನು ಕೂಡ ಅವರು ಉಲ್ಲೇಖಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಸಂಘದ ಬೆಳವಣಿಗೆ, ಸ್ಥಳೀಯ ನೌಕರರ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ನೂತನ ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ವಿವಿಧ ಇಲಾಖೆಯ ಕಚೇರಿಗಳು ಕೂಡಲಿ ಆರಂಭಿಸಬೇಕು ಹಾಗೂ ಸಂಘದ ತಾಲ್ಲೂಕ ಘಟಕದ ಕಾರ್ಯಾಲಯ ಸ್ಥಾಪನೆಯಿಂದ ನೌಕರರಿಗೆ ಸಂಘಟನಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ನೌಕರರು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು. ಶಿಕ್ಷಕರನ್ನು ಪಾಠ ಕಾರ್ಯಕ್ಕೆ ಸೀಮಿತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತಹಸೀಲ್ದಾರ್ ಶಿವಾನಂದ ಮೇತ್ರೆ, ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ ಅದೇಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ರಾಜ್ಯಾಧ್ಯಕ್ಷರ ಹಸ್ತದಿಂದ ಸನ್ಮಾನ ನೆರವೇರಿತು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.ಈ ವೇಳೆ ಸರಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ಎಸ್. ಬಸವರಾಜ, ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಸೂರ್ಯಕಾಂತ ಬಿರಾದಾರ,
ಸಹಾಯಕ ಆಯುಕ್ತ ಪ್ರಕಾಶ ಕುದುರೆ, ತಾಲ್ಲೂಕ ಪಂಚಾಯತ ಇಓ ಮಹಾದೇವ ಜಮ್ಮು, ಸಂಘಟನೆ ಕಾರ್ಯದರ್ಶಿ ಶಿವರಾಜ ಮಾಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಭೀಮಾಶಂಕರ ಅದೇಪ್ಪ, ರಾಜಕುಮಾರ ಶೆಟ್ಟೆಪ್ಪ, ಧರ್ಮೇಂದ್ರ ಭೋಸ್ಲೆ, ಜಗನ್ನಾಥ ಡಗೆ, ಸಂದೀಪ ಬಿರಾದಾರ, ಬಾಲಾಜಿ ಪಾಟೀಲ್, ಸುಭಾಷ್ ಕಾಮಶೆಟ್ಟಿ, ನಾಗರಾಜ ಬಿರಾದರ, ಪ್ರಶಾಂತ ಚಾರ್ಲಾ ಸೇರಿ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಸರ್ಕಾರಿ ನೌಕರರು, ನಿವೃತ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
@@@@@@@@@@@@@@@@@@@@@
ಬ್ಯಾನರ್ ವಿವಾದ: ನೌಕರರಿಗೆ ರಕ್ಷಣೆ ನೀಡುವುದು ಕರ್ತವ್ಯ — ಶಾಸಕ ಶರಣು ಸಲಗರ
ಪ್ರಜಾವಾಣಿ ವಾರ್ತೆ
ಹುಲಸೂರು: ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಶರಣು ಸಲಗರ ಅವರು ಇತ್ತೀಚೆಗೆ ಉಂಟಾದ ಬ್ಯಾನರ್ ವಿವಾದದ ಕುರಿತು ಸ್ಪಷ್ಟನೆ ನೀಡಿದರು.
ತಾಲ್ಲೂಕಿನಲ್ಲಿ ಜಾಹೀರಾತು ಕೊಟ್ಟು ಶಾಸಕರಾಗಲು ಬಂದಿಲ್ಲ. ಕಾರ್ಯಕ್ರಮಕ್ಕೂ ಮುನ್ನ ದಿನ ಸಂಘದ ಕೆಲ ಸದಸ್ಯರನ್ನು ಹೆದರಿಸಿ ಬೆದರಿಸಿ ಬ್ಯಾನರ್ ತಿರುಗಿಸಿರುವ ಘಟನೆ ನಡೆದಿದೆ. ಇದರಿಂದ ನನ್ನ ಪ್ರಚಾರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದರು.
ನಾನು ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಸರ್ಕಾರಿ ನೌಕರರಿಗೆ ರಕ್ಷಣೆ ನೀಡುವುದು ಶಾಸಕರ ಕರ್ತವ್ಯ ಎಂದು ಅವರು ತಿಳಿಸಿದರು. ಸರ್ಕಾರಿ ನೌಕರರು ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ. ಒಳ್ಳೆಯ ಭಾವನೆಯೊಂದಿಗೆ ಯಾರಾದರೂ ಸಂಪರ್ಕಿಸಿದರೆ ಸಹಕರಿಸಬೇಕು; ಇಲ್ಲವಾದಲ್ಲಿ ಅವರ ವಿರುದ್ಧ ದೂರು ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಶಾಸಕರಾಗಿ ಇಂದಿನವರೆಗೆ ಯಾವುದೇ ಸರ್ಕಾರಿ ನೌಕರರನ್ನು ಹೆದರಿಸುವ ಕೆಲಸ ಮಾಡಿಲ್ಲ. ಯಾವಾಗಲೂ ನೌಕರರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘಟನೆಗಳ ನಡುವೆ ಸಮನ್ವಯ ಹಾಗೂ ಪರಸ್ಪರ ಗೌರವ ಅಗತ್ಯವಾಗಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಹೇಳಿದರು.
@@@@@@@@@@@@@@@@@@@@@@@
ಹುಲಸೂರಿನಲ್ಲಿ ನೂತನ ಡೈಲಾಸಿಸ್ ಕೇಂದ್ರ ಶಾಸಕರಿಂದ ಉದ್ಘಾಟನೆ
ಪ್ರಜಾವಾಣಿ ವಾರ್ತೆ 
ಹುಲಸೂರು: ಸಾರ್ವಜನಿಕರಿಗೆ ಆರೋಗ್ಯ ಸೇವೆ ಇನ್ನಷ್ಟು ಸುಲಭವಾಗಿ ದೊರಕುವ ಉದ್ದೇಶದಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಡೈಲಾಸಿಸ್ ಕೇಂದ್ರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಮೂತ್ರಪಿಂಡ ಸಂಬಂಧಿತ ರೋಗಿಗಳಿಗೆ ಈ ಕೇಂದ್ರ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು. ಇಂತಹ ಆರೋಗ್ಯ ಸೌಲಭ್ಯಗಳು ಸ್ಥಳೀಯ ಮಟ್ಟದಲ್ಲೇ ಲಭ್ಯವಾಗುವುದರಿಂದ ರೋಗಿಗಳು ದೂರದ ನಗರಗಳಿಗೆ ತೆರಳುವ ತೊಂದರೆ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ಉಪಸ್ಥಿತರಿದ್ದು, ಆರೋಗ್ಯ ಸೇವೆಗಳ ವಿಸ್ತರಣೆ ಸಮಾಜಕ್ಕೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಎರಡು ಡೈಲಾಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ ಮೂವರು ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸ್ಥಳೀಯ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ದೊರಕುವ ನಿರೀಕ್ಷೆಯಿದೆ ಎಂದು ಆಡಳಿತಾಧಿಕಾರಿ ಶಶಿಕಾಂತ್ ಕನ್ನಡೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಲ್ಲಪ್ಪಾ ಧಬಾಲೆ, ಸುಧೀರ್ ಕಡಾದಿ, ಗೋವಿಂದರಾವ್ ಸೋಮೋಶಿ, ಸಂತೋಷ ಗಾಯಕವಾಡ, ರಣಜಿತ್ ಗಾಯಕವಾಡ, ತಾಲ್ಲೂಕ ಆರೋಗ್ಯಾಧಿಕಾರಿ ಅಶೋಕ ಮೈಲಾರಿ  ಸೇರಿದಂತೆ ವೈದ್ಯಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
===================§================
ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಡೈಲಾಸಿಸ್ ಕೇಂದ್ರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು.
ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭದ ವೇದಿಕೆ ಕಾರ್ಯಕ್ರಮ ಗಣ್ಯರು ಉದ್ಘಾಟಿಸಿದರು.
ಪೋಟೋ ಶೀರ್ಷಿಕೆ: ಹುಲಸೂರ ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ  ಸಿ.ಎಸ್‌. ಷಡಾಕ್ಷರಿ ಅವರಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ತಾಲೂಕು ಘಟಕದ ವತಿಯಿಂದ ಸ್ವಾಗತ ಕೋರಿಲಾಯಿತು.
    user_Guruprasad Mente
    Guruprasad Mente
    ವರದಿಗಾರ ಪ್ರಜಾವಾಣಿ Hulsoor, Bidar•
    6 hrs ago
  • Post by Star Kannada News 24×7
    1
    Post by Star Kannada News 24×7
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    3 hrs ago
  • ವೇಗದ ಅಟ್ಟಹಾಸ:ವಿದ್ಯುತ್ ಕಂಬವನ್ನೇ ತುಂಡರಿಸಿದ ಬೈಕ್; ಉಳ್ಳಾಲದಲ್ಲಿ ಸವಾರರು ಪವಾಡ ಸದೃಶ್ಯ ಪಾರು. #JB_NEWS_KANNADA
    1
    ವೇಗದ ಅಟ್ಟಹಾಸ:ವಿದ್ಯುತ್ ಕಂಬವನ್ನೇ ತುಂಡರಿಸಿದ ಬೈಕ್; ಉಳ್ಳಾಲದಲ್ಲಿ ಸವಾರರು ಪವಾಡ ಸದೃಶ್ಯ ಪಾರು. #JB_NEWS_KANNADA
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Bidar, Karnataka•
    5 hrs ago
  • ಔರಾದ ಪಟ್ಟಣದ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.17 ರಂದು ನಡೆದ ಭವ್ಯ ರಥೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿದರು. ಇದೇ ವೇಳೆ ರಥ ಹಾಗೂ ಅಗ್ನಿ ಬಸವಣ್ಣನಿಗೆ ನಮಿಸಿ, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಭಕ್ತರೊಂದಿಗೆ ರಥದ ಜೊತೆಗೆ ಸ್ವಲ್ಪ ಹೊತ್ತು ನಡೆದು ಭಕ್ತಾದಿಗಳ ಸಂಭ್ರಮ ಇಮ್ಮಡಿಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉದ್ಭವಲಿಂಗ ಅಮರೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಶಕ್ತಿ. ಇಂತಹ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿ ಭಾವವನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿವೆ ಎಂದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ರಥವನ್ನು ಎಳೆದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
    3
    ಔರಾದ ಪಟ್ಟಣದ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.17 ರಂದು ನಡೆದ ಭವ್ಯ ರಥೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿದರು.
ಇದೇ ವೇಳೆ ರಥ ಹಾಗೂ ಅಗ್ನಿ ಬಸವಣ್ಣನಿಗೆ ನಮಿಸಿ, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಭಕ್ತರೊಂದಿಗೆ ರಥದ ಜೊತೆಗೆ ಸ್ವಲ್ಪ ಹೊತ್ತು ನಡೆದು ಭಕ್ತಾದಿಗಳ ಸಂಭ್ರಮ ಇಮ್ಮಡಿಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉದ್ಭವಲಿಂಗ ಅಮರೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಶಕ್ತಿ. ಇಂತಹ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿ ಭಾವವನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿವೆ ಎಂದರು.
ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ರಥವನ್ನು ಎಳೆದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
    user_Sudhir Kumar Pandhare
    Sudhir Kumar Pandhare
    Aurad, Bidar•
    7 hrs ago
  • Post by ಸುಭಾಷ ಗೋಡಿ
    1
    Post by ಸುಭಾಷ ಗೋಡಿ
    user_ಸುಭಾಷ ಗೋಡಿ
    ಸುಭಾಷ ಗೋಡಿ
    Voice of people ಕುಸ್ನೂರ್, ಕಲಬುರಗಿ, ಕರ್ನಾಟಕ•
    8 hrs ago
  • ಬಸವಕಲ್ಯಾಣ: ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಆಯೋಜಿಸಿದ ಅಖಂಡ ಹರಿನಾಮ‌ ಸಪ್ತಾಹ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರ ಧರ್ಮಪತ್ನಿ ಸೋನಾಲ್ ಅವರು ಭಜನೆ ಹಾಡು ಹಾಡಿ ಗಮನ ಸೆಳೆದ ಪ್ರಸಂಗ ಜರುಗಿತು
    1
    ಬಸವಕಲ್ಯಾಣ: ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಆಯೋಜಿಸಿದ ಅಖಂಡ ಹರಿನಾಮ‌ ಸಪ್ತಾಹ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರ ಧರ್ಮಪತ್ನಿ ಸೋನಾಲ್ ಅವರು ಭಜನೆ ಹಾಡು ಹಾಡಿ ಗಮನ ಸೆಳೆದ ಪ್ರಸಂಗ ಜರುಗಿತು
    user_Udayakumar Mule
    Udayakumar Mule
    ವರದಿಗಾರ ಬಸವಕಲ್ಯಾಣ, ಬೀದರ್, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.