logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿನ್ನಕೋಟೆ ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಪೋಷಕರ ಆಕ್ರಂದನ ಮುಗಿಲುಮುಟ್ಟಿತು ಬಂಗಾರಪೇಟೆ: ಕೆರೆಯಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿನ್ನಕೋಟೆ ಕೆರೆಯಲ್ಲಿ ನಡೆದಿದೆ. ತಾಲ್ಲೂಕಿನ ಕತ್ತಿಹಳ್ಳಿ ಗ್ರಾಮದ ಯುವನೇಶ್ (15) ಮೃತಪಟ್ಟ ಬಾಲಕ. ಈತ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರ ಪುತ್ರ ಎಂದು ತಿಳಿದುಬಂದಿದೆ. ಯುವನೇಶ್ ತನ್ನ ಸ್ನೇಹಿತರೊಂದಿಗೆ ಚಿನ್ನಕೋಟೆ ಕೆರೆಗೆ ಈಜಲು ತೆರಳಿದ್ದನು. ಮೂವರು ಸ್ನೇಹಿತರು ಕೆರೆಯ ಹೊಂಡದಲ್ಲಿ ಈಜಾಡುತ್ತಿದ್ದಾಗ ಯುವನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕಗೊಂಡಿದ್ದು, ಯುವನೇಶ್‌ನನ್ನು ರಕ್ಷಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಅಕಾಲಿಕ ಸಾವಿನಿಂದ ಕತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

13 hrs ago
user_Journalist
Journalist
Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
13 hrs ago
986a20d1-2584-40f4-bce4-bb30440f8291

ಚಿನ್ನಕೋಟೆ ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಪೋಷಕರ ಆಕ್ರಂದನ ಮುಗಿಲುಮುಟ್ಟಿತು ಬಂಗಾರಪೇಟೆ: ಕೆರೆಯಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿನ್ನಕೋಟೆ ಕೆರೆಯಲ್ಲಿ ನಡೆದಿದೆ. ತಾಲ್ಲೂಕಿನ ಕತ್ತಿಹಳ್ಳಿ ಗ್ರಾಮದ ಯುವನೇಶ್ (15) ಮೃತಪಟ್ಟ ಬಾಲಕ. ಈತ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರ ಪುತ್ರ ಎಂದು ತಿಳಿದುಬಂದಿದೆ. ಯುವನೇಶ್ ತನ್ನ ಸ್ನೇಹಿತರೊಂದಿಗೆ ಚಿನ್ನಕೋಟೆ ಕೆರೆಗೆ ಈಜಲು

ತೆರಳಿದ್ದನು. ಮೂವರು ಸ್ನೇಹಿತರು ಕೆರೆಯ ಹೊಂಡದಲ್ಲಿ ಈಜಾಡುತ್ತಿದ್ದಾಗ ಯುವನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕಗೊಂಡಿದ್ದು, ಯುವನೇಶ್‌ನನ್ನು ರಕ್ಷಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಅಕಾಲಿಕ ಸಾವಿನಿಂದ ಕತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

More news from ಕರ್ನಾಟಕ and nearby areas
  • ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನದ ಬದುಕು ಕಲ್ಪಿಸಿದೆ: ಶಾಸಕ ಎಸ್.ಎನ್. ನಾರಾಯಣಸ್ವಾಮಿ ಬಂಗಾರಪೇಟೆ: ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಘನತೆಯ ಬದುಕನ್ನು ಕಲ್ಪಿಸಿಕೊಟ್ಟಿರುವ ಮಹತ್ವದ ಶಕ್ತಿಯಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕರೆ ನೀಡಿದರು. ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಜಾತಿ, ಧರ್ಮ, ವರ್ಗ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸುವ ಮಹತ್ತರ ಜವಾಬ್ದಾರಿಯನ್ನು ಸಂವಿಧಾನ ನಿರ್ವಹಿಸುತ್ತಿದೆ. ಇಂದು ನಾವು ವಿವಿಧ ಹುದ್ದೆಗಳನ್ನು ಅಲಂಕರಿಸಲು, ಶಿಕ್ಷಣ ಪಡೆಯಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂವಿಧಾನವೇ ಮೂಲಾಧಾರವಾಗಿದೆ ಎಂದು ತಿಳಿಸಿದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸುವ ಮೂಲಕ ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ರಾಜ್ಯದ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಸಂವಿಧಾನದ ಪೀಠಿಕೆಯನ್ನು ಅಳವಡಿಸಿ ಸಂವಿಧಾನದ ಆಶಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಸಲಹೆಯಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳಿಗೆ ಬದ್ಧರಾಗಿ, ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆಯೊಂದಿಗೆ ಸಹೋದರತ್ವ, ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಪಾಲಿಸುವ ಸಂಕಲ್ಪ ಕೈಗೊಳ್ಳಲಾಯಿತು. ಕಾರ್ಯಕ್ರಮದ ವಿಶೇಷವಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಶಾಲಾ ಮಕ್ಕಳನ್ನು ವೇದಿಕೆಯ ಮುಂಭಾಗಕ್ಕೆ ಆಹ್ವಾನಿಸಿ, ಅವರಿಂದ ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಮಕ್ಕಳು ಸೇರಿದಂತೆ ನೆರೆದಿದ್ದ ಎಲ್ಲರೂ ಸಂವಿಧಾನದ ಆಶಯಗಳನ್ನು ಗೌರವಿಸುವ ಪ್ರತಿಜ್ಞೆ ಸ್ವೀಕರಿಸಿದರು. ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಂಸಮೇರಿ, ಇಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯುವರಾಜ್, ಬಿಇಒ ಚಂದ್ರಶೇಖರ್, ಸಬ್ ಇನ್ಸ್‌ಪೆಕ್ಟರ್ ಜಗರೆಡ್ಡಿ, ಕೆಜಿಎಫ್ ಪ್ರಾಂಶುಪಾಲ ಸಿದ್ದರಾಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಸಂವಿಧಾನ ಕೇವಲ ಪುಸ್ತಕವಲ್ಲ; ಅದು ಪ್ರತಿಯೊಬ್ಬ ಭಾರತೀಯನ ಹಕ್ಕು, ಗೌರವ, ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
    1
    ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನದ ಬದುಕು ಕಲ್ಪಿಸಿದೆ: ಶಾಸಕ ಎಸ್.ಎನ್. ನಾರಾಯಣಸ್ವಾಮಿ

ಬಂಗಾರಪೇಟೆ: ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಘನತೆಯ ಬದುಕನ್ನು ಕಲ್ಪಿಸಿಕೊಟ್ಟಿರುವ ಮಹತ್ವದ ಶಕ್ತಿಯಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕರೆ ನೀಡಿದರು.
ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಜಾತಿ, ಧರ್ಮ, ವರ್ಗ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸುವ ಮಹತ್ತರ ಜವಾಬ್ದಾರಿಯನ್ನು ಸಂವಿಧಾನ ನಿರ್ವಹಿಸುತ್ತಿದೆ. ಇಂದು ನಾವು ವಿವಿಧ ಹುದ್ದೆಗಳನ್ನು ಅಲಂಕರಿಸಲು, ಶಿಕ್ಷಣ ಪಡೆಯಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂವಿಧಾನವೇ ಮೂಲಾಧಾರವಾಗಿದೆ ಎಂದು ತಿಳಿಸಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸುವ ಮೂಲಕ ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ರಾಜ್ಯದ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಸಂವಿಧಾನದ ಪೀಠಿಕೆಯನ್ನು ಅಳವಡಿಸಿ ಸಂವಿಧಾನದ ಆಶಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಸಲಹೆಯಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳಿಗೆ ಬದ್ಧರಾಗಿ, ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆಯೊಂದಿಗೆ ಸಹೋದರತ್ವ, ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಪಾಲಿಸುವ ಸಂಕಲ್ಪ ಕೈಗೊಳ್ಳಲಾಯಿತು.
ಕಾರ್ಯಕ್ರಮದ ವಿಶೇಷವಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಶಾಲಾ ಮಕ್ಕಳನ್ನು ವೇದಿಕೆಯ ಮುಂಭಾಗಕ್ಕೆ ಆಹ್ವಾನಿಸಿ, ಅವರಿಂದ ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಮಕ್ಕಳು ಸೇರಿದಂತೆ ನೆರೆದಿದ್ದ ಎಲ್ಲರೂ ಸಂವಿಧಾನದ ಆಶಯಗಳನ್ನು ಗೌರವಿಸುವ ಪ್ರತಿಜ್ಞೆ ಸ್ವೀಕರಿಸಿದರು.
ಪ್ರಮುಖರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಂಸಮೇರಿ, ಇಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯುವರಾಜ್, ಬಿಇಒ ಚಂದ್ರಶೇಖರ್, ಸಬ್ ಇನ್ಸ್‌ಪೆಕ್ಟರ್ ಜಗರೆಡ್ಡಿ, ಕೆಜಿಎಫ್ ಪ್ರಾಂಶುಪಾಲ ಸಿದ್ದರಾಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಸಂವಿಧಾನ ಕೇವಲ ಪುಸ್ತಕವಲ್ಲ; ಅದು ಪ್ರತಿಯೊಬ್ಬ ಭಾರತೀಯನ ಹಕ್ಕು, ಗೌರವ, ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    21 hrs ago
  • "ಕ್ಲಾಕ್ ಟವರ್ ನಿಮ್ಮಪ್ಪನ ಆಸ್ತಿಯಲ್ಲ, ಅದು ಸರ್ಕಾರದ ಆಸ್ತಿ!" - ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ಕೆಂಡಾಮಂಡಲ! "ನಿಮ್ಮ ತಾತ ಮೈಸೂರು ಮಹಾರಾಜರ ಹತ್ರ ಕೂಲಿ ಕೆಲಸಕ್ಕೆ ಇದ್ದಿದ್ದು..." - ಜಮೀರ್ ಪಾಷಾಗೆ ಮುನಿಸ್ವಾಮಿ ಖಡಕ್ ತಿರುಗೇಟು! "ಕ್ಲಾಕ್ ಟವರ್ ನಿಮ್ಮಪ್ಪನ ಆಸ್ತಿಯಲ್ಲ, ಅದು ಸರ್ಕಾರದ ಆಸ್ತಿ!" - ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ಕೆಂಡಾಮಂಡಲ! "ನಿಮ್ಮ ತಾತ ಮೈಸೂರು ಮಹಾರಾಜರ ಹತ್ರ ಕೂಲಿ ಕೆಲಸಕ್ಕೆ ಇದ್ದಿದ್ದು..." - ಜಮೀರ್ ಪಾಷಾಗೆ ಮುನಿಸ್ವಾಮಿ ಖಡಕ್ ತಿರುಗೇಟು!
    1
    "ಕ್ಲಾಕ್ ಟವರ್ ನಿಮ್ಮಪ್ಪನ ಆಸ್ತಿಯಲ್ಲ, ಅದು ಸರ್ಕಾರದ ಆಸ್ತಿ!" - ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ಕೆಂಡಾಮಂಡಲ!
"ನಿಮ್ಮ ತಾತ ಮೈಸೂರು ಮಹಾರಾಜರ ಹತ್ರ ಕೂಲಿ ಕೆಲಸಕ್ಕೆ ಇದ್ದಿದ್ದು..." - ಜಮೀರ್ ಪಾಷಾಗೆ ಮುನಿಸ್ವಾಮಿ ಖಡಕ್ ತಿರುಗೇಟು!
"ಕ್ಲಾಕ್ ಟವರ್ ನಿಮ್ಮಪ್ಪನ ಆಸ್ತಿಯಲ್ಲ, ಅದು ಸರ್ಕಾರದ ಆಸ್ತಿ!" - ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ಕೆಂಡಾಮಂಡಲ!
"ನಿಮ್ಮ ತಾತ ಮೈಸೂರು ಮಹಾರಾಜರ ಹತ್ರ ಕೂಲಿ ಕೆಲಸಕ್ಕೆ ಇದ್ದಿದ್ದು..." - ಜಮೀರ್ ಪಾಷಾಗೆ ಮುನಿಸ್ವಾಮಿ ಖಡಕ್ ತಿರುಗೇಟು!
    user_Janani
    Janani
    ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    15 min ago
  • ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡ್ತಿದ್ರಾ ಹಾಜಿ ಮುಸ್ತಫಾ ಸಾಹೇಬರು? ಏನಿದು ಸಂಸದ ಮುನಿಸ್ವಾಮಿಯ ಲೆಕ್ಕಾಚಾರ?” “ಕ್ಲಾಕ್ ಟವರ್ ನಮ್ಮ ತಾತ ಕಟ್ಟಿಸಿದ್ದು! – ಜಮೀರ್ ಅಹ್ಮದ್ ಹೇಳಿಕೆ | ಹಾಜಿ ಮುಸ್ತಫಾ ಬಗ್ಗೆ ಮುನಿಸ್ವಾಮಿ ವ್ಯಂಗ್ಯ!” ಕೋಲಾರದ ಐತಿಹಾಸಿಕ ಕ್ಲಾಕ್ ಟವರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಲಾಕ್ ಟವರ್ ನಿರ್ಮಾಣದ ಹಿಂದೆ ತಮ್ಮ ತಾತ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಕೊಡುಗೆ ಇದೆ ಎಂದು ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹ್ಮದ್ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕ್ಲಾಕ್ ಟವರ್ ತಮ್ಮ ತಾತ ನಿರ್ಮಿಸಿರುವ ಗೋಪುರವಾಗಿದ್ದು, ಕಟ್ಟಡ ಇರುವವರೆಗೂ ಹಾಜಿ ಮೊಹಮ್ಮದ್ ಮುಸ್ತಫಾ ಅವರ ಹೆಸರಿನೊಂದಿಗೆ ಗುರುತಿಸಬೇಕು ಎಂಬ ಅಭಿಪ್ರಾಯವನ್ನು ಜಮೀರ್ ಅಹ್ಮದ್ ವ್ಯಕ್ತಪಡಿಸಿದ್ದಾರೆ. ಈ ಗೋಪುರವನ್ನು ನಿರ್ವಹಣೆಗಾಗಿ ನಗರಸಭೆಗೆ ನೀಡಲಾಗಿದೆ, ಕುಟುಂಬದ ಆಸ್ತಿಯೆಂದು ಹೇಳುತ್ತಿಲ್ಲ ಎಂಬ ರೀತಿಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದೆಡೆ, ಸಂಸದ ಮಲ್ಲೇಶ್ ಬಾಬು ಅವರ ನಿಧಿಯಿಂದ ಸುಮಾರು ₹15 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್‌ಗೆ ಗಡಿಯಾರ ಅಳವಡಿಸುವ ಸಂದರ್ಭದಲ್ಲಿ ಗಡಿಯಾರದಲ್ಲಿ ಸಂಸದರ ಹೆಸರು ನಮೂದಿಸಿರುವ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವಿವಾದದ ಬಳಿಕ ಗಡಿಯಾರ ತೆರವುಗೊಳಿಸಿರುವ ವಿಚಾರವೂ ಚರ್ಚೆಯಲ್ಲಿದೆ. ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಮುನಿಸ್ವಾಮಿ, ಕ್ಲಾಕ್ ಟವರ್ ದೇಶದ ಆಸ್ತಿ, ನಗರಸಭೆಯ ಆಸ್ತಿ, ಜನರ ಆಸ್ತಿ ಎಂದು ಹೇಳುವ ಜೊತೆಗೆ, ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ರೀತಿಯಲ್ಲಿ ವ್ಯಂಗ್ಯವಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಕ್ಲಾಕ್ ಟವರ್ ವಿವಾದದ ನಡುವೆ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಇತಿಹಾಸದ ಕುರಿತು ರಾಜಕೀಯ ವಾಕ್ಸಮರ ಆರಂಭವಾಗಿದ್ದು, ಈ ಹೇಳಿಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. KOLAR PULSE — ಜನರ ನಾಡಿ ಮಿಡಿತ.
    1
    ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡ್ತಿದ್ರಾ ಹಾಜಿ ಮುಸ್ತಫಾ ಸಾಹೇಬರು? ಏನಿದು ಸಂಸದ ಮುನಿಸ್ವಾಮಿಯ ಲೆಕ್ಕಾಚಾರ?”
“ಕ್ಲಾಕ್ ಟವರ್ ನಮ್ಮ ತಾತ ಕಟ್ಟಿಸಿದ್ದು! – ಜಮೀರ್ ಅಹ್ಮದ್ ಹೇಳಿಕೆ | ಹಾಜಿ ಮುಸ್ತಫಾ ಬಗ್ಗೆ ಮುನಿಸ್ವಾಮಿ ವ್ಯಂಗ್ಯ!”
ಕೋಲಾರದ ಐತಿಹಾಸಿಕ ಕ್ಲಾಕ್ ಟವರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಲಾಕ್ ಟವರ್ ನಿರ್ಮಾಣದ ಹಿಂದೆ ತಮ್ಮ ತಾತ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಕೊಡುಗೆ ಇದೆ ಎಂದು ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹ್ಮದ್ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಕ್ಲಾಕ್ ಟವರ್ ತಮ್ಮ ತಾತ ನಿರ್ಮಿಸಿರುವ ಗೋಪುರವಾಗಿದ್ದು, ಕಟ್ಟಡ ಇರುವವರೆಗೂ ಹಾಜಿ ಮೊಹಮ್ಮದ್ ಮುಸ್ತಫಾ ಅವರ ಹೆಸರಿನೊಂದಿಗೆ ಗುರುತಿಸಬೇಕು ಎಂಬ ಅಭಿಪ್ರಾಯವನ್ನು ಜಮೀರ್ ಅಹ್ಮದ್ ವ್ಯಕ್ತಪಡಿಸಿದ್ದಾರೆ. ಈ ಗೋಪುರವನ್ನು ನಿರ್ವಹಣೆಗಾಗಿ ನಗರಸಭೆಗೆ ನೀಡಲಾಗಿದೆ, ಕುಟುಂಬದ ಆಸ್ತಿಯೆಂದು ಹೇಳುತ್ತಿಲ್ಲ ಎಂಬ ರೀತಿಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದೆಡೆ, ಸಂಸದ ಮಲ್ಲೇಶ್ ಬಾಬು ಅವರ ನಿಧಿಯಿಂದ ಸುಮಾರು ₹15 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್‌ಗೆ ಗಡಿಯಾರ ಅಳವಡಿಸುವ ಸಂದರ್ಭದಲ್ಲಿ ಗಡಿಯಾರದಲ್ಲಿ ಸಂಸದರ ಹೆಸರು ನಮೂದಿಸಿರುವ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವಿವಾದದ ಬಳಿಕ ಗಡಿಯಾರ ತೆರವುಗೊಳಿಸಿರುವ ವಿಚಾರವೂ ಚರ್ಚೆಯಲ್ಲಿದೆ.
ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಮುನಿಸ್ವಾಮಿ, ಕ್ಲಾಕ್ ಟವರ್ ದೇಶದ ಆಸ್ತಿ, ನಗರಸಭೆಯ ಆಸ್ತಿ, ಜನರ ಆಸ್ತಿ ಎಂದು ಹೇಳುವ ಜೊತೆಗೆ, ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ರೀತಿಯಲ್ಲಿ ವ್ಯಂಗ್ಯವಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕ್ಲಾಕ್ ಟವರ್ ವಿವಾದದ ನಡುವೆ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಇತಿಹಾಸದ ಕುರಿತು ರಾಜಕೀಯ ವಾಕ್ಸಮರ ಆರಂಭವಾಗಿದ್ದು, ಈ ಹೇಳಿಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
KOLAR PULSE — ಜನರ ನಾಡಿ ಮಿಡಿತ.
    user_MOHAMED MUSTHAF B
    MOHAMED MUSTHAF B
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ ​ಟೇಕಲ್ / ಯಲವಗುಳಿ (ನ. 26): ಸಂವಿಧಾನದ ಆಶಯಗಳು, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸತೀಶ್ ರಾಜಣ್ಣ ಕರೆ ನೀಡಿದರು. ​ಟೇಕಲ್ ಮತ್ತು ಯಲವಗುಳಿ ಭಾಗದಲ್ಲಿ ನೂರಾರು ಸ್ನೇಹಿತರು ಹಾಗೂ ಸಮುದಾಯದ ಮುಖಂಡರು ಒಟ್ಟಾಗಿ ಸೇರಿ ಆಚರಿಸಿದ ಅದ್ದೂರಿ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ​ಸತೀಶ್ ರಾಜಣ್ಣ ಮಾತನಾಡಿದರು. ​"ಭಾರತದ ಸಂವಿಧಾನ ಕೇವಲ ಒಂದು ಕಾನೂನು ಪುಸ್ತಕವಲ್ಲ; ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಗೂ ಗೌರವ, ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟ ಶ್ರೇಷ್ಠ ಗ್ರಂಥವಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿಯ ದೂರದೃಷ್ಟಿ ಮತ್ತು ಸುದೀರ್ಘ ಶ್ರಮದಿಂದ 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕಾರಗೊಂಡಿತು. ಆ ಐತಿಹಾಸಿಕ ದಿನದ ಸ್ಮರಣಾರ್ಥ ಆಚರಿಸುವ ಸಂವಿಧಾನ ದಿನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ." ​"ನಮಗೆ ದೊರೆತಿರುವ ಮೂಲಭೂತ ಹಕ್ಕುಗಳ ಬಗ್ಗೆ ಎಷ್ಟು ಜಾಗೃತರಾಗಿರುತ್ತೇವೆಯೋ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಮೂಲಭೂತ ಕರ್ತವ್ಯಗಳನ್ನೂ ಪಾಲಿಸಬೇಕು. ಶಿಕ್ಷಣ, ಕೌಶಲ್ಯ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಮೂಲಕ ನಮ್ಮ ಟೇಕಲ್ ಹಾಗೂ ಯಲವಗುಳಿ ಭಾಗದ ಯುವಕರು ಮತ್ತು ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು." ​"ಸಂವಿಧಾನದ ಆಶಯಗಳನ್ನು ಕೇವಲ ವೇದಿಕೆ ಭಾಷಣಗಳು ಮತ್ತು ಆಚರಣೆಗಳಿಗೆ ಸೀಮಿತಗೊಳಿಸದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಶಿಕ್ಷಣ ಮತ್ತು ಗೌರವ ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ." ​ಸಾಮೂಹಿಕ ಪೀಠಿಕೆ ವಾಚನ ಮತ್ತು ಸಹಭಾಗಿತ್ವ ​ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಸ್ನೇಹಿತರು, ಸಮುದಾಯದ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ವಾಚಿಸಿ, ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು. ಟೇಕಲ್ ಮತ್ತು ಯಲವಗುಳಿ ಭಾಗದ ವಿವಿಧ ಸಮುದಾಯಗಳ ಮುಖಂಡರು, ಹಿರಿಯರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    3
    ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ
ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ
​ಟೇಕಲ್ / ಯಲವಗುಳಿ (ನ. 26): ಸಂವಿಧಾನದ ಆಶಯಗಳು, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸತೀಶ್ ರಾಜಣ್ಣ ಕರೆ ನೀಡಿದರು.
​ಟೇಕಲ್ ಮತ್ತು ಯಲವಗುಳಿ ಭಾಗದಲ್ಲಿ ನೂರಾರು ಸ್ನೇಹಿತರು ಹಾಗೂ ಸಮುದಾಯದ ಮುಖಂಡರು ಒಟ್ಟಾಗಿ ಸೇರಿ ಆಚರಿಸಿದ ಅದ್ದೂರಿ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ​ಸತೀಶ್ ರಾಜಣ್ಣ ಮಾತನಾಡಿದರು. 
​"ಭಾರತದ ಸಂವಿಧಾನ ಕೇವಲ ಒಂದು ಕಾನೂನು ಪುಸ್ತಕವಲ್ಲ; ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಗೂ ಗೌರವ, ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟ ಶ್ರೇಷ್ಠ ಗ್ರಂಥವಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿಯ ದೂರದೃಷ್ಟಿ ಮತ್ತು ಸುದೀರ್ಘ ಶ್ರಮದಿಂದ 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕಾರಗೊಂಡಿತು. ಆ ಐತಿಹಾಸಿಕ ದಿನದ ಸ್ಮರಣಾರ್ಥ ಆಚರಿಸುವ ಸಂವಿಧಾನ ದಿನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ."
​"ನಮಗೆ ದೊರೆತಿರುವ ಮೂಲಭೂತ ಹಕ್ಕುಗಳ ಬಗ್ಗೆ ಎಷ್ಟು ಜಾಗೃತರಾಗಿರುತ್ತೇವೆಯೋ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಮೂಲಭೂತ ಕರ್ತವ್ಯಗಳನ್ನೂ ಪಾಲಿಸಬೇಕು. ಶಿಕ್ಷಣ, ಕೌಶಲ್ಯ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಮೂಲಕ ನಮ್ಮ ಟೇಕಲ್ ಹಾಗೂ ಯಲವಗುಳಿ ಭಾಗದ ಯುವಕರು ಮತ್ತು ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು."
​"ಸಂವಿಧಾನದ ಆಶಯಗಳನ್ನು ಕೇವಲ ವೇದಿಕೆ ಭಾಷಣಗಳು ಮತ್ತು ಆಚರಣೆಗಳಿಗೆ ಸೀಮಿತಗೊಳಿಸದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಶಿಕ್ಷಣ ಮತ್ತು ಗೌರವ ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ."
​ಸಾಮೂಹಿಕ ಪೀಠಿಕೆ ವಾಚನ ಮತ್ತು ಸಹಭಾಗಿತ್ವ
​ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಸ್ನೇಹಿತರು, ಸಮುದಾಯದ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ವಾಚಿಸಿ, ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು. ಟೇಕಲ್ ಮತ್ತು ಯಲವಗುಳಿ ಭಾಗದ ವಿವಿಧ ಸಮುದಾಯಗಳ ಮುಖಂಡರು, ಹಿರಿಯರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_ಸುನಿಲ್ ಕುಮಾರ್ ಆರ್
    ಸುನಿಲ್ ಕುಮಾರ್ ಆರ್
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ಕೋಲಾರ, ಕೋಲಾರ, ಕರ್ನಾಟಕ•
    12 hrs ago
  • ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್‌ಎಸ್‌ ಮುಖಂಡ ಶಿವರೆಡ್ಡಿ ಆಕ್ರೋಶ ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್‌ಎಸ್‌ ಮುಖಂಡ ಶಿವರೆಡ್ಡಿ ಆಕ್ರೋಶ
    1
    ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್‌ಎಸ್‌ ಮುಖಂಡ ಶಿವರೆಡ್ಡಿ ಆಕ್ರೋಶ
ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್‌ಎಸ್‌ ಮುಖಂಡ ಶಿವರೆಡ್ಡಿ ಆಕ್ರೋಶ
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    12 hrs ago
  • *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ​ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ. *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ​ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
    2
    *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* 

ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ.

​ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
*ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* 
ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ.
​ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    13 hrs ago
  • ಚಿನ್ನಕೋಟೆ ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಪೋಷಕರ ಆಕ್ರಂದನ ಮುಗಿಲುಮುಟ್ಟಿತು ಬಂಗಾರಪೇಟೆ: ಕೆರೆಯಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿನ್ನಕೋಟೆ ಕೆರೆಯಲ್ಲಿ ನಡೆದಿದೆ. ತಾಲ್ಲೂಕಿನ ಕತ್ತಿಹಳ್ಳಿ ಗ್ರಾಮದ ಯುವನೇಶ್ (15) ಮೃತಪಟ್ಟ ಬಾಲಕ. ಈತ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರ ಪುತ್ರ ಎಂದು ತಿಳಿದುಬಂದಿದೆ. ಯುವನೇಶ್ ತನ್ನ ಸ್ನೇಹಿತರೊಂದಿಗೆ ಚಿನ್ನಕೋಟೆ ಕೆರೆಗೆ ಈಜಲು ತೆರಳಿದ್ದನು. ಮೂವರು ಸ್ನೇಹಿತರು ಕೆರೆಯ ಹೊಂಡದಲ್ಲಿ ಈಜಾಡುತ್ತಿದ್ದಾಗ ಯುವನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕಗೊಂಡಿದ್ದು, ಯುವನೇಶ್‌ನನ್ನು ರಕ್ಷಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಅಕಾಲಿಕ ಸಾವಿನಿಂದ ಕತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    2
    ಚಿನ್ನಕೋಟೆ ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಪೋಷಕರ ಆಕ್ರಂದನ ಮುಗಿಲುಮುಟ್ಟಿತು

ಬಂಗಾರಪೇಟೆ: ಕೆರೆಯಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿನ್ನಕೋಟೆ ಕೆರೆಯಲ್ಲಿ ನಡೆದಿದೆ.
ತಾಲ್ಲೂಕಿನ ಕತ್ತಿಹಳ್ಳಿ ಗ್ರಾಮದ ಯುವನೇಶ್ (15) ಮೃತಪಟ್ಟ ಬಾಲಕ. ಈತ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರ ಪುತ್ರ ಎಂದು ತಿಳಿದುಬಂದಿದೆ.
ಯುವನೇಶ್ ತನ್ನ ಸ್ನೇಹಿತರೊಂದಿಗೆ ಚಿನ್ನಕೋಟೆ ಕೆರೆಗೆ ಈಜಲು ತೆರಳಿದ್ದನು. ಮೂವರು ಸ್ನೇಹಿತರು ಕೆರೆಯ ಹೊಂಡದಲ್ಲಿ ಈಜಾಡುತ್ತಿದ್ದಾಗ ಯುವನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕಗೊಂಡಿದ್ದು, ಯುವನೇಶ್‌ನನ್ನು ರಕ್ಷಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಅಕಾಲಿಕ ಸಾವಿನಿಂದ ಕತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    user_Journalist
    Journalist
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.