KSRTC ಬಸ್-ಬೈಕ್ ಭೀಕರ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು... KSRTC ಬಸ್-ಬೈಕ್ ಭೀಕರ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು... ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ವಿನೋದ ಹೊಗೆನ್ನವರ, ಆಕಾಶ್ ಜಾಧವ ಹಾಗೂ ರವಿ ಕುರುಬರ ಮೃತಪಟ್ಟ ದುರ್ದೈವಿಗಳು. ಘಟನೆಯ ವಿವರ: ಸವದತ್ತಿಯಿಂದ ಧಾರವಾಡದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಜ್ಜುಗೊಂಡಿದ್ದು, ಬೈಕ್‌ನಲ್ಲಿದ್ದ ಮೂವರೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KSRTC ಬಸ್-ಬೈಕ್ ಭೀಕರ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು... KSRTC ಬಸ್-ಬೈಕ್ ಭೀಕರ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು... ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ವಿನೋದ ಹೊಗೆನ್ನವರ, ಆಕಾಶ್ ಜಾಧವ ಹಾಗೂ ರವಿ ಕುರುಬರ ಮೃತಪಟ್ಟ ದುರ್ದೈವಿಗಳು. ಘಟನೆಯ ವಿವರ: ಸವದತ್ತಿಯಿಂದ ಧಾರವಾಡದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಜ್ಜುಗೊಂಡಿದ್ದು, ಬೈಕ್‌ನಲ್ಲಿದ್ದ ಮೂವರೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ #onlinetv24x71
- ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! *ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ* *ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ. ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.4
- ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.1
- ಚಿಕ್ಕನಾಯಕನಹಳ್ಳಿ ಕೆಡಿಪಿ ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ತೀವ್ರ ತರಾಟೆ ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಹಾಗೂ ಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ಭಾಗವಹಿಸಿ, ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣ, ಅರಣ್ಯ, ಕೃಷಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಮುಖ್ಯಾಂಶಗಳು: ಶಿಕ್ಷಣ ಇಲಾಖೆಯ ಧೋರಣೆಗೆ ಆಕ್ರೋಶ: ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ ಎಂದು ಸಿ.ಡಿ. ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಕೊಡಿಸುವಲ್ಲಿ ಬಿಇಒ ವಿಫಲರಾಗಿದ್ದು, ಕೇವಲ ಫಲಿತಾಂಶದ ಫೋಟೋ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಸ್ ಸಂಚಾರಕ್ಕೆ ಕಟ್ಟುನಿಟ್ಟಿನ ಸೂಚನೆ: ಸಾರ್ವಜನಿಕರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಪುರಸಭಾ ಬಸ್ ನಿಲ್ದಾಣದ ಒಳಗಡೆಯೇ ಪ್ರವೇಶಿಸಿ ಸಂಚರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು. ಮಾಹಿತಿ ಕೇಳಿದ ಸದಸ್ಯರಿಗೆ ನೋಟಿಸ್‌ಗೆ ಆಕ್ಷೇಪ: ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ಕೋರಿದ್ದಕ್ಕೆ ಅಧಿಕಾರಿಗಳು 50,000 ರೂಪಾಯಿ ಹಣ ಕಟ್ಟುವಂತೆ ನೋಟಿಸ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟುಹಿಡಿದರು. ಕುಡಿಯುವ ನೀರು ಮತ್ತು ಮೇವಿನ ಮುನ್ನೆಚ್ಚರಿಕೆ: ತಾಲ್ಲೂಕಿನಲ್ಲಿ ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಭೆಯಲ್ಲಿ ಶಾಸಕರಾದ ಸಿ ಬಿ ಸುರೇಶ್ ಬಾಬು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ತಹಶೀಲ್ದಾರ್ ಮಮತ ಸೇರಿದಂತೆ ನಾಮನಿರ್ದೇಶನ ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.1
- ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ. ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು. ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ: ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು. ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು. ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ: ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.4
- ಹಿಂದೂಗಳನ್ನ ಎರಡನೇ ದರ್ಜೆಯಲ್ಲಿ ನೋಡೋದು ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ ಹಿಂದೂಗಳನ್ನ ಎರಡನೇ ದರ್ಜೆಯಲ್ಲಿ ನೋಡೋದು ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ1
- ಪಣತ್ತೂರಿನಲ್ಲಿ 45 ಎಕರೆ ಅರಣ್ಯ ಭೂಮಿ ಉದ್ಘಾಟನೆಯಾಗಿದೆ,ಆದರೆ 145 ಎಕರೆ ಅರಣ್ಯ ಭೂಮಿಯು ಉದ್ಯಾನವನವಾಗಿ ಆಗಬೇಕು ಮಹದೇವಪುರ ಕ್ಷೇತ್ರದಲ್ಲಿ 6ರಿಂದ 7 ಲಕ್ಷ ಜನ ಮತದಾರರೇ ಇದ್ದಾರೆ.ಇನ್ನು ಹೆಚ್ಚುವರಿಯಾಗಿ ಇಲ್ಲಿಗೆ ಬಂದು ಕೆಲಸ ಮಾಡಿ ಹೋಗುವವರು ನೋಡಿದರೆ 10 ಲಕ್ಷ ಆಗುತ್ತೆ ಇವುಗಳ ಅಭಿವೃದ್ಧಿಗೆ ಎಂಪಿ ಅನುದಾನವನ್ನು ನೀಡಲು ತಯಾರಿದ್ದೇವೆ .145 ಎಕರೆಗಳನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ .ಒಂದು ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.ಹಾಗೆ ಮಿಕ್ಕಿರುವ ನೂರು ಎಕರೆ ಜಾಗದಲ್ಲಿ ಒಂದು ಎಲಿವೇಟರ್ ಪ್ಲೇ ಓವರ್ ಮಾಡಿದರೆ ಸೂಕ್ತ ಎಂದರು1
- ಬೆಂಗಳೂರಿನಲ್ಲಿ 21% ಅರಣ್ಯ ಭೂಮಿ ಇದೆ 33% ಆಗಬೇಕು ,ಕಾಡು ಬೆಳೆಸುವ ಕೆಲಸ ರಾಜ್ಯದಲ್ಲೂ, ದೇಶದಲ್ಲೂ ನಡೆಯಬೇಕು ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಪರಿಸರ ವೃದ್ಧಿಯ ಜೊತೆಗೆ ವನ್ಯಜೀವಿಗಳ ರಕ್ಷಣೆ , ವನ್ಯಜೀವಿಗಳಿಂದ ಮಾನವರ ರಕ್ಷಣೆಯು ಆಗಬೇಕು ಆನೆಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಾದ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರು , ಕೆಲವೊಮ್ಮೆ ಅನಾಹುತಗಳು ನಡೀತಿದೆ ಈಗ ಪಣತ್ತೂರಿನಲ್ಲಿ ನಗರ ಉದ್ಯಾನವನ ಉದ್ಘಾಟನೆ ಆಗಿದೆ ಹಾಗೆ ರಸ್ತೆ ಹಾಗೂ ಸೇತುವೆ ಬೇಡಿಕೆ ಇದೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತವೆ ಎಂದಿದ್ದಾರೆ1