ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮತದಾರರ ಮನೆಗೆ ತೆರಳಿ ಎಸ್ಐಆರ್ ದೋಷ ಸರಿಪಡಿಸಿದ ಇ ಆರ್ ಒ ಬಸನಗೌಡ ಕೋಟೂರ ಎಸ್ಐಆರ್ ನಲ್ಲಿ ಆದ ದೋಷಗಳನ್ನು ಸರಿಪಡಿಸುವಂತೆ ಈಗಾಗಲೇ ಬಿ ಎಲ್ ಒ ಗಳು ಮತ್ತು ಅಧಿಕಾರಿಗಳು ಮತದಾರರಿಗೆ ನೋಟಿಸ್ ನೀಡಿ ವಿಚಾರಣ ಕೇಂದ್ರಗಳಿಗೆ ಭೇಟಿ ನೀಡಿ ಸರಿಯಾದ ದಾಖಲೆಯನ್ನು ನೀಡಿ ತಮ್ಮ ಎಸ್ಐಆರ್ ಅನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು,ಇತ್ತೀಚಿಗೆ ಚುನಾವಣಾ ಆಯೋಗವು ಕೆಲವೊಂದು ಸಡಿಲಿಕೆಯನ್ನು ನೀಡಿದ್ದು ವೃದ್ಧರು ಅಂಗವಿಕಲರು ಮತ್ತು ಗರ್ಭಿಣಿಯರು ಬಾಣಂತಿಯರಿಗೆ ಯಾರಿಗೆ ಆಯಾ ಕೇಂದ್ರಗಳಿಗೆ ಹೋಗಿ ಎಸ್ ಐ ಆರ್ ನಲ್ಲಿ ಆಗಿರುವ ಲೋಪ ದೋಷಗಳನ್ನು ಸರಿಪಡಿಸಲು ಆಗುವುದಿಲ್ಲ ಅಂತವರ ಮನೆಗಳಿಗೆ ಅಧಿಕಾರಿಗಳು ತೆರಳಿ ಅವರ ಎಸ್ಐಆರ್ ನನ್ನು ಸರಿಪಡಿಸುವಂತೆ ಸೂಚಿಸಿದ್ದು ರೋಣ ಪಟ್ಟಣದ ಪುರಸಭೆ ವ್ಯಾಪ್ತಿಯ ನಿವಾಸಿ ರಮೇಶ್ ಜೋಗನ್ನವರ ಎಂಬುವರ ಪತ್ನಿಯು ಬಾಣಂತಿಯಾಗಿದ್ದು ಅವರ ಮನೆಗೆ ಇ ಆರ್ ಒ ಬಸವನಗೌಡ ಕೋಟೂರ ಹಾಗೂ ಎ ಇ ಆರ್ ಒ ರಮೇಶ್ ಹೊಸಮನಿ ಹಾಗೂ ಬಿ ಎಲ್ ಒ ಮತ್ತು ಇತರ ಸಿಬ್ಬಂದಿಗಳು ತೆರಳಿ ಸರಿಯಾದ ದಾಖಲೆಯನ್ನು ಪರಿಶೀಲಿಸಿ ಎಸ್ಐಆರ್‌ನಲ್ಲಿ ಆದ ಲೋಪ ದೋಷಗಳನ್ನು ಸರಿಪಡಿಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮತದಾರರ ಮನೆಗೆ ತೆರಳಿ ಎಸ್ಐಆರ್ ದೋಷ ಸರಿಪಡಿಸಿದ ಇ ಆರ್ ಒ ಬಸನಗೌಡ ಕೋಟೂರ ಎಸ್ಐಆರ್ ನಲ್ಲಿ ಆದ ದೋಷಗಳನ್ನು ಸರಿಪಡಿಸುವಂತೆ ಈಗಾಗಲೇ ಬಿ ಎಲ್ ಒ ಗಳು ಮತ್ತು ಅಧಿಕಾರಿಗಳು ಮತದಾರರಿಗೆ ನೋಟಿಸ್ ನೀಡಿ ವಿಚಾರಣ ಕೇಂದ್ರಗಳಿಗೆ ಭೇಟಿ ನೀಡಿ ಸರಿಯಾದ ದಾಖಲೆಯನ್ನು ನೀಡಿ ತಮ್ಮ
ಎಸ್ಐಆರ್ ಅನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು,ಇತ್ತೀಚಿಗೆ ಚುನಾವಣಾ ಆಯೋಗವು ಕೆಲವೊಂದು ಸಡಿಲಿಕೆಯನ್ನು ನೀಡಿದ್ದು ವೃದ್ಧರು ಅಂಗವಿಕಲರು ಮತ್ತು ಗರ್ಭಿಣಿಯರು ಬಾಣಂತಿಯರಿಗೆ ಯಾರಿಗೆ ಆಯಾ ಕೇಂದ್ರಗಳಿಗೆ ಹೋಗಿ ಎಸ್ ಐ ಆರ್ ನಲ್ಲಿ ಆಗಿರುವ ಲೋಪ ದೋಷಗಳನ್ನು ಸರಿಪಡಿಸಲು ಆಗುವುದಿಲ್ಲ ಅಂತವರ ಮನೆಗಳಿಗೆ ಅಧಿಕಾರಿಗಳು ತೆರಳಿ ಅವರ ಎಸ್ಐಆರ್ ನನ್ನು ಸರಿಪಡಿಸುವಂತೆ ಸೂಚಿಸಿದ್ದು ರೋಣ ಪಟ್ಟಣದ
ಪುರಸಭೆ ವ್ಯಾಪ್ತಿಯ ನಿವಾಸಿ ರಮೇಶ್ ಜೋಗನ್ನವರ ಎಂಬುವರ ಪತ್ನಿಯು ಬಾಣಂತಿಯಾಗಿದ್ದು ಅವರ ಮನೆಗೆ ಇ ಆರ್ ಒ ಬಸವನಗೌಡ ಕೋಟೂರ ಹಾಗೂ ಎ ಇ ಆರ್ ಒ ರಮೇಶ್ ಹೊಸಮನಿ ಹಾಗೂ ಬಿ ಎಲ್ ಒ ಮತ್ತು ಇತರ ಸಿಬ್ಬಂದಿಗಳು ತೆರಳಿ ಸರಿಯಾದ ದಾಖಲೆಯನ್ನು ಪರಿಶೀಲಿಸಿ ಎಸ್ಐಆರ್‌ನಲ್ಲಿ ಆದ ಲೋಪ ದೋಷಗಳನ್ನು ಸರಿಪಡಿಸಿದರು.
- ರಾಜ್ಯದಂತ ಸರ್ವರ್ ಪ್ರಾಬ್ಲಮ್ ರಾತ್ರಿ 12 ಗಂಟೆಗೆ ರೇಷನ್ ಕಾರ್ಡ್ ಕೆ ವೈ ಸಿ ಮಾಡಲು ಅಧಿಕಾರಿಗಳ ಒತ್ತಡ ಹಾಕುತ್ತಿದ್ದಾರೆ ನ್ಯಾಯಬೆಲೆ ಅಂಗಡಿ ಮಾಲೀಕರು ಅಳಿಲು ತೋಡಿಕೊಂಡಿದ್ದಾರೆ1
- ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ. ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.2
- ಲಿಂಗಸೂರು ಪಟ್ಟಣದ 7ನೇ ವಾರ್ಡಿನಲ್ಲಿ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಲಿಂಗಸುಗೂರು ಪಟ್ಟಣದ ಪಟ್ಟಣದ 7ನೇ ಎಕ್ಸ್ಪರ್ಟ್ ಸ್ಕೂಲ್ ಹತ್ತಿರ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಬೆಳಗಿನ ಜಾವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣೇಶ ಯುವಕ ಮಂಡಳಿಯ ಸದಸ್ಯರು, ವಾರ್ಡಿನ ಗುರು ಹಿರಿಯರು ಮಹಿಳೆಯರು ಮಕ್ಕಳು ಗಣೇಶನ ಭಕ್ತರು ಭಾಗವಹಿಸಿದ್ದರು.4
- ಹಾವೇರಿ : ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-ಯುವಸಂಸತ್ ಕಾಯ೯ಕ್ರಮವನ್ನ ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಸಕ್ಕರೆ ಸಚಿವರಾದ ರುದ್ರಪ್ಪ ಎಂ ಲಮಾಣಿ ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಇಲಾಖೆಗಳ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ದಲಿತ ಸಂಘಟನೆಗಳ ನಾಯಕರು ಹಲವಾರು ಗಣ್ಯರು ಉಪಸ್ಥಿತರಿದ್ದರು1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ನಗರದಲ್ಲಿ ಅದ್ದೂರಿಯಾಗಿ ಜರುಗಿದ ಗಣೇಶೋತ್ಸವದ ಮೆರವಣಿಗೆ,ಗಮನ ಸೆಳೆದ ಮಹಿಳೆಯರ ಡೋಲ್ ತಾಶಾ ಫತಕ್ ವಾದನ1
- ಸೆಪ್ಟೆಂಬರ 18 ರಂದು ದಕ್ಷಿಣ ಕನ್ನಡ ದಲ್ಲಿ ಸಚಿವ ಸಂಪುಟ ಸಭೆ : ಸಿಎಂ ಡಿ.ಕೆ. ಶಿವಕುಮಾರ ಇದೇ ತಿಂಗಳು 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು" ಎಂದು ಹೇಳಿದರು.1
- ಮುದ್ದೇಬಿಹಾಳದಲ್ಲಿ ಗಣಪತಿ ಬಸವೇಶ್ವರ ಸರ್ಕಲಿನಲ್ಲಿ ಅತಿ ವಿಜೃಂಭಣೆಯಿಂದ ಮೆರೆವಣಿಗೆ ಮೂಲಕ . ಹುಡುಕು ಕಾಲೂನಿಗೆ ಪ್ರತಿ ಸ್ಥಾಪನೆ ಮಾಡಲಾಯಿತು.1
- ಕಿತ್ತೂರು ಉತ್ಸವಕ್ಕೆ ರಾಷ್ಟ್ರಮಟ್ಟದ ಮೆರುಗು ನೀಡುವ ಸಂಕಲ್ಪ! ಸಚಿವ ಸತೀಶ ಜಾರಕಿಹೊಳಿ. ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಬಾರಿಯ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಯಿತು. ಬೆಳಗಿನ ಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಕಿತ್ತೂರು ಮತ್ತು ಕಾಕತಿ ಪ್ರದೇಶಗಳಿಗೆ ಸೀಮಿತವಾಗಿ ಕೃಷಿ ಸಂಬಂಧಿತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಈ ಬಾರಿ ಕಿತ್ತೂರು ಉತ್ಸವಕ್ಕೆ ಸರ್ಕಾರದಿಂದ ₹5 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ಸೇರಿದಂತೆ ಒಟ್ಟು ₹10 ಕೋಟಿ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಲಾಯಿತು. ಉತ್ಸವದ ಅಂಗವಾಗಿ ಜಾನುವಾರು ಜಾತ್ರೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಮೇಳ ಆಯೋಜಿಸುವುದು ಹಾಗೂ ಅನುಮತಿ ದೊರೆತಲ್ಲಿ ಏರ್ ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು. ಸಭೆಯಲ್ಲಿ ಕಿತ್ತೂರು ಶಾಸಕ ಶ್ರೀ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ ಶ್ರೀ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಶ್ರೀ ಪ್ರಕಾಶ್ ನಿಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ಶಿಂಧೆ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಶ್ರೀ ಸುನೀಲ ಹನ್ನಮಣ್ಣವರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.1