ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ: ಕುಡಿಯುವ ನೀರಿಗಾಗಿ ಮಹಿಳೆಯರ ಆಕ್ರೋಶ ಕೂಡ್ಲಿಗಿ: ತಾಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಮಕ್ಕಳ ಮೈ ತೊಳೆಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಮಹಿಳೆಯರು ಹಾಗೂ ಸಾರ್ವಜನಿಕರು ಬುಧವಾರ ಖಾಲಿ ಕೊಡಗಳೊಂದಿಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ಕುರುಬರ ಏರಿಯಾ ಹಾಗೂ ಓಬಳದೇವರ ದೇವಸ್ಥಾನದ ಸುತ್ತಮುತ್ತಲಿನ ಸುಮಾರು 40–50 ಮನೆಗಳಿಗೆ ನಳದ ಮೂಲಕ ನೀರು ಸರಬರಾಜಾಗದೆ ಹಲವು ದಿನಗಳಿಂದ ಸಮಸ್ಯೆ ಎದುರಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ನೀರುಗಂಟಿ ಇಲ್ಲದ ಕಾರಣ ನಿಗದಿತ ಸಮಯಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಹಾಗೂ ಮಕ್ಕಳು ದೂರದ ಹೊಲ-ಗದ್ದೆಗಳಿಗೆ ತೆರಳಿ ನೀರು ತರುವಂತಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ತೆರಳುವುದನ್ನು ಬಿಟ್ಟು ದಿನದ ಬಹುಪಾಲು ಸಮಯ ನೀರು ಸಂಗ್ರಹಿಸುವುದರಲ್ಲೇ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. *ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲ:* ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗದೆ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಲ್ಲ ಎಂದು ದೂರಿದರು. ಇದರೊಂದಿಗೆ ವಿಬಿಜಿ ರಾಮ್‌ಜಿ ಯೋಜನೆಯಡಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪವೂ ಪ್ರತಿಭಟನೆಯಲ್ಲಿ ಕೇಳಿಬಂತು. “ಗ್ರಾಮದ ಮೂಲಭೂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಇಂತಹ ಗ್ರಾಪಂ ನಮಗೆ ಬೇಕೇ?” ಎಂದು ಮಹಿಳೆಯರು ಹಾಗೂ ಯುವಕರು ಆಕ್ರೋಶ ವ್ಯಕ್ತಪಡಿಸಿದರು. *ಹೊಸ ಪೈಪ್‌ಲೈನ್ ಅಳವಡಿಸಲು ಆಗ್ರಹ:* ಕುಡಿಯುವ ನೀರು ಸರಬರಾಜಾಗದ ಪ್ರದೇಶಗಳಿಗೆ ಹೊಸ ಪೈಪ್‌ಲೈನ್ ಅಳವಡಿಸಿ, ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣ ದುರಸ್ತಿಪಡಿಸಿ, ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಶೀಘ್ರವಾಗಿ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಹನುಮಕ್ಕ, ಸುನಿತಾ, ನೀಲಮ್ಮ, ಮಂಜಕ್ಕ, ಲಕ್ಷ್ಮೀದೇವಿ, ಶ್ರೀನಿಧಿ, ಸುಜಾತಾ, ಓಬಕ್ಕ, ಪದ್ದಮ್ಮ, ಅಂಜಿನಮ್ಮ, ಪಾಪಮ್ಮ, ಕುರುಬರ ಗಂಗಮ್ಮ, ವಿಶಾಲಾಕ್ಷಿ, ನಾಗವೇಣಿ, ಸೂರಮ್ಮ, ನಿಂಗಮ್ಮ, ಕುಂಬಾರ ಗಂಗಮ್ಮ, ಗೌರಮ್ಮ, ನಾಗಮ್ಮ, ರಮೇಶ್, ಬಸವರಾಜ, ಪಿ.ಎಂ. ಸಿದ್ಧಲಿಂಗಸ್ವಾಮಿ, ನಾಗರಾಜ, ಪ್ರಸನ್ನ, ಶ್ರೀನಿವಾಸ್, ಗಿರೀಶ್, ರೇವಣ್ಣ, ಕರಿಬಸಪ್ಪ, ದೇವರಾಜ, ಶ್ರೀಧರ್, ಸಚಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

- ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ *ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಂತರ , ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.1
- ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.2
- ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.1
- ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ, ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.1
- ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ ಹಲವು ಸರ್ವ ಧರ್ಮ ಸಮಾನತೆ ಸಾರುವ. ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.1
- ನವ ಯುವಶಕ್ತಿ ಸಂಘ ಮತ್ತು ಯೂತ್ ಎಸ್ಕಾರ್ಟ್ ಕಮಿಟಿ ವತಿಯಿಂದ ಅನ್ನ ಸಂತರ್ಪಣ ಕಾರ್ಯಕ್ರಮ4
- ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*- *ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ 10ನೇ ವಾರ್ಡ್ ನಲ್ಲಿ , ಶ್ರೀಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿತಗೊಳಿಸಿರುವ. ಶ್ರೀಗಣೇಶ ದೇವರ ವೇದಿಕೆ ಮುಂಭಾಗದಲ್ಲಿ , ಮಕ್ಕಳಿಗೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೋಟೆಯ ಹಾಗೂ 10ನೇ ವಾರ್ಡಿನ ಮಕ್ಕಳು , ಬಹು ಉತ್ಸುಕತೆಯಿಂದ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಿಮವಾಗಿ ಸ್ಪರ್ಧೆಯಲ್ಲಿ ವಿಚೇತರಾದವರಿಗೆ , ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4