logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

1 hr ago
user_STAR OF KOPPAL
STAR OF KOPPAL
Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
1 hr ago

ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ

44896dcd-8a56-4b2f-bb92-68eb1f8b0dc6

ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

More news from ಕರ್ನಾಟಕ and nearby areas
  • ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
    2
    ಕೊಪ್ಪಳ: ನಮ್ಮ ಒತ್ತಡದಿಂದಲೇ
ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 
'ಕೊಪ್ಪಳ: ಕೊಪ್ಪಳ ತಾಲೂಕ
ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ.
ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು 
ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು
ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
"ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.
    user_STAR OF KOPPAL
    STAR OF KOPPAL
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    1 hr ago
  • ಕುಷ್ಟಗಿಯಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ: ಮನೆ ಮನೆಯಲ್ಲಿ ಆಶೀರ್ವಾದ ದೀಪ ಬೆಳಗಲು ಕರೆ - ಶಾಸಕ ದೊಡ್ಡನಗೌಡ ಪಾಟೀಲ* *ಕುಷ್ಟಗಿ:* ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಅವರ ದೀರ್ಘಾಯುಷ್ಯಕ್ಕೆ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿದ ಅವರು, ದೇಶ ಕಂಡ ಪ್ರಬುದ್ಧ ನಾಯಕ, ಜಗತ್ತು ಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಅವರಿಗೆ ಭಾರತವನ್ನು ಬಲಿಷ್ಠ ಮಾಡುವ ಶಕ್ತಿಯನ್ನು ದೇವರು ನೀಡಲಿ. ಇಂದು 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿಜಿ ಅವರಿಗೆ ನಿಮ್ಮೆಲ್ಲರ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. ಅವರ ಹೆಸರಿನಲ್ಲಿ ಒಂದು ತಿಂಗಳ ಕಾಲ ಶಿವಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದು ಸಂಜೆ ಮನೆ ಮನೆಯಲ್ಲಿ ದೀಪ ಹಚ್ಚುವ ಮೂಲಕ ಆಶೀರ್ವಾದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯರು, ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಯ ತೀರ್ಥ ಸೌದಿ, ಈರಣ್ಣ ಗಜೇಂದ್ರಗಡ,. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಾಜಿ ಪುರಸಭೆ ಸದಸ್ಯ ಜಯತೀರ್ಥ ಆಚಾರಿ, ಅಶೋಕ ಬಳೂಟಗಿ, ಸುಖಮುನಿ ಗುರುವಿನ್, ವೆಂಕಟೇಶ ಇಂಗಳಗಿ, ಶಿವಪ್ಪ ಗೆಜ್ಜಲಗಟ್ಟಿ, ಸುರೇಶ ಕೌದಿ, ಶೈಲಜಾ ಬಾಗಲಿ, ಶರಣಮ್ಮ ಸೇರಿದಂತೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
    4
    ಕುಷ್ಟಗಿಯಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ: ಮನೆ ಮನೆಯಲ್ಲಿ ಆಶೀರ್ವಾದ ದೀಪ ಬೆಳಗಲು ಕರೆ - ಶಾಸಕ ದೊಡ್ಡನಗೌಡ ಪಾಟೀಲ*
*ಕುಷ್ಟಗಿ:* ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಅವರ ದೀರ್ಘಾಯುಷ್ಯಕ್ಕೆ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ  ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿದ ಅವರು, ದೇಶ ಕಂಡ ಪ್ರಬುದ್ಧ ನಾಯಕ, ಜಗತ್ತು ಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಅವರಿಗೆ ಭಾರತವನ್ನು ಬಲಿಷ್ಠ ಮಾಡುವ ಶಕ್ತಿಯನ್ನು ದೇವರು ನೀಡಲಿ. ಇಂದು 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿಜಿ ಅವರಿಗೆ ನಿಮ್ಮೆಲ್ಲರ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ.
ಅವರ ಹೆಸರಿನಲ್ಲಿ ಒಂದು ತಿಂಗಳ ಕಾಲ ಶಿವಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದು ಸಂಜೆ ಮನೆ ಮನೆಯಲ್ಲಿ ದೀಪ ಹಚ್ಚುವ ಮೂಲಕ ಆಶೀರ್ವಾದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯರು, ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಯ ತೀರ್ಥ ಸೌದಿ, ಈರಣ್ಣ ಗಜೇಂದ್ರಗಡ,. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಾಜಿ ಪುರಸಭೆ ಸದಸ್ಯ ಜಯತೀರ್ಥ ಆಚಾರಿ, ಅಶೋಕ ಬಳೂಟಗಿ, ಸುಖಮುನಿ ಗುರುವಿನ್, ವೆಂಕಟೇಶ ಇಂಗಳಗಿ, ಶಿವಪ್ಪ ಗೆಜ್ಜಲಗಟ್ಟಿ, ಸುರೇಶ ಕೌದಿ, ಶೈಲಜಾ ಬಾಗಲಿ, ಶರಣಮ್ಮ ಸೇರಿದಂತೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    12 min ago
  • ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.
    2
    ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ.
ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ.
ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    17 hrs ago
  • ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನ. ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. ಗದಗ : ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರತೆ ಪಡೆದ ತಿಂಗಳು ಈ ಶ್ರಾವಣ ಮಾಸ,ಮಾಸ ಪರ್ಯಂತ ಭಗವಂತನ ನಾಮಸ್ಮರಣೆಯಿಂದ ಅನುಗ್ರಹ ಪಡೆಯಲು ಸುಲಭವಾದ ಮಾರ್ಗ ಭಜನೆ ಎಂದು ಶ್ರೀ ಡಾ ಶಿವಕುಮಾರ ಮಾಹಾಸ್ವಾಮಿಗಳು ನುಡಿದರು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯ ಆಯೋಜಿಸಲಾದ ಭಜನಾ ಮಹಾ ಮಂಗಲ ಕಾರ್ಯಕ್ರಮದ ಸಮಾರೋಪ ಸಮಾರಂಭದ saದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನೆರದಿದ್ದ ಭಕ್ತರಿಗೆ ಆಶೀರ್ವಚನದಲ್ಲಿ ಮಾತನಾಡಿದ ಅವರು. ಭಜನೆ ಎಂದರೆ ಭಜ್ ಎಂಬುವ ಧಾತುವಿನಿಂದ ಬಂದಿರುವ ಪದ ಅಂದರೆ ಭಜನೆ ಅಂದರೆ ಭಗವಂತನ ನಾಮಸ್ಮರಣೆ, ಆ ಭಗವಂತನ ಕೃಪೆಗೆ ಪಾತ್ರರಾಗಲು ಭಜನೆ ಅತೀ ಶ್ರೇಷ್ಠ ಮಾರ್ಗ ಎಂದರು. ಯಾರಿಗೂ ನಮ್ಮಿಂದ ನೋವಾಗದ ರೀತಿಯ ಬದುಕುವದು ಅಸಾಧ್ಯ ಆದರೂ ಉದ್ದೇಶ ಪೂರ್ವಕವಾಗಿ ಯಾರಿಗೂ ನೋವುಂಟು ಮಾಡಬಾರದು ಏಕೆಂದರೆ ಈ ಪ್ರಪಂಚದಲ್ಲಿ ನಕಾರಾತ್ಮಕ ಹಾಗೂ ಸಕರಾತ್ಮಕ ಚಿಂತನೆಗಳು ಒಂದಕ್ಕೊಂದು ಅಂಟಿಕೊಂಡೆ ಬಂದಿರುತ್ತವೆ, ಹೇಗೆ ರಾತ್ರಿಯ ಜೊತೆಗೆ ಹಗಲು,ಸುಖದ ಜೊತೆಗೆ ದುಃಖ,ಜನನದ ಜೊತೆಗೆ ಮರಣ ಇದೆಯೋ ಹಾಗೇ  ಅದಕ್ಕಾಗಿ ಯಾವುದೇ ವ್ಯಕ್ತಿಗೂ ಬರೀ ಸುಖವೇ ಸಿಗುವದಿಲ್ಲ ಆದರೆ ಜೊತೆಗೆ ದುಃಖ ಬೆನ್ನ ಹತ್ತಿರುತ್ತದೆ ಕಾರಣ ಇಷ್ಟೇ ಪ್ರತಿ ಜೀವಿಗೂ ಹುಟ್ಟು ಅನಿಶ್ಚಿತ ಸಾವು ಖಚಿತ ಅಂತೆಯೇ ತಾವೆಲ್ಲರೂ ಪವಿತ್ರ ಶ್ರಾವಣ ಮಾಸದಲ್ಲಿ ನೀವಷ್ಟೇ ಭಜನೆ ಮಾಡದೇ ಇಡೀ ಗ್ರಾಮದ ಜನರ ಮನ ತಲುಪುವಂತೆ ಭಜನೆಯೊಂದಿಗೆ ಭಕ್ತಿಯ ಗೀತೆಗಳನ್ನು ಹಾಡುತ್ತಾ ವಠಾರಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಷ್ಠೆ ಮೆರೆದು ಕೊನೆಯ ಹಂತ ಭಜನಾ ಮುಕ್ತಾಯ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಭ್ರಮ ವಿಚಾರ ಎಂದರು. ರಾತ್ರಿಯಿಡೀ ಸಪ್ತಾಹ ಮಾಡಿ ಬೆಳಿಗ್ಗೆ ಗ್ರಾಮದ ತುಂಬೆಲ್ಲಾ  ಭಜನೆಯೊಂದಿಗೆ ಮಾರುತೇಶ್ವರನ ಎಂಟು ಅಡಿ ಹಾಗೂ ಬಸವೇಶ್ವರನ ಭಾವಚಿತ್ರ ಮೆರವಣಿಗೆ ನೆರವೇರಿಸಿ ನಮ್ಮ ಪ್ರವಚನಕ್ಕಾಗಿ ಶಾಂತಿ ಸಹನೆಯಿಂದ ಕುಳಿತಿದ್ದು ನೋಡಿದರೆ ಆ ಮಾರುತೇಶ್ವರನ ಕೃಪೆಗೆ ತಾವೆಲ್ಲರೂ ಪಾತ್ರರಾಗಿದ್ದಿರಿ ಎನ್ನಬಹುದು. ನಮ್ಮ ರಾಜ್ಯದಲ್ಲಿ ನಿರಂತರ ಸಪ್ತಾಹ ಮಾಡುವ ಏಕೈಕ ಮಠ ಹುಬ್ಬಳ್ಳಿ ಸಿದ್ದಾರೂಢರ ಮಠ ಸುಮಾರು 94 ವರ್ಷಗಳ ಕಾಲ ಪ್ರತಿ ನಿತ್ಯ ಸಪ್ತಾಹ ಮಾಡುತ್ತಿರುವುದು ಇಂದಿಗೂ ಕಾಣಬಹುದು ಎಂದರು. ದಿವ್ಯ ಸಾನಿಧ್ಯವಹಿಸಿದ್ದ  ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ನಿರಂಜನ ಮಹಾಸ್ವಾಮಿಗಳು ಭಜನಾ ಸಮಾರೋಪ ಕುರಿತು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ವೇದ ಮೂರ್ತಿ ಮಹಾದೇವಯ್ಯನವರು ಸಾನಿಧ್ಯ ವಹಿಸಿಕೊಂಡು ಅವರೂ ಕೂಡ ಆಶೀರ್ವಚನ ನೀಡಿದರು. ಕಾರ್ಯಕ್ರಮದ ನಿರೂಪಣೆ ವೀರಭದ್ರಯ್ಯ ಸಾಲಿಮಠ ನೆಡೆಸಿದರೆ ಎಸ್ ಎಸ್ ಅಂಗಡಿ ಶಿಕ್ಷಕರು ಸ್ವಾಗತಿಸಿದರು. ಶಿವಕುಮಾರಗೌಡ ಚಿಕ್ಕನಗೌಡರ ವಂದಿಸಿದರು. ಡಾ ಅಂಬೇಡ್ಕರ್ ಭಜನಾ ಸಂಘದ ಸದಸ್ಯರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಹೊನ್ನಾಪುರ ಗ್ರಾಮದ ಶ್ರೀ ಮಲ್ಲಜ್ಜೇಶ್ವರ ಭಜನಾ ಮಂಡಳಿಯವರು,ಗ್ರಾಮದ ಹಿರಿಯರಾದ  ವಿ ಎನ್ ಗೊಜನೂರು,ಅಶೋಕ ಗೊಜನೂರು, ಮಹೇಶಗೌಡ ಚಿಕ್ಕನಗೌಡರ ಶೇಕಪ್ಪ ಹುಲಗೂರು, (ಕೆಮ್ಮಣ್ಣವರ )ಭಜನಾ ಮಂಡಳಿ ಅಧ್ಯಕ್ಷ ಸಿದ್ದು ದುಂಡಪ್ಪನವರ, ವಿನೋದ ಗೊಜನೂರು ಪರಪ್ಪ ಬರಡ್ವಾದ ಕುರಗೋಡೆಪ್ಪ ಮುಕ್ಕಣ್ಣವರ ಸಿ ಬಿ ಮುಕ್ಕಣ್ಣವರ, ಬಸವರಾಜ ಹಡಪದ, ವೀರಪ್ಪ ದೇಸಾಯಿ ಸೇರಿದಂತೆ ಇನ್ನುಳಿದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
    2
    ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. 
ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಗಳ ಆಶೀರ್ವಚನ.
ದೇವರ ಅನುಗ್ರಹ ಪಡೆಯಲು ಸುಲಭ ಮಾರ್ಗ ಭಜನೆ ಡಾ : ಶಿವಕುಮಾರ ಮಹಾಸ್ವಾಮಿಜಿ. 
ಗದಗ : ಭಾರತೀಯ ಸಂಸ್ಕೃತಿಯಲ್ಲಿ ಪಾವಿತ್ರತೆ ಪಡೆದ ತಿಂಗಳು ಈ ಶ್ರಾವಣ ಮಾಸ,ಮಾಸ ಪರ್ಯಂತ ಭಗವಂತನ ನಾಮಸ್ಮರಣೆಯಿಂದ ಅನುಗ್ರಹ ಪಡೆಯಲು ಸುಲಭವಾದ ಮಾರ್ಗ ಭಜನೆ ಎಂದು ಶ್ರೀ ಡಾ ಶಿವಕುಮಾರ ಮಾಹಾಸ್ವಾಮಿಗಳು ನುಡಿದರು.
ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯ ಆಯೋಜಿಸಲಾದ ಭಜನಾ ಮಹಾ ಮಂಗಲ ಕಾರ್ಯಕ್ರಮದ ಸಮಾರೋಪ ಸಮಾರಂಭದ saದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ನೆರದಿದ್ದ ಭಕ್ತರಿಗೆ ಆಶೀರ್ವಚನದಲ್ಲಿ ಮಾತನಾಡಿದ ಅವರು.
ಭಜನೆ ಎಂದರೆ ಭಜ್ ಎಂಬುವ ಧಾತುವಿನಿಂದ ಬಂದಿರುವ ಪದ ಅಂದರೆ ಭಜನೆ ಅಂದರೆ ಭಗವಂತನ ನಾಮಸ್ಮರಣೆ, ಆ ಭಗವಂತನ ಕೃಪೆಗೆ ಪಾತ್ರರಾಗಲು ಭಜನೆ ಅತೀ ಶ್ರೇಷ್ಠ ಮಾರ್ಗ ಎಂದರು.
ಯಾರಿಗೂ ನಮ್ಮಿಂದ ನೋವಾಗದ ರೀತಿಯ ಬದುಕುವದು ಅಸಾಧ್ಯ ಆದರೂ ಉದ್ದೇಶ ಪೂರ್ವಕವಾಗಿ ಯಾರಿಗೂ ನೋವುಂಟು ಮಾಡಬಾರದು ಏಕೆಂದರೆ ಈ ಪ್ರಪಂಚದಲ್ಲಿ ನಕಾರಾತ್ಮಕ ಹಾಗೂ ಸಕರಾತ್ಮಕ ಚಿಂತನೆಗಳು ಒಂದಕ್ಕೊಂದು ಅಂಟಿಕೊಂಡೆ ಬಂದಿರುತ್ತವೆ, ಹೇಗೆ ರಾತ್ರಿಯ ಜೊತೆಗೆ ಹಗಲು,ಸುಖದ ಜೊತೆಗೆ ದುಃಖ,ಜನನದ ಜೊತೆಗೆ ಮರಣ ಇದೆಯೋ ಹಾಗೇ  ಅದಕ್ಕಾಗಿ ಯಾವುದೇ ವ್ಯಕ್ತಿಗೂ ಬರೀ ಸುಖವೇ ಸಿಗುವದಿಲ್ಲ ಆದರೆ ಜೊತೆಗೆ ದುಃಖ ಬೆನ್ನ ಹತ್ತಿರುತ್ತದೆ ಕಾರಣ ಇಷ್ಟೇ ಪ್ರತಿ ಜೀವಿಗೂ ಹುಟ್ಟು ಅನಿಶ್ಚಿತ ಸಾವು ಖಚಿತ ಅಂತೆಯೇ ತಾವೆಲ್ಲರೂ ಪವಿತ್ರ ಶ್ರಾವಣ ಮಾಸದಲ್ಲಿ ನೀವಷ್ಟೇ ಭಜನೆ ಮಾಡದೇ ಇಡೀ ಗ್ರಾಮದ ಜನರ ಮನ ತಲುಪುವಂತೆ ಭಜನೆಯೊಂದಿಗೆ ಭಕ್ತಿಯ ಗೀತೆಗಳನ್ನು ಹಾಡುತ್ತಾ ವಠಾರಗಳಲ್ಲಿ ಸಂಚರಿಸಿ ಭಕ್ತಿಯ ಪರಾಕಷ್ಠೆ ಮೆರೆದು ಕೊನೆಯ ಹಂತ ಭಜನಾ ಮುಕ್ತಾಯ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಭ್ರಮ ವಿಚಾರ ಎಂದರು.
ರಾತ್ರಿಯಿಡೀ ಸಪ್ತಾಹ ಮಾಡಿ ಬೆಳಿಗ್ಗೆ ಗ್ರಾಮದ ತುಂಬೆಲ್ಲಾ  ಭಜನೆಯೊಂದಿಗೆ ಮಾರುತೇಶ್ವರನ ಎಂಟು ಅಡಿ ಹಾಗೂ ಬಸವೇಶ್ವರನ ಭಾವಚಿತ್ರ ಮೆರವಣಿಗೆ ನೆರವೇರಿಸಿ ನಮ್ಮ ಪ್ರವಚನಕ್ಕಾಗಿ ಶಾಂತಿ ಸಹನೆಯಿಂದ ಕುಳಿತಿದ್ದು ನೋಡಿದರೆ ಆ ಮಾರುತೇಶ್ವರನ ಕೃಪೆಗೆ ತಾವೆಲ್ಲರೂ ಪಾತ್ರರಾಗಿದ್ದಿರಿ ಎನ್ನಬಹುದು. ನಮ್ಮ ರಾಜ್ಯದಲ್ಲಿ ನಿರಂತರ ಸಪ್ತಾಹ ಮಾಡುವ ಏಕೈಕ ಮಠ ಹುಬ್ಬಳ್ಳಿ ಸಿದ್ದಾರೂಢರ ಮಠ ಸುಮಾರು 94 ವರ್ಷಗಳ ಕಾಲ ಪ್ರತಿ ನಿತ್ಯ ಸಪ್ತಾಹ ಮಾಡುತ್ತಿರುವುದು ಇಂದಿಗೂ ಕಾಣಬಹುದು ಎಂದರು.
ದಿವ್ಯ ಸಾನಿಧ್ಯವಹಿಸಿದ್ದ  ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ನಿರಂಜನ ಮಹಾಸ್ವಾಮಿಗಳು ಭಜನಾ ಸಮಾರೋಪ ಕುರಿತು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ವೇದ ಮೂರ್ತಿ ಮಹಾದೇವಯ್ಯನವರು ಸಾನಿಧ್ಯ ವಹಿಸಿಕೊಂಡು ಅವರೂ ಕೂಡ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ನಿರೂಪಣೆ ವೀರಭದ್ರಯ್ಯ ಸಾಲಿಮಠ ನೆಡೆಸಿದರೆ ಎಸ್ ಎಸ್ ಅಂಗಡಿ ಶಿಕ್ಷಕರು ಸ್ವಾಗತಿಸಿದರು. ಶಿವಕುಮಾರಗೌಡ ಚಿಕ್ಕನಗೌಡರ ವಂದಿಸಿದರು. ಡಾ ಅಂಬೇಡ್ಕರ್ ಭಜನಾ ಸಂಘದ ಸದಸ್ಯರು, ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರು ಹಾಗೂ ಹೊನ್ನಾಪುರ ಗ್ರಾಮದ ಶ್ರೀ ಮಲ್ಲಜ್ಜೇಶ್ವರ ಭಜನಾ ಮಂಡಳಿಯವರು,ಗ್ರಾಮದ ಹಿರಿಯರಾದ  ವಿ ಎನ್ ಗೊಜನೂರು,ಅಶೋಕ ಗೊಜನೂರು, ಮಹೇಶಗೌಡ ಚಿಕ್ಕನಗೌಡರ ಶೇಕಪ್ಪ ಹುಲಗೂರು, (ಕೆಮ್ಮಣ್ಣವರ )ಭಜನಾ ಮಂಡಳಿ ಅಧ್ಯಕ್ಷ ಸಿದ್ದು ದುಂಡಪ್ಪನವರ, ವಿನೋದ ಗೊಜನೂರು ಪರಪ್ಪ ಬರಡ್ವಾದ ಕುರಗೋಡೆಪ್ಪ ಮುಕ್ಕಣ್ಣವರ ಸಿ ಬಿ ಮುಕ್ಕಣ್ಣವರ, ಬಸವರಾಜ ಹಡಪದ, ವೀರಪ್ಪ ದೇಸಾಯಿ ಸೇರಿದಂತೆ ಇನ್ನುಳಿದ ಸರ್ವ ಸದಸ್ಯರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    1 hr ago
  • ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*- *ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ 10ನೇ ವಾರ್ಡ್ ನಲ್ಲಿ , ಶ್ರೀಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿತಗೊಳಿಸಿರುವ. ಶ್ರೀಗಣೇಶ ದೇವರ ವೇದಿಕೆ ಮುಂಭಾಗದಲ್ಲಿ , ಮಕ್ಕಳಿಗೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೋಟೆಯ ಹಾಗೂ 10ನೇ ವಾರ್ಡಿನ ಮಕ್ಕಳು , ಬಹು ಉತ್ಸುಕತೆಯಿಂದ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಿಮವಾಗಿ ಸ್ಪರ್ಧೆಯಲ್ಲಿ ವಿಚೇತರಾದವರಿಗೆ , ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*-
*ಕೂಡ್ಲಿಗಿ : ಕೋಟೆ ಬಾಯ್ಸ್ ಯುವಕರ ಸಂಘದಿಂದ ಗಣೇಶೋತ್ಸವ ನಿಮ್ಮಿತ್ತ ಮಕ್ಕಳಿಗೆ ಸ್ಪರ್ಧೆಗಳು*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ  10ನೇ ವಾರ್ಡ್ ನಲ್ಲಿ , ಶ್ರೀಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿತಗೊಳಿಸಿರುವ. ಶ್ರೀಗಣೇಶ ದೇವರ ವೇದಿಕೆ ಮುಂಭಾಗದಲ್ಲಿ , ಮಕ್ಕಳಿಗೆ ವಿವಿದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೋಟೆಯ ಹಾಗೂ 10ನೇ ವಾರ್ಡಿನ ಮಕ್ಕಳು  , ಬಹು ಉತ್ಸುಕತೆಯಿಂದ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಿಮವಾಗಿ ಸ್ಪರ್ಧೆಯಲ್ಲಿ ವಿಚೇತರಾದವರಿಗೆ , ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    8 hrs ago
  • ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    1
    ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ
ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು.
ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. 
ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ  ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    21 hrs ago
  • ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ಇಳಕಲ್ ; ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ತಾಯಿಯವರು ನಿಧನದ ಹಿನ್ನೆಲೆ , ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
    4
    ಮಾಜಿ ಶಾಸಕ  ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ  ಶಾಸಕ ಶರಣಗೌಡ ಕಂದಕೂರ
ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ  ಶಾಸಕ ಶರಣಗೌಡ ಕಂದಕೂರ
ಇಳಕಲ್ ; ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ತಾಯಿಯವರು ನಿಧನದ ಹಿನ್ನೆಲೆ , ಗುರುಮಿಠಕಲ್  ಕ್ಷೇತ್ರದ  ಜೆಡಿಎಸ್ ಪಕ್ಷದ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
    2
    ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ  
ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್
ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಕಛೇರಿಯಲ್ಲಿ 
ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ
ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು.
"ವೈಜನಾಥ ಪಾಟೀಲ್
ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು.
ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. 
ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು.
ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. 
ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ  ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್,  ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ
ಮಂಜುನಾಥ ಮಾಲಿಪಾಟೀಲ,  
ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು  ಕಾರ್ಯಕರ್ತರು ಉಪಸ್ಥಿತರಿದ್ದರು.
    user_STAR OF KOPPAL
    STAR OF KOPPAL
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.