ಬ್ರಹ್ಮಗಡ್ಡಿ ಮಠದಲ್ಲಿ ಏ.27ರಂದು ಶ್ರೀ ಸಿದ್ಧಲಿಂಗೇಶ್ವರ ಮಹಾರಥೋತ್ಸವ ಮುಧೋಳ:ಇಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಸಿದ್ಧಕ್ಷೇತ್ರ ಬ್ರಹ್ಮಗಡ್ಡಿ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ 45ನೇ ಮಹಾರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಸಡಗರದಿಂದ ನಡೆಯುತ್ತಿವೆ. ಏ. 27ರ ಸೋಮವಾರದಂದು ಬೆಳಿಗ್ಗೆ 7:15ಕ್ಕೆ ಶ್ರೀ ಸಿದ್ಧಲಿಂಗ ಋಷಿಗಳ ರುದ್ರಾಭಿಷೇಕ ಪೂಜೆ ನೆರವೇರಲಿದ್ದು, ಬೆಳಿಗ್ಗೆ 10:15ಕ್ಕೆ ರಥಕ್ಕೆ ಶಾಸ್ತ್ರೋಕ್ತವಾಗಿ ಕಳಸಾರೋಹಣ ಮಾಡಲಾಗುವುದು. ಮಧ್ಯಾಹ್ನ 12:30ಕ್ಕೆ ಭಕ್ತಾದಿಗಳಿಗೆ ಮಹಾಪ್ರಸಾದ ಸೇವೆ ಇರಲಿದ್ದು, ಮಧ್ಯಾಹ್ನ 2:15ಕ್ಕೆ ಶ್ರೀ ಸಿದ್ಧಲಿಂಗ ಋಷಿಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವವು ಪುರಪ್ರವೇಶ ಮಾಡಲಿದೆ. ಅಂದು ಸಾಯಂಕಾಲ 6:25ಕ್ಕೆ ಭಕ್ತ ಸಮೂಹದ ಸಮ್ಮುಖದಲ್ಲಿ ವೈಭವದ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ 'ಮಹಾರಥೋತ್ಸವ' ಜರುಗಲಿದೆ. ಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಏಪ್ರಿಲ್ 28ರ ಮಂಗಳವಾರದಂದು ಬೆಳಿಗ್ಗೆ 7:15ಕ್ಕೆ ಶ್ರೀ ಸಿದ್ಧಲಿಂಗ ಋಷಿಗಳ ವಿಭೂತಿ ಮಹಾಪೂಜೆ ನಡೆಯಲಿದೆ. ಅಂದು ರಾತ್ರಿ 7:15ರಿಂದ 8:15ರವರೆಗೆ ಭಕ್ತಿ ಸಂಗೀತ ಹಾಗೂ ಭಜನೆಯೊಂದಿಗೆ ಪತ್ರಿ-ಪುಷ್ಪಗಳಿಂದ ಶ್ರೀ ಸಿದ್ಧಲಿಂಗ ಋಷಿಗಳ 'ಕೌದಿ ಮಹಾಪೂಜೆ' ವಿಶೇಷವಾಗಿ ನೆರವೇರಲಿದೆ. ತದನಂತರ ಶ್ರೀಗಳ ಜಯಜಯಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಮಂಗಲಗೊಳ್ಳಲಿವೆ ಎಂದು ಮಠದ ಸಮಿತಿ ತಿಳಿಸಿದೆ.

- ಕರ್ನಾಟಕದಲ್ಲಿ 2025 ರಿಂದ 2026ರವರೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಲಂಚ ಪ್ರಕರಣಗಳು, PSI ನೇಮಕಾತಿ ಹಗರಣ, ನಿರ್ಲಕ್ಷ್ಯದಿಂದ ನಡೆದ ಘಟನೆಗಳು ಮತ್ತು ಅಪರಾಧಗಳಲ್ಲಿ ಪೊಲೀಸ್ ಸಿಬ್ಬಂದಿಯ ಭಾಗವಹಿಸುವಿಕೆ—ಇವುಗಳೆಲ್ಲವೂ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತಿವೆ.1
- ಸಿಂದಗಿ: ಭೂ ಸಂತ್ರಸ್ತರಿಗಾಗಿ ಎರಡು ತಿಂಗಳ ಕಾಲ ಲೋಕ ಅದಾಲತ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪರಿಹಾರದ ವಿತರಣೆಗಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಲೂಕ ದಂಡಾಧಿಕಾರಿ ಕರಿಯಪ್ಪ ಎಸ್ ಬೆಳ್ಳಿ ಅವರು ಬುಧವಾರದಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಭೂಸಂತ್ರಸ್ಥ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.1
- ಹುನಗುಂದ ತಾಲೂಕು ಚಿತ್ತವಾಡಿಗೆ ಗ್ರಾಮದಲ್ಲಿ ಭೀಕರ ಗಾಳೆಯಿಂದ ಮಳೆ ಜೋರಾಗಿತ್ತು ಸಾಯಂಕಾಲ 5:30 ಗಂಟೆಯಿಂದ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದರು ಬಿರೇಸಿನ ಗಾಳಿ ಮಳೆಗೆ ಯಾವುದೇ ಹಾನಿ ಉಂಟು ಆಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ1
- ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಣ ಪಡೆದಿರುವ ಆರೋಪ ಹಿನ್ನೆಲೆಯಲ್ಲಿ ಮೂವರ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಮಾಹಾಂತ ಸಂಗಮ ನಗರದ ರವಿಕುಮಾರ ಮದ್ದಾನಿ ಹಿರೇಮಠ ಬಂಧುಗಳ ಮದುವೆ ಸಮಾರಂಭ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಾಳೆ ನೆಡೆಯಲಿದೆ. ಈ ಮದುವೆ ಸಮಾರಂಭ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭ ಜೊತೆಗೆ ಸುಮಾರು 51 ಜೋಡಿ ಉಚಿತ ಸರ್ವ ಧರ್ಮಗಳ ಉಚಿತ ಮದುವೆ ಸಮಾರಂಭವನ್ನು ನಾಳೆ ಏರ್ಪಡಿಸಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಉಚಿತ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆಯಲಿದೆ. ಮದುವೆಗೆ ಬೇಕಾದ ಎಲ್ಲಾ ಸಕಲ ಸಿದ್ಧಂತೆಗಳನ್ನು ಮಾಡಿಕೊಂಡಿದ್ದು ಒಟ್ಟಾರೆಯಾಗಿ ಈ ಮದುವೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಈ ಉಚಿತ ಮದುವೆ ಸಮಾರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಂಗಮ ಸಮಾಜದ ಪಂಚಪೀಠ ಅಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಮಹಾ ಸ್ವಾಮಿಗಳು ಉಜ್ಜನಿ ಪೀಠದ ಮಹಾಸ್ವಾಮಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಮತ್ತು ಕೊಪ್ಪಳ ಜಿಲ್ಲೆಯ ಸ್ಥಳೀಯ ಶಾಸಕರು ಕುಷ್ಟಗಿ ಪಟ್ಟಣದ ಜನತೆ ಪಾಲ್ಗೊಳ್ಳಲಿದ್ದು ಈ ಒಂದು ಮದುವೆಯಲ್ಲಿ ಸರಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಸೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದಾರೆ.3
- Post by ABU NEWS CHANNEL ಸಂಪಾದಕರು1
- ಕರ್ನಾಟಕ ರಾಜ್ಯದ ಲ್ಲಿ ಟ್ರೈನಿನಲ್ಲಿ ಓಡಾಡುವ ಜನರು . ನೋಡಬೇಕಾದಂತ ದೃಶ್ಯ ಯಾವುದೇ ತಿನ್ನುವ ಪದಾರ್ಥ ಟ್ರೈನಿನಲ್ಲಿ ತೆಗೆದುಕೊಳ್ಳಬಾರದು ಯಾಕಂದರೆ ತಿನ್ನುವ ಪದಾರ್ಥ ಸ್ವಚ್ಛತೆ ಇರುವುದಿಲ್ಲ ಮನುಷ್ಯನ ಶರೀರಕ್ಕೆ ಹಾನಿಕರವಾಗಬಹುದು ಆದಕಾರಣ ಯಾರು ದಯವಿಟ್ಟು ತಿನ್ನಬೇಡಿ.1