logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ವರದಿ:ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ. ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.

1 day ago
user_Nanjunda Nayak
Nanjunda Nayak
Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
1 day ago

ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ವರದಿ:ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು

೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ

0d029b68-af7d-49d1-806c-92c3cec07dc2

ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ

09bfe9b5-7f5b-49a4-86b6-e500ec5f6352

ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ. ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.

More news from ಕರ್ನಾಟಕ and nearby areas
  • ನರೇಂದ್ರಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ, ಸೀರೆ, ಸಿಹಿ ವಿತರಣೆ ವರದಿ: ಹೊಮ್ಮನಂಜುಂಡನಾಯಕ ನರೇಂದ್ರಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ, ಸೀರೆ, ಸಿಹಿ ವಿತರಣೆ ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿಯವರ 76ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್, ಬಿಜೆಪಿ ಕಾರ್ಯಕರ್ತರ ವತಿಯಿಂದ ನಗರದಲ್ಲಿ ಪೌರಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿ, ಸೀರೆ, ಸಿಹಿ ವಿತರಿಸಲಾಯಿತು. ಇದಕ್ಕೂ ಮೊದಲು ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಅವರ ನೇತೃತ್ವದಲ್ಲಿ ಮೋದಿಯವರ ಹೆಸರಿನಲ್ಲಿ ಆರ್ಚನೆ ಮಾಡಿಸಿ... ವಿಶೇಷಪೂಜೆ ‌ ‌ ಸಲ್ಲಿಸಲಾಯಿತು. ಪೂಜಾ ಕಾರ್ಯ ನೆರವೇರಿಸಿದ ಆಗಮಿಕ ಪ್ರದೀಪ್‌ ಕುಮಾ‌ರ್ ದೀಕ್ಷಿತ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮದಿನದ ಅಂಗವಾಗಿ ಶಿವುವಿರಾಟ್ ಅವರು ಸಮಾಜಮುಖಿ ಚಿಂತನೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಣೆ ಮಾಡುತಿದ್ದಾರೆ. ಈ ಭೂಮಿಗೆ ಅನೇಕ ಮಹನೀಯರು ತಮ್ಮ ಕೊಡುಗೆ ನೀಡಿದ್ದಾರೆ. ಬಹಳ ವಿಶಿಷ್ಠ ‌ ವ್ಯಕ್ತಿತ್ವಯುಳ್ಳ ವ್ಯಕ್ತಿ ನರೇಂದ್ರಮೋದಿಯವರು, ಅವರು ದೇಶದ ಪ್ರಧಾನಿಗಳಾಗಿ ಅವರು ಆಯ್ಕೆಯಾದ ಮೇಲೆ ರಾಷ್ಟ್ರದ ಚಿಂತನೆಯಲ್ಲಿ ದೇಶ ಕಂಡಂತಹ ಅನೇಕ ಪ್ರಧಾನಿಗಳಲ್ಲಿ ನರೇಂದ್ರಮೋದಿಯವರು ಅಗ್ರಗಣ್ಯರು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್ ಮಾತನಾಡಿ, ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಇಂದು ದೇಶದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ನರೇಂದ್ರಮೋದಿಯವರು ಸೃಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಳ ಸೌಲಭ್ಯ ಕಲ್ಪಿಸಿದರು. ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ಕಲ್ಪಿಸಿದರು. ಉತ್ತ ಮ ರಸ್ತೆಗಳ ನಿರ್ಮಾಣ, ದೊಡ್ಡದೊಡ್ಡ ಸೇತುವೆ ‌ ನಿರ್ಮಾಣ ಮಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಲ್ಲದೆ ದೇಶದ ಪ್ರಗತಿಗಾಗಿ ಒತ್ತು ನೀಡಿದ್ದಾರೆ. ಎಂದರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ. ಎಂ.ರಾಮಚಂದ್ರ ಮಾತನಾಡಿ, ನರೇಂದ್ರಮೋದಿಯವರ ಆಡಳಿತದ ಅವಧಿಯಲ್ಲಿ ದೇಶ ಸುಭದ್ರವಾಗಿದೆ. ಯಾವುದೇ ಆರ್ಥಿಕ ಸಮಸ್ಯೆ. ಇಲ್ಲದೆ ಭಾರತವನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವ ಕೆಲಸವನ್ನು ನರೇಂದ್ರಮೋದಿಯವರು ಮಾಡಿದ್ದಾರೆ ಎಂದರು. ಕಾರ್ಯಕ್ರಮದ ಆಯೋಜಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಮಾತನಾಡಿ, ಪ್ರಧಾನಿಮಂತ್ರಿ ನರೇಂದ್ರಮೋದಿ ಅವರು ಪೌರಕಾರ್ಮಿಕರ ಪಾದಗಳನ್ನು ತೊಳೆದು, ಒರೆಸಿ ಗೌರವಿಸಿದರು. ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಸೇರಿ ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ, ಪೌರಕಾರ್ಮಿಕರ ಮಹಿಳೆಯರನ್ನು ಸನ್ಮಾನಿಸಿ, ಸೀರೆ ‌ ವಿತರಣೆ ಮಾಡುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿ ಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಯಸುಂದರ್, ಡಾ.ಎ.ಆ‌ರ್.ಬಾಬು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಆರ್.ಸುಂದರ್, ನಾರಾಯಣಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದದ್ರಪ್ಪ, ಜಿಲ್ಲಾ ವಕ್ತಾರ ಮನೋಜ್‌ಪಟೇಲ್, ಮೂಡ್ಲು ಪುರ ನಂದೀಶ್, ಶ್ರೀನಿವಾಸಗೌಡ, ನಗರಸಭಾ ಮಾಜಿ ಸದಸ್ಯರಾದ ರಾಜೇಶ್, ಶಿವಣ್ಣ, ಜಿಲ್ಲಾ ಕಾರ್ಯದರ್ಶಿನಟರಾಜು, ಆನಂದ್‌ ಭಗೀರಥ, ರವಿ, ನಾಗೇಂದ್ರ, ಆಟೋ ಮಹೇಶ್, ಕೃಷ್ಣ, ಚಂದ್ರಶೇಖರ್, ಪ್ರದೀಪ್, ರಾಕೇಶ್, ಮಣಿಕಂಠ, ಮನು, ಅರುಣ್, ಪ್ರಸನ್ನ, ಭಾನು, ಟಗರುಶಿವ, ಕುಮಾರ್, ಕಿಲಗೆರೆಶಿವು, ರಾಮಸಮುದ್ರಶಿವು, ವೆಂಕಟೇಶ್, ಪುರುಷೋತ್ತಮ . ಫೃಥ್ವಿ, ಕಿರಣ ಇತರರು ಹಾಜರಿದ್ದರು.
    4
    ನರೇಂದ್ರಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ, ಸೀರೆ, ಸಿಹಿ ವಿತರಣೆ
ವರದಿ: ಹೊಮ್ಮನಂಜುಂಡನಾಯಕ
ನರೇಂದ್ರಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ, ಸೀರೆ, ಸಿಹಿ ವಿತರಣೆ
ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿಯವರ 76ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್, ಬಿಜೆಪಿ ಕಾರ್ಯಕರ್ತರ ವತಿಯಿಂದ ನಗರದಲ್ಲಿ ಪೌರಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿ, ಸೀರೆ, ಸಿಹಿ ವಿತರಿಸಲಾಯಿತು.
ಇದಕ್ಕೂ ಮೊದಲು ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಅವರ ನೇತೃತ್ವದಲ್ಲಿ ಮೋದಿಯವರ ಹೆಸರಿನಲ್ಲಿ ಆರ್ಚನೆ ಮಾಡಿಸಿ... ವಿಶೇಷಪೂಜೆ ‌ ‌ ಸಲ್ಲಿಸಲಾಯಿತು. ಪೂಜಾ ಕಾರ್ಯ ನೆರವೇರಿಸಿದ ಆಗಮಿಕ ಪ್ರದೀಪ್‌ ಕುಮಾ‌ರ್ ದೀಕ್ಷಿತ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮದಿನದ ಅಂಗವಾಗಿ ಶಿವುವಿರಾಟ್ ಅವರು ಸಮಾಜಮುಖಿ ಚಿಂತನೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಣೆ ಮಾಡುತಿದ್ದಾರೆ. ಈ ಭೂಮಿಗೆ ಅನೇಕ ಮಹನೀಯರು ತಮ್ಮ ಕೊಡುಗೆ ನೀಡಿದ್ದಾರೆ. ಬಹಳ ವಿಶಿಷ್ಠ ‌ ವ್ಯಕ್ತಿತ್ವಯುಳ್ಳ ವ್ಯಕ್ತಿ ನರೇಂದ್ರಮೋದಿಯವರು, ಅವರು ದೇಶದ ಪ್ರಧಾನಿಗಳಾಗಿ ಅವರು ಆಯ್ಕೆಯಾದ ಮೇಲೆ ರಾಷ್ಟ್ರದ ಚಿಂತನೆಯಲ್ಲಿ ದೇಶ ಕಂಡಂತಹ ಅನೇಕ ಪ್ರಧಾನಿಗಳಲ್ಲಿ ನರೇಂದ್ರಮೋದಿಯವರು ಅಗ್ರಗಣ್ಯರು ಎಂದರು. 
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್ ಮಾತನಾಡಿ, ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಇಂದು ದೇಶದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ನರೇಂದ್ರಮೋದಿಯವರು ಸೃಚ್ಚಭಾರತ್ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಳ ಸೌಲಭ್ಯ ಕಲ್ಪಿಸಿದರು. ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ಕಲ್ಪಿಸಿದರು. ಉತ್ತ ಮ ರಸ್ತೆಗಳ ನಿರ್ಮಾಣ, ದೊಡ್ಡದೊಡ್ಡ ಸೇತುವೆ ‌ ನಿರ್ಮಾಣ ಮಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಲ್ಲದೆ ದೇಶದ ಪ್ರಗತಿಗಾಗಿ ಒತ್ತು ನೀಡಿದ್ದಾರೆ. ಎಂದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ. ಎಂ.ರಾಮಚಂದ್ರ ಮಾತನಾಡಿ, ನರೇಂದ್ರಮೋದಿಯವರ ಆಡಳಿತದ ಅವಧಿಯಲ್ಲಿ ದೇಶ ಸುಭದ್ರವಾಗಿದೆ. ಯಾವುದೇ ಆರ್ಥಿಕ ಸಮಸ್ಯೆ. ಇಲ್ಲದೆ ಭಾರತವನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವ ಕೆಲಸವನ್ನು ನರೇಂದ್ರಮೋದಿಯವರು ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಆಯೋಜಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವುವಿರಾಟ್ ಮಾತನಾಡಿ, ಪ್ರಧಾನಿಮಂತ್ರಿ ನರೇಂದ್ರಮೋದಿ ಅವರು ಪೌರಕಾರ್ಮಿಕರ ಪಾದಗಳನ್ನು ತೊಳೆದು, ಒರೆಸಿ ಗೌರವಿಸಿದರು. ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಸೇರಿ ನಗರದ ಮುದುಕುಮಾರಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ, ಪೌರಕಾರ್ಮಿಕರ ಮಹಿಳೆಯರನ್ನು ಸನ್ಮಾನಿಸಿ, ಸೀರೆ ‌ ವಿತರಣೆ ಮಾಡುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿ ಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಯಸುಂದರ್, ಡಾ.ಎ.ಆ‌ರ್.ಬಾಬು,
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಆರ್.ಸುಂದರ್, ನಾರಾಯಣಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದದ್ರಪ್ಪ, ಜಿಲ್ಲಾ ವಕ್ತಾರ ಮನೋಜ್‌ಪಟೇಲ್, ಮೂಡ್ಲು ಪುರ ನಂದೀಶ್, ಶ್ರೀನಿವಾಸಗೌಡ, ನಗರಸಭಾ ಮಾಜಿ ಸದಸ್ಯರಾದ ರಾಜೇಶ್, ಶಿವಣ್ಣ, ಜಿಲ್ಲಾ ಕಾರ್ಯದರ್ಶಿನಟರಾಜು, ಆನಂದ್‌ ಭಗೀರಥ, ರವಿ, ನಾಗೇಂದ್ರ, ಆಟೋ ಮಹೇಶ್, ಕೃಷ್ಣ, ಚಂದ್ರಶೇಖರ್, ಪ್ರದೀಪ್, ರಾಕೇಶ್, ಮಣಿಕಂಠ, ಮನು, ಅರುಣ್, ಪ್ರಸನ್ನ, ಭಾನು, ಟಗರುಶಿವ, ಕುಮಾರ್, ಕಿಲಗೆರೆಶಿವು, ರಾಮಸಮುದ್ರಶಿವು, ವೆಂಕಟೇಶ್, ಪುರುಷೋತ್ತಮ . ಫೃಥ್ವಿ, ಕಿರಣ ಇತರರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • ವಂದೇ ಮಾತರಂ ಗೀತೆ ವಿವಾದ: ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಂದೇ ಮಾತರಂ ಗೀತೆ ಹಾಡಿ ಡಿಸಿಗೆ ದೂರು ಸಲ್ಲಿಕೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು. ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸುವುದಕ್ಕೆ ವಿರೋಧವಿದೆ ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಡಿಸಿ ಕಚೇರಿಗೆ ತೆರಳಲು ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂಬ ಆಗ್ರಹದೊಂದಿಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಮುಂದಾದರು.
    1
    ವಂದೇ ಮಾತರಂ ಗೀತೆ ವಿವಾದ: ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಂದೇ ಮಾತರಂ ಗೀತೆ ಹಾಡಿ ಡಿಸಿಗೆ ದೂರು ಸಲ್ಲಿಕೆ
ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು. ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸುವುದಕ್ಕೆ ವಿರೋಧವಿದೆ ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ತಡೆದರು.
ಡಿಸಿ ಕಚೇರಿಗೆ ತೆರಳಲು ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎಂಬ ಆಗ್ರಹದೊಂದಿಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಮುಂದಾದರು.
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    3 hrs ago
  • ಇತ್ತೀಚಿನ ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿತ ಆತಂಕದಲ್ಲಿ ಶಾಲಾ ಮಕ್ಕಳು ಚಾಮರಾಜನಗರ:ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಸಣಾಪುರ ಇಲ್ಲಿನ ಶಾಲಾ ಕೊಠಡಿ ಹಳೆಯದಾಗಿದ್ದು ಇತ್ತೀಚಿಗೆ ಸುರಿಯುತ್ತಿರುವ ಬಾರಿಮಳೆಗೆ ಕೊಠಡಿಯ ಮೇಲ್ಚಾವಣಿ ಕುಸಿಯುತ್ತಿದ್ದು ಶಾಲಾ ಮಕ್ಕಳು ಮತ್ತು ಶಿಕ್ಷಕರು ಆತಂಕದಲ್ಲಿ ಶಾಲೆಯನ್ನು ಮುಂದುವರಿಸಬೇಕಾಗಿದೆ ಕಳೆದ ಬಾರಿಯು ಕೂಡ ಸಂಬಂಧಪಟ್ಟ ಇಲಾಖೆಗೆ ತಮ್ಮ ಸಮಸ್ಯೆಯನ್ನು ಹೇಳಿದರು ಕೂಡ ಇಲಾಖೆ ನಿರ್ಲಕ್ಷಯನ್ನು ತೂರುತ್ತಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಶಿಕ್ಷಕರ ಕೊರತೆಯನ್ನು ನಿವಾರಿಸಲು ಇಲಾಖೆಯು ಮೀನಾಮೇಶ ಎನಿಸುತ್ತಿದೆ. ಕಳೆದ ಬಾರಿಯಿಂದಲೂ ಕೂಡ ಶಿಕ್ಷಕರ ಕೊರತೆ ಇದ್ದ ಮಕ್ಕಳ ಸಂಖ್ಯಾ ಶೇಕಡಾ ವಾರು ಶಿಕ್ಷಕರನ್ನು ಆಯೋಜನೆ ಮಾಡುವುದರಲ್ಲಿ ಸಂಬಂಧ ಪಟ್ಟ ಅಧಿಕಾರಿಯು ನಿರ್ಲಕ್ಷವನ್ನು ತೂರುತಿದ್ದಾರೆ ಎಂದು sdmc ಕಮಿಟಿಯ ಸದಸ್ಯರಾದ ಶಿವಕುಮಾರ. ಎನ್ ರವರು ದೂರಿನಲ್ಲಿ ತಿಳಿಸಿರುತ್ತಾರೆ.
    3
    ಇತ್ತೀಚಿನ ಮಳೆಗೆ ಶಾಲೆಯ  ಮೇಲ್ಚಾವಣಿ ಕುಸಿತ ಆತಂಕದಲ್ಲಿ ಶಾಲಾ ಮಕ್ಕಳು
ಚಾಮರಾಜನಗರ:ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಸಣಾಪುರ ಇಲ್ಲಿನ ಶಾಲಾ ಕೊಠಡಿ ಹಳೆಯದಾಗಿದ್ದು ಇತ್ತೀಚಿಗೆ ಸುರಿಯುತ್ತಿರುವ ಬಾರಿಮಳೆಗೆ  ಕೊಠಡಿಯ ಮೇಲ್ಚಾವಣಿ ಕುಸಿಯುತ್ತಿದ್ದು ಶಾಲಾ ಮಕ್ಕಳು ಮತ್ತು ಶಿಕ್ಷಕರು ಆತಂಕದಲ್ಲಿ ಶಾಲೆಯನ್ನು ಮುಂದುವರಿಸಬೇಕಾಗಿದೆ ಕಳೆದ ಬಾರಿಯು ಕೂಡ ಸಂಬಂಧಪಟ್ಟ ಇಲಾಖೆಗೆ ತಮ್ಮ ಸಮಸ್ಯೆಯನ್ನು ಹೇಳಿದರು ಕೂಡ ಇಲಾಖೆ ನಿರ್ಲಕ್ಷಯನ್ನು ತೂರುತ್ತಿದೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಶಿಕ್ಷಕರ ಕೊರತೆಯನ್ನು ನಿವಾರಿಸಲು ಇಲಾಖೆಯು ಮೀನಾಮೇಶ ಎನಿಸುತ್ತಿದೆ.
ಕಳೆದ ಬಾರಿಯಿಂದಲೂ ಕೂಡ ಶಿಕ್ಷಕರ ಕೊರತೆ ಇದ್ದ ಮಕ್ಕಳ ಸಂಖ್ಯಾ ಶೇಕಡಾ ವಾರು ಶಿಕ್ಷಕರನ್ನು ಆಯೋಜನೆ ಮಾಡುವುದರಲ್ಲಿ ಸಂಬಂಧ ಪಟ್ಟ ಅಧಿಕಾರಿಯು ನಿರ್ಲಕ್ಷವನ್ನು ತೂರುತಿದ್ದಾರೆ ಎಂದು sdmc ಕಮಿಟಿಯ ಸದಸ್ಯರಾದ ಶಿವಕುಮಾರ. ಎನ್ ರವರು ದೂರಿನಲ್ಲಿ ತಿಳಿಸಿರುತ್ತಾರೆ.
    user_ಶಿವಕುಮಾರ ಎನ್ ಚಾಟೀಪುರ
    ಶಿವಕುಮಾರ ಎನ್ ಚಾಟೀಪುರ
    Security Guard Chamarajanagar, Chamarajanagara•
    9 hrs ago
  • ಯಳಂದೂರು ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ . ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು  ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ ‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ, ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.
    1
    ಯಳಂದೂರು ಪಟ್ಟಣದಲ್ಲಿ 
ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ
.
ಯಳಂದೂರು ನ್ಯೂಸ್ 
ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು 
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ
ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು 
ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ  ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು  ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ  ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ 
‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ  ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ  ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ,  ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    4 hrs ago
  • ಭೀಮನಬೀಡಿನಲ್ಲಿ ಮತ್ತೆ ವನ್ಯಜೀವಿ ಆತಂಕ ಸಾಕು ನಾಯಿಯನ್ನು ಎತ್ತಿಕೊಂಡು ಹೋದ ಚಿರತೆ; ಬೋನ್ ಅಳವಡಿಸಲು ರೈತ ಸಂಘ ಒತ್ತಾಯ. ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದ ಮಹೇಶ್ ಅವರ ಜಮೀನಿನ ಮನೆಯ ಬಳಿ ಬುಧವಾರ (ಸೆ.16) ಬೆಳಗಿನ ಜಾವ ಸುಮಾರು 5 ಗಂಟೆಗೆ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಾಣಿಸಿಕೊಂಡಿದ್ದು, ಸಾಕು ನಾಯಿಯನ್ನು ಎತ್ತಿಕೊಂಡು ಹೋಗಿರುವ ಘಟನೆ ನಡೆದಿದೆ ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಇಬ್ಬರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ದೊರೆತ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ ಬಳಿಕ ಇದು ಚಿರತೆಯ ಹೆಜ್ಜೆ ಗುರುತು ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು ಹುಲಿ ಇರುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಯ ನಿಖರ ಮಾಹಿತಿ ಪಡೆಯಲು ಅಗತ್ಯವಿರುವ ಡ್ರೋನ್ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಡ್ರೋನ್ ಕೆಟ್ಟುಹೋಗಿದೆ ಎಂಬ ಅರಣ್ಯ ಇಲಾಖೆಯ ಉತ್ತರದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ, ವನ್ಯಜೀವಿ ಚಿರತೆಯೇ ಅಥವಾ ಹುಲಿಯೇ ಎಂಬುದನ್ನು ಖಚಿತಪಡಿಸಬೇಕು. ತಕ್ಷಣ ಬೋನ್ ಅಳವಡಿಸಿ, ಆದಷ್ಟು ಬೇಗ ವನ್ಯಜೀವಿಯನ್ನು ಸೆರೆಹಿಡಿದು ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ. ಸ್ಥಳದಲ್ಲಿ ಶಶಿ, ರಾಜ್, ಮಹೇಶ್, ಕುಮಾರ್, ರಾಜಕುಮಾರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
    4
    ಭೀಮನಬೀಡಿನಲ್ಲಿ ಮತ್ತೆ ವನ್ಯಜೀವಿ ಆತಂಕ
ಸಾಕು ನಾಯಿಯನ್ನು ಎತ್ತಿಕೊಂಡು ಹೋದ ಚಿರತೆ; ಬೋನ್ ಅಳವಡಿಸಲು ರೈತ ಸಂಘ ಒತ್ತಾಯ.
ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದ ಮಹೇಶ್ ಅವರ ಜಮೀನಿನ ಮನೆಯ ಬಳಿ ಬುಧವಾರ (ಸೆ.16) ಬೆಳಗಿನ ಜಾವ ಸುಮಾರು 5 ಗಂಟೆಗೆ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಾಣಿಸಿಕೊಂಡಿದ್ದು, ಸಾಕು ನಾಯಿಯನ್ನು ಎತ್ತಿಕೊಂಡು ಹೋಗಿರುವ ಘಟನೆ ನಡೆದಿದೆ
ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಇಬ್ಬರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ದೊರೆತ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ ಬಳಿಕ ಇದು ಚಿರತೆಯ ಹೆಜ್ಜೆ ಗುರುತು ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು ಹುಲಿ ಇರುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿಯ ನಿಖರ ಮಾಹಿತಿ ಪಡೆಯಲು ಅಗತ್ಯವಿರುವ ಡ್ರೋನ್ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಡ್ರೋನ್ ಕೆಟ್ಟುಹೋಗಿದೆ ಎಂಬ ಅರಣ್ಯ ಇಲಾಖೆಯ ಉತ್ತರದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ, ವನ್ಯಜೀವಿ ಚಿರತೆಯೇ ಅಥವಾ ಹುಲಿಯೇ ಎಂಬುದನ್ನು ಖಚಿತಪಡಿಸಬೇಕು. ತಕ್ಷಣ ಬೋನ್ ಅಳವಡಿಸಿ, ಆದಷ್ಟು ಬೇಗ ವನ್ಯಜೀವಿಯನ್ನು ಸೆರೆಹಿಡಿದು ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ.
ಸ್ಥಳದಲ್ಲಿ ಶಶಿ, ರಾಜ್, ಮಹೇಶ್, ಕುಮಾರ್, ರಾಜಕುಮಾರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
    user_Tara Nagendra 7033377070
    Tara Nagendra 7033377070
    Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    19 min ago
  • ನಂಜನಗೂಡಿನ ಸರಕಾರಿ ಹಿರಿಯ ದಳವಾಯಿ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮವೇಷ ಸ್ಪರ್ಧೆ. ನಂಜನಗೂಡು ತಾಲೂಕಿನ : ಪಟ್ಟಣದ ಅತಿ ದೊಡ್ಡ ದಳವಾಯಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮ ವೇಷ ಸ್ಪರ್ಧೆ ನಡೆಯಿತು . ಮಕ್ಕಳು ಹಣ್ಣಿನ ಹಾಗೂ ತರಕಾರಿ ವಿವಿಧ ವೇಷಗಳನ್ನು ಧರಿಸಿ ಪ್ರದರ್ಶನ ನೀಡಿದರು. ಈಸ್ಪರ್ಧೆಯನ್ನು ಉದ್ದೇಶಿಸಿ ಸಹ ಶಿಕ್ಷಕಿಯಾದ ಮಮತಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ನಾಗೇಶ್ ಸಿಬ್ಬಂದಿ ವರ್ಗ ಹಾಜರಿದ್ದರು. ಎಲ್ಲಾ ಶಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದರ್ಶನದಲ್ಲಿ ಮಾರ್ಗದರ್ಶಿ ಶಿಕ್ಷಕಿಯಾಗಿ ಶಿಲ್ಪಾ ಅವರು ಭಾಗವಹಿಸಿದ್ದರು. ಶಿಲ್ಪ ಅವರು ಎಲ್ಲ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
    4
    ನಂಜನಗೂಡಿನ ಸರಕಾರಿ ಹಿರಿಯ ದಳವಾಯಿ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮವೇಷ ಸ್ಪರ್ಧೆ.
ನಂಜನಗೂಡು ತಾಲೂಕಿನ : ಪಟ್ಟಣದ ಅತಿ ದೊಡ್ಡ ದಳವಾಯಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಎಲ್ಕೆಜಿ ಮಕ್ಕಳಿಂದ ಚದ್ಮ  ವೇಷ  ಸ್ಪರ್ಧೆ ನಡೆಯಿತು . ಮಕ್ಕಳು ಹಣ್ಣಿನ ಹಾಗೂ ತರಕಾರಿ ವಿವಿಧ ವೇಷಗಳನ್ನು ಧರಿಸಿ ಪ್ರದರ್ಶನ ನೀಡಿದರು.  ಈಸ್ಪರ್ಧೆಯನ್ನು ಉದ್ದೇಶಿಸಿ ಸಹ ಶಿಕ್ಷಕಿಯಾದ ಮಮತಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ನಾಗೇಶ್ ಸಿಬ್ಬಂದಿ ವರ್ಗ ಹಾಜರಿದ್ದರು. ಎಲ್ಲಾ ಶಿಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದರ್ಶನದಲ್ಲಿ ಮಾರ್ಗದರ್ಶಿ ಶಿಕ್ಷಕಿಯಾಗಿ ಶಿಲ್ಪಾ ಅವರು ಭಾಗವಹಿಸಿದ್ದರು. ಶಿಲ್ಪ ಅವರು ಎಲ್ಲ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
    user_ಹೆಚ ಟಿ ಸತ್ಯನಾರಾಯಣ ಪ್ರಸಾದ್
    ಹೆಚ ಟಿ ಸತ್ಯನಾರಾಯಣ ಪ್ರಸಾದ್
    Teacher ನಂಜನಗೂಡು, ಮೈಸೂರು, ಕರ್ನಾಟಕ•
    2 hrs ago
  • ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ. ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ . ಈ ಪ್ರತಿಭಟನೆಯಲ್ಲಿ ಕಿರಗುಸೂರು ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್, ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ ಸೋಮಶೇಖರ್ ಬನ್ನಳ್ಳಿ ಹುಂಡಿ ರಾಜೇಂದ್ರ ನಿಲ್ಸೋಗೆ ಉಮೇಶ್ ಪ್ರತಾಪ್, ಕುಮಾರ್ ಕೆ ಎಂ, ವಾಟಾಳ್ ಪುರ ಸತೀಶ್ ಕುಮಾರ್ ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ, ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    1
    ಜೆಸ್ಕಾಂ ಕಚೇರಿ ಮುಂದೆ ಕೃಷಿಕಂಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ 
ಟಿ. ನರಸೀಪುರ ಅಸಮರ್ಪಕ ವಿದ್ಯುತ್ ಪೂರೈಕೆ: ರೈತರು ಸಂಕಷ್ಟದಲ್ಲಿ.
ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಪದೇಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರಾವರಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೊಲಗಳಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಆತಂಕ ಎದುರಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಮೋಟಾರ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಬೆಳೆಗಳಿಗೆ ಸಾಕಷ್ಟು ಖರ್ಚು ಮಾಡಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಲೈನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ ರೈತರ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಪರಿಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಬೆಳೆ ಉಳಿಸಲು ವಿದ್ಯುತ್ ಪೂರೈಕೆ ಸಮರ್ಪಕವಾಗಲಿಯಂದು ರೈತರ ಒತ್ತಾಯ
. ಈ ಪ್ರತಿಭಟನೆಯಲ್ಲಿ ಕಿರಗುಸೂರು  ಶಂಕರ್ ಕೆಜಿ ಗುರುಸ್ವಾಮಿ ಕುರುಬುರ್ ಗೌರಿಶಂಕರ್ ವಾಚ್ ಕುಮಾರ್ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಅಪ್ಪಣ್ಣ ಕುರುಬೂರು ಸಿದ್ದೇಶ್,
ಬಿಪಿ ಪರಶಿವಮೂರ್ತಿ, ಕರುವಟಿ ಉಮೇಶ್ ಕುರುಬೂರ ಪ್ರದೀಪ್ 
ಸೋಮಶೇಖರ್ 
ಬನ್ನಳ್ಳಿ ಹುಂಡಿ ರಾಜೇಂದ್ರ 
ನಿಲ್ಸೋಗೆ ಉಮೇಶ್ 
ಪ್ರತಾಪ್, ಕುಮಾರ್ ಕೆ ಎಂ,
ವಾಟಾಳ್ ಪುರ ಸತೀಶ್ ಕುಮಾರ್ 
ಹೊಸಪುರ ನಾಗರಾಜು ಮಾದೇಶ್ ಮಾದೇವಮೂರ್ತಿ 
ಬಸವರಾಜು ಎಸ್ ಕೆಬ್ಬೆ ಹುಂಡಿ, ಮಾದೇವಸ್ವಾಮಿ ಮಾವ್ನಹಳ್ಳಿ,
ತರಕಾರಿ ನಿಂಗರಾಜು ಬನ್ನಳ್ಳಿ ಶಾಂತರಾಜು ಆದಿ ಬೆಟ್ಟಳ್ಳಿ ಮಹೇಶ ಕನ್ನಳ್ಳಿ ಮೊಳೆ ಮಣಿಕಂಠ ಲೋಕೇಶ್ ರವೀಂದ್ರ ಮಾದೇಶ್ ನಿಲ್ಸೋಗೆ ನಾಗರಾಜು ಚಿನ್ನಸ್ವಾಮಿ ಕುರುಬೂರು ಶಿವಪ್ರಸಾದ್ ವೀರೇಶ್ ಎಲ್ ಐ ಸಿ ಪ್ರದೀಪ್ ಎಬಿ ಮಂಜುನಾಥ್ ನವೀನ ತೊಟ್ಟುವಾಡಿ ಇನ್ನು ಮುಂತಾದ ರೈತರು ಭಾಗವಹಿಸಿದ್ದರು
    user_ಪ್ರದೀಪ್ ಎಂ ಕುರುಬೂರು
    ಪ್ರದೀಪ್ ಎಂ ಕುರುಬೂರು
    ತಿರುಮಕೂಡಲು - ನರಸಿಪುರ, ಮೈಸೂರು, ಕರ್ನಾಟಕ•
    12 hrs ago
  • ಕೌದಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಾಗರಹಾವು ಪ್ರತ್ಯಕ್ಷ, ಆತಂಕದಲ್ಲಿ ಸಿಬ್ಬಂದಿಗಳು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಆಸ್ಪತ್ರೆ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದರಿಂದ ಸಿಬ್ಬಂದಿ ಗಾಬರಿಗೊಂಡಿದ್ದರು. ಕೂಡಲೇ ಉರಗ ರಕ್ಷಕ ಸ್ನೇಕ್ ಮಧು ಅವರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಸುರಕ್ಷಿತವಾಗಿ ನಾಗರಹಾವನ್ನು ಸೆರೆಹಿಡಿದರು. ನಂತರ ಸೆರೆಹಿಡಿದ ನಾಗರಹಾವನ್ನು ಮಲೆ ಮಹದೇಶ್ವರ ವನ್ಯಧಾಮದ ಕಾಡಿಗೆ ಬಿಡಲಾಯಿತು. ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟ ಉರಗ ರಕ್ಷಕ ಮಧು ಅವರ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು
    1
    ಕೌದಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಾಗರಹಾವು ಪ್ರತ್ಯಕ್ಷ, ಆತಂಕದಲ್ಲಿ ಸಿಬ್ಬಂದಿಗಳು 
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಆಸ್ಪತ್ರೆ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದರಿಂದ ಸಿಬ್ಬಂದಿ ಗಾಬರಿಗೊಂಡಿದ್ದರು. ಕೂಡಲೇ ಉರಗ ರಕ್ಷಕ ಸ್ನೇಕ್ ಮಧು ಅವರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಸುರಕ್ಷಿತವಾಗಿ ನಾಗರಹಾವನ್ನು ಸೆರೆಹಿಡಿದರು.
ನಂತರ ಸೆರೆಹಿಡಿದ ನಾಗರಹಾವನ್ನು ಮಲೆ ಮಹದೇಶ್ವರ ವನ್ಯಧಾಮದ ಕಾಡಿಗೆ ಬಿಡಲಾಯಿತು.
ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟ ಉರಗ ರಕ್ಷಕ ಮಧು ಅವರ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.