logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಳಂದೂರು ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ . ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು  ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ ‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ, ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.

1 hr ago
user_S.Puttaswamyhonnur
S.Puttaswamyhonnur
Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
1 hr ago

ಯಳಂದೂರು ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸರಳ ಆಚರಣೆ . ಯಳಂದೂರು ನ್ಯೂಸ್ ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯಳಂದೂರು ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರೀ ವಿಶ್ವಕರ್ಮ ಜಯಂತಿ ಸಮಾರಂಭದ ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು  ನಂತರ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಎಸ್ ಪುಷ್ಪಲತಾ ರವರು ಮಾತನಾಡಿ ವಿಶ್ವಕರ್ಮ ಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರುವುದು ದುರಂತ ಕಲೆ, ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದುದ್ದು ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ’ ‘ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅದರಿಂದ ಪ್ರತಿಯೊಬ್ಬ ನಾಗರಿಕರು ವಿಶ್ವಕರ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಹೆಚ್. ವಿ . ಚಂದ್ರು, ತಾಲೂಕು ಗ್ಯಾರೆಂಟಿ ಯೋಜನೆ ಅಧ್ಯಕ್ಷರಾದ ಪ್ರಭು ಪ್ರಸಾದ್, ತಹಸಿಲ್ದಾರ್ ಎಸ್. ಎಲ್ ನಯನ ಸಮಾರಂಭವನ್ನು ಉದ್ದೇಶಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ನಾಗರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯ ಅಧಿಕಾರಿ ಮಹದೇವ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಅಮೃತೇಶ್, ಶಿಕ್ಷಣ ಇಲಾಖೆ ಬಿ ಆರ್ ಪಿ ರೇಚಣ್ಣ, ಶಿವಣ್ಣಚಾರಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರು, ಯುವಕರು, ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ​ಚಾಮರಾಜನಗರ:ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಬಿಸಿಲಿನ ಬೇಗೆ ಹಾಗೂ ಮಳೆಯೇ ಕಾಣದ ಕಾರಣ ತತ್ತರಿಸಿ ಹೋಗಿದ್ದ ಹನೂರು ತಾಲೂಕಿನ ರೈತ ಕುಲಕ್ಕೆ ಮಳೆರಾಯ ಕರುಣೆ ತೋರಿದ್ದಾನೆ. ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ವರುಣನ ಅಬ್ಬರದಿಂದಾಗಿ ದೀರ್ಘಕಾಲದಿಂದ ಮಳೆಯಿಲ್ಲದೆ ಕಂಗೆಟ್ಟು ಹೋಗಿದ್ದ ಜನ-ಜಾನುವಾರುಗಳು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ. ​ಕುಡಿಯುವ ನೀರಿಗೂ ಬರೆ, ಬೋರ್‌ವೆಲ್‌ಗಳು ಡ್ರೈ: ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಕುಸಿದು ಹೋಗಿತ್ತು. ಕೊಳವೆಬಾವಿಗಳಲ್ಲಿ (ಬೋರ್‌ವೆಲ್) ನೀರು ಸಿಗದೆ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿವು. ಕುಡಿಯಲು ಕೂಡ ನೀರಿಲ್ಲದೆ ಗ್ರಾಮಸ್ಥರು ಮತ್ತು ಜಾನುವಾರುಗಳು ಪರದಾಡುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರ ಕಣ್ಣೀರು ನೋಡಲಾರದಂತ ಸ್ಥಿತಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆಲೆಸಿತ್ತು. ​ಮಳೆರಾಯನ ಆಗಮನ - ರೈತರ ಮೊಗದಲ್ಲಿ ನಗು: ಸಕಾಲಕ್ಕೆ ಮಳೆಯಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದ ಹತಾಶ ಸ್ಥಿತಿಯಲ್ಲಿದ್ದ ರೈತರಿಗೆ ಈಗ ಸುರಿದಿರುವ ಉತ್ತಮ ಮಳೆ ಸಂಜೀವಿನಿಯಾಗಿ ಪರಿಣಮಿಸಿದೆ. ಒಣಗಿ ಹೋಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದ್ದು, ಗಿಡ-ಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ವಿಶ್ವಾಸ ಮೂಡಿದ್ದು, ಬತ್ತಿಹೋಗಿದ್ದ ಬೋರ್‌ವೆಲ್‌ಗಳೂ ಮರುಜೀವ ಪಡೆಯುವ ನಿರೀಕ್ಷೆಯಿದೆ. ​ಚುರುಕುಗೊಂಡ ಕೃಷಿ ಚಟುವಟಿಕೆಗಳು: ಮಳೆಯ ಅಬ್ಬರದಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಎಲ್ಲೆಡೆ ನಳನಳಿಸುತ್ತಿರುವ ಹಸಿರು ಕಣ್ಣಿಗೆ ತಂಪು ನೀಡಿದೆ. ಮಳೆಯಿಂದಾಗಿ ರೈತರಲ್ಲಿ ಹೊಸ ಉತ್ಸಾಹ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಭರ್ಜರಿಯಾಗಿ ಚುರುಕುಗೊಂಡಿವೆ. ವರುಣನ ಕೃಪೆಯಿಂದ ಒಟ್ಟಾರೆಯಾಗಿ ಹನೂರು ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
    4
    ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ

ಹನೂರು ತಾಲೂಕಿನಲ್ಲಿ ವರುಣ ದೇವನ ಕೃಪೆ: ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ, ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ
​ಚಾಮರಾಜನಗರ:ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ
ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಬಿಸಿಲಿನ ಬೇಗೆ ಹಾಗೂ ಮಳೆಯೇ ಕಾಣದ ಕಾರಣ ತತ್ತರಿಸಿ ಹೋಗಿದ್ದ ಹನೂರು ತಾಲೂಕಿನ ರೈತ ಕುಲಕ್ಕೆ ಮಳೆರಾಯ ಕರುಣೆ ತೋರಿದ್ದಾನೆ. ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ವರುಣನ ಅಬ್ಬರದಿಂದಾಗಿ ದೀರ್ಘಕಾಲದಿಂದ ಮಳೆಯಿಲ್ಲದೆ ಕಂಗೆಟ್ಟು ಹೋಗಿದ್ದ ಜನ-ಜಾನುವಾರುಗಳು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ.
​ಕುಡಿಯುವ ನೀರಿಗೂ ಬರೆ, ಬೋರ್‌ವೆಲ್‌ಗಳು ಡ್ರೈ:
ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಕುಸಿದು ಹೋಗಿತ್ತು. ಕೊಳವೆಬಾವಿಗಳಲ್ಲಿ (ಬೋರ್‌ವೆಲ್) ನೀರು ಸಿಗದೆ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿವು. ಕುಡಿಯಲು ಕೂಡ ನೀರಿಲ್ಲದೆ ಗ್ರಾಮಸ್ಥರು ಮತ್ತು ಜಾನುವಾರುಗಳು ಪರದಾಡುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರ ಕಣ್ಣೀರು ನೋಡಲಾರದಂತ ಸ್ಥಿತಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆಲೆಸಿತ್ತು.
​ಮಳೆರಾಯನ ಆಗಮನ - ರೈತರ ಮೊಗದಲ್ಲಿ ನಗು:
ಸಕಾಲಕ್ಕೆ ಮಳೆಯಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದ ಹತಾಶ ಸ್ಥಿತಿಯಲ್ಲಿದ್ದ ರೈತರಿಗೆ ಈಗ ಸುರಿದಿರುವ ಉತ್ತಮ ಮಳೆ ಸಂಜೀವಿನಿಯಾಗಿ ಪರಿಣಮಿಸಿದೆ. ಒಣಗಿ ಹೋಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದ್ದು, ಗಿಡ-ಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ವಿಶ್ವಾಸ ಮೂಡಿದ್ದು, ಬತ್ತಿಹೋಗಿದ್ದ ಬೋರ್‌ವೆಲ್‌ಗಳೂ ಮರುಜೀವ ಪಡೆಯುವ ನಿರೀಕ್ಷೆಯಿದೆ.
​ಚುರುಕುಗೊಂಡ ಕೃಷಿ ಚಟುವಟಿಕೆಗಳು:
ಮಳೆಯ ಅಬ್ಬರದಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಎಲ್ಲೆಡೆ ನಳನಳಿಸುತ್ತಿರುವ ಹಸಿರು ಕಣ್ಣಿಗೆ ತಂಪು ನೀಡಿದೆ. ಮಳೆಯಿಂದಾಗಿ ರೈತರಲ್ಲಿ ಹೊಸ ಉತ್ಸಾಹ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಭರ್ಜರಿಯಾಗಿ ಚುರುಕುಗೊಂಡಿವೆ. ವರುಣನ ಕೃಪೆಯಿಂದ ಒಟ್ಟಾರೆಯಾಗಿ ಹನೂರು ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಪ್ರಧಾನಿ ಮೋದಿ ಜನ್ಮ ದಿನಾಚರಣೆ ಆಚರಿಸಿದ ಬಿಜೆಪಿ ಕಾರ್ಯಕರ್ತರು ಮಳವಳ್ಳಿ: ಪ್ರಧಾನಿ ನರೇಂದ್ರಮೋದಿ ರವರ 76 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಪಕ್ಷದ ವತಿಯಿಂದ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಮೋದಿರವರು ರೈತರಪರ, ದಲಿತರಪರ, ಯುವಕರಪರ ಇರುವ ವಿಶ್ವನಾಯಕರು, ಶೃಂಗ ಸಭೆಯಲ್ಲಿ ಮೋದಿರವರು ಮೆಚ್ಚಿಗೆ ಗಳಿಸಿದ್ದಾರೆ. ಇಂದಿನಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಧುಗಂಗಾಧರ್ ಮಾತನಾಡಿ, ಇಂದು ಸಂಜೆ ಮನೆಮನೆಗೂ ದೀಪ ಹಚ್ಚಿ ಮೋದಿರವರ ಹುಟ್ಟಹಬ್ಬವನ್ನು ಆಚರಿಸಲಾಗುತ್ತದೆ. ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಈ ತಿಂಗಳು 17 ನೇ ತಾರೀಖಿನಿಂದ ಮುಂದಿನ ತಿಂಗಳು 17 ರವರಗೆ ಚುಟುವಟಿಕೆಗಳನ್ನು ಹಮ್ಮಿಕೊಂಡಿದ್ಧೇವೆ ಎಂದರು. ಈ ವೇಳೆ ಬಿಜೆಪಿ ಅಧ್ಯಕ್ಷ ಮಧುಗಂಗಾಧರ್, ಹೆಬ್ಬಣ್ಞಿಬಸವರಾಜು,ಚಿಕ್ಕಣ್ಞ, ದೇವರಾಜು,ತಮ್ಮಡಹಳ್ಳಿ ಮಾದೇಶ ಸೇರಿದಂತೆ ಹಲವರು ಇದ್ದರು.
    1
    ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ  ಪ್ರಧಾನಿ ಮೋದಿ ಜನ್ಮ ದಿನಾಚರಣೆ ಆಚರಿಸಿದ ಬಿಜೆಪಿ ಕಾರ್ಯಕರ್ತರು
ಮಳವಳ್ಳಿ: ಪ್ರಧಾನಿ ನರೇಂದ್ರಮೋದಿ ರವರ 76 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ಬಿಜೆಪಿ ಪಕ್ಷದ ವತಿಯಿಂದ  ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು  ನೇತೃತ್ವದಲ್ಲಿ   ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಮೋದಿರವರು ರೈತರಪರ, ದಲಿತರಪರ, ಯುವಕರಪರ ಇರುವ ವಿಶ್ವನಾಯಕರು, ಶೃಂಗ ಸಭೆಯಲ್ಲಿ  ಮೋದಿರವರು ಮೆಚ್ಚಿಗೆ ಗಳಿಸಿದ್ದಾರೆ.
ಇಂದಿನಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ  ಬಿಜೆಪಿ ತಾಲ್ಲೂಕು ಅಧ್ಯಕ್ಷ  ಮಧುಗಂಗಾಧರ್  ಮಾತನಾಡಿ, ಇಂದು ಸಂಜೆ ಮನೆಮನೆಗೂ ದೀಪ ಹಚ್ಚಿ ಮೋದಿರವರ ಹುಟ್ಟಹಬ್ಬವನ್ನು ಆಚರಿಸಲಾಗುತ್ತದೆ.
ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು,  ಈ ತಿಂಗಳು 17 ನೇ ತಾರೀಖಿನಿಂದ  ಮುಂದಿನ ತಿಂಗಳು 17 ರವರಗೆ  ಚುಟುವಟಿಕೆಗಳನ್ನು ಹಮ್ಮಿಕೊಂಡಿದ್ಧೇವೆ  ಎಂದರು.
ಈ ವೇಳೆ  ಬಿಜೆಪಿ ಅಧ್ಯಕ್ಷ ಮಧುಗಂಗಾಧರ್,  ಹೆಬ್ಬಣ್ಞಿಬಸವರಾಜು,ಚಿಕ್ಕಣ್ಞ, ದೇವರಾಜು,ತಮ್ಮಡಹಳ್ಳಿ ಮಾದೇಶ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
  • ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.
    1
    ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾಡಾಗಿದ್ದ ತಾಲ್ಲೂಕಿಗೆ ಮಂಗಳವಾರ ತಂಪೆರೆದ ವರುಣದೇವ
ಮಳವಳ್ಳಿ : ಕಳೆದ ಕೆಲವಾರು ತಿಂಗಳಿಂದ ಮಳೆಯ ಸುಳಿವೇ ಕಾಣದೆ ಸುಡು ಬಿಸಿಲ ಝಳ ದಿಂದ ಕಾದ ಬೆಂಗಾಡಾಗಿ ಹೋಗಿದ್ದ ಮಳವಳ್ಳಿ ತಾಲ್ಲೂಕಿಗೆ ಮಂಗಳವಾರ ರಾತ್ರಿ ವರುಣ ದೇವ ಕೃಪೆ ತೋರಿದ್ದು ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಅಬ್ಬರದ ಮಳೆ ಒಣಗಿದ ಭೂಮಿಗೆ ತಂಪೆರದಿದೆ. ಮಂಗಳವಾರ ತಡರಾತ್ರಿ 9.30 ರ ಸುಮಾರಿಗೆ ಆರಂಭವಾದ ಸಿಡಿಲಬ್ಬರದ ಮಳೆ ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ತಂಪೆರದಿದ್ದು ಬಿಸಿಲ ಝಳ ದಿಂದ ಬೆಂದು ಹೈರಾಣಾಗಿದ್ದ ಜನ ನಿಟ್ಟುಸಿರು ಬಿಡುವಂತಾ ಗಿದ್ದರೆ ತಡವಾಗಿಯಾದರೂ ಜೋರಾಗಿಯೇ ಸುರಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸುಮಾರು ಒಂದುವರೆ ಗಂಟೆ ಸುರಿದ ಅಬ್ಬರದ ಮಳೆ ಹಾಗೂ ಸಿಡಿಲು ಗುಡುಗು ಸಹಿತದ ಮಳೆ ಇಡೀ ತಾಲ್ಲೂಕಿಗೆ ತಂಪೆರೆದಿದೆ. ನಂತರದಲ್ಲಿ ಇಡೀ ರಾತ್ರಿ ಸಣ್ಣದಾಗಿ ಸುರಿದ ಜಿಟಿಜಿಟಿ ಮಳೆ ಭೂಮಿಯ ಕಾವು ತಗ್ಗಿಸಿದೆ. ಒಟ್ಟಾರೆ ಈ ವರ್ಷವಿಡೀ ಭೂತಾಯಿ ಒಡಲು  ತುಂಬುವ ಮಟ್ಟದ ಮಳೆಯನ್ನೇ ಕಾಣದ ಬರದ ಭವಣೆಯಿಂದ ಆತಂಕಕ್ಕೆ ಒಳಗಾಗಿದ್ದ ಜನ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಮಾಧಾನ ಪಡುವಂತಾಗಿದೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    21 hrs ago
  • All About,How the political Influencial are misuing #WaqfProperties #WaqfFunds to their advantage *ಭಾರತ ನಲ್ಲಿ ವೈರಲ್*
    1
    All About,How the political Influencial are misuing #WaqfProperties #WaqfFunds to their advantage 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
    1
    ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.. ‘ನಕಲಿ ಹಿಂದುತ್ವವಾದಿ’ ಎಂದು ಘೋಷಣೆ | ಗಡಿಪಾರು ಮಾಡುವಂತೆ ಆಗ್ರಹ
ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ನಕಲಿ ಹಿಂದುತ್ವವಾದಿ ಪ್ರತಾಪ್ ಸಿಂಹ’, ‘ಕೋಮುವಾದಿ ಬಿಜೆಪಿ, ಕೋಮುವಾದಿ ಪ್ರತಾಪ್ ಸಿಂಹ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿ. ನರಸೀಪುರದಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗಣೇಶ ಮೂರ್ತಿ ಹಿಡಿದು, ಪಾದರಕ್ಷೆ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿದ ಕಾರ್ಯಕರ್ತರು, ಧಾರ್ಮಿಕ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ನಡೆ ಸಮಾಜದಲ್ಲಿ ಅಶಾಂತಿ ಮೂಡಿಸುವುದಲ್ಲದೆ, ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಪ್ರತಾಪ್ ಸಿಂಹ ಅವರು ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಸೂಚನೆಗಳ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರೆ, ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಇತರ ಸಂಘಟನೆಗಳಿಂದಲೂ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
    user_Mysore update
    Mysore update
    Voice of people Mysuru, Karnataka•
    22 hrs ago
  • ಸಿಡಿಲು ಬಡಿದು ಮನೆಯ ಮೇಲ್ಚಾವಣಿ, ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕನಕಪುರ: ತಾಲೂಕಿನ ತಾವರಗಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸುರಿದ ಭಾರಿ ಮಳೆ, ಗುಡುಗು–ಸಿಡಿಲಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಚಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ. ಗ್ರಾಮದ ರಮೇಶ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮೊದಲನೇ ಮಹಡಿಯ ಮೇಲ್ಚಾವಣಿ ಹಾನಿಗೊಳಗಾಗಿದ್ದು, ಸೋಲಾರ್ ವ್ಯವಸ್ಥೆ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ. ಸಿಡಿಲಿನ ತೀವ್ರತೆಗೆ ಸೋಲಾರ್ ಉಪಕರಣಗಳು ಪುಡಿಪುಡಿಯಾಗಿದ್ದು, ಮನೆಯ ಮೇಲ್ಚಾವಣಿ ಮೇಲೆ ಕಂದಕ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಹಲವು ಉಪಕರಣಗಳು ಹಾನಿಗೊಳಗಾಗಿದ್ದು, ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಡಿಲು ಮನೆಯ ಮೊದಲನೇ ಮಹಡಿಗೆ ಸಿಡಿಲು ಬಡಿದ ವೇಳೆ ಕುಟುಂಬದ ಸದಸ್ಯರೆಲ್ಲರೂ ಕೆಳ ಮಹಡಿಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಮರಳೇ ಬೇಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿದು ಮನೆಗೆ ಉಂಟಾಗಿರುವ ಹಾನಿಯ ಸಂಪೂರ್ಣ ಅಂದಾಜು ಮಾಡಿಸಿ, ತಾಲೂಕು ಆಡಳಿತದ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
    1
    ಸಿಡಿಲು ಬಡಿದು ಮನೆಯ ಮೇಲ್ಚಾವಣಿ, ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ
ಕನಕಪುರ: ತಾಲೂಕಿನ ತಾವರಗಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸುರಿದ ಭಾರಿ ಮಳೆ, ಗುಡುಗು–ಸಿಡಿಲಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಚಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ.
ಗ್ರಾಮದ ರಮೇಶ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮೊದಲನೇ ಮಹಡಿಯ ಮೇಲ್ಚಾವಣಿ ಹಾನಿಗೊಳಗಾಗಿದ್ದು, ಸೋಲಾರ್ ವ್ಯವಸ್ಥೆ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ.
ಸಿಡಿಲಿನ ತೀವ್ರತೆಗೆ ಸೋಲಾರ್ ಉಪಕರಣಗಳು ಪುಡಿಪುಡಿಯಾಗಿದ್ದು, ಮನೆಯ ಮೇಲ್ಚಾವಣಿ ಮೇಲೆ ಕಂದಕ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಹಲವು ಉಪಕರಣಗಳು ಹಾನಿಗೊಳಗಾಗಿದ್ದು, ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಡಿಲು ಮನೆಯ ಮೊದಲನೇ ಮಹಡಿಗೆ ಸಿಡಿಲು ಬಡಿದ ವೇಳೆ ಕುಟುಂಬದ ಸದಸ್ಯರೆಲ್ಲರೂ ಕೆಳ ಮಹಡಿಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಮರಳೇ ಬೇಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಡಿಲು ಬಡಿದು ಮನೆಗೆ ಉಂಟಾಗಿರುವ ಹಾನಿಯ ಸಂಪೂರ್ಣ ಅಂದಾಜು ಮಾಡಿಸಿ, ತಾಲೂಕು ಆಡಳಿತದ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
    user_ಶಿವು.ಎಸ್ ದೊಡ್ಡಆಲಹಳ್ಳಿ
    ಶಿವು.ಎಸ್ ದೊಡ್ಡಆಲಹಳ್ಳಿ
    Local News Reporter ಕನಕಪುರ, ರಾಮನಗರ, ಕರ್ನಾಟಕ•
    1 hr ago
  • ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ವರದಿ:ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ. ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು, ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.
    4
    ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ
ವರದಿ:ಹೊಮ್ಮನಂಜುಂಡನಾಯಕ
ಚಾಮರಾಜನಗರದಲ್ಲಿ ದಸರಾ ಆಚರಿಸುವಂತೆ ಸಿಎಂಗೆ ಮನವಿ
ಚಾಮರಾಜನಗರ: ಜಿಲ್ಲೆಯಲ್ಲಿ ಈ ಸಾರಿಯ ದಸರಾ ಮಹೋತ್ಸವವನ್ನು ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ  ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಗಡಿಪ್ರದೇಶವಾದ ಚಾಮರಾಜನಗರವು ಐತಿಹಾಸಿಕ ಮತ್ತು ಜಾನಪದ ಹಿನ್ನಲೆಯನ್ನು ಹೊಂದಿದೆ ಮತ್ತು ಈ ಹಿಂದೆ ಇದು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು ಮತ್ತು ೯ನೇ ಖಾಸಾ ಚಾಮರಾಜ ಒಡೆಯರ್‌ರವರು ಇಲ್ಲಿ ೧೭೭೪ರಲ್ಲಿ ಜನಿಸಿದ ಅಂಗವಾಗಿ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಮೈಸೂರು ಸಂಸ್ಥಾನಕ್ಕೂ, ಚಾಮರಾಜನಗರ ಅವಿನಾಭವ ಸಂಬಂಧವಿದೆ. ಕಳೆದ ೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯರವರು ಮತ್ತು ಅಂದಿನ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ವಿ. ಶ್ರೀನಿವಾಸಪ್ರಸಾದ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ  ಹೆಚ್.ಎಸ್. ಮಹದೇವಪ್ರಸಾದ್‌ರವರು ತೀರ್ಮಾನಿಸಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮ ಪ್ರಾರಂಭ ಮಾಡಿದರು. ಇದು ಬಹಳಷ್ಟು ವರ್ಷಗಳಿಂದ ಚಾಮರಾಜನಗರ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಕಳೆದ ವರ್ಷದಿಂದ ಚಾಮರಾಜನಗರದಲ್ಲಿ  ದಸರಾ ನಿಂತು ಹೋಗಿದೆ ಮತ್ತು ಈ ಸಾರಿಯು  ಸರ್ಕಾರದಿಂದ ಚಾಮರಾಜನಗರ ದಸರಾ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಾರು ಜನ ಜನಪದ, ಕಲೆ, ಸಾಂಸ್ಕೃತಿಕ, ಶೋಭಾನೆ, ಗೊರವರ ಕುಣಿತ, ಭಜನೆ, ತಂಬೂರಿ ಸೇರಿದಂತೆ ಇನ್ನೂ ಕಲೆಗಳನ್ನು ಬಲ್ಲಕಲಾವಿದರು ಇರುತ್ತಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಚಾಮರಾಜನಗರ ದಸರಾ ನಿಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿರುವ ಸರ್ಕಾರ ಈಗ ಅದೇ ಪರಂಪರೆಯನ್ನು ನಿಲ್ಲಿಸಿರುವುದು ವಿಷಾಧನಿಯ.
ಆದ್ದರಿಂದ ತಾವು ಈ ಸಾರಿಯ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ನಡೆಸಬೇಕೆಂದು ಜಿಲ್ಲೆಯ ಜನತೆಯ  ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು,  ಮುತ್ತಿಗೆ ಗೋವಿಂದರಾಜು,
ರವಿಚಂದ್ರಪ್ರಸಾದ್ ಕಹಳೆ,  ತತ್ವಪದ ರಾಚಪ್ಪ, ಸಿದ್ದರಾಜು, ರಾಚಪ್ಪ, ವೀರಗಾಸೆ ಡಾ. ಶಿವರುದ್ರಸ್ವಾಮಿ, ಜಯರಾಜು,  ಮಂಗಲದ ಹೊಸೂರು ಶಿವಣ್ಣ,ರಂಗಸ್ವಾಮಿ, ಸುರೇಶ್ ಇತರರು ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    23 hrs ago
  • ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ ಮಳವಳ್ಳಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ‌ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್‌ ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ. ಹಲವು ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ. ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.
    1
    ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಘಟನೆ
ಮಳವಳ್ಳಿ  ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ  ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ  ತಾಲೂಕಿನ ಬಿ.ಜಿ.ಪುರ ಹೋಬಳಿಯ ಚಿಕ್ಕ ಬಾಗಿಲು ಗ್ರಾಮದಲ್ಲಿ ‌ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಗ್ರಾಮದ ನಿವಾಸಿ ಮಹದೇ ವಪ್ಪ ಎಂಬುವರಿಗೆ ಸೇರಿದ ಹಳೆಯ ಮಣ್ಣಿನ ಮನೆಯ ಗೋಡೆ ನಿರಂತರ ಮಳೆಗೆ ನೆನೆದು ಮಂಗಳವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ವೇಳೆ ಮನೆಯೊಳಗಿನ ಒಂದು ಭಾಗದಲ್ಲಿ ಕುಟುಂಬದವರು ಮಲಗಿದ್ದ ಕಾರಣ ಭಾರೀ ದುರಂತ ತಪ್ಪಿದೆ. ಮನೆಯೊಳಗಿದ್ದ ಪಾತ್ರೆ- ಎಲೆಕ್ಟ್ರಾನಿಕ್‌  ಹಾಗೂ ದಿನಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಗೀಡಾಗಿವೆ.
ಹಲವು  ದಿನಗಳಿಂದ ತಾಲೂಕಿ ನಾದ್ಯಂತ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆಗೆ ಕಳೆದ ರಾತ್ರಿ ವರುಣ ದಿಡೀರ್ ಆರ್ಭಟಿಸಿದೆ.  ಚಿಕ್ಕಬಾಗಿಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ಮನೆಯ ಫೋಟೋ ಹಾಗೂ ಹಾನಿಯ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಸಂತ್ರಸ್ತ ಮಹದೇವಪ್ಪ ಅವರು ಬಡ ಕುಟುಂಬಕ್ಕೆ ಸೇರಿದ್ದು, ವಾಸಕ್ಕೆ ಬೇರೆ ಸೂರು ಇಲ್ಲದಂತಾಗಿದೆ. ಕೂಡಲೇ ಸೂಕ್ತ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    23 hrs ago
  • All About,Requesting our Hon'ble Minister for #Waqf to hand#AnwarManipaddy and #UpaLokayuta report to #CBI for fair review *ಭಾರತ ನಲ್ಲಿ ವೈರಲ್*
    1
    All About,Requesting our Hon'ble Minister for #Waqf to hand#AnwarManipaddy and #UpaLokayuta report to #CBI for fair review 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.