logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.

7 hrs ago
user_Prasad Prasad
Prasad Prasad
TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
7 hrs ago

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.

More news from ಕರ್ನಾಟಕ and nearby areas
  • ವಕ್ಫ್ ಸಮಿತಿಗಳಲ್ಲಿ ಹಾಗೂ ನಿರ್ದಿಷ್ಟವಾಗಿ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯೊಂದರಲ್ಲಿ ನಡೆಯುವ ಅವ್ಯವಹಾರಗಳ ಸ್ವರೂಪದಲ್ಲಿನ ಸಾಮ್ಯತೆಗಳ ಕುರಿತಾದ ಮಾಹಿತಿ ಭಾರತದಲ್ಲಿ ವೈರಲ್ ಆಗಿದೆ. ಈ ವೈರಲ್ ಸಂದೇಶವು ಒಂದು ಸಮಿತಿಯಿಂದ ಇನ್ನೊಂದು ಸಮಿತಿಯ ನಡುವೆ ನಡೆಯುವ ದುರಾಚಾರಗಳ ವಿವರಗಳು ಮತ್ತು ಅವುಗಳ ನಡುವಿನ ಸಾಮ್ಯತೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
    1
    ವಕ್ಫ್ ಸಮಿತಿಗಳಲ್ಲಿ ಹಾಗೂ ನಿರ್ದಿಷ್ಟವಾಗಿ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯೊಂದರಲ್ಲಿ ನಡೆಯುವ ಅವ್ಯವಹಾರಗಳ ಸ್ವರೂಪದಲ್ಲಿನ ಸಾಮ್ಯತೆಗಳ ಕುರಿತಾದ ಮಾಹಿತಿ ಭಾರತದಲ್ಲಿ ವೈರಲ್ ಆಗಿದೆ. ಈ ವೈರಲ್ ಸಂದೇಶವು ಒಂದು ಸಮಿತಿಯಿಂದ ಇನ್ನೊಂದು ಸಮಿತಿಯ ನಡುವೆ ನಡೆಯುವ ದುರಾಚಾರಗಳ ವಿವರಗಳು ಮತ್ತು ಅವುಗಳ ನಡುವಿನ ಸಾಮ್ಯತೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಡಿ. ಹಲಸಹಳ್ಳಿ ಗ್ರಾಮದ ಬಳಿ ಇರುವ ಗವಿಮಠಕ್ಕೆ ಮಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿಯವರು ಹೊಸ ರೂಪ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಸಿದ್ದಲಿಂಗ ಮಹಾಸ್ವಾಮೀಜಿಯವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಭಕ್ತರು ನೀಡಿದ ಸಹಕಾರದಿಂದ ಮಠದ ಅಭಿವೃದ್ಧಿಗಾಗಿ ಷಡಕ್ಷರ ಸ್ವಾಮೀಜಿಯವರು ನಿರಂತರವಾಗಿ ಶ್ರಮಿಸಿದ್ದಾರೆ. ಗವಿಮಠದಲ್ಲಿ ಮೇ ಒಂದರಂದು ನಡೆದ ಕಳಶಾರೋಹಣ, ರಾಜಗೋಪುರ, ಬಸವ ವಿಗ್ರಹ, ಶ್ರೀ ಷಡಕ್ಷರ ಮಂಗಳ ಮಂಟಪ, ಹಾಗೂ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭೆಗಳಿಗೆ ಇಂದಿಗೆ 48 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಅವರು ತುಂಬಾ ಶ್ರಮಪಟ್ಟು, ಹಿಂದೆ ಬಂಡೆಗಳಿಂದ ತುಂಬಿ, ಸಾರ್ವಜನಿಕ ಸಂಪರ್ಕ ಸೌಲಭ್ಯಗಳಿಲ್ಲದ ಗವಿಮಠಕ್ಕೆ ಹೊಸ ರೂಪವನ್ನು ತಂದುಕೊಟ್ಟಿದ್ದಾರೆ. ಈಗ ಭಕ್ತರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ, ಅನ್ನದಾಸೋಹ ಗೃಹ ನಿರ್ಮಿಸಿರುವುದಲ್ಲದೆ, ರಾಜಗೋಪುರ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಗಿಡಮರಗಳನ್ನು ಬೆಳೆಸಿ ಸುಂದರವಾದ ವಾತಾವರಣ ನಿರ್ಮಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮಠದ ಶೋಭೆಯನ್ನು ಹೆಚ್ಚಿಸಿದ್ದಾರೆ. ತಾನು ಚಿಕ್ಕವನಿದ್ದಾಗ ಈ ಮಠಕ್ಕೆ ಬಂದಾಗ ಜಡೆ ಸ್ವಾಮಿಗಳು ಈ ಮಠದಲ್ಲಿದ್ದರು ಎಂಬುದನ್ನು ಸ್ಮರಿಸಿದ ಸಿದ್ದಗಂಗಾ ಶ್ರೀಗಳು, ಆಗಿನಿಂದಲೂ ಕನಕಪುರದ ದೇಗುಲ ಮಠಕ್ಕೂ, ಈ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಈಗಲೂ ಆ ಬಾಂಧವ್ಯ ಮುಂದುವರೆದಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಈ ಸ್ಥಳವು ಷಡಕ್ಷರ ದೇವನ ತಪೋನಿಷ್ಠ ಸ್ಥಳವಾಗಿದ್ದು, ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವೆಂದು ತಿಳಿದುಬಂದಿದೆ. ಹಲವಾರು ಪುಣ್ಯ ಪುರುಷರ ತಪೋಭೂಮಿಯಾಗಿದ್ದ ಈ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಷಡಕ್ಷರ ಸ್ವಾಮೀಜಿಗೆ ನಿಮ್ಮ ಬೆಂಬಲ ಮತ್ತು ಸಹಕಾರ ಹೀಗೆ ಇರಲಿ ಎಂದು ಭಕ್ತಾದಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿಯವರು ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಡಾ. ಚನ್ನಬಸವಸ್ವಾಮಿಗಳು, ಆಂಗ್ರಾಪುರದ ಬಸವಲಿಂಗ ದೇಶಿ ಕೇಂದ್ರಸ್ವಾಮೀಜಿಗಳು, ಹೊಸಹಳ್ಳಿ ಮಠದ ಓಂಕಾರ ಸ್ವಾಮಿಗಳು, ಮೇದಿನಿ ಗ್ರಾಮ ಮಠದ ಶಿವಲಿಂಗ ಸ್ವಾಮಿಗಳು, ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹರಚರ ಮೂರ್ತಿಗಳು ಹಾಗೂ ಡಿ. ಹಲಸಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
    1
    ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಡಿ. ಹಲಸಹಳ್ಳಿ ಗ್ರಾಮದ ಬಳಿ ಇರುವ ಗವಿಮಠಕ್ಕೆ ಮಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿಯವರು ಹೊಸ ರೂಪ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಸಿದ್ದಲಿಂಗ ಮಹಾಸ್ವಾಮೀಜಿಯವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಭಕ್ತರು ನೀಡಿದ ಸಹಕಾರದಿಂದ ಮಠದ ಅಭಿವೃದ್ಧಿಗಾಗಿ ಷಡಕ್ಷರ ಸ್ವಾಮೀಜಿಯವರು ನಿರಂತರವಾಗಿ ಶ್ರಮಿಸಿದ್ದಾರೆ.

ಗವಿಮಠದಲ್ಲಿ ಮೇ ಒಂದರಂದು ನಡೆದ ಕಳಶಾರೋಹಣ, ರಾಜಗೋಪುರ, ಬಸವ ವಿಗ್ರಹ, ಶ್ರೀ ಷಡಕ್ಷರ ಮಂಗಳ ಮಂಟಪ, ಹಾಗೂ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭೆಗಳಿಗೆ ಇಂದಿಗೆ 48 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಅವರು ತುಂಬಾ ಶ್ರಮಪಟ್ಟು, ಹಿಂದೆ ಬಂಡೆಗಳಿಂದ ತುಂಬಿ, ಸಾರ್ವಜನಿಕ ಸಂಪರ್ಕ ಸೌಲಭ್ಯಗಳಿಲ್ಲದ ಗವಿಮಠಕ್ಕೆ ಹೊಸ ರೂಪವನ್ನು ತಂದುಕೊಟ್ಟಿದ್ದಾರೆ. ಈಗ ಭಕ್ತರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ, ಅನ್ನದಾಸೋಹ ಗೃಹ ನಿರ್ಮಿಸಿರುವುದಲ್ಲದೆ, ರಾಜಗೋಪುರ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಗಿಡಮರಗಳನ್ನು ಬೆಳೆಸಿ ಸುಂದರವಾದ ವಾತಾವರಣ ನಿರ್ಮಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮಠದ ಶೋಭೆಯನ್ನು ಹೆಚ್ಚಿಸಿದ್ದಾರೆ.

ತಾನು ಚಿಕ್ಕವನಿದ್ದಾಗ ಈ ಮಠಕ್ಕೆ ಬಂದಾಗ ಜಡೆ ಸ್ವಾಮಿಗಳು ಈ ಮಠದಲ್ಲಿದ್ದರು ಎಂಬುದನ್ನು ಸ್ಮರಿಸಿದ ಸಿದ್ದಗಂಗಾ ಶ್ರೀಗಳು, ಆಗಿನಿಂದಲೂ ಕನಕಪುರದ ದೇಗುಲ ಮಠಕ್ಕೂ, ಈ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಈಗಲೂ ಆ ಬಾಂಧವ್ಯ ಮುಂದುವರೆದಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಈ ಸ್ಥಳವು ಷಡಕ್ಷರ ದೇವನ ತಪೋನಿಷ್ಠ ಸ್ಥಳವಾಗಿದ್ದು, ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವೆಂದು ತಿಳಿದುಬಂದಿದೆ. ಹಲವಾರು ಪುಣ್ಯ ಪುರುಷರ ತಪೋಭೂಮಿಯಾಗಿದ್ದ ಈ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಷಡಕ್ಷರ ಸ್ವಾಮೀಜಿಗೆ ನಿಮ್ಮ ಬೆಂಬಲ ಮತ್ತು ಸಹಕಾರ ಹೀಗೆ ಇರಲಿ ಎಂದು ಭಕ್ತಾದಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿಯವರು ಸಿದ್ದಗಂಗಾ ಶ್ರೀಗಳಿಗೆ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಡಾ. ಚನ್ನಬಸವಸ್ವಾಮಿಗಳು, ಆಂಗ್ರಾಪುರದ ಬಸವಲಿಂಗ ದೇಶಿ ಕೇಂದ್ರಸ್ವಾಮೀಜಿಗಳು, ಹೊಸಹಳ್ಳಿ ಮಠದ ಓಂಕಾರ ಸ್ವಾಮಿಗಳು, ಮೇದಿನಿ ಗ್ರಾಮ ಮಠದ ಶಿವಲಿಂಗ ಸ್ವಾಮಿಗಳು, ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹರಚರ ಮೂರ್ತಿಗಳು ಹಾಗೂ ಡಿ. ಹಲಸಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ನಡು ರಸ್ತೆಯಲ್ಲೇ ನಿಲ್ಲಿಸಿ, ಅರೆನಗ್ನ ಸ್ಥಿತಿಯಲ್ಲಿ ಮಲಗಿದ್ದಾರೆ. ಹಿಂದೆ ಬಂದ ವಾಹನ ಸವಾರರು ನಿರಂತರವಾಗಿ ಹಾರನ್ ಮಾಡಿದಾಗ, ಆ ವ್ಯಕ್ತಿ ಎದ್ದು ತೂರಾಡುತ್ತಾ ಕಾರಿನೊಳಗೆ ತೆರಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಧಾರ್ಮಿಕ ಕ್ಷೇತ್ರಕ್ಕೆ ತೆರಳುವಂತಹ ಪ್ರಮುಖ ರಸ್ತೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತಪಾಸಣೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
    1
    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ನಡು ರಸ್ತೆಯಲ್ಲೇ ನಿಲ್ಲಿಸಿ, ಅರೆನಗ್ನ ಸ್ಥಿತಿಯಲ್ಲಿ ಮಲಗಿದ್ದಾರೆ. ಹಿಂದೆ ಬಂದ ವಾಹನ ಸವಾರರು ನಿರಂತರವಾಗಿ ಹಾರನ್ ಮಾಡಿದಾಗ, ಆ ವ್ಯಕ್ತಿ ಎದ್ದು ತೂರಾಡುತ್ತಾ ಕಾರಿನೊಳಗೆ ತೆರಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಧಾರ್ಮಿಕ ಕ್ಷೇತ್ರಕ್ಕೆ ತೆರಳುವಂತಹ ಪ್ರಮುಖ ರಸ್ತೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತಪಾಸಣೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    20 hrs ago
  • ಕೊಳ್ಳೇಗಾಲ ಪಟ್ಟಣದ ಪ್ರತಿಷ್ಠಿತ ಎಂ.ಜಿ.ಎಸ್.ವಿ ಕಾಲೇಜಿನ ಮೈದಾನದಲ್ಲಿ ಬಿದ್ದಿರುವ ಬೃಹತ್ ಆಲದ ಮರವನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಮೈದಾನದಲ್ಲಿ ಬಿದ್ದಿರುವ ಈ ಹೆಮ್ಮರವು ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದು, ಮೈದಾನದ ಪ್ರಮುಖ ಭಾಗದಲ್ಲಿ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ. ವಿಶೇಷವಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಮೈದಾನವನ್ನು ಬಳಸುವ ಕ್ರೀಡಾಪಟುಗಳು ಮರದ ಅವಶೇಷಗಳ ನಡುವೆ ಓಡಾಡಲಾಗದೆ ಪರದಾಡುತ್ತಿದ್ದಾರೆ. ಈ ಕುರಿತು ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಮರ ಬಿದ್ದು ದಿನಗಳೇ ಕಳೆದಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ಕಾಲೇಜು ಆಡಳಿತ ಮಂಡಳಿಯಾಗಲಿ ಈವರೆಗೆ ತೆರವು ಕಾರ್ಯಕ್ಕೆ ಮುಂದಾಗಿಲ್ಲ ಎಂದು ದೂರಿದ್ದಾರೆ. ಮರ ಬಿದ್ದಿರುವ ಜಾಗದಲ್ಲಿ ರಾತ್ರಿ ವೇಳೆ ಅರಿವಿಲ್ಲದೆ ಬರುವವರಿಗೆ ಅಥವಾ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣ ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಲಾಗಿದೆ.
    1
    ಕೊಳ್ಳೇಗಾಲ ಪಟ್ಟಣದ ಪ್ರತಿಷ್ಠಿತ ಎಂ.ಜಿ.ಎಸ್.ವಿ ಕಾಲೇಜಿನ ಮೈದಾನದಲ್ಲಿ ಬಿದ್ದಿರುವ ಬೃಹತ್ ಆಲದ ಮರವನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಮೈದಾನದಲ್ಲಿ ಬಿದ್ದಿರುವ ಈ ಹೆಮ್ಮರವು ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದು, ಮೈದಾನದ ಪ್ರಮುಖ ಭಾಗದಲ್ಲಿ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ. ವಿಶೇಷವಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಮೈದಾನವನ್ನು ಬಳಸುವ ಕ್ರೀಡಾಪಟುಗಳು ಮರದ ಅವಶೇಷಗಳ ನಡುವೆ ಓಡಾಡಲಾಗದೆ ಪರದಾಡುತ್ತಿದ್ದಾರೆ.

ಈ ಕುರಿತು ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಮರ ಬಿದ್ದು ದಿನಗಳೇ ಕಳೆದಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ಕಾಲೇಜು ಆಡಳಿತ ಮಂಡಳಿಯಾಗಲಿ ಈವರೆಗೆ ತೆರವು ಕಾರ್ಯಕ್ಕೆ ಮುಂದಾಗಿಲ್ಲ ಎಂದು ದೂರಿದ್ದಾರೆ. ಮರ ಬಿದ್ದಿರುವ ಜಾಗದಲ್ಲಿ ರಾತ್ರಿ ವೇಳೆ ಅರಿವಿಲ್ಲದೆ ಬರುವವರಿಗೆ ಅಥವಾ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣ ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಲಾಗಿದೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    1 day ago
  • ಮಂಡ್ಯ ನಗರಸಭೆ ಮತ್ತೆ ತಮ್ಮ ಹೈಲು ದೊರೆಯ ದರ್ಬಾರು ಮುಂದುವರಿಸಿದೆ ಎಂದು ಆರೋಪಿಸಲಾಗಿದೆ. ಹೊಸದಾಗಿ ನಿರ್ಮಿಸಲಾಗಿರುವ ನಗರಸಭೆ ಕಟ್ಟಡಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಕಳೆದ ಎರಡು-ಮೂರು ವರ್ಷಗಳಿಂದ ಸಾರ್ವಜನಿಕರ ಕಾಲ್ನಡಿಗೆ ದಾರಿಯನ್ನು ಅತಿಕ್ರಮಿಸಿ ಖಾಸಗಿ ವ್ಯಕ್ತಿಯೊಬ್ಬರು ಅದ್ದೂರಿ ವ್ಯಾಪಾರ ನಡೆಸುತ್ತಿದ್ದು, ಇದಕ್ಕೆ ನಗರಸಭೆಯ ಒಳಗಿನಿಂದಲೇ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ನಗರಶಕ್ತಿ ಕೇಂದ್ರಕ್ಕೆ ಬೀಗ ಹಾಕಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಯನ್ನೇ ಒಳಗೆ ಬಾರದಂತೆ ಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರಶ್ನಿಸಿದಾಗ, ಸಾರ್ವಜನಿಕರು ಇಲ್ಲಿ ಬಂದು ಗಲಾಟೆ ಮಾಡುತ್ತಾರೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಈ ವಿಚಾರ ಜಿಲ್ಲಾಧಿಕಾರಿಗಳಿಗೆ ಬೇಕಾಗಿಲ್ಲ ಎಂದು ಹೇಳಲಾಗಿದೆ. ಆದರೆ ರಾಜಕಾರಣಿಗಳಿಗೆ ಮತ್ತು ಅವರ ಚೇಲಾ ಚಮಚಗಳಿಗೆ ಮುಕ್ತ ಪ್ರವೇಶವಿದ್ದು, ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ನಾಗರಿಕರಿಗೆ ಮಾತ್ರ ಹೊರಗೆ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಲಾಗುತ್ತಿದ್ದು, ಅವರ ವಾಹನಗಳನ್ನೂ ಬಿಸಿಲಿನಲ್ಲಿ ನಿಲ್ಲಿಸಬೇಕಾಗಿದೆ. ಈ ನಗರಸಭೆ ಕಚೇರಿಯು ಜನರಿಂದ ಜನರಿಗಾಗಿ ಇದೆಯೋ ಅಥವಾ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗಾಗಿ ಮಾತ್ರ ಇದೆಯೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಿ, ಗೇಟ್‌ಗೆ ಬೀಗ ಹಾಕಿ, ಪಾರ್ಕಿಂಗ್‌ಗೆ ಬೀಗ ಜಡಿದು ಪ್ರಜಾಪ್ರಭುತ್ವದ ವಾಹನಗಳನ್ನು ಬಿಸಿಲಿನಲ್ಲಿ ನಿಲ್ಲಿಸುವ ಈ ನಡೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
    3
    ಮಂಡ್ಯ ನಗರಸಭೆ ಮತ್ತೆ ತಮ್ಮ ಹೈಲು ದೊರೆಯ ದರ್ಬಾರು ಮುಂದುವರಿಸಿದೆ ಎಂದು ಆರೋಪಿಸಲಾಗಿದೆ. ಹೊಸದಾಗಿ ನಿರ್ಮಿಸಲಾಗಿರುವ ನಗರಸಭೆ ಕಟ್ಟಡಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಕಳೆದ ಎರಡು-ಮೂರು ವರ್ಷಗಳಿಂದ ಸಾರ್ವಜನಿಕರ ಕಾಲ್ನಡಿಗೆ ದಾರಿಯನ್ನು ಅತಿಕ್ರಮಿಸಿ ಖಾಸಗಿ ವ್ಯಕ್ತಿಯೊಬ್ಬರು ಅದ್ದೂರಿ ವ್ಯಾಪಾರ ನಡೆಸುತ್ತಿದ್ದು, ಇದಕ್ಕೆ ನಗರಸಭೆಯ ಒಳಗಿನಿಂದಲೇ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ನಗರಶಕ್ತಿ ಕೇಂದ್ರಕ್ಕೆ ಬೀಗ ಹಾಕಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಯನ್ನೇ ಒಳಗೆ ಬಾರದಂತೆ ಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಪ್ರಶ್ನಿಸಿದಾಗ, ಸಾರ್ವಜನಿಕರು ಇಲ್ಲಿ ಬಂದು ಗಲಾಟೆ ಮಾಡುತ್ತಾರೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಈ ವಿಚಾರ ಜಿಲ್ಲಾಧಿಕಾರಿಗಳಿಗೆ ಬೇಕಾಗಿಲ್ಲ ಎಂದು ಹೇಳಲಾಗಿದೆ. ಆದರೆ ರಾಜಕಾರಣಿಗಳಿಗೆ ಮತ್ತು ಅವರ ಚೇಲಾ ಚಮಚಗಳಿಗೆ ಮುಕ್ತ ಪ್ರವೇಶವಿದ್ದು, ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ನಾಗರಿಕರಿಗೆ ಮಾತ್ರ ಹೊರಗೆ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಲಾಗುತ್ತಿದ್ದು, ಅವರ ವಾಹನಗಳನ್ನೂ ಬಿಸಿಲಿನಲ್ಲಿ ನಿಲ್ಲಿಸಬೇಕಾಗಿದೆ.

ಈ ನಗರಸಭೆ ಕಚೇರಿಯು ಜನರಿಂದ ಜನರಿಗಾಗಿ ಇದೆಯೋ ಅಥವಾ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗಾಗಿ ಮಾತ್ರ ಇದೆಯೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಿ, ಗೇಟ್‌ಗೆ ಬೀಗ ಹಾಕಿ, ಪಾರ್ಕಿಂಗ್‌ಗೆ ಬೀಗ ಜಡಿದು ಪ್ರಜಾಪ್ರಭುತ್ವದ ವಾಹನಗಳನ್ನು ಬಿಸಿಲಿನಲ್ಲಿ ನಿಲ್ಲಿಸುವ ಈ ನಡೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    21 hrs ago
  • ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ. ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    4
    ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಗೃಹಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮತ್ತು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಗಂಭೀರ ಆರೋಪ ಮಾಡಿದ್ದಾರೆ.

ಕಾಮಗಾರಿಯನ್ನು ಪರಿಶೀಲಿಸಿದ ಕಣಕೂರು ಚಂದ್ರಶೇಖರ್ ಅವರು, ಕಟ್ಟಡದ ಎಸ್ಟಿಮೇಟ್ ಕೇಳಿದರೆ ಎಸ್.ಪಿ. ಕಚೇರಿಯಲ್ಲಿದೆ ಎಂದು ಸಬೂಬು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಡಬಹುದಾಗಿದ್ದ ದಾಖಲೆಗಳನ್ನು ಎಸ್.ಪಿ. ಕಚೇರಿಯಲ್ಲೇಕೆ ರಕ್ಷಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸೈಟ್ ಎಂಜಿನಿಯರ್ ಬಳಿ ಯಾವುದೇ ದಾಖಲಾತಿಗಳಿಲ್ಲ, ಇಲ್ಲಿ ಕೇಳುವವರಿಲ್ಲ ಹೇಳುವವರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿ ತೆಗೆದ ಮಣ್ಣನ್ನು ತಂದು ತುಂಬಿಸಲಾಗಿದೆ ಮತ್ತು ಕಲ್ಲಿನಿಂದ ಕಟ್ಟಬೇಕಾದ ಅಡಿಪಾಯವನ್ನು ಸಿಮೆಂಟ್ ಇಟ್ಟಿಗೆಗಳಿಂದ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಅಧಿಕಾರಿಗಳು ವಾಸಿಸುವ ಸ್ಥಳ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರು ಯಾವುದೇ ಎಸ್ಟಿಮೇಟ್ ನೋಡಲು ಅವಕಾಶ ನೀಡುತ್ತಿಲ್ಲ, ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದರು. ಕಟ್ಟಡಕ್ಕೆ ತುಂಬಿರುವ ಮಣ್ಣು ಸಹ ಕಳಪೆಯಾಗಿದ್ದು, ಅದರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಟ್ಟೆಗಳ ತುಂಡುಗಳಿವೆ. ಇದರಿಂದ ಕಟ್ಟಡ ಯಾವುದೇ ಕಾರಣಕ್ಕೂ ಬಾಳಿಕೆ ಬರುವುದಿಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವ ಅನುಮಾನಗಳೂ ಇವೆ ಎಂದು ಅವರು ದೂರಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದ್ದು, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದೇ ರೀತಿ ಅಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    16 hrs ago
  • ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು. ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.
    1
    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಸಂತೆಮರಳ್ಳಿ ಭಾಗದ ಕಾಂಗ್ರೆಸ್ ಮುಖಂಡರು ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಸಂತೆಮರಳ್ಳಿಯ ವೃತ್ತದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಗೌಡಹಳ್ಳಿ ರೇವಣ್ಣ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ರಾಜಕೀಯ ಹಿರಿತನ ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊಂದಿರುವ ಇವರು, ಇಡೀ ಜಿಲ್ಲೆ ಹಾಗೂ ರಾಜ್ಯದ ರಾಜಕೀಯ ಅನುಭವದ ಹಿನ್ನೆಲೆಯ ಕುಟುಂಬದಿಂದ ಬಂದ ನಾಯಕರಾಗಿದ್ದಾರೆ. ದಲಿತ ಸಮುದಾಯದ ಪ್ರಭಾವಿ ಶಾಸಕರಾಗಿರುವ ಇವರು, ತಮ್ಮ ತಂದೆ ಬಿ. ರಾಚಯ್ಯನವರ ಕಾಲದಿಂದಲೂ ರಾಜಕೀಯದ ಅನೇಕ ಸೂಕ್ಷ್ಮಗಳನ್ನು ಕಲಿತಿದ್ದಾರೆ. ರಾಜಕೀಯ ಮುತ್ಸದ್ದಿತನವನ್ನು ಹೊಂದಿರುವ ಅವರಿಗೆ ಯಾವ ಖಾತೆಯನ್ನು ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು, ದಾಖಲೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಕ್ಷೇತ್ರಕ್ಕೆ ₹500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಮಾದರಿ ಮಾಡಲು ಪಣ ತೊಟ್ಟಿದ್ದು, ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರೂ ಅವರನ್ನು ಪ್ರೀತಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಚತುರತೆ ಇವರಿಗಿದ್ದು, ಎಲ್ಲ ದೃಷ್ಟಿಯಿಂದಲೂ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇವರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅಹಿಂದ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೋಟಂಬಳ್ಳಿ ಸಿದ್ದು ಮಾತನಾಡಿ, ಎ.ಆರ್.ಕೆ. ಸಾಹೇಬರು ತಮ್ಮ ತಂದೆಯ ಕಾಲದಿಂದಲೂ ರಾಜಕೀಯದಲ್ಲಿದ್ದಾರೆ. ಕ್ಷೇತ್ರಕ್ಕೆ ತಾಲೂಕು ಆಸ್ಪತ್ರೆ, ವಿಭಾಗೀಯ ಆಸ್ಪತ್ರೆ, ರಸ್ತೆ, ಸಮುದಾಯ ಭವನಗಳು, ಎಳನೀರು ಮಾರುಕಟ್ಟೆ, ಸಿಲ್ಕ್ ಪಾರ್ಕ್, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ತಂದಿರುವ ಇವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಟ್ಟುಬಿಡದೆ ಅನುದಾನಗಳನ್ನು ತರುತ್ತಾ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರ ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ರಾಜ್ಯ ಹೈಕಮಾಂಡ್‌ಗೆ ಒತ್ತಾಯಿಸಿದರು.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    7 hrs ago
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪುಟ್ಟಮ್ಮ ಮತ್ತು ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತಾ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ. ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಚಾಲನೆಯಲ್ಲಿರುವ ಗ್ರೈಂಡರ್ ಅನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಪ್ರಾಣ ಕಳೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಈ ದುರ್ಘಟನೆಯಿಂದ ಮೃತಳ ಸಂಬಂಧಿಕರು, ಬಂಧುಬಳಗದವರು ಹಾಗೂ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ.
    3
    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಪುಟ್ಟಮ್ಮ ಮತ್ತು ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತಾ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ. ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಚಾಲನೆಯಲ್ಲಿರುವ ಗ್ರೈಂಡರ್ ಅನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಪ್ರಾಣ ಕಳೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಈ ದುರ್ಘಟನೆಯಿಂದ ಮೃತಳ ಸಂಬಂಧಿಕರು, ಬಂಧುಬಳಗದವರು ಹಾಗೂ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ.
    user_Prasad Prasad
    Prasad Prasad
    TV News Anchor ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.