logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಕಾರ್ಮಿಕರ ದಿನಾಚರಣೆ, ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಇಂದು ನಡೆಸಲಾಯಿತು. ನಗರದ ಮೈದಾನ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡರಾದ ಅಬ್ದುಲ್ ಖಾದರ್ ವಾಮಂಜೂರು ಧ್ವಜಾರೋಹಣ ನಡೆಸಿದರು. ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ 140 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸ, ನಿದ್ದೆ, ವಿಶ್ರಾಂತಿಗಾಗಿ ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಲ್ಲಿ ನಡೆದ ಕಾರ್ಮಿಕರ ಸಮರಧೀರ ಹೋರಾಟ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ದಾರಿದೀಪ ಆಗಿದೆ. ಕಾರ್ಮಿಕರು ಜಗತ್ತಿನಲ್ಲಿ ಏನಾದರೂ ಗಳಿಸಿಕೊಂಡಿದ್ದರೆ ಅದು ಹೋರಾಟದಿಂದ ಮಾತ್ರ ಎಂದು ಅವರು ಹೇಳಿದರು.

5 hrs ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
5 hrs ago

ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಕಾರ್ಮಿಕರ ದಿನಾಚರಣೆ, ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಇಂದು ನಡೆಸಲಾಯಿತು. ನಗರದ ಮೈದಾನ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡರಾದ ಅಬ್ದುಲ್ ಖಾದರ್ ವಾಮಂಜೂರು ಧ್ವಜಾರೋಹಣ ನಡೆಸಿದರು. ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ 140 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸ, ನಿದ್ದೆ, ವಿಶ್ರಾಂತಿಗಾಗಿ ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಲ್ಲಿ ನಡೆದ ಕಾರ್ಮಿಕರ ಸಮರಧೀರ ಹೋರಾಟ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ದಾರಿದೀಪ ಆಗಿದೆ. ಕಾರ್ಮಿಕರು ಜಗತ್ತಿನಲ್ಲಿ ಏನಾದರೂ ಗಳಿಸಿಕೊಂಡಿದ್ದರೆ ಅದು ಹೋರಾಟದಿಂದ ಮಾತ್ರ ಎಂದು ಅವರು ಹೇಳಿದರು.

More news from ಕರ್ನಾಟಕ and nearby areas
  • ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ, ಇಳಿಜಾರು ಮತ್ತು ತಿರುವ ಹೊಂದಿ ರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ.
    1
    ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ, ಇಳಿಜಾರು ಮತ್ತು ತಿರುವ ಹೊಂದಿ ರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    5 hrs ago
  • ಕಡೂರು : ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಿತ್ಯಹೋಮ, ರಥಾಧಿದೇವತಾ ಹೋಮ, ರಥಸಂಪ್ರೋಕ್ಷಣೆ ನಂತರ ಬಳಿಕ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿದೇವಿಯ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ಮೂಲದೇವಾಲಯ ದಿಂದ ಪ್ರಮುಖ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿ ಉತ್ಸವದಲ್ಲಿ ಸಾಗಿತು. ಜಾನಪದ ವೀರಗಾಸೆ ಕಲಾತಂಡಗಳ ಪ್ರದರ್ಶನ ನಡೆಸಲಾಯಿತು. ಬಳಿಕ ರಥದ ಮಂಟಪದ ಬಳಿ ಕರೆತಂದ ಸ್ವಾಮಿಯ ಉತ್ಸವಮೂರ್ತಿಯನ್ನು ಮೂರು ಬಾರಿ ಪ್ರದಕ್ಷಿಣಿ ಹಾಕಿ ಬಳಿಕ ಅಲಂಕೃತ ಗೊಂಡ ರಥದಲ್ಲಿ ಪ್ರತಿಷ್ಟಾಪಿಸಿ ಬಲಿಪ್ರಧಾನ ಪೂಜೆ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತರು ಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ಎಳೆದು ಸಂಭ್ರಮಿಸಿದರು. ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಥಕ್ಕೆ ಎಸೆದಿದ್ದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸಿದರು. ಜಾತ್ರಾಮಹೋತ್ಸವದ ಧಾರ್ಮಿಕ ಮಹೋತ್ಸವವನ್ನು ಸೀತಾರಾಮಶರ್ಮ ಮತ್ತು ನಾಗೇಶ್ ಶರ್ಮಾ ತಂಡದವರಿಂದ ನೆರವೇರಿಸಲಾಯಿತು. ಸಂಜೆ 4ಗಂಟೆಗೆ ನಡೆದ ರಥೋತ್ಸವದ ಅಂಗವಾಗಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರೆ, ದೇವಾಲಯದ ರಥದ ಬೀದಿಗಳಲ್ಲಿ ಸಾಂಪ್ರಾದಾಯಿಕ ಪದ್ದತಿಯಂತೆ ಬರಿಗಾಲಲ್ಲೇ ಭಕ್ತಾದಿಗಳು ಹೆಜ್ಜೆ ಹಾಕಿದ್ದು ಗಮನಸೆಳೆಯಿತು. ಜಾತ್ರಾಮಹೋತ್ಸವದ ಅಂಗವಾಗಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ರಥದ ಸುತ್ತ ಅಲಂಕೃತ ಎತ್ತಿನಗಾಡಿಗಳ ಓಟ ನಡೆಸಿದರೆ, ಇನ್ನ ಕೆಲ ಭಕ್ತರು ತಣ್ಣೀರುಸ್ನಾನದೊಂದಿಗೆ ರಥದ ಬಳಿ ದಿಂಡು ಉರುಳು ಸೇವೆ ನೆರವೇರಿಸಿ ಹರಕೆಯನ್ನು ಸಮರ್ಪಿಸಿದರು. ಗ್ರಾಮದ ಸ್ನೇಹ ಜೀವಿ ಬಳಗದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಾಸನ ಕೆಎಂಎಫ್ ಹಾಗೂ ಸ್ಥಳೀಯ ಹಾಲು ಒಕ್ಕೂಟಗಳ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಕೆ. ನಾಗರಾಜಪ್ಪ ಮಾತನಾಡಿ, ದೇವಾಲಯದ ಸಮಿತಿಯ ವತಿಯಿಂದ ವಿಶೇಷವಾದ ಕಲ್ಲಿನ ರಾಜಗೋಪುರ ನಿರ್ಮಾಣ ಕಾರ್ಯವು ಸುಮಾರು 10 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು. ಈಗಾಗಲೇ ಶೇ.30ರಷ್ಟು ಕಾಮಗಾರಿ ನಡೆಸಲಾಗಿದ್ದು, 2 ವರ್ಷದೊಳಗಾಗಿ ಗೋಪುರವನ್ನು ಲೋಕಾರ್ಪಣೆಗೊಳಿಸುವ ಗುರಿಹೊಂದಲಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ದೇವಾಲಯ ಸಮಿತಿಯ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಕೆ.ಎನ್, ಮೂರ್ತಿ, ದೇವರಾಜ್ ಸಿಂಗಟಗೆರೆ ನಾಗರಾಜ್, ದಕ್ಷಿಣಮೂರ್ತಿ, ಬಿ.ಜೆ.ಕುಮಾರ್, ಕುಮಾರಪ್ಪ, ಎಸ್.ಕೆ. ರಘು, ಎಸ್.ಕೆ. ಲೋಕೇಶಪ್ಪ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿದರೆ ಜಗದೀಶ್, ಗಿರೀಶ್ ಉಪ್ಪಾರ್ ಮತ್ತು ಏಳು ಹಳ್ಳಿ ಪಿರ್ಕಾ ಗ್ರಾಮಸ್ಥರು ಇದ್ದರು.
    3
    ಕಡೂರು : ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ನಿತ್ಯಹೋಮ, ರಥಾಧಿದೇವತಾ ಹೋಮ, ರಥಸಂಪ್ರೋಕ್ಷಣೆ ನಂತರ ಬಳಿಕ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿದೇವಿಯ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ಮೂಲದೇವಾಲಯ ದಿಂದ ಪ್ರಮುಖ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿ ಉತ್ಸವದಲ್ಲಿ ಸಾಗಿತು. ಜಾನಪದ ವೀರಗಾಸೆ ಕಲಾತಂಡಗಳ ಪ್ರದರ್ಶನ ನಡೆಸಲಾಯಿತು. ಬಳಿಕ ರಥದ ಮಂಟಪದ ಬಳಿ ಕರೆತಂದ ಸ್ವಾಮಿಯ ಉತ್ಸವಮೂರ್ತಿಯನ್ನು ಮೂರು ಬಾರಿ ಪ್ರದಕ್ಷಿಣಿ ಹಾಕಿ ಬಳಿಕ ಅಲಂಕೃತ ಗೊಂಡ ರಥದಲ್ಲಿ ಪ್ರತಿಷ್ಟಾಪಿಸಿ ಬಲಿಪ್ರಧಾನ ಪೂಜೆ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತರು ಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ಎಳೆದು ಸಂಭ್ರಮಿಸಿದರು. 
ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಥಕ್ಕೆ ಎಸೆದಿದ್ದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸಿದರು. ಜಾತ್ರಾಮಹೋತ್ಸವದ ಧಾರ್ಮಿಕ ಮಹೋತ್ಸವವನ್ನು ಸೀತಾರಾಮಶರ್ಮ ಮತ್ತು ನಾಗೇಶ್ ಶರ್ಮಾ ತಂಡದವರಿಂದ ನೆರವೇರಿಸಲಾಯಿತು. ಸಂಜೆ 4ಗಂಟೆಗೆ ನಡೆದ ರಥೋತ್ಸವದ ಅಂಗವಾಗಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರೆ, ದೇವಾಲಯದ ರಥದ ಬೀದಿಗಳಲ್ಲಿ ಸಾಂಪ್ರಾದಾಯಿಕ ಪದ್ದತಿಯಂತೆ ಬರಿಗಾಲಲ್ಲೇ ಭಕ್ತಾದಿಗಳು ಹೆಜ್ಜೆ ಹಾಕಿದ್ದು ಗಮನಸೆಳೆಯಿತು. 
ಜಾತ್ರಾಮಹೋತ್ಸವದ ಅಂಗವಾಗಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ರಥದ ಸುತ್ತ ಅಲಂಕೃತ ಎತ್ತಿನಗಾಡಿಗಳ ಓಟ ನಡೆಸಿದರೆ, ಇನ್ನ ಕೆಲ ಭಕ್ತರು ತಣ್ಣೀರುಸ್ನಾನದೊಂದಿಗೆ ರಥದ ಬಳಿ ದಿಂಡು ಉರುಳು ಸೇವೆ ನೆರವೇರಿಸಿ ಹರಕೆಯನ್ನು ಸಮರ್ಪಿಸಿದರು. ಗ್ರಾಮದ ಸ್ನೇಹ ಜೀವಿ ಬಳಗದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಾಸನ ಕೆಎಂಎಫ್ ಹಾಗೂ ಸ್ಥಳೀಯ ಹಾಲು ಒಕ್ಕೂಟಗಳ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಕೆ. ನಾಗರಾಜಪ್ಪ ಮಾತನಾಡಿ, ದೇವಾಲಯದ ಸಮಿತಿಯ ವತಿಯಿಂದ ವಿಶೇಷವಾದ ಕಲ್ಲಿನ ರಾಜಗೋಪುರ ನಿರ್ಮಾಣ ಕಾರ್ಯವು ಸುಮಾರು 10 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು. ಈಗಾಗಲೇ ಶೇ.30ರಷ್ಟು ಕಾಮಗಾರಿ ನಡೆಸಲಾಗಿದ್ದು, 2 ವರ್ಷದೊಳಗಾಗಿ ಗೋಪುರವನ್ನು ಲೋಕಾರ್ಪಣೆಗೊಳಿಸುವ ಗುರಿಹೊಂದಲಾಗಿದೆ. ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು. 
ದೇವಾಲಯ ಸಮಿತಿಯ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಕೆ.ಎನ್, ಮೂರ್ತಿ, ದೇವರಾಜ್ ಸಿಂಗಟಗೆರೆ ನಾಗರಾಜ್, ದಕ್ಷಿಣಮೂರ್ತಿ, ಬಿ.ಜೆ.ಕುಮಾರ್, ಕುಮಾರಪ್ಪ, ಎಸ್.ಕೆ. ರಘು, ಎಸ್.ಕೆ. ಲೋಕೇಶಪ್ಪ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿದರೆ ಜಗದೀಶ್, ಗಿರೀಶ್ ಉಪ್ಪಾರ್ ಮತ್ತು ಏಳು ಹಳ್ಳಿ ಪಿರ್ಕಾ ಗ್ರಾಮಸ್ಥರು ಇದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    5 hrs ago
  • ಕಡೂರು: ಎಚ್‌.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ  ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ‌.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ‌. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು. ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ‌.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್‌ ವಿರುದ್ಧ ಹೋರಾಡುತ್ತದೆ ಎಂದರು. ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.
    3
    ಕಡೂರು: ಎಚ್‌.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಸಮರ್ಥ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸಧೃಢ  ಪ್ರಾದೇಶಿಕ ಪಕ್ಷವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕಡೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ದೇವರಾಜ ಅರಸರು,ಯಡಿಯೂರಪ್ಪ,ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನಿಂತದ್ದು ಜನತಾದಳ ಪಕ್ಷ. ಎಚ್.ಡಿ‌.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷಗಳು ತುಂಬಿವೆ.ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜೊತೆಯೇ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ" ಜನರೊಂದಿಗೆ ಜನತಾದಳ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಏಪ್ರಿಲ್ 19 ರಂದು ಕಡೂರು ಎಪಿಎಂಸಿ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ
ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಕಡೂರಿಗೆ ಆಗಮಿಸುತ್ತಿದ್ದಾರೆ‌. ಜನತಾದಳದ ಜೀವಾಳವಾಗಿರುವ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಸದಸ್ಯತ್ವ ಅಭಿಯಾನದ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿಯವರೂ ಸಹ ಆಗಮಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಕುರಿತು ಕೆಲ ಗೊಂದಲಗಳು ಇದ್ದವಾದರೂ ಈಗ ಅವೆಲ್ಲವೂ ಬಗೆಹರಿದಿವೆ. ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಮೊದಲೇ ಈ ಕಾರ್ಯಕ್ರಮ ಏರ್ಪಾಡಾಗುತ್ತಾದರೂ ದತ್ತ ಅವರ ಅಪೇಕ್ಷೆಯಂತೆ ಮುಂದೂಡಲಾಗಿತ್ತು. ಈಗ ದೇವೇಗೌಡರು, ಕುಮಾರಸ್ವಾಮಿಯವರ ಆದೇಶದಂತೆ ಈ ಕಾರ್ಯಕ್ರಮ ಏರ್ಪಾಡಾಗಿದೆ.10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ವೈ.ಎಸ್.ವಿ.ದತ್ತ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನ ಕಾಲಿಯಿದೆ. ಈ ಕಾರಣದಿಂದ ತಾಲ್ಕೂಕು ಘಟಕಗಳ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ‌.ಎಷ್ಟೋ ಜನ ಕಾರ್ಯಕರ್ತರಾಗಿದ್ದವರೂ ಇನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಹಾಗಾಗಿ ಪಕ್ಷದ ಸದಸ್ಯತ್ವದ ನೊಂದಣಿಯೂ ನಡೆಯಲಿದೆ. ಶೀಘ್ರದಲ್ಲೆ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಥವಾ ಬಿಜೆಪಿ ಯವರಿರುತ್ತಾರೆಯೇ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಎರಡೂ ಪಕ್ಷಗಳ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ಗೊಂದಲವಿಲ್ಲ. ಜೆಡಿಎಸ್ ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಎನ್.ಡಿ.ಎ ಭಾಗವಾಗಿ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ಸದಾ ಯೋಚಿಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ.ಕಡೂರಿನಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಕಾಂಗ್ರೆಸ್‌ ವಿರುದ್ಧ ಹೋರಾಡುತ್ತದೆ ಎಂದರು.
ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು, ರಘು ಎರೇಹಳ್ಳಿ, ಹಳೇಹಟ್ಟಿ ಆನಂದನಾಯ್ಕ ಮತ್ತಿತರರು ಇದ್ದರು.
    user_Balaji M.V.
    Balaji M.V.
    Local News Reporter ಕಡೂರು, ಚಿಕ್ಕಮಗಳೂರು, ಕರ್ನಾಟಕ•
    18 hrs ago
  • ಶಿವಮೊಗ್ಗ : ಮನೆ ಕಳ್ಳತನ ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್- ಎಲ್‍ಹೆಚ್‍ಬಿಎಸ್’ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಗಹಾಕಿದ ಮನೆಗಳ ಸುರಕ್ಷತೆಯ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟಿ ದ್ದಾಗ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‍ಹೆಚ್‍ಬಿಎಸ್‍ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್‍ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‍ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದು ಕೊಳ್ಳಲಿದ್ದಾರೆ ಎಂದರು. ಸಾರ್ವಜನಿಕರು ತಾವು ಪ್ರವಾಸಕ್ಕೆ ಹೊರಟಾಗ ತಮ್ಮ ಗೇಟಿಗೆ ಲಾಕ್ ಮಾಡುವುದು ಮತ್ತು ಮನೆಯ ಮುಂದೆ ಪೇಪರ್‍ ಗಳರಾಶಿ, ಹಾಲಿನ ಪ್ಯಾಕೇಟ್ ಬಿದ್ದಿರುವುದು ಮತ್ತು ತಾವು ಹೋದ ಪ್ರವಾಸ ತಾಣಗಳ ಸ್ಟೇಟಸ್ ಅನ್ನು ಹಾಕುವುದು ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗ್ರತರಾದರೆ ಅನೇಕ ಪ್ರಕರಣಗಳು ಕಮ್ಮಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಮತ್ತು ಪೊಲೀಸರ ಎಲ್‍ಹೆಚ್‍ಬಿಎಸ್‍ಗೆ ಸಹಕಾರ ನೀಡಬೇಕು ಎಂದರು. ಜಿಲ್ಲೆಯಲ್ಲಿ ಮಾದಕದ್ರವ್ಯ ಗಾಂಜಾ ವಿರುದ್ಧ 1-1-2026ರಿಂದ ಮಾದಕ ದ್ರವ್ಯ ಸೇವೆನೆ 266 ಪ್ರಕರಣ ದಾಖಲಿಸಲಾಗಿದೆ. 290 ಆರೋಪಿತರನ್ನು ಬಂಧಿಸಲಾಗಿದೆ. 18 ಪ್ರಕರಣಗಳಲ್ಲಿ 40 ಆರೋಪಿತರನ್ನು ಬಂಧಿಸಿ, ಅವರಿಂದ ಮಾದಕದ್ರವ್ಯ ಅಮಾನತುಪಡಿಸಲಾಗಿದೆ. ಒಟ್ಟು 280 ಪ್ರಕರಣಗಳಲ್ಲಿ 330 ಜನ ಆರೋಪಿತರನ್ನು ಬಂಧಿಸಿ, 30 ಕೆ.ಜಿ. ಗಾಂಜಾ ಅಮಾನತು ಪಡಿಸಿ 125 ಗ್ರಾಂ ಎಂಡಿಎಂ ಸೇರಿದಂತೆ 27,37,000 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ವಿತರಿಸುವ ಮೂರು ಮಾರ್ಗಗಳನ್ನು ಮೂಲದಲ್ಲೇ ಬಂದ್ ಮಾಡಲಾಗಿದೆ. ಇನ್ನೂ ಮೂರು ವಿತರಕರ ಸುಳಿವು ದೊರೆತ್ತಿದ್ದು, ಅವರನ್ನು ಬಂಧಿಸಲಿ ದ್ದೇವೆ ಎಂದರು. ಗಾಂಜಾ ಪ್ರಕರಣಗಳಲ್ಲಿ 52ಜನ ಬಂಧಿತ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸ ಲಾಗಿದ್ದು, ಅವರು ಈಗ ದುಶ್ಚಟದಿಂದ ಮುಕ್ತರಾಗಿದ್ದಾರೆ ಎಂದರು. ಅಕ್ಕಪಡೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಕಪಡೆಯು ಕಾರ್ಯನಿರ್ವಹಿ ಸುತ್ತಿದ್ದು, ಸಾರ್ವಜನಿಕ ಉಪಟಳ ನೀಡಿದ ಒಟ್ಟು 156ಜನ ಅಸಾಮಿಗಳ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಲಾಗಿದೆ ಎಂದರು. ಡ್ರೋಣ್ ಕಾರ್ಯಾಚರಣೆ ಮೂಲಕ ಖಾಲಿ ಜಾಗಗಳು ಮತ್ತು ಹೊರ ವಲಯದ ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಜಿಲ್ಲಾ ಪೊಲೀಸ್ ಡ್ರೋಣ್ ಕ್ಯಾಮೇರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದ 19ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವರ ವಿರುದ್ಧ ಅಬಕಾರಿ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ಕ್ರಮಕೈ ಗೊಳ್ಳಲಾಗಿದೆ ಎಂದರು.
    1
    ಶಿವಮೊಗ್ಗ : ಮನೆ ಕಳ್ಳತನ ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್- ಎಲ್‍ಹೆಚ್‍ಬಿಎಸ್’ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಗಹಾಕಿದ ಮನೆಗಳ ಸುರಕ್ಷತೆಯ ಸಂಬಂಧ ಪೊಲೀಸ್ ವತಿಯಿಂದ  ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟಿ ದ್ದಾಗ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‍ಹೆಚ್‍ಬಿಎಸ್‍ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್‍ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‍ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದು ಕೊಳ್ಳಲಿದ್ದಾರೆ ಎಂದರು.
ಸಾರ್ವಜನಿಕರು ತಾವು ಪ್ರವಾಸಕ್ಕೆ ಹೊರಟಾಗ ತಮ್ಮ ಗೇಟಿಗೆ ಲಾಕ್ ಮಾಡುವುದು ಮತ್ತು ಮನೆಯ ಮುಂದೆ ಪೇಪರ್‍ ಗಳರಾಶಿ, ಹಾಲಿನ ಪ್ಯಾಕೇಟ್ ಬಿದ್ದಿರುವುದು ಮತ್ತು ತಾವು ಹೋದ ಪ್ರವಾಸ ತಾಣಗಳ ಸ್ಟೇಟಸ್ ಅನ್ನು ಹಾಕುವುದು ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗ್ರತರಾದರೆ ಅನೇಕ ಪ್ರಕರಣಗಳು ಕಮ್ಮಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಮತ್ತು ಪೊಲೀಸರ ಎಲ್‍ಹೆಚ್‍ಬಿಎಸ್‍ಗೆ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಮಾದಕದ್ರವ್ಯ ಗಾಂಜಾ ವಿರುದ್ಧ 1-1-2026ರಿಂದ ಮಾದಕ ದ್ರವ್ಯ ಸೇವೆನೆ 266 ಪ್ರಕರಣ ದಾಖಲಿಸಲಾಗಿದೆ.  290 ಆರೋಪಿತರನ್ನು ಬಂಧಿಸಲಾಗಿದೆ. 18 ಪ್ರಕರಣಗಳಲ್ಲಿ 40 ಆರೋಪಿತರನ್ನು ಬಂಧಿಸಿ, ಅವರಿಂದ ಮಾದಕದ್ರವ್ಯ ಅಮಾನತುಪಡಿಸಲಾಗಿದೆ. ಒಟ್ಟು 280 ಪ್ರಕರಣಗಳಲ್ಲಿ 330 ಜನ ಆರೋಪಿತರನ್ನು ಬಂಧಿಸಿ, 30 ಕೆ.ಜಿ. ಗಾಂಜಾ ಅಮಾನತು ಪಡಿಸಿ 125 ಗ್ರಾಂ ಎಂಡಿಎಂ ಸೇರಿದಂತೆ 27,37,000 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ವಿತರಿಸುವ ಮೂರು ಮಾರ್ಗಗಳನ್ನು ಮೂಲದಲ್ಲೇ ಬಂದ್ ಮಾಡಲಾಗಿದೆ. ಇನ್ನೂ ಮೂರು ವಿತರಕರ ಸುಳಿವು ದೊರೆತ್ತಿದ್ದು, ಅವರನ್ನು ಬಂಧಿಸಲಿ ದ್ದೇವೆ ಎಂದರು.
ಗಾಂಜಾ ಪ್ರಕರಣಗಳಲ್ಲಿ 52ಜನ ಬಂಧಿತ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸ ಲಾಗಿದ್ದು, ಅವರು ಈಗ ದುಶ್ಚಟದಿಂದ ಮುಕ್ತರಾಗಿದ್ದಾರೆ ಎಂದರು.
ಅಕ್ಕಪಡೆ:
ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಕಪಡೆಯು ಕಾರ್ಯನಿರ್ವಹಿ ಸುತ್ತಿದ್ದು, ಸಾರ್ವಜನಿಕ ಉಪಟಳ ನೀಡಿದ ಒಟ್ಟು 156ಜನ ಅಸಾಮಿಗಳ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.
ಡ್ರೋಣ್ ಕಾರ್ಯಾಚರಣೆ ಮೂಲಕ ಖಾಲಿ ಜಾಗಗಳು ಮತ್ತು ಹೊರ ವಲಯದ ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಜಿಲ್ಲಾ ಪೊಲೀಸ್ ಡ್ರೋಣ್ ಕ್ಯಾಮೇರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದ 19ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವರ ವಿರುದ್ಧ ಅಬಕಾರಿ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ಕ್ರಮಕೈ ಗೊಳ್ಳಲಾಗಿದೆ ಎಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    7 hrs ago
  • ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು, ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ವರದಿ: ಸಂದೀಪ ಯು ಎಲ್ ಸೊರಬ
    3
    ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ  ವಿಜೃಂಭಣೆಯಿಂದ ಜರುಗಿತು. 
ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು,  ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು.
ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. 
ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು.
ವರದಿ: ಸಂದೀಪ ಯು ಎಲ್ ಸೊರಬ
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    10 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    6 hrs ago
  • PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE
    1
    PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    9 hrs ago
  • ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಇಂದು ನಡೆಸಲಾಯಿತು. ನಗರದ ಮೈದಾನ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡರಾದ ಅಬ್ದುಲ್ ಖಾದರ್ ವಾಮಂಜೂರು ಧ್ವಜಾರೋಹಣ ನಡೆಸಿದರು. ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ 140 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸ, ನಿದ್ದೆ, ವಿಶ್ರಾಂತಿಗಾಗಿ ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಲ್ಲಿ ನಡೆದ ಕಾರ್ಮಿಕರ ಸಮರಧೀರ ಹೋರಾಟ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ದಾರಿದೀಪ ಆಗಿದೆ. ಕಾರ್ಮಿಕರು ಜಗತ್ತಿನಲ್ಲಿ ಏನಾದರೂ ಗಳಿಸಿಕೊಂಡಿದ್ದರೆ ಅದು ಹೋರಾಟದಿಂದ ಮಾತ್ರ ಎಂದು ಅವರು ಹೇಳಿದರು.
    1
    ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಇಂದು ನಡೆಸಲಾಯಿತು.
ನಗರದ ಮೈದಾನ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡರಾದ ಅಬ್ದುಲ್ ಖಾದರ್ ವಾಮಂಜೂರು ಧ್ವಜಾರೋಹಣ ನಡೆಸಿದರು.
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ 140 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸ, ನಿದ್ದೆ, ವಿಶ್ರಾಂತಿಗಾಗಿ ಅಮೇರಿಕಾದ ಚಿಕಾಗೋ ನಗರದ ಹೇ ಮಾರ್ಕೆಟಲ್ಲಿ ನಡೆದ ಕಾರ್ಮಿಕರ ಸಮರಧೀರ ಹೋರಾಟ ಇಡೀ ವಿಶ್ವದ ಕಾರ್ಮಿಕ ಚಳುವಳಿಗೆ ದಾರಿದೀಪ ಆಗಿದೆ.
ಕಾರ್ಮಿಕರು ಜಗತ್ತಿನಲ್ಲಿ ಏನಾದರೂ ಗಳಿಸಿಕೊಂಡಿದ್ದರೆ ಅದು ಹೋರಾಟದಿಂದ ಮಾತ್ರ ಎಂದು ಅವರು ಹೇಳಿದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.